ನಿಮ್ಮ ಪತ್ನಿ ಲೈಂಗಿಕವಾಗಿ ನಿರಾಸಕ್ತಿಯನ್ನು ತೋರುತ್ತಇದ್ದರೆ, ಆಕೆ ಲೈಂಗಿಕವಾಗಿ ಪ್ರತಿಕ್ರಿಯೆಯನ್ನು ತೋರಲು ನೀವು ಸಹಾಯವನ್ನು ಮಾಡಬೇಕು.

ಸಹಾಯ ಮಾಡುವ ಮೊದಲು ಈ ಕೆಳಕಂಡ ಪ್ರಶ್ನೆಗಳನ್ನು ನಿಮಗೆ, ನೀವೇ ಹಾಕಿಕೊಳ್ಳಬೇಕು:

. ನೀವು ರೊಮ್ಯಾಂಟಿಕ್ ವಾತಾವರಣವನ್ನು ಸೃಷ್ಟಿಸುತ್ತೀರಾ?

ಈ ಆಧುನಿಕ ಯುಗದಲ್ಲೂ ಮಹಿಳೆ ಲೈಂಗಿಕಾಸೆಯನ್ನು ತೋರಬೇಕಾದರೆ, ನಿಮನ್ನು ಪ್ರೀತಿಸಬೇಕಾದರೆ, ಆಕೆ ಲವಲವಿಕೆಯಿಂದ ಇರಬೇಕಾದರೆ, ಲೈಂಗಿಕವಾದ ರೊಮ್ಯಾಂಟಿಕ್ ವಾತಾವರಣವನ್ನು ಏಕಾಂತದಲ್ಲಿ ಸೃಷ್ಟಿಸಿದರೆ, ಆಕೆಯಲ್ಲಿರುವ ಸಂವೇದನಾ ಶೀಲ ಪುಷ್ಪ ಅರಳಲು ಸಹಾಯಕವಾಗುತ್ತದೆ. ಯಾವ ಪೂರ್ವಭಾವಿ ಸಿದ್ಧತೆಯಿಲ್ಲದೆಯೇ, ನಿಮ್ಮ ಪತ್ನಿ ಮಲಗುವ ಕೋಣೆಯನ್ನು ಪ್ರೀತಿ-ಪ್ರೇಮ-ಪ್ರಣಯದ ಪ್ರತಿಕ್ರಿಯೆಯನ್ನು ತೋರಿಸಬೇಕೆಂದು ನೀವು, ನಿರೀಕ್ಷಿಸುವುದು ತಪ್ಪು. ನಿಮ್ಮಾಕೆಗೆ ಇಷ್ಟವಾದ ಹೂವನ್ನಾಗಲಿ, ಹಣ್ಣನ್ನಾಗಲಿ, ತಿಂಡಿಯನ್ನಾಗಲಿ ತಂದು ಕೊಡುವುದು. ಮುಂಜಾನೆ ಅಥವಾ ಸಂಜೆ ವಾಕಿಂಗ್ ಕರೆದುಕೊಂಡು ಹೋಗುವುದರಿಂದ, ಪ್ರೀತಿಯ ಮಾತುಗಳನ್ನಾಡುವುದರಿಂದ ನಿಮ್ ಪತ್ನಿಯಲ್ಲಿ ‘ಪ್ರೇಮ-ಕಾಮ’ದ ಮೂಡ್ ಉಂಟಾಗಲು ಸಹಾಯಕವಾಗುತ್ತದೆ.

. ನೀವು ಸಂಭೋಗಪೂರ್ಣ ಕಾಮಕೇಳಿ (ಫೋರ್ಪ್ಲೇ)ಯಲ್ಲಿ ಸಾಕಷ್ಟು ಸಮಯವನ್ನು ಕಳೆಯುವಿರಾ?

ಎಷ್ಟೋ ಪುರುಷರಿಗೆ, ಸ್ತ್ರೀ ಲೈಂಗಿಕವಾಗ ಪ್ರತಿಕ್ರಿಯೆಯನ್ನು ತೋರಬೇಕಾದರೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾಳೆ ಎಂಬುದು ಗೊತ್ತಿಲ್ಲ ಅಥವಾ ಮರೆತುಬಿಡುತ್ತಾರೆ. ಈ ರಾತ್ರಿ ನೀನು ನನಗೆ ‘ರತಿ’ ತರಹ ಕಾಣುತ್ತಿದ್ದೀಯಾ ಎಂದು ಪ್ರೀತಿಯಾ ಮಾತಾಡಿದರೆ ಅದು ಕೂಡ ರತಿ ಕೂಟಮುನ್ನಲಿವೇ ಆಗಿರುತ್ತದೆ.

ಏಕಾಂತದಲ್ಲಿ ಚುಂಬನ, ಆಲಿಂಗನ, ಆರೈಕೆಯೇ ಮೊದಲಾದ ಮುದ್ದಾಟ, ಪ್ರೇಮ-ಕಾಮದಾಟ, ಲೈಂಗಿಕ ಸಂಭೋಗಕ್ಕೆ ಮೊದಲು ನಡೆದಾಗ, ನಿಮ್ಮಾಕೆ ‘ಸಾಮೀಪ್ಯ ಸಂತೋಷ ಕೂಟ’ಕ್ಕೆ ಸ್ವಾಗತಿಸುತ್ತಾಳೆ. ಏಕಾಂತ (ಪ್ರೈವೆಸಿ)ದಲ್ಲಿ ಸ್ತ್ರೀ ಮುದ್ದಾಟವನ್ನು ಆಕೆಯಲ್ಲಿ ಪ್ರೇಮ-ಭಾವನೆ, ಭದ್ರತಾ ಭಾವನೆ, ಗಂಡನ ಬಗ್ಗೆ ಪ್ರೀತಿ-ವಿಶ್ವಾಸ ಉಂಟಾಗುತ್ತದೆ. ನಿಜವಾದ ಮುದ್ದಾಟದಿಂದ ‘ವಿಶ್ವಾಸ ಪ್ರಜ್ಞಾ ಪ್ರೀತಿ’ ಸೃಷ್ಟಿಯಾಗಿ ಆಕೆ ಲೈಂಗಿಕವಾಗಿ ಪ್ರತಿಕ್ರಿಯೆ ತೋರಲು ಸಹಾಯಕವಾಗುತ್ತದೆ.

. ನಿಮ್ಮ ಭಾವೋದ್ವೇಗವನ್ನು ಅಥವಾ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವಿರಾ?

ಪರಸ್ಪರ ಗಂಡ-ಹೆಂಡತಿ ಅನಾವಶ್ಯಕವಾಗಿ ಕೋಪಗೊಂಡರೆ, ಭಾವೋದ್ವೇಗಕ್ಕೆ ಒಳಗಾದರೆ, ದೂಷಿಸಿಕೊಂಡರೆ ಅಥವಾ ನಕಾರಾತ್ಮಕವಾದ ಭಾವೋದ್ವೇಗಗಳು ‘ದಾಂಪತ್ಯ ಸಂಬಂಧ’ವನ್ನು ಹಾಳು ಮಾಡುತ್ತದೆ. ನಕಾರಾತ್ಮಕ (ನೆಗೆಟೀವ್ ಎಮೋಷನ್ಸ್) ವಾದ ಭಾವೋದ್ವೇಗಗಳು ಯಾವ ರೀತಿಯಿಂದ ಅಭಿವ್ಯಕ್ತಗೊಂಡರೂ, ಸ್ತ್ರೀಯ ಲೈಂಗಿಕತೆಯ ಮೇಲೆ ಪರಿಣಾಮವವನ್ನು ಬೀರುತ್ತದೆ. ಹೆಣ್ಣಿನ ಆತಂಕ ಮನೋಭಾವನೆ, ಆಕೆ ಶಾರೀರಿಕವಾಗಿ., ಲೈಂಗಿಕವಾಗಿ ಪ್ರತಿಕ್ರಿಯೆಯನ್ನು ತೋರಲು ಅಡ್ಡಿಯನ್ನುಂಟು ಮಾಡುತ್ತದೆ.

. ನೀವು ಆಕೆಯನ್ನು ಪ್ರೋತ್ಸಾಹಿಸುತ್ತಿದ್ದೀರಾ?

ಏಕಾಮತದಲ್ಲಿ ನಿಮ್ಮಾಕೆ ತನು-ಮನವನ್ನು ಪ್ರೇಮ ಪೂರ್ವಕವಾಗಿ ಬಿಚ್ಚಿಕೊಳ್ಳಲು ಪ್ರೋತ್ಸಾಹವನ್ನು ನೀಡಿರಿ. ಯಾವುದೇ ಕಾರಣಕ್ಕೂ ಆಕೆಯ ದೇಹದ ಬಗ್ಗೆ ದೂಷಿಸಬೇಡಿರಿ. ನಿಮ್ಮಿಂದ ಆಕೆ ಸ್ಪರ್ಶ ಸುಖವನ್ನು ಅನುಭವಿಸಲು ಅವಕಾಶ ಮಾಡಿಕೊಡಿರಿ. ದಂಪತಿಗಳ ನಡುವೆ ‘ಏಕಾಂತ’ದಲ್ಲಿ ನಯನಾಜೂಕಿನ ನಗ್ನತೆ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಮರೆಯಬೇಡಿರಿ. ಸಾಮಾನ್ಯವಾಗಿ ಲೈಂಗಿಕ ನಿರಾಸಕ್ತಿಯನ್ನು ಹೊಂದಿರುವ ಹೆಣ್ಣು ತನ್ನ ಶರೀರವನ್ನು ನೋಡಿಕೊಳ್ಳಲು ಕೂಡ ಹಿಂಜರಿಯುತ್ತಾಳೆಂದು ಲೈಂಗಿಕ ತಜ್ಞರ ಅಭಿಪ್ರಾಯ.

. ನಿಮ್ಮಾಕೆ ಹಸ್ತ ಮೈಥುನವನ್ನು ಮಾಡಿಕೊಳ್ಳಲು ಸಲಹೆ ನೀಡುತ್ತೀರಾ?

ಬೇಕಾಮನೆಯನ್ನು ಹೊಂದಿರುವ ಅನೇಕ ಸ್ತ್ರೀಯರು ಚಿಕಿತ್ಸಾ ವಿಧಾನವಾಗಿ, ಹಸ್ತಮೈಥುನದ ಕಲಿಕೆಯಿಂದ ಶರೀರದಲ್ಲಿ ಆನಂದವನ್ನು ಹೊಂದುತ್ತಾರೆ. ಆದರೆ ಅನೇಕ ಸ್ತ್ರೀಯರು, ಸ್ವಯಂ ಹಸ್ತಮೈಥುನವನ್ನು ಮಾಡಿಕೊಳ್ಳುವುದು ಕೊಳಕು, ಪಾಪ ಎಂದು ಭಾವಿಸುತ್ತಾರೆ. ನೀವುಮುಕ್ತವಾಗಿ ಪ್ರೀತಿ ಪೂರ್ವಕವಾಗಿ ಮಾತಾಡಿ (ಲೈಂಗಿಕ ಪರಾಕಾಷ್ಠತೆಯನ್ನು ಹೊಂದುವ ದೃಷ್ಟಿಯಿಂದ) ಹಸ್ತಮೈಥುನವನ್ನು ಮಾಡಿಕೊಳ್ಳಲು ‘ಪ್ರಣಯ ಪ್ರೋತ್ಸಾಹ’ವನ್ನು ನೀಡಿದರೆ, ಆಕೆ ಸ್ವಯಂ ಸಂತೋಷವನ್ನು ಹೊಂದಲು ಸಹಾಯಕವಾಗುತ್ತದೆ. ನೀವು ಹಸ್ತಮೈಥುನದ ಬಗ್ಗೆ ಆರೋಗ್ಯಕರ ಮನೋಭಾವನೆ ಹೊಂದಿಲ್ಲದಿದ್ದರೆ, ನೀವು ಆ ಬಗ್ಗೆ ಮರುಚಿಂತನೆ ಮಾಡಬೇಕಾಗುತ್ತದೆ.

. ನೀವು ಲೈಂಗಿಕ ಚಿಕಿತ್ಸೆಯ ಬಗ್ಗೆ ಉತ್ತಮ ಅಭಿಪ್ರಾಯವನ್ನು ಪಡೆದಿದ್ದೀರಾ?

ಲೈಂಗಿಕ ನಿರಾಸಕ್ತಿಯನ್ನು ತೋರುವ ನಿಮ್ಮಾಕೆಯ ತಾಳ್ಮೆ, ಸಂಯಮ, ಜಾಣ್ಮೆ, ಪ್ರೀತಿಯಿಂದ ಪ್ರೋತ್ಸಾಹಿಸಿದರೆ ಆಕೆ ಲೈಂಗಿಕವಾಗಿ ಪ್ರತಿಕ್ರಿಯೆಯನ್ನು ತೋರಲು ಸಹಾಯಕವಾಗುತ್ತದೆ. ಪ್ರೀತಿ ಚಿಕಿತ್ಸೆಯಿಂದ ಪ್ರಯತ್ನಿಸಿದರೂ, ನಿಮ್ಮ ಹೆಂಡತಿ ಲೈಂಗಿಕವಾಗಿ ಪ್ರತಿಕ್ರಿಯೆ ತೋರದಿದ್ದರೆ, ಲೈಂಗಿಕ ತಜ್ಞರಿಂದ ಅಥವಾ ಸ್ತ್ರೀ ಆರೋಗ್ಯ ತಜ್ಞರಿಂದ ಅಥವಾ ಮನೋವೈದ್ಯರಿಂದ ಸಲಹೆ ಚಿಕಿತ್ಸೆಯನ್ನು ಪಡೆಯುವುದಕ್ಕೆ ಹಿಂಜರಿಯಬಾರದು.

ಆದರೆ ಸ್ತ್ರೀ ಲೈಂಗಿಕವಾಗಿ ಪ್ರತಿಕ್ರಿಯೆಯನ್ನು ತೋರದಿದ್ದರೆ ಪುರುಷ ಬಲಾತ್ಕಾರವನ್ನು ಮಾಡುವುದರಿಂದ, ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಸಹನೆ, ಸಂಯಮವಿದ್ದರೆ, ಪ್ರೀತಿ-ಪ್ರೇಮದ ಲಹರಿ ಆರೋಗ್ಯಕರವಾಗಿದ್ದರೆ ಶೀತಲ ಹೆಣ್ಣಿನಲ್ಲೂ ಕೂಡ ಪುರುಷ ಚೈತನ್ಯವನ್ನು ಮೂಡಿಸಬಲ್ಲನು.

* * *