೭೧. ಸೆಕ್ಸ್ಕ್ರಿಯೆ ನಡೆಸಲು ಒಳ್ಳೆಯ ಸಮಯ ಯಾವುದು?

ಬೆಳಗಿನ ಜಾವ. ರಾತ್ರಿ ನಿದ್ದೆ ಮಾಡಿ, ಶರೀರಗಳೆರಡು ವಿಶ್ರಾಂತಿ ಪಡೆದಿರುವುದರಿಂದ ಬೆಳಗಿನ ಜಾವ ರತಿಯಲ್ಲಿ ತೊಡಗಿ, ಸ್ವಲ್ಪ ಹೊತ್ತು ವಿಶ್ರಾಂತಿಯನ್ನು ಪಡೆದು ಸ್ನಾನಕ್ಕೆ ತೆರಳು ಅನುಕೂಲಕರ.

ಮಧ್ಯಾಹ್ನ ವಿಶ್ರಮಿಸಿಕೊಂಡಿದ್ದರೆ ರಾತ್ರಿ ೧೦ ಗಂಟೆಯ ನಂತರ ೧೧ ಗಂಟೆಯೊಳಗಡೆ ರತಿಕ್ರಿಯೆಯಲ್ಲಿ ತೊಡಗಬಹುದು.

* * *

೭೨. ದಾಂಪತ್ಯದಲ್ಲಿ ತಾಂಬೂಲದ ಪಾತ್ರ

ತಾಂಬೂಲ, ಭಾರತೀಯ ಸಂಪ್ರದಾಯದ ಭಾಗ. ಎಲ್ಲ ಶುಭ ಕಾರ್ಯಗಳಲ್ಲೂ ತಾಂಬೂಲವನ್ನು ನೀಡಲಾಗುತ್ತದೆ. ಭೋಜನದ ನಂತರ ತಾಂಬೂಲ ನೀಡದಿದ್ದರೆ ಮರ್ಯಾದೆ ಪೂರ್ಣಗೊಳ್ಳುವುದಿಲ್ಲ.

ತಾಂಬೂಲ ಹಾಕಿಕೊಳ್ಳುವುದರಿಂದ ಮಾನಸಿಕ ಪ್ರಶಾಂತತೆ ಲಭಿಸುತ್ತದೆ. ಆಲೊಚನೆಗಳನ್ನು ಆನಂದಕರವಾಗಿ ಮಾಡುವ ಶಕ್ತಿ ತಾಂಬೂಲಕ್ಕಿದೆ. ತಾಂಬೂಲ ಹಾಕಿಕೊಳ್ಳುವ ಅಭ್ಯಾಸವಿರುವವರಲ್ಲಿ ಕೋಪ ತ್ವರಿತವಾಗಿ ಉಂಟಾಗುವುದಿಲ್ಲ. ಆದರೆ, ದಂಪತಿಗಳಲ್ಲಿ ಸೆಕ್ಸ್ ಕೋರಿಕೆ ಹೆಚ್ಚಿಸುವ ಗುಣ ತಾಂಬೂಲದಲ್ಲಿದೆ. ಆದುದರಿಂದಲೇ ಮಕ್ಕಳು ತಾಂಬೂಲ ಹಾಕಿಕೊಳ್ಳಬಾರದೆಂಬ ನಿಷೇಧ.

ತಾಂಬೂಲ ಹಾಕಿಕೊಳ್ಳುವುದರಿಂದ ತಿಂದದ್ದು ಚೆನ್ನಾಗಿ ಜೀರ್ಣವಾಗುತ್ತದೆ. ಇದರಿಂದ ಕಾಂತಿ, ಸೌಷ್ಠವ, ಸುಗಂಧ ಲಭಿಸುತ್ತದೆ. ಇಂದ್ರಿಯಗಳ ಮಾಲಿನ್ಯ ತೊಲಗಿ ಹೋಗುತ್ತದೆ. ಮುಖ ಪ್ರಸನ್ನವಾಗಿರುತ್ತದೆ. ಕಾಮಗುಣಕ್ಕೆ ಪ್ರೋತ್ಸಾಹದಾಯಕವಾಗಿರುತ್ತದೆ. ದವಡೆ, ನಾಲಿಗೆ, ದಂತಗಳು ಪ್ರಕಾಶಿಸುತ್ತವೆ. ಬಾಯಿಯಲ್ಲಿನ ಮಾಲಿನ್ಯ, ದುರ್ವಾಸನೆ ನಿವಾರಣೆಗೊಳ್ಳುತ್ತವೆ. ಲಾಲಾರಸ, ಕಫ, ವಾತ ತೊಲಗುತ್ತವೆ. ಆಲಸ್ಯ ನಿವಾರಣೆಯಾಗುತ್ತದೆ. ಬುದ್ಧಿ ಪ್ರಸನ್ನಗೊಳ್ಳುತ್ತದೆ.

* * *

೭೩. ಲೈಂಗಿಕ ದುಷ್ಪರಿಣಾಮಕ್ಕೆ ಕೊಬ್ಬು ಕಾರಣವೇ?

ಪೌಷ್ಠಿಕ ಆಹಾರ ಶಾರೀರಿಕ ಆರೋಗ್ಯಕ್ಕೆ ಅತ್ಯಗತ್ಯ. ಅಲ್ಲದೆ ಲೈಂಗಿಕ ಆರೋಗ್ಯಕ್ಕೆ ಪೂರ್ಣ ಉದ್ರೇಕಕ್ಕೆ ಹೆಚ್ಚಿನ ಭಾವ ಪ್ರಾಪ್ತಿಗೂ ಪೌಷ್ಠಿಕ ಆಹಾರ ಅಗತ್ಯ. ಪೌಷ್ಠಿಕ ಆಹಾರದ ಕೊರತೆಯಿಂದ ಲೈಂಗಿಕ ನಿಜಗೆಲಸಗೆಡಿಕೆ ಉಂಟಾಗುತ್ತದೆ.

ಜಿಂಕ್ ಅಥವಾ ಸತುವಿನ ಕೊರತೆಯಿಂದ ಪುರುಷರಲ್ಲಿ ಲೈಂಗಿಕ ದುರ್ಬಲತೆ ಅಥವಾ ಇಂಪೋಟೆನ್ಸ್ ಉಂಟಾದರೆ, ಸ್ತ್ರೀಯರಲ್ಲಿ ಲೂಬ್ರಿಕೇಷನ್ ಅಥವಾ ಸ್ರಾವದ ಕೊರತೆ ಉಂಟಾಗುತ್ತದೆ. ನಿಯಾಸಿನ್ (ಬಿ ವಿಟಮಿನ್‌ನಲ್ಲಿ ಒಂದು) ನನ್ನು ಸ್ವಲ್ಪ ಹೆಚ್ಚಿಗೆ ಸೇವಿಸುವುದರಿಂದ ಸ್ತ್ರೀ ಪುರುಷರಿಬ್ಬರೂ ಭಾವಪ್ರಾಪ್ತಿ ಅಥವಾ ಆರ್ಗ್ಯಾಸಮ್ ಹೊಂದಲು ಸಹಾಯಕವಾಗುತ್ತದೆಂದು ಪ್ರಾಕ್ಟಿಕಲ್ ಗೈಡ್ ಟು ವಲ್ ಮೇಕಿಂಗ್ ಸೀಕ್ರೆಟ್ಸ್ ಆಫ್ ದಿ ಈಸ್ಟ್ ಅಂಡ್ ವೆಸ್ಟ್ ಗ್ರಂಥದ ಲೇಖಕರಾದ ಡೇವಿಡ್ ಮತ್ತು ಎಲೆನ್ ರಾಮ್ಸ್ ಡೇಲೆ ತಿಳಿಸಿದ್ದಾರೆ.

ಪೌಷ್ಠಿಕ ಆಹಾರದ ಪ್ರೊಫೆಸರ್ ಆದ ಡಾ|| ಬಾರ್ ಬರಾ ಕ್ಲೈನ್‌ರವರು ಆಹಾರ ಮತ್ತು ಸೆಕ್ಸ್ ನಡುವೆ ಯಾವುದೇ ನಿಜವಾದ ಸಂಬಂಧವಿಲ್ಲ.

ನಾವು ಪ್ರತಿನಿತ್ಯ ಆಹಾರವನ್ನು ಸೇವಿಸಿದರೆ ಸಾಕು ಅದೇ ಲೈಂಗಿಕ ಚಟುವಟಿಕೆಯನ್ನು ನಡೆಸಲು ಸಾಮರ್ಥ್ಯವನ್ನುಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.

ಡಾ|| ಕ್ಲೈನ್‌ರವರು, ಆಹಾರ ಮತ್ತು ಲೈಂಗಿಕತೆಯ ನಡುವೆ ಸಂಬಂಧದ ವಿನ್ಯಾಸವನ್ನು ಕಲ್ಪಿಸುವುದು ಕಷ್ಟ. ಆದರೆ, ಲೈಂಗಿಕ ತೊಡಕನ್ನುಂಟು ಮಾಡುವ ಶತ್ರುವೆಂದರೆ ಕೊಬ್ಬು ಅಥವಾ ಫ್ಯಾಟ್‌. ಅದು ಹೃದಯದ ಆರೋಗ್ಯಕ್ಕೂ ಹಾನಿಯನ್ನುಂಟು ಮಾಡುತ್ತದೆ.

ನೀವು ಪ್ರತಿದಿನ ಬಹಳ ಕಡಿಮೆ ಪ್ರಮಾಣದಲ್ಲಿ ಕೊಬ್ಬನ್ನು ಸೇವಿಸುವುದು ಬಹಳ ಒಳ್ಳೆಯದು. ಅಲ್ಲದೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬನ್ನು ಸೇವಿಸುವುದರಿಂದ, ಲೈಂಗಿಕತೆಯ ಮೇಲೆ ದುಷ್ಪರಿಣಾಮಗಳುಂಟಾಗಬಹುದು ಎಂದು ತಿಳಿಸಿದ್ದಾರೆ.

* * *

೭೪. ದಾಂಪತ್ಯದಲ್ಲಿ A ಟು  Z ಸೆಕ್ಸ್ – A: APHRODISIACS

ಅಪ್ರೋಡಿಸಿಯಾಕ್ಸ್ (ಕಾಮೋತ್ತೇಜಕಗಳು)

ಗ್ರೀಕ್ ಭಾಷೆಯಲ್ಲಿ ಕಾಮೋತ್ತೇಜಕಕ್ಕೆ ಅಪ್ರೋಡಿಸಿಯಾಕ್ ಎಂದು ಕರೆಯುತ್ತಾರೆ. ಇದು ಗ್ರೀಕಿನ ಪ್ರೇಮ ಮತ್ತು ಸೌಂದರ‍್ಯ ದೇವತೆಯಾದ ಅಪ್ರೋಡೈಟ್ ಎಂಬ ಹೆಸರಿನಿಂದ ಬಳಕೆಗೆ ಬಂದಿದೆ. ಆಕೆ, ಫಲವಂತಿಕೆಯ ದೇವತೆ ಎಂತಲೂ ಹೆಸರು ಗಳಿಸಿದ್ದಾಳೆ. ಕಾಮೋತ್ತೇಜನಕ ಪದಾರ್ಥ ಅಥವಾ ಆಹಾರ ಈ ಕೆಳಕಂಡ ಯಾವುದಾದರೂ ಒಂದು ಕ್ರಿಯೆಯನ್ನಾದರೂ ಮಾಡಿದಾಗ ಅದನ್ನು ಕಾಮೋತ್ತೇಜಕ ಅಥವಾ ಅಪ್ರೋಡಿಸಿಯಾಕ್ ಎಂದು ಕರೆಯುತ್ತಾರೆ.

೧. ಪುರುಷನಲ್ಲಿ ನಿಗುರುವಿಕೆ ಅಥವಾ ಉದ್ರೇಕ ಉಂಟಾಗಬೇಕು.

೨. ಲೈಂಗಿಕ ಭಾವನೆಗಳನ್ನು ಮೂಡಿಸಿ, ಲೈಂಗಿಕಾಂಗಗಳನ್ನು ಮತ್ತು ನರಗಳ ವ್ಯೂಹವನ್ನು ಉತ್ತೇಜನಗೊಳಿಸಬೇಕು.

೩. ಲೈಂಗಿಕ ಅರಿವನ್ನು ವೃದ್ಧಿಗೊಳಿಸಬೇಕು.

೪. ಸಂಯಮ ಪ್ರವೃತ್ತಿಯನ್ನು ಮೂಡಿಸಬೇಕು.

೫. ಶಾರೀರಿಕ ಶಕ್ತಿಯನ್ನು ವೃದ್ಧಿಸುವಂತಹುದು.

೬. ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಗ್ರಂಥಿಗಳನ್ನು ಒಳಗೊಳಿಸುವಂತಹವು.

೭. ಲೈಂಗಿಕ ಆರೋಗ್ಯವನ್ನು ವೃದ್ಧಿಗೊಳಿಸುವಂತಹುದು.

೮. ವೀರ‍್ಯದ ಉತ್ಪತ್ತಿಯನ್ನು ವೃದ್ಧಿಗೊಳಿಸುವಂತಹುದು.

೯. ಲೈಂಗಿಕ ದುರ್ಬಲತೆಯನ್ನು ನಿವಾರಿಸುವಂತಹುದು.

೧೦. ಲೈಂಗಿಕ ಆಯಾಸವನ್ನು ನಿವಾರಿಸುವಂತಹುದು.

೧೧. ಬಯೋ ಕೆಮಿಕಲ್ಸ್ ಕಾಮೋತ್ತೇಜಕಗಳು – ಇವು ನೇರವಾಗಿ ಲೈಂಗಿಕ ಚಟುವಟಿಕೆಯ ಮೇಲೆ ಪರಿಣಾಮವನ್ನು ಬೀರುತ್ತವೆ.

೧೨. ಮನೋ ದೈಹಿಕ ಗುಂಪಿನ ಆಹಾರಗಳು – ಇವು ಅಷ್ಟೇನೂ ಪರಿಣಾಮಕಾರಿಯಲ್ಲ. ಈ ಆಹಾರ ಪದಾರ್ಥಗಳ ಆಕಾರಗಳು, ಸಸ್ಯಗಳು, ತರಕಾರಿಗಳನ್ನು ನೋಡಿದಾಗ ಮನಸ್ಸಿನ ಮೇಲೆ (ಬಹಳ ಅಲ್ಪ ಪ್ರಮಾಣದಲ್ಲಿ) ಪರಿಣಾಮ ಬೀರುತ್ತವೆ.

ಮನುಷ್ಯನ ಮನಸ್ಸಿಗಿಂತಲೂ ಮುಖ್ಯವಾದ ಕಾಮಾಂಗ ಬೇರಾವುದೂ ಇಲ್ಲ. ಶಾರೀರಿಕ ಮತ್ತು ಮಾನಸಿಕ ಅನುಭವ ಅಥವಾ ಸಂವೇದನೆಯ ಸಂಕೀರ್ಣತೆಗಿಂತಲೂ, ದಂಪತಿಗಳ ಆದರ್ಶದಾಯಕವಾದ, ಪ್ರೇಮಪೂರಿತವಾದ ಲೈಂಗಿಕ ಸಂಯೋಗ ಹೆಚ್ಚು ಹರ್ಷೋನ್ಮಾದ ಮತ್ತು ಸುಖವನ್ನು ನೀಡುತ್ತದೆ.

* * *

೭೫. B: Breast  (ಬ್ರೆಸ್ಟ್ಸ್) : ಮೊಲೆ; ಸ್ತನ; ಎದೆ

ಸಾಮಾನ್ಯವಾಗಿ ಎಲ್ಲ ಸ್ತ್ರೀಯರು ತಮ್ಮ ಸ್ತನಗಳ ಬಗ್ಗೆ ಉನ್ನತವಾದ ಕಾಮನೆಯ ಭಾವನೆಯನ್ನು ಹೊಂದಿರುತ್ತಾರೆ. ಕೆಲವು ಸ್ತ್ರೀಯರು ಸ್ತನಗಳ ಉತ್ತೇಜನದಿಂದಲೇ ಸುಖ ಪ್ರಾಪ್ತಿ ಅಥವಾ ಭಾವಪ್ರಾಪ್ತಿಯನ್ನು ಹೊಂದುತ್ತಾರೆ. ಆದುದರಿಂದ, ಪುರುಷ ಮುನ್ನಲಿವಿನಲ್ಲಿ ಅಥವಾ ಪ್ರೇಮದಾಟದಲ್ಲಿ ತನ್ನ ಪತ್ನಿಯ ಎದೆ ಮತ್ತು ಸ್ತನಗಳ ಭಾಗದಲ್ಲಿ ಮೆತ್ತಗೆ ಮಸಾಜ್‌ನ್ನು ಮಾಡುವುದರಿಂದ ಆಕೆ ಉತ್ತೇಜನಗೊಳ್ಳಲು ಅನುಕೂಲವಾಗುತ್ತದೆ.

ಪುರುಷ, ತನ್ನ ಶಿಶ್ನದ ಬಗ್ಗೆ (ಪೆನಿಸ್) ಹೇಗೆ ಭಾವಿಸುತ್ತಾನೋ, ಅದೇ ರೀತಿ ಸ್ತ್ರೀ ಕೂಡ ತನ್ನ ಸ್ತನಗಳ ಬಗ್ಗೆ ಆಕಾರದ ಬಗ್ಗೆ ಏನನ್ನೂ ಯೋಚಿಸದಿದ್ದರೂ, ಅವುಗಲ ಬಗ್ಗೆ ತೃಪ್ತಿಯನ್ನು ಪಡೆದಿರುತ್ತಾಳೆ. ಆಕೆ ತನ್ನ ಗಂಡ ತನ್ನ ಸ್ತನಗಳ ವಿನ್ಯಾಸವನ್ನು ಕಂಡು ಸಂತೋಷಪಡಬೇಕು; ಮೆಚ್ಚುಗೆ ಸೂಚಿಸಬೇಕು ಎಂದು ನಿರೀಕ್ಷಿಸುತ್ತಾಳೆ.

ಸ್ತ್ರೀ ಸಣ್ಣದಾದ ಸ್ತನಗಳನ್ನು ಹೊಂದಿದ್ದರೆ ಸಂವೇದನೆಯನ್ನು ಹೊಂದುತ್ತಾರೆ. ದೊಡ್ಡ ಗಾತ್ರದ ಸ್ತನಗಳನ್ನು ಹೊಂದಿದ್ದರೆ ಸಂವೇದನೆಯನ್ನು ಹೊಂದುವುದಿಲ್ಲವೆಂದು ಕೆಲವು ಪುರುಷರು ಭಾವಿಸಿರುತ್ತಾರೆ. ಆದರೆ, ಇದು ತಪ್ಪು ಭಾವನೆ, ಸ್ತ್ರೀಯ ಸ್ತನಗಳು ಸಣ್ಣದಿರಲಿ, ದೊಡ್ಡದಿರಲಿ ಪತಿಯ ಉತ್ತೇಜನದಿಂದ ಆಕೆ ಆನಂದವನ್ನು ಹೊಂದುತ್ತಾಳೆ, ಸಂವೇದನೆಯನ್ನು ಪಡೆಯುತ್ತಾಳೆ.

ನಿಮ್ಮ ಹೆಂಡತಿ ಬಯಸದಿದ್ದರೆ ಗಂಡನಾದ ನೀವು ಸ್ತನಗಳನ್ನು ನವಿರಾಗಿ ಸ್ಪರ್ಶಿಸಬೇಕೆ ಹೊರತು, ಗಡಸಾಗಿ, ಒರಟಾಗಿ ಸ್ಪರ್ಶಿಸಬಾರದು.

ನವಿರಾದ ಸ್ತನ ಸ್ಪರ್ಶ, ಪುರುಷನಲ್ಲಿ ಸಂತೋಷ ಮೂಡಿಸಿದರೆ, ಸ್ತ್ರೀಯಲ್ಲಿ ಕಾಮ ಚೇತರಿಕೆಯನ್ನುಂಟು ಮಾಡುತ್ತದೆ. ಸ್ತನಗಳು ಮತ್ತು ಎದೆಯ ಭಾಗದಲ್ಲಿ ಪುರುಷ, ತನ್ನ ಹೆಂಡತಿ ಒಪ್ಪಿಗೆಯನ್ನು ಸೂಚಿಸಿದರೆ ಮಾತ್ರ ಮಸಾಜ್ ಅಥವಾ ಸ್ಪರ್ಶಿಸಬೇಕು. ಹೆಂಡತಿ ಒಪ್ಪಿಗೆಯನ್ನು ಕೊಡದಿದ್ದರೆ ಎದೆಯ ಭಾಗವನ್ನು ಬಲವಂತವಾಗಿ ಸ್ಪರ್ಶಿಸಬಾರದು.

* * *

೭೬. C: CLIMAX (ಕ್ಲೈಮ್ಯಾಕ್ಸ್)

ಕ್ಲೈಮ್ಯಾಕ್ಸ್‌ನ ಅರ್ಥ : ಲೈಂಗಿಕ ಪರಾಕಾಷ್ಠತೆ : ಸುಖಪ್ರಾಪ್ತಿ; ಭಾವಪ್ರಾಪ್ತಿ; ಸುಖ ಶಿಖರ, ಲೈಂಗಿಕ ತೃಪ್ತಿ, ಸಂತೃಪ್ತಿ.

ಪುರುಷರು ಸ್ತ್ರೀಯರಿಗಿಂತಲೂ ಬಹಳ ಸುಲಭವಾಗಿ ಲೈಂಗಿಕ ಪರಾಕಾಷ್ಠತೆ ಅಥವಾ ಸೆಕ್ಸ್‌ಕ್ಲೈಮ್ಯಾಕ್ಸ್‌ನ್ನು ಹೊಂದುತ್ತಾರೆ. ಆದರೆ, ಅದು ವೈವಿಧ್ಯಮಯವಾಗಿರುವುದಿಲ್ಲ. ಸ್ತ್ರೀಯರು ಹೊಂದುವ ಭಾವಪ್ರಾಪ್ತಿ ಮೃದುವಾಗಿರುತ್ತದೆ ಮತ್ತು ಆ ಭಾವಪ್ರಾಪ್ತ ತೀವ್ರವಾಗಿರುತ್ತದೆ.

ಸಂಪೂರ್ಣ ಭಾವಪ್ರಾಪ್ತಿ ಅಥವಾ ಲೈಂಗಿಕ ಪರಾಕಾಷ್ಠತೆ :

ಸ್ತ್ರೀ ಲೈಂಗಿಕ ಸಂಭೋಗದಿಂದ ಪೂರ್ಣ ಪ್ರಮಾಣದ ತೃಪ್ತಿ ಹೊಂದಬೇಕಾದರೆ ಆಕೆಯಲ್ಲಿ ಭಾವಪ್ರಾಪ್ತಿ (ಆರ್ಗ್ಯಾಸಮ್) ಉಂಟಾಗುತ್ತದೋ? ಇಲ್ಲವೋ ಎಂದು ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಆತಂಕಪಡಬೇಕಾಗಿಲ್ಲ. ಆದರೆ, ಸ್ತ್ರೀ ತನ್ನ ಗಂಡನ ಜೊತೆ ಪೂರ್ಣ ಸಹಕಾರದಿಂದ ರತಿಕ್ರಿಯೆಯಲ್ಲಿ ಪಾಲ್ಗೊಳುವುದು ಅಗತ್ಯ. ಅಲ್ಲದೆ, ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ರತಿಕ್ರಿಯೆಯಲ್ಲಿ ತೊಡಗಿದಾಗ ಭಾವಪ್ರಾಪ್ತಿ (ತೃಪ್ತಿ) ಹೊಂದಲು ಅನುಕೂಲವಾಗುತ್ತದೆ ಭಂಗಾಕುರ (ಕ್ಲೈಟೋರಿಸ್) ಮತ್ತು ಯೋನಿ ಇವೆರಡರ ಉತ್ತೇಜನದಿಂದ ಲೈಂಗಿ ತೃಪ್ತಿ ಉಂಟಾಗುತ್ತದೆ. ಭಗಾಂಕುರ ಅಥವಾ ಕ್ಲೈ ಟೋರಿಸ್ ಎಷ್ಟು ಸೂಕ್ಷ್ಮ ಭಾಗವೋ, ಯೋನಿಯ ತುಟಿಗಳು ಆದರೆ ಒಳಭಾಗ ಕೂಡ ಅಷ್ಟೇ ಸೂಕ್ಷ್ಮವಾದ ಸಂವೇದನೆಯನ್ನುಂಟು ಮಾಡುವ ನರಗಳಿಂದ ಕೂಡಿದೆ.

ಸೆಕ್ಸ್‌ ಬಗ್ಗೆ ಸ್ತ್ರೀ ವೈಜ್ಞಾನಿಕ ತಿಳುವಳಿಕೆ ಪಡೆದಿದ್ದರೆ:

೧. ಆಕೆ, ಸಂಭೋಗ ಕ್ರಿಯೆಯಲ್ಲಿ ಸಂತೋಷಗೊಳ್ಳುತ್ತಾಳೆ.

೨. ಗಂಡನೊಂದಿಗೆ ಸಹಕರಿಸಿ ಮುನ್ನಲಿವು (ಪ್ರೇಮದಾಟ/ಫೋರ್‌ಪ್ಲೇ) – ಚಟುವಟಿಕೆಯಲ್ಲಿ ಆನಂದವನ್ನೂ ಹೊಂದುತ್ತಾಳೆ.

೩. ಸೃಜನಶೀಲ ಕಾಮಕಲ್ಪನೆಯಿಂದ ರತಿಯಲ್ಲಿ ತೃಪ್ತಿ ಹೊಂದುತ್ತಾಳೆ.

೪. ತನ್ನ ಇಡೀ ಶರೀರ ಉನ್ನತ ಸ್ಥಾಯಿಯಲ್ಲಿ ಸಂತೋಷ, ಸಮಾಧಾನ ಹೊಂದಲು ಅನುಕೂಲವಾಗುವಂತೆ ವರ್ತಿಸುತ್ತಾಳೆ.

೫. ಸ್ತ್ರೀ (ಪತ್ನಿ) ಭಗಾಂಕುರ ಅಥವಾ ಯೋನಿಯನ್ನು ಪ್ರತ್ಯೇಕವಾಗಿ ಭಾವಿಸದೆ ಅವರೆಡರ ಉತ್ತೇಜನದಿಂದ ಉಂಟಾಗುವ ಕಾರ‍್ಯಚಟುವಟಿಕೆಯೇ ಸ್ತ್ರೀಯತ್ವದ ಕೇಂದ್ರ ಎಂದು ಭಾವಿಸುತ್ತಾಳೆ. ಭಾವಪ್ರಾಪ್ತಿ ಅಥವಾ ಆರ್ಗ್ಯಾಸಮ್‌ನ್ನು ತಲುಪಲು ಕಷ್ಟವಾಗುವುದು :

ಸಂಕೀರ್ಣವಾದ ತೊಡಕುಗಳಿಂದ ಮಾನಸಿಕ ಹಾಗೂ ಶಾರೀರಿಕ ಕಾರಣಗಳಿಂದ ಅನೇಕ ಸಂಶೋಧನೆಗಳ ಪ್ರಕಾರ ಮಾನಸಿಕ ಸ್ಥಿತಿಯೇ ಶಾರೀರಿಕ ಸ್ಥಿತಿಯಲ್ಲಿ ತೊಡಕು ಉಂಟಾಗಲು ಕಾರಣವಾಗಿರುತ್ತದೆ.

* * *

೭೭. D: DREAMS (ಡ್ರೀಮ್ಸ್) : ಕನಸುಗಳು

ದಂಪತಿಗಳ ಲೈಂಗಿಕ ಜೀವನದಲ್ಲಿ ಕನಸುಗಳು ವಿವಿಧ ಪಾತ್ರವನ್ನು ವಹಿಸುತ್ತವೆ. ಲೈಂಗಿಕ ಸ್ವಭಾವದ ಕನಸುಗಳಿಂದ ಭಾವಪ್ರಾಪ್ತಿ ಉಂಟಾಗುತ್ತದೆ. ಪುರುಷರಲ್ಲಿ ಕಾಮದ ಕನಸುಗಳಿಂದ ವೀರ‍್ಯ ಸ್ಖಲನಗೊಳ್ಳುತ್ತದೆ. ಸ್ತ್ರೀಯರು ಕಾಮದ ಕನಸುಗಳನ್ನು ಬಹಳ ಬೇಗನೆ ಮರೆತುಬಿಡುತ್ತಾರೆ.

* * *

೭೮. E: EROTICA (ಎರಾಟಿಕ್) : ಕಾಮ ಸಂಬಂಧವಾದ, ಶೃಂಗಾರದ, ಪ್ರಣಯ ಸಂಬಂಧ

ಪುರುಷರು ಶೃಂಗಾರ ಹಾಗೂ ಕಲಾತ್ಮಕ ನಗ್ನ ಚಿತ್ರಗಳನ್ನು ಇಷ್ಟಪಡುತ್ತಾರೆ. ಸ್ತ್ರೀಯರು ನವಿರಾದ ಪ್ರೀತಿಯ, ಶೃಂಗಾರದ ಪದಗಳನ್ನು ಇಷ್ಟಪಡುತ್ತಾರೆ. ಶೃಂಗಾರ ಚಲನಚಿತ್ರಗಳು ಸಹ ದಂಪತಿಗಳಲ್ಲಿ ಪ್ರೇಮ ಚೇತರಿಕೆಯನ್ನು ಮೂಡಿಸುತ್ತದೆ. ಸುಂದರವಾದ ಫ್ಯಾಶನ್‌ಫೋಟೋಗಳು, ಎರಾಟಿಕ್ ಭಾರತೀಯ ರೇಖಾಚಿತ್ರಗಳು, ಪ್ರೀತಿಯ ಮಾತು ದಂಪತಿಗಳಲ್ಲಿ ಕಾಮನೆಯ ಭಾವನೆಯನ್ನುಂಟು ಮಾಡುತ್ತದೆ.

* * *

೭೯. F: FOREPLAY (ಫೋರ್ಪ್ಲೇ)

ಲೈಂಗಿಕ ಸಂಭೋಗಕ್ಕೆ ಮೊದಲು ಗಂಡ ಹೆಂಡತಿ ಪ್ರೇಮದಾಟದಲ್ಲಿ ತೊಡಗಿ ಕಾಮ ಚೇತರಿಕೆಯನ್ನು ಹೊಂದುವುದು.

ಲೈಂಗಿಕ ಸಂಪರ್ಕಕ್ಕಾಗಿ, ಪರಸ್ಪರ ದಂಪತಿಗಳು ಲೈಂಗಿಕ ಉತ್ತೇಜನವನ್ನು ಪಡೆಯಲು, ಪುರುಷ ಶಿಶ್ನವನ್ನು ಯೋನಿಯೊಳಕ್ಕೆ ಪ್ರವೇಶಿಸದೆ ನಡೆಸುವ ಪ್ರೇಮದಾಟಕ್ಕೆ ಮುನ್ನಲಿವು, ಸಂಭೋಗ ಪೂರ್ವ ಕಾಮಕೇಳಿ ಅಥವಾ ಫೋರ್‌ಪ್ಲೇ ಎಂದು ಕರೆಯುತ್ತಾರೆ.

ಲೈಂಗಿಕ ಸಂಭೋಗದ ಕ್ರಿಯೆಯನ್ನು ನಡೆಸುವುದಕ್ಕಾಗಿ ದಂಪತಿಗಳು ಮಾಡಿಕೊಳ್ಳುವ ಸಿದ್ಧತೆಗೆ ಕೂಟ ಮುನ್ನಲಿವು ಎನ್ನುತ್ತಾರೆ.

ದಾಂಪತ್ಯದಲ್ಲಿ ಲೈಂಗಿಕ ಸಂತೋಷವನ್ನು ಪ್ರಶಾಂತವಾದ ಏಕಾಂತದ ಕೊಠಡಿಯಲ್ಲಿ ದಂಪತಿಗಳು ಹೊಂದುವ ಪ್ರೇಮದಾಟವೇ ಫೋರ್‌ಪ್ಲೇ.

ಫೋರ್ ಪ್ಲೇಯಲ್ಲಿ ಚುಂಬನ, ಆಲಿಂಗನ, ಸ್ಪರ್ಶ, ಸ್ತನಗಳ ಮತ್ತು ಜನನೇಂದ್ರಿಯಗಳ ಉತ್ತೇಜನವು ದಂಪತಿಗಳ ನಡುವೆ ಪರಸ್ಪರ ನಡೆಯುತ್ತದೆ.

* * *

೮೦. G : GENITALORGANS, FEMALE (ಜನಿಟನ್ ಆರ್ಗನ್ಸ್) ಸ್ತ್ರೀ ಜನನೇಂದ್ರಿಯಗಳು :

ಯೋನಿದ್ವಾರದಿಂದ ಗರ್ಭಕೋಶದವರೆಗೂ ಇರುವ ಮಾರ್ಗ ಯೋನಿ. ಇದೊಂದು ಸ್ನಾಯು ಕೊಳವೆ ಎನ್ನಬಹುದು. ಇದರ ಎರಡು ಗೋಡೆಗಳು ಒಂದಕ್ಕೊಂದು ಅಂಟಿಕೊಂಡಿದ್ದು ಏನಾದರೂ ವಸ್ತುವನ್ನು ತೂರಿಸಿದರೆ ಮಾತ್ರ ಜಾಗ ಮಾಡಿಕೊಡುತ್ತದೆ. ಯೋನಿಯ ಸ್ನಾಯುಗಳಿಗೆ ಹಿಗ್ಗುವ-ಕುಗ್ಗುವ ಶಕ್ತಿಯಿದೆ. ಯೋನಿ ಸಂಭೋಗಕ್ಕೆ ಇರುವ ಜಾಗ. ಗರ್ಭಕೋಶದಿಂದ ಮುಟ್ಟು ಮಗು ಹೊರ ಜಗತ್ತಿಗೆ ಬರಬೇಕಾದರೆ ಯೋನಿಯ ಮುಖಾಂತರವೇ ಬರಬೇಕು. ಯೋನಿಯ ಸ್ನಾಯುಗಳು ಸ್ತ್ರೀ ಜೀವನದಲ್ಲಿ ಬಲುಮುಖ್ಯವಾದುವು. ಸ್ನಾಯು ಬಿಗಿತ, ಹಿಗ್ಗಿ, ಕುಗ್ಗುವ ಸಂಕುಚಿತ ಶಕ್ತಿ ತೃಪ್ತಿಯುತ ಲೈಂಗಿಕ ಸಂಭೋಗಕ್ಕೆ ಮಾತ್ರವಲ್ಲ, ಹೆರಿಗೆಗೂ ಸಹಾಯಕಾರಿ

* * *