೪೧. ಸ್ತ್ರೀಯರ ಲೈಂಗಿಕ ತೃಪ್ತಿ

ಡಾ|| ರೊನ್ನಿ ಇಡೆಲ್ಸ್ ಅವರ ಐದು ಹಂತದ ಸೆಕ್ಸುಯಲ್ ಸ್ಯಾಟಿಸ್‌ಫ್ಯಾಕ್ಷನ್ ಟ್ರೈನಿಂಗ್ ಪ್ರೋಗ್ರಾಮ್‌ನಲ್ಲಿ ಸ್ತ್ರೀಯರು ನೀಡಿದ ಪ್ರತಿಕ್ರಿಯೆಯನ್ನು ಇಲ್ಲಿ ನೀಡಲಾಗಿದೆ.

 • ಸೆಕ್ಸ್ ಎನ್ನುವುದು ತಮಾಷೆ, ಉತ್ತೇಜಕ, ಅನುರಾಗದ ಅನುಬಂಧ.
 • ಮೊಟ್ಟಮೊದಲ ಬಾರಿಗೆ ನಾನು ಲೈಂಗಿಕತೆಯ ಬಗ್ಗೆ ಒಳ್ಳೆಯ ಭಾವನೆಯನ್ನು ಪಡೆದೆ.
 • ದೊಡ್ಡ ಅಚ್ಚರಿಯೆಂದರೆ, ನಿಜವಾಗಿಯೂ ನಾನು ಯೌವನದಲ್ಲಿದ್ದಂತಹ ಭಾವನೆಯನ್ನು ಹೊಂದಿದೆ. ನನ್ನ ಗಂಡ ಮತ್ತು ನಾನು ಪುನಃ ಯುವ ಪ್ರೇಮಿಗಳಾದೆವು. ನಾನು ಮತ್ತಷ್ಟು ಹತ್ತಿರವಾದೆವು. ಹೆಚ್ಚಿನ ಕಾಮಕೇಳಿಯಲ್ಲಿ ತೊಡಗಿದೆವು.
 • ಲೈಂಗಿಕ ತೃಪ್ತಿಯಲ್ಲಿ ನನ್ನಲ್ಲಿ ಇತರೆ ಕ್ಷೇತ್ರಗಳ ಬಗ್ಗೆ ಆತ್ಮವಿಶ್ವಾಸ ಹೆಚ್ಚಿತು.

* * *

೪೨. ಹೂವುಗಳ ವಾಸನೆಯ ಮಹತ್ವ

ಮಲ್ಲಿಗೆ, ಜಾಜಿ, ಸಂಪಿಗೆ, ಕನಕಾಂಬರ ಹಾಗೂ ಆಯಾ ಋತುಗಳಲ್ಲಿ ಲಭಿಸುವ ಹೂವುಗಳನ್ನು ಧರಿಸುವ ಭಾರತ ನಾರಿಯ ಅಭ್ಯಾಸ ಅದ್ಭುತವಾದುದ್ದೆಂದು ಈಗ ಆರೋಮಾ ಥೆರಪಿಗಳು ಹೇಳುತ್ತಿದ್ದಾರೆ.

ಹೂವುಗಳ ವಾಸನೆ ದೇಹದ ವ್ಯವಸ್ಥೆ ಮೇಲೆ ಪ್ರಭಾವ ಬೀರುತ್ತದೆ. ಮುಖ್ಯವಾಗಿ ಮೂಗಿಗೆ, ಮಿದುಳಿನ ನಡುವೆ ಇರುವ ನಾಡಿಗಳ ಪ್ರಭಾವ ಬೀರುವುದರಿಂದ ಮನೋಭಾವವನ್ನು ಮಾರ್ಪಡಿಸುವ ಶಕ್ತಿ ಹೂವುಗಳಲ್ಲಿದೆ ಎಂದು ತಿಳಿಸಿದ್ದಾರೆ. ಹೂವಿನ ವಾಸನೆಯಿಂದ ಆಯಾಸಗೊಂಡ ಸ್ನಾಯುಗಳು (ಮಾಂಸ ಖಂಡಗಳು) ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಮನಸ್ಸನ್ನು ಪ್ರಶಾಂತಗೊಳಿಸುತ್ತದೆ.

ಬಾಧೆಯನ್ನು ಕಡಿಮೆ ಮಾಡುತ್ತದೆ. ಅನೇಕ ರೀತಿಯ ವ್ಯಾಧಿಕಾರಕ ಬ್ಯಾಕ್ಟೀರಿಯಾ, ಫಂಗಸ್, ವೈರಸ್‌ಗಳ ಮೇಲೆ ಪ್ರಭಾವ ಬೀರಿ ಅವುಗಳನ್ನು ಸಂಹರಿಸುವ ಶಕ್ತಿ ಈ ಹೂವುಗಳ ವಾಸನೆಗಿದೆ. ಸ್ತ್ರೀಯರ ಆರೋಗ್ಯವನ್ನು ಅಭಿವೃದ್ಧಿ ಪಡಿಸುವಲ್ಲಿ ಹೂವುಗಳ ಪಾತ್ರವಿದೆಯೆಂದು ಅಂಗೀಕರಿಸಿದ್ದಾರೆ. ಹೂವುಗಳನ್ನು ಧರಿಸಿ ಮನೆಯೊಳಗಡೆ ತಿರುಗಾಡುವುದರಿಂದ ಆ ವಾಸನೆಯ ಪ್ರಭಾವ ಮನೆಯಲ್ಲಿರುವವರ ಮೇಲೆ ಹರಡುತ್ತದೆ.

* * *

೪೩. ಕೋಪದಿಂದೆ ಸೆಕ್ಸ್ ಆಸೆ ಕುಗ್ಗಿ ಹೋಗುತ್ತದೆ

ಕೋಪದಿಂದ ಪುರುಷರು ಸಂಸಾರ ಸುಖದಿಂದ ದೂರವಾಗುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ.

ಮನಸ್ಸನ್ನು ಯಾವಾಗಲು ಒತ್ತಡಕ್ಕೆ ಗುರಿಯಾಗಿಸಿಕೊಳ್ಳುವ ಪುರುಷರಲ್ಲಿ ಸೆಕ್ಸ್ ಹಾರ‍್ಮೋನ್ ಟೆಸ್ಟೋಸ್ಟೆರೋನ್ ಸ್ಥಾಯಿ ಕಡಿಮೆಗೊಳ್ಳುವುದನ್ನು ಗಮನಿಸಿದ್ದಾರೆ. ಸೆಕ್ಸ್ ಕೋರಿಕೆಯನ್ನು ಮೂಡಿಸಿ ಸೆಕ್ಸ್‌ನಲ್ಲಿ ಅತ್ಯಂತ ಸುಖವನ್ನು ಹೊಂದುವಂತೆ ಮಾಡುವ ಶಕ್ತಿ ಆ ಹಾರ‍್ಮೋನ್‌ಗಿದೆ. ಅಂತಹ ಟೆಸ್ಟೋಸ್ಟೆರೋನ್ ಹಾರ‍್ಮೋನ್‌ಸ್ಥಾಯಿ ಕಡಿಮೆಯಾದರೆ ಸೆಕ್ಸ್‌ಆನಂದವನ್ನು ಹೊಂದಲಾರದು. ಆದುದರಿಂದ, ಕೋಪವನ್ನು ಕಡಿಮೆ ಮಾಡಿಕೊಳ್ಳಲು ಅಭ್ಯಾಸ ಮಾಡಿ, ರತಿಯಾನಂದವನ್ನು ಪಡೆಯಿರಿ.

* * *

೪೪. ಸೆಕ್ಸೂಚಿ

 • ಬೆಡ್‌ರೂಮಿನಲ್ಲಿ ನಿಮ್ಮ ಸಂಗಾತಿಯ ಜೊತೆ ಸಂಭಾಷಿಸುತ್ತಿರುವಾಗ ಆತ/ಆಕೆಯನ್ನು ಪ್ರೀತಿಯಿಂದ ಆರೈಕೆ ಮಾಡಿ. ಆರೈಕೆಯೆಂದರೆ, ನಿಮ್ಮ ಸಂಗಾತಿಯನ್ನು ಆಲಂಗಿಸುವುದು ಚುಂಬಿಸುವುದು, ಮಸಾಜ್ ಮಾಡುವುದು ಇತ್ಯಾದಿ.
 • ಮಾನಸಿಕವಾಗಿ ವಿವಿಧ ರೀತಿಯ ಲೈಂಗಿಕ ಉತ್ತೇಜನ ಗಳಿಸಿರ. ಅನಂತರ ಸ್ಪರ್ಶಿಸಿರಿ, ಆನಂತರ, ಆಕೆಯ ಪ್ರತಿಕ್ರಿಯೆಯನ್ನು ಆತನ ಪ್ರತಿಕ್ರಿಯೆಯನ್ನು ಗಮನಿಸಿ, ಉತ್ತೇಜನವನ್ನು ಮುಂದುವರೆಸಿರಿ.
 • ಭಾವಪ್ರಾಪ್ತಿಹೊಂದಲು ಆತುರ ಪಡಬೇಡಿ.

* * *

೪೫. ನಿಮ್ಮಾಕೆಯನ್ನು ಸಂತೋಷಗೊಳಿಸಲು

 • ನಿಮ್ಮಾಕೆಯನ್ನು ಬೆಡ್‌ರೂಮಿನಲ್ಲಿ ಚುಂಬಿಸಿರಿ, ಮುದ್ದಾಟದಲ್ಲಿ ತೊಡಗಿರಿ, ನಿಮ್ಮಾಕೆ, ನಿಮಗಿಂತಲೂ ಹೆಚ್ಚಿನ ರತಿಯಾಸೆಯನ್ನು ಹೊಂದಿರಬಹುದು. ಆದುದರಿಂದ, ಅದನ್ನು ಅರ್ಥಮಾಡಿಕೊಂಡು ಆಕೆಯನ್ನು ಪ್ರೀತಿ-ಪ್ರೇಮದಿಂದ ಉತ್ತೇಜಿಸಿರಿ.
 • ಕೆಲವು ಸ್ತ್ರೀಯರಿಗೆ ಏಕನಾನತೆ ಬೇಸರ ಮೂಡಿಸುತ್ತದೆ; ವೈವಿಧ್ಯತೆಯನ್ನು ಅಳವಡಿಸಿಕೊಳ್ಳರಿ.
 • ನಿಮ್ಮಾಕೆ ಆಯಾಸಗೊಂಡಿದ್ದರೆ ಸೆಕ್ಸ್‌ಗಾಗಿ ಆಕೆಯನ್ನು ಬಲಾತ್ಕಾರ ಮಾಡಬೇಡಿ. ಆಕೆ. ಶಾರೀರಿಕವಾಗಿ ವಿಶ್ರಾಂತಿ ಪಡೆದಿದ್ದರೆ ಖಂಡಿತವಾಗಿಯೂ ರತಿ ರುಚಿ ಹೊಂದಲು ಸಿದ್ಧಳಾಗಿಯೇ ಇರುತ್ತಾಳೆ.

* * *

೪೬. ರತಿಲಾಸ್ಯ

ದಂಪತಿಗಳ ನಡುವೆ ಲೈಂಗಿಕ ಔನತ್ಯ ಮತ್ತು ಲೈಂಗಿಕ ಜ್ಞಾನವಿಲ್ಲದಿದ್ದರೆ ಲೈಂಗಿಕತೆಯಲ್ಲಿ ಸೋಲು ಉಂಟಾಗುತ್ತದೆ.

ದಂಪತಿಗಳ ನಡುವೆ ಉತ್ತಮ ಪ್ರೀತಿಯಿದ್ದರೆ, ಉತ್ತಮ ಲೈಂಗಿಕತೆಯನ್ನು ಪರಸ್ಪರ ಕೊಡುಗೆಯಾಗಿ ನೀಡಲು ಸಾಧ್ಯವಾಗುತ್ತದೆ.

ಸ್ಪಷ್ಟವಾದ ಲೈಂಗಿಕ ಮಾಹಿತಿಯಿದ್ದರೆ ದಂಪತಿಗಳು ಲೈಂಗಿಕತೆಯಲ್ಲಿ ಚಟುವಟಿಕೆಯಿಂದ ಪಾಲ್ಗೊಳ್ಳುತ್ತಾರೆ.

ಒಳ್ಳೆಯ ಸೆಕ್ಸ್ ಹಂತ, ಹಂತವಾಗಿ ಸಾಗುವ ಪ್ರಕ್ರಿಯೆಯಾಗಿರುತ್ತದೆ.

ಮೊಟ್ಟಮೊದಲು ದಂಪತಿಗಳು ಭಾವನಾತ್ಮಕ ಸಂಬಂಧಗಳನ್ನು ನಿರ್ಮಾಣ ಮಾಡಿಕೊಳ್ಳಬೇಕು. ಅಲ್ಲದೆ, ವೈಯುಕ್ತಿಕ ಲೈಂಗಿಕಾಸೆಯನ್ನು ಅರ್ಥ ಮಾಡಿಕೊಳ್ಳಬೇಕು. ರತಿಯೇ ಪ್ರೀತಿ, ಪ್ರೀತಿಯೇ ರತಿ! ದಂಪತಿಗಳು, ಪ್ರೀತಿಯನ್ನು ಲೈಂಗಿಕತೆಯ ಮೂಲಕ ಅಭಿವ್ಯಕ್ತಿಗೊಳಿಸಬಹುದು. ಆದರೆ, ಲೈಂಗಿಕತೆಯೊಂದರಿಂದಲೇ ಪ್ರೀತಿಯನ್ನು ಅಭಿವ್ಯಕ್ತಿಗೊಳಿಸಲಾಗುವುದಿಲ್ಲ. ಪ್ರೀತಿಯೊಂದಿಗೆ, ಲೈಂಗಿಕತೆಯನ್ನು ಅಭಿವ್ಯಕ್ತಗೊಳಿಸಿದಾಗ ಅದು ತೃಪ್ತಿಯನ್ನು ನೀಡುತ್ತದೆ.

* * *

೪೭. ಹಸ್ತಮೈಥುನದ ಬಗ್ಗೆ ಒಳ್ಳೆಯ ಸುದ್ದಿಗಳು

ಅದು, ನಾವು ಲೈಂಗಿಕವಾಗಿ ಹೇಗೆ ಕಾರ‍್ಯವನ್ನು ನಿರ್ವಹಿಸುತ್ತೇವೆ ಎಂಬುದನ್ನು ಬೋಧಿಸುತ್ತದೆ.

ಅದು, ನಾವು ಸುರಕ್ಷಿತವಾಗಿ ಭಾವಪ್ರಾಪ್ತಿಯನ್ನು ಹೊಂದಲು ತಿಳಿಸುತ್ತದೆ.

ಅದು, ನಮ್ಮ ಲೈಂಗಿಕತೆಯ ಬಗ್ಗೆ ಹಾಗೂ ಜನನೇಂದ್ರಿಯಗಳ ಬಗ್ಗೆ ಮೆಚ್ಚುಗೆ ಸೂಚಿಸಲು ಸಹಾಯ ಮಾಡುತ್ತದೆ.

ಅದು ನಮ್ಮ ಸ್ವಂತ ಲೈಂಗಿಕ ತೃಪ್ತಿಯ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳುವುದರ ಬಗ್ಗೆ ಬೋಧಿಸುತ್ತದೆ.

ಅದು, ಲೈಂಗಿಕ ಉದ್ವೇಗ (ಟೆನ್ಷನ್‌) ವನ್ನು ನಿವಾರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಹಸ್ತ ಮೈಥುನ ಮಾಡಿಕೊಳ್ಳುವುದರಿಂದ ಎಂಡಾರ‍್ಪಿನ್ಸ್‌ಉತ್ಪತ್ತಿಯಾಗುತ್ತದೆ. ಇದರಿಂದ ತೃಪ್ತಿ ಹಾಗೂ ವಿಶ್ರಾಂತಿಯ ಭಾವನೆ ಮೂಡುತ್ತದೆ. ಈ ಭಾವನೆಯಿಂದಾಗಿ ನಮ್ಮ ರೋಗ ನಿರೋಧಕ ವ್ಯೂಹ ಸಹ ಬಲಗೊಳ್ಳಲು ಸಹಾಯಕವಾಗುತ್ತದೆ. ಅಲ್ಲದೆ, ಜನನೇಂದ್ರಿಯಗಳು ಆರೋಗ್ಯವಾಗಿರುತ್ತವೆ.

ನೆನಪಿನಲ್ಲಿಡಬೇಕಾದ ಅಂಶಗಳು

 • ಸೆಕ್ಸ್‌ಕೇವಲ ಸಂಭೋಗ ಮಾತ್ರವೇ ಅಲ್ಲ.
 • ಯಶಸ್ವಿಯುತ ಲೈಂಗಿಕತೆ ಹಂತ-ಹಂತವಾಗಿ ನೆರವೇರುತ್ತದೆ.
 • ಸಂಗಾತಿಯ ಸಂಬಂಧದಿಂದ ಬಲ ಮತ್ತು ಸ್ಫೂರ್ತಿಯನ್ನು ಪಡೆಯಬೇಕು.
 • ಸ್ತ್ರೀಯರಿಗೆ, ಸೆಕ್ಸ್‌ಗಿಂತಲೂ ಲವ್‌ ಬಹಳ ಮುಖ್ಯ.

ಅಚ್ಚರಿಯಾದರೂ ನಿಜ!

ಹಸ್ತಮೈಥುನ ಅಭ್ಯಾಸ ಇರುವ ಸ್ತ್ರೀಯರು ಬಹಳ ಬೇಗನೆ ಹಾಗೂ ಕಡಿಮೆ ಸಮಯದಲ್ಲಿ ಲೈಂಗಿಕ ಚೇತರಿಕೆಯನ್ನು ಹೊಂದುತ್ತಾರೆ. ಅಲ್ಲದೆ ಹೆಚ್ಚು ಸಾರಿ ಭಾವಪ್ರಾಪ್ತಿ (ಆರ್ಗ್ಯಾಸಮ್ಸ್) ಯನ್ನೂ ಹೊಂದುತ್ತಾರೆ. ಉನ್ನತವಾದ ಲೈಂಗಿಕ ಔನ್ನತ್ಯವನ್ನು ಸಹ ಪಡೆದಿರುತ್ತಾರೆ. ದಾಂಪತ್ಯ ಜೀವನದಲ್ಲಿ ಲೈಂಗಿಕ ತೃಪ್ತಿಯನ್ನು ಹೊಂದಿರುತ್ತಾರೆ.

ನಾನು, ಹಸ್ತಮೈಥುನ ಮಾಡಿಕೊಳ್ಳಲು ಕಾರಣಗಳು

೧. ನನಗೆ ಭಗಾಂಕುರ ಅಥವಾ ಕ್ಲೈಟೋರಿಸ್ ಎಲ್ಲಿದೆ ಎಂಬುದು ಗೊತ್ತಿದೆ. ಆ ಭಾಗದಲ್ಲಿ ನಾನು ಉಜ್ಜಿಕೊಳ್ಳುತ್ತೇನೆ, ಸ್ಪರ್ಶಿಸಿಕೊಳ್ಳುತ್ತೇನೆ.

೨. ನನ್ನ ದೇಹದಲ್ಲಿ ಸಂತೋಷದ ಪ್ರದೇಶಗಳು ಎಲ್ಲಿವೆ ಎಂದು ನನಗೆ ಗೊತ್ತಿದೆ.

೩. ವಿವಿಧ ಸಂದರ್ಭಗಳಲ್ಲಿ ನನಗೆ ಅಗತ್ಯವಾದ ಲೈಂಗಿಕತೆ ಯಾವುದು ಎಂಬುದು ನನಗೆ ತಿಳಿದಿದೆ.

೪. ನನಗೆ ಯೋನಿಯ ತೆರದ ಭಾಗ ಹಾಗೂ ಯೋನಿಯ ಒಳಭಾಗದ ಬಗ್ಗೆ ಗೊತ್ತಿದೆ.

೫. ನನ್ನ ಯೋನಿಯಲ್ಲಿ ಸ್ರಾವ (ಲ್ಯೂಬ್ರಿಕೇಷನ್) ಯಾವಾಗ ಉತ್ಪತ್ತಿಯಾಗುತ್ತದೆ ಎಂಬುದು ತಿಳಿದಿದೆ.

೬. ಶರೀರಕ್ಕೆ ಹೆಚ್ಚು ಆಯಾಸ ಉಂಟಾದಾಗ ಹಾಗೂ ಒತ್ತಡವಿದ್ದಾಗ ಲೈಂಗಿಕಾಸೆ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ ಎಂದು ನನಗೆ ಗೊತ್ತಿದೆ.

೭. ಸಂತೋಷ ಹೊಂದಲು ನಾನು ಏಕಾಗ್ರತೆ ಹೊಂದಬೇಕೆಂಬುದು ನನಗೆ ಗೊತ್ತಿದೆ.

೮. ನನಗೆ ವಿವಿಧ ರೀತಿಯ ಭಾವ ಪ್ರಾಪ್ತಿ (ಆರ್ಗ್ಯಾಸಮ್) ಗಳ ಬಗ್ಗೆ ತಿಳಿದಿದೆ.

* * *

೪೮. ರತಿ ತತ್ವ

ಆರನೇ ಶತಮಾನದಲ್ಲಿದ್ದ ಗ್ರೀಕ್ ತತ್ವಜ್ಞಾನಿ ಒಬ್ಬರು ಲೈಂಗಿಕ ಸಂಭೋಗದಲ್ಲಿ ತೊಡಗಲು ಕೆಲವು ಋತುಗಳು ಅನುಕೂಲ ಕೆಲವು ಸೂಕ್ತದಲ್ಲವೆಂದ ಉಳಿಸಿದ್ದಾರೆ. ಅವರ ಪ್ರಕಾರ ಬೇಸಿಗೆ ಕಾಲದಲ್ಲಿ ಸಂತಾನೋತ್ಪತ್ತಿಗೆ ಪ್ರಯತ್ನಿಸುವುದು ಸೂಕ್ತವಲ್ಲವಂತೆ. ಆದರೆ ಚಳಿಗಾಲ ಅಥವಾ ವಸಂತ ಕಾಲದಲ್ಲಿ ಸಂಭೋಗದಲ್ಲಿ ತೊಡಗುವುದು ಸೂಕ್ತವಂತೆ ಹಾಗೂ ಆರೋಗ್ಯಕರವಂತೆ!

ಯೋನಿಯಲ್ಲಿ ಸ್ಖಲನಗೊಂಡ ವೀರ್ಯ ಏನಾಗುತ್ತದೆ?

ಯೋನಿ ಮಾರ್ಗದಲ್ಲಿ ಸ್ಖಲನಗೊಂಡ ವೀರ‍್ಯ ಬಹಳಷ್ಟು ಮಟ್ಟಿಗೆ ಯೋನಿಯ ಮಾಂಸಖಂಡಗಳಲ್ಲಿ ಜೀರ್ಣವಾಗಿ ಬಿಡುತ್ತದೆ. ವೀರ‍್ಯದಲ್ಲಿನ ಕೆಲವು ವೀರ‍್ಯಾಣುಗಳು ಮಾತ್ರ ಗರ್ಭಕೋಶದೊಳಗಡೆ ಪ್ರವೇಶಿಸುತ್ತವೆ. ಸ್ವಲ್ಪ ಮಟ್ಟಿಗೆ ವೀರ‍್ಯ ಹೊರಗಡೆ ಬಂದು ಬಿಡುತ್ತದೆ.

ಸ್ತ್ರೀಯರಲ್ಲಿ ಕಾಮವನ್ನುಂಟು ಮಾಡುವ ಸೆಕ್ಸ್ ಅಪೀಲ್

ಸ್ತ್ರೀ, ಸೆಕ್ಸಿಯಾಗಿ ಕಂಡರೆ, ಆಕೆಯ ಸ್ತನಗಳು ಎತ್ತರವಾಗಿದ್ದರೆ ಪುರುಷನಲ್ಲಿ ಕಾಮ ಚೇತರಿಕೆ ಉಂಟಾಗುತ್ತದೆ. ಸ್ತ್ರೀಯರು ಪುರುಷನನ್ನು ನೋಡಿದ ಕೂಡಲೇ ಕಾಮ ಉಂಟಾಗುತ್ತದೆ ಎಂಬ ಸಂದೇಹವನ್ನು ಹೊಂದಿರುತ್ತಾರೆ. ಆದರೆ, ವಾಸ್ತವದಲ್ಲಿ ಸ್ತ್ರೀಯನ್ನು ಕಂಡ ಕೂಡಲೇ ಪುರುಷನಲ್ಲಿ ಕಾಮ ಉಂಟಾಗುವಂತೆ, ಸ್ತ್ರೀ ಸುಂದರ ಗಂಡನ್ನು ನೋಡಿದ ಕೂಡಲೇ ಆಕೆಯನ್ನು ಕಾಮ ಉಂಟಾಗುವುದಿಲ್ಲ. ಸ್ತ್ರೀಯಲ್ಲಿ ಕಾಮಭಾವನೆ ಮೂಡಿಸುವಂತಹುದು ಆತನ ಸುಂದರ ರೂಪವಲ್ಲ. ಆತನ ಮಧುರ ಮಾತುಗಳು, ಪುರುಷ ನಡೆಸುವ ಸಂಭಾಷಣೆಯ ಮೂಲಕವೇ ಸ್ತ್ರೀಯಲ್ಲಿ ಕಾಮೋದ್ರೇಕ ಉಂಟಾಗುತ್ತದೆಂದು ಡಾ|| ಸಮರಂ ರವರು ತಿಳಿಸಿದ್ದಾರೆ.

* * *

೪೯. ಲೈಂಗಿಕ ಆಕರ್ಷಣೆಅಂದ

ರತಿಯಲ್ಲಿ ಪುರುಷನ ಪಾತ್ರ ಪ್ರಧಾನವಾದುದ್ದು. ವಿಕಾರವಾಗಿರುವ ಸ್ತ್ರೀಯನ್ನು ನೋಡಿದರೆ ಪುರುಷನಿಗೆ ಯಾವುದೇ ರೀತಿಯ ಲೈಂಗಿಕೋದ್ರೇಕ ಉಂಟಾಗುವುದಿಲ್ಲ. ಪುರುಷನ ಲೈಂಗಿಕೋದ್ರೇಕವೆಲ್ಲಾ ಲೈಂಗಿಕಾಕರ್ಷಣೆಯ ಮೇಲೆ ಆಧಾರಪಟ್ಟಿರುತ್ತದೆ. ಆದುದರಿಂದ, ಎಷ್ಟೇ ಅಂದವಿಲ್ಲದ ಗಂಡಸಾದರೂ ಸೆಕ್ಸ್‌ನಲ್ಲಿ ತೃಪ್ತಿಯನ್ನು ಹೊಂದಲು, ಲೈಂಗಿಕೋದ್ರೇಕ ಉಂಟಾಗಲು ಅಂದವಾದ ಸ್ತ್ರೀಯನ್ನೇ ಹಂಡತಿಯಾಗಬೇಕೆಂದು ಬಯಸುತ್ತಾನೆ. ಅಲ್ಲದೆ, ಯಾವ ಸ್ತ್ರೀಯಾಗಲಿ, ಪುರುಷನಾಗಲಿ ಅವರೆಷ್ಟು ವಿಕಾವಾಗಿದ್ದರು ತಾವು ವಿಕಾರವಾಗಿದ್ದೇವೆಂದು ಭಾವಿಸುವುದಿಲ್ಲ. ಆದರೆ ಅಷ್ಟಾಗಿ ರೂಪವಂತರಲ್ಲವೆಂದು ಅಂದುಕೊಳ್ಳಬಹುದು. ಯಾವ ಸ್ತ್ರೀ ಆಗಲಿ, ಪುರುಷನೇ ಆಗಲಿ, ತಾವು ಕುರೂಪಿಯೆಂದು ಅಂದುಕೊಂಡರೆ ಒಂದು ಕ್ಷಣವೂ ಜೀವಿಸುವುದಿಲ್ಲ. ಇನ್ನೊಬ್ಬರ ಜೊತೆ ಲವಲವಿಕೆಯಿಂದ ಮಾತಾಡಲಾರರು. ಆದುದರಿಂದ, ವಿಕಾರವಾಗಿರುವ ಪುರುಷನಾದರೂ ತನ್ನ ಲೈಂಗಿಕಾನಂದಕ್ಕೋಸ್ಕರ ಅಂದವಾದ ಹೆಂಡತಿಯೇಬೇಕೆಂದು ಕೋರಿಕೊಳ್ಳುತ್ತಾನೆ. ಸ್ತ್ರೀಗೂ ಸಹ ಅಂತ ಕೋರಿಕೆ ಮನಸ್ಸಿನಲ್ಲಿದ್ದರು ಸಾಮಾಜಿಕವಾಗಿ ತನಗೆ ತಕ್ಕನಾದ ಭದ್ರತೆ ಇಲ್ಲದೆ ಇರುವುದರಿಂದ ಆ ಭಾವನೆಯನ್ನು ಅಷ್ಟಾಗಿ ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ. ಅದಕ್ಕೆ ಬದಲಾಗಿ ಅನುರಾಗ ಭಾವನೆಗೆ ಪ್ರಾಧಾನ್ಯತೆಯನ್ನು ಕೊಡುತ್ತಾಳೆ.

* * *

೫೦. ಕಾಮ ಸಾಮರ್ಥ್ಯ ಪ್ರತಿದಿನ ಎಷ್ಟು ಸಾರಿ?

ರತಿಯಲ್ಲಿ ಪ್ರತಿದಿನ ಎಷ್ಟು ಸಾರಿ ಪಾಲ್ಗೊಂಡರೆ ಒಳ್ಳೆಯ ಕಾಮ ಸಾಮರ್ಥ್ಯ ಇದ್ದಂತೆ?

ರತಿಯಲ್ಲಿ ಹೆಚ್ಚು ಸಾರಿ ಪಾಲ್ಗೊಂಡ ಮಾತ್ರಕ್ಕೆ ಕಾಮ ಸಾಮರ್ಥ್ಯವನ್ನು ಅಂದಾಜು ಮಾಡುವುದು ಸರಿಯಲ್ಲ. ರತಿಯಲ್ಲಿ ಪಾಲ್ಗೊಂಡಾಗ ಗಂಡ-ಹೆಂಡತಿ ಇಬ್ಬರಿಗೂ ಸಮಾನ ತೃಪ್ತಿ ಉಂಟಾಗುವುದೆ ಸರಿಯಾದ ರತಿ. ಹೆಂಡತಿಯನ್ನು ಬಾಹ್ಯ ಪ್ರೇರಣೆಯಿಂದ ಪ್ರೇರೇಪಿಸುತ್ತಾ, ಶೀಘ್ರಸ್ಖಲನವಾಗದೆ ನಿರೋಧಿಸುವುದರಿಂದಲೂ ರತಿಯಲ್ಲಿ ತೃಪ್ತಿ ಪಡೆಯುವುದೆ ಸರಿಯಾದ ಕಾಮಸಾಮರ್ಥ್ಯ. ಅದು ಬಿಟ್ಟು ಹೆಂಡತಿಯನ್ನು ತೃಪ್ತಿಪಡಿಸದೆ ಪ್ರತಿ ದಿನ ಎರಡು ಮೂರು ಸಾರಿ ರತಿಯಲ್ಲಿ ಪಾಲ್ಗೊಂಡು ವೀರಸ್ಖಲನದಿಂದ ತೃಪ್ತಿಪಟ್ಟು ಸುಮ್ಮನೆ ಇರುವುದು ಸರಿಯಾದ ರತಿಯಲ್ಲ. ಮನುಷ್ಯ-ಮನುಷ್ಯರ ನಡುವೆ  ಕಾಮಪರವಾದ ಹೆಚ್ಚು ವ್ಯತ್ಯಾಸಗಳಿರುತ್ತವೆ. ಕಾಮ ಸಾಮರ್ಥ್ಯ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಅಷ್ಟೇ ಅಲ್ಲದೆ, ವಾತಾವರಣದ ಪ್ರಭಾವ ದಾಂಪತ್ಯ ಜೀವನದಲ್ಲಿ ಮೇಲೆ ಹೆಚ್ಚಿರುತ್ತದೆ. ಹೆಚ್ಚು ಸಾರಿ ರತಿಯಲ್ಲಿ ಪಾಲ್ಗೊಳ್ಳುವವರು ಒಳ್ಳೆಯ ಕಾಮ ಸಾಮರ್ಥ್ಯ ಹೊಂದಿರುವವರು. ಹೆಚ್ಚು ಸಾರಿ ರತಿಯಲ್ಲಿ ಪಾಲ್ಗೊಳ್ಳದಿದ್ದರೆ ಕಡಿಮೆ ಸಾಮರ್ಥ್ಯವಿರುತ್ತದೆಂದು ಭಾವಿಸಬಾರದು. ತೃಪ್ತಿಯಾಗಿ ಭೋಜನ ಮಾಡಿದವರು ಕೊಂದ ಸಮಯದವರೆಗೂ ಪುನಃ ಭೋಜನವನ್ನು ಕುರಿತು ಆಲೋಚಿಸುವುದಿಲ್ಲವೋ ಅದೇ ರೀತಿಯಲ್ಲಿ ಹೆಚ್ಚು ಮಂದಿ ದಂಪತಿಗಳು ರತಿಯಲ್ಲಿ ಒಂದೆರಡು ಸಾರಿಯೇ ಪೂರ್ತಿ ತೃಪ್ತಿಯನ್ನು ಪಡೆದು ಪುನಃ ತತ್‌ಕ್ಷಣವೇ ಸಂಭೋಗವನ್ನು ಬಯಸುವುದಿಲ್ಲ.

ಅಷ್ಟು ಮಾತ್ರಕ್ಕೆ ಅವರಿಗೆ ಕಾಮ ಸಾಮರ್ಥ್ಯ ಕಡಿಮೆಯೆಂದು ಮಾತ್ರ ಹೇಳಲಾಗುವುದಿಲ್ಲ. ರತಿಯಲ್ಲಿ ಹೆಚ್ಚು ಸಾರಿ ಪಾಲ್ಗೊಳ್ಳುವುದೆನ್ನುವುದು ಆಯಾ ವ್ಯಕ್ತಿಗಳ ಶಾರೀರಿಕ, ಮಾನಸಿಕ ಆರೋಗ್ಯವನ್ನು ಆಧರಿಸಿರುತ್ತದೆ.

* * *