. ಲೈಂಗಿಕ ಸಾಮರಸ್ಯದ ಪ್ರಾಮುಖ್ಯತೆ

ದಾಂಪತ್ಯದಲ್ಲಿ ಲೈಂಗಿಕತೆ ಪ್ರೀತಿಯ ಒಂದು ಭಾಗ, ಅಲ್ಲದೆ, ಅದು ಶಾರೀರಿಕ ಪ್ರೀತಿಯ ಅಭಿವ್ಯಕ್ತಿಯೂ ಆಗಿರುತ್ತದೆ.

ಗಂಡ-ಹೆಂಡತಿ, ಬೆಡ್ ರೂಮಿನಲ್ಲಿ ಒಂದುಗೂಡಿದಾಗ ಏಕಾಂಗಿತನ ನಿವಾರಣೆಯಾಗುತ್ತದೆ. ಇಬ್ಬರ ದೇಹಗಳು ಉದ್ವೇಗದಿಂದ ಒಂದಾಗುತ್ತವೆ; ಅಲ್ಲದೆ, ಭಾವಪ್ರಾಪ್ತಿಯಲ್ಲಿ ಐಕ್ಯವಾಗುತ್ತದೆ. ಒಂದಾಗುವಿಕೆಯ ಪ್ರಜ್ಞೆಯಲ್ಲಿ ದಾಂಪತ್ಯ ಜೀವನದ ಮುನ್ನಡೆಗೆ ಸ್ಥಿರವಾದ ಚಾಲನೆ ನೀಡುತ್ತದೆ.

ರತಿ ಭಾವನೆಗಳನ್ನು ಹಂಚಿಕೊಳ್ಳುವುದನ್ನು ಗಂಡು- ಹೆಂಡತಿ ಕಲಿತರೆ, ಲೈಂಗಿಕ ಕ್ರಿಯೆಯಲ್ಲಿ ಸಹಕರಿಸಿದರೆ ಸಾಮೀಪ್ಯ ವೃದ್ಧಿಸುತ್ತದೆ. ಅಲ್ಲದೆ, ಸಾಮರಸ್ಯ ಉದ್ದೀಪನಗೊಳ್ಳುತ್ತದೆ.

* * *

. ನಗ್ನ ನಿಯಮ

ನಿಮ್ಮ ಪತ್ನಿಯನ್ನು ಬೆಡ್‌‌ರೂಮಿನಲ್ಲಿ ವಿವಸ್ತ್ರಳನ್ನಾಗಿ ಮಾಡುವಾಗ ಆಕೆಯ ಶರೀರ ಸೌಂದರ್ಯದ ಬಗ್ಗೆ ಮೆಚ್ಚುಗೆಯ ಮಾತನಾಡುತ್ತ, ಪ್ರೀತಿಯಿಂದ ಆರೈಕೆ ಮಾಡುವುದು ಬಹಳ ಅಗತ್ಯ. ಸಾಮಾನ್ಯವಾಗಿ ಎಲ್ಲ ಸ್ತ್ರೀಯರು, ತಮ್ಮ ಶರೀರದ ಬಗ್ಗೆ ಸ್ವಯಂ ಪ್ರಜ್ಞೆ ಹೊಂದಿರುವುದರಿಂದ ರತಿ ಕ್ರೀಡೆಯ ಸಮಯದಲ್ಲಿ ಬೆಳಕನ್ನು ಬಯಸುವುದಿಲ್ಲ. ಆದರೆ, ಮಂದವಾದ ಬೆಳಕನ್ನು ಮಾತ್ರ ಬಯಸುತ್ತಾರೆ.

* * *

. ಲೈಂಗಿಕ ಸಂಬಂಧದಲ್ಲಿ ಪತ್ನಿ ಏನನ್ನು ಬಯಸುತ್ತಾಳೆ?

  • ಆರೋಗ್ಯಕರ ಪ್ರೀತಿ, ಪ್ರೇಮ, ಉತ್ತಮ ನಿರ್ಧಾರ, ಉತ್ತಮ ಭಾವಭಿವ್ಯಕ್ತಿ, ನವಿರಾದ ವರ್ತನೆ ಮತ್ತು ಮಧುರ ಮಾತುಕತೆ.
  • ಪ್ರಶಾಂತವಾದ ಏಕಾಂತ ಸ್ಥಳ.
  • ಹೆಚ್ಚಿನ ರಿತಿಯ ದೀರ್ಘ ಶಾರೀರಿಕ ಉತ್ತೇಜ, ಆಲಿಂಗನ, ಚುಂಬನ, ಶರೀರ ದರ್ಶನ.
  • ಆತುರ- ಆತಂಕ ಭಯ ಪಡದೆ ಸಾವಧಾನವಾಗಿ ಲಯ ಬದ್ಧತೆಯಿಂದ ನಡೆಸುವ ರತಿಕ್ರೀಡೆ.
  • ಸ್ತ್ರೀಯೂ ಪುರುಷನಂತೆಯೆ ಲೈಂಗಿಕ ಆಸಕ್ತಿಯನ್ನು ಹೊಂದಿರುತ್ತಾಳೆ. ಆದ್ದರಿಂದ ಭಾವಪ್ರಾಪ್ತಿ (ಆರ್ಗ್ಯಾ ಸಮ್) ಯನ್ನು ಸಂತೋಷದಿಂದ ಹೊಂದಲು ಇಷ್ಟಪಡುತ್ತಾಳೆ. ಆಕೆಯ ಸೂಚನೆಯ ಮೇರೆಗೆ ಪತಿರಾಯ ವರ್ತಿಸಿ, ’ಭಾವಪ್ರಾಪ್ತಿ’ ಹೊಂದಲು ನೆರವಾಗಬೇಕು.

* * *

. ಸ್ತ್ರೀ ಹೇಗೆ ಲೈಂಗಿಕ ಚೇತರಿಕೆಯನ್ನು ಹೊಂದುತ್ತಾಳೆ?

ಸ್ತ್ರೀ, ಶಾರೀರಿಕವಾಗಿ ಉತ್ತೇಜನದ ಪ್ರತಿಕ್ರಿಯೆಯನ್ನು ತೋರಬೇಕಾದರೆ, ಮೊಟ್ಟ ಮೊದಲು ಆಕೆಯಲ್ಲಿ ಮಾನಸಿಕ ಮತ್ತು ಭಾವನಾತ್ಮಕ ಉತ್ತೇಜನ ಉಂಟಾಗಿರುವುದು ಅಗತ್ಯ. ವರ್ತನಾ ವಿಜ್ಞಾನಿಗಳ ಪ್ರಕಾರ ಸ್ತ್ರೀ ನಿಧಾನವಾಗಿ ಲೈಂಗಿಕ ಚೇತರಿಕೆಯನ್ನು ಹೊಂದುತ್ತಾಳೆ. ಅಲ್ಲದೆ, ಅದರ ವ್ಯಾಪ್ತಿಯು ಹೆಚ್ಚಿರುತ್ತದೆ. ಆದುದರಿಂದ, ಪುರುಷ ಸ್ತ್ರೀಯರ‍್ನು ಸಂವೇದನೆಯಿಂದ ಆರೈಕೆ ಮಾಡಬೇಕಾದ್ದು ಬಹಳ ಮುಖ್ಯ.

ಸ್ತ್ರೀಯನ್ನು ಸೆಕ್ಸ್‌ವಸ್ತುವಾಗಿ ಪರಿಗಣಿಸಿದರೆ ಆಕೆ ಲೈಂಗಿಕ ಚೇತರಿಕೆ ಹೊಂದುವುದಿಲ್ಲ. ಆಕೆಗೆ ಗಂಡನ ಬಗ್ಗೆ ವಿಶ್ವಾಸ ಮೂಡಿದರೆ ಬಹಳ ಬೇಗೆ ಪ್ರತಿಕ್ರಿಯೆ ತೋರುತ್ತಾಳೆ. ಪ್ರೇಮದಾಟದಲ್ಲಿ ಗಂಡನಿಂದ ಸ್ಪರ್ಶ, ಆಲಿಂಗನ, ಚುಂಬನವನ್ನು ಬಯಸುತ್ತಾಳೆ. ಬೆಡ್‌ರೂಮಿನಲ್ಲಿ ಮಂದ ಬೆಳಕು ಮಧುರ ಸಂಗೀತ ಮೂಡಿಬರುತ್ತಿದ್ದರೆ, ರತಿಯ ಮಾತುಕತೆ ಇದ್ದರೆ ಸ್ತ್ರೀಯಲ್ಲಿ ರತಿ, ರುಚಿರತೆಯಿಂದ ಕೂಡಿರುತ್ತದೆ.

* * *

. ಸಾಮಾನ್ಯ ದೋಷಗಳು

ಅಮೆರಿಕಾದಲ್ಲಿ ಕೈಗೊಂಡ ಅಧ್ಯಯನ ಪ್ರಕಾರ ಪತಿ – ಪತ್ನಿಯರಲ್ಲಿನ ಸಾಮಾನ್ಯ ದೋಷಗಳು ಕೆಳಕಂಡತಿವೆ

ನ್ಯೂನತೆಯ ಹೆಂಡತಿಯರು ನ್ಯೂನತೆಯ ಗಂಡಂದಿರು
ದೂಷಿಸುತ್ತಾರೆ ಹೆಂಡತಿಯನ್ನು ಗೌರವಿಸುವುದಿಲ್ಲ
ಗಂಡನ ಕೆಲಸ – ಕಾರ‍್ಯಗಳನ್ನು ಅಡಚಣೆ ಮಾಡುತ್ತಾರೆ ಅಪನಂಬಿಕೆ ಹೊಂದಿರುತ್ತಾರೆ.
ಸೌಂದರ್ಯ ಕಾಪಾಡಿಕೊಳ್ಳುವುದಿಲ್ಲ ಮಮತೆ ತೋರ್ಪಡಿಸುವುದಿಲ್ಲ
ಗಂಡಂದಿರನ್ನು ಟೀಕಿಸುತ್ತಾರೆ ಮಕ್ಕಳೊಂದಿಗೆ ಒರಟಾಗಿ ವರ್ತಿಸುತ್ತಾರೆ.
ಮಕ್ಕಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದಿಲ್ಲ ಒರಟಾಗಿ ವರ್ತಿಸುತ್ತಾರೆ. ಜೀವನದ ಬಗ್ಗೆಯೇ ಪ್ರೀತಿ ಇರುವುದಿಲ್ಲ.

* * *

. ಪ್ರತಿ ಬಾರಿಯ ಲೈಂಗಿಕ ಸಂಭೋಗ ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ?

ಇಷ್ಟೇ ಸಮಯವೆಂದು ಖಚಿತವಾಗಿ ಹೇಳಲಾಗುವುದಿಲ್ಲ. ಅದು ಒಂದು ನಿಮಿಷವಾಗಿರಬಹುದು ಅಥವಾ ಒಂದು ಗಂಟೆಯ ಕಾಲ ಮುಂದುವರೆಯಬಹುದು. ಅಲ್ಲದೆ, ಇದು ಲವ್‌ಪ್ಲೇ (ಫ್ಲೋರ್‌ಪ್ಲೇ, ಮುಂಕೇಳಿ) ಯನ್ನು ಅವಲಂಬಿಸಿರುತ್ತದೆ. ಒಂದು ಅಂಕಿ – ಅಂಶದ ಪ್ರಕಾರ ಪುರುಷರು ಭಾವಪ್ರಾಪ್ತಿಯನ್ನು ಹೊಂದಲು ಮೂರರಿಂದ ಒಂಬತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ. ಸ್ತ್ರೀಯರು ಭಾವಪ್ರಾಪ್ತಿಯನ್ನು ಹೊಂದಲು ಸುಮಾರು ಐದರಿಂದ ಹತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದು ಸ್ತ್ರೀಯಿಂದ ಸ್ತ್ರೀಗೆ ವ್ಯತ್ಯಾಸಗೊಳ್ಳುತ್ತದೆ.

* * *

. ಫ್ರೆಂಚ್ ಕಿಸ್ಸಿಂಗ್ಎಂದರೇನು?

ಬಾಯಿಯನ್ನು ತೆರೆದುಕೊಂಡು ಕೊಡುವ ಕಿಸ್‌ಗೆ ಫ್ರೆಂಚ್ ಕಿಸ್ ಎನ್ನುತ್ತಾರೆ. (ತುಟಿಗಳ ಮೇಲೆ ಅಥವಾ ಕೆನ್ನೆಯ ಮೇಲೆ ಕೊಡುವ ಕಿಸ್‌ಗೆ ವಿರುದ್ಧವಾದುದ್ದು) ಇದರಲ್ಲಿ ದಂಪತಿಗಳು ತಮ್ಮ ನಾಲಿಗೆಯನ್ನು ಪರಸ್ಪರ ಉಪಯೋಗಿಸುವುದರಿಂದ, ಬಾಯಿ (ಓವರ್ ಪ್ಲೆಷರ್) ಸಂತೋಷ ಉಂಟಾಗುತ್ತದೆ.

* * *

. ಪುರುಷನಿಂದ ಸ್ತ್ರೀ ಏನನ್ನು ಬಯಸುತ್ತಾಳೆ?

ನನ್ನ ಗಂಡ ನಿಜವಾಗಿಯೂ ನನ್ನ ಬಗ್ಗೆ ಮೆಚ್ಚುಗೆಯನ್ನು ಸೂಚಿಸಬೇಕು.
– ಡೊರಿಂಕಾ, ೪೫, ಆಫೀಸ್‌ಮ್ಯಾನೇಜರ್‌

ಹೆಂಡತಿಯನ್ನು ಹೇಗೆ ಪ್ರೀತಿಸಬೇಕೆಂಬುದರ ಬಗ್ಗೆ ಗಂಡನಿಗೆ ಗೊತ್ತಿರಬೇಕು. ರತಿಯಲ್ಲಿ ಆತುರಪಡಬಾರದು. ಮರ್ಯಾದೆಯನ್ನು ಕೊಡಬೇಕು. ನನ್ನ ದೇಹದ ಎಲ್ಲ ಭಾಗಗಳ ಬಗ್ಗೆಯೂ ಆತನು ತಿಳಿದಿರಬೇಕು. ಪುರುಷನಿಗೆ ಒಳ್ಳೆಯ ಸೆಕ್ಸ್ಬೇಕಿದ್ದರೆ ಅವರು ಪರಸ್ತ್ರೀ ವ್ಯಾಮೋಹವನ್ನು ಹೊಂದಿರಬಾರದು.
– ಕಟೆ, ೩೪, ಅಂಚೆ ಇಲಾಖೆ ನೌಕರಳು.

ಹಣ ಪ್ರೀತಿ ಮತ್ತು ಹೊಸ ಉಡುಪುಗಳು.
– ಮೇರಿ, ೨೦, ಗೃಹಿಣಿ

ನವಿರಾದ ಆಲಿಂಗನ; ಮಮತೆಯ ಪ್ರದರ್ಶನ ಮತ್ತು ಬೆಳಿಗ್ಗೆ ಕೆಲಸಕ್ಕೆ ಹೊರಡುವ ಮೊದಲು ಆತ ಆತ್ಮೀಯ ಚುಂಬನವನ್ನು ನೀಡಬೇಕು.
– ಆಮಿ, ೩೨, ಸಮಾಜಸೇವಾ ಕಾರ್ಯಕರ್ತೆ

ಗಂಡನಾದವನು ಹೆಂಡತಿಗೆ ಭದ್ರತೆಯನ್ನು ನೀಡಬೇಕು ದಯೆ, ಕರುಣೆಯಿಂದ ವರ್ತಿಸಬೇಕು; ಒಳ್ಳೆಯ ಸ್ನೇಹಿತನಾಗಿರಬೇಕು. ಅಲ್ಲದೆ, ನಿಜವಾದ ಜೀವನ ಸಂಗಾತಿಯಾಗಿರಬೇಕು. ನಾನು ಮತ್ತು ನನ್ನ ಗಂಡ ಬಹಳಷ್ಟು ಕೆಲಸಗಳನ್ನು ಒಟ್ಟಿಗೆ ಮಾಡುತ್ತೇವೆ. ನಾವು ಮದುವೆಯಾಗಿ ನಲವತ್ತು ವರ್ಷಗಳಾದವು.

– ರೂಬಿ, ೬೩, ರಿಟೈರ‍್ಡ್ ಆಫೀಸ್‌ಮ್ಯಾನೇಜರ್‌.

* * *

. ಪ್ರೀತಿಸುವಲ್ಲಿ ಯಾರು ಮುಂದಾಗಬೇಕು?

ಇಬ್ಬರು ಸಂಗಾತಿಗಳಲ್ಲಿ ಯಾರಾದರೂ ಮುಂದಾಗಬಹುದು.

  • ಲೈಂಗಿಕ ಸಂಭೋಗದಲ್ಲಿ ಎಷ್ಟು ಆಸನಗಳಿವೆ?

ಕೆಲವು ದಂಪತಿಗಳು ಪುರುಷ ಪ್ರಧಾನ ಸಂಭೋಗಾಸನ ಅಥವಾ ಮಿಷನರಿ ಪೊಸಿಷನ್‌ಆಸನ ಮಾತ್ರವೇ ಇರುವುದೆಂದು ಭಾವಿಸಿದ್ದಾರೆ. ಪುರುಷ ಸಂಭೋಗಾಸನದಲ್ಲಿ ಸ್ತ್ರೀಯ ಮೇಲೆ ಪುರುಷ ಮಲಗಿ ಲೈಂಗಿಕ ಕ್ರಿಯೆಯನ್ನು ನಡೆಸುತ್ತಾನೆ. ಲೈಂಗಿಕ ಸಂಭೋಗದಲ್ಲಿ ದಂಪತಿಗಳು ಇಚ್ಛಿಸುವಷ್ಟು ಆಸನಗಳಿವೆ. ಪ್ರಸಿದ್ಧ ವಾತ್ಸ್ಯಾಯನ ಕಾಮಸೂತ್ರದಲ್ಲಿ ೬೪ ವಿವಿಧ ಲೈಂಗಿಕಾಸನಗಳಿವೆಯೆಂದು ದಾಖಲಿಸಲ್ಪಟ್ಟಿದೆ.

  • ಲೈಂಗಿಕತೆಯನ್ನು ಹೊಂದಲು ಉತ್ತಮ ಸಮಯ ಯಾವುದು? ಜನರೇಕೆ ಹಗಲಿಗಿಂತಲೂ ರಾತ್ರಿಯ ವೇಳೆ ಸೆಕ್ಸ್ನಲ್ಲಿ ತೊಡಗುತ್ತಾರೆ?

ಜೀವಶಾಸ್ತ್ರದ ಪ್ರಕಾರ, ಇಂತಹ ಸಮಯವೆ ಉತ್ತಮ ಸಮಯವೆಂದೇನಿಲ್ಲ. ಎಲ್ಲ ಸಮಯವೂ ಒಳ್ಳೆಯದೇ, ಬೆಳಗಿನಿಂದ ಸಂಜೆಯವರಿಗೂ ದಣಿದಿರುವ ದಂಪತಿಗಳು ರಾತ್ರಿಯ ವೇಳೆ ಬೆಡ್‌ರೂಮಿನಲ್ಲಿ ವಿಶ್ರಾಂತಿ ಪಡೆದು ಆಯಾಸ ನಿವಾರಣೆಯಾಗಿರುವುದರಿಂದ ಹಾಗೂ ಲೈಂಗಿಕ ಕ್ರಿಯೆಯನ್ನು ನಡೆಸಿದ ನಂತರ ಚೆನ್ನಾಗಿ ನಿದ್ರೆ ಬರುವುದರಿಂದ ಬಹಳಷ್ಟು ದಂಪತಿಗಳು ರಾತ್ರಿಯ ವೇಳೆಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಇಚ್ಛಿಸುತ್ತಾರೆ.

  • ದಂಪತಿಗಳು ಒಂದು ರಾತ್ರಿಯಲ್ಲಿ ಎಷ್ಟು ಬಾರಿ ಸಂಭೋಗದಲ್ಲಿ ಪಾಲ್ಗೊಳ್ಳಬಹುದು?

ಗರಿಷ್ಠ ಹನ್ನೆರಡು ಬಾರಿ ಸೆಕ್ಸ್‌ನ್ನು ಹೊಂದಬಹುದು. ಆದರೆ, ಇದು ಸಾಮಾನ್ಯವಾದ ಸೆಕ್ಸ್‌ಅಲ್ಲ. ಹೊಸದಾಗಿ ಮದುವೆಯಾದ ದಂಪತಿಗಳು ರಾತ್ರಿ, ಅನೇಕ ಬಾರಿ ಲೈಂಗಿಕ ಸಂಭೋಗದಲ್ಲಿ ತೊಡಗುತ್ತಾರೆ. ಆದರೆ, ಕ್ರಮೇಣ ಆ ಸಂಖ್ಯೆ ಕಡಿಮೆಯಾಗುತ್ತದೆ. ಅಂದರೆ ದಿನದಲ್ಲಿ ಒಂದು ಬಾರಿ ಅಥವಾ ವಾರದಲ್ಲಿ ಮೂರು ಬಾರಿ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ.

ಕೆಲವು ದಂಪತಿಗಳಿಗೆ ತಿಂಗಳಿನಲ್ಲಿ ಎರಡು ಬಾರಿ ಅಥವಾ ಒಂದು ಬಾರಿ ಲೈಂಗಿಕ ಕ್ರಿಯೆ ನಡೆದರೂ ಸಂತೋಷವಾಗಿರುತ್ತಾರೆ. ಎಷ್ಟು ಬಾರಿ ಸೆಕ್ಸನ್ನು ಹೊಂದಬಹುದೆಂಬುದು ದಂಪತಿಗಳ ಪರಸ್ಪರ ಆಸಕ್ತಿ ಒಪ್ಪಿಗೆಯ ಮೇಲೆ ನಿರ್ಧರಿಸಲ್ಪಡುತ್ತದೆ.

* * *

೧೦. ದಂಪತಿಗಳು ನಿಂತು ನಡೆಸುವ ಸಂಭೋಗದಿಂದ ಗರ್ಭಧಾರಣೆಯಾಗುವುದೇ?

ನಿಂತು ನಡೆಸುವ ಸಂಭೋಗ ವೈವಿಧ್ಯಮಯ ಅನುಭವವನ್ನು ನೀಡುವುದಾದರೂ ಅದು ಅಷ್ಟಾಗಿ ಅನುಕೂಲಕರ ಅಥವಾ ಸಂತೋಷವನ್ನು ನೀಡುವ ಭಂಗಿಯಾಗಿರುವುದಿಲ್ಲ. ಅಲ್ಲದೆ. ನಿಂತು ನಡೆಸುವ ಸಂಭೋಗದಿಂದಲೂ ಸ್ತ್ರೀ ಗರ್ಭಧಾರಣೆಯನ್ನು ಹೊಂದಬಲ್ಲಳು.

* * *