Categories
e-ದಿನ

ಫೆಬ್ರುವರಿ-03

ಘಟನೆಗಳು:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1377: ಸೆಸೆನಾ ರಕ್ತದೋಕುಳಿ: ಕಂಡೊಟ್ಟಿಯರಿ ಎಂಬ ಪಪಾಲ್ ಸೈನಿಕರಿಂದ 2000 ಇಟಲಿ ಜನರ ಕಗ್ಗೊಲೆ” open=”no”]ಸೆಸೆನಾ ನಗರದಲ್ಲಿ ಕಂಡೊಟ್ಟಿಯರಿ ಎಂಬ ಪಪಾಲ್ ಸೈನಿಕರಿಂದ 2000 ಇಟಲಿ ಜನರ ಕಗ್ಗೊಲೆಯಾಯಿತು.[/fusion_toggle][fusion_toggle title=”1488: ದಕ್ಷಿಣಕ್ಕೆ ಅತಿ ಹೆಚ್ಚು ದೂರ ಪಯಣಿಸಿದ ಪ್ರಥಮ ಯೂರೋಪಿಯನ್ ಬಾರ್ಟೊಲೋಮಿಯೋ ಡಯಾಸ್” open=”no”]ಪೋರ್ಚುಗೀಸ್ ನಾವಿಕನಾದ ಬಾರ್ಟೊಲೋಮಿಯೋ ಡಯಾಸ್ ಎಂಬಾತ ಮೊದಲ ಬಾರಿಗೆ ದಕ್ಷಿಣದ ದಿಕ್ಕಿನಲ್ಲಿ ಅತಿ ಹೆಚ್ಚು ದೂರ ಸಾಗಿದ ಪ್ರಥಮ ಯೂರೋಪಿಗ ಎನಿಸಿದ. ಈತ ಗುಡ್ ಹೋಪ್ ಭೂಶಿರವನ್ನು ದಾಟಿ ‘ಮೊಸೆಲ್ ಬೇ’ ತೀರವನ್ನು ತಲುಪಿದ್ದ.[/fusion_toggle][fusion_toggle title=”1509: ಭಾರತದ ಡಿಯೋ ಯುದ್ಧದಲ್ಲಿ ಜಯಿಸಿದ ಪೋರ್ಚುಗೀಸ್ ನೌಕಾಪಡೆ” open=”no”]ಭಾರತದ ಡಿಯೋ ದ್ವೀಪದಲ್ಲಿ ನಡೆದ ಯುದ್ಧದಲ್ಲಿ ಪೋರ್ಚುಗೀಸ್ ನೌಕಾಪಡೆಯು ಓಟ್ಟೋಮನ್ ಸಾಮ್ರಾಜ್ಯ, ವೆನಿಸ್ ಗಣರಾಜ್ಯ, ಗುಜರಾತಿನ ಸುಲ್ತಾನ, ಈಜಿಪ್ಟಿನ ಮಮ್ಲುಕ್ ಬುರ್ಜಿ ಸುಲ್ತಾನೇಟ್, ಕಲ್ಲಿಕೋಟೆಯ ಜಾಮೊರಿನ್ ಮತ್ತು ರಘುಸಾದ ಗಣರಾಜ್ಯ ಇವುಗಳ ಒಕ್ಕೂಟದ ಸೈನ್ಯವನ್ನು ಸೋಲಿಸಿತು.[/fusion_toggle][fusion_toggle title=”1534: ಐರಿಷ್ ಬಂಡುಕೋರ ಸಿಲ್ಕೆನ್ ಥಾಮಸ್ ಅನ್ನು ಗಲ್ಲಿಗೇರಿಸಿದ ಹೆನ್ರಿ ” open=”no”]ಎಂಟನೆಯ ಹೆನ್ರಿಯು ಐರಿಷ್ ಭಿನ್ನಮತೀಯನಾದ ಸಿಲ್ಕೆನ್ ಥಾಮಸ್ ಅಥವಾ ಥಾಮಸ್ ಫಿಟ್ಸ್ ಗೆರಾಲ್ಡನನ್ನು ಗಲ್ಲಿಗೇರಿಸಿದ.[/fusion_toggle][fusion_toggle title=”1690: ಮೊಟ್ಟಮೊದಲಿಗೆ ಕಾಗದದ ಹಣವನ್ನು ಚಲಾವಣೆಗೆ ತಂದ ಅಮೆರಿಕದ ಮೊದಲ ವಸಾಹತು ಎಣಿಸಿದ ಮಸ್ಸಚುಸೆಟ್ಸ್ ” open=”no”]ಮಸ್ಸಚುಸೆಟ್ಸ್ ವಸಾಹತುವು ಅಮೆರಿಕದಲ್ಲಿ ಕಾಗದದ ಹಣವನ್ನು ಮೊಟ್ಟ ಮೊದಲಿಗೆ ಚಲಾವಣೆಗೆ ತಂದಿತು.[/fusion_toggle][fusion_toggle title=”1870: ಅಮೆರಿಕದಲ್ಲಿ ವರ್ಣಾತೀತವಾಗಿ ಎಲ್ಲರಿಗೂ ಮತದಾನದ ಹಕ್ಕನ್ನು ನೀಡುವ ಸಂವಿಧಾನ ತಿದ್ದುಪಡಿಗೆ ಅಸ್ತು” open=”no”]ಅಮೆರಿಕದಲ್ಲಿ ವರ್ಣತಾರತಮ್ಯವಿಲ್ಲದೆ ಎಲ್ಲರಿಗೂ ಮತದಾನದ ಹಕ್ಕನ್ನು ನೀಡುವ ಸಂವಿಧಾನದ ಹದಿನೈದನೇ ತಿದ್ದುಪಡಿಯು ಅಂಗೀಕೃತಗೊಂಡಿತು.[/fusion_toggle][fusion_toggle title=”1913: ಅಮೆರಿಕದಲ್ಲಿ ಆದಾಯ ತೆರಿಗೆ ವಸೂಲಿಗೆ ಸಂವಿಧಾನದ ತಿದ್ದುಪಡಿ” open=”no”]ಅಮೆರಿಕದಲ್ಲಿ ಆದಾಯ ತೆರಿಗೆ ವಿಧಿಸುವ ಮತ್ತು ವಸೂಲಿ ಮಾಡುವ ಸಂವಿಧಾನದ ಹದಿನಾರನೇ ತಿದ್ದುಪಡಿಯನ್ನು ಅಂಗೀಕರಿಸಲಾಯಿತು.[/fusion_toggle][fusion_toggle title=”1916: ಮಹಾತ್ಮ ಗಾಂಧೀಜಿಯವರಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಉದ್ಘಾಟನೆ.” open=”no”]ಮಹಾತ್ಮಾ ಗಾಂಧಿಯವರು ಬನಾರಸ್ ಹಿಂದು ವಿಶ್ವ ವಿದ್ಯಾಲಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು. ವಾರಣಾಸಿಯಲ್ಲಿ ಇರುವ ಈ ವಿಶ್ವವಿದ್ಯಾಲಯವು ವಿಶ್ವದ ಮೂರು ಅತಿದೊಡ್ಡ ವಸತಿ ವ್ಯವಸ್ಥೆ ಉಳ್ಳ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, 1300 ಎಕರೆ ಪ್ರದೇಶದಲ್ಲಿ ಹರಡಿದೆ. ಇದು 124 ಸಂಯೋಜಿತ ಕಾಲೇಜುಗಳನ್ನೂ ಸೇರಿ ಆರು ಉನ್ನತ ಅಧ್ಯಯನ ಕೇಂದ್ರಗಳನ್ನು ಒಳಗೊಂಡಿದೆ.[/fusion_toggle][fusion_toggle title=”1925: ಭಾರತದಲ್ಲಿ ಮೊಟ್ಟಮೊದಲ ಮೊದಲ ಎಲೆಕ್ಟ್ರಿಕ್ ರೈಲುಸೇವೆ ಆರಂಭ” open=”no”]ಮುಂಬೈನ ವಿಕ್ಟೋರಿಯಾ ಟರ್ಮಿನಸ್ ಇಂದ ಕುರ್ಲಾದವರೆಗೆ ಗ್ರೇಟ್ ಇಂಡಿಯನ್ ಪೆನಿನ್ಸುಲಾರ್ ರೈಲ್ವೆಯ ಬಂದರು ಶಾಖೆಯು ಆರಂಭಗೊಂಡಿತು. ಇದು ಭಾರತದಲ್ಲಿ ಪ್ರಾರಂಭಗೊಂಡ ಮೊತ್ತ ಮೊದಲ ಎಲೆಕ್ಟ್ರಿಕ್ ರೈಲುಸೇವೆಯಾಗಿದೆ.[/fusion_toggle][fusion_toggle title=”1933: ಮುಲಾಜಿಲ್ಲದ ಜರ್ಮನೀಕರಣವೇ ತನ್ನ ಧ್ಯೇಯವೆಂದು ಘೋಷಿಸಿದ ಹಿಟ್ಲರ್” open=”no”]ಜರ್ಮನಿಯ ವಸಾಹತು ನೀತಿಯಾದ ‘ಲೆಬೆನ್ಸ್ರಾಮ್’ ಅನ್ನು ಪೂರ್ವ ಯೂರೋಪಿನಲ್ಲಿ ವಿಸ್ತರಿಸುವುದು ಮತ್ತು ಮುಲಾಜಿಲ್ಲದೆ ಜರ್ಮನೀಕರಿಸುವುದು ತಮ್ಮ ಥರ್ಡ್ ರೀಚ್ ವಿದೇಶಾಂಗ ನೀತಿ ಎಂದು ಅಡಾಲ್ಫ್ ಹಿಟ್ಲರ್ ಘೋಷಿಸಿದ.[/fusion_toggle][fusion_toggle title=”1945: ಎರಡನೇ ವಿಶ್ವಮಹಾಯುದ್ಧದಲ್ಲಿ ಜರ್ಮನಿಯ ಮೇಲಿನ ಬಾಂಬ್ ಸುರಿಮಳೆಯಲ್ಲಿ ಸುಮಾರು 3000 ಸಾವು ಮತ್ತು ಸೂರು ಕಳೆದುಕೊಂಡ ಒಂದು ಲಕ್ಷ ಇಪ್ಪತ್ತು ಸಾವಿರ ಮಂದಿ” open=”no”]ಎರಡನೇ ವಿಶ್ವಮಹಾಯುದ್ಧದಲ್ಲಿ ಆಪರೇಷನ್ ಥಂಡರ್ ಕ್ಲಾಪ್ ಭಾಗವಾಗಿ ಎಂಟನೇ ವಾಯುಪಡೆಯು ಸುರಿಸಿದ ಒಂದು ಸಾವಿರ ಬಿ-17 ಬಾಂಬ್ ಸುರಿಮಳೆಯಲ್ಲಿ ಸುಮಾರು 2,500 ದಿಂದ 3000 ಜನ ಸಾವಿಗೀಡಾಗಿ, ಒಂದು ಲಕ್ಷ ಇಪ್ಪತ್ತು ಸಾವಿರ ಮಂದಿಯ ಮನೆಗಳು ಧ್ವಂಸವಾಗಿ ಬೀದಿಪಾಲಾದರು.[/fusion_toggle][fusion_toggle title=”1966: ಚಂದ್ರನ ಮೇಲಿಳಿದ ಲೂನಾ 9″ open=”no”]ಸೋವಿಯತ್ ಯೂನಿಯನ್ನಿನ ಬಾಹ್ಯಾಕಾಶ ನೌಕೆ `ಲ್ಯೂನಾ 9′ ಚಂದ್ರನ ಮೇಲಿಳಿಯಿತು.[/fusion_toggle][fusion_toggle title=”1969: ಪ್ಯಾಲೆಸ್ಟೈನ್ ಲಿಬರಲ್ ಆರ್ಗನೈಸೇಶನ್ ನಾಯಕರಾಗಿ ಯಾಸೀರ್ ಅರಾಫತ್ ನೇಮಕ” open=”no”]ಕೈರೋದಲ್ಲಿ ನಡೆದ ಪಾಲೆಸ್ಟೈನ್ ರಾಷ್ತ್ರೀಯ ಕಾಂಗ್ರೆಸ್ಸಿನಲ್ಲಿ ಯಾಸೀರ್ ಅರಾಫತ್ ಅವರು ಪ್ಯಾಲೆಸ್ಟೈನ್ ಲಿಬರಲ್ ಆರ್ಗನೈಸೇಶನ್ ನಾಯಕರಾಗಿ ನೇಮಕಗೊಂಡರು.[/fusion_toggle][fusion_toggle title=”1972: ಇರಾನಿನಲ್ಲಿ ಏಳು ದಿನಗಳ ಭೀಕರ ಹಿಮಪಾತ ಈ ದಿನ ಮೊದಲ್ಗೊಂಡಿತು.” open=”no”]ಇರಾನಿನಲ್ಲಿ ಏಳು ದಿನಗಳ ಭೀಕರ ಹಿಮಪಾತ ಈ ದಿನ ಮೊದಲ್ಗೊಂಡಿತು. ಈ ಹಿಮಪಾತದಲ್ಲಿ ಕಡೇಪಕ್ಷ 4,000 ಜನ ಸಾವಿಗೀಡಾದರು.[/fusion_toggle][fusion_toggle title=”1982: ಧರ್ಮಸ್ಥಳದ ‘ರತ್ನಗಿರಿ’ ಬೆಟ್ಟದ ಮೇಲಿನ ಬಾಹುಬಲಿಗೆ ಮೊದಲ ಮಹಾಮಸ್ತಕಾಭಿಷೇಕ” open=”no”]ಧರ್ಮಸ್ಥಳದ `ರತ್ನಗಿರಿ’ ಬೆಟ್ಟದ ಮೇಲಿನ ಬಾಹುಬಲಿಯ ಮೊದಲ ಮಹಾಮಸ್ತಕಾಭಿಷೇಕವು ಇಂದು ನೆರವೇರಿತು.[/fusion_toggle][fusion_toggle title=”1995: ಬಾಹ್ಯಾಕಾಶ ನೌಕೆಯ ಮೊದಲ ಮಹಿಳಾ ಪೈಲಟ್ ಎನಿಸಿದ ಐಲೀನ್ ಕಾಲಿನ್ಸ್” open=”no”]ನಾಸಾದ ಎಸ್.ಟಿ.ಎಸ್–63ರ ಬಾಹ್ಯಾಕಾಶ ಕಾರ್ಯಕ್ರಮವು ಮೊದಲ್ಗೊಂಡಿದ್ದು ಗಗನಯಾತ್ರಿ ಐಲೀನ್ ಕಾಲಿನ್ಸ್ ಅವರು ಈ ಬಾಹ್ಯಾಕಾಶ ನೌಕೆಯ ಮೊದಲ ಮಹಿಳಾ ಪೈಲಟ್ ಗೌರವಕ್ಕೆ ಪಾತ್ರರಾದರು.[/fusion_toggle][fusion_toggle title=”2006: ಕರ್ನಾಟಕದ ಮುಖ್ಯಮಂತ್ರಿಗಳಾಗಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿಗಳಾಗಿ ಬಿ.ಎಸ್. ಯಡಿಯೂರಪ್ಪ” open=”no”]ಕರ್ನಾಟಕ ರಾಜ್ಯದಲ್ಲಿ ಜನತಾದಳ (ಎಸ್) ಮತ್ತು ಭಾರತೀಯ ಜನತಾಪಕ್ಷದ ಮೈತ್ರಿಕೂಟದ ಸರ್ಕಾರವು ರಚನೆಗೊಂಡು, ಕರ್ನಾಟಕದ 18ನೇ ಮುಖ್ಯಮಂತ್ರಿಗಳಾಗಿ ಎಚ್. ಡಿ. ಕುಮಾರಸ್ವಾಮಿ ಮತ್ತು 5ನೇ ಉಪಮುಖ್ಯಮಂತ್ರಿಗಳಾಗಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸಿದರು.[/fusion_toggle][fusion_toggle title=”2007: ಬ್ರೈಲ್ ಲಿಪಿಯಲ್ಲಿ ಭಗವದ್ಗೀತೆ” open=”no”]ಅಂಧರಿಗೂ ಭಗವದ್ಗೀತೆ ಓದಲು ಅವಕಾಶ ಮಾಡಿಕೊಡುವ  ಪ್ರಯತ್ನವನ್ನು ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಬೆಂಗಳೂರಿನ ರೋಟರಿ ಸಂಸ್ಥೆಯ ಕಬ್ಬನ್ ಪಾರ್ಕ್ ಶಾಖೆ ಮಾಡಿತು. ಸ್ವಾಮಿ ಚಿನ್ಮಯಾನಂದರು 29 ಆವೃತ್ತಿಗಳಲ್ಲಿ ವಿಶ್ಲೇಷಿಸಿದ ಭಗವದ್ಗೀತೆಯ ಬ್ರೈಲ್ ಲಿಪಿ ಆವೃತ್ತಿಯನ್ನು, ಚಿನ್ಮಯ ಮಿಷನ್ ಮುಖ್ಯಸ್ಥರಾದ ಸ್ವಾಮಿ ಬ್ರಹ್ಮಾನಂದ ಅವರು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.[/fusion_toggle][fusion_toggle title=”2007: ಖಾಸಗಿ ಚಾನೆಲ್ಲುಗಳು ನೇರ ಕ್ರೀಡಾ ಪ್ರಸಾರವನ್ನು ದೂರದರ್ಶನದೊಂದಿಗೆ ಅವಶ್ಯವಾಗಿ ಹಂಚಿಕೊಳ್ಳಬೇಕಾದ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಗೀಕಾರ ” open=”no”]ಕ್ರಿಕೆಟ್ ಸೇರಿದಂತೆ ಮಹತ್ವದ ಎಲ್ಲ ಕ್ರೀಡೆಗಳ ಪ್ರಸಾರ ಹಕ್ಕು ಪಡೆಯುವ ಖಾಸಗಿ ಚಾನೆಲ್ ಹಾಗೂ ಸಂಸ್ಥೆಗಳು, ನೇರ ಪ್ರಸಾರವನ್ನು ದೂರದರ್ಶನದ ಜೊತೆಗೆ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರವು ಹೊರಡಿಸಿದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಅನುಮೋದನೆ ನೀಡಿದರು.[/fusion_toggle][fusion_toggle title=”2007: ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವಿಜ್ಞಾನಿಗೆ ಹದಿನಾಲ್ಕು ವರ್ಷ ಜೈಲು ” open=”no”]ವಿಶ್ವ ವಿಖ್ಯಾತ ವಿಜ್ಞಾನಿ ‘ಜೀನ್ ಥೆರೆಪಿ’ಯ ಜನಕ ಎಂದೇ ಪರಿಗಣಿತರಾದ ಎಪ್ಪತ್ತು ವರ್ಷದ ಅಮೆರಿಕದ ವಿಲಿಯಂ ಫ್ರೆಂಚ್ ಆಂಡರ್ಸನ್ ಅವರಿಗೆ ಲಾಸ್ ಏಂಜೆಲಿಸ್ ನ್ಯಾಯಾಲಯವೊಂದು ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ 14 ವರ್ಷಗಳ ಸೆರೆವಾಸ ವಿಧಿಸಿತು.[/fusion_toggle][fusion_toggle title=”2008: ನೂತನ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಪ್ರಾರಂಭದ ಘೋಷಣೆ” open=”no”]ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲ ವಿಮಾನವು ಮಾರ್ಚ್ 30ರ ಮಧ್ಯರಾತ್ರಿ 12 ಗಂಟೆಗೆ ಪ್ರಯಾಣ ಬೆಳೆಸುವುದು. ಇದಕ್ಕೆ ಮುಂಚಿತವಾಗಿ ಮಾರ್ಚ್ 29ರ ರಾತ್ರಿ ಎಂಟು ಗಂಟೆಯ ವೇಳೆಗೆ ಖಾಸಗಿ ಸಂಸ್ಥೆಯ ವಿಮಾನವೊಂದು ನಿಲ್ದಾಣಕ್ಕೆ ಆಗಮಿಸುವುದು. ಮಾರ್ಚ್ 29ರ ರಾತ್ರಿ ಎಂಟು ಗಂಟೆಯ ನಂತರ ಯಾವುದೇ ವಿಮಾನದ ಆಗಮನಕ್ಕೆ ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಅವಕಾಶ ಇರುವುದಿಲ್ಲ ಎಂದು ಎಚ್ ಎ ಎಲ್ ಅಧಿಕಾರಿಗಳು ಪ್ರಕಟಿಸಿದರು.[/fusion_toggle][/fusion_accordion]
ಜನನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1747: ಅಮೆರಿಕದ ಪ್ರಥಮ ಪೋಸ್ಟ್ ಮಾಸ್ಟರ್ ಜನರಲ್ ಸಾಮ್ಯುಯಲ್ ಓಸ್ಗುಡ್ ಜನನ” open=”no”]ಅಮೆರಿಕದ ಪ್ರಥಮ ಪೋಸ್ಟ್ ಮಾಸ್ಟರ್ ಜನರಲ್ ಸಾಮ್ಯುಯಲ್ ಓಸ್ಗುಡ್ ಅವರು ಮೆಸಚುಸೆಟ್ಸ್ ಪ್ರಾಂತ್ಯದ ಆಂಡೋವರ್ ಎಂಬಲ್ಲಿ ಜನಿಸಿದರು. ಅವರು ಅಮೆರಿಕದ ಸೇನಾನಿಯಾಗಿ ಮತ್ತು ರಾಜಕಾರಣಿಯಾಗಿ ಸಹಾ ಹೆಸರಾಗಿದ್ದರು.[/fusion_toggle][fusion_toggle title=”1757: ಇಟಲಿಯ ನೇತ್ರತಜ್ಞ ಮತ್ತು ಶಸ್ತ್ರಚಿಕಿತ್ಸಕ ಜೋಸೆಫ್ ಫ್ಲಾರೆನ್ಸ್ ಜನನ” open=”no”]ಇಟಲಿಯ ನೇತ್ರತಜ್ಞ ಮತ್ತು ಶಸ್ತ್ರಚಿಕಿತ್ಸಕ ಜೋಸೆಫ್ ಫ್ಲಾರೆನ್ಸ್ ಬ್ಯಾಸಿಲಿಕಟ್ ಬಳಿಯ ಪಿಸೆರ್ನೋ ಎಂಬಲ್ಲಿ ಜನಿಸಿದರು. 18 ಮತ್ತು 19ನೇ ಶತಮಾನದ ಮಹತ್ವದ ನೇತ್ರತಜ್ಞರಾದ ಇವರು ಫ್ರಾನ್ಸಿನ ನೆಪೋಲಿಯನಿಕ್ ಸಾಮ್ರಾಜ್ಯದಲ್ಲಿ ನೇತ್ರಪೊರೆ ಶಸ್ತ್ರಚಿಕಿತ್ಸಕರಾಗಿ ಪ್ರಸಿದ್ಧರಾಗಿದ್ದರು.[/fusion_toggle][fusion_toggle title=”1821: ಆಧುನಿಕ ಕಾಲದ ಪ್ರಥಮ ಮಹಿಳಾ ವೈದ್ಯರೆಂಬ ಖ್ಯಾತಿಯ ಎಲಿಜಬೆತ್ ಬ್ಲಾಕ್ವೆಲ್ ಜನನ” open=”no”]ಆಧುನಿಕ ಕಾಲದ ಪ್ರಥಮ ಮಹಿಳಾ ವೈದ್ಯರೆಂಬ ಖ್ಯಾತಿಯ ಎಲಿಜಬೆತ್ ಬ್ಲಾಕ್ವೆಲ್ ಇಂಗ್ಲೆಡಿನ ಬ್ರಿಸ್ಟಲ್ ಎಂಬಲ್ಲಿ ಜನಿಸಿದರು. ಅಮೆರಿಕದಲ್ಲಿ ವೈದ್ಯಕೀಯ ಪದವಿ ಪಡೆದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದ ಇವರು ಯುನೈಟೆಡ್ ಕಿಂಗ್ಡಂನಲ್ಲಿನ ಮೆಡಿಕಲ್ ರಿಜಿಸ್ಟರ್ನಲ್ಲಿ ದಾಖಲಾದ ಪ್ರಥಮ ಮಹಿಳೆಯೂ ಆಗಿದ್ದಾರೆ. ಮಹಿಳೆಯರಿಗೆ ವಿದ್ಯಾಭ್ಯಾಸದಲ್ಲಿ ಪ್ರೇರಕರಾಗಿದ್ದ ಇವರು, ಸಮಾಜದಲ್ಲಿ ಮಾನಸಿಕ ಮತ್ತು ಸಾಮಾಜಿಕವಾಗಿ ಸುಧಾರಣೆ ತರಲು ಸಹಾ ಮಹತ್ವದ ಕೆಲಸವನ್ನು ಮಾಡಿದವರಾಗಿದ್ದಾರೆ.[/fusion_toggle][fusion_toggle title=”1922: ಸಾಹಿತಿ, ವಿದ್ವಾಂಸ, ಸಂಶೋಧಕ ಎಚ್. ಎಸ್. ತಿಪ್ಪೇರುದ್ರಸ್ವಾಮಿ ಜನನ” open=”no”]ಡಾ. ತಿಪ್ಪೇರುದ್ರಸ್ವಾಮಿಯವರು ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯಲ್ಲಿ ಜನಿಸಿದರು. ಕನ್ನಡ ಸಾಹಿತ್ಯ, ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಇವರು ತಮ್ಮ ಕರ್ನಾಟಕದ ಸಮಗ್ರ ಸಂಸ್ಕೃತಿ ಚಿಂತನೆಗಳಲ್ಲಿ ರಾಜಕೀಯ, ಇತಿಹಾಸ, ಧರ್ಮ, ಮತ್ತು ಸಾಂಸ್ಕೃತಿಕ ತಳಹದಿಗಳನ್ನು ತೆರೆದಿಟ್ಟಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಜೀವಮಾನ ಸಾಧನೆಗಾಗಿನ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿವೆ.[/fusion_toggle][fusion_toggle title=”1938: ಚಲನಚಿತ್ರ ಕಲಾವಿದೆ ವಹೀದಾ ರೆಹಮಾನ್ ಜನನ” open=”no”]ಪ್ರಸಿದ್ಧ ನಟಿ ವಹೀದಾ ರೆಹಮಾನ್ ಚೆನ್ನೈ ನಗರದ ಬಳಿಯ ಚೆಂಗಲ್ಪೇಟ್ ಎಂಬಲ್ಲಿ ಜನಿಸಿದರು. ಹಿಂದಿಯ ಅನೇಕ ಚಿತ್ರಗಳಲ್ಲಿ ಅಲ್ಲದೆ ತಮಿಳು, ತೆಲುಗು, ಬಂಗಾಳಿ ಚಿತ್ರಗಳಲ್ಲೂ ನಟಿಸಿದ ಇವರಿಗೆ ಪದ್ಮಭೂಷಣ ಪ್ರಶಸ್ತಿ, ಅನೇಕ ಫಿಲಂ ಫೇರ್ ಮತ್ತು ಇನ್ನಿತರ ಪ್ರಶಸ್ತಿಗಳು ಸಂದಿವೆ.[/fusion_toggle][fusion_toggle title=”1955: ಕವಿ ಡಾ.ಸಿದ್ದಲಿಂಗಯ್ಯ ಜನನ” open=”no”]ಕವಿ ಸಿದ್ಧಲಿಂಗಯ್ಯನವರು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದರು. ಸಿದ್ಧಲಿಂಗಯ್ಯನವರ ಸೃಜನಶೀಲ ಸಾಹಿತ್ಯ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಡಾ. ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಬಾಬು ಜಗಜೀವನ ರಾಮ್‌ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ‘ಧರಣಿಮಂಡಲ ಮಧ್ಯದೊಳಗೆ’ ಚಿತ್ರದ ಗೀತೆಗೆ ಚಲನಚಿತ್ರ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದಿವೆ. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಹಾ ಇವರು ಸೇವೆ ಸಲ್ಲಿಸಿದ್ದಾರೆ.[/fusion_toggle][fusion_toggle title=”1959: ರಂಗಕರ್ಮಿ ಅನಂತರಾಮ್ ಜೆರ್ರಿ ಜನನ ” open=”no”]ಅಪರೂಪದ ಸಂಗೀತ ರಚನೆಗಾರ, ಧ್ವನಿ ಅನ್ವೇಷಕ, ರಂಗಭೂಮಿ ನಟ ಅನಂತರಾಮ್ ಜೆರ್ರಿ ಮೈಸೂರಿನಲ್ಲಿ ಜನಿಸಿದರು. ಬಿರುಗಾಳಿ, ಮಳೆ ಶಬ್ದ, ಹರಿವ ನದಿ ನೀರಿನ ಜುಳು ಜುಳು ನಾದ ಮುಂತಾದ ಹಿನ್ನೆಲೆ ಸಂಗೀತ ಶಬ್ದವನ್ನು ಅನುಪಯೋಗಿ ವಸ್ತುಗಳಾದ ಕರಟ, ಕಲ್ಲು, ಗೋಲಿ, ಬಿದಿರು, ಪರಂಗಿ ಕೊಂಬು, ಪ್ಲಾಸ್ಟಿಕ್ ಬಕೆಟಿನಿಂದ ಹೊರಹೊಮ್ಮಿಸುವ ನಾದ ವಿಶೇಷತೆಯನ್ನು ಕರಗತ ಮಾಡಿಕೊಂಡಿದ್ದ ಅನಂತರಾಮ್ ತಮ್ಮದೇ ‘ರಂಗಸ್ವರ’ ಸಂಸ್ಥೆಯ ಮೂಲಕ ರಂಗಗೀತೆಗಳ ಪ್ರಚಾರ ನಿರ್ವಹಿಸಿದ್ದರು.[/fusion_toggle][fusion_toggle title=”1963: ಅರ್ಥಶಾಸ್ತ್ರಜ್ಞ ಮತ್ತು ಭಾರತದ ರಿಜರ್ವ್ ಬ್ಯಾಂಕ್ ಗೌರ್ನರ್ ಆಗಿದ್ದ ರಘುರಾಮ್ ರಾಜನ್ ಜನನ” open=”no”]ಅರ್ಥಶಾಸ್ತ್ರಜ್ಞ ಮತ್ತು ಭಾರತದ ರಿಜರ್ವ್ ಬ್ಯಾಂಕ್ ಗೌರ್ನರ್ ಆಗಿದ್ದ ರಘುರಾಮ್ ರಾಜನ್ ಅವರು ಮಧ್ಯಪ್ರದೇಶದ ಭೋಪಾಲ್ ನಗರದಲ್ಲಿ ಜನಿಸಿದರು. ಅವರು ಬ್ಯಾಂಕ್ ಆಫ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್’ನ ಉಪಾಧ್ಯಕ್ಷರಾಗಿದ್ದಾರೆ.[/fusion_toggle][/fusion_accordion]
ನಿಧನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1468: ಮುದ್ರಣ ವ್ಯವಸ್ಥೆಯನ್ನು ಕಂಡುಹಿಡಿದ ಜೋಹಾನೆಸ್ ಗುಟೆನ್ಬರ್ಗ್ ನಿಧನ” open=”no”]ಮುದ್ರಣ ವ್ಯವಸ್ಥೆಯನ್ನು ಕಂಡುಹಿಡಿದ ಜರ್ಮನಿಯ ಜೋಹಾನೆಸ್ ಗುಟೆನ್ಬರ್ಗ್ ಅವರು ಮೈನ್ಸ್ ಎಂಬಲ್ಲಿ ನಿಧನರಾದರು.[/fusion_toggle][fusion_toggle title=”1924: ಅಮೆರಿಕದ ಅಧ್ಯಕ್ಷ, ಇತಿಹಾಸಜ್ಞ ವುಡ್ರೋ ವಿಲ್ಸನ್ ನಿಧನ” open=”no”]ಇತಿಹಾಸಜ್ಞ, ಅಮೆರಿಕದ 28ನೇ ಅಧ್ಯಕ್ಷ ವುಡ್ರೋ ವಿಲ್ಸನ್ ವಾಷಿಂಗ್ಟನ್ ನಗರದಲ್ಲಿ ನಿಧನರಾದರು.[/fusion_toggle][fusion_toggle title=”1959: ವಿಮಾನ ಅಪಘಾತದಲ್ಲಿ ರಾಕ್ ಸಂಗೀತದ ಜನಕ ಎಂದೇ ಖ್ಯಾತರಾದ ಅಮೆರಿಕನ್ ಗಾಯಕ ಬುಡ್ಡಿ ಹಾಲ್ಲಿ ನಿಧನ” open=”no”]ರಾಕ್ ಸಂಗೀತದ ಜನಕ ಎಂದೇ ಖ್ಯಾತರಾದ ಅಮೆರಿಕನ್ ಗಾಯಕ, ಇಪ್ಪತ್ತೆರಡರ ಪ್ರಾಯದ, ಬುಡ್ಡಿ ಹಾಲ್ಲಿ ಅವರು ಅಮೆರಿಕದಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ನಿಧನರಾದರು. ಇವರೊಂದಿಗೆ ಪಯಣಿಸುತ್ತಿದ್ದ ರಿಚ್ಚೀ ವ್ಯಾಲೆನ್ಸ್ ಮತ್ತು ಜೆ.ಪಿ. ರಿಚರ್ಡ್ಸನ್ ಅವರುಗಳೂ ನಿಧನರಾದರು.[/fusion_toggle][fusion_toggle title=”1969: ಪ್ರಸಿದ್ಧ ರಾಜಕಾರಣಿ ಮತ್ತು ತಮಿಳು ನಾಡಿನ ಮುಖ್ಯಮಂತ್ರಿ ಅಣ್ಣಾದೊರೈ ನಿಧನ” open=”no”]ಪ್ರಸಿದ್ಧ ರಾಜಕಾರಣಿ ಮತ್ತು ತಮಿಳು ನಾಡಿನ ಮುಖ್ಯಮಂತ್ರಿ ಅಣ್ಣಾದೊರೈ ಚೆನ್ನೈನಲ್ಲಿ ನಿಧನರಾದರು.[/fusion_toggle][fusion_toggle title=”2008: ಜನಪ್ರಿಯ ರಂಗಪ್ರಕಾರ `ನೌಟಂಕಿ’ಯ ಹೆಸರಾಂತ ಕಲಾವಿದ ಮಾಸ್ಟರ್ ಗಿರಿಜ ನಿಧನ” open=”no”]ಜನಪ್ರಿಯ ರಂಗಪ್ರಕಾರ `ನೌಟಂಕಿ’ಯ ಹೆಸರಾಂತ ಕಲಾವಿದ ಮಾಸ್ಟರ್ ಗಿರಿಜ ಜೈಪುರದಲ್ಲಿ ನಿಧನರಾದರು. ಉತ್ತರ ಭಾರತದಲ್ಲಿ ಅತ್ಯಂತ ಜನಪ್ರಿಯ ರಂಗ ಪ್ರಕಾರವಾಗಿರುವ `ನೌಟಂಕಿ’ ಬೆಳವಣಿಗೆ ಮತ್ತು ಅದರ ಜನಪ್ರಿಯತೆಗೆ ಅತ್ಯಂತ ಸೃಜನಶೀಲವಾಗಿ ತೊಡಗಿಸಿಕೊಂಡವರಲ್ಲಿ ಗಿರಿಜ ಪ್ರಮುಖರಾಗಿದ್ದರು.[/fusion_toggle][fusion_toggle title=”2009: ಯಕ್ಷಗಾನ ಕಲೆಯ ಮೇರು ಕಲಾವಿದ ಕೆರೆಮನೆ ಶಂಭು ಹೆಗಡೆ ನಿಧನ” open=”no”]ಯಕ್ಷಗಾನ ಕ್ಷೇತ್ರದ ಮೇರು ಕಲಾವಿದ, ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಕೆರೆಮನೆ ಶಂಭು ಹೆಗಡೆ ನಿಧನರಾದರು. ಇವರು ‘ಶ್ರೀ ಇಡಗುಂಜಿ ಮಹಾಗಣಪತಿ’ ಯಕ್ಷಗಾನ ಮೇಳ ಸಂಘಟಿಸಿ, ದೇಶದ ವಿದೇಶಗಳಲ್ಲಿ ಸಂಚರಿಸಿ, ಐದು ಸಾವಿರಕ್ಕಿಂತಲೂ ಹೆಚ್ಚು ಪಾತ್ರಗಳನ್ನು ನಿರ್ವಹಿಸಿದ್ದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿದ್ದವು.[/fusion_toggle][/fusion_accordion]