ಬೇಕಾಮನೆ ಅಥವಾ ಫ್ರಿಜಿಡಿಟಿಯನ್ನು ಕೆಲವೊಮ್ಮೆ ಕಡಿಮೆ ಲೈಂಗಿಕತೆ ಅಥವಾ ಲೈಂಗಿಕ ಅರಿವಳಿಕೆ ಎಂದು ಕರೆಯುತ್ತಾರೆ. ಅಲ್ಲದೆ ಸ್ತ್ರೀಯ ಲೈಂಗಿಕತೆಯಲ್ಲಿ ತೊಡಕು ಉಂಟಾಗಿರುತ್ತದೆ. ಅಂದರೆ,

  • ಲೈಂಗಿಕ ಪರಾಕಾಷ್ಠತೆ (ಆರ್ಗ್ಯಾಸಮ್)ಯ ಕೊರತೆ.
  • ಲೈಂಗಿಕ ಸಂಭೋಗದ ಅವಧಿಯಲ್ಲಿ ಅತೃಪ್ತಿ, ಅಸಮಾಧಾನ.
  • ಹೆರಲಿಂಗ ಸಂಬಂಧದಲ್ಲಿ ನಿರಾಸಕ್ತಿಯ ಕೊರತೆ ಅಥವಾ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಲು ಆಗದಿರುವುದು.

ಸ್ತ್ರೀಯ ಲೈಂಗಿಕ ನಿರಾಸಕ್ತಿಯಲ್ಲಿ ಒಂದು ಅಥವಾ ಅನೇಕ ಅಥವಾ ಕೆಲವುಕೊರತೆಗಳು ಸಂಯೋಜಿತಗೊಂಡಿರುತ್ತವೆ. ಉದಾಹರಣೆಗೆ, ಸ್ತ್ರಿಯಲ್ಲಿ ಸ್ವಲ್ಪಮಟ್ಟಿನ ಆಸಕ್ತಿ ಇರಬಹುದು. ಆದರೆ ತೃಪ್ತಿ ಉಂಟಾಗುವುದಿಲ್ಲಮತ್ತು ಲೈಂಗಿಕ ಸಂಬಂಧದಲ್ಲಿ ಲೈಂಗಿಕ ಪರಾಕಾಷ್ಠತೆ (ಕ್ಲೈಮಾಕ್ಸ್) ಯನ್ನು ಅನುಭವಿಸುವುದಿಲ್ಲ ಅಥವಾ ಆಕೆಯಲ್ಲಿ ಮಹತ್ವ ಪೂರ್ಣವಾದ ಕಾಮದಾಸೆಯಿದೆ ಪ್ರೀತಿ-ಪ್ರಣಯ ಸಂತೋಷದಾಯಕವೆಂದು ಕಂಡು ಕೊಂಡಿದ್ದಾಳೆ. ಆದರೆ ಆಕೆ ಲೈಂಗಿಕ ಪರಾಕಾಷ್ಠತೆಯನ್ನು ಹೊಂದಲು ಅನರ್ಹಳಾಗಿರುತ್ತಾಳೆ.

ಮನೋವಿಜ್ಞಾನಿಗಳಾದ ಕಾರ್ಲ್‌ಮೆನಿನ್ನಿಜೆರ್ ಮತ್ತು ಸಂದೋರ ಲೊರಾಂಡ್ ರವರು ‘ಫ್ರಿಜಿಡಿಟಿ’ಯನ್ನು ಒಂದು ರೀತಿಯ ಹಿಸ್ಟೀರಿಯಾ ಅಥವಾ ಉನ್ಮಾದವೆಂದು ಕರೆದಿದ್ದಾರೆ. ಕೆಲವು ವೈದ್ಯ ಲೇಖಕರು ‘ಫ್ರಿಜಿಡಿಟಿ’ ಯನ್ನು ಲೈಂಗಿಕ ಪರಾಕಾಷ್ಠೆತೆಯ ಕೊರತೆ ಎಂದೇ ಅರ್ಥ ಎಂದುತಿಳಿಸಿದ್ದಾರೆ.

ಬೇಕಾಮನೆ ಮತ್ತು ಲೈಂಗಿಕ ಪರಾಕಾಷ್ಠತೆಯ ಕೊರತೆ ಶಾರೀರಿಕವಲ್ಲ, ಅದು ಮನೋಜನಿಕವೆಂದು ಸಾರ್ವತ್ರಿಕವಾಗಿ ಒಪ್ಪಲಾಗಿದೆ.

* * *