ಘಟನೆಗಳು:

ಕಾರ್ನರ್ವಾನಿನ ಎಡ್ವರ್ಡ್ ಮೊದಲ ಇಂಗ್ಲಿಷ್ ಪ್ರಿನ್ಸ್ ಆಫ್ ವೇಲ್ಸ್ ಆಗಿ ಸಿಂಹಾಸನಾರೂಢನಾದ. ಈತ ಮುಂದೆ ಎರಡನೆಯ ಎಡ್ವರ್ಡ್ ದೊರೆ ಎನಿಸಿದ.
ಮಾನವತಾವಾದಿ, ರಾಜಕಾರಣಿ, ಇಂಗ್ಲೆಂಡಿನ ಚಾನ್ಸಲರ್ ಸೇಂಟ್ ಥಾಮಸ್ ಮೋರೆ ಜನಿಸಿದ. ದೊರೆ ಎಂಟನೆಯ ಹೆನ್ರಿಯನ್ನು ಇಂಗ್ಲೆಂಡಿನ ಚರ್ಚ್ ಮುಖ್ಯಸ್ಥ ಎಂಬುದಾಗಿ ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಈತನ ತಲೆ ಕಡಿಯಲಾಯಿತು.
ಇಟಲಿಯ ಪ್ಲಾರೆನ್ಸ್ ನಗರದಲ್ಲಿ ಗಿರೋಲಮೋ ಸವೋನರೋಲ ಅವರ ನೇತೃತ್ವದಲ್ಲಿ ಪ್ರತಿಷ್ಠೆಯ ವಸ್ತ್ಗುಗಳ ‘ಬಾನ್ ಫೈರ್ ಆಫ್ ವ್ಯಾನಿಟೀಸ್’ ಕಾರ್ಯಕ್ರಮ ನಡೆದು, ಆತನ ಬೆಂಬಲಿಗರು ಶೃಂಗಾರ ವಸ್ತುಗಳು, ಕಲಾತ್ಮಕ ವಸ್ತುಗಳು ಮತ್ತು ಗ್ರಂಥಗಳನ್ನು ಬೆಂಕಿಗೆ ಹಾಕಿದರು.
ಸಿಂಗಪುರವನ್ನು ಪಡೆದುಕೊಂಡ ಸರ್ ಥಾಮಸ್ ಸ್ಟಾಂಫೋರ್ಡನು ಅದನ್ನು ಮರುಕ್ಷಣದಲ್ಲೇ ವಿಲಿಯನ್ ಫರ್ಕುಹಾರನಿಗೆ ಕೊಟ್ಟು ಸಿಂಗಪುರದಿಂದ ಹೊರನಡೆದುಬಿಟ್ಟ
ಆಡಳಿತಗಾರ ವಾಜಿದ್ ಅಲಿ ಶಹ ಆಳಲು ಅಸಮರ್ಥ ಎಂಬ ನೆಲೆಯಲ್ಲಿ, ಲಾರ್ಡ್ ಡಾಲ್ ಹೌಸಿಯು ಅವಧ್ ರಾಜ್ಯವನ್ನು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರ್ಪಡೆ ಮಾಡಿದ. ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ರಾಜಧಾನಿ ಲಖನೌದಲ್ಲಿ ಈ ಕ್ರಮದ ವಿರುದ್ಧ ವ್ಯಾಪಕ ಅತೃಪ್ತಿ ವ್ಯಕ್ತಗೊಂಡಿತ್ತು.
ಬಾಲ್ಟಿಮೋರ್ ನಗರದಲ್ಲಿ ಉಂಟಾದ ಬೆಂಕಿಯು 30 ಗಂಟೆಗಳ ಕಾಲ ಹತೋಟಿಗೆ ಸಿಗದೆ 1500 ಕಟ್ಟಡಗಳು ಭಸ್ಮಗೊಂಡವು
ವಾಲ್ಟ್ ಡಿಸ್ನಿಯ ಎರಡನೇ ಪೂರ್ಣ ಪ್ರಮಾಣದ ಅನಿಮೇಟೆಡ್ ಚಿತ್ರವಾದ ‘ಪಿನೋಕ್ಹಿಯೋ ‘ ತನ್ನ ಪ್ರಾರಂಭಿಕ ಪ್ರದರ್ಶನ ನೀಡಿತು.
ಪ್ಲೂಟೋ ಮತ್ತು ನೆಫ್ಚೂನ್ಗಳ ಗುರುತು ಸಿಕ್ಕ ನಂತರದಲ್ಲಿ ಪ್ರಥಮ ಬಾರಿಗೆ ಪ್ಲೂಟೋವು ನೆಫ್ಚೂನ್ ಕಕ್ಷೆಯೊಳಗೆ ಪ್ರವೇಶಿಸಿದ್ದನ್ನು ಗುರುತಿಸಲಾಯಿತು.
ನಾಸಾದ ಬ್ರೂಸ್ ಮೆಕ್’ಕ್ಯಾಂಡಲೆಸ್ ಮತ್ತು ರಾಬರ್ಟ್ ಎಲ್ ಸ್ಟೆವಾರ್ಟ್ ಅವರುಗಳು ಮ್ಯಾನಡ್ ಮ್ಯಾನೋವರಿಂಗ್ ಯೂನಿಟ್ (MMU) ಉಪಯೋಗಿಸಿ ಬಾಹ್ಯಾಕಾಶದಲ್ಲಿ ಬಂಧಮುಕ್ತ ಚಲನೆ ಮಾಡಿದ ಮೊದಲಿಗರೆನಿಸಿದರು.
ಸೋವಿಯತ್ ಕಮ್ಮ್ಯೂನಿಸ್ಟ್ ಪಕ್ಷವು ತನ್ನ ಏಕಸ್ವಾಮ್ಯ ಅಧಿಕಾರವನ್ನು ಬಿಟ್ಟುಕೊಡಲು ನಿರ್ಧರಿಸಿತು. ಇದರಿಂದ ಸೋವಿಯತ್ ಒಕ್ಕೂಟವು ವಿಭಜನೆಗೊಂಡಿತು.
‘ಐ ಎನ್ ಎಸ್ ಶಲ್ಕಿ’ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಮೊದಲ ಜಲಾಂತರ್ಗಾಮಿ ಎನಿಸಿತು.
1993ರ ವರ್ಷದಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆದ ಬಾಂಬ್ ದಾಳಿಯ ಸಂಚುಗಾರ ರಮ್ಜಿ ಯೂಸುಫ್ ಅನ್ನು ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ಬಂಧಿಸಲಾಯಿತು.
‘ನೆಕ್ಸ್ಟ್’ ಸಂಸ್ಥೆ ‘ಆಪಲ್ ಕಂಪ್ಯೂಟರ್’ ಸಂಸ್ಥೆಯೊಂದಿಗೆ ವಿಲೀನಗೊಂಡಿತು. ಇದು ‘ಮ್ಯಾಕ್ ಓಎಸ್ ಎಕ್ಸ್’ (Mac OS X) ಕಂಪ್ಯೂಟರ್ ಚಾಲನಾ ವ್ಯವಸ್ಥೆಗೆ ಹಾದಿ ಮಾಡಿಕೊಟ್ಟಿತು.
ಭಾರತದ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ನವದೆಹಲಿಯಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸಿನ ಎಲ್ಲಾ 10 ವಿಕೆಟುಗಳನ್ನೂ ಗಳಿಸಿ, ಹಿಂದೆ ಜಿಮ್ ಲೇಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದರು.
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರರೆಡ್ಡಿ ಅವರು ತಮ್ಮ ಕುಟುಂಬದ ಒಡೆತನದಲ್ಲಿದ್ದ 310 ಎಕರೆ ಭೂಮಿಯನ್ನು ಪರಿಶಿಷ್ಟ ಮತ್ತು ಹಿಂದುಳಿದ ಜಾತಿಗಳ ಬಡವರಿಗೆ ಹಂಚುವ ಮೂಲಕ ವಿನೂತನ ಜನಪರ ದಾಖಲೆ ಸೃಷ್ಟಿಸಿದರು. ಕಡಪಾ ಜಿಲ್ಲೆಯ ಚಿನ್ನರಾಯ ಸಮುದ್ರಂ ರೆಡ್ಡಿವಾರ ಪಲ್ಲಿ ಮತ್ತು ತಿರನಂಪಲ್ಲಿ ಎಂಬ ಪುಟ್ಟ ಗ್ರಾಮಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ತಮ್ಮ ಸ್ವಂತ ಜಮೀನನ್ನು 108 ಕುಟುಂಬಗಳಿಗೆ ಹಂಚಿದರು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೀವ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಶಂತನು ಭಟ್ಟಾಚಾರ್ಯ ಅವರನ್ನು 2007ನೇ ಸಾಲಿನ ಪ್ರತಿಷ್ಠಿತ ಜಿ.ಡಿ. ಬಿರ್ಲಾ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
ಬ್ಯಾಂಕ್ ಖಾತೆಯಲ್ಲಿ ಅಗತ್ಯದಷ್ಟು ಹಣವಿಲ್ಲ ಎಂಬುದು ಗೊತ್ತಿದ್ದೂ ಬೇರೆಯವರಿಗೆ ಚೆಕ್ ನೀಡಿದ್ದರೆ ಅದು ‘ವಂಚನೆ’ಯಾಗುತ್ತದೆ ಎಂದು ದೆಹಲಿಯ ಗ್ರಾಹಕ ವ್ಯಾಜ್ಯಗಳ ಪರಿಹಾರ ನ್ಯಾಯಾಲಯ ತೀರ್ಪು ನೀಡಿತು.
ಮಾಜಿ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಅವರನ್ನು 2007-08ರ ಸಾಲಿನ ‘ಸಿ.ಕೆ. ನಾಯ್ಡು ಜೀವಮಾನದ ಶ್ರೇಷ್ಠ ಸಾಧಕ ಪ್ರಶಸ್ತಿ’ಗೆ ಆಯ್ಕೆ ಮಾಡಲಾಯಿತು. ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರು ಇದೇ ಸಾಲಿನ ‘ಪಾಲಿ ಉಮ್ರಿಗರ್’ ಪ್ರಶಸ್ತಿಗೆ ಆಯ್ಕೆಯಾದರು.
ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಹವಾಮಾನದ ವೈಪರೀತ್ಯದಿಂದ ಪೊದೆಗಳಲ್ಲಿ ಹತ್ತಿಕೊಂಡ ಕಿಚ್ಚಿನಿಂದಾಗಿ 173 ಜನ ಬೆಂಕಿಯಲ್ಲಿ ಬೆಂದುಹೋದರು.
ಚಿತ್ರದುರ್ಗದಲ್ಲಿ ಹಿರಿಯ ವಿದ್ವಾಂಸ ಡಾ. ಎಲ್. ಬಸವರಾಜು ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಜರುಗಿದ ನಾಲ್ಕು ದಿನಗಳ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಸಮಾರೋಪಗೊಂಡಿತು.
ಉತ್ತರ ಕೊರಿಯಾವು ‘ಕ್ವಾಂಗ್ಮಿಯೊಂಗ್ ಸಾಂಗ್’ ಎಂಬ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಿತು.

ಜನನ:
ಅಮೆರಿಕದ ಕಮ್ಮಾರ ಮತ್ತು ವ್ಯಾಪಾರಿ ಜಾನ್ ಡೀರೆ ಅವರು ವೆರ್ಮಾಂಟ್ ಬಳಿಯ ರುಟ್ ಲ್ಯಾಂಡ್ ಎಂಬಲ್ಲಿ ಜನಿಸಿದರು. ಇವರು ಸ್ಥಾಪಿಸಿದ ‘ಡೀರೆ ಅಂಡ್ ಕಂಪೆನಿ’ ವಿಶ್ವದ ಪ್ರಮುಖ ಮತ್ತು ಅತಿ ದೊಡ್ಡ ವ್ಯವಸಾಯ ಮತ್ತು ನಿರ್ಮಾಣ ಯಂತ್ರಗಳ ತಯಾರಿಕಾ ಸಂಸ್ಥೆಗಳಲ್ಲೊಂದಾಗಿದೆ.
ಮಹಾನ್ ಕತೆಗಾರ ಮತ್ತು ಸಾಮಾಜಿಕ ವಿಮರ್ಶಕ ಚಾರ್ಲ್ಸ್ ಡಿಕನ್ಸ್ ಇಂಗ್ಲೆಂಡಿನ ಹ್ಯಾಂಪ್ ಶೈರ್ ಬಳಿಯ ಲ್ಯಾಂಡ್ ಪೋರ್ಟ್ ಎಂಬಲ್ಲಿ ಜನಿಸಿದರು. ವಿಕ್ಟೋರಿಯನ್ ಯುಗದ ಮಹತ್ವದ ಕತೆಗಾರರೆಂದು ಇವರು ಪ್ರಸಿದ್ಧಿ ಪಡೆದಿದ್ದಾರೆ. ದಿ ಪಿಕ್ವಿಕ್ ಪೇಪರ್ಸ್, ಆಲಿವರ್ ಟ್ವಿಸ್ಟ್, ಡೇವಿಡ್ ಕಾಪರ್ ಫೀಲ್ಡ್, ಎ ಟೇಲ್ ಆಫ್ ಟೂ ಸಿಟೀಸ್, ಗ್ರೇಟ್ ಎಕ್ಸ್ಪೆಕ್ಟೇಶನ್ಸ್ ಮುಂತಾದವು ಇವರ ಪ್ರಸಿದ್ಧ ಕೃತಿಗಳಲ್ಲಿ ಸೇರಿವೆ.
ಅಮೇರಿಕಾದ ನೊಬೆಲ್ ಸಾಹಿತ್ಯ ಪುರಸ್ಕೃತ ಸಾಹಿತಿ ಸಿನ್ಕ್ಲೇರ್ ಲೂಯಿಸ್ ಮಿನೆಸೋಟ ಬಳಿಯ ಸೌಕ್ ಸೆಂಟರ್ ಎಂಬಲ್ಲಿ ಜನಿಸಿದರು. ಇವರು ನೊಬೆಲ್ ಸಾಹಿತ್ಯ ಪುರಸ್ಕಾರ ಗಳಿಸಿದ ಪ್ರಥಮ ಅಮೆರಿಕ ನಿವಾಸಿಯಾಗಿದ್ದಾರೆ.
ಸ್ವೀಡಿಶ್ ವೈದ್ಯ ಶಾಸ್ತ್ರಜ್ಞ ಉಲ್ಫ್ ವಾನ್ ಯೂಲರ್ ಅವರು ಸ್ವೀಡನ್ನಿನ ಸ್ಟಾಕ್ ಹೋಮ್ ನಗರದಲ್ಲಿ ಜನಿಸಿದರು. ‘ನ್ಯೂರೋಟ್ರಾನ್ಸ್ಮೀಟರ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1970 ವರ್ಷದ ನೊಬೆಲ್ ಪುರಸ್ಕಾರ ಸಂದಿತು.
ಭಾರತೀಯ ಕ್ರಾಂತಿಕಾರಿ ಸ್ವಾತಂತ್ಯ್ರ ಹೋರಾಟಗಾರ, ಬರಹಗಾರ ಮತ್ತು ಪತ್ರಕರ್ತ ಮನ್ಮಥ ನಾಥ ಗುಪ್ತ ಬನಾರಸ್ಸಿನಲ್ಲಿ ಜನಿಸಿದರು. ಕೇವಲ ಹದಿಮೂರನೆಯ ವಯಸ್ಸಿಗೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ಇವರು ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್ ಸದಸ್ಯರಾಗಿದ್ದರು. 1925ರ ವರ್ಷದಲ್ಲಿ ಕಾಕೋರಿ ರೈಲು ದರೋಡೆ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಇವರು 14 ವರ್ಷಗಳ ಕಠಿಣ ಜೈಲುವಾಸ ಅನುಭವಿಸಿದರು. ಜೈಲಿನಿಂದ ಹೊರಬಂದ ಮೇಲೆ ಬ್ರಿಟಿಷರ ವಿರುದ್ಧ ಬರೆಯುತ್ತಿದ್ದ ಇವರನ್ನು 1939ರಿಂದ 1946ರ ವರೆಗೆ ಪುನಃ ಬಂಧನದಲ್ಲಿರಿಸಲಾಗಿತ್ತು. 2000ದ ವರ್ಷದಲ್ಲಿ ನಿಧನರಾದ ಇವರು ಕ್ರಾಂತಿಕಾರಿಯ ದೃಷ್ಟಿಯಲ್ಲಿನ ಅನೇಕ ಮಹತ್ವದ ಕೃತಿಗಳನ್ನು ರಚಿಸಿದ್ದರಲ್ಲದೆ, ಆಜ್ ಕಲ್ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.
ರಾಷ್ಟ್ರಕವಿ ಗೌರವಾನ್ವಿತರಾದ ಡಾ. ಜಿ.ಎಸ್. ಶಿವರುದ್ರಪ್ಪನವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು. ಇವರು ಸಾಹಿತ್ಯ ಸೃಜನೆ, ವಿಮರ್ಶೆ, ಮೀಮಾಂಸೆ, ಅಧ್ಯಯನ, ಅಧ್ಯಾಪನ, ಆಡಳಿತ, ಸಂಘಟನೆ – ಈ ಮುಂತಾದ ಸಾಂಸ್ಕೃತಿಕ ನೆಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕನ್ನಡ ಸಂಸ್ಕೃತಿಯ ಚಲನಶೀಲತೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ‘ಸಾಮಗಾನ’, ‘ಚೆಲುವು-ಒಲವು’, ‘ದೇವಶಿಲ್ಪ’, ‘ದೀಪದ ಹೆಜ್ಜೆ’, ‘ಅನಾವರಣ’, ‘ತೆರೆದ ಬಾಗಿಲು’, ‘ಗೋಡೆ’, ‘ವ್ಯಕ್ತಮಧ್ಯ’, ‘ತೀರ್ಥವಾಣಿ’, ‘ಕಾರ್ತಿಕ’, ಕಾಡಿನ ಕತ್ತಲಲ್ಲಿ’, ‘ಪ್ರೀತಿ ಇಲ್ಲದ ಮೇಲೆ’, ‘ಚಕ್ರಗತಿ’ ಅವರ ಪ್ರಮುಖ ಕವನ ಸಂಕಲನಗಳು. ವಿಮರ್ಶೆ, ಮೀಮಾಂಸೆ, ಪ್ರವಾಸ ಕಥನ, ವ್ಯಕ್ತಿಚಿತ್ರಣ, ಆತ್ಮಚರಿತ್ರೆಗಳನ್ನೂ ಬರೆದಿದ್ದಾರೆ. ರಾಷ್ಟ್ರಕವಿ ಗೌರವವಲ್ಲದೆ, ರಾಜ್ಯ ಮತ್ತು ಕೇಂದ್ರ ಅಕಾಡೆಮಿ ಗೌರವ, ಹಲವು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್, ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.
ಕವಿ, ಪ್ರಾಧ್ಯಾಪಕ, ಚಲನಚಿತ್ರ ಸಾಹಿತಿ, ಉಪನ್ಯಾಸಕ ಡಾ. ದೊಡ್ಡರಂಗೇಗೌಡ ಅವರು ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ ಜನಿಸಿದರು. ಅನೇಕ ಕಾವ್ಯ ಸಂಕಲನಗಲ್ಲದೆ, ಸಂಶೋಧನಾ ಗ್ರಂಥಗಳನ್ನೂ ಪ್ರಕಟಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿಧಾನ ಪರಿಷತ್ ಸದಸ್ಯತ್ವ ಗೌರವ, ಚಲನಚಿತ್ರ ಗೀತ ಸಾಹಿತ್ಯಕ್ಕಾಗಿನ ಪ್ರಶಸ್ತಿಗಳು ಹೀಗೆ ಅನೇಕ ಗೌರವಗಳು ಅವರಿಗೆ ಸಂದಿವೆ.
ಪ್ರಸಿದ್ಧ ಪತ್ರಕರ್ತ, ಬರಹಗಾರ, ಚಲನಚಿತ್ರ ಮತ್ತು ಕಿರುತೆರೆ ಕಥೆಗಾರ ಅಶೋಕ್ ಬ್ಯಾಂಕರ್ ಮುಂಬೈನಲ್ಲಿ ಜನಿಸಿದರು.
ಯೆಮನ್ ದೇಶದ ಪತ್ರಕರ್ತೆ, ರಾಜಕಾರಣಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ತವಕ್ಕೊಲ್ ಕರ್ಮಾನ್ ಜನಿಸಿದರು. ‘ವುಮೆನ್ ಜರ್ನಲಿಸ್ಟ್ಸ್ ವಿತೌಟ್ ಚೈನ್ಸ್’ ಎಂಬ ಸಂಘಟನೆಯ ನೇತೃತ್ವ ವಹಿಸಿರುವ ಅವರಿಗೆ 2011ರ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ದೊರೆತಿದೆ.

ನಿಧನ:
ನೊಬೆಲ್ ಪುರಸ್ಕೃತ ಅಮೆರಿಕದ ನ್ಯಾಯವಾದಿ ಮತ್ತು ರಾಜಕಾರಣಿ ಎಲಿಹು ರೂಟ್ ನ್ಯೂಯಾರ್ಕ್ ನಗರದಲ್ಲಿ ನಿಧನರಾದರು. ಅವರಿಗೆ 1912ರ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.
ಫೈರ್ ಸ್ಟೋನ್ ಟೈರ್ ಮತ್ತು ರಬ್ಬರ ಕಂಪೆನಿಯ ಸ್ಥಾಪಕರಾದ ಹಾರ್ವೆ ಸಾಮ್ಯುಯಲ್ ಅವರು ಅಮೆರಿಕದ ಫ್ಲೋರಿಡಾ ನಗರದಲ್ಲಿ ನಿಧನರಾದರು.