‘ಹರತೀಶ ಕೃಪಾ’, ೧೭೬,
ಎಸ್.ಐ.ಟಿ. ೩ನೇ ಕ್ರಾಸ್,
ತುಮಕೂರು-೫೭೨ ೧೦೨
ದೂರವಾಣಿ : ೯೫೮೧೬-೨೨೭೮೦೫೨

 

ಎಪ್ಪತ್ತೊಂದು ವರ್ಷದ ಹಿರಿಯ ಜಾನಪದ ವಿದ್ವಾಂಸ ಪ್ರೊ. ಹೆಚ್.ವಿ. ವೀರಭದ್ರಯ್ಯ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹರ್ತಿಕೋಟೆಯವರು.

ಬಾಲ್ಯದಲ್ಲೇ ಗ್ರಾಮೀಣ ಸಂಸ್ಕೃತಿ, ಸಂಪ್ರದಾಯಗಳಿಗೆ ಆಕರ್ಷಿತರಾಗಿ ಜನಪದ ಅಧ್ಯಯನದ ಆಸಕ್ತಿ ಬೆಳೆಸಿಕೊಂಡು ಜಾನಪದ ಲೋಕಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಗೆ ಕಾರಣರಾಗಿದ್ದಾರೆ.

ಅಧ್ಯಾಪಕ ವೃತ್ತಿ ಆಯ್ದುಕೊಂಡಿದ್ದರೂ ಪ್ರವೃತ್ತಿಯಿಂದ ಜಾನಪದ ಸಾಹಿತ್ಯದೆಡೆಗೆ ತಮ್ಮ ಅಧ್ಯಯನಾಸಕ್ತಿಗೆ ಒತ್ತು ನೀಡಿದವರು. ಜನಪದ ಸಾಹಿತ್ಯದಲ್ಲಿ ಬಸವಣ್ಣ, ಮಲ್ಲಿಲಿಂಗನ ಕಣಿವೆ, ಬೇಸಾಯದ ಉಪಕರಣಗಳು, ಬೆಡಗಿನ ವಚನಗಳು, ಸಿದ್ಧಗಂಗಾ ಶ್ರೀಗಳ ಕುರಿತ ಹಲವಾರು ಸಾಹಿತ್ಯ ಕೃತಿಗಳಿಗೆ ಅವರು ವಚನಕಾರ ರಾಗಿದ್ದಾರೆ.

ಜನಪದ ಮತ್ತು ಯಕ್ಷಗಾನ ಅಕಾಡೆಮಿ ತನ್ನ ಬೆಳ್ಳಿ ಹಬ್ಬದ ಪ್ರಯುಕ್ತ ಅವರನ್ನು ಗೌರವಿಸಿದೆ.