ಘಟನೆಗಳು:

ಜಪಾನಿನ ಸರ್ಕಾರವು ಪ್ರಾರಂಭಿಕವಾಗಿ ಕಂಡ ಕೆಲವು ಕ್ರಿಶ್ಚಿಯನ್ ಗುಂಪನ್ನು ತನ್ನ ಸಮಾಜಕ್ಕೆ ಮಾರಕವೆಂದು ಕೊಂದು ಹಾಕಿತು.
ಅಹಮದ್ ಶಹಾ ಅಬ್ದಾಲಿ ಲೂಧಿಯಾನ ಸಮೀಪದ ಕುಪ್ನಲ್ಲಿ ನಡೆದ ಸಮರದಲ್ಲಿ ಸಿಖ್ಖರ ಮಾರಣಹೋಮ ನಡೆಸಿದ. ಸಿಖ್ಖರು ಆತನ ಸಾರ್ವಭೌಮತ್ವ ಅಂಗೀಕರಿಸಲು ನಿರಾಕರಿಸಿದ್ದಕ್ಕಾಗಿ ಸುಮಾರು 10,000ದಿಂದ 30,000ದಷ್ಟು ಸಿಖ್ಖರನ್ನು ಕೊಲೆಗೈಯಲಾಯಿತು. ಅದೇ ವರ್ಷ ಏಪ್ರಿಲಿನಲ್ಲಿ ಅಬ್ದಾಲಿ ಅಮೃತಸರದ ಮೇಲೆ ದಾಳಿ ನಡೆಸಿ ಹರ್ಮಂದಿರವನ್ನು ನೆಲಸಮಗೊಳಿಸಿದ.
ಜಾನ್ ಬಾಯ್ಡ್ ಡನ್ಲಪ್ ಎಂಬ ಸ್ಕಾಟಿಷ್ ವ್ಯಾಪಾರಿ ಡನ್ಲಪ್ ರಬ್ಬರ್ ಸಂಸ್ಥೆಯನ್ನು ಸ್ಥಾಪಿಸಿದ
ರಷ್ಯಾದ ಸೈಂಟ್ ಪೀಟರ್ಸ್ ಬರ್ಗ್ ನಗರದಲ್ಲಿ ರಷ್ಯಾದ ದೊಡ್ಡ ಮತ್ತು ಹಳೆಯ ವಸ್ತು ಸಂಗ್ರಹಾಲಯಗಳಲ್ಲಿ ಒಂದಾದ ಹರ್ಮಿಟೇಜ್ ಮ್ಯೂಸಿಯಂ ಪ್ರಾರಂಭಗೊಂಡಿತು.
ಚರಿತ್ರೆಯಲ್ಲೇ ಅತಂತ್ಯ ದೊಡ್ಡ ಚಿನ್ನದ ನಿಕ್ಷೇಪವಾದ ‘ವೆಲ್ಕಂ ಸ್ಟ್ರೇಂಜರ್’, ಆಸ್ಟ್ರೇಲಿಯಾದ ವಿಕ್ಟೋರಿಯಾ ಬಳಿಯ ಮೊಲಿಯಾಗುಲ್ ಎಂಬಲ್ಲಿ ಪತ್ತೆಯಾಯಿತು.
ಬೆಲ್ಜಿಯನ್ ರಸಾಯನ ಶಾಸ್ತ್ರಜ್ಞ ಲಿಯೋ ಬೇಕಲ್ಯಾಂಡ್ ಅವರು ಪ್ರಪಂಚದ ಪ್ರಥಮ ಕೃತಕ ಪ್ಲಾಸ್ಟಿಕ್ ಆದ ‘ಬ್ಯಾಕಲೈಟ್’ ಅನ್ನು ತಯಾರಿಸಿರುವುದಾಗಿ ಘೋಷಿಸಿದರು.
ಗ್ರೀಕ್ ವಾಯುಪಡೆಯ ವಿಮಾನ ಹಾರಾಟಗಾರರಾದ ಮೈಖೇಲ್ ಮೌಟೌಸಿಸ್ ಮತ್ತು ಏರೀಸ್ಟೀಡೀಸ್ ಮೊರೈಟಿನಿಸ್ ಅವರು ಚರಿತ್ರೆಯಲ್ಲಿ ಪ್ರಥಮ ನೌಖಾ ವಾಯು ಪ್ರದರ್ಶನವನ್ನು ‘ಫಾರ್ಮಾನ್ ಎಂ.ಎಫ್.7’ ಹೈಡ್ರೋಪ್ಲೇನ್ ಮೂಲಕ ನೀಡಿದರು.
ಸ್ಟೀಫನ್ ಡಬ್ಲ್ಯೂ ಥಾಮ್ಸನ್ ಅವರು ಜರ್ಮನಿಯ ವಿಮಾನವನ್ನು ಹೊಡೆದುರುಳಿಸಿದರು.  ಇದು ಅಮೆರಿಕದ ವಾಯುಸೇನಾ ಚರಿತ್ರೆಯಲ್ಲಿನ ಮೊದಲ ವಿಜಯವಾಗಿದೆ. 
ಚಾರ್ಲಿ ಚಾಪ್ಲಿನ್, ಮೇರಿ ಪಿಕ್ಫೋರ್ಡ್, ಡೌಗ್ಲಾಸ್ ಫೇರ್ಬ್ಯಾಂಕ್ಸ್ ಮತ್ತು ಡಿ. ಡಬ್ಲೂ. ಗ್ರಿಫಿತ್ ಅವರುಗಳು ಯುನೈಟೆಡ್ ಆರ್ಟಿಸ್ಟ್ಸ್ ಸ್ಥಾಪಿಸಿದರು.
ಖಿಲಾಫತ್ ಚಳುವಳಿ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಸದಸ್ಯರು ಉತ್ತರ ಪ್ರದೇಶದ ಗೋರಖ್ ಪುರದ ಚೌರಿಚೌರಾದಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ 22 ಮಂದಿ ಪೊಲೀಸರನ್ನು ಸುಟ್ಟು ಹಾಕಿದರು. ಈ ಹಿಂಸೆಯಿಂದ ಮನನೊಂದ ಮಹಾತ್ಮಾ ಗಾಂಧಿಯವರು ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡರು.
ಡೆ ವಿಟ್ ವ್ಯಾಲೇಸ್ ಅವರು ಜನರಿಗೆ ಮನರಂಜನೆ, ಮಾಹಿತಿ ಹಾಗೂ ಸ್ಫೂರ್ತಿ ನೀಡಲು ‘ರೀಡರ್ಸ್ ಡೈಜೆಸ್ಟ್’ ಆರಂಭಿಸಿದರು.
ದಿ ರಾಯಲ್ ಗ್ರೀನ್ವಿಚ್ ವೀಕ್ಷಣಾಲಯವು ಗಂಟೆಗೊಮ್ಮೆ ಗ್ರೀನ್ವಿಚ್ ಟೈಮ್ ಸಿಗ್ನಲ್ ಎಂದು ಕರೆಯುವ ಸಮಯ ಸಂಜ್ಞೆಗಳ ಪ್ರಸಾರವನ್ನು ಆರಂಭಿಸಿತು.
ಚಾಪ್ಲಿನ್ ಅವರ ಮೊತ್ತ ಮೊದಲ ಟಾಕಿ ಚಿತ್ರ ‘ಮಾಡರ್ನ್ ಟೈಮ್ಸ್’ ಬಿಡುಗಡೆಗೊಂಡಿತು.
‘ಅಪೋಲೋ 14’ ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳು ಚಂದ್ರನನ್ನು ತಲುಪಿದರು.
ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ಲೀಲಾ ಸೇಥ್ ಅವರು ದೇಶದ ಪ್ರಥಮ ಮಹಿಳಾ ನ್ಯಾಯಾಧೀಶರೆಂಬ ಕೀರ್ತಿಗೆ ಪಾತ್ರರಾದರು.
ಸ್ವಿಟ್ಜರ್ಲ್ಯಾಂಡಿನ್ ಮೂರು ದೊಡ್ಡ ಬ್ಯಾಂಕುಗಳು ಒಂದಾಗಿ ಹೋಲೋಕಾಸ್ಟ್ ಸಂತ್ರಸ್ತರು ಮತ್ತು ಅವರ ಕುಟುಂಬಗಳ ಬೆಂಬಲಕ್ಕಾಗಿ 7.1 ಮಿಲಿಯನ್ ಡಾಲರ್ ನಿಧಿಯನ್ನು ಸ್ಥಾಪಿಸಿದವು.
ಭಾರತೀಯ ಮೂಲಸಂಜಾತೆ ಮತ್ತು ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಒಟ್ಟು 22 ಗಂಟೆ 27 ನಿಮಿಷಗಳವರೆಗೆ ಬಾಹ್ಯಾಕಾಶದಲ್ಲಿ ನಡೆದಾಡಿದ ದಾಖಲೆ ನಿರ್ಮಿಸಿದರು. ಈವರೆಗೆ ಈ ದಾಖಲೆ ಕ್ಯಾಥಿ ಥೋರ್ನ್ ಟನ್ ಅವರ ಹೆಸರಿನಲ್ಲಿತ್ತು.
ಭಾರತದ ಇಂದ್ರಾ ಕೆ ನೂಯಿ ಅವರು ಆಹಾರ ಮತ್ತು ತಂಪು ಪಾನೀಯಗಳ ಬೃಹತ್ ಬಹುರಾಷ್ಟ್ರೀಯ ಸಂಸ್ಥೆಯಾದ ಪೆಪ್ಸಿಕೋದ ಅಧ್ಯಕ್ಷೆಯಾಗಿ ಆಯ್ಕೆಯಾದರು.
ಮಾಂತ್ರಿಕ ಸ್ಪಿನ್ ಬೌಲರ್ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರು ಪಾಕಿಸ್ಥಾನದ ಮಾಜಿ ವೇಗದ ಬೌಲರ್ ವಾಸೀಮ್ ಅಕ್ರಮ್ ಅವರ 502 ವಿಕೆಟ್ ವಿಶ್ವದಾಖಲೆಯನ್ನು ಮುರಿದರು.
‘ಕೇರ್ ಆಫ್ ಫುಟ್ಪಾತ್’ ಮಕ್ಕಳ ಚಿತ್ರಕ್ಕಾಗಿ ಕಿರಿಯ ಚಿತ್ರ ನಿರ್ದೇಶಕ ಮಾಸ್ಟರ್ ಕಿಶನ್‌ ಅವರಿಗೆ ಸಂದ ಮಕ್ಕಳ ಚಿತ್ರಕ್ಕಾಗಿನ ‘ಸ್ವರ್ಣ ಕಮಲ’ ಪ್ರಶಸ್ತಿಯನ್ನು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ಪ್ರದಾನ ಮಾಡಿದರು.

ಜನನ:
ಅಂತರರಾಷ್ಟ್ರೀಯ ಖ್ಯಾತಿಯ ಸಸ್ಯಶಾಸ್ತ್ರಜ್ಞ, ಸಂಶೋಧಕ, ಶಿಕ್ಷಕ, ಕನ್ನಡ ಸಾಹಿತ್ಯದ ವಿನೋದಪೂರ್ಣ, ವಿಚಾರಪೂರ್ಣ ಹಾಗೂ ವೈಜ್ಞಾನಿಕ ಮಹಾನ್ ಬರಹಗಾರ ಡಾ. ಬಿ.ಜಿ. ಎಲ್ ಸ್ವಾಮಿ ಅವರು ಬೆಂಗಳೂರಿನಲ್ಲಿ ಜನಿಸಿದರು. ‘ಹಸುರು ಹೊನ್ನು’ ಕೃತಿಗಾಗಿ ಅವರಿಗೆ 1978ರ ವರ್ಷದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿತ್ತು. 1980ರ ವರ್ಷದಲ್ಲಿ ನಿಧನರಾದ ಇವರು ವಿಜ್ಞಾನದ ವಿಷಯಗಳನ್ನು ಹೃದ್ಯವಾಗಿ, ಸ್ವಾರಸ್ಯಪೂರ್ಣವಾಗಿ ಹೇಳಿರುವಂತೆಯೇ, ಸಾಹಿತ್ಯ ಕೃತಿಗಳಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಮೆರೆದಿದ್ದಾರೆ.
ಚಂದ್ರನ ಮೇಲೆ ಮೊದಲು ಪದಾರ್ಪಣ ಮಾಡಿದ ಮಾನವರಾದ ನೀಲ್ ಆರ್ಮ್ ಸ್ಟ್ರಾಂಗ್ ಅಮೆರಿಕದ ಓಹಿಯೋದಲ್ಲಿ ಜನಿಸಿದರು.
ಹಾರೋಗದ್ದೆ ಮಾನಪ್ಪ ನಾಯಕ್ ಅವರು ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿದ ಹಾರೋಗದ್ದೆ ಎಂಬ ಹಳ್ಳಿಯಲ್ಲಿ ಜನಿಸಿದರು. ಪ್ರಾಧ್ಯಾಪನ ಮತ್ತು ವಿದ್ವತ್ಪೂರ್ಣ ಬರಹಗಳಿಗೆ ಹೆಸರಾಗಿದ್ದ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ‘ಸಂಪ್ರತಿ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಹಲವಾರು ಗೌರವಗಳು ಸಂದಿದ್ದವು. 2010, ನವೆಂಬರ್ 10ರಂದು ನಿಧನರಾದರು.
‘ನಿತ್ಯೋತ್ಸವದ ಕವಿ’ ಎಂದೇ ಜನಮನದಲ್ಲಿ ಪ್ರಖ್ಯಾತರಾಗಿರುವ ಡಾ. ಕೆ.ಎಸ್. ನಿಸಾರ್ ಅಹಮದ್ ಅವರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು. ಕವಿಯಾಗಿ ನಿಸಾರರು ‘ಮನಸ್ಸು ಗಾಂಧಿಬಜಾರು’, ‘ನಿತ್ಯೋತ್ಸವ’, ‘ನೆನೆದವರ ಮನದಲ್ಲಿ’, ‘ನಾನೆಂಬ ಪರಕೀಯ’, ‘ಅನಾಮಿಕ ಆಂಗ್ಲರು’, ‘ಸುಮಹೂರ್ತ’, ‘ಸಂಜೆ ಐದರ ಮಳೆ’, ‘ಸ್ವಯಂ ಸೇವೆಯ ಗಿಳಿಗಳು’ ಮುಂತಾದ ಕವನ ಸಂಕಲನಗಳಲ್ಲದೆ ಅನೇಕ ಗದ್ಯ ಕೃತಿಗಳನ್ನೂ, ಬಾಷಾಂತರಗಳನ್ನೂ ಮಾಡಿದ್ದಾರೆ. ಪದ್ಮಶ್ರೀ, ಪಂಪ ಪ್ರಶಸ್ತಿ, ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಸಮ್ಮೆಳನಾಧ್ಯಕ್ಷತೆ ಸೇರಿ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ.
ಅಮೆರಿಕದ ಪ್ರೋಗ್ರಾಮರ್, ಲೈವ್ ಜರ್ನಲ್ ಸೃಷ್ಟಿಕರ್ತ ಬ್ರಾಡ್ ಫಿಟ್ಜ್ ಪ್ಯಾಟ್ರಿಕ್, ಲೋವಾ ಎಂಬಲ್ಲಿ ಜನಿಸಿದರು. ಲೈವ್ ಜರ್ನಲ್ ಅಲ್ಲದೆ ಅನೇಕ ಉಚಿತ ಸಾಫ್ಟ್ವೇರ್ ಸೃಷ್ಟಿಸಿದ್ದಕ್ಕಾಗಿ ಇವರು ಪ್ರಸಿದ್ಧರಾಗಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ನಾಯಕ ಅಚ್ಯುತರಾವ್ ಪಟವರ್ಧನ್ ಅವರು ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಜನಿಸಿದರು. ಸೋಷಿಯಲಿಸ್ಟ್ ಪಕ್ಷದ ಸ್ಥಾಪಕರಾದ ಇವರು ಕ್ವಿಟ್ ಇಂಡಿಯಾ ಚಳುವಳಿ ಹಾಗೂ ಸ್ವಾತಂತ್ರ್ಯಾನಂತರದ ತುರ್ತು ಪರಿಸ್ಥಿತಿಯ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ನಿಧನ:
ಬಂಗಾಳದ ಆಡಳಿತಗಾರ ಮೀರ್ ಜಾಫರ್ ಮೃತನಾದ. ತನ್ನ ಬೆಂಬಲಿಗ ವಂಚಕರನ್ನು ಸೇರಿಸಿಕೊಂಡು ಬ್ರಿಟಿಷರೊಂದಿಗೆ ಷಾಮೀಲಾದ ಈತ 1757ರಲ್ಲಿ ನಡೆದ ಪ್ಲಾಸಿ ಕದನದಲ್ಲಿ ನಿಷ್ಕ್ರಿಯ ನಿಲುವು ತಾಳಿದ. ಈ ಕದನದಲ್ಲಿ ಸೋತ ಸಿರಾಜುದ್ದೌಲ ಪದಚ್ಯುತನಾದ ನಂತರ ಬ್ರಿಟಿಷರು ಮೀರ್ ಜಾಫರನನ್ನೇ ಬಂಗಾಳದ ಆಡಳಿತಗಾರನನ್ನಾಗಿ ನೇಮಿಸಿದರು. ಸಾಯುವ ಕಾಲಕ್ಕೆ ಈತ ಅಫೀಮು ವ್ಯಸನಿಯೂ ಕುಷ್ಠರೋಗ ಪೀಡಿತನೂ ಆಗಿ ನರಳಿದ.
ಸ್ಕಾಟ್ಲೆಂಡಿನ ಇತಿಹಾಸಕಾರ ಹಾಗೂ ಪ್ರಬಂಧಕಾರ ಥಾಮಸ್ ಕಾರ್ಲೈಲ್ ಲಂಡನ್ನಿನಲ್ಲಿ ನಿಧನರಾದರು. ‘ಸೇಜ್ ಆಫ್ ಚೆಲ್ಸಿಯಾ’ ಎಂದೇ ಇವರು ಖ್ಯಾತರಾಗಿದ್ದರು.
ಇಂಗ್ಲಿಷ್ ಜೀವಶಾಸ್ತ್ರಜ್ಞರಾದ ಅಲನ್ ಲಾಯ್ಡ್ ಹಾಡ್ಗ್ ಕಿನ್ ಅವರು ಕೇಂಬ್ರಿಡ್ಜಿನಲ್ಲಿ ನಿಧನರಾದರು. ಇವರಿಗೆ 1963ರ ವರ್ಷದಲ್ಲಿ ವೈದ್ಯಕೀಯ ಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.
ಅಮೆರಿಕದ ಭೌತಶಾಸ್ತ್ರಜ್ಞ ರಾಬರ್ಟ್ ಹೋಫ್ ಸ್ಟಾಡ್ಟರ್ ಕ್ಯಾಲಿಫೋರ್ನಿಯಾದ ಸ್ಟಾನ್ ಫೋರ್ಡಿನಲ್ಲಿ ನಿಧನರಾದರು. ‘ಎಲೆಕ್ಟ್ರಾನ್ ಸ್ಕಾಟರಿಂಗ್ ಇನ್ ಆಟೋಮಿಕ್ ನ್ಯೂಕ್ಲಿ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1961ರ ವರ್ಷದಲ್ಲಿ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.
ಕ್ರೋಟ್ಸ್ ಅಂಡ್ ಸ್ಲೋವೇನಿಸ್ ದೇಶದ ಮೆಕಾನಿಕಲ್ ಸಂಶೋಧಕ ಸ್ಲಾವೋಲ್ಜುಬ್ ಎಡ್ವರ್ಡ್ ಪೆನ್ಕಲ ನಿಧನರಾದರು.
ಪಶ್ಚಿಮ ದೇಶಗಳಲ್ಲಿ ಸೂಫಿ ಪಂತವನ್ನು ಪಸರಿಸಿದ ಯೂನಿವರ್ಸಲ್ ಸೂಫಿಯಿಸಮ್ ಬೋಧಕ ಇನಾಯತ್ ಖಾನ್ ನವದೆಹಲಿಯಲ್ಲಿ ನಿಧನರಾದರು.
ಪ್ರಸಿದ್ಧ ಅರ್ಥಶಾಸ್ತ್ರಜ್ಞ ವಾಸಿಲಿ ಲಿಯೋನ್ ಟೈಫ್ ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ರಷ್ಯನ್ ಮೂಲದ ಇವರಿಗೆ 1973ರ ವರ್ಷದ ಅರ್ಥಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು. ಒಂದು ಆರ್ಥಿಕ ವಲಯದಲ್ಲಿನ ಬದಲಾವಣೆ ಹೇಗೆ ಇನ್ನಿತರ ಆರ್ಥಿಕ ವಲಯಗಳ ಮೇಲೆ ಪರಿಣಾಮ ಬೀರಬಹುದು ಎಂಬುದು ಅವರ ಮಹತ್ವದ ಸಂಶೋಧನೆಯಾಗಿತ್ತು.
ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತೀಯ ಯೋಗ ಮತ್ತು ಧ್ಯಾನಪದ್ದತಿಗಳನ್ನು ಪಸರಿಸಿದ ಗುರು ಮಹರ್ಷಿ ಮಹೇಶ್ ಯೋಗಿ ಅವರು, ನೆದರ್ ಲ್ಯಾಂಡಿನ ವ್ಲೋಡ್ ರಾಪ್ ಎಂಬಲ್ಲಿ ನಿಧನರಾದರು. ಭಾರತದ ಜಬಲ್ಪುರದಲ್ಲಿ ಜನಿಸಿದ ಇವರು ಮನಸ್ಸಿನ ನಿಯಂತ್ರಣ ಮತ್ತು ಏಕಾಗ್ರತೆ ಸಾಧಿಸುವ ಟ್ರಾನ್ಸಿಡೆಂಟಲ್ ಮೆಡಿಟೇಷನ್ ಯೋಗ ಪದ್ಧತಿಯಿಂದ ಪ್ರಸಿದ್ಧರಾಗಿದ್ದರು. 1968ರಲ್ಲಿ, ಭಾರತದ ಇವರ ಆಶ್ರಮಕ್ಕೆ ರಾಕ್ ಮತ್ತು ಪಾಪ್ ಗಾಯಕರು ಭೇಟಿ ಕೊಟ್ಟು, ಇವರ ಶಿಷ್ಯರಾದ ಮೇಲೆ, ಇವರಿಗೆ ಬೀಟಲ್ಸ್ ಗುರು ಎಂಬ ಪ್ರಖ್ಯಾತಿ ಬಂತು.
ಅಮೆರಿಕದ ಪರಮಾಣು ಭೌತವಿಜ್ಞಾನಿ ವಾಲ್ ಲಾಗ್ಸ್ ಡನ್ ಫಿಚ್ ಅವರು ನ್ಯೂ ಜೆರ್ಸಿಯ ಪ್ರಿನ್ಸ್ ಟನ್ ಎಂಬಲ್ಲಿ ನಿಧನರಾದರು. ಬ್ರೂಕ್ ಹಾವೆನ್ ನ್ಯಾಷನಲ್ ಪ್ರಯೋಗಾಲಯದಲ್ಲಿ ‘ಆಲ್ಟರ್ನೇಟಿಂಗ್ ರೇಡಿಯಂಟ್ಸ್ ಸಿಂಕ್ರಟ್ರಾನ್’ ಎಂಬ ಸಂಶೋಧನೆಗಾಗಿ ಇವರಿಗೆ 1980ರ ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.