ಜನನ : ೧೯೩೦

ಮನೆತನ : ಸಂಗೀತಗಾರರ ಮನೆತನ. ಅಣ್ಣ ಹೆಚ್.ವೈ. ಹೂಗಾರ ಕೂಡ ಸಂಗೀತ ಕಲಾವಿದರು.

ಗುರುಪರಂಪರೆ : ಬಾಲ್ಯದಲ್ಲಿ ಬಯಲಾಟ – ಪಾರಿಜಾತದಲ್ಲಿ ಭಾಗವಹಿಸುತ್ತಿದ್ದ ಇವರನ್ನು ಸಂಗೀತದ ಕಡೆ ಎಳೆದವರು ಅಣ್ಣ ಹೆಚ್. ವೈ. ಹೂಗಾರ ಅವರು. ಕಮತಗಿಯ ಗದಿಗೆಪ್ಪ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳಲ್ಲಿ ಹಲವು ಕಾಲ ಸಂಗೀತ ಅಭ್ಯಾಸ ಮಾಡಿ. ಸುಗಮ ಸಂಗೀತದ ಕಡೆ ತಮ್ಮ ಗಮನ ಹರಿಸಿದರು.

ಸಾಧನೆ : ಮೊದ ಮೊದಲಿಗೆ ಹಲವಾರು ಉತ್ಸವಗಳಲ್ಲಿ ಮಠ ಮಂದಿರಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಕಾರ್ಯಕ್ರಮ ನೀಡುತ್ತಿದ್ದು ಮುಂದೆ ೧೯೭೩ ರಲ್ಲಿ ಡಾ|| ಮಲ್ಲಿಕಾರ್ಜುನ ಮನ್ಸೂರ್ ಮತ್ತು ಪಂ. ಪಂಚಾಕ್ಷರಿ ಮತ್ತಿಗಟ್ಟಿ ಅವರ ಆದೇಶದಂತೆ ರಾಜ್ಯಾದ್ಯಂತ ಸುಗಮ ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದರು. ಭಕ್ತಿಗೀತೆ, ವಚನ ಸಂಗೀತ ಹಾಗೂ ಉತ್ತರ ಕರ್ನಾಟಕದ ಕವಿಗಳಾದ ದ.ರಾ. ಬೇಂದ್ರೆ, ಚೆನ್ನವೀರ ಕಣವಿ, ಡಿ.ಎಸ್.ಕರ್ಕಿ, ಸಿದ್ಧಯ್ಯ ಪುರಾಣಿಕರ ಕವನಗಳನ್ನು ಹಾಡುತ್ತಾ ಜನಮನ್ನಣೆ ಗಳಿಸಿದ್ದಾರೆ.

ಪ್ರಶಸ್ತಿ- ಸನ್ಮಾನ : ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಸುಗಮ ಸಂಗೀತೋತ್ಸವದಲ್ಲಿ ವಚನ ಗಾಯನ ವಿದ್ವಾನ್ ಎಂಬ ಪ್ರಶಸ್ತಿ, ಹಲವು ಮಠ- ಮಾನ್ಯಗಳಿಂದ ಪುರಸ್ಕಾರ ಅಲ್ಲದೆ ೨೦೦೦-೦೧ರ ಸಾಲಿನಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.