ಬೇಕಾಮನೆ ಅಥವಾ ಫ್ರಿಜಿಡಿಟಿಯಿಂದಾಗಿ ಸ್ತ್ರೀಯ ಲೈಂಗಿಕ ಕ್ರಿಯೆಯಲ್ಲಿ ಸಂತೋಷವನ್ನು ಹೊಂದಲಾಗುವುದಿಲ್ಲ. ಇದು ಹೆಣ್ಣಿನಲ್ಲಿ ಉಂಟಾಗುವ ಲೈಂಗಿಕ ದುರ್ಬಲತೆಯಾಗಿರುತ್ತದೆ. ಶಾರೀರಕ ಬೇಕಾಮನೆ ವಿರಳವೆಂದು, ಬಹುಶಃ ಮಿಲಿಯನ್ ಮಹಿಳೆಯರಲ್ಲಿ ಒಬ್ಬರಲ್ಲಿ ಲೈಂಗಿಕ ಉತ್ತೇಜನ ಆಕೆಯ ಮಿದುಳಿಗೆ ತಲುಪುವುದು ತಪ್ಪಿಹೋಗಿರುತ್ತದೆಂದು ಡಾ|| ಎಲ್.ಟಿ. ವುಡ್‌ವರ್ಡ್ ಅಭಿಪ್ರಾಯಿಸುತ್ತಾರೆ. ಆಕೆ ಪರಿಪೂರ್ಣ ಮಾನಸಿಕ ಆರೋಗ್ಯವನ್ನು ಹೊಂದಿರುತ್ತಾಳೆ. ಆದರೆ ಆಕೆ ಲೈಂಗಿಕ ಆರ್ಗ್ಯಾಸಮ್ ಪಡೆಯುವುದಿಲ್ಲ. ಈ ರೀತಿಯ ಬೇಕಾಮನೆಯನ್ನು ಮನೋವೈದ್ಯರು ಅಥವಾ ಸ್ತ್ರೀ ಆರೋಗ್ಯ ತಜ್ಞರ ಸಲಹೆಯನ್ನು ಪಡೆಯುವುದರಿಂದ ನಿವಾರಿಸಿಕೊಳ್ಳಬಹುದೆಂದು ಡಾ|| ಎಲ್.ಟಿ.ವುಡ್ವರ್ಡ್ ರವರು ತಿಳಿಸಿದ್ದಾರೆ.

ಆದರೆ ನಿಜವಾದ ಬೇಕಾಮನೆ, ಸಾಮಾನ್ಯವಾಗಿ ಮಾನಸಿಕ ಕಾರಣದಿಂದ ಉಂಟಾಗುತ್ತದೆ. ಆಂತರಿಕ ಒತ್ತಡದಿಂದಾಗಿ ಸಂತೋಷಕ್ಕೆ ಧಕ್ಕೆ ಉಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸ್ತ್ರೀಯಲ್ಲಿ ಲೈಂಗಿಕ ನಿರಾಸಕ್ತಿ ಉಂಟಾಗಲು ಪತಿಯು ನೆರವೇರಿಸುವ ಅತೃಪ್ತಿಕರವಾದ ಕಾಮಕೇಳಿ ಅಥವಾ ಲೈಂಗಿಕ ತಂತ್ರವೇ ಕಾರಣವಾಗಿರುತ್ತದೆ.

ಫ್ರಿಜಿಡಿಟಿ ಭಯದ ಪ್ರತಿಕ್ರಿಯೆಯಾಗಿರುತ್ತದೆ. ಲೈಂಗಿಕ ಭಯ, ಗರ್ಭವತಿ ಆಗುತ್ತಾನೆ ಎಂಬ ಭಯ ಮೊದಲಾದವು ಸ್ತ್ರೀಯನ್ನು ಲೈಂಗಿಕ ಪ್ರತಿಕ್ರಿಯೆ ತೋರಲು ತೊಡಕುಂಟು ಮಾಡುತ್ತದೆ. ಕೆಲವು ಹುಡುಗಿಯರಲ್ಲಿ ಬಾಲ್ಯದಲ್ಲೇ ಭಯ ಹೆಚ್ಚಾಗಿ, ತಾರುಣ್ಯ ತಲುಪಿದಾಗ ಮುಂದುವರಿಯುತ್ತದೆ. ಇದಕ್ಕೆ ಕಾರಣ ಭದ್ರತೆ ಸರಿಯಾಗಿ ಇಲ್ಲದಿರುವುದು. ಪ್ರೀತಿ-ವಿಶ್ವಾಸ ತೋರುವುದರಲ್ಲಿ ಮೋಸ-ವಂಚನೆ ಮಾಡುವುದು ಕೂಡ ಕಾರಣವಾಗಿರುತ್ತದೆ.

ಫ್ರಿಜಿಡಿಟಿ, ಒಂದು ರೀತಿಯ ಮಾನಸಿಕ ಹಿಂಸಾರತಿ ಅದೊಂದು ಸ್ವಯಂ ಶಿಕ್ಷೆ. ನಿಜವಾದ ಹಿಂಸಾರತಿಯ ರೀತಿಯಿಂದಾಗಿ, ಅನೇಕ ಮಹಿಳೆಯರು ವಿಕೃತ ಸಂತೋಷವನ್ನು ಗಳಿಸುತ್ತಾರೆ. ಇದನ್ನು ತಮ್ಮ ಗಂಡನ ವಿರುದ್ಧ ಆಯುಧವನ್ನಾಗಿ ಬಳಸುತ್ತಾರೆಂದು ಡಾ||ವುಡ್‌ವರ್ಡ್ ಅಭಿಪ್ರಾಯಿಸುತ್ತಾರೆ.

ಸ್ತ್ರೀಯರಲ್ಲಿ ಮನೋ ಲೈಂಗಿಕ ಅಭಿವೃದ್ಧಿಯಲ್ಲಿ ತೊಂದರೆಯ ಲಕ್ಷಣವಾಗಿರುತ್ತದೆ. ಇದರಿಂದಾಗಿಯೋನಿಯ ಮೂಲಕ ಲೈಂಗಿಕ ಪರಾಕಾಷ್ಠತೆ (ಸೆಕ್ಸ್‌ಕ್ಲೈಮಾಕ್ಸ್) ಯನ್ನು ಲೈಂಗಿಕ ಸಂಭೋಗದ ಅವಧಿಯಲ್ಲಿ ಗಳಿಸಲು ಕಷ್ಟವಾಗುತ್ತದೆ. ಇದು ಮಹಿಳೆಯರಲ್ಲಿ ಸಾಮಾನ್ಯವಾದ ತೊಂದರೆಯೆಂದು ಡಾ|| ಫ್ರಾಂಕ್ ಎಸ್.ಕಾಪ್ರಿಯೋ ಅಭಿಪ್ರಾಯಪಡುತ್ತಾರೆ.

ಕೆಲವು ಅಧ್ಯಯನಗಳ ಪ್ರಕಾರ ಶೇಕಡ ೪೦ರಷ್ಟು ಎಲ್ಲಾ ವಿವಾಹಿತ ಮಹಿಳೆಯರು ಲೈಂಗಿಕ ಕ್ರಿಯೆಯಿಂದ ಅಲ್ಪ ಮಟ್ಟದಲ್ಲಾಗಲಿ ಅಥವಾ ಪೂರ್ಣ ಮಟ್ಟದಲ್ಲಾಗಲಿ ಸಂತೋಷವನ್ನು ಗಳಿಸುವುದಿಲ್ಲವೆಂದು ತಿಳಿಸಿವೆ. ಕೆಲವು ಲೈಂಗಿಕ ತಜ್ಞರು, ಬೇಕಾಮನೆಯನ್ನು ‘ಲೈಂಗಿಕ ಶೀತಲತೆ’ ಎಂದುಹೇಳಲಾಗುವುದಿಲ್ಲ. ಬೇಕಾಮನೆಯ ಮಹಿಳೆಯರಲ್ಲಿ ಲೈಂಗಿಕ ಸಂತೋಷವನ್ನು ಹೊಂದಲು ಅವರಲ್ಲಿರುವ ಪ್ರತಿಬಂಧಿಸುವಿಕೆ-ನಿಗ್ರಹವೇ ಕಾರಣವಾಗಿರುತ್ತದೆ. ಬೇಕಾಮನೆ ಒಂದು ರೀತಿಯಲ್ಲಿ ಸ್ವಯಂ ನಿರಾಕರಣೆಯೇ ಆಗಿರುತ್ತದೆ ಎಂದು ತಿಳಿಸಿದ್ದಾರೆ.