ಪಶುಪಕ್ಷಿ ಮೊದಲಾದ ಚಿನ್ನದ ಕಳಕೊಂಡ ಫಲ
ವೇನದರಿಂದ ಅಸಮಾಗವಾದ ಮಾನವ ಬೆನ್ನ
ಪಡೆಕೊಂಡೆ ಫಲವೆನದರಿಂದ || ಪಶುಪಕ್ಷಿ ||

ಅದರೊಳುತ್ತಮವಾದ ಪುರುಷನೆನಿನಾದೆ ಫಲ
ವೇನಾದರಿಂದ ಮುದರಿಂದದರೊಳು ನಾವಿ ಪ್ರನೆಂ
ದೆನಿಸಿದೆ ಫಲವೇನದರಿಂದ || ಪಶುಪಕ್ಷಿ ||

ಪರವೇದ ಮಾರ್ಗ ನಿಷ್ಟೆಯಗನುಸರಿಸಿ
ಫಲವೇನುದರಿಂದ ಹಿಂದುಗಮ
ಶಾಸ್ತ್ರಗಳನ್ನೆಲ್ಲ ಕಲಿತೇನು ಪರಿವೆನದರಿಂದು || ಪಶುಪಕ್ಷಿ ||

ಬೇಕಾದ ಯಜವ್ರಕಗಳ ಮಾಡಿದೆ
ಫಲವೇನದರಿಂದ ನಾಗಲೋಕ್ಕೆ ಪೋಗಿ ರಂಬೆ
ಯೊಳ್ ಸುರಿಸಿದೆ ಫಲವೇನದರಿಂದ || ಪಶುಪಕ್ಷಿ ||

ಕುಂಬಿಸಿ ಮರುತನ ಬಿಡದೆ ಬಂದಿಸಿವೇನು
ಫಲವೆನವರಿಂದ ಇಂಬಾಗಿ ತನುವಶತಕಲ್ಪ ನಿಲ್ಲಿ
ಸಿದೆನು ಫಲವೇನದರಿಂದ || ಪಶುಪಕ್ಷಿ ||

ಮಾನವರೊಳಗತಿ ಮಾನ್ಯನೆಂದೆನಿಸಿದೆ ಫಲವೇನ
ದರಿಂದಂ ನಾನಾವನಗಳ ನಿಧಾನಿಸಿ ಮಾಡಿದೆ
ಫಲವೇನದರಿಂದ || ಪಶುಪಕ್ಷಿ ||

ಗಂಗಾಧಿ ಪ್ರಣ್ಯಾ ತೀರ್ಥದೊಳೆಲ್ಲಾ ಮುಳುಕಿಸಿದ
ಫಲವೇನದರಿಂದು ತೋರಿತು ನಿನ್ನ ಬೆಳಕೇ ಬೇರೆ
ವಿದವಾಗಿ ಫಲವೇನದರಿಂದ || ಪಶುಪಕ್ಷಿ ||

ಸೇರಿ ಸುಶುಮಯ ಕಾರಿಕವನು ಕಂದೇ
ಫಲವೇನದರಿಂದಾ ತೆನೆರಿತು ನಿನ್ನ ಬೆಳಕೇ
ಬೇರೆ ವಿಧವಾಗಿ ಫಲವೇನದರಿಂದ || ಪಶುಪಕ್ಷಿ ||

ಗುರು ಶಂಕರಾರ್ಯನೊಳ್ ಬೆರೆದೇಕನಾಗಿ ನಿನ್ನ
ನಿಜವನು ಕಾಣದೆ ಮರಣ ಜನ್ಮದ ಕಳೆಯದೆ
ಕರ್ಮಮಾಡಲು ಫಲವೇನದರಿಂದ || ಪಶುಪಕ್ಷಿ ||