೬೧. ನಗ್ನ ಚಿತ್ರಗಳು ಸ್ತ್ರೀಯ ಆಕರ್ಷಿಸುತ್ತವೇಯೇ?

ನೂರು ಮಂದಿ ಪುರುಷರಲ್ಲಿ ಐವತ್ತು ಮಂದಿ ಪುರುಷರು ನಗ್ನರಾಗಿರುವ ಸ್ತ್ರೀಯರ ಚಿತ್ರಗಳನ್ನು ನೋಡಿದರೆ, ನಗ್ನರಾಗಿರುವ ಸ್ತ್ರೀಯರನ್ನು ನೋಡಿದರು ತತ್‌ಕ್ಷಣವೇ ಕಾಮೋದ್ರೇಕಗೊಳ್ಳುತ್ತಾರೆ. ಆದರೆ ಸ್ತ್ರೀಯರು, ನಗ್ನರಾಗಿರುವ ಪುರುಷ ಚಿತ್ರಗಳನ್ನಗಲಿ, ಪುರುಷರನ್ನು ನೋಡಿದರು ಕಾಮೋದ್ರೇಕವನ್ನು ಹೊಂದುವುದಿಲ್ಲ. ಡಾ| ಕಿನ್ಸೆಯವರ ಪರಿಶೋಧನೆಯ ಪ್ರಕಾರ ಶೇಕಡ ೧೦ ಮಂದಿಗಿಂತಲೂ ಕಡಿಮೆ ಸ್ತ್ರೀಯರು ನಗ್ನ ಚಿತ್ರಗಳನ್ನು ನೋಡಿ ಕಾಮಪರವಾದ ಉದ್ರೇಕವನ್ನು ಹೊಂದುತ್ತಾರೆಂದು ತಿಳಿಸಿದೆ. ಸ್ತ್ರೀಯ ಚಿತ್ರಗಳನ್ನು ನೋಡಿ ಪುರುಷ ಆಕರ್ಷಕನಾಗುತ್ತಾನೆಂದು ಸೈಕಾಲಜಿ ಪ್ರಕಾರ ಪತ್ರಿಕೆಗಳವರು. ಸಿನಿಮಾದವರು ಸ್ತ್ರೀಯ ಅರ್ಧ ನಗ್ನತೆಯ ಚಿತ್ರಗಳನ್ನು ಪ್ರಕಟಿಸುತ್ತಾರೆ. ಪತ್ರಿಕೆಗಳಲ್ಲಾಗಲಿ, ಸಿನಿಮಾಗಳಲ್ಲಾಗಲಿ ಪುರುಷನನ್ನು ಅರ್ಧ ನಗ್ನವಾಗಿ ತೋರಿಸುವುದರಿಂದ ಸ್ತ್ರೀ ಆಕರ್ಷಣೆ ಗೊಳಗಾಗುವುದಿಲ್ಲ. ಆದುದರಿಂದ ವ್ಯಾಪಾರದ ದೃಷ್ಟಿಯಿಂದ ಪುರುಷ ನಗ್ನ ಚಿತ್ರಗಳಿಗೆ ಲಾಭವಿಲ್ಲವಾಗಿದೆ.

೬೨. ಕಾಲ್ಪನಿಕ ಲೋಕದಲ್ಲಿ ಲೈಂಗಿಕ ಪ್ರವೃತ್ತಿ

ಕಾಮಭಾವನೆ ಉಂಟಾದಾಗ ಸ್ತ್ರೀ – ಪುರುಷರಿಬ್ಬರೂ ವಿವಿಧ ರೀತಿ ಕನಸುಗಳನ್ನು ಕಾಣುತ್ತಾರೆ. ಎಷ್ಟೋ ರೀತಿ ಊಹೆಗಳನ್ನು ಸೃಷ್ಟಿಸಿಕೊಂಡು ಮಧುರಾನಂದವನ್ನು ಹೊಂದುತ್ತಾರೆ. ಈ ಊಹೆಗಳು ಹೆಚ್ಚು ಸಂದರ್ಭಗಳಲ್ಲಿ ಸ್ಪಷ್ಟವಾಗಿರುವುದಿಲ್ಲ. ಅಸ್ಪಷ್ಟವಾದ ಭಾವನೆಗಳ ಅಂತ್ಯವಿಲ್ಲದ ಆನಂದವನ್ನುಂಟು ಮಾಡುತ್ತದೆ. ಈ ಭಾವನೆಗಳಿಗೆ ಯಾವುದೇ ರೀತಿ ಆಧಾರ ಇರುವ ಅಗತ್ಯವಿಲ್ಲ. ಮುಖ್ಯವಾಗಿ ಪುರುಷರು ಕಾಮಪರವಾಗಿ ಊಹಿಸಿ ಕೊಳ್ಳುವ ಊಹೆಗಳಿಗೆ, ಸೃಷ್ಟಿಸಿಕೊಳ್ಳುವ ಸ್ವರ್ಗಗಳಿಗೆ ಯಾವ ಆಧಾರವೂ ಇರುವುದಿಲ್ಲ. ಇಂತಹ ಕಾಮಪರವಾದ ಊಹೆಗಳು ಪುರುಷರಿಗೆ ಹೋಲಿಸಿದರೆ ಸ್ತ್ರೀಯರಲ್ಲಿ ಬಹಳ ಕಡಿಮೆಯೇ ಇರುತ್ತದೆ. ಕಾಮಪರವಾದ ಸ್ತ್ರೀ ಕೋರಿಕೆಗಳು, ಊಹೆಗಳು ಸ್ವಲ್ಪ ಮಟ್ಟಿಗೆ ವಾಸ್ತವಿಕತೆಗೆ ಹತ್ತಿರವಾಗಿರುತ್ತವೆ ಎಂದು ಕೆಲವು ಲೈಂಗಿಕ ಪರಿಶೀಲನೆಗಳಲ್ಲಿ ವಿವರಿಸಿದ್ದಾರೆ. ಆದರೆ ಮತ್ತೆ ಕೆಲವು ಲೈಂಗಿಕ ಶಾಸ್ತ್ರಜ್ಞರು, ಈ ಅಭಿಪ್ರಾಯಗಳನ್ನು ಖಂಡಿಸುತ್ತಾ ಸ್ತ್ರೀ ಎಂದಿಗಿಂತಲೂ ಉನ್ನತ ಸ್ಥಿತಿಯಲ್ಲಿರಬೇಕೆಂದು ಆಶೆ ಪಡುತ್ತಾಳೆಂದು ಅದರಲ್ಲಿ ಆಕೆಗೆ ಹಾಯ್‌ಎನಿಸುತ್ತದೆ ಎಂದು ತಿಳಿಸಿದ್ದಾರೆ. ಕೆಲವು ಸ್ತ್ರೀಯರು ತಮ್ಮಲ್ಲಿ ಕಾಮಪರವಾಗಿ ಉಂಟಾಗುವ ಊಹೆಗಳಿಗೆ ಪರವಶರಾಗಿ ಸಂಭೋಗದಲ್ಲಿ ಹೊಂದುವಂತೆಯೇ ಮಾನಸಿಕವಾಗಿ ತೃಪ್ತಿಯನ್ನು, ಖುಷಿಯನ್ನು ಹೊಂದುತ್ತಾರೆ. ಆದರೆ ಪುರುಷ ಕೇವಲ ಊಹೆಗಳಿಂದ ಸೆಕ್ಸ್ ಪರವಾದ ತೃಪ್ತಿಯನ್ನು ಹೊಂದುವುದಿಲ್ಲ. ಅಲ್ಲದೆ, ಆ ಊಹೆ ಆತನಲ್ಲಿ ಮತ್ತಷ್ಟು ಬಾಧೆಯನ್ನುಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.

* * *

೬೩. ಕನಸ್ಸಿನಲ್ಲಿ ನಗ್ನ ಸೌಂದರ್ಯ ಪ್ರದರ್ಶನ

ಕೆಲವರಿಗೆ ಕನಸಿನಲ್ಲಿ ತಾವು ನಗ್ನರಾಗಿ ರಸ್ತೆಯ ಮೇಲೆ ನಡೆದಾಡಿದಂತೆ ಸಭೆ-ಸಮಾವೇಶಗಳಲ್ಲಿ ಪಾಲ್ಗೊಂಡಂತೆ ಕನಸುಗಳು ಬೀಳುತ್ತವೆ. ಅಂತಹ ಕನಸುಗಳು ಬರುವುದರಿಂದ ತಾವು ಅಷ್ಟು ಅಸಭ್ಯವಾಗಿ ಏಕೆ ವರ್ತಿಸುತ್ತೇವೆಯೋ ಎಂದು ಬಾಧೆ ಪಡುತ್ತಾರೆ. ಆದರೆ, ಇಂತಹ ಕನಸುಗಳು ಬರಲು ಕಾರಣ ಅವರಲ್ಲಿ ಬಾಲ್ಯಪ್ರವೃತ್ತಿ ಇದೆಯೆಂದು ಮನೋವಿಜ್ಞಾನಿಗಳು ವಿವರಿಸುತ್ತಾರೆ. ಏಕೆಂದರೆ, ಬಾಲ್ಯದಲ್ಲಿ ಚಿಕ್ಕಮಕ್ಕಳು ಉಡುಪು ಇಲ್ಲದೆಯೇ ಮನೆಯೊಳಗಡೆ ತಿರುಗಾಡುತ್ತಿರುತ್ತಾರೆ. ಹಾಗೂ ಹೊರಗಡೆಯೂ ತಿರುಗಾಡುತ್ತಿರುತ್ತಾರೆ. ಹಾಗೇ ತಿರುಗಾಡುತ್ತಿದ್ದರೂ, ನೆರೆಹೊರೆಯವರು ಏನನ್ನೂ ಹೇಳುವುದಿಲ್ಲ. ಪುಟಾಣಿಗಳು ಉಡುಪು ಕಳಚಿ ಆನಂದವಾಗಿ ತಿರುಗಾಡುತ್ತಿರುತ್ತಾರೆ. ಈ ಆನಂದವನ್ನು ಅವರು ದೊಡ್ಡವರಾದ ನಂತರ ಅನುಭವಿಸಲಾಗುವುದಿಲ್ಲ.

ಬೇಸಿಗೆ ಕಾಲದಲ್ಲಿ ಮೈ ಬೆವರುತ್ತಿದ್ದರೂ ಡ್ರೆಸ್‌ನ್ನು ಧರಿಸಿಯೇ ಇರುತ್ತಾರೆ. ಈ ಪ್ರಭಾವದಿಂದಲೇ ಕನಸಿನಲ್ಲಿ ತಾವು ಉಡುಪನ್ನು ಕಳಚಿ ರಸ್ತೆ ಮೇಲೆ ತಿರುಗಾಡುವುದು, ತನ್ನನ್ನು ಯಾರು ಗಮನಿಸುತ್ತಿಲ್ಲ ಎಂಬ ದೃಶ್ಯಗಳು ಕಾಣುತ್ತವೆ. ಇಂತಹ ಕನಸು ಅವರಲ್ಲಿ ಇನ್ನೂ ಇದ್ದರೆ ಅದು ಬಾಲ್ಯ ಪ್ರವೃತ್ತಿಯನ್ನು ತಿಳಿಸುತ್ತದೆ ಎಂದು ಭಾವಿಸಬೇಕು.

* * *

೬೪. ಭೋಜನ ಮಾಡಿದ ಕೂಡಲೇ ಸಂಭೋಗದಲ್ಲಿ ತೊಡಗಬಹುದೇ?

ಭೋಜನ ಮಾಡಿದ ಕೂಡಲೇ ಸಂಭೋಗದಲ್ಲಿ ತೊಡಗಿದರೆ ಅಜೀರ್ಣ ವ್ಯಾಧಿಗಳು ಬರುತ್ತವೆಂದು ರೂಢಿಯ ಮಾತಿದೆ. ಸಾಧಾರಣವಾಗಿ ಭೋಜನ ಆದ ಕೂಡಲೆ ರತಿಯಲ್ಲಿ ಪಾಲ್ಗೊಳ್ಳುವುದರಿಂದ ಸ್ವಲ್ಪಮಟ್ಟಿಗೆ ಆಯಾಸವನ್ನುಂಟು ಮಾಡುತ್ತದೆ. ಆದುದರಿಂದ ರತಿಯಲ್ಲಿ ಚಟುವಟಿಕೆಯಿಂದ ಪಾಲ್ಗೊಳ್ಳಲಾಗುವುದಿಲ್ಲ.

ಅಸಲಲ್ಲಿ ಭೋಜನ ಮಾಡಿದ ಕೂಡಲೇ ರತಿಯಲ್ಲಿ ಪಾಲ್ಗೊಳ್ಳಬಾರದು. ಇದಕ್ಕೆ ಮುಖ್ಯ ಕಾರಣವೇನೆಂದರೆ, ಸೇವಿಸಿದ ಆಹಾರ ಹೊಟ್ಟೆಯಲ್ಲಿ ಭಾರವಾಗಿರುವುದರಿಂದ ಸಂಭೋಗ ಸಮಯದಲ್ಲಿ ಚಾಲನೆಗೆ ತೊಂದರೆಯಾಗುತ್ತದೆ. ಇನ್ನು ಆರೋಗ್ಯ ರೀತ್ಯ ನೋಡಿದರೆ ಆಹಾರ ಸೇವಿಸಿದ  ನಂತರ ಜೀರ್ಣವಾಗಲು ಜೀರ್ಣ ಕೋಶಕ್ಕೆ ಹತ್ತಿರಕ್ಕೆ ಹೆಚ್ಚು ರಕ್ತ ಪ್ರಸಾರವಾಗುವುದು ಅಗತ್ಯ. ಅಂತಹ ಸಮಯದಲ್ಲಿ ರತಿಯಲ್ಲಿ ಪಾಲ್ಗೊಂಡರೆ ಜೀರ್ಣಕೋಶಕ್ಕೆ ಸಾಕಷ್ಟು ರಕ್ತ ಪ್ರಸಾರವಾಗದೆ ಹೆಚ್ಚಿನ ಭಾಗ ಮಾಂಸಖಂಡಗಳೊಳಕ್ಕೆ ಪಸರಿಸುತ್ತದೆ. ಅಲ್ಲದೆ, ಸಂಭೋಗದಲ್ಲಿ ಚಟುವಟಿಕೆಯಿಂದ ಪಾಲ್ಗೊಳಲು ಮಾಂಸ ಖಂಡಗಳಿಗೆ ಸಾಕಷ್ಟು ಶಕ್ತಿ ಅಗತ್ಯ. ಈ ವಿಧದಲ್ಲಿ ಭೋಜನದ ನಂತರ ಜೀರ್ಣಕೋಶಕ್ಕೆ ಸಾಕಷ್ಟು ರಕ್ತ ಪ್ರಸಾರವಾಗದೆ ಅಜೀರ್ಣ ವ್ಯಾಧಿಗಳು ತಾತ್ಕಾಲಿಕವಾಗಿ ಬರಬಹುದೆಂಬ ಒಂದು ಅಭಿಪ್ರಾಯವಿದೆ. ಅಷ್ಟೇ ಅಲ್ಲದೆ, ಸಂಭೋಗ ಸಮಯದಲ್ಲಿ ಉಂಟಾಗುವ ಟೆನ್ಷನ್‌ಪ್ರಭಾವ ಜೀರ್ಣ ಗ್ರಂಥಿಗಳ ಮೇಲೆ ಬಿದ್ದು ಜೀರ್ಣಕೋಶದ ವ್ಯಾಧಿಗಳು ಬರಬಹುದೆಂಬ ಭಾವನೆಯು ಇದೆ. ಆದರೆ, ಭೋಜನ ಮಾಡಿದ ಕೂಡಲೆ ಸಂಭೋಗದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಹಾಗೇ ಆಗುತ್ತದೆ ಎಂದ್ಹೇಳಲಾಗುವುದಿಲ್ಲ.

ಆದರೂ ಉತ್ಸಾಹಕರವಾದ ರತಿಯಲ್ಲಿ ಪಾಲ್ಗೊಳ್ಳಲು ಭೋಜನ ಮಾಡಿದ ಮೇಲೆ ಜೀರ್ಣವಾಗುವ ಸ್ಥಿತಿಗೆ ಬಂದ ನಂತರ ಸೆಕ್ಸ್‌ನಲ್ಲಿ ಪಾಲ್ಗೊಳ್ಳುವುದು ಸೂಕ್ತ.

* * *

೬೫. ಅತಿಕಾಮಅಲ್ಪಕಾಮ     

ಸಾಧಾರಣವಾಗಿ ಸೆಕ್ಸ್‌ಹಾರ‍್ಮೋನ್‌ಗಳು ಹೆಚ್ಚು ಉತ್ಪತ್ತಿಯಾಗುವವರಲ್ಲಿ ಕಾಮ ಹೆಚ್ಚು. ಕಡಿಮೆ ಉತ್ಪತ್ತಿಯಾಗುವವರಲ್ಲಿ ಕಾಮ ಕಡಿಮೆಯಿರುತ್ತದೆ. ಆದರೆ, ಕಾಮ ಕಡಿಮೆ ಇರುವವರಲ್ಲಿ ಸೆಕ್ಸ್‌ಹಾರ‍್ಮೋನ್‌ಗಳು ಕಡಿಮೆ ಉತ್ಪತ್ತಿಯಾಗುತ್ತವೆ ಎಂದು ಭಾವಿಸುವುದು ತಪ್ಪಾಗುತ್ತದೆ. ಕಾಮ ಕಡಿಮೆಯಿದ್ದರು ಹೆಚ್ಚು ಮಂದಿಯಲ್ಲಿ ಹಾರ‍್ಮೋನ್‌ಗಳ ಉತ್ಪತ್ತಿ ಮಾಮೂಲಾಗಿಯೇ ಇರುತ್ತದೆ. ಆದರೆ, ಮಾನಸಿಕ ವ್ಯಥೆಗಳು, ವೃತ್ತಿಯ ಒತ್ತಡ, ಆಯಾಸ, ಜೀವನ ಸಂಗಾತಿ ಆಕರ್ಷಣೀಯವಾಗಿ ಇಲ್ಲದಿರುವುದು, ಕುಟುಂಬ ಸಂಪ್ರದಾಯಗಳೇ ಮೊದಲಾದವು ಕೆಲವು ವ್ಯಕ್ತಿಗಳಲ್ಲಿ ಕಾಮ ಕಡಿಮೆಯಿರುವಂತೆ ಕಂಡು ಬರಲು ಕಾರಣಗಳಾಗಿರುತ್ತವೆ. ಇವುಗಳನ್ನೆಲ್ಲ ಮರೆತು ಶಾರೀರಿಕವಾಗಿ, ಮಾನಸಿಕವಾಗಿ ಉಲ್ಲಾಸ-ಉತ್ಸಾಹದಿಂದ ಇದ್ದರೆ ಅವರಲ್ಲು ಸಹ ಕಾಮ ವಿಜೃಂಭಿಸುತ್ತದೆ.

* * *

೬೬. ರತಿಯಲ್ಲಿ ತ್ವರತಿಯಾಗಿ ಆಯಾಸಗೊಳ್ಳಲು ಕಾರಣ

ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಆಯಾಸಗೊಂಡಿದ್ದರೆ ರತಿಯಲ್ಲೂ ಬಹಳ ಬೇಗನೆ ಆಯಾಸ ಉಂಟಾಗುತ್ತದೆ. ಹೆಚ್ಚು ಬೊಜ್ಜಿದ್ದರೆ, ಜೀರ್ಣ ಕೋಶಗಳ ವ್ಯಾಧಿಗಳಿಂದಾಗಿ ಹೊಟ್ಟೆಯಲ್ಲಿ ಗ್ಯಾಸ್ ಇದ್ದರೆ, ಹೃದಯ ಹಾಗೂ ಶ್ವಾಸಕೋಶದ ವ್ಯಾಧಿಗಳಿದ್ದರೆ ಅಥವಾ ಇತರೆ ಅನಾರೋಗ್ಯ ಕಾರಣಗಳಿದ್ದರೂ ರತಿಯಲ್ಲಿ ತ್ವರಿತವಾಗಿ ಆಯಾಸ ಉಂಟಾಗುತ್ತದೆ. ಅಂತಹ ಸಮಯದಲ್ಲಿ ರತಿಯಲ್ಲಿ ಆಯಾಸ ಉಂಟಾಗದಿರಬೇಕಾದರೆ ಪ್ರತಿನಿತ್ಯ ಕೆಲಸ ಕಾರ‍್ಯಗಳ ನಡುವೆ ಸ್ವಲ್ಪ ವಿಶ್ರಾಂತಿಯನ್ನು ಪಡೆಯಬೇಕು.

ರಕ್ತ ಹೀನತೆಯಿದ್ದರು ರತಿಯಲ್ಲಿ ಆಯಾಸ ಉಂಟಾಗುತ್ತದೆ. ರತಿಯಲ್ಲಿ ಬೇಗನೆ ಆಯಾಸ ಉಂಟಾಗದಿರಬೇಕಾದರೆ ಹಸಿರು ಕಾಯಿಪಲ್ಲೆ, ಸೊಪ್ಪುಗಳು, ಹಾಲು- ಹಣ್ಣುಗಳನ್ನು ಪ್ರತಿದಿನ ಸೇವಿಸಬೇಕು. ಇಷ್ಟಪಟ್ಟು ಎರಡು ಹೊತ್ತು ಹೊಟ್ಟೆ ತುಂಬಾ ಊಟವನ್ನು ಮಾಡಬೇಕು. ಅದರ ಜೊತೆಗೆ ಪ್ರತದಿನ ಕನಿಷ್ಠ ಅರ್ಧ ಗಂಟೆಯಾದರೂ ಶಾರೀರಿಕ ವ್ಯಾಯಾಮವನ್ನು ಮಾಡಬೇಕು.

* * *

೬೭. ಕಾಮ ಪರವಾಗಿ ಬಯಕೆ ಉಂಟಾದಾಗ

ಪುರುಷನಿಗೆ ಕಾಮ ಪರವಾಗಿ ಬಯಕೆ ಮೂಡಿದಾಗ ಪುರುಷಾಂಗ ಉದ್ರೇಕಗೊಳ್ಳುತ್ತದೆ. ಹಾಗೆ ಶಿಶ್ನ ಉದ್ರೇಕಗೊಂಡಾಗ ಮೂತ್ರನಾಳದಲ್ಲಿರುವ ಚಿಕ್ಕ ಚಿಕ್ಕ ಗ್ರಂಥಿಗಳು ಅದರೊಳಕ್ಕೆ ದ್ರವನ್ನು ಸ್ರವಿಸುತ್ತವೆ. ಹಾಗೆ ಸ್ರವಿಸಿದ ದ್ರವ ಅಲ್ಪ ಮಟ್ಟದಲ್ಲಿದ್ದರು ಅಂಟು-ಅಂಟಾಗಿ ಜಾರುವಂತಿರುತ್ತದೆ. ಮೂತ್ರ ನಾಳದಿಂದ ಬಂದ ಈ ದ್ರವ ಶಿಶ್ನದ ಕೊನೆಯ ಭಾಗವನ್ನು ತೇವವಾಗಿ ಮಾಡುತ್ತದೆ. ಹೀಗೆ ತೇವಗೊಂಡಿರುವುದರಿಂದ ಸಂಭೋಗಕ್ಕೆ ಉಪಕ್ತಮಿಸಿದಾಗ ಯೋನಿಮಾರ್ಗದಲ್ಲಿ ಶಿಶ್ನ ಪ್ರವೇಶಿಸಲು ಅನುಕೂಲವಾಗಿರುತ್ತದೆ. ಸ್ತ್ರೀಯರಲ್ಲೂ ರತಿಯಲ್ಲಿ ಪಾಲ್ಗೊಳ್ಳುವ ಮುನ್ನ ಸ್ವಲ್ಪ ಮಟ್ಟಿಗೆ ದ್ರವಗಳು ಯೋನಿಯ ಬಳಿ ಉತ್ಪತ್ತಿಯಾಗುತ್ತವೆ. ಈ ರೀತಿಯಲ್ಲಿ ದ್ರವಗಳು ಉತ್ಪತ್ತಿಯಾಗುವುದರಿಂದ ಶಿಶ್ನ ಸರಾಗವಾಗಿ ಪ್ರವೇಶಿಸಲು ಅನುಕೂಲವಾಗುತ್ತದೆ.

ಸಂಭೋಗಕ್ಕೆ ಮುನ್ನ ಶಿಶ್ನದಿಂದ, ಯೋನಿ ಬಳಿಯಿಂದ ದ್ರವಗಳು ಉತ್ಪತ್ತಿಯಾಗದಿದ್ದರೆ ಸಂಭೋಗಕ್ಕೆ ಅಡಚಣೆ ಉಂಟಾಗುತ್ತದೆ. ದಂಪತಿಗಳಿಬ್ಬರಿಗೂ ಸಂಭೋಗದಲ್ಲಿ ಬಾಧೆ ಉಂಟಾಗುತ್ತದೆ.

* * *

೬೮. ಬೆವರಿನ ವಾಸನೆಯ ಆಕರ್ಷಣೆ

ಪರ್ಫ್ಯೂಮ್‌ ಒಳ್ಳೆಯ ವಾಸನೆಯನ್ನು ಕೊಡಬಹುದೆ ಹೊರತು ಗಂಡಸರನ್ನು ಮಾತ್ರ ಆಕರ್ಷಿಸುವುದಿಲ್ಲ. ಕೆಲವು ವಿಧದ ಪರ್ಫ್ಯೂಮ್‌ಗಳನ್ನು ಬಳಸಿದರು ಗಂಡಸರು ಇಷ್ಟಪಡುವುದು ಸ್ತ್ರೀಯರ ಶರೀರದಿಂದ ಸಹಜವಾಗಿ ಮೂಡಿಬರುವ ಬೆವರಿನ ವಾಸನೆಯನ್ನೇ ಎಂದು ಟೆಕ್ಸಾಸ್‌ ಯೂನಿವರ್ಸಿಟಿ ಮಾಡಿದ ಪರಿಶೋಧನೆ ತಿಳಿಸಿದೆ.

ಆ ಬೆವರಿನ ವಾಸನೆಯಲ್ಲೂ ಯೌವ್ವನದಲ್ಲಿರುವ ಸ್ತ್ರೀಯರ ಶರೀರದಿಂದ ಹೊರ ಸೂಸುವ ಬೆವರಿನ ವಾಸನೆ ಮತ್ತಷ್ಟು ಕಿಕ್‌ನ್ನು ಕೊಡುತ್ತದೆಂದು ಗಂಡಸರ ಮಾತಿನಿಂದ ತಿಳಿದುಬಂದಿದೆ. ಅವರಿಂದ ಬರುವ ವಾಸನೆಗಳು ಭಿನ್ನವಾಗಿರುತ್ತದೆಂದು, ಅವು ಗಂಡಸರನ್ನು ಮತ್ತಷ್ಟು ಆಕರ್ಷಿಸುತ್ತವೆಂದು ಆ ವಿಶ್ವವಿದ್ಯಾಲಯದ ಪರಿಶೋಧನೆಗಳು ತಿಳಿಸಿವೆ.

* * *

೬೯. ಬಾಧೆಯನ್ನು ಮರೆಸುವ ಸೆಕ್ಸ್

ಗಂಡ – ಹೆಂಡತಿ ಪ್ರೇಮಿಗಳ ನಡುವೆ ಆಗಿಂದಾಗ್ಗೆ ಯಾವುದಾದರೂ ಕಾರಣಕ್ಕೆ ವಿಭೇದಗಳುಂಟಾಗುತ್ತವೆ. ಆ ವಿಭೇಧಗಳು ಜಗಳವಾಗಿ ಮಾರ್ಪಡಬಹುದು. ತಮ್ಮ ತಮ್ಮಲ್ಲಿ ಬಯ್ದುಕೊಂಡು ಪರಸ್ಪರ ಮುಖಗಳನ್ನು ಬೇರೆ ಕಡೆಗೆ ತಿರುಗಿಸಿಕೊಂಡಿರಬಹುದು. ಆದರೆ, ಅಂತಹ ಜೋಡಿಗಳನ್ನು ಒಂದುಗೂಡಿಸುವುದು ಸೆಕ್ಸೆ. ಆ ರೀತಿ ಜಗಳವಾಡಿಕೊಂಡ ಗಂಡ- ಹೆಂಡತಿಯಲ್ಲಿ ಯಾರಾದರೊಬ್ಬರು ಸೋಲಲೇಬೇಕು. ಒಬ್ಬರು ಆಸಕ್ತಿ ವಹಿಸಿ ಮತ್ತೊಬ್ಬರನ್ನು ಸೆಕ್ಸಿಯಾಗಿ ಪ್ರೇರೇಪಿಸಬೇಕು.

ಅಂತಹ ಸಮಯದಲ್ಲಿ ನಡೆಸುವ ಸೆಕ್ಸ್‌ಮತ್ತಷ್ಟು ಮಜವಾಗಿರುತ್ತದೆ. ಅಂತಹ ಸೆಕ್ಸ್‌ಕೂಡಿಕೆ ಅನಂತರ ಬರಬಹುದಾದ ವಿಭೇದಗಳನ್ನು ಮರೆಸುತ್ತದೆ. ಇದಕ್ಕೆ ಕಾರಣ ಸೆಕ್ಸ ಕ್ರಿಯೆ ನಡೆದ ನಂತರ ಇದ್ದಕ್ಕಿದ್ದಂತೆ ಮರೆವು ಉಂಟಾಗುತ್ತದೆ. ಸೆಕ್ಸ್‌ನಲ್ಲಿ ಪಾಲ್ಗೊಂಡಾಗ ನಾಡಿ ವ್ಯವಸ್ಥೆಯ ಉತ್ತೇಜನದಿಂದ ಬಾಧೆಗಳು ಮರೆತು ನಿದ್ರೆ ಆವರಿಸುತ್ತದೆ.

* * *

೭೦. ಸೆಕ್ಸ್ ಕ್ರಿಯೆ ನಡೆಸಲು ಕೆಟ್ಟ ಸಮಯ ಯಾವುದು?

ಮದುವೆ ಸಮಾರಂಭದ ಅವಧಿಯಲ್ಲಿ ದಂಪತಿಗಳಿಬ್ಬರೂ ಸ್ನೇಹಿತರ, ಬಂಧುಗಳ ಮದುವೆಗಾಗಿ ಪರಸ್ಥಳಕ್ಕೆ ತೆರಳಿ ಛತ್ರದಲ್ಲು ಉಳಿದುಕೊಂಡಿದ್ದರೆ, ಅಲ್ಲಿ ಏಕಾಂತದ ಕೊರತೆಯಿರುವುದರಿಂದ ನೀವಿಬ್ಬರು ಮದುವೆ ಸಮಾರಂಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದರಿಂದ ಬಂಧು – ಮಿತ್ರರನ್ನು ಭೇಟಿಯಾಗಿ ಕುಶಲೋಪರಿಯನ್ನು ವಿಚಾರಿಸಬೇಕಾಗಿರುವುದರಿಂದ, ಪ್ರಯಾಣಿಸಿ ದಣಿದಿರುವುದರಿಂದ ಛತ್ರದಲ್ಲಿ ಲೈಂಗಿಕ ಚಟುವಟಿಕೆಯನ್ನು ನಡೆಸುವುದು ಸೂಕ್ತವಲ್ಲ.

* * *