೯೧. R : RESPOSIBILITY (ರೆಸ್ಪಾನ್ಸಿಬಿಲಿಟಿ) : ಹೊಣೆಗಾರಿಕೆ, ಜವಬ್ದಾರಿ
ದಾಂಪತ್ಯದಲ್ಲಿ ಗಂಡ-ಹೆಂಡತಿ ಇಬ್ಬರೂ ಸುಖ ಸಂಸಾರವನ್ನು ನಿರ್ವಹಿಸಲು ಹೊಣೆಗಾರರಾಗಿರುತ್ತಾರೆ.
ಜವಾಬ್ದಾರಿಯುತ ಲೈಂಗಿಕತೆಯಿಂದ ಬೇಡದ ಗರ್ಭ ಉಂಟಾಗದಂತೆ ಜಾಗ್ರತೆ ವಹಿಸುತ್ತಾರೆ. ವೈವಾಹಿಕ ಜೀವನದ ಹೊರಗಡೆ ಲೈಂಗಿಕ ಸಂಬಂಧಗಳನ್ನು ಹೊಂದುವುದಿಲ್ಲ. ಗಂಡ ಹೆಂಡತಿ ಇಬ್ಬರು ಗರ್ಭ ನಿರೋಧಕ ಸಾಧನಗಳ ಉಪಯೋಗವನ್ನು ಅರಿತಿರುತ್ತಾರೆ. ಅಲ್ಲದೆ, ಕುಟುಂಬ ಯೋಜನೆಯ ಮಹತ್ವವನ್ನು ತಿಳಿದಿರುತ್ತಾರೆ.
ಜವಾಬ್ದಾರಿಯುತವಾಗಿ ತಮ್ಮ ಮಕ್ಕಳನ್ನು ಬೆಳೆಸಿ, ವಿದ್ಯಾವಂತರನ್ನಾಗಿ ಮಾಡುತ್ತಾರೆ.
* * *
೯೨. S : SEXUAL INTERCOURSE (ಸೆಕ್ಸುಯಲ್ ಇಂಟರ್ಕೋಸ್ಸ್)
ರತಿಕ್ರಿಯೆ, ಲೈಂಗಿಕ ಸಂಭೋಗ, ಲೈಂಗಿಕ ಸಂಪರ್ಕ
ಗಂಡ ಹೆಂಡತಿ ಏಕಾಂತದಲ್ಲಿ ನಡೆಸುವಂತಹ ಸಾಮಿಪ್ಯ ಸಂಪರ್ಕ ಕ್ರಿಯೆಯೇ ಸೆಕ್ಸುಯಲ್ ಇಂಟರ್ಕೋರ್ಸ್ ಅಥವಾ ಲೈಂಗಿಕ ಸಂಭೋಗ. ಪುರುಷ ಪ್ರಧಾನ ಸಂಭೋಗಾನವನ್ನೇ ಸಾಮಾನ್ಯವಾಗಿ ಎಲ್ಲ ದಂಪತಿಗಳು ವೈವಾಹಿಕ ಜೀವನದ ಆರಂಭದ ದಿನಗಳಲ್ಲಿ ಅನುಸರಿಸುತ್ತಾರೆ. ಆದರೆ, ಒಂದೇ ರೀತಿಯ ಲೈಂಗಿಕಾಸಾದ ಆಸಕ್ತಿ ಹೆಚ್ಚುತ್ತಾ ಹೋದಂತೆ ಬೇಸರ ಮೂಡಿಸಬಹುದು.
ಆದುದರಿಂದ, ವಿವಿಧ ರೀತಿಯ ಲೈಂಗಿಕಾಸನಗಳನ್ನು ದಂಪತಿಗಳು ಅಭ್ಯಾಸಿಸಿ ಅನುಭವಿಸುವುದರಿಂದ, ರತಿ ರಮ್ಯತೆಯ ಮಹತ್ವಗೊತ್ತಾಗುತ್ತದೆ.
* * *
೯೩. T : TIKLING (ಟಿಕ್ಲಿಂಗ್) : ಸಂತೋಷಪಡಿಸು; ಕಚಗುಳಿಯಿಕ್ಕು
ರತಿಕೂಟಕ್ಕೆ ಮೊದಲು ನಡೆಸುವ ಕಾಮಕೇಳಿಯಲ್ಲಿ ದಂಪತಿಗಳು ಪರಸ್ಪರ ಕಚಗುಳಿಯಿಟ್ಟು ಕೊಂಡರೆ ಸಂತೋಷ ಉಂಟಾಗುತ್ತದೆ.
* * *
೯೪. U : UNDERSTANDING (ಅಂಡರ್ಸ್ಟ್ಯಾಂಡಿಂಗ್) : ಬುದ್ಧಿಶಕ್ತಿ, ತಿಳಿಯುವಿಕೆ, ಪ್ರಜ್ಞೆ, ಗ್ರಹಣ ಶಕ್ತಿ, ಜ್ಞಾನ, ಒಡಂಬಡಿಕೆ.
ಗಂಡ-ಹೆಂಡತಿ ಮೊಟ್ಟ ಮೊದಲು ಪರಸ್ಪರ ಅರ್ಥ ಮಾಡಿಕೊಳ್ಳಬೇಕು. ಗಂಡನ ಲೈಂಗಿಕ ಬೇಡಿಕೆಯೇನು? ಹೆಂಡತಿಯ ಲೈಂಗಿಕ ಬೇಡಿಕೆಯೇನು? ಎಂಬುದನ್ನು ತಿಳಿದುಕೊಳ್ಳಬೇಕು. ದಂಪತಿಗಳ ಮಾನಸಿಕ ಸ್ಥಿತಿ ಚೆನ್ನಾಗಿರದಿದ್ದರೆ ರತಿಕ್ರಿಯೆ ಯಶಸ್ವಿಯಾಗುವುದಿಲ್ಲ.
ಲೈಂಗಿಕ ಸಂಭೋಗಕ್ಕೆ ಮೊದಲು ನಡೆಸುವ ಫೋರ್ಪ್ಲೇಯಲ್ಲಿ ಗಂಡನ ಜೊತೆಯಲ್ಲಿ ಹೆಂಡತಿ ಪ್ರಜ್ಞಾಪೂರ್ವಕವಾಗಿ ವರ್ತಿಸಬೇಕು. ಅಲ್ಲದೆ, ಪ್ರೇಮದಾಟ ಹೆಚ್ಚು ಹೊತ್ತು ನಡೆದರೆ ಸ್ತ್ರೀಗೆ ಸಂತೋಷ ಉಂಟಾಗುತ್ತದೆ ಅಲ್ಲದೆ, ರತಿಕ್ರೀಡೆಗೆ ಹೆಚ್ಚು ಒಲವು ತೋರುತ್ತಾಳೆ. ಲೈಂಗಿಕ ಲಹರಿಯಿಂದ ಭಾವನೆಯ ಬಾಂಧವ್ಯ ವೃದ್ಧಿಸುತ್ತದೆ.
* * *
೯೫. V : VISIBILITY (ವಿಜಿಬಿಲಿಟಿ) : ಸ್ಪಷ್ಟ ಕಾಣುವ
ದಂಪತಿಗಳು ರತಿಕ್ರೀಡೆಯನ್ನು ನಡೆಸುವ ಸಂದರ್ಭದಲ್ಲಿ ಬೆಡ್ರೂಮಿನಲ್ಲಿ ಹೆಚ್ಚು ಬೆಳಕಿರಬಾರದು; ಮಂದವಾದ ಬೆಳಕಿರಬೇಕು.
ದಂಪತಿಗಳು, ಸುಂದರ ದೇಹಗಳನ್ನು ಪರಸ್ಪರ ವೀಕ್ಷಿಸಿಕೊಳ್ಳುವುದರಿಂದ ದೃಶ್ಯರತಿ ಉಂಟಾಗುತ್ತದೆ.
ಮುಖಾಮುಖಿಯಾಗಿ ಗಂಡ ಹೆಂಡತಿ ಮಾತಾಡುವುದು, ಪ್ರೇಮಭಾವದಿಂದ ನೋಡುವುದು, ಸ್ಪಷ್ಟವಾಗಿ ನೋಡುತ್ತಾ ಸ್ಪರ್ಶಿಸುವುದರಿಂದ ಉತ್ತೇಜನ ಉಂಟಾಗಿ ಉತ್ಸಾಹ ಉಂಟಾಗುತ್ತದೆ.
ಪರಸ್ಪರ ದಂಪತಿಗಳು ತಮ್ಮ ದೇಹದ ಬಗ್ಗೆ ಸಕಾರಾತ್ಮಕ (ಪಾಸಿಟೀವ್) ಭಾವನೆಯನ್ನು ಹೊಂದಿರಬೇಕು. ನಕಾರಾತ್ಮಕ ಭಾವನೆಗಳಿಂದ ಶರೀರ- ಮನಸ್ಸಿಗೆ ಹಾನಿ ಉಂಟಾಗಬಹುದು.
* * *
೯೬. X : XANTHIPPE (ಝ್ಯೂಂಥಿಪಿ) : ಗಯ್ಯಾಳಿ ಸ್ತ್ರೀ, ಚಂಡಿ.
ದಾಂಪತ್ಯದಲ್ಲಿ ಸ್ತ್ರೀ ಗಯ್ಯಾಳಿಯಾದರೆ, ಚಂಡಿಯಾದರೆ, ಗಂಡನನ್ನು ಅರ್ಥ ಮಾಡಿಕೊಳ್ಳದಿದ್ದರೆ ರತಿ ಸುರತದಲ್ಲಿ ಸಹಕರಿಸದಿದ್ದರೆ ರತಿಸುಖವನ್ನು ಹೊಂದಲಾಗುವುದಿಲ್ಲ. ನವಿರಾಗಿ ವರ್ತಿಸಿದರೆ ಗಂಡನು ಸಂತೋಷಪಡುತ್ತಾನೆ.
* * *
೯೭. Y : YELP (ಯೆಲ್ಪ್) : ಕೂಗು, ಊಳಿಡು, ನೋವು
ಲೈಂಗಿಕ ಸಂಭೋಗದಲ್ಲಿ ಮತ್ತು ಪ್ರೇಮದಾಟದಲ್ಲಿ ಪರಸ್ಪರ ನೋವು ಉಂಟಾಗದಂತೆ ನವಿರಾಗಿ ದಂಪತಿಗಳು ವರ್ತಿಸಬೇಕು.
ಜನನೇಂದ್ರಿಯಗಳಲ್ಲಿ ನೋವಿದ್ದರೆ – ರತಿಕ್ರೀಡೆಯನ್ನು ನಡೆಸಬಾರದು. ಮೆಡಿಕಲ್ ಡಾಕ್ಟರ್ಗಾಗಲಿ ಅಥವಾ ಗೈನಕಾಲಜಿಸ್ಟರ್ರವರಿಗೆ ತೋರಿಸಿ ಸೂಕ್ತ ಸಲಹೆ, ಚಿಕಿತ್ಸೆಯನ್ನು ಪಡೆಯಬೇಕು.
* * *
೯೮. Z : ZEAL (ಝೀಲ್): ಉತ್ಸಾಹ, ಆಸಕ್ತಿ
ಸ್ತ್ರೀಗಿಂತಲೂ ಪುರುಷ ಬೇಗನೆ ವೀರ್ಯವನ್ನು ಸ್ಖಲಿಸಿ ಸುಖ ಶಿಖರವನ್ನು ತಲುಪುತ್ತಾರೆ. ಸ್ತ್ರೀ ಸಂತಸಗೊಂಡು ತನ್ನ ಇಡೀ ಶರೀರದಲ್ಲಿ ಆನಂದದ ಅಲೆಗಳು ಹರಿದಾಡಿದಾಗ ಸುಖ ಶಿಖರವನ್ನು ತಲುಪುತ್ತಾಳೆ. ರತಿಗೆ ದಂಪತಿಗಳಿಬ್ಬರಲ್ಲೂ ಉತ್ಸಾಹದ ಜೊತೆಗೆ ಆಸಕ್ತಿಯು ಇದ್ದರೆ ಇಬ್ಬರು ಸುಖ ಶಿಖರವನ್ನು ತಲುಪಲು ಅನುಕೂಲವಾಗುತ್ತದೆ.
* * *
೯೯. ನಿಮ್ಮ ಪತಿಯನ್ನು ಸಂತೋಷವಾಗಿರುವುದು ಹೇಗೆ?
- ನಿಮ್ಮ ಗಂಡನ ಯಶಸ್ಸಿನ ಬಗ್ಗೆ ಮೆಚ್ಚುಗೆ ಸೂಚಿಸಿ.
- ಕೆಲವೊಮ್ಮೆ ಅವರು ಏಕಾಂಗಿಯಾಗಿರಲು ಅವಕಾಶ ಮಾಡಿಕೊಡಿ.
- ನಿಮ್ಮ ಗಂಡ ಹೇಳುವುದನ್ನು ಜಾಣತನದಿಂದ ಆಲಿಸಿ.
- ನಿಮ್ಮ ಗಂಡ ದೇವರಪೂಜೆ ಮಾಡುತ್ತಿರುವಾಗ, ಸ್ನಾನದ ಮನೆಯಲ್ಲಿದ್ದಾಗ ಅವರಿಗೆ ಬಂದ ಫೋನಿಗೆ ಸಾವಧಾನದಿಂದ ಉತ್ತರಿಸಿ.
- ಅವರ ಶಾರೀರಿಕ ಅರೋಗ್ಯದ ಬಗ್ಗೆ ಮೆಚ್ಚುಗೆ ಸೂಚಿಸಿ.
- ನಿಮ್ಮ ಪತಿ ಇಷ್ಟಪಡುವ ಅಡುಗೆಯನ್ನು ಸಿದ್ಧಪಡಿಸಿ, ಬಡಿಸಿ.
- ಬೆಳಿಗ್ಗೆ ಎದ್ದು ಸ್ನಾನ ಮಾಡಿದ ಕೂಡಲೇ ಅವರು ಇಷ್ಟಪಡುವ ಕಾಫಿ, ಟೀ ಅಥವಾ ಹಾಲನ್ನು ಕೊಡಿ.
- ಅವರಿಗೆ ಸಂಬಂಧಿಸಿದ ವೈಯಕ್ತಿಕ ವಸ್ತುಗಳು ಜೋಪಾನವಾಗಿರುವಂತೆ ಜಾಗ್ರತೆ ವಹಿಸಿ.
* * *
೧೦೦. ದಂಪತಿಗಳ ಶರೀರ ಮತ್ತು ಮಸಾಜ್
ಮಸಾಜ್ಅಥವಾ ಅಂಗಮರ್ಧನ ಗಂಡ – ಹೆಂಡತಿಯ ಶರೀರಕ್ಕೆ ಏನನ್ನು ಮಾಡುತ್ತದೆ?
- ಶರೀರದ ರಕ್ತನಾಳಗಳನ್ನು ಹಿಗ್ಗಿಸಿ, ರಕ್ತಸಂಚಾರವನ್ನು ಅಭಿವೃದ್ಧಿಗೊಳಿಸಿ ರಕ್ತಗಟ್ಟನ್ನು ನಿವಾರಿಸುತ್ತದೆ.
- ಅನೀಮಿಯಾ (ರಕ್ತಹೀನತೆ) ಇದ್ದರೆ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ.
- ಮೆಕ್ಯಾನಿಕಲ್ ಕ್ಲೀನರ್ಆಗಿ ಕಾರ್ಯ ನಿರ್ವಹಿಸುತ್ತವೆ. ಅಲ್ಲದೆ, ಉದ್ವೇಗವನ್ನು ನಿವಾರಿಸುತ್ತದೆ.
- ಮಾಂಸ ಖಂಡಗಳಲ್ಲಿ ರಕ್ತ ಪೂರೈಕೆಯನ್ನು ಹೆಚ್ಚಿಸುತ್ತದೆ ಮತ್ತು ಮಾಂಸಖಂಡಗಳಿಗೆ ಪೌಷ್ಟಿಕಾಂಶಗಳನ್ನು ಪೂರೈಸುತ್ತದೆ.
- ಮಾಂಸಖಂಡಗಳ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮಾಂಸ ಖಂಡಗಳ ಸವೆತವನ್ನು ತಡೆಗಟ್ಟುತ್ತದೆ.
* * *
Leave A Comment