ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಬುಡಕಟ್ಟು ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ
ಕಮಲಾಪುರ, ಹಂಪಿ, ಬಳ್ಳಾರಿ ಜಿಲ್ಲೆ -೫೮೨೨೭೬.
ಮೊಬೈಲು : ೯೪೪೮೧ ೬೫೧೭೫

ಜಾನಪದ ವಿದ್ವಾಂಸ ಪ್ರೊ. ಹಿ.ಚಿ. ಬೋರಲಿಂಗಯ್ಯ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹಿತ್ತಲಪುರ ಗ್ರಾಮದವರು.

ಬಾಲ್ಯದಿಂದಲೇ ಗ್ರಾಮೀಣ ಸಂಸ್ಕೃತಿ, ಸಂಪ್ರದಾಯಗಳ ಸ್ಫೂರ್ತಿ ಪಡೆದು ಜಾನಪದ ಅಧ್ಯಯನ ಆಸಕ್ತಿ ಬೆಳೆಸಿಕೊಂಡವರು.

ಹಂಪಿಯ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದಲ್ಲೂ ಅವರು ತಮ್ಮ ಸೇವೆಯಿಂದ ವಿಶಿಷ್ಟ ಛಾಪು ಮೂಡಿಸಿದವರು. ಐವತ್ಮೂರರ ವಯಸ್ಸಿನಲ್ಲೂ ಜಾನಪದ ಅಧ್ಯಯನ, ಸಂಶೋಧನೆಗೆ ತಮ್ಮ ಯುವ ಚೈತನ್ಯ ವನ್ನೂ ಬಳಸಿ ತಮ್ಮ ಕೊಡುಗೆ ನೀಡಿದವರು.

ಇಟಲಿ, ಫ್ರಾನ್ಸ್, ಹಾಲೆಂಡ್ ಹಾಗೂ ಇರಾನ್ ದೇಶಗಳಲ್ಲಿ ನಡೆದ ಗೊಂಬೆಯಾಟ ಜಾನಪದ ಉತ್ಸವದಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡ ವರು. ಬುಡಕಟ್ಟು ಜನರ ಇತಿಹಾಸ ಅಧ್ಯಯನ, ಸಂಶೋಧನೆಗಾಗಿ ಅವರು ತಮ್ಮನ್ನು ತೊಡಗಿಸಿಕೊಂಡವರು.

ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ತನ್ನ ಬೆಳ್ಳಿ ಹಬ್ಬದ ಪ್ರಯುಕ್ತ ಇವರನ್ನು ಸನ್ಮಾನಿಸಿದೆ.