೮೧. GENITAL ORGANS : MALE ಪುರುಷ ಜನನೇಂದ್ರಿಯಗಳು :

ಪುರುಷನ ಜನನೇಂದ್ರಿಯಗಳಲ್ಲಿ ಪ್ರಮುಖವಾದದ್ದು ಶಿಶ್ನ. ಇದರ ಮುಖ್ಯ ಕಾರ‍್ಯಗಳು ಮೂತ್ರ ವಿಸರ್ಜನೆ ಹಾಗೂ ಸಂಭೋಗದ ಅವಧಿಯಲ್ಲಿ ವೀರ‍್ಯಾಣುಗಳನ್ನು ಯೋನಿಯಲ್ಲಿ ವಿಸರ್ಜಿಸುವುದು. ಶಿಶ್ನದ ಉದ್ದ ಸುಮಾರು ನಾಲ್ಕು ಅಂಗುಲ. ಪುರುಷ ಕಾಮೋದ್ರೇಕಗೊಂಡಾಗ ಶಿಶ್ನ ಉಬ್ಬುತ್ತದೆ.

ಶಿಶ್ನ ಅದರಲ್ಲೂ ಮುಖ್ಯವಾಗಿ ಶಿಶ್ನದ ತುದಿ, ಹೇರಳ ನರಾಗ್ರಗಳಿಂದ ಕೂಡಿದೆ. ಆದುದರಿಂದಲೇ ಸ್ಪರ್ಶ ಮಾತ್ರದಿಂದಲೇ ಉದ್ರೇಕಗೊಳ್ಳುತ್ತದೆ.

ಶಿಶ್ನದ ಉದ್ದ ಕಡಿಮೆಯಾದರೆ ಲೈಂಗಿಕ ಶಕ್ತಿ ಕಡಿಮೆಯಾಗಬೇಕಿಂದಿಲ್ಲ. ಅಥವಾ ಉದ್ದವಿದ್ದರೆ ಅತಿ ಕಾಮಿಗಳೂ ಅಲ್ಲ. ಮುಂದೊಗಲಿದ ಹಿಂಭಾಗದಲ್ಲಿ ಸ್ಮೆಗ್ಮಾ ಎಂಬ ಬಿಳಿಯ ಅಂಟುದ್ರವ ಶೇಖರವಾಗುತ್ತಿರುತ್ತದೆ. ಆದುದರಿಂದ, ಅದನ್ನ ಪ್ರತಿದಿನ ಶುದ್ಧವಾದ ನೀರಿನಿಂದ ತೊಳೆದುಕೊಳ್ಳಬೇಕು.

* * *

೮೨. H : HAIR ಕೂದಲು:

ಸ್ತ್ರೀಯರಿಗಿಂತಲೂ ಪುರುಷರ ದೇಹದಲ್ಲಿ ಕೂದಲು ಹೆಚ್ಚು. ದಂಪತಿಗಳ ಜೀವನದಲ್ಲಿ ಕೂದಲು ಸಹ ಪಾತ್ರವನ್ನು ವಹಿಸುತ್ತದೆ. ಅನೇಕ ಸ್ತ್ರೀಯರು ಪುರುಷನ ಮೀಸೆಯ ಬಗ್ಗೆ ಮಾತಾಡುವುದುಂಟು ಸ್ತ್ರೀಯರ ತಲೆಗೂದಲು ಉದ್ದವಾಗಿದ್ದರೆ ಪುರುಷರು ಇಷ್ಟಪಡುತ್ತಾರೆ.

ಸ್ತ್ರೀ – ಪುರುಷರಿಬ್ಬರಲ್ಲೂ ಶರೀರದ ಕೂದಲು ಸಾಮಿಷ್ಠತೆಯನ್ನು ಮೂಡಿಸುತ್ತದೆ. ಅಲ್ಲದೆ, ಪ್ರೇಮದಾಟದಲ್ಲಿ ವಿಶೇಷ ಉತ್ತೇಜವನ್ನುಂಟು ಮಾಡಿ ಲೈಂಗಿಕ ಆಕರ್ಷಣೆಯನ್ನುಂಟು ಮಾಡುತ್ತದೆ. ವಿಶೇಷವಾಗಿ ಜನನೇಂದ್ರಿಯಗಳ ಭಾಗದಲ್ಲಿ ಬೆಳೆದಿರುವ ಕೂದಲು ಮನುಷ್ಯನ ಲೈಂಗಿಕ ಪ್ರೌಢತೆಯನ್ನು ತಿಳಿಸುತ್ತದೆ.

ಶರೀರದ ವಿವಿಧ ಭಾಗಗಳಲ್ಲಿ ಬೆಳೆದಿರುವ ಕೂದಲು ದಂಪತಿಗಳಿಬ್ಬರ ಕಣ್ಣುಗಳಲ್ಲಿ ’ದೃಶ್ಯಕಾಮನೆ’ಯನ್ನು ಬಹಳ ನಿಕಟವಾಗಿ ಮೂಡಿಸುತ್ತದೆ. ಅಲ್ಲದೆ, ಶರೀರದಲ್ಲಿ ಮಧುರ ಸುವಾಸನೆಯನ್ನುಂಟು ಮಾಡುತ್ತದೆ.

ಪ್ರೇಮದಾಟದಲ್ಲಿ ಕೂದಲಿನ ಆರೈಕೆ

೧. ಪರಸ್ಪರದ ದಂಪತಿಗಳು ತಲೆಗೂದಲನ್ನು ನೀವಬೇಕು.

೨. ಎದೆಯ ಭಾಗದ ಕೂದಲನ್ನು ಉಜ್ಜಬೇಕು. ಪತಿಯ ಗಡ್ಡವನ್ನು ನೀವಬೇಕು.

೩. ಜನನೇಂದ್ರಿಯಗಳ ಭಾಗದ ಕೂದಲನ್ನು ಹಸ್ತದಿಂದ ಉಜ್ಜಬೇಕು.

೪. ಸ್ನಾನ ಮಾಡುವಾಗ ಜನನೇಂದ್ರಿಯ ಭಾಗದ ಕೂದಲನ್ನು ಮೈ ಸೋಪನ್ನು ಉಪಯೋಗಿಸಿ ತೊಳೆದುಕೊಳ್ಳಬೇಕು.

೫. ಲೈಂಗಿಕ ಸಂಭೋಗದ ನಂತರ ಜನನೇಂದ್ರಿಯ ಭಾಗವನ್ನು ಶುದ್ಧವಾದ ನೀರಿನಿಂದ ತೊಳೆದುಕೊಳ್ಳಬೇಕು. ಜನನೇಂದ್ರಿಯ ಭಾಗದಲ್ಲಿ ಹೆಚ್ಚು ಕೂದಲಿದ್ದರೆ ಚಿಕ್ಕ ಕತ್ತರಿಯಿಂದ ನೀಟಾಗಿ ಕತ್ತರಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು.

* * *

೮೩. I : INTIMACY (ಇಂಟಿಮಸಿ) : ಸಾಮೀಪ್ಯತೆ ; ಆತ್ಮೀಯತೆ

ಒಳ್ಳೆಯ ಸೆಕ್ಸ್‌ಗೆ ದಂಪತಿಗಳ ನಡುವೆ ಸಾಮೀಪ್ಯತೆ ಇರುವುದು ಅತ್ಯಗತ್ಯ. ಸಾಮೀಪ್ಯತೆ ಇಲ್ಲದಿದ್ದರೆ, ಗಂಡ – ಹೆಂಡತಿಯ ಸುಂದರ ದೇಹಗಳ ಒಂದು ಗೂಡುವುದಿಲ್ಲ. ಇಂಟಿಮಸಿಯಿಂದ ದಂಪತಿಗಳ ನಡುವೆ ಉತ್ತೇಜನಕ – ಉದ್ರೇಕ ಉಂಟಾಗುತ್ತದೆ. ಸಾಮಪ್ಯತೆಯಿಂದ ದಂಪತಿಗಳ ಭಾವನಾತ್ಮಕ ಬೆತ್ತಲೆ ಮತ್ತು ಪ್ರಾಮಾಣಿಕತೆಯುಂಟಾಗುತ್ತದೆ.

ಸಂಬಂದ, ಸ್ಪರ್ಶಕ್ಕೆ ಅವಕಾಶ ಮಾಡಿಕೊಡುವಂತಹುದು ಸಾಮಿಪ್ಯ ಸುಖವನ್ನು ಅನುಭವಿಸಬೇಕು. ಸಾಮಿಪ್ಯವಿಲ್ಲದಿದ್ದರೆ ದಂಪತಿಗಳು ಲೈಂಗಿಕ ಸಂಭೋಗವನ್ನು ಮಾಡಲಾಗುವುದಿಲ್ಲ.

* * *

೮೪. J : JOY (ಜಾಯ್): ಆನಂದ, ಹರ್ಷ, ಸಂತೋಷ

ದಂಪತಿಗಳು, ಪ್ರಶಾಂತವಾದ ಹಾಗೂ ಏಕಾಂತ ಜಾಗದಲ್ಲಿ ಪ್ರೇಮದಾಟವನ್ನು ನಡೆಸಿ ಸಂಭೋಗವನ್ನು ಮಾಡುವುದರಿಂದ ಪರಸ್ಪರ ಇಬ್ಬರಲ್ಲೂ ಆನಂದು ಉಂಟಾಗುತ್ತದೆ. ರತಿಯ ಸಂತೋಷ ದೇಹ ಮನಸ್ಸುಗಳಲ್ಲಿ ಲವಲವಿಕೆಯ ಲಾಸ್ಯವನ್ನು ಮೂಡಿಸುತ್ತದೆ.

* * *

೮೫. K : KISSES (ಕಿಸ್ಸಸ್) : ಚುಂಬನಗಳು

ದಂಪತಿಗಳು ಪರಸ್ಪರ ಚುಂಬಿಸಿಕೊಳ್ಳುವುದರಿಂದ ಸಮನಾದ ಅನುರಾಗ ಉಂಟಾಗುತ್ತದೆ. ಚುಂಬನವನ್ನು ಸ್ತ್ರೀ ಇಷ್ಟಪಡುತ್ತಾಳೆ. ಆರೈಕೆ ಮತ್ತು ಚುಂಬನದಿಂದ ದಂಪತಿಗಳ ನಡುವೆ ಉತ್ತೇಜನ ಲಭಿಸುತ್ತದೆ.

ದಂಪತಿಗಳಿಗೆ ಸರಳ ಮತ್ತು ಸುಲಭ ಸಂತೋಷವನ್ನು ನೀಡುವಂತಹದು ಕಿಸ್. ಚುಂಬನ ಬಹಳ ಸಾಮೀಪ್ಯದಲ್ಲಿ ನಡೆಯುವಂತಹುದು ಅಲ್ಲದೆ, ಶೃಂಗಾರದ ಆರೈಕೆಯಾಗಿರುತ್ತದೆ. ಬಹಳ ಸೂಕ್ಷ್ಮವಾದ ಸಂವೇದನೆಯನ್ನುಂಟು ಮಾಡಿದ ನರಗಳ ತುದಿಗಳು ತುಟಿಗಳಲ್ಲಿರುವುದರಿಂದ ದಂಪತಿಗಳು ಪರಸ್ಪರ ತುಟಿಗಳಿಂದ ಆಗಿಂದಾಗ್ಗೆ ಚುಂಬಿಸಿಕೊಳ್ಳುವುದರಿಂದ ಸಂವಹನದ ಸಂತೋಷ ಉಂಟಾಗುತ್ತದೆ. ಪ್ರಣಯ, ಚುಂಬನದಿಂದಲೇ ಆರಂಭಗೊಳ್ಳುತ್ತದೆ. ಚುಂಬನ ನವಿರಾಗಿ ಸಂವೇದನೆಯಿಂದ ಕೂಡಿರಬೇಕು. ಬಹಳ ವೇಗವಾಗಿ ಅಥವಾ ಬಹಳ ಒರಟಾಗಿ ಚುಂಬನವನ್ನು ನೀಡಬಾರದು.

ಸಂವೇದನಾತ್ಮಕ ಚುಂಬನ ಚಮತ್ಕಾರದ ಸಂತಸ ನೀಡುತ್ತದೆ. ಚುಂಬನವನ್ನು ದೇಹದ ಯಾವುದೇ ಭಾಗದಲ್ಲಾದರೂ ಕೊಡಬಹುದು.

* * *

೮೬. L : LOVE (ಲವ್) : ಪ್ರೀತಿ, ಪ್ರೇಮ, ಒಲವು

ದಂಪತಿಗಳ ನಡುವೆ ಪ್ರೀತಿಯ  ಪ್ರತಿ ಫಲನದಿಂದ ಒಳ್ಳೆಯ ಸಂಬಂಧ ಏರ್ಪಡುತ್ತದೆ. ಪ್ರೀತಿಯಿಂದಾಗಿ ಗಂಡ ಹೆಂಡತಿ ಮುಕ್ತವಾಗಿ ಮಾತಾಡಲು ಸಾಧ್ಯವಾಗುತ್ತದೆ. ಪರಸ್ಪರ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಪ್ರೀತಿ ಅವಕಾಶ ಮಾಡಿಕೊಡುತ್ತದೆ. ಪರಸ್ಪರ ಸ್ಪರ್ಶದಿಂದ ದಂಪತಿಗಳ ನಡುವಿನ ಪ್ರೀತಿ ನವೀಕರಣಗೊಳ್ಳುತ್ತದೆ.

ಪ್ರೀತಿ, ಮುನ್ನಲಿವು ನಡೆಸಲು ಅವಕಾಶ ಕಲ್ಪಿಸುತ್ತದೆ. ಪ್ರೀತಿ ದಂಪತಿಗಳ ನಡುವೆ ನಾಲ್ಕು ಹಂತಗಳಲ್ಲಿ ನಡೆಯುತ್ತದೆ. ಅವುಗಳೆಂದರೆ ಮಾತಿನ ಮೂಲಕ, ಭಾವೋದ್ರೇಕದ ಮಾತಿನ ಮೂಲಕ, ಭಾವೋದ್ರೇಕದ ಮೂಲಕ ಶರೀರದ ಮೂಲಕ ಮತ್ತು ಆಧ್ಯಾತ್ಮಿಕತೆಯಿಂದ.

ಪ್ರೀತಿ, ದಂಪತಿಗಳ ನಡುವೆ ಸಂಪರ್ಕದ ಮೂಲಕ ನಿರ್ಮಾಣಗೊಳ್ಳುತ್ತದೆ. ನಿಜವಾದ ಪ್ರೀತಿಯಲ್ಲಿ ಸುರಕ್ಷಿತ ಭಾವನೆಯಿರುತ್ತದೆ. ಪ್ರೀತಿಯಿಂದ ಗಂಡ ಹೆಂಡತಿ ಸಮವಾಗಿ ಗೌರವಿಸುವುದನ್ನು ಕಲಿಯುತ್ತಾರೆ. ಪ್ರೀತಿ, ದಾಂಪತ್ಯ ಜೀವನದಲ್ಲಿ ಸಂತೋಷ ಹತ್ತು ಸಮಾಧಾನವನ್ನು ನೀಡುತ್ತದೆ.

* * *

೮೭. M : MORNINGS (ಮಾರ್ನಿಂಗ್ಸ್) : ಮುಂಜಾನೆ, ಬೆಳಿಗ್ಗೆ

ದಂಪತಿಗಳು ಲೈಂಗಿಕ ಕ್ರಿಯೆಯನ್ನು ನಡೆಸಲು ಪ್ರಶಸ್ತವಾದ ಸಮಯ ಮುಂಜಾನೆಯ ಸಮಯ. ದಂಪತಿಗಳು ನಿದ್ರೆ ಮಾಡಿ ವಿಶ್ರಾಂತಿಯನ್ನು ಪಡೆದಿರುವುದರಿಂದ, ಮನಸ್ಸು ಶರೀರ ಲವಲವಿಕೆಯಿಂದ ಕೂಡಿರುತ್ತದೆ ಮತ್ತು ಉದ್ರೇಕವು ಚೆನ್ನಾಗಿರುತ್ತದೆ.

* * *

೮೮. O : ORAL SEX (ಓರಲ್ ಸೆಕ್ಸ್) : ಮುಖ ಮೈಥುನ

ಬಹಳ ಅನ್ಯೋನ್ಯವಾಗಿರುವ, ಪರಸ್ಪರ ಅರ್ಥಮಾಡಿಕೊಂಡಿರುವ, ರಸಿಕತೆಯನ್ನು, ವೈವಿಧ್ಯತೆಯನ್ನು ಬಯಸುವ ಸಂಯಮವುಳ್ಳ ಆರೋಗ್ಯವಂತ ದಂಪತಿಗಳು ತಾತ್ಕಾಲಿಕವಾಗಿ ಬಾಯಿಯ ಪ್ರೇಮದಾಟದ ಮೂಲಕ ಬಸಿರು ತಡೆದು ಸಾಧನವಿಲ್ಲದಾಗ ಕಾಮೋದ್ರೇಕ ಉಪಶಮನವನ್ನು ಹೊಂದಬಹುದು. ಮೌತ್‌ಮ್ಯೂಸಿಕ್ ಅಥವಾ ಬಾಯಿಯ ರತಿ ಅಸಹ್ಯವಾದುದೇನಲ್ಲ. ಕೆಲವು ದಂಪತಿಗಳು ಲೈಂಗಿಕಾಂಗಗಳು ಕೊಳಕಾದುವು ಬಾಯಿಯಲ್ಲಿ ಸೋಂಕನ್ನು ಮೂಡಿಸುತ್ತದೆ ಎಂದು ಆತಂಕಗೊಂಡು ಬಾಯಿಯನ್ನು ಪ್ರೇಮದಾಟದಲ್ಲಿ ತೊಡಗಿಸಲು ಹಿಂಜರಿಯುವುದುಂಟು. ಆದರೆ, ಲೈಂಗಿಕಾಂಗಗಳು ಅಥವಾ ಜನನೇಂದ್ರಿಯಗಳು ಆರೋಗ್ಯವಂತ ದಂಪತಿಗಳಲ್ಲಿ ಸ್ವಚ್ಛವಾಗಿಯೇ ಇರುತ್ತದೆ.

ಓರಲ್ ಸೆಕ್ಸ್‌ನ್ನು ಸ್ನಾನ ಮಾಡಿ ಅನುಭವಿಸುವುದು ಸೂಕ್ತ. ಮದುವೆಯಾದ ಹೊಸದರಲ್ಲಿ ಈ ವೈವಿಧ್ಯವನ್ನು ಬಯಸುವುದು ಸೂಕ್ತವಲ್ಲ.

ನೆಗಡಿ, ಕೆಮ್ಮು, ಬಾಯಿ ಹುಣ್ಣು, ಗಂಟಲು ನೋವು, ಬಾಯಿಯ ಸೋಂಕಿದ್ದರೆ ಓರಲ್ ಸೆಕ್ಸ್ ಅಥವಾ ಮುಖ ಮೈಥುನವನ್ನು ಮಾಡಬಾರದು.

* * *

೮೯. P : PREGNANCY (ಪ್ರೆಗ್ನೆಸಿ) : ಬಸಿರು, ಗರ್ಭಿಣಿ

ಹೆಣ್ಣು, ಬಸರಿ ಆಗಿದ್ದಾಗ ಆಕೆಯಲ್ಲ ಲೈಂಗಿಕ ಆಸೆ ಕಡಿಮೆ ಆಗುವುದು ಸಹಜವಾದ ಪ್ರವೃತ್ತಿಯಾಗಿರುತ್ತದೆ. ಅಲ್ಲದೆ, ಸಸ್ತನಿಗಳು (ಮೊಲೆ ಉಣಿಸುವಂತಹವು) ಬಸಿರು ಆಗಿದ್ದಾಗ ’ಸೆಕ್ಸ್‌’ನ್ನು ತಿರಸ್ಕರಿವುದೇ ಹೆಚ್ಚು. ಫಲವಂತಿಕೆ ಸಮಯದಲ್ಲಿ (Female Fertility) ಹೆಣ್ಣಿನ ಲೈಂಗಿಕಾಸಕ್ತಿ ಹೆಚ್ಚಿರುತ್ತದೆ. ಅನಂತರ, ಸಹಜವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.

ಅಲ್ಲದೆ, ಈ ಹಿಂದೆ ಪ್ರತಿ ಸಾರಿ ಲೈಂಗಿಕ ಸಂಭೋಗ ಮಾಡುವಾಗ ಸ್ತ್ರೀ ಭಾವಪ್ರಾಪ್ತಿ ಅಥವಾ ಆರ್ಗ್ಯಾಸಮ್ ಹೊಂದಿದ್ದರೆ ಅಂತಹ ಸ್ತ್ರೀ ಬಸರಿನ ಸಮಯದಲ್ಲಿ ಕೂಡ ಪತಿಯ ಒಡನಾಟವನ್ನು ಇಚ್ಛಿಸುತ್ತಾಳೆ; ಲೈಂಗಿಕ ಆಸಕ್ತಿಯನ್ನು ಪಡೆದಿರುತ್ತಾಳೆ. ಅಲ್ಲದೆ, ಅವರಲ್ಲಿ ಭಾವಪ್ರಾಪ್ತಿ (ಆರ್ಗ್ಯಾಸಮ್) ಬಸಿರಿನ ಸಂದರ್ಭದಲ್ಲಿ ಉಂಟಾಗದಿದ್ದರೂ, ’ಸಾಮೀಪ್ಯದ ಸಂತೋಷ’ದ ಸುಖಾನುಭವವನ್ನು ಹೊಂದುತ್ತಾರೆ. ಕೆಲವು ಸ್ತ್ರೀಯರು ಭಾವಪ್ರಾಪ್ತಿ (ಸುಖಶಿಖರ) ಹೊಂದಿದ್ದರೆ ಗರ್ಭಪಾತ ಆಗಬಹುದೆಂದು, ಪಿಂಡಗೂಸಿಗೆ ತೊಂದರೆ ಆಗಬಹುದೆಂದು ಭಾವಿಸಿ ಭಾವಪ್ರಾಪ್ತಿಯನ್ನು ಹೊಂದಲು ಇಷ್ಟಪಡುವುದಿಲ್ಲ.

* * *

೯೦. Q : QUICKEN (ಕ್ವಿಕನ್)

ಜೀವತುಂಬಾ, ಸಜೀವವಾಗು, ಸ್ಫೂರ್ತಿ ತುಂಬು, ಚುರುಕುಗೊಳಿಸು, ತ್ವರೆಮಾಡು, ತೀವ್ರಗೊಳಿಸು.

ದಂಪತಿಗಳು ಪ್ರೇಮದಾಟದಲ್ಲಿ ಚುರುಕಾಗಿರಬೇಕು. ಪರಸ್ಪರ ಚಟುವಟಿಕೆಯಿಂದ ಕೂಡಿರಬೇಕು. ರತಿಲ್ಲಿ ಸ್ಫೂರ್ತಿಯಿಂದ ಪಾಲ್ಗೊಳ್ಳಬೇಕು. ರತಿ ಕಾರ‍್ಯದಲ್ಲಿ ಗಂಡ ಹೆಂಡತಿ ನಿರ್ಜೀವಿಗಳಾಗಿರದೆ, ಲವಲವಿಕೆಯಿಂದ ಕೂಡಿರುವುದು ಅಗತ್ಯ.

* * *