ಬೇಕಾಮನೆ ಅಥವಾ ಲೈಂಗಿಕ ನಿರಾಸಕ್ತಿ ವಿವಾಹಿತ ಮಹಿಳೆಯರಲ್ಲಿ ಉಂಟಾಗುವ ಸಾಮಾನ್ಯ ಸಮಸ್ಯೆ. ಬೇಕಾಮನೆ ಮಹಿಳೆಯಿಂದ ಮಹಿಳೆಗೆ ಭಿನ್ನವಾಗಿ ತೋರುತ್ತದೆ.

ಮಹಿಳೆಯರಲ್ಲಿ ಬೇಕಾಮನೆ ಉಂಟಾಗಲು ಅನೇಕ ಕಾರಣಗಳನ್ನುಮನೋವೈದ್ಯರು ಹಾಗೂ ಮನೋವಿಜ್ಞಾನಿಗಳು ಗುರ್ತಿಸಿದ್ದಾರೆ. ಅವುಗಳೆಂದರೆ,

ಶರೀರ ರಚನಾ ಬೇಕಾಮನೆ ಅಥವಾ ಕಾನ್ಸ್ಟಿಟ್ಯೂಷನಲ್ ಫ್ರಿಜಿಡಿಟಿ

ಇದಕ್ಕೆ ಕಾರಣ ಜನನೇಂದ್ರಿಯಗಳಿಗೆ ಉಂಟಾಗುವ ಕಾಯಿಲೆಗಳು ಅಥವಾ ಶಸ್ತ್ರ ಚಿಕಿತ್ಸೆಯಿಂದ ಅಂತಹ ಅಂಗಗಳನ್ನು ತೆಗೆದುಬಿಟ್ಟಿದ್ದರೆ ಬೇಕಾಮನೆ ಉಂಟಾಗುತ್ತದೆ. ಈ ವಿಧಾಣದ ಬೇಕಾಮನೆಗೆ ಸ್ವಲ್ಪಮಟ್ಟಿಗೆ ವೈದ್ಯರು ಪರಿಹಾರವನ್ನು ಸೂಚಿಸಬಹುದು.

ಹೆಣ್ಣತಿ ಕಾಮ ಅಥವಾ ನಿಂಪೋಮೇನಿಯಾ

ಇದೊಂದು ರೀತಿಯ ಬೇಕಾಮನೆ. ಮಹಿಳೆ ಸತತವಾಗಿ ಲೈಂಗಿಕ ಉದ್ರೇಕವನ್ನು ಹೊಂದಿರುತ್ತಾಳೆ. ಆದರೆ ಲೈಂಗಿಕ ಪರಾಕಾಷ್ಠತೆಯನ್ನು (ಆರ್ಗ್ಯಾಸಮ್) ಹೊಂದಲು ಅನರ್ಹಳಾಗಿರುತ್ತಾಳೆ.

ಆತ್ಮರತಿ ಸುಖ ಅಥವಾ ನಾರ್ಸಿಸ್ಟಿಕ್ ಫ್ರಿಜಿಡಿಟಿ

ಸುಪ್ತ ಮನದಲ್ಲೇ ವಸ್ತುಗಳೊಂದಿಗೆ ಅಥವಾ ಸನ್ನಿವೇಶ, ಸಂದರ್ಭಗಳಲ್ಲೇ ಕಾಮ ಕ್ರಿಯೆಯನ್ನು ಹೊಂದಿದ್ದರೆ, ವ್ಯಕ್ತಿಯ ಬಗ್ಗೆಯೇ ಭಯ ಮೂಡುತ್ತದೆ. ಮನೋ ಚಂಚಲದ ಮಹಿಳೆಯರು ಕೂಡ ಲೈಂಗಿಕ ಸುಖ ಶಿಖರದಿಂದ (Orgasm)  ವಂಚಿತರಾಗಿರುತ್ತಾರೆ.

ಶಿಶುತನದ ಬೇಕಾಮನೆ ಅಥವಾ ಇನ್ಫ್ಯಾಂಟೈಲ್ ಫ್ರಿಜಿಡಿಟಿ

ಜನನೇಂದ್ರಿಯಗಳನ್ನುಹೊರತುಪಡಿಸಿ, ಹೆಣ್ಣಿಗೆ ಲೈಂಗಿಕ ಭಾವನೆಗಳಿರುವುದು.

ಶಿಶು ಜನನದ ಭಯ ಅಥವಾ ಫಿಯರ್ ಆಫ್ ಚೈಲ್ಡ್ ಬರ್ತ್

ಲೈಂಗಿಕ ಸಂಭೋಗದಿಂದ ಗರ್ಭಧಾರಣೆಯಾಗುತ್ತದೆ ಎಂಬ ಭಯವೊಂದರಿಂದಲೇ ಬೇಕಾಮನೆ ಉಂಟಾಗಿರುವುದು.

ಎಸೆಕ್ಯೂಯಲ್ ಫ್ರಿಜಿಡಿಟಿ

ಈ ಗುಂಪಿಗೆ ಸೇರಿದ ಮಹಿಳೆಯರಲ್ಲಿ ಸೆಕ್ಸ್ ಅಥವಾ ಕಾಮದ ಬಗ್ಗೆ ಆಸಕ್ತಿಯೇ ಇರುವುದಿಲ್ಲ.

ಮಾತೃತ್ವದ ಭಾವನೆಯ ಬೇಕಾಮನೆ ಅಥವಾ ಮೆಟರ್ನಲಂ ಫ್ರಿಜಿಡಿಟಿ

ಮಾತೃತ್ವದ ಪ್ರವೃತ್ತಿಯ ಲಕ್ಷಣಗಳನ್ನೇ ಅತಿ ಹೆಚ್ಚಾಗಿ ಸ್ತ್ರೀ ಹೊಂದಿದ್ದರೆ, ತನ್ನಗಂಡನ ಲೈಂಗಿಕಾಸೆಗಳನ್ನು ಆಕೆ ಪೂರೈಸುತ್ತಾಳೆ. ಆದರೆ ಅವರು ಸ್ವತಃ ಲೈಂಗಿಕ ಸಂತೋಷವನ್ನು ಹೊಂದುವುದಿಲ್ಲ.

ವಿಕೃತ ಬೇಕಾಮನೆ ಅಥವಾ ಪರ್ವರ್ಸ್ ಫ್ರಿಜಿಡಿಟಿ

ಈ ಗುಂಪಿಗೆ ಸೇರಿದ ಮಹಿಳೆ ಲೈಂಗಿಕ ಪರಾಕಾಷ್ಠತೆಯನ್ನು ಹಿಂಸೆಯಿಂದ, ಪ್ರದರ್ಶನ ರತಿಯಿಂದ, ರತಿನೋಟ ಕಾಮದಿಂದ ಹೊಂದುತ್ತಾಳೆ.

ಮುಟ್ಟು ತೀರ್ಕೆಯ ಬೇಕಾಮನೆ ಅಥವಾ ಮನೋಪಾಸಲ್ ಫ್ರಿಜಿಡಿಟಿ

ಮುಟ್ಟು ನಿಂತ ನಂತರ ಲೈಂಗಿಕ ಸಂತೋಷಕ್ಕೆ ಕೊನೆ ಎಂದು ತಪ್ಪು ಭಾವಿಸಿರುವುದು.

ಹುಸಿ ಬೇಕಾಮನೆ ಅಥವಾ ಸುಡೋ ಫ್ರಿಜಿಡಿಟಿ

ಗಂಡನಿಂದ ಸಂಭೋಗಪೂರ್ವ ಕಾಮಕೇಳಿ (ಫೋರ್‌ಪ್ಲೇ) ಸರಿಯಾಗಿ ನಡೆಯದಿದ್ದರೆ, ಶೀಘ್ರ ವೀರ್ಯ ಸ್ಖಲನದ ಸಮಸ್ಯೆ ಗಂಡಸರಲ್ಲಿದ್ದರೆ, ಉದ್ರೇಕತನವನ್ನು ಪುರುಷ ಉಳಿಸಿಕೊಳ್ಳದಿದ್ದರೆ, ಹೆಣ್ಣಿನಲ್ಲಿ ಬೇಕಾಮನೆ ಉಂಟಾಗುತ್ತದೆ.

* * *