೩೧. ಮಗು ಹುಟ್ಟಿದ ನಂತರ ಯೋನಿ ಒಣಗಿರು (ವೆಜೈನಲ್ ಡ್ರೈನೆಸ್) ವುದನ್ನು ನಿವಾರಿಸಿಕೊಳ್ಳುವುದು ಹೇಗೆ?

ಮಗು ಹುಟ್ಟಿದ ಕೂಡಲೇ ಸ್ತ್ರೀಯರಲ್ಲಿ ಈಸ್ಟ್ರೋಜೆನ್‌ಹಾರ್ಮೋನ್ ಪೂರೈಕೆ ಕಡಿಮೆಗೊಳ್ಳುತ್ತದೆ. ಈಸ್ಟ್ರೋಜೆನ್ ಹಾರ್ಮೋನ್ ಯೋನಿಯಲ್ಲಿರುವ ಗ್ರಂಥಗಳಿಂದ ಲ್ಯೂಬ್ರಿಕೇಷನ್ (ದ್ರವ) ಉತ್ಪತ್ತಿಯಗಲು ಆರಂಭಿಸುವ ತನಕ ಸ್ತ್ರೀ ಯೋನಿಯ ಡ್ರೈನೆಸ್ ಅನುಭವವನ್ನು ಅನುಭವಿಸುತ್ತಾಳೆ. ಮಗು ಹುಟ್ಟಿದ ಒಂದು ತಿಂಗಳ ನಂತರ ಅಥವಾ ಎದೆಹಾಲು ಕುಡಿಯುವುದನ್ನು ನಿಲ್ಲಿಸಿದ ನಂತರ ಈಸ್ಟ್ರೋಜೆನ್ ಉತ್ಪತ್ತಿ ಆರಂಭಗೊಳ್ಳುತ್ತದೆ. ಅಗತ್ಯವಿದ್ದರೆ ಯೋನಿಯ ಡ್ರೈನಸ್ಸನ್ನು ನಿವಾರಿಸಿಕೊಳ್ಳಲು ವಾಟರ್‌ಬೇಸಡ್ ಲ್ಯೂಬ್ರಿಕೆಂಟ್ ಕೆ.ವೈ.ಜೆಲ್ಲಿಯನ್ನು ಯೋನಿಯೊಳಗಡೆ ಸವರಬಹುದು.

* * *

೩೨. ಭಾವಪ್ರಾಪ್ತಿ (ಆರ್ಗ್ಯಾಸಮ್) ಹೊಂದಲು ಅಡಚಣೆಗಳು ಯಾವುವು?

ನೀವು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾಗ ಭಾವಪ್ರಾಪ್ತಿ ಹೊಂದಲು ಅಡಚಣೆ ಉಂಟಾಗುತ್ತದೆ. ನಿಮ್ಮ ಮನಸ್ಸು ಮತ್ತು ಶರೀರ ಸುರಕ್ಷಿತ ಭಾವನೆಯಿಂದ ಕೂಡಿರದಿದ್ದಾಗ, ನೀವು ರಿಲ್ಯಾಕ್ಸ್ ಆಗಿಲ್ಲದಿದ್ದಾಗ, ನಿದ್ರಾಹೀನತೆ ಉಂಟಾಗುತ್ತದೆ. ಅಲ್ಲದೆ, ಭಾವಪ್ರಾಪ್ತಿಯನ್ನು ಹೊಂದಲು ಅಡಚಣೆ ಉಂಟಾಗುತ್ತದೆ. ವಿಶ್ರಾಂತಿ, ಪಡೆದು, ಮನಸ್ಸು ಮತ್ತು ಶರೀರದ ಉದ್ವೇಗವನ್ನು ನಿವಾರಿಸಿಕೊಳ್ಳುವುದರಿಂದ ರತಿ ಭಾವಪ್ರಾಪ್ತಿ ಹೊಂದಲು ಸಾಧ್ಯ.

* * *

೩೩. ದಂಪತಿಗಳ ನಡುವೆ ಕಾಮಕಲ್ಪ ಭ್ರಮೆಯ ಅವಶ್ಯಕತೆ

ಸೆಕ್ಸ್‌ಫ್ಯಾಂಟಿಸಿಗಳನ್ನು ಸಂಗಾತಿಯ ಜೊತೆ ಹಂಚಿಕೊಳ್ಳಲೇಬೇಕೆಂಬ ನಿಯಮವೇನಿಲ್ಲ. ಅದು  ಖಾಸಗಿ ವಿಷಯವಾಗಿರುವುದರಿಂದ ಅದರ ಬಗ್ಗೆ ಹೇಳು ಎಂದು ಒತ್ತಾಯಿಸಬಾರದು.

ಸ್ವಲ್ಪ ಹೆಚ್ಚು ಕಡಿಮೆ ಎಲ್ಲರೂ ಕಾಲಕಲ್ಪಭ್ರಮೆಗಳನ್ನು ಹೊಂದಿರುತ್ತಾರೆ. ಆಶ್ಚರ್ಯವೆಂದರೆ ಸೆಕ್ಸ್ ಫ್ಯಾಂಟಸಿ ನಿಜಜೀವನದಲ್ಲಿ ಘಟನೆಗಳಿಂದ ಕೂಡಿದ್ದರೂ ಅದನ್ನು ಅಸ್ವಾಭಾವಿಕವೆಂದು ಭಾವಿಸಲ್ಪಡುತ್ತದೆ.

ಮನಸ್ಸು, ದೇಹದ ಬಹಳ ಪ್ರಮುಖವಾದ ಕಾಮಕೇಂದ್ರವಾಗಿರುತ್ತದೆ. ಸೆಕ್ಸ್ ಫ್ಯಾಂಟಸಿ ಗಳಿಲ್ಲದಿದ್ದರೆ ಸೆಕ್ಸ್ ಬರಡು ಎನಿಸುತ್ತದೆ. ಯಾಂತ್ರಿಕವೆನಿನಿಸಿಕೊಳ್ಳುವುದಲ್ಲದೆ, ನಿರಾಸಕ್ತಿಯನ್ನು ಮೂಡಿಸುತ್ತದೆ. ಲೈಂಗಿಕ ತೊಡಕುಗಳನ್ನು ಹೊಂದಿರುವ ಸ್ತ್ರೀ- ಪುರುಷರು ಬಹಳ ವಿರಳವಾಗಿ ಸೆಕ್ಸ್‌ಫ್ಯಾಂಟಸಿಗಳನ್ನು ಹೊಂದಿರುತ್ತಾರೆಂದು ಸಂಶೋಧನೆಗಳಿಂದ ತಿಳಿದು ಬಂದಿರುತ್ತದೆ.

ಅದೇ ರೀತಿ ಲೈಂಗಿಕತೆಯ ಬಗ್ಗೆ ನಿರಾಸಕ್ತಿ ಹೊಂದಿರುವವರು ಸಹ ಸೆಕ್ಸ್ ಫ್ಯಾಂಟಸಿಯಲ್ಲಿ ತೊಡಗುವುದಿಲ್ಲವಾದ್ದರಿಂದ ಅವರಲ್ಲಿ ಅಪರಾಧೀ ಭಾವನೆಗಳು ಮೂಡುತ್ತವೆ. ಕೆಲವು ಸೆಕ್ಸ್ ಥೆರಪಿಸ್ಟ್‌ಗಳು ಸ್ತ್ರೀ – ಪುರುಷರಿಗೆ ಕಾಮಕಲ್ಪ ಭ್ರಮೆಗಳಲ್ಲಿ ಹೇಗೆ ತೊಡಗಬೇಕೆಂಬುದನ್ನು ತಿಳಿಸಿ, ಅವರ ಲೈಂಗಿಕ ಸಮಸ್ಯೆಗಳ ನಿವಾರಣೆಗೆ ನೆರವಾಗುತ್ತರೆ. ಭಾವಪ್ರಾಪ್ತಿ ಅಥವಾ ಆರ್ಗ್ಯಾಸಮ್ ಅನ್ನು ಹೊಂದದ ಸ್ತ್ರೀಯರು ಲೈಂಗಿಕ ಸಂಭೋಗದ ಅವಧಿಯಲ್ಲಿ ಕಾಮಕಲ್ಪ ಭ್ರಮೆಯಲ್ಲಿ ತೊಡಗುವುದರಿಂದ ಭಾವಪ್ರಾಪ್ತಿಯನ್ನು ತಲುಪಲು ಸಾಧ್ಯವಾಗುತ್ತದೆ.

ಕಾಮಕಲ್ಪಭ್ರಮೆಯ ಕಾರ್ಯ

ಕಾಮಕಲ್ಪಭ್ರಮೆಯ ವಿವಿಧ ರೀತಿಯಲ್ಲಿ ನೆರವಾಗುತ್ತದೆ ಶೇಕಡಾ ೭೧ ಮಂದಿ ಪುರುಷರು ಹಾಗೂ ಶೇಕಡಾ ೭೨ ಮಂದಿ ಸ್ತ್ರೀಯರು ಕಾಮಕಲ್ಪಭ್ರಮೆಯಿಂದ ತಮ್ಮ ಲೈಂಗಿಕ ಚೇತರಿಕೆಯನ್ನು ಅಧಿಕಗೊಳಿಸಕೊಂಡರೆಂದು ಅಧ್ಯಯನವೊಂದು ತಿಳಿಸಿದೆ.

ಸೆಕ್ಸ್‌ಫ್ಯಾಂಟಸಿಗಳು ಪೂರ್ಣವಾಗಿ ಸುರಕ್ಷಿತ ಹಾಗೂ ಖಾಸಗಿ ವಿಷಯವಾಗಿರುತ್ತದೆ. ನಿಮ್ಮ ಲೈಂಗಿಕ ಒತ್ತಡ ಮತ್ತು ಉದ್ವೇಗವನ್ನು ಸೆಕ್ಸ್ ಫ್ಯಾಂಟಸಿಯ ಮೂಲಕ ನಿವಾರಿಸಕೊಳ್ಳಬಹುದು. ಆದರೆ, ಆ ಫ್ಯಾಂಟಸಿಗಳಿಂದ ಇತರರಿಗೆ ಹಾನಿ ಉಂಟಾಗಬಾರದು; ಅಪಾಯವನ್ನು ಉಂಟುಮಾಡಬಾರದು.

ಸ್ತ್ರೀಯರು ಸಾಮಾನ್ಯವಾಗಿ ತಮಗೆ ಪರಿಚಯ ಇರುವವರನ್ನು ತಮ್ಮ ಕಾಮಕಲ್ಪಭ್ರಮೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಸೆಕ್ಸ್ ಫ್ಯಾಂಟಸಿಗಳನ್ನು ಸಂಗಾತಿಯ ಜೊತೆ ಹಂಚಿಕೊಳ್ಳಲೇಬೇಕೆಂಬ ನಿಯಮವೇನಿಲ್ಲ. ಅದು ಖಾಸಗಿ ವಿಷಯವಾಗಿರುವುದರಿಂದ ಅದರ ಬಗ್ಗೆ ಹೇಳು ಎಂದು ಒತ್ತಾಯಿಸಬಾರದು.

* * *

೩೪. ಪ್ರೇಮ ದಾಂಪತ್ಯದ ಮಹತ್ವ

ನಾವು ಹೊಂದಿರುವ ಗುಣಕಾರಿ ಶಕ್ತಿ ಬಲವಾದ ಮೂಲ ನಮ್ಮ ಲೈಂಗಿಕತೆಯಾಗಿದೆ. ನೀವು, ಲೈಂಗಿಕತೆಯನ್ನು ನಿಮ್ಮ ಬದುಕಿನಲ್ಲಿ ಆರೋಗ್ಯಕರವಾಗಿ ಬಳಸಿಕೊಳ್ಳದಿದ್ದರೆ ಅದು ದುರಂತವನ್ನು ಉಂಟು ಮಾಡುತ್ತದೆ.

ಲೈಂಗಿಕತಯೆನ್ನು ಹತೋಟಿಯಲ್ಲಿಟ್ಟುಕೊಳ್ಳದೆ, ಸ್ವೇಚ್ಛೆಯಾಗಿ ಬಳಸಿಕೊಂಡರೆ ಅನೇಕ ತಪ್ಪುಗಳನ್ನು ಪಾಪಗಳನ್ನು ಮಾಡುತ್ತ ಹೋಗುತ್ತೇವೆ.

ಒಟ್ಟಾರೆ, ಮಾವನ ಜೀವನದ ಅಭಿವೃದ್ಧಿಯಲ್ಲಿ ಲೈಂಗಿಕತೆ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ದಂಪತಿಗಳ ನಡುವಿನ ಪ್ರೀತಿಯ ಲೈಂಗಿಕತೆ ಅವರ ಮನಸ್ಸು-ಸ್ಫೂರ್ತಿ ಮತ್ತು ಶಾರೀರಿಕ ಕ್ರಿಯೆಯಾಗಿರುತ್ತದೆ. ಗಂಡ – ಹೆಂಡತಿ ನಡುವಿನ ಸಾಮೀಪ್ಯ ಸಂಬಂಧ, ದಾಂಪತ್ಯ ಸಂಬಂಧದ ಗುಣಮಟ್ಟವನ್ನು ಅಭಿವೃದ್ಧಿಗೊಳಿಸುತ್ತದೆ. ಪ್ರೀತಿಯ ಲೈಂಗಿಕತೆ ಮನಸ್ಸು ಮತ್ತು ಆಧ್ಯಾತ್ಮಿಕ ಮನೋಭಾವಗಳೆರಡರ ಸಮ್ಮಿಲನವಾಗಿರುತ್ತದೆ. ಅಲ್ಲದೆ, ಅದೊಂದು ಸಕಾರಾತ್ಮಕ ಒತ್ತಡವಾಗಿರುತ್ತದೆ.

ಪ್ರೇಮದ ಲೈಂಗಿಕತೆ, ದಂಪತಿಗಳ ತತ್‌ಕ್ಷಣದ ಶಾರೀರಿಕ ಮತ್ತು ಭಾವನಾತ್ಮಕ ತೃಪ್ತಿಯನ್ನು ಉಂಟು ಮಾಡುತ್ತದೆ. ಸ್ವಯಂ ಔನ್ನತ್ಯ ಭಾವನೆ ಮತ್ತು ಆತ್ಮವಿಶ್ವಾಸವನ್ನು ಉಂಟು ಮಾಡುತ್ತದೆ. ಜೊತೆಗೆ ಆಧ್ಯತ್ಮಿಕ ಆದರ್ಶಗಳನ್ನು ಅಳವಡಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಪ್ರೇಮ ದಾಂಪತ್ಯ ಉತ್ತಮ ಆರೋಗ್ಯ ಮತ್ತು ಆಯಸ್ಸನ್ನು ವೃದ್ಧಿಗೊಳಿಸುತ್ತದೆ.

ಪ್ರೀತಿ ಮತ್ತು ಸಾಮೀಪ್ಯ, ಅನಾರೋಗ್ಯದ ಮೂಲವು ಆಗಬಹುದು; ಅನುರಾಗದ – ಆನಂದದ ಮೂಲವೂ ಆಗಬಹುದು.

* * *

೩೫. ಪ್ರೀತಿಯ ಬೆಸುಗೆ

ಪ್ರೀತಿಯ ಲೈಂಗಿಕ ಕ್ರಿಯೆಗಳ ದಂಪತಿಗಳಲ್ಲ ಮೂರು ಹಂತಗಳಲ್ಲಿ ನಡೆಯುತ್ತವೆ. ಅವುಗಳೆಂದರೆ ಶರೀರ, ಮನಸ್ಸು ಮತ್ತು ಸಂಬಂಧಗಳು.

  • ಶರೀರ : ಪ್ರೀತಿಯ ಸಂಬಂಧಗಳು ದಂಪತಿಗಳ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ. ನಿಮ್ಮ ಶರೀರದ ರಕ್ತ ಚಲನಾಂಗವ್ಯೂಹದ ಕ್ರಿಯೆಯನ್ನು ಅಭಿವೃದ್ಧಿಗೊಳಿಸುತ್ತದೆ.
  • ಮನಸ್ಸು : ನಿಮ್ಮ ಆಸೆ ಆಕಾಂಕ್ಷೆಗಳನ್ನು ಹೇಗೆ ದೃಶ್ಯೀಕರಣಗೊಳಿಸಿ ಕೊಳ್ಳಬೇಕೆಂಬುದನ್ನು ಪ್ರೀತಿಯ ಭಾವನೆಗಳಿಂದ ನಿಮ್ಮ ಮನಸ್ಸಿನಲ್ಲಿ ಮೂಡಿಸುತ್ತದೆ. ನಿಮ್ಮ ಮನಸ್ಸನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಕಲಿಯುತ್ತೀರಿ.
  • ಸಂಬಂಧ : ಸಂಬಂಧ ಸಾಮೀಪ್ಯದ ಸಂಪರ್ಕವನ್ನು ಅಧಿಕಗೊಳಿಸುತ್ತದೆ. ಅಲ್ಲದೆ, ನಂಬಿಕೆ ಮತ್ತು ಗೌರವವನ್ನು ಮೂಡಿಸುತ್ತದೆ. ಬೇರೆಯವರ ಜೊತೆಗೆ ಹೇಗೆ ಭಿನ್ನವಾಗಿ ವರ್ತಿಸಬೇಕೆಂಬುದನ್ನು ಕಲಿಯುತ್ತೀರಿ. ನಿಮಗೆ ಪ್ರೀತಿ, ಸಂತೋಷ ಮತ್ತು ಸಫಲತೆಯ ಅನುಭವವಾಗುತ್ತದೆ. ಅಲ್ಲದೆ ಪ್ರೀತಿಯ ದಾಂಪತ್ಯದಲ್ಲಿ ಬಾಂಧವ್ಯ ನಿಕಟವಾಗಿ ವೃದ್ಧಿಗೊಳ್ಳುತ್ತದೆ ಎಂಬ ಪ್ರಜ್ಞೆಯೂ ಮೂಡುತ್ತದೆ.

* * *

೩೬. ಒಂದು, ಎರಡು, ಮೂರುರತಿಕೂಟ ಮುನ್ನಲಿವು (ಫೋರ್ಪ್ಲೇ) ಅಗತ್ಯತೆ!

ಫೋರ್‌ಪ್ಲೇ ಅಥವಾ ಸಂಭೋಗ ಪೂರ್ವ ಪ್ರೇಮದಾಟ ’ರತಿ’ಯ ಬಹಳ ಪ್ರಮುಖವಾದ ಅನುರಾಗ ಕ್ರಿಯೆಯಾಗಿರುತ್ತದೆ. ಕೆಲವು ವಿವಾಹಿತ ಸ್ತ್ರೀಯರನ್ನು ಫೋರ್‌ಪ್ಲೇ ಎಷ್ಟು ಹೊತ್ತು ನಡೆದರೆ ಚೆನ್ನಾಗಿರುತ್ತದೆ ಎಂದು ಕೇಳಿದಾಗ, ಅವರು ಸರಾಸರಿ ೧೭ ನಿಮಿಷಗಳಾದರೂ ನಡೆಯಬೇಕೆಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಡಾ|| ಕಿನ್ಸೆಯ ಅಧ್ಯಯನದಲ್ಲಿ ಶೇಕಡಾ ೭.೭ ಮಂದಿ ಪುರುಷರು ತಮ್ಮ ಸಂಗಾತಿಯ ಜೊತೆ ೨೧ ನಿಮಿಷಗಳ ಕಾಲ ಫೋರ್‌ಪ್ಲೇ ನಡೆಸಿರುವುವುದಾಗಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ಸ್ತ್ರೀಯರಲ್ಲಿ ಲೈಂಗಿಕ ಪ್ರಕ್ರಿಯೆಯ ನಿಧಾನವಾಗಿ ಉಂಟಾಗುವುದರಿಂದ ಫೋರ್‌ಪ್ಲೇ ಹೆಚ್ಚು ಹೊತ್ತು ನಡೆಯುವುದು ಅತ್ಯಗತ್ಯ. ಲೈಂಗಿಕ ಸಂಭೋಗದಿಂದ ಮಾತ್ರವೇ ಸ್ತ್ರೀಯರು ಭಾವಪ್ರಾಪ್ತಿಯನ್ನು ತಲುಪುವುದಿಲ್ಲವಾದರಿಂದ, ಸಂಭೋಗ ಪೂರ್ವ ರತಿಕೇಳಿಯನ್ನು ಹೆಚ್ಚು ಸಮಯ ನಡೆಸಬೇಕಾದುದು ಪ್ರತಿಯೊಬ್ಬ ಪುರುಷನ ಆದ್ಯ ಕರ್ತವ್ಯವಾಗಿರುತ್ತದೆ.

* * *

೩೭. ಶೃಂಗಾರ ಎಂದರೇನು?

ಇಂಗ್ಲಿಷಿನ ಎರಾಟಿಕ್ ಶಬ್ದಕ್ಕೆ ಕನ್ನಡದಲ್ಲಿ ಕಾಮ ಸಂಬಂಧ, ಪ್ರಣಯ ಸಂಬಂಧ, ಶೃಂಗಾರ ಎನ್ನುತ್ತಾರೆ.

ದಂಪತಿಗಳ ನಡುವೆ ಏಕಾಂತದಲ್ಲಿ ವಿಶೇಷವಾಗಿ ಬೆಡ್‌ರೂಮಿನಲ್ಲಿ ನಡೆಯುವ ಪ್ರೇಮ – ಪ್ರಣಯದಾಟವನ್ನೇ ’ಶೃಂಗಾರ’ ಎಂದು ಕರೆಯಬಹುದು.

’ಶೃಂಗಾರ’ – ದಂಪತಿಗಳ ನಡುವೆ ನಾವಿನ್ಯತೆಯನ್ನು ನಾಜೂಕನ್ನು ನಯ – ವಿನಯವನ್ನು ಮೂಡಿಸುತ್ತದೆ. ಅಲ್ಲದೆ, ದೈನಂದಿನ ಜೀವನದಲ್ಲಿ ಉಲ್ಲಾಸ – ಉತ್ಸಾಹವನ್ನು ತುಂಬುತ್ತದೆ

’ಶೃಂಗಾರ’ – ಸ್ತ್ರೀ – ಪುರುಷರಿಬ್ಬರ ’ಶರೀರ’ದಲ್ಲಿ ರತಿ ಭಾವನೆಗಳಿಗೆ ಚಾಲನೆಯನ್ನು ನೀಡುತ್ತದೆ, ಕ್ರಿಯಾಶೀಲರನ್ನಾಗಿ ಮಾಡುತ್ತದೆ.

ಶೃಂಗಾರ ರಹಿತ ದಾಂಪತ್ಯದಲ್ಲಿ ’ಲವ್‌’ನ ಲಾಲಿತ್ಯವಿರುವುದಿಲ್ಲ.

ನಿಸ್ವಾರ್ಥ ಪ್ರೇಮಿ

– ನಿಸ್ವಾರ್ಥ ಪ್ರೇಮಿ ತನ್ನ ಸಂಗಾತಿಯನ್ನು ಹೇಗೆ ಉತ್ತೇಜಿಸಬೇಕು ಎಂಬುದನ್ನು ತಿಳಿದಿರುತ್ತಾನೆ.

– ತನ್ನ ಸಂಗಾತಿಯ ಲೈಂಗಿಕ ಆಸೆಯನ್ನು ಅರಿತು ಜಾಣ್ಮೆ ಮತ್ತು ಊಹೆಯಿಂದ ಆಕೆ ತೃಪ್ತಿಹೊಂದುವಂತೆ ಮಾಡುತ್ತಾನೆ.

* * *

೩೮. ಗುಡ್ ಸೆಕ್ಸ್ ಅಂದರೆ ಯಾವುದು?

ದಂಪತಿಗಳಿಬ್ಬರು ಪರಸ್ಪರ ಸಂತೋಷಗೊಳ್ಳುವುದನ್ನೆ ಒಳ್ಳೆಯ ಸೆಕ್ಸ್ ಎನ್ನಬಹುದು. ಇದರ ಪೂರ್ಣ ಎಂಜಾಯ್‌ಮೆಂಟ್‌ಗೆ ಪರಸ್ಪರ ಸಂಗಾತಿಗಳು ತಮಗೆ ತಾವೆ ನಿರ್ದೇಶಿಸಿಕೊಳ್ಳಬೇಕು.

ಯಾವ ಪುರುಷನಿಗೂ ತನ್ನ ಹೆಂಡತಿಗೆ ಏನು ಬೇಕು? ಯಾವುದು ಬೇಕು ಮತ್ತು ಆಕೆಯ ಭಾವನೆಗಳೇನು ಎಂಬುದು ತಿಳಿದಿರುವುದಿಲ್ಲ.

ಕೆಲವು ಪುರುಷರಿಗೆ ಸ್ತ್ರೀಯ ಸ್ತನಗಳು ಉನ್ನತ ಕಾಮನೆಯ ಕೇಂದ್ರವಾಗಿರುತ್ತದೆ. ಅನೇಕ ಸ್ತ್ರೀಯರು ಸ್ತನಗಳ ಉತ್ತೇಜನದಿಂದಲೆ ಲೈಂಗಿಕ ಚೇತರಿಕೆಯನ್ನು ಹೊಂದುತ್ತಾರೆ. ಆದರೆ, ಕೆಲವು ಸ್ತ್ರೀಯರು ಸ್ತನಗಳ ಉತ್ತೇಜನವನ್ನು ಬಯಸುವುದಿಲ್ಲ ಹಾಗೂ ಉತ್ತೇಜನಗೊಳ್ಳುವುದು ಇಲ್ಲ. ಸ್ತನಗಳ ಉತ್ತೇಜನ ಇಷ್ಟಪಡದ ಸ್ತ್ರೀಯರು ಯಾವುದರಿಂದ ತಮಗೆ ಉತ್ತೇಜನ ಲಭಿಸುತ್ತದೆ ಎಂಬುದನ್ನು ತಮ್ಮ ಗಂಡನಿಗೆ ತಿಳಿಸುವುದು ಅತ್ಯಗತ್ಯ. ಚುಂಬನ ಮತ್ತು ಮುದ್ದಾಟದ ನಂತರ ಸ್ತ್ರೀ ತನ್ನ ಜನನೇಂದ್ರಿಯಗಳ ಬಳಿ ಉತ್ತೇಜನವನ್ನು ಬಯಸುತ್ತಾಳೆಂದು ಲೈಂಗಿಕ ತಜ್ಞರ ಅಭಿಮತ.

* * *

೩೯. ಮನೋಭಾವ ಮತ್ತು ಸೆಕ್ಸ್

ಪುರುಷರು ಏನೇ ಭಾವಿಸಲಿ, ಅನೇಕ ಸ್ತ್ರೀಯರು ರಸಭಾವ ಮತ್ತು ಬಾಂಧವ್ಯದ ಬೆಸುಗೆ ಹೊಂದಲು ಲೈಂಗಿಕ ಅನುಭವವನ್ನು ಬಯಸುತ್ತಾರೆ. ಈ ಸ್ತ್ರೀಯರು ಸೆಕ್ಸ್‌ನ್ನು ಜನನೇಂದ್ರಿಯಗಳ ಸಂಪರ್ಕ ಎಂದು ಭಾವಿಸದೆ, ಸಂತೋಷದ ಆಲೋಚನೆಯನ್ನಾಗಿ ಹಾಗೂ ಮನೋಭಾವಗಳನ್ನು ಹಂಚಿಕೊಳ್ಳಲು, ಸಾಮೀಪ್ಯದ ಭಾಗವನ್ನಾಗಿ ಇಚ್ಛಿಸುತ್ತಾರೆ. ಅವರು ಸಂತೋಷವನ್ನು ಕೊಡುವುದರಿಂದ ಮಾತ್ರ ಸಂತೋಷಗಳಿಸಲು ಸಾಧ್ಯ ಎಂದು ಭಾವಿಸುತ್ತಾರೆ. ಭಾವ-ಮನೋಭಾವ ಒಳಗೊಂಡಾಗ ಮಾತ್ರ ಸೆಕ್ಸ್ ಎಂಜಾಯ್‌ಮೆಂಟ್ ಲಭಿಸುತ್ತದೆ.

ಕೆಲವು ದಂಪತಿಗಳು ಬೆಡ್‌ರೂಮಿನಲ್ಲಿ ತಮಾಷೆ ಸೆಕ್ಸ್ (ಫನ್‌ಸೆಕ್ಸ್) ನಿಂದ ಮಹತ್ವವಾದ ಸೆಕ್ಸುಯಲ್ ಪ್ಲೆಷರನ್ನು ಹೊಂದುತ್ತಾರೆ.

* * *

೪೦. ಸ್ಪರ್ಶದ ಪ್ರಯೋಜನಗಳು

ದಂಪತಿಗಳು ಏಕಾಂತದಲ್ಲಿ ರತಿ ಕ್ರಿಯೆಯಲ್ಲಿ ತೊಡಗುವ ಮೊದಲು ಪರಸ್ಪರ ಸ್ಪರ್ಶಿಸಿಕೊಳ್ಳುವುದರಿಂದ ಶಾರೀರಿಕ ವಿಶ್ರಾಂತಿ ಲಭಿಸುತ್ತದೆ. ಅಲ್ಲದೆ, ಮನಸ್ಸು ರತಿಗೆ ಸಿದ್ಧಗೊಳ್ಳಲು ಅನುಕೂಲವಾಗುತ್ತದೆ.

ಸ್ಪರ್ಶ ಮತ್ತು ವಿಶ್ರಾಂತಿ ಒಟ್ಟಾಗಿ ಸಾಗಬೇಕು. ನಿಜವಾದ ಸ್ಪರ್ಶ ಶರೀರದಲ್ಲಿ ಗುಣಕಾರಿ ಶಕ್ತಿಯನ್ನು ಮೂಡಿಸುತ್ತದೆ.

ಗಂಡ-ಹೆಂಡತಿ, ಬೆಡ್‌ರೂಮಿನಲ್ಲಿ ಮೈ ಚರ್ಮಗಳನ್ನು ತಾಕಿಸಿಕೊಳ್ಳುವುದರಿಂದ. ಸ್ಪರ್ಶಿಸುವುದರಿಂದ, ಉಜ್ಜುವುದರಿಂದ, ಮಸಾಜ್ ಮಾಡುವುದರಿಂದ ಮಾನಸಿಕ – ಶಾರೀರಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.

ಲೈಂಗಿಕ ಚಟುವಟಿಕೆಗೆ, ಸ್ಪರ್ಶ ಬಲವಾದ ಪ್ರೇರಣೆಯನ್ನುಂಟು ಮಾಡುತ್ತದೆ. ಸ್ಪರ್ಶದಿಂದ ಪತಿ- ಪತ್ನಿಯರಿಬ್ಬರು ಸುಲಭವಾಗಿ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

ಲೈಂಗಿಕ ಚಟುವಟಿಕೆಗೆ, ಸ್ಪರ್ಶ ಬಲವಾದ ಪ್ರೇರಣೆಯನ್ನುಂಟು ಮಾಡುತ್ತದೆ. ಸ್ಪರ್ಶದಿಂದ ಪತಿ- ಪತ್ನಿಯರಿಬ್ಬರು ಸುಲಭವಾಗಿ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

ಗಂಡ – ಹೆಂಡತಿ ಸಾಮೀಪ್ಯ ಪ್ರದೇಶದಲ್ಲಿ ಸ್ಪರ್ಶಿಸುವುದರಿಂದ ಸಾಮಿಪ್ಯ ಆಲೋಚನೆಗಳು ಮತ್ತು ಭಾವನೆಗಳು ಮೂಡುತ್ತದೆ. ಸ್ಪರ್ಶ, ದಂಪತಿಗಳಲ್ಲಿ ಸಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ. ಅಲ್ಲದೆ, ವಿಶ್ರಾಂತಿಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಪರೋಕ್ಷವಾಗಿ ರೋಗ ನಿರೋಧಕ ವ್ಯೂಹದ ಮೇಲೆ ಪರಿಣಾಮವನ್ನು ಬೀರುತ್ತದೆ.

ಸ್ಪರ್ಶ, ಪತಿ-ಪತ್ನಿಯಲ್ಲಿ ವಿಶ್ವಾಸ, ಆಸೆ, ಮೆಚ್ಚುಗೆ ಮತ್ತು ಸಂತೋಷವನ್ನುಂಟು ಮಾಡುತ್ತದೆ.

* * *