ಹೆಣ್ಣಿನಲ್ಲಿ ಆರ್ಗ್ಯಾಸಮ್ ಕೊರತೆಯಿಂದಲೇ ಮೂಲಭೂತವಾಗಿ ಬೇರೂರಿದ ಟೆನ್‌ಷನ್ (ಉದ್ವೇಗ), ನಿರಾಶೆ ಉಂಟಾಗಲು ಕಾರಣವಾಗಿದೆ ಮತ್ತು ಮನೋದೈಹಿಕ ತೊಂದರೆಗಳು ಹಾಗೂ ದಾಂಪತ್ಯದಲ್ಲಿ ಅಸಂತೋಷ ಉಂಟಾಗಲು ಕಾರಣ ಎಂದು ತಿಳಿಸಿದರೆ ಇತರೆ ತಜ್ಞಬರಹಗಾರರು, ಅನೇಕ ವಿವಾಹಿತ ಮಹಿಳೆಯರು ಆರ್ಗ್ಯಾಸಮ್‌ನ ಅನುಭವವಿಲ್ಲದಿದ್ದರೂ ಲೈಂಗಿಕವಾಗಿ ತೃಪ್ತಿಯನ್ನು ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ.

ಲೈಂಗಿಕ ಶಾಸ್ತ್ರ ಡಾ|| ಕಿನ್ಸ್, ಹೆಣ್ಣಿನ ಆರ್ಗ್ಯ್‌ಸಮ್‌ನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಾರದು. ಲೈಂಗಿಕ ಸಂಬಂಧದಲ್ಲಿ ಆಕೆ ಯಾವ ಪ್ರಯಾಣದಲ್ಲಿ ‘ಲೈಂಗಿಕ ತೃಪ್ತಿ’ಯನ್ನು ಪಡೆದಿದ್ದಾಳೆ ಎನ್ನುವುದು ಮುಖ್ಯ ಎಂದಿದ್ದಾರೆ.

ಸಿ.ಆರ್. ಆಡಮ್ ಪೆನ್ ಸಿಲ್ವೇನಿಯಾಸ್ಟೇಟ್ ಯೂನಿವರ್ಸಿಟಿಯಲ್ಲಿ ೧೫೦ ಮಂದಿ ವಿವಾಹಿತ ಸ್ತ್ರೀಯರನ್ನು ಅಧ್ಯಯನ ಮಾಡಿ “ದಾಂಪತ್ಯ ಸಂತೋಷ ಲೈಂಗಿಕ ಹೊಂದಾಣಿಕೆಯನ್ನು ಅವಲಂಬಿಸಿರುತ್ತದೆ. ಪತ್ನಿ ಲೈಂಗಿಕವಾಗಿ ಪ್ರತಿಕ್ರಿಯೆ ತೋರದಿದ್ದರು ದಾಂಪತ್ಯದಲ್ಲಿ ಸಂತೋಷದಿಂದಿರಬಹುದು. ಆದುದರಿಂದ ಇನ್ನಿತರೆ ಸಂಗತಿಗಳು ಅಷ್ಟು ಮುಖ್ಯವಲ್ಲ ಎಂದು ತಿಳಿಸಿದ್ದಾರೆ.

ಹನ್ಹಾ ಮತ್ತು ಅಬ್ರಹಾಂ ಸ್ಟೋನ್ ಎಂಬ ತಜ್ಞರು ಹೆಣ್ಣು ಆರ್ಗ್ಯಾಸಮ್‌ನ್ನು ತಲುಪದಿದ್ದರೆ, ಆಕೆ ಸ್ವಲ್ಪ ಸಮಯ ಅತೃಪ್ತ ಮತ್ತು ಅವಿಶ್ರಾಂತ ಸ್ಥಿತಿಯಿಂದ ಕೂಡಿರಬಹುದು. ಅಲ್ಲದೆ, ಅತೃಪ್ತ ಪುನರಾವರ್ತಿತ ಅನುಭವಗಳಿಂದ ಸ್ತ್ರೀ ಶಾರೀರಿಕ ಮತ್ತು ಭಾವನಾತ್ಮಕ ತೊಂದರೆಗಳಿಗೆ ತುತ್ತಾಗಬಹುದು ಎಂದು ಅಭಿಪ್ರಾಯಪಡುತ್ತಾರೆ.

ಜೋನ್ ಮೆಲ್ಲೇಸನ್‌ರವರು ಪತ್ನಿಯಲ್ಲಿ ಲೈಂಗಿಕ ತೃಪ್ತಿಗಾಗಿ ‘ಆರ್ಗ್ಯಾಸಮ್‌’ ಉಂಟಾಗಬೇಕೆಂಬುದನ್ನು ನಿರಾಕರಿಸುತ್ತಾರೆ. ಅವರು ಅನೇಕ ಸ್ತ್ರೀಯರು ‘ಆರ್ಗ್ಯಾಸಮ್‌’ಹೊಂದದಿದ್ದರೂ, ಸಾಮರಸ್ಯದಿಂದ ದಾಂಪತ್ಯ ಜೀವನವನ್ನು ಮುನ್ನಡೆಸುತ್ತಾ ಆರೋಗ್ಯದಿಂದಿದ್ದಾರೆ. ಆದರೂ ಗಂಡ ತನ್ನ ಹೆಂಡತಿ ಯೋನಿಭಾಗದಲ್ಲಿ ಆರ್ಗ್ಯಾಸಮ್‌ನ್ನು ಹೊಂದಲು ನೆರವಾಗಬೇಕೆಂದು ತಿಳಿಸಿದ್ದಾರೆ.

೫೪೦ ಮಂದಿ ವಿವಾಹಿತ ಮಹಿಳೆಯರನ್ನು ಅಧ್ಯಯನ ಮಾಡಿರುವ ವಾಲಿನ್ಸ್‌ರವರು ಅನೇಕ ಮಹಿಳಯರು ಆರ್ಗ್ಯಾಸಮ್‌ನ್ನು ಸೆಕ್ಸ್‌ಕ್ಲೈಮಾಕ್ಸ್ ಹೊಂದದೆಯೇ ಲೈಂಗಿಕ ಸಂಭೋಗದಿಂದಲೇ ತೃಪ್ತಿ ಮತ್ತು ಸಂತೋಷವನ್ನು ಹೊಂದುತ್ತಾರೆ ಎಂದು ತಿಳಿಸಿರುತ್ತಾರೆ.

ಸ್ತ್ರೀ ಲೈಂಗಿಕತೆಯಲ್ಲಿ ಭಾವನಾತ್ಮಕ ಅಡೆತಡೆಗಳು

ಮನೋವಿಜ್ಞಾನಿ ಮೆನಿನ್ಡೆರ್‌ರವರು, ಸ್ತ್ರೀಯರಲ್ಲಿ ಉಂಟಾಗುವ ಭಾವನಾತ್ಮಕ ಅಡೆತಡೆಗಳನ್ನು ಮೂರು ಭಾಗವಾಗಿ ವಿಂಗಡಿಸಿದ್ದಾರೆ.

ಅವುಗಳೆಂದರೆ:

೧. ಬಲವಾದ ಭಯಗಳು

೨. ಪುರುಷ ಆಕ್ರಮಣಶಾಲಿ ಎಂಬ ಬಲವಾದ ಭಾವನೆ.

೩. ಸಂಘರ್ಷದಿಂದ ಕೂಡಿದ ಪ್ರೀತಿ-ಪ್ರೇಮ

. ಬಲವಾದ ಭಯಗಳು: ಶಿಕ್ಷೆ ನೀಡುತ್ತಾರೆ ಎಂಬ ಭಯ, ನಾನು ಅರ್ಪಿಸಿಕೊಳ್ಳಬೇಕಲ್ಲ ಎಂಬ ಭಯ, ಪುರುಷ ಹಿಂಸಿಸುತ್ತಾನೆ ಎಂಬ ಭಯ, ನಾನು ಗರ್ಭವತಿ ಆಗುತ್ತೇನೆ ಎಂಬ ಭಯ. ಉದಾಹರಣೆಗೆ, ಕೆಲವು ಸ್ತ್ರೀಯರು ಸೆಕ್ಸ್‌ನ್ನು ಪಾಪ ಮತ್ತು ತಪ್ಪು, ಶಿಕ್ಷಾರ್ಹವಾದುದ್ದೆಂದು ಭಾವಿಸಿರುತ್ತಾರೆ. ಕೆಲವೊಮ್ಮೆ ಈ ಭಯದ ಪ್ರತಿಕ್ರಿಯೆ ಜಾಗೃತ ಮನಸ್ಸಿನಲ್ಲಿರುತ್ತದೆ.

. ಪುರುಷ ಆಕ್ರಮಣಶಾಲಿ ಎಂಬ ಬಲವಾದ ಭಾವನೆ: ಇದು ದ್ವೇಷ, ತಿರಸ್ಕಾರ, ಪುರುಷ ವಿರೋಧಿ ಸೇಡನ್ನು ಅವಲಂಬಿಸಿರುತ್ತದೆ.

. ಸಂಘರ್ಷದಿಂದ ಕೂಡಿದ ಪ್ರೀತಿಪ್ರೇಮ: ಇದರಲ್ಲಿ ಭಾವನಾತ್ಮಕ ಸಾಮೀಪ್ಯವನ್ನಾಗಲಿ, ಶಾರೀರಿಕ ಸಾಮೀಪ್ಯವನ್ನಾಗಲಿ, ಪುರುಷನಿಂದ ಬಯಸಲು ಆಕೆಯ ಮನಸ್ಸು ಹಿಂಜರಿಯುತ್ತದೆ.

ಒಟ್ಟಾರೆ ಮಹಿಳೆ ಜಾಗೃತ ಮನಸ್ಸಿನಲ್ಲಾಗಲಿ ಅಥವಾ ಸುಪ್ತ ಮನಸ್ಸಿನಲ್ಲಾಗಲಿ, ಅತಿ ಭಯದಿಂದ, ಅಪರಾಧ ಮನೋ ಭಾವನೆಯಿಂದ ಅಥವಾ ಅತಿಯಾದ ಸಂಘರ್ಷಗಳಿಂದ ಕೂಡಿದ್ದ ಲೈಂಗಿಕ ಪ್ರೀತಿಯನ್ನು ಗಳಿಸಲು ಆಕೆಗೆ ತೊಡಕುಂಟಾಗುತ್ತದೆ. ಇಂತಹ ಸ್ಥಿತಿಯನ್ನು ಹೊಂದಿರುವ ಹೆಣ್ಣನ್ನು ಮನೋವೈದ್ಯರಲ್ಲಿ ತೋರಿಸಿ ಸೂಕ್ತ ಚಿಕಿತ್ಸೆಯನ್ನು ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ.

ಕೆಲವೊಮ್ಮೆ ಗಂಡಂದಿರನ್ನು ಆಕ್ಷೇಪಿಸಬೇಕಾಗುತ್ತದೆ!

ಅನೇಕ ಗಂಡಂದಿರು, ಒಳ್ಳೆಯ ಲೈಂಗಿಕ ಸಂಗಾತಿಗಳಾಗಿರುವುದಿಲ್ಲ. ತಮ್ಮ ಪತ್ನಿಯರು ಸೆಕ್ಸ್‌ನ್ನು ವಿರೋಧಿಸಲು ಗಂಡಂದಿರ ಕೆಟ್ಟ ವರ್ತನೆಯೇ ಕಾರಣವಾಗಿರುತ್ತದೆ. ಲೈಂಗಿಕ ವಿಚಾರಗಳಲ್ಲಿ, ವೈಜ್ಞಾನಿಕವಾಗಿ ಸಲಹೆ ಸೂಚನೆ ಬೋಧನೆಗೆ ಪತ್ನಿ ಪೂರ್ಣವಾಗಿ ಗಂಡನನ್ನೇ ಅವಲಂಬಿಸಬೇಕಾಗಿರುವುದರಿಂದ ಆತ ಒಳ್ಳೆಯ ಉಪಾಧ್ಯಾಯನಂತೆ ತನ್ನ ಹೆಂಡತಿಗೆ ಏಕಾಂತದಲ್ಲಿ ಆಗಿಂದಾಗ್ಯೆ ‘ದಾಂಪತ್ಯ ಲೈಂಗಿಕ ವಿಜ್ಞಾನ’ದ ಬಗ್ಗೆ ಹಂತ-ಹಂತವಾಗಿ ತಿಳಿಸುವುದರಿಂದ ಆಕೆ ದಾಂಪತ್ಯ ಲೈಂಗಿಕ ಸಂಬಂಧದಲ್ಲಿ ಸಹಕರಿಸಲು ಸಾಧ್ಯವಾಗುತ್ತದೆ. ಆದರೆ ಅನೇಕ ಪುರುಷರು ಲೈಂಗಿಕ ವಿಜ್ಞಾನ ಸಾಹಿತ್ಯವನ್ನು ಅಧ್ಯಯನ ಮಾಡಿ ವಿಚಾರಗಳನ್ನು ತಿಳಿದುಕೊಂಡು ತಮ್ಮ ಸಂಗಾತಿಯ ಜೊತೆ ಏಕಾಂತದಲ್ಲಿ ಚರ್ಚಿಸಲು ಆಸಕ್ತರಾಗಿರುವುದಿಲ್ಲ.

ಡಾ|| ಲೊಯಿಸ್ ಬಿಸಚ್ ರವರು “ಹೆಣ್ಣು ಅತ್ಯುತ್ತಮವಾದ ಸಂಗೀತ ವಾದ್ಯವಿದ್ದಂತೆ. ಗಂಡ ಪತ್ನಿಯೊಂದಿಗೆ ಪ್ರೇಮದಾಟವನ್ನು ಹೇಗೆ ಆಡಬೇಕೆಂಬುದನ್ನು ಕಲಿತರೆ, ಆತನ ಆಸೆಯಂತೆ ಮಧುರ ಸಂಗೀತ ಮೂಡುತ್ತದೆ” ಎಂದು ತಿಳಿಸಿದ್ದಾರೆ. ಅನೇಕ ಪುರುಷರು ಸೆಕ್ಸ್‌ನ್ನು ಶಾರೀರಿಕವಾದದ್ದು ಎಂದು ಭಾವಿಸಿದ್ದಾರೆ. ಡಾ|| ಲೊಯಿಸ್ ಬಿಸಚ್‌ರವರ ಪ್ರಕಾರ ಲೈಂಗಿಕತೆಗೆ, ಮಾನಸಿಕ-ಶಾರೀರಿಕ ಸಾಮರಸ್ಯ ಬಹಳ ಮುಖ್ಯವೆಂದಿದ್ದಾರೆ. ಪತಿರಾಯರು, ತನ್ನ ಪತ್ನಿಗೆ ಸ್ನೇಹಪೂರ್ವಕವಾಗಿ ಪ್ರಣಯ ಪಾಠಗಳನ್ನು ಏಕಾಂತದಲ್ಲಿ ಬೋಧಿಸದಿದ್ದರೆ, ಆಕೆ ಲೈಂಗಿಕವಾಗಿ ಪ್ರತಿಕ್ರಿಯೆಯನ್ನು ತೋರಲು ತೊಡಕುಂಟಾಗುತ್ತದೆ.

ದಾಂಪತ್ಯ ಜೀವನದಲ್ಲಿ ಗಂಡ-ಹೆಂಡತಿಯಲ್ಲಿ ಮಾನಸಿಕ ಅಥವಾ ಶಾರೀರಿಕ ತೊಂದರೆ ಇದ್ದರೆ, ತಜ್ಞವೈದ್ಯರನ್ನು ಕಂಡು ಸರಿಪಡಿಸಿಕೊಳ್ಳುವುದು ಆರೋಗ್ಯಕರ ದಾಂಪತ್ಯದ ದೃಷ್ಟಿಯಿಂದ ಅಗತ್ಯ.

ಅಪರಾಧ ಮನೋಭಾವನೆಯಿಂದ ನಿರುತ್ಸಾಹ

ಅನೇಕ ಮಹಿಳೆಯರಲ್ಲಿ ಭೂತಕಾಲದಲ್ಲಿ ಅಥವಾ ವರ್ತಮಾನಕಾಲದಲ್ಲಿ, ಸೆಕ್ಸ್‌ಗೆ ಸಂಬಂಧಿಸಿದಂತೆ ಉಂಟಾದ ತಪ್ಪು ಕಲ್ಪನೆಯಿಂದ ಅಥವಾ ಅಪರಾಧ ಮನೋಭಾವನೆಯಿಂದ (ಗಿಲ್ಟಿ) ಲೈಂಗಿಕ ಕ್ರಿಯೆಯಲ್ಲಿ ಸಂತೋಷವನ್ನು ಗಳಿಸಲು ಸಾಧ್ಯವಾಗುವುದಿಲ್ಲ.

ಲೈಂಗಿಕ ಸ್ವೇಚ್ಛಾಚಾರದ ಚಟಕ್ಕೆ ತುತ್ತಾದ ಅನೇಕ ಮಹಿಳೆಯರು ಸಹ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಆರ್ಗ್ಯಾಸಮ್‌ನ್ನು ಹೊಂದಲು ತೊಡಕುಂಟಾಗುತ್ತದೆ.

ಗಂಡನ ಬಗ್ಗೆ ಬಲವಾದ ವಿರೋಧ ಭಾವನೆಯಿದ್ದರೆ, ಪತ್ನಿ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಸುಖ ಶಿಖರ ಅಥವಾ ಉದ್ರೇಕಾವಸ್ಥೆಯನ್ನು ಹೊಂದಲು ಕಷ್ಟವಾಗುತ್ತದೆ. ಡಾ|| ಫ್ರಾಂಕ್ ಎಸ್. ಕಾಪ್ರಿವೋ ಅವರ ಪ್ರಕಾರ ಸಾಮಾನ್ಯವಾಗಿ ಬೇಕಾಮನೆ ಜಗಳಗಂಟಿಗರಲ್ಲಿ, ಉದ್ವೇಗ ಮನೋಭಾವದವರಲ್ಲಿ, ವಿಶ್ರಾಂತಿ ಇಲ್ಲದವರಲ್ಲಿ, ನರ್ವಸ್ ಆಗಿರತಕ್ಕವರಲ್ಲಿ ಹಾಗೂ ಲೈಂಗಿಕ ಸಂಬಂಧದ ಸಂದರ್ಭದಲ್ಲಿ ಏಕಾಗ್ರತೆಯನ್ನು ಹೊಂದಲಾಗದವರಲ್ಲಿ ಅಭಿವೃದ್ಧಿಗೊಲ್ಳುತ್ತದೆಂದು ತಿಳಿಸಿದ್ದಾರೆ. ಅಲ್ಲದೆ ಬೇಕಾಮನೆಯ ಪತ್ನಿಯರು ಲೈಂಗಿಕ ಅತೃಪ್ತಿಯಿಂದಾಗಿ ಸಾಮಾನ್ಯವಾಗಿ ಹಿಂಸಾರತಿಗಳಾಗಿರುತ್ತಾರೆಂದು ಅವರಲ್ಲಿ ದೂಷಿಸುವ ಮತ್ತು ಜಗಳವಾಡುವ ಪ್ರವೃತ್ತಿಯಿರುತ್ತದೆಂದು, ಎಲ್ಲ್‌ಆ ಬೇಕಾಮನೆಯ ಹೆಂಗಸರು ಅಧಿಕವಾಗಿ ಥಟ್ಟನೆ ಕೆರಳುವ ಮತ್ತು ಮನೋದೌರ್ಬಲ್ಯದಿಂದ ಕೂಡಿರುತ್ತಾರೆಂದು ಖ್ಯಾತ ಮನೋವೈದ್ಯರಾದ ಡಾ|| ಫ್ರಾಂಕ್ ಎಸ್. ಕಾಪ್ರಿವೋ ಅವರ ಅಭಿಪ್ರಾಯ.

* * *