೨೧. ರತಿ ಪ್ರಶ್ನೆ ಉತ್ತರ

ಸ್ತ್ರೀ-ಪುರುಷರ ನಡುವಿನ ವ್ಯತ್ಯಾಸವೇನು?

ಪುರುಷನ ಲೈಂಗಿಕತೆ ಆತನ ದೇಹವನ್ನು ಅವಲಂಬಿಸಿರುತ್ತದೆ. ಆತನಿಗೆ ಉದ್ರೇಕ ಉಂಟಾದಾಗ ಮಾತ್ರ ಲೈಂಗಿಕತೆಯನ್ನು ತೊಡಗಬಲ್ಲನು. ಸ್ತ್ರೀಯರ ಲೈಂಗಿಕತೆ ಆಕೆಯ ಮನಸ್ಸನ್ನು ಅವಲಂಬಿಸಿರುತ್ತದೆ. ಆಕೆಯ ಸೆಕ್ಸ್ ಪ್ರೀತಿಯ ಜೊತೆಗೆ ಬಂಧನವನ್ನು ಹೊಂದಿರುತ್ತದೆ. ಸ್ತ್ರೀಗೆ ರತಿಕೂಟ ಮುನ್ಲಿವು ಅಥವಾ ಲವ್ ಪ್ಲೇ ಇಲ್ಲದಿದ್ದರೆ ಆಕೆ ಲೈಂಗಿಕತೆಗೆ ಸಿದ್ಧವಾಗುವುದಿಲ್ಲ. ಪುರುಷನಿಗೆ ಲೈಂಗಿಕತೆಗಾಗಿ ಪ್ರೀತಿಯ ಭಾವನೆ ಅಗತ್ಯ. ಸ್ತ್ರೀಗೆ ಪ್ರೀತಿಯ ಭಾವನೆಯಿದ್ದರೆ ಮಾತ್ರ ಲೈಂಗಿಕತೆಯನ್ನು ಹೊಂದಲು ಪ್ರತಿಕ್ರಿಯೆಯನ್ನು ತೋರುತ್ತಾಳೆ.

ಪುರುಷ ನೋಡಲು ಇಷ್ಟಪಡುತ್ತಾನೆ. ಸ್ತ್ರೀಗೆ ಸ್ಪರ್ಶದ ಅಗತ್ಯವಿರುತ್ತದೆ.

ನನ್ನ ಪತಿ ಪುರುಷ ಮೇಲಿನ ಭಂಗಿಯಲ್ಲಿ ಭಾವಪ್ರಾಪ್ತಿ (ಆರ್ಗ್ಯಾಸಮ್)ಯನ್ನು ತಲುಪುವುದಿಲ್ಲ. ನಾವು ಮತ್ಯಾವುದನ್ನು ಪ್ರಯತ್ನಿಸಬಹುದು?

– ಬಹಳ ಸರಳವಾದ ಆಸನವೆಂದರೆ ಸ್ತ್ರೀ ಪ್ರಧಾನ ಲೈಂಗಿಕಾಸಾನ. ಈ ಆಸನದಿಂದ ದಂಪತಿಗಳಿಬ್ಬರು ಸಮವಾದ ತೃಪ್ತಿಯನ್ನು ಹೊಂದಬಹುದು.

ಇದಕ್ಕೆ ಕಾರಣಗಳು ಈ ಕೆಳಕಂಡವು.

೧. ಪುರುಷ ಸ್ಥೂಲಕಾಯನಾಗಿದ್ದರೆ ಮತ್ತು ಉದ್ದವಾಗಿದ್ದರೆ ಆಕೆಯ ಉಸಿರು ಕಟ್ಟಿದಂತಾಗುತ್ತದೆ.

೨. ಪುರುಷ ತನ್ನ ಹಸ್ತಗಳನ್ನು ಸೃಜನಾತ್ಮಕವಾಗಿ ಬಳಸಬಹುದು.

೩. ಸ್ತ್ರೀಗೆ ಮುಕ್ತ ಸ್ವಾತಂತ್ರ‍್ಯ ವಿರುವುದರಿಂದ ಮತ್ತು ಸಂಭೋಗವನ್ನು ನಿಯಂತ್ರಿಸಿಕೊಂಡು ಆರಂಭಿಸಬಲ್ಲಳು. ಅಲ್ಲದೆ, ತುಂಬ ಕ್ರಿಯಾಶಾಲಿಯಾಗಿ ಪಾಲ್ಗೊಳಲ್ಲು ಸಾಧ್ಯವಾಗುತ್ತದೆ.

೪. ಭಗಾಂಕುರ ಹೆಚ್ಚಾಗಿ ಉತ್ತೇಜನಗೊಳ್ಳುತ್ತದೆಯಾದ್ದರಿಂದ ಆಕೆ ಭಾವಪ್ರಾಪ್ತಿಯನ್ನು ಸುಲಭವಾಗಿ ತಲುಪುತ್ತಾಳೆ.

೫. ಪುರುಷನ ಪೃಷ್ಪಗಳು ಹೆಚ್ಚಾಗಿ ಚಲಿಸುವುದಿಲ್ಲವಾದ್ದರಿಂದ ಶೀಘ್ರ ವೀರ‍್ಯಸ್ಖಲನ ಉಂಟಾಗುವುದು ಬಹಳ ಕಡಿಮೆ.

* * *

೨೨. ಪ್ರೇಮವನ್ನು ಹೇಗೆ ವ್ಯಕ್ತಗೊಳಿಸಬೇಕು?

 • ಗಂಡ – ಹೆಂಡತಿ ಪ್ರತಿ ಸಾರಿ – ’ನೇನೆಂದರೆ ನನಗಿಷ್ಟ ನಾನು, ನಿನ್ನನ್ನು ಪ್ರೇಮಿಸುತ್ತಿದ್ದೇನೆ’ ಎಂದು ಸಂಭಾಷಿಸುವ ಅಗತ್ಯವಿಲ್ಲ. ’ಐ ಲವ್‌ಯೂ’ ಎನ್ನುವ ಮಾತನ್ನು ಹೇಳದೆಯ ಆ ಪ್ರೇಮವನ್ನು ವ್ಯಕ್ತಗೊಳಿಸಬಹುದು.
 • ಪ್ರತಿದಿನ ಮಾಡುವ ಕೆಲಸ – ಕಾರ‍್ಯಗಳಿಂದಲೇ ತಮ್ಮ ನಡುವೆ ಇರುವ ಪ್ರೇಮವನ್ನು ವ್ಯಕ್ತಗೊಳಿಸಬಹುದು. ಇಬ್ಬರೂ ಏಕಾಂತದಲ್ಲಿದ್ದಾಗ ಒಳ್ಳೆಯ ಪ್ರೇಮಗೀತೆಗಳನ್ನು ಆಡಿಯೋ ಅಥವಾ ಸಿ.ಡಿ. ಪ್ಲೇಯರ್‌ಮೂಲಕ ಕೇಳಿ ಆನಂದಿಸಬಹುದು.
 • ಒಬ್ಬರಿಗೆ ಮೆಚ್ಚುಗೆಯಾದ ವಸ್ತುವನ್ನು ಅಂದರೆ, ಹೂವು, ಹಣ್ಣು, ಪುಸ್ತಕ – ಪೆನ್ನುಗಳನ್ನು ಪರಸ್ಪರ ಪ್ರತ್ಯೇಕ ಸಂದರ್ಭಗಳಲ್ಲಿ ಉಡುಗೊರೆಯಾಗಿ ನೀಡಬಹುದು.
 • ನಿಮ್ಮ ಜೀವನ ಸಂಗಾತಿಗೆ ಮೆಚ್ಚಿಗೆಯಾದ ಪರ್‌ಫ್ಯೂಮ್‌ಸ್ಪ್ರೇಯನ್ನು ಉಡುಗೊರೆಯಾಗಿ ಕೊಡಬಹುದು.
 • ಪರಸ್ಪರ ಭಾವಚಿತ್ರವನ್ನು ಪರ್ಸಿನಲ್ಲಿರಿಸಿ ಕೊಳ್ಳಬಹುದು.
 • ನಿಮ್ಮ ಸಂಗಾತಿಗೆ ಇಷ್ಟವಾಗುವ ಡ್ರೆಸ್ಸನ್ನು ತೊಟ್ಟು ಹೊರಗಡೆ ಶಾಪಿಂಗ್‌ಗೆ ತೆರಳಬಹುದು.
 • ಇವೆಲ್ಲವೂ ’ಐ ಲವ್ ಯೂ’ ಸಂದೇಶಗಳೆ, ಇಂತಹವುಗಳಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಪ್ರೇಮವನ್ನು ಅಭಿವೃದ್ಧಿ ಪಡಿಸಿಕೊಳ್ಳಬಹುದು.

* * *

೨೩. ಲೈಂಗಿಕತೆ

ಶಾರೀರಕವಾದದ್ದು : ಭಾವನಾತ್ಮಕವಾದದ್ದು: ಬೌದ್ಧಿಕವಾದದ್ದು ಮತ್ತು ಆಧ್ಯಾತ್ಮಿಕವಾದದ್ದು.

ನಮ್ಮ ದಾಂಪತ್ಯ ಜೀವನದಲ್ಲಿ ಸುರಕ್ಷಿತ ಭಾವನೆ ಇದ್ದರೆ ಮಾತ್ರ ಆಧ್ಯಾತ್ಮಿಕ ಲೈಂಗಿಕತೆ ತಲುಪಲು ಸಾಧ್ಯ. ಆಧ್ಯಾತ್ಮಿಕ ಲೈಂಗಿಕತೆಯಲ್ಲಿ ಶಾರೀರಿಕ ವಿಶ್ರಾಂತಿ ಇರುತ್ತದೆ. ಭಾವನಾತ್ಮಕ ಇರುತ್ತದೆ; ಬೌದ್ಧಿಕ ಉತ್ತೇಜನವಿರುತ್ತದೆ ಮತ್ತು ಆಧ್ಯಾತ್ಮಿಕ ಸಂಪರ್ಕವಿರುತ್ತದೆ.

ದಾಂಪತ್ಯ ಜೀವನದಲ್ಲಿ ದಂಪತಿಗಳು ಉತ್ತಮ ಲೈಂಗಿಕ ಸಂಬಂಧವನ್ನು ಹೊಂದಿದ್ದರೆ, ಈ ಕೆಳಕಂಡ ನಾಲ್ಕು ಹಂತಗಳಲ್ಲೂ ತೃಪ್ತಿ ಲಭಿಸುತ್ತದೆ.

 • ಶಾರೀರಿಕ ಲೈಂಗಿಕತೆ

ಲೈಂಗಿಕ ಶುದ್ಧತೆಯನ್ನು ಶಾರೀರಿಕವಾಗಿ ಆನಂದದಿಂದ ಅನುಭವಿಸಿದಾಗ ಪರಸ್ಪರ ಭಾವಪ್ರಾಪ್ತಿ ಹೊಂದಲು ಅನುಕೂಲವಾಗುತ್ತದೆ.

ಲೈಂಗಿಕ ಭಾವಪ್ರಾಪ್ತಿಯ ಜೊತೆಗೆ, ಶಾರೀರಿಕ ತೃಪ್ತಿಯನ್ನು ಪಡೆದಾಗ ದಂಪತಿಗಳ ದೇಹ-ಮನಸ್ಸು ಉಲ್ಲಾಸ – ಉತ್ಸಾಹದಿಂದ ಕೂಡಿರುತ್ತದೆ. ಕೆಲವೊಮ್ಮೆ ಸಂಭೋಗದ ಅವಧಿಯಲ್ಲಿ ಮತ್ತು ಅನಂತರ ಲೈಂಗಿಕಾಸೆ ಪೂರೈಕೆಯಾಗದಿದ್ದರೆ, ಪತಿ- ಪತ್ನಿ ಇಬ್ಬರೂ ದೂಷಿಸಿಕೊಳ್ಳುತ್ತಾರೆ. ನಾಚಿಕೊಳ್ಳುತ್ತಾರೆ. ಆದರೆ, ಇಬ್ಬರಲ್ಲೂ ’ಆಧ್ಯಾತ್ಮಿಕ ನಿಲುವು’ ಇದ್ದರೆ ಸಮತೋಲನವಾದ ಜೀವನವನ್ನು ಹೊಂದಲು ಅಸಾಧ್ಯವಾಗುವುದಿಲ್ಲ; ಕಷ್ಟವಾಗುವುದಿಲ್ಲ.

 • ಭಾವನಾತ್ಮಕ ಲೈಂಗಿಕತೆ

ಸಾಮೀಪ್ಯ ಸಂಪರ್ಕ- ಸಂವಹನ ಹೊಂದಲು ಭಾವನಾತ್ಮಕ ಲೈಂಗಿಕತೆ ದಂಪತಿಗಳಿಗೆ ನೆರವಾಗುತ್ತದೆ. ಲೈಂಗಿಕತೆಯಿಂದ ದಂಪತಿಗಳಲ್ಲಿ ಒಳ್ಳೆಯ ಭಾವನೆಯನ್ನು ಮೂಡಿಸುತ್ತದೆ.

ದಂಪತಿಗಳ ನಡುವೆ ಭಾವನಾತ್ಮಕ ಭದ್ರತೆ ಇಲ್ಲದಿದ್ದರೆ, ಶಾರೀರಿಕ ಲೈಂಗಿಕ ತೃಪ್ತಿಯನ್ನು ಹೊಂದಲಾಗುವುದಿಲ್ಲ ಹಾಗೂ ಸಂತೋಷ ಸಮಾಧಾನವನ್ನು ಸಹ ಪಡೆಯಲಾಗುವುದಿಲ್ಲ.

 • ಬೌದ್ಧಿಕ ಲೈಂಗಿಕತೆ

ಲೈಂಗಿಕತೆಯನ್ನು ಒಂದು ಕರ್ತವ್ಯ ಅಥವಾ ಒಪ್ಪಂದ ಎಂದು ಭಾವಿಸಿದರೆ ದಂಪತಿಗಳಿಬ್ಬರೂ ಮಾನಸಿಕವಾಗಿ ಆಟವಾಡಬೇಕಾಗುತ್ತದೆ. ಲೈಂಗಿಕ ಜ್ಞಾನ – ವಿಜ್ಞಾನಗಳ ಬಗ್ಗೆ ಅರಿವಿದ್ದರೆ ಬೌದ್ಧಿಕವಾಗಿ ಲೈಂಗಿಕತೆ ಸ್ಫೂರ್ತಿಯನ್ನು ನೀಡುತ್ತದೆ.

ಬುದ್ಧಿ – ಭಾವನೆಗಳಲ್ಲಿ ಲೈಂಗಿಕತೆಯ ಬಗ್ಗೆ ಆರೋಗ್ಯಕರ ಆಚಾರ-ವಿಚಾರಗಳಿದ್ದರೆ ದಂಪತಿಗಳ ವ್ಯಕ್ತಿ ವಿಕಾಸ ಸುಗಮವಾಗಿ ಸಾಗುತ್ತದೆ.

 • ಆಧ್ಯಾತ್ಮಿಕ ಲೈಂಗಿಕತೆ

ದಂಪತಿಗಳು ವಿರಳವಾಗಿ ಆಧ್ಯಾತ್ಮಿಕ ಲೈಂಗಿಕತೆಯನ್ನು ಅನುಭವಿಸುತ್ತಾರೆ. ಆದರೆ ಪತಿ-ಪತ್ನಿ ಇಬ್ಬರಿಗೂ ಮೇಲ್ಕಂಡ ಮೂರಕ್ಕಿಂತಲೂ ’ಆಧ್ಯಾತ್ಮಿಕ ಲೈಂಗಿಕತೆ’ ಬಹಳ ಮುಖ್ಯವಾದುದ್ದು. ನಮ್ಮ ದಾಂಪತ್ಯ ಜೀವನದಲ್ಲಿ ಸುರಕ್ಷಿತ ಭಾವನೆ ಇದ್ದರೆ ಮಾತ್ರ ಆಧ್ಯಾತ್ಮಿಕ ಲೈಂಗಿಕತೆ ತಲುಪಲು ಸಾಧ್ಯ. ಆಧ್ಯಾತ್ಮಿಕ ಲೈಂಗಿಕತೆಯಲ್ಲಿ ಶಾರೀರಿಕ ವಿಶ್ರಾಂತಿ ಇರುತ್ತದೆ. ಭಾವನಾತ್ಮಕ ಭದ್ರತೆ ಇರುತ್ತದೆ; ಬೌದ್ಧಿಕ ಉತ್ತೇಜನವಿರುತ್ತದೆ ಮತ್ತು ಆಧ್ಯಾತ್ಮಿಕ ಸಂಪರ್ಕವಿರುತ್ತದೆ.

ಮೇಲ್ಕಂಡ ನಾಲ್ಕು ಹಂತಗಳಲ್ಲೂ ದಂಪತಿಗಳು ಲೈಂಗಿಕತೆಯನ್ನು ಅನುಭವಿಸಿದಾಗ ಉತ್ತಮ ಪ್ರೀತಿ; ಉತ್ತಮ ಸಾಮರಸ್ಯ ಉಂಟಾಗುತ್ತದೆ.

* * *

೨೪. ದಂಪತಿಗಳಿಗಾಗಿ ಬೆಡ್ರೂಮ್ ಕುಶಲತೆಗಳು

ದಂಪತಿಗಳಿಗೆ ಬೆಡ್‌ರೂಮ್ ಏಕಾಂತದ ಸ್ವರ್ಗವಾಗಿರುತ್ತದೆ; ರತಿಭಾವನೆಗಳನ್ನು ಅಭಿವ್ಯಕ್ತಗೊಳಿಸಲು, ರತಿರುಚಿರವನ್ನು ಅನುಭವಿಸಲು ಆಸ್ಪದ ಕೊಡುವ ಪ್ರಶಾಂತ ಜಾಗವೆಂದರೆ ಮಲಗುವ ಕೊಠಡಿ.

ಸೆಕ್ಸ್ ಥೆರಪಿಸ್ಟ್ ಡಾ|| ಡೊನಾಲ್ಡ್ ಈಕೆಸ್‌ರವರ ಪ್ರಕಾರ ’ಮಲಗುವ ಕೋಣೆಯಲ್ಲಿ ನಡೆಯುವ ಸಂವಹನ ಅಥವಾ ಕಮ್ಯೂನಿಕೇಷನ್ ಶೇಕಡ ೯೦ ರಷ್ಟು ಆಶಾಬ್ದಿಕ ಅಥವಾ ನಾನಾವರ್ಬಲ್ ಆಗಿರುತ್ತದೆ’ ಎಂದು ತಿಳಿಸಿದ್ದಾರೆ. ಒಮ್ಮೆ ಗಂಡ – ಹೆಂಡತಿ ತಮ್ಮ ಬಯಕೆಗಳೇನು ಎಂದು ಅರಿತರೆ ’ಲೈಂಗಿಕ ಕುಶಲತೆ’ ತಂತಾನೆ ಏರ್ಪಡುತ್ತದೆ ಎನ್ನುತ್ತಾರೆ. ಲೈಂಗಿಕ ಚಿಕಿತ್ಸಾ ತಜ್ಞರು.

ಬೆಡ್ ರೂಮಿನಲ್ಲಿ ನಡೆಯುವ ಅನುರಾಗದ ಆಲಾಪನೆ, ಪ್ರೇಮದಾಟ ದಂಪತಿಗಳಿಬ್ಬರ ಮನಸ್ಸಿಗೆ ಮುದ ನೀಡುತ್ತದೆ. ರಮ್ಯವಾದ ರಂಜನೆಯನ್ನು ಸಹ ನೀಡುತ್ತದೆ.

’ಫ್ರೀ ವೇ ಲವ್’ ಪುಸ್ತಕದ ಲೇಖಕರಾದ ಜಾನ್ ಎಲ್. ಹರ್‌ಗ್ರೇವ್‌ರ ಪ್ರಕಾರ ’ಲೈಂಗಿಕಾಭಿಲಾಷೆಯುಳ್ಳ ಪುರುಷ, ಸುಪ್ತವಾಗಿಯೇ ತನ್ನ ಕೈಗಳನ್ನು ಮರ್ಮಸ್ಥಾನಗಳತ್ತ ಹಾಗೂ ದೇಹದ ಇತರೆ ಭಾಗಗಳಲ್ಲಿ ಚಲಿಸುತ್ತಾನಂತೆ, ’ ಗಂಡನ ಹಾವಭಾವಗಳನ್ನು ಅರಿತ ಹೆಂಡತಿ ಅದಕ್ಕೆ ಪೂರಕವಾಗಿ ಪ್ರೇಮಾಭಿಲಾಷೆಯನ್ನು ಹಂತ ಹಂತವಾಗಿ ಅಭಿವ್ಯಕ್ತಗೊಳಿಸಿದರೆ, ’ರತಿ’ ರುಚಿರವಾಗಿ ಮಾರ್ಪಡುತ್ತದೆ.

ಪುರುಷನು ತನ್ನ ತೋಳುಗನ್ನು ಮತ್ತು ಕಾಲುಗಳನ್ನು ಹಾಸಿಗೆಯ ಮೇಲಿಟ್ಟು ವಿಶ್ರಮಿಸಿಕೊಳ್ಳುತ್ತಿದ್ದರೆ, ಆತನು ರತಿಯನ್ನು ಅನುಭವಿಸಲು ಅನುಕೂಲ ಪರಿಸ್ಥಿತಿಯನ್ನು ಹೊಂದಿದ್ದಾನೆ ಎಂದು ಪತ್ನಿ ಭಾವಿಸಬೇಕು. ಪ್ರೇಮಗೀತೆಯನ್ನು ಹಾಡುತ್ತಿದ್ದರೆ ಅಂದು ರಾತ್ರಿ ಆತ ರತಿಯನ್ನು ಬಯಸುತ್ತಿದ್ದಾನೆ ಎಂದು ಪತ್ನಿ ಭಾವಿಸಬಹುದು ಅಥವಾ ಸಂಗೀತದ ಲಯಕ್ಕೆ ತಕ್ಕಂತೆ ತನ್ನ ಪಾದಗಳನ್ನು ತಟ್ಟುತ್ತಿದ್ದರೆ ಆತ ರತಿಗೆ ಆಹ್ವಾನಿಸುತ್ತಿದ್ದಾನೆ ಎಂದು ತಿಳಿಯಬಹುದು:

ಬೆಡ್‌ರೂಮಿನಲ್ಲಿ ತನ್ನ ಪತ್ನಿಯ ತೋಳುಗಳನ್ನು ಸವರುತ್ತಿದ್ದರೆ ಅಥವಾ ಆಕೆಯ ಹಸ್ತಗಳನ್ನು ಸವರುತ್ತಿದ್ದರೆ ’ಆತನಿಗೆ ಸೆಕ್ಸ್ ಆಸೆ ಮೂಡಿದೆ’ ಎಂದು ಸಂಗಾತಿ ಅರಿತುಕೊಳ್ಳಬೇಕು.

ರುಚಿ, ರುಚಿಯಾದ ಆಹಾರದ ಬಯಕೆ: ನಿಮ್ಮ ಗಂಡ ರುಚಿ, ರುಚಿಯಾದ ಆಹಾರವನ್ನು ಸೇವಿಸುತ್ತಿದ್ದರೆ ಆಯಾ ಆಹಾರ ಪದಾರ್ಥಗಳು ವಿವಿಧ ವಿನ್ಯಾಸಗಳಿಂದ ಕೂಡಿದ್ದರೆ ತನ್ನ ಪಂಚೇಂದ್ರಿಯಗಳಿಂದ ಆ ಭೋಜನವನ್ನು ಆಸ್ವಾದಿಸುತ್ತಿದ್ದರೆ, ಆತನು ತನ್ನ ಸಂಗಾತಿಯ ದೇಹದ ರುಚಿಯನ್ನು ಆಸ್ವಾದಿಸಲು ಬಯಸುತ್ತಾನೆ ಎಂಬುದನ್ನು ಪತ್ನಿ ತಿಳಿದರೆ ಅನುಕೂಲಕರ ಅನುರಾಗ ಮೂಡಲು ಸಾಧ್ಯವಾಗುತ್ತದೆ.

ಪುರುಷ ತನ್ನ ಕಣ್ಣುಗಳಿಂದ ಯಾವ ರೀತಿಯ ಸಂಕೇತಗಳನ್ನು ಹೊಂದಿರುತ್ತಾನೊ ಅದು ಶೃಂಗಾರದ ಅನುಕೂಲಕರ ಹಂತವಾಗಿರುತ್ತದೆ ಎಂದು ಡಾ| ಈಕೆಸ್ ತಿಳಿಸಿದ್ದಾರೆ. ಆತ ತನ್ನ ಕಣ್ಣುಗಳನ್ನು ಮುಚ್ಚಿ ತೆಗೆದರೆ ಆತನಲ್ಲಿ ರೊಮ್ಯಾಂಟಿಕ್ ಜಾಗೃತಿ ಮೂಡಿದೆ ಎಂದರ್ಥ.

ಇಂಗ್ಲೆಂಡಿನ ಲಿವರ್ ಫೂಲ್ ವಿಶ್ವವಿದ್ಯಾಲಯ ಇತ್ತೀಚೆಗೆ ಅಧ್ಯಯನವೊಂದನ್ನು ನಡೆಸಿ, ಪುರುಷನ ಉಂಗುರದ ಬೆರಳು, ಆತನ ತೋರು (ಇಂಡೆಕ್ಸ್ ಫಿಂಗರ್‌) ಬೆರಳಿಗಿಂತ ಉದ್ದವಾಗಿದ್ದರೆ ಅವನಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚು ಟೆಸ್ಟೋಸ್ಟೆರೋನ್‌ಹಾರ್ಮೋನ್ ಉತ್ಪತ್ತಿ ಇರುತ್ತದಂತೆ. ಅಂದರೆ, ಹೆಚ್ಚಿನ ಟೆಸ್ಟೋಸೆರೋನ್ ಹಾರ್ಮೋನ್ ಮಟ್ಟವನ್ನು ಹೊಂದಿರುವ ಪುರುಷರಲ್ಲಿ ಸೆಕ್ಸ್ ಅಭಿಲಾಷೆಯೂ ಹೆಚ್ಚಿರುತ್ತದಂತೆ. ಸೌಜನ್ಯ ; ’ಕಾಸ್ಮೋಪಾಲಿಟನ್’

* * *

೨೫. ಕೆಲವು ಸ್ತ್ರೀ ಆರೋಗ್ಯ ಪ್ರಶ್ನೋತ್ತರಗಳು

ನನ್ನ ಯೋನಿಯಲ್ಲಿ ಬಹಳ ದುರ್ವಾಸನೆ ಇದೆ ಕಾರಣವೇನು?

– ನಿಮ್ಮ ಯೋನಿಯ ಭಾಗದಲ್ಲಿ ಸೋಂಕಿರುವುದರಿಂದ ದುರ್ವಾಸನೆ ಇರಬಹುದು. ಸ್ತ್ರೀ ಆರೋಗ್ಯ ತಜ್ಞ ವೈದ್ಯರಿಂದ ಪರೀಕ್ಷಿಸಿಕೊಳ್ಳಿ. ಚಿಕಿತ್ಸೆ ಪಡೆಯಿರಿ ಸಮಸ್ಯೆ ನಿವಾರಣೆಯಾಗುತ್ತದೆ.

ನಾನು ಸೆಕ್ಸ್‌ನಲ್ಲಿ ತೊಡಗಿದಾಗ ನೋವೇಕೆ ಉಂಟಾಗುತ್ತದೆ? ನಾನೇನು ಮಾಡಬೇಕು?

– ಯೋನಿ ಒಣಗಲು ಸಾಮಾನ್ಯವಾದ ಕಾರಣ ಲೈಂಗಿಕತೆಯ ಅವಧಿಯಲ್ಲಿ ಸಾಕಷ್ಟ್ರು ಸ್ರಾವ (ಲ್ಯಾಬ್ರಿಕೇಷನ್) ಉತ್ಪತ್ತಿಯಾಗದಿರುವುದು. ಸಂಭೋಗಪೂರ್ವ ಕಾಮಕೇಳಿ (ಫೋರ್‌ಪ್ಲೇ) ಹೆಚ್ಚು ಹೊತ್ತು ನಡೆದರೆ ಯೋನಿಯ್ಲ ಸ್ರಾವ ಉಂಟಾಗಲು ಅನುಕೂಲವಾಗುತ್ತದೆಯಾದ್ದರಿಂದ, ಪುರುಷ ಹೆಚ್ಚು ಹೊತ್ತು ಫೋರ್ ಪ್ಲೇಯಲ್ಲಿ ತೊಡಗುವುದು ಅತ್ಯಗತ್ಯ. ಯೋನಿಯಲ್ಲ ಸಾಕಷ್ಟು ಲೂಬಿಕ್ರೇಷನ್ ಆಗದಿದ್ದಾಗ ಸೆಕ್ಸ್‌ನಲ್ಲಿ ತೊಡಗಿದರೆ ನೋವು ಉಂಟಾಗುತ್ತದೆ.

* * *

೨೬. ಪ್ರತಿದಿನ ಯೋನಿಯನ್ನು ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳಬೇಕೆ?

ಯೋನಿಯನ್ನು ಸೋಪು ಮತ್ತು ನೀರಿನಿಂದ ಪ್ರತಿದಿನ ತೊಳೆದುಕೊಳ್ಳುವುದು ಅಗತ್ಯವಿಲ್ಲ . ಆದರೆ ಪ್ರತಿದಿನ ಸ್ನಾನ ಮಾಡುವಾಗ ಮೈಯನ್ನು ಸರಿಯಾಗಿ ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳುವುದು ಅಗತ್ಯ.

* * *

೨೭. ದಂಪತಿಗಳು ಮಾಡಬೇಕಾದ ರತಿ ವಾಗ್ದಾನ

 • ನಾವಿಬ್ಬರೂ ಪರಸ್ಪರ ಲೈಂಗಿಕ ತೃಪ್ತಿ ಹೊಂದಲು ಹಕ್ಕನ್ನು ಹೊಂದಿದ್ದೇವೆ.
 • ನನ್ನ ಸ್ವಂತ ಲೈಂಗಿಕ ತೃಪ್ತಿಗೆ ನಾನೇ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ.
 • ಲೈಂಗಿಕ ಔನ್ನತ್ಯವನ್ನು ಗಳಿಸಲು ನಾವಿಬ್ಬರೂ ಪ್ರಯತ್ನಿಸುತ್ತೇವೆ.
 • ನನ್ನ ಲೈಂಗಿಕತೆಯನ್ನು ಶಾರೀರಿಕ, ಭಾವನಾತ್ಮಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಪರಿಪೂರ್ಣತೆಗೆ ಮತ್ತು ಆನಂದಕ್ಕೆ ಉಪಯೋಗಿಸುತ್ತೇನೆ.
 • ಸ್ವಯಂ ನಾನು ಹಾಗೂ ನನ್ನ ಸಂಗಾತಿಯ ಜೊತೆ ಪ್ರಾಮಾಣಿಕವಾಗಿರುತ್ತೇನೆ.
 • ನನ್ನ ಲೈಂಗಿಕ ಪ್ರೀತಿಯನ್ನು ಆಯುಧವನ್ನಾಗಿ, ಪ್ರತಿಕಾರವಾಗಿ, ಅಹಂಕಾರವಾಗಿ ಅಥವಾ ಶಿಕ್ಷೆಯಾಗಿ ಎಂದಿಗೂ ಉಪಯೋಗಿಸುವುದಿಲ್ಲ.
 • ನನ್ನನ್ನು ಇತರರು ಲೈಂಗಿಕ ವಸ್ತುವನ್ನಾಗಿ ಬಳಸಿಕೊಳ್ಳಲು ಅವಕಾಶ ಕೊಡುವುದಿಲ್ಲ.
 • ಯಾವಾಗಲೂ ಸುರಕ್ಷಿತ ಲೈಂಗಿಕತೆಯನ್ನು ಬಯಸುತ್ತೇನೆ.
 • ನನ್ನ ಮಕ್ಕಳು ಲೈಂಗಿಕ ತಪ್ಪು ಕಲ್ಪನೆಗಳಿಂದ ನರಳದಂತೆ ಜಾಗ್ರತೆ ವಹಿಸುತ್ತೇನೆ.

* * *

೨೮. ನಿಮಗೆ ಸೆಕ್ಸ್ ತಲೆನೋವು ಉಂಟು ಮಾಡಿದರೆ ನೀವೇನು ಮಾಡಬೇಕು?

ಲವ್ಪ್ಲೇ ಅಥವಾ ಲೈಂಗಿಕ ಸಂಭೋಗದ ಸಮಯದಲ್ಲಿ ತಲೆನೋವು ಬರಲು ಕಾರಣವೇನು?

ಶೇಕಡಾ ೩ ರಷ್ಟು ಮಂದಿ ಸ್ತ್ರೀಯರು ಸೆಕ್ಸ್ ಸಮಯದಲ್ಲಿ ಆಗಿಂದಾಗ್ಯೆ ತಲೆನೋವಿಗೆ ಒಳಗಾಗುತ್ತಾರೆಂದು ಅಧ್ಯಯನಗಳು ತಿಳಿಸಿವೆ. ಅದಕ್ಕೆ ಕಾರಣ : ಮಾಂಸ ಖಂಡಗಳ ಆಯಾಸವಿರಬಹುದು ಅಥವಾ ಇದಕ್ಕಿಂತ ರಕ್ತದ ಒತ್ತಡ ಹೆಚ್ಚುವುದರಿಂದ ಅಥವಾ ಅತಿಯಾದ ಆಯಾಸದಿಂದ ತಲೆನೋವು ಕಾಣಿಸಬಹುದು. ತಲೆನೋವಿನ ಜೊತೆಗೆ ವಾಂತಿ ಅಥವಾ ದೃಷ್ಟಿಯಲ್ಲ ಬದಲಾವಣೆ ಉಂಟಾಗಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಡಾ|| ಪ್ರೆಡ್ಪ್ರೈಟ್ಯಾಗ್ರವರ ಸಲಹೆಗಳು

ಇತರೆ ಶಾರೀರಿಕ ಚಟುವಟಿಕೆಗಳಿಗೆ ಬೇಕಾದ ಶಕ್ತಿ-ಚೈತನ್ಯ ಸೆಕ್ಸ್ ಕ್ರಿಯೆಗೂ ಅಗತ್ಯ. ನಿಮಗೆ ಗೊತ್ತಿಲ್ಲದಂತೆ ನಿಶ್ಶಕ್ತಿ ಅಥವಾ ಅತಿಯಾದ ಆಯಾಸವಿದ್ದರೆ ನಿಮ್ಮ ಲೈಂಗಿಕ ಸುಖಕ್ಕೆ ಅಡ್ಡಿಯಾಗುತ್ತದೆ. ಆದುದರಿಂದ, ಆಯಾಸವಿದ್ದಾಗ ಶಾರೀರಿಕವಾಗಿ ಮಾನಸಿಕವಾಗಿ ಪೂರ್ಣ ವಿಶ್ರಾಂತಿ ಪಡೆದು ಸೆಕ್ಸ್‌ನಲ್ಲಿ ಪಾಲ್ಗೊಳ್ಳಬೇಕು.

ಸಾಕಷ್ಟು ಸಮಯ ತೆಗೆದುಕೊಳ್ಳಿ.

ಫೋರ್ ಪ್ಲೇ ಅಥವಾ ಕಾಮಕೇಳಿಯಲ್ಲಿ ಹೆಚ್ಚು ಹೊತ್ತು ತೊಡಗುವುದರಿಂದ, ಹಾರ್ಮೋನಿನ ಹಂತ ನಿಧಾನವಾಗಿ ಎರುತ್ತದೆ. ಅಲ್ಲದೆ, ಹೃದಯದ ಬಡಿತವು ಕ್ರಮವಾಗಿ ಹೆಚ್ಚುತ್ತದೆ. ಆದುದರಿಂದ ನಿಧಾನವಾಗಿ ಉಸಿರನ್ನು ಬಿಡುವ ಅಭ್ಯಾಸ ಮಾಡಿ.

ಕೆಲವು ಲೈಂಗಿಕ ಭಂಗಿಗಳಿಂದ ವುಮೆನ್- ಆನ್‌ಟಾಪ್‌(ಸ್ತ್ರೀ ಪ್ರಧಾನ ಲೈಂಗಿಕಾಸನ) ಭಂಗಿಯಿಂದ ಸ್ತ್ರೀಗೆ ಕತ್ತು ಮತ್ತು ತೋಳುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆದುದರಿಂದ ಪುರುಷ ಪ್ರಧಾನ ಆಸನ ಆಥವಾ ಸ್ತ್ರೀಗೆ ಅನುಕೂಲಕರವಾದ ಆಸನಗಳನ್ನು ಮಾತ್ರ ಅನುಸರಿಸಬೇಕು.

* * *

೨೯. ಚುಂಬನದ ಆಟ

ನಿಮ್ಮ ಶರೀರದ ಬಹಳ ಸಂವೇದನೆಯ ಭಾಗ ತುಟಿಗಳು. ಅವುಗಳನ್ನು ಸೃಜನಾತ್ಮಕವಾಗಿ ಉಪಯೋಗಿಸಬೇಕು. ನಿಮ್ಮ ತುಟಿಗಳನ್ನು ನೀವು ಖುಷಿಯಾಗಿ ಬಳಸಿದಾಗ ಬಹಳ ಮಜವೆನಿಸುತ್ತದೆ.

ಲೈಂಗಿಕ ಚಿಕಿತ್ಸಕರಾದ ಅನ್ನೆ ಹೂಪರ‍್ಸ್‌ರವರು ತಮ್ಮ ಪಾಕೆಟ್ ಕಾಮಸೂತ್ರ ಪುಸ್ತಕದಲ್ಲಿ ಕಿಸ್ ಆಟದ ಬಗ್ಗೆ ಹೀಗೆ ತಿಳಿಸಿದ್ದಾರೆ.

 • ಮೇಲಿನ ತುಟಿಯನ್ನು ಚುಂಬಿಸಿ : ನಿಮ್ಮ ಗಂಡ ಮೇಲಿನ ತುಟಿಯನ್ನು ಚುಂಬಿಸುವಾಗ, ನೀವು ಆತನ ಕೆಳತುಟಿಯನ್ನು ಚುಂಬಿಸಿ, ಮೆಲ್ಲಗೆ ಕಚ್ಚಿ.
 • ಪ್ರೆಸ್ಡ್‌ಕಿಸ್ : ನಿಮ್ಮ ಬೆರಳುಗಳನ್ನು ಉಪಯೋಗಿಸಿ, ಆತನ ಕೆಳ ತುಟಿಯನ್ನು ನವಿರಾಗಿ ಎಳೆಯಿರಿ. ಅನಂತರ ಅದನ್ನು ನಿಮ್ಮ ನಾಲಿಗೆಯಿಂದ ಸ್ಪರ್ಶಿಸಿ ಮತ್ತು ಅನುರಾಗದಿಂದ ಚುಂಬಿಸುವುದನ್ನು ಪುನರಾವರ್ತಿಸಿ.
 • ತುಟಿಗಳನ್ನು ಚೀಪಿ : ನಿಮ್ಮ ಗಂಡನ ತುಟಿಗಳನ್ನು ನವಿರಾಗಿ ಚೀಪಿ ಮತ್ತು ಬಹಳ ನವಿರಾಗಿ ಕಚ್ಚಿ.

* * *

೩೦. ಮಲಬದ್ಧತೆಯಿಂದ ಲೈಂಗಿಕ ಸಂಭೋಗದ ಅವಧಿಯಲ್ಲಿ ನೋವು ಉಂಟಾಗುವುದೆ?

ಮಲಬದ್ಧತೆಯಿಂದ ಸ್ವಲ್ಪಮಟ್ಟಿನ ಅನಾನುಕೂಲತೆ ಉಂಟಾಗುತ್ತದೆ. ವಿಶೇಷವಾಗಿ ನಿಮ್ಮಮಲ ಬಹಳ ಗಟ್ಟಿಯಾಗಿದ್ದರೆ ಅದರ ಅನಾನುಕೂಲತೆಯಿಂದ ಕೆಲವೊಮ್ಮೆ ಭಾವಪ್ರಾಪ್ತಿ ಅಥವಾ ಕ್ಲೈಮ್ಯಾಕ್ಸನ್ನು ಹೊಂದಲು ಕಷ್ಟವಾಗುತ್ತದೆ. ಮಲ ದ್ವಾರದಲ್ಲಿ ಮಲ ಬಹಳ ಗಟ್ಟಿಯಾಗಿದ್ದಾಗ  ತೀವ್ರವಾದ ನೋವು ಉಂಟಾಗುತ್ತದೆ. ಎನ್ನುತ್ತಾರೆ ಡಾ|| ರೊಮಾನ್ಜಿ. ಆದರೆ ಈ ಸ್ಥಿತಿ ಬಹಳ ವಿರಳ. ಮಲಬದ್ಧತೆ ನಿವಾರಿಸಿಕೊಳ್ಳಬೇಕಾದರೆ ಪ್ರತಿದಿನ ಕನಿಷ್ಠ ಮೂರು ಲೀಟರ್ ನೀರನ್ನು ಕುಡಿಯಬೇಕು ಮತ್ತು ಪ್ರತಿದಿನ ೨೦ ರಿಂದ ೩೦ ಗ್ರಾಮುಗಳಷ್ಟು ನಾರುಳ್ಳ ಆಹಾರವನ್ನು ಸೇವಿಸಬೇಕು.

* * *