೫೧. ಶಾರೀರಕ, ಮಾನಸಿಕ ಆಯಾಸಕಾಮವಾಂಛೆ

ಶಾರೀರಿಕವಾಗಿ, ಮಾನಸಿಕವಾಗಿ ಆಯಾಸಗೊಂಡಿರುವ ಪುರುಷನು ಕಾಮಪರವಾಗಿ ಅಷ್ಟಾಗಿ ಉತ್ಸುಕತೆಯನ್ನು ತೋರುವುದಿಲ್ಲ. ಅಷ್ಟು ಮಾತ್ರಕ್ಕೆ ಆತನಲ್ಲಿ ಲೈಂಗಿಕ ದುರ್ಬಲತೆ ಅಥವಾ ಇಂಫೋಟೆನ್ಸ್‌ಯಿದೆಯೆಂದು ಭಾವಿಸಬಾರದು. ಆತನಿಗೆ, ಶಾರೀರಿಕವಾಗಿ, ಮಾನಸಿಕವಾಗಿ ವಿಶ್ರಾಂತಿ ಲಭಿಸಿದರೆ ಕಾಮವು ಮಾಮೂಲಿಯಾಗಿಯೇ ಪ್ರಜ್ವಲಿಸುತ್ತದೆ. ಈ ವಿಷಯವನ್ನು ಗುರ್ತಿಸಿಕೊಳ್ಳದೆ ಪ್ರತಿನಿತ್ಯ ಆಫೀಸಿನಲ್ಲಿ, ಕಾರ್ಖಾನೆಯಲ್ಲಿ ಉದ್ಯೋಗವನ್ನು ನಿರ್ವಹಿಸಿ ಆಯಾಸ ಗೊಂಡಿರುವ ಪುರುಷರು ಸಾಕಷ್ಟು ಸಾರಿ ರತಿಯಲ್ಲಿ ಪಾಲ್ಗೊಳ್ಳದಿರಲು ಕಾಮ ಪರವಾಗಿ ತಮ್ಮದು ಅಸಾಮಥ್ಯಥೆ ಎಂದು ಭಾವಿಸುತ್ತಾರೆ. ಈ ರೀತಿಯಲ್ಲಿ ಉಂಟಾದ ಅನುಮಾನ ಸಹ ಪುರುಷರನ್ನು ಮತ್ತಷ್ಟು ಕುಗ್ಗಿಸುತ್ತದೆ. ಅಲ್ಲದೆ, ಅದಕ್ಕೆ ಪೂರಕವಾಗಿ ಸಾಧಾರಣವಾಗಿ ಸ್ತ್ರೀಯರು ತಮ್ಮನ್ನು ಪ್ರೇರೇಪಿಸಬೇಕಾದ ಬಾಧ್ಯತೆ ಪುರುಷರದೇ ಎಂದು ಭಾವಿಸುತ್ತಾರೆ. ಆದರೆ, ಹೆಂಡತಿ ಸಹ ಗಂಡನನ್ನು ಪ್ರೇರೇಪಿಸಬೇಕೆಂಬುದನ್ನು ಗುರುತಿಸಿಕೊಳ್ಳುವುದಿಲ್ಲ.

೫೨. ರತಿ ಕುರಿತು ತಜ್ಞರ ಸಲಹೆಗಳು

ವೀರ‍್ಯವನ್ನು ನುಂಗಿದರೆ…?

ರತಿಯಲ್ಲಿ ಪಾಲ್ಗೊಂಡಾಗ, ಓರಲ್‌ಸೆಕ್ಸ್ ಮೂಲಕ ಸ್ತ್ರೀ ವೀರ‍್ಯವನ್ನು ನುಂಗಿದರೆ ಏನಾದರೂ ಹಾನಿ ಉಂಟಾಗುವುದೇ? ಮಾಮೂಲು ರತಿಯಲ್ಲಿ ರತಿಯಿಂದ ತೃಪ್ತಿ ಹೊಂದದವರು ಓರಲ್ ಸೆಕ್ಸ್ ಮೂಲಕ ತೃಪ್ತಿ ಪಡುವ ಪದ್ಧತಿಯಿದೆ. ಈ ವಿಪರೀತ ಧೋರಣೆಗೆ ಕೆಲವರು ಅಸಹ್ಯಗೊಳ್ಳುತ್ತಾರೆ. ಮತ್ತೆ ಕೆಲವರು ತೃಪ್ತಿಯನ್ನು ಹೊಂದುತ್ತಾರೆ. ಈ ಸಮಯದಲ್ಲಿ ವೀರ‍್ಯವನ್ನು ಸ್ತ್ರೀ ನುಂಗುವುದರಿಂದ ಏನು ಹಾನಿ ಉಂಟಾಗುವುದಿಲ್ಲ. ಆದರೆ, ಪುರುಷನ ಜನನೇಂದ್ರಿಯ ಭಾಗ ಶುಭ್ರವಾಗಿಲ್ಲದಿದ್ದರೆ, ಲೈಂಗಿಕ ರೋಗಗಳಿದ್ದರೆ ಆ ರೋಗಗಳು ಸ್ತ್ರೀಗೆ ಹರಡುವ ಸಂಭವ ಹೆಚ್ಚು.

* * *

೫೩. ಸಣ್ಣಗಿರುವವರಲ್ಲಿ ಕಾಮ ಇರುವುದಿಲ್ಲವೇ?

ಶರೀರ ಗಾತ್ರವನ್ನು ಆಧರಿಸಿ ಕಾಮ ಇದೆಯೋ, ಇಲ್ಲವೋ ಎಂದು ಹೇಳಲಾಗುವುದಿಲ್ಲ. ವ್ಯಕ್ತಿಯಲ್ಲಿ ಅನಾರೋಗ್ಯವಿದ್ದು ಬಲಹೀನತೆಯಿಂದ ಸಣ್ಣಗಾಗಿದ್ದರೆ, ಆ ಬಲಹೀನತೆಯಿಂದ ಕಾಮ ಕಡಿಮೆ ಇರಬಹುದು, ಅಷ್ಟೇ ಹೊರತು, ಆರೋಗ್ಯವಾಗಿದ್ದು ಸಣ್ಣಗಿದ್ದರೆ ಕಾಮ ಮಾಮೂಲಾಗೇ ಇರುತ್ತದೆ. ಆದರೆ, ಶರೀರದಲ್ಲಿ ಹೆಚ್ಚು ಆಯಾಸಗೊಳ್ಳುತ್ತಾರೆಯೇ ಹೊರತು ಕಾಮದಾಸೆ ಇದ್ದಂತೆ ಇರುತ್ತದೆ.

* * *

೫೪. ಹಗಲು ಹೊತ್ತು ರತಿ

ಹಗಲು ಹೊತ್ತು ರತಿಯನ್ನು ನಡೆಸಿದರೆ ಪಾಪವೆಂದು, ಹುಟ್ಟುವ ಮಕ್ಕಳು ಕ್ರೂರಿಗಳು, ದುರ್ಮಾರ್ಗಿಗಳು ಆಗುತ್ತಾರೆಂದು ಕೆಲವರಲ್ಲಿ ಮೂಢನಂಬಿಕೆಯಿದೆ. ಆದರೆ, ಈ ಮಾತುಗಳೆಲ್ಲ ಅರ್ಥವಿಲ್ಲದವು. ಆದರೆ ರತಿಯನ್ನು ನಡೆಸಿದಾಗ ಶರೀರದಲ್ಲಿ ಲೈಂಗಿಕ ಉದ್ರೇಕ ಉಂಟಾಗಿ ವಿಪರೀತ ಉನ್ನತ ಸ್ಥಾಯಿಗೆ ಹೋದಾಗ ಶರೀರ ಮತ್ತು ಮನಸ್ಸಿನಲ್ಲಿ ಒಂದು ರೀತಿಯ ಒತ್ತಡ ಉಂಟಾಗುತ್ತದೆ. ಅದು ತಂತಾನೆ ನಿವಾರಣೆಯಾಗುತ್ತದೆ. ಆದರೆ, ಶರೀರ ಮತ್ತು ಮನಸ್ಸಿಗೆ ಸ್ವಲ್ಪ ಹೊತ್ತು ವಿಶ್ರಾಂತಿ ನಿದ್ರೆ ರಾತ್ರಿಯ ಹೊತ್ತು ಮಾತ್ರ ಸಾಧ್ಯವಾಗುತ್ತದೆ. ಹಗಲು ಹೊತ್ತು ಸಾಧ್ಯವಾಗುವುದು ಕಷ್ಟ, ಹಗಲು ಹೊತ್ತು ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಾದರೆ ರತಿಯನ್ನು ಹಗಲು ಜರುಗಿಸಿದರೂ, ರಾತ್ರಿ ಜರುಗಿಸಿದರೂ ಒಂದೇ.

* * *

೫೫. ಸ್ತ್ರೀಯಲ್ಲಿ ರತಿಯಾಸಕ್ತಿ ಅಭಿವೃದ್ಧಿಗೊಂಡಿರುವ ಚಿಹ್ನೆಗಳು

ಲೈಂಗಿಕ ಸಂಭೋಗಕ್ಕಾಗಿ ಸ್ತ್ರೀಯರಲ್ಲಿ ರತಿಯಾಸಕ್ತಿ ಅಭಿವೃದ್ಧಿಗೊಂಡಿದ್ದರೆ ಆಕೆಯ ಶರೀರ ವಿಶ್ರಾಂತಿ ಸ್ಥಿತಿಯಲ್ಲಿರುತ್ತದೆ. ಆಕೆ, ಕಣ್ಣುಗಳನ್ನು ಮುಚ್ಚಿರುತ್ತಾಳೆ, ನಾಚಿಕೆಯನ್ನು ನಿಯಂತ್ರಿಸಿಕೊಂಡಿರುತ್ತಾಳೆ. ಅಲ್ಲದೆ, ಸಂಭೋಗದ ಚಾಲನೆಯಲ್ಲಿ ಚಟುವಟಿಕೆಯಿಂದ ಪಾಲ್ಗೊಂಡು ಸಹಕರಿಸುತ್ತಾಳೆ.

ಜೊತೆಗೆ ಶಿಶ್ನವನ್ನು ಯೋನಿಯೊಳಕ್ಕೆ ಪೂರ್ಣವಾಗಿ ಒಳತೂರಿಸಲು ಆಸಕ್ತಿಯನ್ನು ತೋರುತ್ತಾಳೆ. ಮತ್ತು ನಾಚಿಕೆಯನ್ನು ಬಿಟ್ಟುಗಟ್ಟಿಯಾಗಿ ಗಂಡನನ್ನು ಆಲಂಗಿಸಿಕೊಂಡು ಚುಂಬನವನ್ನು ನೀಡುತ್ತಾಳೆ. ಸ್ತ್ರೀ ಭಾವಪ್ರಾಪ್ತಿ (ಲೈಂಗಿಕ ಸುಖಶಿಖರ) ಅಥವಾ ಆರ್ಗ್ಯಾಸಮ್ ಸಂದರ್ಭದಲ್ಲಿ ಪುರುಷನನ್ನು ಗಟ್ಟಿಯಾಗಿ ತಬ್ಬಿಕೊಂಡು ತಲೆ, ಕೈಗಳನ್ನು  ಅಲುಗಾಡಿಸುತ್ತಾಳೆ ಮತ್ತು ತೊಡೆಗಳನ್ನು ಆಗಿಂದಾಗ್ಗೆ ಅಗಲಿಸಿ, ಮುಚ್ಚಿಕೊಳ್ಳುತ್ತಾಳೆ. ರತಿಯಾಸಕ್ತಿಯ ಹಾಸ್ಯ ಪ್ರಜ್ಞೆಯುಳ್ಳ ಸ್ತ್ರೀ ತನ್ನ ಗಂಡನ ಕೆನ್ನೆ ಅಥವಾ ಶರೀರದ ಇತರೆ ಭಾಗದಲ್ಲಿ ಲೈಂಗಿಕ ಪರಾಕಾಷ್ಠತೆ (ಕ್ಲೈಮ್ಯಾಕ್)ಯ ಸಮಯದಲ್ಲಿ ಮೆಲ್ಲಗೆ ಕಚ್ಚಲುಬಹುದು.

ಆಕಸ್ಮಿಕವಾಗಿ ಆತುರದಿಂದ ಸ್ವಲ್ಪ ಸಮಯದಲ್ಲೇ ವೀರ‍್ಯವನ್ನು ಪುರುಷ ವಿಸರ್ಜಿಸಿ, ಯೋನಿದ್ವಾರದಿಂದ ಶಿಶ್ನವನ್ನು ಹೊರತೆಗೆದುಬಿಟ್ಟರೆ, ಸ್ತ್ರೀಗೆ ನಿರಾಶೆ ಉಂಟಾಗುತ್ತದೆ. ಆದುದರಿಂದ, ವೀರ‍್ಯ ಸ್ಖಲನ, ಲೈಂಗಿಕ ಕ್ರಿಯೆಯನ್ನು ಆರಂಭಿಸಿದ ಅಲ್ಪಾವಧಿಯಲ್ಲಿ ಉಂಟಾದರೆ, ಪುರುಷ ತನ್ನ ಶಿಶ್ನವನ್ನು ಕೂಡಲೇ ಹೊರತೆಗೆಯದೆ ಹಾಗೆಯೇ ಯೋನಿಯ ಭಾಗದಲ್ಲಿರಿಸಿ ಕೊಂಡಿದ್ದರೆ, ಪತ್ನಿ ಸಂಭೋಗ ಚಾಲನೆಯನ್ನು ತನ್ನ ಕುಂಡಿಗಳನ್ನು ಅಲುಗಾಡಿಸುವುದರ ಮೂಲಕ ಮುಂದುವರೆಸುತ್ತಾಳೆ. ಅನಂತರ ಆಕೆ ಇಷ್ಟಪಟ್ಟರೆ ಭಗಾಂಕುರ ಭಾಗದಲ್ಲಿ ಪುರುಷ ತನ್ನ ಕೈಯಿಂದ ನಿರಾಗಿ ಉಜ್ಜುವುದರ ಮೂಲಕ ಕಾಮೋದ್ರೇಕವನ್ನು ಶಮನಗೊಳಿಸಬಹುದು.

* * *

೫೬. ಪದೇ ಪದೇ ಸೆಕ್ಸ್ ಕುರಿತು ಮಾತಾಡುತ್ತೀರಾ?

ಕೆಲವರು ಪದೇ ಪದೇ ಸೆಕ್ಸ್ ಕುರಿತು ಮಾತಾಡುತ್ತಿರುತ್ತಾರೆ. ಈ ತರಹದ ವ್ಯಕ್ತಿಗಳು ಯಾವುದೇ ರೀತಿಯ ಸಂಭಾಷಣೆಯಾದರು ಸೆಕ್ಸ್‌ಪ್ರಸ್ತಾಪಕ್ಕೆ ದಾರಿ ಮಾಡಿಕೊಡುವಂತೆ ವರ್ತಿಸುತ್ತಿರುತ್ತಾರೆ ಇಂತಹವರು ದ್ವಂದ್ವ ಅರ್ಥಗಳಿಂದ ಮಾತಾಡುತ್ತಾರೆ. ಯಾವಾಗಲೂ ಯಾರಾದಾದ್ರು. ಒಬ್ಬರ ದಾಂಪತ್ಯ ಜೀವನವನ್ನು ಕುರಿತು ಹೇಳುತ್ತಿರುತ್ತಾರೆ. ಯಾರ‍್ಯಾರಿಗೆ ಯಾರ‍್ಯಾರ ಜೊತೆ ಎಂತಹ ಸಂಬಂಧಗಳಿವೆಯೂ ಎಂಬುದನ್ನು ಗಾಸಿಪ್ಸ್ ಮೂಲಕ ಪ್ರಚಾರವನ್ನು ಮಾಡುತ್ತಿರುತ್ತಾರೆ. ಹೀಗೆ ಶೃಂಗಾರ ಸಂಬಂಧವಾದ ವಿಷಯಗಳನ್ನು ಪ್ರಸ್ತಾಪಿಸುವುದು ಅವರ ಧೋರಣೆಯಾಗಿರುತ್ತದೆ. ಇಂತಹ ಅಭ್ಯಾಸ ನಲವತ್ತು ವರ್ಷ ವಯಸ್ಸಿನವರೆಗೂ, ನಲವತ್ತೇಳು ವರ್ಷದ ವಯಸ್ಸಿನವರೆಗೂ ಪರಿಮಿತಗೊಂಡಿಲ್ಲ. ಎಪ್ಪತ್ತು ವರ್ಷ ವಯಸ್ಸು ದಾಟ್ಟಿದ್ದರು ಶೃಂಗಾರ ಪ್ರಸ್ತಾಪ ಮಾಡುವವರು ನಮ್ಮ ಸುತ್ತಲೇ ಇರುತ್ತಾರೆ. ಅಂತಹವರನ್ನು ನೋಡಿ ಈ ಮುದುಕ ವಯಸ್ಸಿನಲ್ಲಿದ್ದಾಗ ಶೃಂಗಾರ ಪುರುಷನೆ ಇರಬಹುದೆಂದು ಅಂದುಕೊಳ್ಳೋಣ. ಆದರೆ, ಅನಗತ್ಯವಾಗಿ, ಅಸಂದರ್ಭವಾಗಿ ಸೆಕ್ಸ್ ಪ್ರಸ್ತಾಪಗಳನ್ನು ಮಾಡುತ್ತಾ ತೀಟೆ ತೀರಿಸಿಕೊಳ್ಳುತ್ತಾರೆ. ಇಂತಹವರಿಗೆ ಶೃಂಗಾರ ಕುರಿತು ಅವಗಾಹನೆ ಇಲ್ಲದೆ ಇರುವುದೇ ಪ್ರಧಾನ ಕಾರಣವಾಗಿರುತ್ತದೆ.

ನಿಜವಾಗಿಯು ಮನುಷ್ಯರ ನಡುವೆ ಶೃಂಗಾರ ಹೆಚ್ಚು ಸಹಜವಾದ ವಿಷಯವಾಗಿರುತ್ತದೆ. ಪ್ರತಿಯೊಬ್ಬರು ಸ್ವಲ್ಪ ಮಟ್ಟಿಗಾದರೂ ಶೃಂಗಾರ ಸ್ವಭಾವವನ್ನು ಹೊಂದಿರುತ್ತಾರೆ. ಶಾರೀರಿಕ ಕಾರಣದಿಂದಲೋ, ಮತ್ಯಾವುದಾದರೂ ಕಾರಣದಿಂದಲೊ ಶೃಂಗಾರಕ್ಕೆ ಕೆಲವರು ಮಾತ್ರ ದೂರವಿರಬಹುದು. ಹೊಟ್ಟೆ ಹಸಿವು ತೀರಿಸಿಕೊಳ್ಳುವುದು ಎಷ್ಟು ಸಹಜವೋ, ಅದೇ ರೀತಿ ದಂಪತಿಗಳು ಶೃಂಗಾರ ಲಹರಿಯಲ್ಲಿ ತೊಡಗುವುದು ಅಷ್ಟೇ ಸಹಜ.

ಸ್ತ್ರೀ- ಪುರುಷರ ಸಂಯೋಗವಿಲ್ಲದೆ ಮನುಷ್ಯ ಹುಟ್ಟುವುದಿಲ್ಲ. ಪ್ರೌಢ ವಯಸಸಿನಲ್ಲಿ ಸ್ತ್ರೀ – ಪುರುಷರಿಬ್ಬರಲ್ಲೂ ಶೃಂಗಾರ ಸ್ವಭಾವ, ಶೃಂಗಾರ ಚೇಷ್ಟೆಗಳು ಇದ್ದಾಗ ಅಂತಹ ದಾಂಪತ್ಯ ಜೀವನ ಸುಗಮವಾಗಿ ಮುನ್ನಡೆಯುತ್ತದೆ.

ಸೆಕ್ಸ್‌ಕೋರಿಕೆಗಳು ತೀರದವರು ಹೆಚ್ಚಾಗಿ ಸೆಕ್ಸ್ ಕುರಿತು ಮಾತಾಡುತ್ತಿರುತ್ತಾರೆ. ಸೆಕ್ಸ್ ಕೋರಿಕೆಗಳು ನೆರವೇರಿದವರು ಸೆಕ್ಸ್ ಕುರಿತು ಹೆಚ್ಚಾಗಿ ಮಾತಾಡುವುದಿಲ್ಲವೇ? ಮಾತಾಡುವುದಿಲ್ಲವೆಂದು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ, ಅವರ ಸಂಖ್ಯೆ ಬಹಳ ಕಡಿಮೆ, ಸೆಕ್ಸನ್ನು ಸಹಜವಾದ ವಿಷಯವಾಗಿ ಸ್ವೀಕರಿಸಿ, ಪ್ರೇಮಪೂರ್ವಕವಾದ ದಾಂಪತ್ಯ ಜೀವನವನ್ನು ಸಾಗಿಸುವವರು ಪರಸ್ಪರ ಶೃಂಗಾರ ರಸದಲ್ಲಿ ತಲ್ಲೀನರಾಗಿ ಬಿಡುತ್ತಾರೆ. ಹೀಗೆ ಪ್ರತದಿನ ತಮ್ಮ ಜೀವನದಲ್ಲಿ ಸೆಕ್ಸ್ ಕೋರಿಕೆಗಳನ್ನು ತೀರಿಸಿಕೊಂಡರೆ ಸೆಕ್ಸ್ ಕುರಿತು ಸುಮ್ಮನೆ ಮಾತಾಡುವ ಅಗತ್ಯವೇ ಕಾಣುವುದಿಲ್ಲ. ಆನಂದಕರವಾದ ಲೈಂಗಿಕ ಜೀವನವನ್ನು ಸಾಗಿಸುವವರ ಆಲೋಚನೆಗಳು ಸಹ ಆರೋಗ್ಯಕರವಾಗಿಯೇ ಇರುತ್ತವೆ.

ದಂಪತಿಗಳ ನಡುವಿನ ಶೃಂಗಾರ ಬಹಳ ವೈಯಕ್ತಿಕ ವಿಷಯ. ಯಾವುದೇ ದಂಪತಿಗಳು ತಮ್ಮ ಶೃಂಗಾರ ಜಿವನದ ಬಗ್ಗೆ ಮಾತಾಡುವ ಅಗತ್ಯವೂ ಇಲ್ಲ. ಅದೇ ರೀತಿ ಇತರೆ ದಂಪತಿಗಳ ಶೃಂಗಾರ ಜೀವನ ಹೇಗಿರುತ್ತದೋ ಎಂದು ಆಲೋಚಿಸುವ ಅಗತ್ಯವೂ ಇಲ್ಲ.

ಕೆಲವು ದಂಪತಿಗಳು ಮನೆಯಲ್ಲೇ ಹಾಯಾಗಿ ಸೆಕ್ಸನ್ನು ಎಂಜಾಯ್ ಮಾಡುತ್ತಾರೆ. ಹತ್ತು ವರ್ಷಗಳ ದಾಂಪತ್ಯ ಜೀವನದ ನಂತರ ಆತನಿಗೆ ಅಥವಾ ಆಕೆಗೆ ಸೆಕ್ಸ್ ಬಗ್ಗೆ ವಿಮುಖತೆ ಏರ್ಪಟ್ಟರೆ ಗೊಂದಲಕ್ಕೆ ಒಳಗಾಗುತ್ತಾರೆ. ಒಬ್ಬರು ಉದ್ವೇಗದಿಂದ ಕೂಡಿದ್ದರೆ ಮತ್ತೊಬ್ಬರು ಮೌನವಾಗಿರುವಂತೆ ನಟಿಸಿದರೆ ಅದೊಂದು ಸಮಸ್ಯೆಯಾಗಿಯೇ ಇರುತ್ತದೆ. ಅಂತಹವರು ಕಾಲ ಕ್ರಮೇಣ ಇತರೇ ಸಂಬಂಧಗಳನ್ನು ಹೊಂದಬಹುದು. ಹೊಂದದೆಯು ಇರಬಹುದು. ಗಂಡಸರೆ ಅಲ್ಲದೆ ಕೆಲವು ಸ್ತ್ರೀಯರು ಕೂಡ ಪದೇ ಪದೇ ಇತರರ ಸಂಬಂಧಗಳನ್ನು ಕುರಿತು ಮಾತಾಡುತ್ತಿರುತ್ತಾರೆ. ಸೆಕ್ಸ್ ಸಂಭಾಷಣೆಯನ್ನು ನಡೆಸುತ್ತಾರೆ. ಮನೆಯಲ್ಲಿ ಹೆಂಡತಿ ನಿರಾಸಕ್ತಿಯನ್ನು ತೋರಿಸಿದರೆ, ಗಂಡ ಮತ್ತೊಂದು ದಾರಿ ನೋಡಿಕೊಳ್ಳಲು ಪ್ರಯತ್ನಿಸುತ್ತಾನೆ. ಕೆಲವರು ಈ ವರ್ಗಕ್ಕೆ ಸೇರಿದ ತಟಸ್ಥರಾಗಿಯು ಇರಬಹುದು. ಆದರೆ, ಅವರಲ್ಲಿ ತೀವ್ರ ಅಸಂತೃಪ್ತಿ ಹಾಗೆಯೇ ಉಳಿದಿರುತ್ತದೆ. ಇಂತಹವರೇ ಪದೇ ಪದೇ ಸೆಕ್ಸ್ ವಿಷಯವನ್ನು ಕುರಿತು ಮಾತಾಡುತ್ತಿರುತ್ತಾರೆ. ಒಬ್ಬ ಹುಡುಗ ಒಬ್ಬ ಹುಡುಗಿ, ಜೊತೆಯಲ್ಲಿದ್ದರೆ ಸಾಕು ಸಂಬಂಧವನ್ನು ಕಲ್ಪಿಸಿಬಿಡುತ್ತಾರೆ. ತಮ್ಮ ಆಫೀಸಿನಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳ ವರ್ತನೆಯನ್ನು ಕುರಿತು, ಆಕೆಗೆ ಯಾರೊಂದಿಗೂ ಸಂಬಂಧವನ್ನು ಕಲ್ಪಿಸಿ ಮಾತಾಡುವುದುಂಟು. ಆದರೆ, ಅದರಲ್ಲಿ ಒಂದು ನಿಜವಿರುವುದಿಲ್ಲ. ಇಂತಹವರ ಮಾತನ್ನು ನಂಬದಿದ್ದರೂ, ಆ ಮಾತುಗಳನ್ನು ಕೇಳಿ ಎಂಜಾಯ್‌ಮಾಡುವವರು ಸುತ್ತಲೂ ಇರುತ್ತಾರೆ. ಆದುದರಿಂದಲೇ ಯಾವ ಸಂಭಾಷಣೆಯಾದರು ಅದರಲ್ಲಿ ಸೆಕ್ಸ್‌ವಿಷಯ ಪ್ರಸ್ತಾಪವಾಗುತ್ತಿರುತ್ತದೆ. ಪದೇ ಪದೇ ಸೆಕ್ಸ್ ಕುರಿತು ಮಾತಾಡುವ ಧೋರಣೆಯನ್ನು ಬಿಟ್ಟುಬಿಡಬೇಕಾದರೆ ಕೆಲವು ವಿಷಯಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕು.

ಒಂದು ಸಾರಿ ನಿಮ್ಮ ಲೈಂಗಿಕ ಜೀವನವನ್ನು ಕುರಿತು ನೆಮ್ಮದಿಯಿಂದ ಆಲೋಚಿಸಿರಿ. ನೀವು ಸಂತೃಪ್ತಿಯಿಂದ ಇದ್ದಿರೋ, ಇಲ್ಲವೋ, ಗಮನಿಸಿರಿ. ಅಸಂತೃಪ್ತಿಯಿದ್ದರೆ ಕಾರಣಗಳೇನೋ ಗಮನಿಸಿರಿ. ಅವುಗಳಿಂದ ಹೊರಬರಲು ಪರಿಹಾರ ಯಾವುದೋ ಕಂಡುಕೊಳ್ಳಿರಿ.

ನಿಮಗೆ ಸೆಕ್ಸ್ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದ್ದರೆ ಯಾತಕ್ಕೆಂದು ಗಮನಿಸಿರಿ. ಮೊದಲು ನಿಮ್ಮ ಜೀವನ ಸಂಗಾತಿಗೆ ವಿಷಯವನ್ನು ತಿಳಿಸಿರಿ. ಪರಸ್ಪರ ಮಾತಾಡಿಕೊಳ್ಳುವುದರಿಂದ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಸೆಕ್ಸ್ ಎನ್ನುವುದು ಬಹಳ ಸಹಜವಾದ ವಿಷಯ ಎನ್ನುವುದನ್ನು ದೃಷ್ಟಿಯಲ್ಲಿಟ್ಟುಕೊಳ್ಳಬೇಕು. ಶೃಂಗಾರಕ್ಕೆ ಸಂಬಂಧಿಸಿದ ವಿಷಯಗಳನ್ನು ನೈತಿಕ, ಅನೈತಿಕ ದೃಷ್ಟಿಯಿಂದ ನೋಡುವುದು ಸೂಕ್ತವಲ್ಲ. ಈ ವಿಧದಲ್ಲಿ ನೋಡಿದರೆ ತಪ್ಪೊಪ್ಪುಗಳನ್ನು ಕುರಿತು ಲೆಕ್ಕವಿಡಬೇಕಾಗುತ್ತದೆ. ಆದರೆ, ಇತರರ ಲೈಂಗಿಕ ವರ್ತನೆಯನ್ನು ಕುರಿತು ಮಾತಾಡುವುದಾಗಲಿ, ಬೇರೊಬ್ಬರ ದಾಂಪತ್ಯದ ಬಗ್ಗೆ ತೀರ್ಪು ನೀಡುವ ಹಕ್ಕು ಯಾರಿಗಿರುತ್ತದೆ?

ಕೆಲವರು ಅವಿವಾಹಿತರಾಗಿಯೇ ಇದ್ದು ಬಿಡುತ್ತಾರೆ. ಅದು ಮನುಷ್ಯ ಆಯ್ಕೆ ಮಾಡಿಕೊಳ್ಳುವಂತಹುದು. ವಿವಾಹದ ಬಗ್ಗೆ ಆಲೋಚಿಸದೆ, ಸೆಕ್ಸ್‌ಬಗ್ಗೆ ಉದ್ರೇಕಗೊಳ್ಳದೆ ಬ್ರಹ್ಮಚರ‍್ಯವನ್ನು ಪರಿಪಾಲಿಸಿದರೆ ಪರ್ವಾಗಿಲ್ಲ. ಅದು ಬಿಟ್ಟು ಸೆಕ್ಸ್ ಬಗ್ಗೆ ಆಗಿಂದಾಗ್ಯೆ ಪ್ರಸ್ತಾಪಿಸುತ್ತಾ ಬಲವಂತದ ಬ್ರಹ್ಮಚರ‍್ಯವನ್ನು ಪಾಲಿಸಿದರೆ ಅದು ಉದ್ವೇಗಕ್ಕೆ ದಾರಿ ಮಾಡಿಕೊಡುತ್ತದೆ.

ಪದೇ ಪದೇ ಶೃಂಗಾರ ಸಂಬಂಧಗಳ ಬಗ್ಗೆ ಮಾತಾಡುವ ಹೆಂಗಸರಿಲ್ಲವೇ? ಯಾಕಿಲ್ಲ. ಇದ್ದಾರೆ. ತೀವ್ರವಾದ ಅಸಂತೃಪ್ತಿಗೊಳಗಾಗಿ ಬೇರೊಬ್ಬರ ದಾಂಪತ್ಯ ಜೀವನದ ಬಗ್ಗೆ ಮಾತಾಡುತ್ತಾ ಬಾಯಿ ಚಪಲವನ್ನು ತೀರಿಸಿಕೊಳ್ಳುವ ಕೆಲವು ಸ್ತ್ರೀಯರಿದ್ದಾರೆ. ಈ ರೀತಿಯಲ್ಲಿ ಆತ್ಮವಂಚನೆ, ಪರವಂಚನೆ ಮಾಡಿಕೊಳ್ಳುತ್ತಾ ವ್ಯವಹರಿಸುವುದರಿಂದ ಯಾವುದೇ ಫಾಯಿದೆ ಇರುವುದಿಲ್ಲ.

ಶೃಂಗಾರಕ್ಕೆ ಸಂಬಂಧಿಸಿದಂತೆ ಸಂಯಮದಿಂದ ಕೂಡಿದ ಆಲೊಚನೆ ಮಾತ್ರವೇ ಮನುಷ್ಯನನ್ನು ಸಕ್ರಮವಾಗಿ ನಡೆಸುತ್ತದೆ. ಈ ರೀತಿಯ ಸಂಯಮವನ್ನು ಸಾಧಿಸಬೇಕಾದರೆ ಸೆಕ್ಸನ್ನು ಸಹಜವಾದ ವಿಷಯವೆಂದು ತಿಳಿದು ಪ್ರಜ್ಞಾಪೂರ್ವಕವಾಗಿ ನಡೆದುಕೊಂಡರೆ ಅಡಚಣೆಗಳು ಉಂಟಾಗುವುದಿಲ್ಲ.

* * *

೫೭. ಮಾಲಿನಿಯ ಮನಸ್ಸು ಬದಲಾಯಿತೆ?

ಮಾಲಿನಿಗೆ ’ಮನೋಹರ್‌ನ ಮೇಲೆ ಒಳ್ಳೆಯ ಮನಸ್ಸೇ ಇದೆ. ಆತನ ಸಾನಿಧ್ಯದಲ್ಲಿ ಆನಂದವನ್ನು ಹೊಂದುತ್ತಾಳೆ. ಅಂತಹ ಮಾಲಿನಿಯಲ್ಲಿ ಮನೋಹರ್‌ಒಂದು ವಿಚಿತ್ರ. ವರ್ತನೆಯನ್ನು ಗಮನಿಸಿದನು. ಸಂಭೋಗದಲ್ಲಿ ಎಷ್ಟು ಉತ್ಸುಕತೆಯಿಂದ ಪಾಲ್ಗೊಂಡರು ಮಾಲಿನಿ ರತಿ ಮುಗಿದ ನಂತರ ತನ್ನ ಬೆರಳಿನಿಂದ ಯೋನಿಯ ಬಳಿ ಒತ್ತಿಕೊಳ್ಳುತ್ತಿದ್ದಳು. ಉಜ್ಜಿಕೊಳ್ಳುತ್ತಿದ್ದಳು, ಆಕೆ, ಏತಕ್ಕೆ ಆ ರೀತಿ ಮಾಡಿಕೊಳ್ಳುತ್ತಾಳೆ? ರತಿಯಲ್ಲಿ ಮನೋಹರನಿಂದ ಆನಂದವನ್ನು ಹೊಂದುವುದಿಲ್ಲವೆ? ಮನೋಹರ್‌ನ ಬಗ್ಗೆ ವಿರಕ್ತಿ ಉಂಟಾಗಿ ಮಾಲಿನಿ ಸ್ವಯಂ ತೃಪ್ತಿಯ ಪದ್ಧತಿಯನ್ನು ಅನುಸರಿಸುತ್ತಿದ್ದಾಳೆಯೇ?

ಲೈಂಗಿಕೋದ್ರೋಕವನ್ನು ಹೊಂದಿದ ಸ್ತ್ರೀ ಸುಖಪ್ರಾಪ್ತಿ (ಆರ್ಗ್ಯಸಮ್)ಯ ಸ್ಥಾಯಿ ತಲುಪುವಾಗ ಗಂಡ ವೀರ‍್ಯ ಸ್ಖಲನದಿಂದ ರತಿಯಿಂದ ಉಪಸಂಹರಿಸಿಕೊಳ್ಳುವುದರಿಂದ ಎಲ್ಲಿಲ್ಲದ ಅಸಂತೃಪ್ತಿ ಆಕೆಯಲ್ಲಿ ಉಂಟಾಗುತ್ತದೆ. ಅಸಂತೃಪ್ತಿ ಆಕೆಯಲ್ಲಿ ಹೆಚ್ಚು ಬಾಧೆಯನ್ನುಂಟು ಮಾಡುತ್ತದೆ. ಅಂತಹ ಸಮಯದಲ್ಲಿ ತಿಳುವಳಿಕೆ ಇರುವ ಸ್ತ್ರೀ ಗಂಡನನ್ನು ನಿಂದಿಸದೆ, ತನ್ನ ಪಾಡಿಗೆ ತಾನು ಕ್ಲೈಟೋರಿಸ್ (ಭಗಾಂಕುರ)ನ್ನು ಉದ್ರಿಕ್ತಗೊಳಿಸಿಕೊಂಡು ಸುಖಪ್ರಾಪ್ತಿಯನ್ನು ಹೊಂದುತ್ತಾಳೆ ಅಷ್ಟೇ ಹೊರತು ಸಹಜ ರತಿಯಲ್ಲಿ ಆಕೆಗೆ ತೃಪ್ತಿ ಉಂಟಾಗುವುದಿಲ್ಲವೆಂದು, ಗಂಡನ ಬಗ್ಗೆ ಆಸಕ್ತಿಯಲ್ಲ ಎಂದರ್ಥವಲ್ಲ.

* * *

೫೮. ಅತ್ಯಧಿಕ ಕಾಮಕ್ಕೆ ವಯಸ್ಸು ಕಾರಣವೇ?

೨೦-೨೫ರ ವಯೋಮಾನದ ಯುವಕನ ಜೊತೆ ೧೬-೧೮ರ ವಯಸ್ಸಿನ ಯುವತಿ ವಿವಾಹವಾದರೆ ಒಳ್ಳೆಯ ಈಡೂ-ಜೋಡಿ ಒಳ್ಳೆಯ ಜೋಡಿ ಎಂದು ಆನಂದಿಸುತ್ತಾರೆ. ಲೈಂಗಿಕ ಮನೋವಿಜ್ಞಾನಿ ಕಿನ್ಸೆಯ ವರದಿ ಪ್ರಕಾರ  ೨೦-೨೫ರ ವಯಸ್ಸು ಇರುವ ಯುವಕನಲ್ಲಿ ಲೈಂಗಿಕ ಸ್ಪಂದನ ಹೆಚ್ಚು ಉಂಟಾಗುತ್ತಿರುತ್ತದೆ. ಆ ಸ್ಪಂದನಕ್ಕೆ ಅನುಗುಣವಾಗಿ ಕಾಮ ಸಾಮರ್ಥ್ಯವು ಹೆಚ್ಚಾಗಿರುತ್ತದೆ. ಕೆಲವರು ಪ್ರತಿದಿನ ನಾಲ್ಕೈದು ಸಾರಿಯಾದರು ರತಿಯಲ್ಲಿ ಪಾಲ್ಗೊಳ್ಳದಿದ್ದರೆ ಲೈಂಗಿಕವಾಗಿ ಏನೋ ಅತೃಪ್ತಿ ಉಳಿದಂತಾಗುತ್ತದೆ. ಮನಸ್ಸು ಲೈಂಗಿಕ ಸ್ಪಂದನದಿಂದ ಬೇಸರಗೊಳ್ಳುತ್ತದೆ. ಮತ್ತೆ ಇಂತಹ ಯುವಕನ ಜೊತೆ ೧೬-೧೮ರ ವಯಸ್ಸಿನ ಯುವತಿದೊಂದಿಗೆ ವಿವಾಹ ಜರುಗಿದರೆ ಒಳ್ಳೆಯ ಜೋಡಿ ಎಂದು ಸಮಾಜ ಭಾವಿಸುವುದು ಸಹಜವೆ. ಆದರೆ ಲೈಂಗಿಕ ಪರಿಪಕ್ವತೆ ಪ್ರಕಾರ ನೋಡಿದರೆ ಸ್ತ್ರೀಗೆ ೨೫ ವರ್ಷ ಆಗುವವರೆಗೆ ಮಾನಸಿಕ ಪರಿಪಕ್ವತೆ ಇರುವುದಿಲ್ಲ. ಆಕೆಯಲ್ಲಿ ಲೈಂಗಿಕ ಸ್ಪಂದನವಿದ್ದರು ಅವರು ಪರಿಪಕ್ವತೆಯನ್ನು ಹೊಂದಿರುವುದಿಲ್ಲ. ಆದುದರಿಂದಲೇ ಡಾಕ್ಟರ್ ಕಿನ್ಸೆ ತನ್ನ ಪರಿಶೀಲನೆಯಲ್ಲಿ ಈ ವಯಸ್ಸಿನಲ್ಲಿರುವ ಸ್ತ್ರೀ ರತಿಯ ಬಗ್ಗೆ ಆಸಕ್ತಿ ಅಷ್ಟಾಗಿ ತೋರಿಸುವುದಿಲ್ಲವೆಂದು ವಿವರಿಸಿದ್ದಾರೆ. ಅತ್ಯಧಿಕ ಲೈಂಗಿಕ ವಾಂಛೆ, ತಕ್ಕಮಟ್ಟಿಗೆ ಲೈಂಗಿಕ ಸಾಮರ್ಥ್ಯವಿರುವ ಯುವಕನ ಜೊತೆ ಕಡಿಮೆ ವಯಸ್ಸಿರುವ ಸ್ತ್ರೀ ಆತನ ಬಗ್ಗೆ ಸಾಕಷ್ಟು ಆಸಕ್ತಿಯನ್ನು ತೋರಿಸದಿದ್ದರೆ ಬೇಸರಗೊಳ್ಳುತ್ತಾನೆ. ಆದರೆ, ಕೆಲವು ಸ್ತ್ರೀಯರು ಲೈಂಗಿಕೋದ್ರೇಕ ಹೆಚ್ಚಿರುವ ಗಂಡನೊಂದಿಗೆ ಸಮಾನವಾಗಿ, ಲೈಂಗಿಕ ಪ್ರೇರಣೆಯನ್ನು ಪಡೆದು ರತಿಯಲ್ಲಿ ಪಾಲ್ಗೊಳ್ಳುತ್ತಾರೆ. ಈ ರೀತಿ ಅವರು ರತಿಯಲ್ಲಿ ಸಾಮಾನ್ಯವಾಗಿ ಪಾಲ್ಗೊಳ್ಳಲು ಮಾನಸಿಕ ಪ್ರೌಢಿಮೆ ಕಾರಣವಾಗಿರುತ್ತದೆ. ಲೈಂಗಿಕ ವಿಜ್ಞಾನಿಗಳ ಪ್ರಕಾರ ೨೫ ವರ್ಷಗಳಾದ ಸ್ತ್ರೀ ಲೈಂಗಿಕವಾಗಿ ಪರಿಪಕ್ವತೆಯನ್ನು ಹೊಂದಿರುತ್ತಾಳೆ. ಲೈಂಗಿಕ ಆಸಕ್ತಿಯನ್ನು ಸಾಕಷ್ಟು ರೀತಿಯಲ್ಲಿ ಹೊಂದಿರುವುದರಿಂದ, ಗಂಡನಲ್ಲಿ ಅತಿಯಾಗಿ ಕಾಮವಿದ್ದರು, ಆಕೆ ಸಹ ಆತನಿಗೆ ಅನುಗುಣವಾಗಿ ಸಹಕರಿಸುತ್ತಾಳೆ.

* * *

೫೯. ಮೈಥುನಕ್ಕೆ ಮನಸ್ಸೆ ಮೂಲ

ಕಾಮಭಾವನೆ ಮೂಡಲು, ಮೈಥುನವನ್ನು ಜರುಗಿಸಲು ಮನಸ್ಸೇ ಕಾರಣ. ಇದನ್ನು ಅರ್ಥ ಮಾಡಿಕೊಳ್ಳದೆ ಹೆಂಡತಿ ತನ್ನ ಮಾತುಗಳಿಂದ, ಚೇಷ್ಟೆಗಳಿಂದ ಗಂಡನನ್ನು ನಿರುತ್ಸಾಹಗೊಳಿಸಿದರೆ ಆತನು ಏನನ್ನು ಮಾಡಲಾರ. ಸ್ತ್ರೀ ಉತ್ಸಾಹದಿಂದ ಮಾತಾಡುತ್ತಾ ನವಿರಾದ ಚೇಷ್ಟೆಗಳಿಂದ ಲೈಂಗಿಕ್ರೋದ್ರೇಕವನ್ನುಂಟು ಮಾಡಿದರೆ, ಗಂಡನಲ್ಲಿ ಸಾಕಷ್ಟು ಉತ್ಸಾಹ, ಶಕ್ತಿ ತಪ್ಪದೆ ಉಂಟಾಗುತ್ತದೆ. ಹೆಂಡತಿ ಪಕ್ಕ ಸೇರಿದ ಪುರುಷ ಉತ್ಸಾಹದಿಂದ ಮೈಥುನದಲ್ಲಿ ಪಾಲ್ಗೊಳ್ಳುತ್ತಾನೆ.

ಎಷ್ಟೋ ಸ್ತ್ರೀಯರಿಗೆ ರತಿ ಪ್ರಕ್ರಿಯೆಯ ವಿಷಯದಲ್ಲಿ ಅವರ ಪಾತ್ರ ಎಷ್ಟು ಪ್ರಧಾನವಾದ್ದೋ ತಿಳಿಯದು. ಅವರಿಗೆ ರತಿಯಲ್ಲಿ ತೃಪ್ತಿ ಉಂಟಾಗಬೇಕಾದರೆ ಮೊದಲು ಗಂಡನ ಮನಸ್ಸನ್ನು ತಮ್ಮ ಮಾತಿನ ಮೂಲಕ, ಪ್ರೇಮ ಚೇಷ್ಟೆಗಳ ಮೂಲಕ ಉದ್ರೇಕಗೊಳಿಸಬೇಕು; ಆತನಲ್ಲಿ ಲೈಂಗಿಕ ವಿಶ್ವಾಸವನ್ನು ಮೂಡಿಸಬೇಕು. ಉತ್ಸಾಹವನ್ನು ಮೂಡಿಸಿದರೆ ಆತನೊಂದಿಗೆ, ಆಕೆ ಸಹ ಸಾಕಷ್ಟು ತೃಪ್ತಿ-ಸಂತೋಷವನ್ನು ಗಳಿಸಬಹುದು. ಬೆಡ್‌ರೂಮಿನಲ್ಲಿ ಯಾವುದೇ ಕಾರಣಕ್ಕೂ ಗಂಡನ ಕಾಮ ಸಾಮರ್ಥ್ಯದ ಬಗ್ಗೆ ದೂಷಿಸಬಾರದು. ಸ್ತ್ರೀ ಚಟುವಟಿಕೆಯಿಂದ ಮೈಥುನ ಕ್ರಿಯೆಯಲ್ಲಿ ಪಾಲ್ಗೊಂಡರೆ, ಸಹಕಾರದಿಂದ, ಸಹನೆಯಿಂದ ಗಂಡನ ಜೊತೆ ವರ್ತಿಸಿದರೆ ಮೈಥುನ ಯಶಸ್ವಿಯಾಗಿ ನಡೆಯಲು ಅನುಕೂಲವಾಗುತ್ತದೆ.

* * *

೬೦. ರತಿ ವಿಷಯದಲ್ಲಿ ಪುರುಷರ ಸೈಕಾಲಜಿ

ಪುರುಷ ರತಿಯಲ್ಲಿ ಯಾವಾಗಲೂ ಆಕ್ಟೀವ್ ಪಾರ್ಟಿ ತೆಗೆದುಕೊಳ್ಳುತ್ತಾನೆ. ಹೆಂಡತಿಯನ್ನು ಆಲಂಗಿಸಿ ಕೊಳ್ಳುವುದು, ಮುದ್ದಾಡುವುದು, ಉದ್ರೇಕಗೊಳಿಸುವುದು ಸಂಯೋಗ ಮಾಡುವುದು ಹಾಗೂ ಎಲ್ಲದರಲ್ಲೂ ಆಕ್ಟೀವ್ ಆಗಿ ಇರುತ್ತಾನೆ. ತಾನು ರತಿ ವಿಷಯದಲ್ಲಿ ಎಷ್ಟು ಹೆಚ್ಚಾಗಿ ಆಕ್ಟೀವ್ ಆಗಿ ಪಾರ್ಟ್ ತೆಗೆದುಕೊಳ್ಳುತ್ತಾನೋ ಅಷ್ಟೋ ಹೆಚ್ಚಾಗಿ ಪತ್ನಿ ಸಹ ತೆಗೆದು ಕೊಳ್ಳಬೇಕೆಂದು ಆಶಿಸುತ್ತಾನೆ. ಆಕೆ ಸಹ ಆಲಂಗಿಸಿಕೊಳ್ಳಬೇಕು, ಚುಂಬಿಸಬೇಕು, ಉದ್ರೇಕಗೊಳಿಸುವ ಮಾತುಗಳನ್ನು ಆಡಬೇಕೆಂದು, ತನಗೆ ರತಿಯಲ್ಲಿ ಎಷ್ಟು ಆಸಕ್ತಿಯಿದೆ ಎನ್ನುವುದನ್ನು ಚೇಷ್ಟೆಗಳ ಮೂಲಕ ಅಭಿವ್ಯಕ್ತಗೊಳಿಸಬೇಕೆಂದು, ಬೇರೆ ಬೇರೆ ರತಿ ಭಂಗಿಗಳ ವಿಷಯದಲ್ಲೂ ಆಕೆ ಆಸಕ್ತಿ ತೋರಿಸಬೇಕೆಂದು ಪುರುಷ ಆಶಿಸುತ್ತಾನೆ. ನಿಜವಾಗಲೂ ಸ್ತ್ರೀ ಆಕ್ಟೀವ್ ಪಾರ್ಟ್ ತೆಗೆದುಕೊಂಡು ಹಾಗೇ ವ್ಯವಹರಿಸಿದರೆ ಪುರುಷನಲ್ಲಿ ಎಲ್ಲಿಲ್ಲದ ಕಾಮ ಉಂಟಾಗುತ್ತದೆ.
ಆದರಿಂದ ಲೈಂಗಿಕಾ ಸಾಮರ್ಥ್ಯ ಒಂದಕ್ಕಿಂತಲೂ ಹತ್ತರಷ್ಟ ಹೆಚ್ಚಾಗುತ್ತದೆ. ರತಿಯಲ್ಲಿ ಯಾವಾಗಲೂ ಪುರುಷನೇ ಆಕ್ಟೀವ್ ಪಾರ್ಟ್‌ತೆಗೆದುಕೊಂಡು, ಸ್ತ್ರೀ ಕೇವಲ ಸ್ತಬ್ಧಳಾಗಿದ್ದರೆ ಸ್ವಲ್ಪದ ದಿನಗಳ ನಂತರ ರತಿಯ ಬಗ್ಗೆ ಆಸಕ್ತಿ ಶೀತಲಗೊಳ್ಳುತ್ತದೆ. ಅಷ್ಟೇ ಅಲ್ಲದೆ, ಸೆಕ್ಸ್ ವಿಷಯದಲ್ಲಿ ಗಂಡನ ಸೈಕಾಲಜಿಯನ್ನು ತಿಳಿದುಕೊಂಡ, ಪತ್ನಿ ಸಹ ಆಕ್ಟೀವ್ ಪಾರ್ಟ್ ತೆಗೆದುಕೊಂಡರೆ ಸೆಕ್ಸ್ ವಿಷಯದಲ್ಲಿ ಶೀತಲೆ ಉಂಟಾಗುವುದಿಲ್ಲ.

* * *