ಕೆಲವು ಸ್ತ್ರೀಯರು ಅನೇಕ ದಿನಗಳಿಂದ ಲೈಂಗಿಕತೆಯಲ್ಲಿ ಪಾಲ್ಗೊಳ್ಳುತ್ತಿದ್ದರೂ ಅದರಲ್ಲಿನ ಆನಂದವನ್ನು ಥ್ರಿಲ್‌ನ್ನು ಹೊಂದಿರುವುದಿಲ್ಲ. ಸೆಕ್ಸ್‌ನಲ್ಲಿ ಯಾಂತ್ರಿಕವಾಗಿ ಪಾಲ್ಗೊಳ್ಳುತ್ತಾರೆಯೇ ಹೊರತು ಅದರಿಂದ ಸುಖ ಸಿಗುವುದಿಲ್ಲ. ಇದನ್ನು ಭಾವಪ್ರಾಪ್ತಿ ಕೊರತೆ ಎನ್ನುತ್ತಾರೆ.

ಸೆಕ್ಸ್‌ನಲ್ಲಿ ಥ್ರಿಲ್ ಎನ್ನುವುದು ಒಂದು ಅನಿರ್ವಚನೀಯಾದ ಅನುಭೂತಿ. ಆ ಸಮಯದಲ್ಲಿ ಯೋನಿಯಲ್ಲಿನ ಸ್ನಾಯುಗಳೆಲ್ಲ ರಿಲ್ಯಾಕ್ಸ್ ಆಗುತ್ತವೆ.

ಶರೀರದಲ್ಲಿನ ಸ್ನಾಯುಗಳೆಲ್ಲ ಗಟ್ಟಿಯಾಗಿ ಬಿಗಿದುಕೊಂಡು ಒಂದೇ ಬಾರಿಗೆ ಸಡಿಲಗೊಳ್ಳುತ್ತವೆ. ನರಗಳೆಲ್ಲ ಲವಲವಿಕೆಯಿಂದ ಕೂಡಿರುತ್ತವೆ. ಆ ಅನುಭೂತಿ ಮಧುರಾತ್ರಿ ಮಧುರವಾಗಿ ಮನಸ್ಸನ್ನು ತುಂಬಿಕೊಂಡು ಥ್ರಿಲ್ಲನ್ನುಂಟು ಮಾಡುತ್ತದೆ.

ಸೆಕ್ಸ್‌ನಲ್ಲಿ ಉಂಟಾಗುವ ಥ್ರಿಲ್ ಕೇವಲ ಶಾರೀರಕವೇ ಅಲ್ಲದೆ, ಮಾನಸಿಕವಾದುದೂ ಆಗಿರುತ್ತದೆ. ಶರೀರ ಮತ್ತು ಮನಸ್ಸು ಮೇಳೈಸಿದಾಗ ಮಾತ್ರವೇ ಮಧುರವಾದ ಅನುಭವ ಉಂಟಾಗುತ್ತದೆ. ಆದುದರಿಂದ ಸೆಕ್ಸ್‌ನಲ್ಲಿ ಥ್ರಿಲ್ ಹೊಂದಲು ಮೊದಲು ಮನಸ್ಸು ಸಿದ್ಧಗೊಳ್ಳಬೇಕು. ಅಷ್ಟೇ ಹೊರತು ಗಂಡ ಲೈಂಗಿಕತೆಯಲ್ಲಿ ಪಾಲ್ಗೊಂಡ ಮಾತ್ರಕ್ಕೆ ಥ್ರಿಲ್ ಲಭಿಸದೇ ಇರಬಹುದು.

ಸ್ತ್ರೀಯೂ ಸಹ ಸೆಕ್ಸ್‌ನಲ್ಲಿ ಥ್ರಿಲ್ ಹೊಂದಲು ತನ್ನ ಮನಸ್ಸನ್ನು ಶೃತಿ ಮಾಡಿಕೊಳ್ಳಬೇಕು. ಎಷ್ಟೋ ಸ್ತ್ರೀಯರಿಗೆ ಮನಸ್ಸನ್ನು ಹೇಗೆ ಶೃತಿ ಮಾಡಿಕೊಳ್ಳಬೇಕೆಂದು ತಿಳಿಯದೇ ಇರುವುದರಿಂದಲೇ ಅವರು ಭಾವಪ್ರಾಪ್ತಿಯನ್ನು ಗಳಿಸಲಾಗುವುದಿಲ್ಲ.

ಸೆಕ್ಸ್‌ನಲ್ಲಿ ಥ್ರಿಲ್ ಉಂಟಾಗಲು ಮನಸ್ಸು ಎಷ್ಟುಮುಖ್ಯವೋ, ಸ್ತ್ರೀಯರಲ್ಲಿ ಬಿಡುಗಡೆಗೊಳ್ಳುವ ಹಾರ್ಮೋನ್‌ಗಳ ಪಾತ್ರವು ಅಷ್ಟೇ ಮುಖ್ಯವಾಗಿರುತ್ತದೆ. ಸ್ತ್ರೀಯರಲ್ಲಿ ಬಿಡುಗಡೆಗೊಳ್ಳುವ ಈಸ್ಟ್ರೋಜನ್ ಹಾರ್ಮೋನ್ ಸೆಕ್ಸ್‌ಸ್ಪಂದನ ಉಂಟಾಗಲು ಹೆಚ್ಚಿನ ಮಟ್ಟಿಗೆ ಕಾರಣವಾಗಿರುತ್ತದೆ.

ಕೆಲವು ಸ್ತ್ರೀಯರಲ್ಲಿ ಪ್ರೊಲಾಕ್ಟಿನ್ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಪ್ರೊಲಾಕ್ಟಿನ್ ಹಾರ್ಮೋನ್ ಹೆಚ್ಚಾಗಿ ಬಿಡುಗಡೆ ಗೊಳ್ಳುವವರಲ್ಲಿ ಸೆಕ್ಸ್ ಅನುಭೂತಿ ಕಡಿಮೆಯಿರಬಹುದು.

ಪ್ರೊಜೆಸ್ಟಿರೋನ್ ಹಾರ್ಮೋನ್ ಹಂತ ಹೆಚ್ಚಾಗಿದ್ದಾಗ ಸಹ ಸೆಕ್ಸ್ ಅನುಭೂತಿ ಕಡಿಮೆಯಾಗಿ ತೋರಬಹುದು. ಥೈರಾಯಿಡ್ ಹಾರ್ಮೋನ್ ಕಡಿಮೆಯಿದ್ದಾಗ ಸಹ ಸೆಕ್ಸ್‌ನಲ್ಲಿ ಆಸಕ್ತಿ ಕಡಿಮೆಗೊಳ್ಳಬಹುದು. ಸೆಕ್ಸ್ ಅನುಭೂತಿ ಅಷ್ಟಾಗಿ ಇಲ್ಲದೆ ಇರಬಹುದು.

ದೀರ್ಘಕಾಲದ ವ್ಯಾಧಿಗಳಿದ್ದಾಗ ಮನುಷ್ಯನಲ್ಲಿ ನಿಶ್ಯಕ್ತಿಯಿರುತ್ತದೆ ಯಾದ್ದರಿಂದ ಸೆಕ್ಸ್‌ನಲ್ಲಿ ಪಾಲ್ಗೊಂಡರೂ ಥ್ರಿಲ್ ಲಭಿಸದೆ ಇರಬಹುದು.ಹೆಚ್ಚು ರಕ್ತಹೀನತೆ ಇರುವವರು ಸಹ ಸೆಕ್ಸ್‌ನಲ್ಲಿ ಥ್ರಿಲ್ ಹೊಂದದೆ ಆಯಾಸಗೊಳ್ಳುತ್ತಾರೆ.

ಸ್ತ್ರೀಯರ ಮನಸ್ಸತ್ವ ಆಕೆ ಸೆಕ್ಸ್‌ನಲ್ಲಿ ಥ್ರಿಲ್ ಹೊಂದದೆ ಇರುವುದಕ್ಕೆ ಮುಖ್ಯ ಕಾರಣವಾಗಿರುತ್ತದೆ. ಕೆಲವು ಸ್ತ್ರೀಯರಲ್ಲಿ ಸೆಕ್ಸ್ ಸಂಬಂಧದ ಬಗ್ಗೆ ನೀಚವಾದ ಅಭಿಪ್ರಾಯವಿರುತ್ತದೆ. ಅಲ್ಲಲ್ಲೆ, ಸೆಕ್ಸ್ ಕುರಿತು ಆಲೋಚಿಸುವುದು ಸಹ ತಪ್ಪು ಎನ್ನುವ ಭಾವನೆಯಿರುತ್ತದೆ.

ಅದಕ್ಕೆ ತಕ್ಕಂತೆ ಬಾಲ್ಯದಿಂದಲೂ ಹಿರಿಯರು ಸೆಕ್ಸ್ ಬಗ್ಗೆ ಮಾತಾಡದಂತೆ, ಸೆಕ್ಸ್ ವಿಷಯ ತಿಳಿದುಕೊಳ್ಳದಂತೆ ನಿಷೇಧವಿಧಿಸಿರುತ್ತಾರೆ. ಅದರಿಂದಾಗಿ, ಮನಸ್ಸಿನಲ್ಲಿ ಸೆಕ್ಸ್ ಆಲೋಚನೆಗಳು ಬಾರದಂತೆ ಸಂಯಮವನ್ನು ವಹಿಸುತ್ತಾರೆ.

ಹಾಗೆಯೇ ಮನಸ್ಸಿನಲ್ಲಿ ಮಾಡಿದ ತಪ್ಪು ಅಭಿಪ್ರಾಯಗಳೂ ಮದುವೆ ಯಾದ ನಂತರ ಉಳಿದುಬಿಡುತ್ತದೆ. ಇದರಿಂದಾಗಿ ಆಖೆ ಭಾವಪ್ರಾಪ್ತಿ ಹೊಂದಲು ಆಡಚಣೆ ಉಂಟಾಗುತ್ತದೆ.

ಹೆಚ್ಚು ಮಂದಿ ಗಂಡದಿರು ನೇರವಾಗಿ ಲೈಂಗಿಕತೆಯಲ್ಲಿ ಪಾಲ್ಗೊಂಡು ವೀರ್ಯವನ್ನು ವಿಸರ್ಜಸಿ, ಸೆಕ್ಸ್‌ನ್ನು ಮುಗಿಸಿಬಿಡುತ್ತಾರೆ.ಅದರಿಂದಾಗಿ ಸೆಕ್ಸ್ ಎಂದರೆ ಇಷ್ಟ ಉಂಟಾಗುವ ಬದಲು ಅನಿಷ್ಟ ಉಂಟಾಗುತ್ತದೆ. ಆದುದರಿಂದ ಸೆಕ್ಸ್‌ನಲ್ಲಿ ರತಿ ಕೂಟ ಮುನ್ನಲಿವು ಅಥವಾ ಫೋರ್‌ಪ್ಲೇ ಮುಖ್ಯವಾದುದ್ದಾಗಿರುತ್ತದೆ.

ಮಾಮೂಲು ಸಂಸಾರಗಳಲ್ಲಿ ಹೆಚ್ಚು ಮಂದಿ ಗಂಡಂದಿರು ಮೊದಲಿನಿಂದಲೂ ಹೆಂಡತಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆಖೆಯ ವ್ಯಕ್ತಿತ್ವವನ್ನು ಗೌರವಿಸುವುದಿಲ್ಲ. ದೂಷಿಸಿ ಮಾತಾಡುತ್ತಾರೆ. ಆಕೆಯ ಮಾತುಗಳಿಗೆ, ಸಲಹೆಗೆ ಆಸ್ಪದ ಕೊಡುವುದಿಲ್ಲ. ನಿಕೃಷ್ಟವಾಗಿ ಕಾಣುತ್ತಾರೆ. ಆದರಿಂದಾಗಿ ಸ್ತ್ರೀ ಸೆಕ್ಸ್‌ನಲ್ಲಿ ಪಾಲ್ಗೊಂಡರೂ ಥ್ರಿಲ್ಲನ್ನು ಗಳಿಸುವುದಿಲ್ಲ. ಅಷ್ಟೇ ಅಲ್ಲದೆ, ಸೆಕ್ಸ್ ಎಂದರೇನೆ ಮನಸ್ಸಿನಲ್ಲಿ ವಿರಕ್ತಿ ಮೂಡುತ್ತದೆ.

ಕೆಲವು ಸ್ತ್ರೀಯರಿಗೆ ಅನುಕ್ಷಣವು ಭದ್ರತೆಯ ಭಾವನೆಯ ಕೊರತೆ ಉಂಟಾಗುತ್ತಿರುತ್ತದೆ. ಭಯ, ಆತಂಕ ಸಹ ಅವರಲ್ಲಿ ಮೂಡಿ ಸುಖ ಹೊಂದದಂತೆ ಮಾಡುತ್ತದೆ.

ಸಾಧಾರಣವಾಗಿ ಅವರಲ್ಲಿ ನ್ಯೂರೋಟಿಕ್ ವ್ಯಕ್ತಿತ್ವವಿರುತ್ತದೆ.ನ್ಯೂರೋಟಿಕ್ ಪರ್ಸನಾಲಿಟಿಯಿಂದಾಗಿ ಸೆಕ್ಸ್‌ನಲ್ಲಿ ಥ್ರಿಲನ್ನು ಹೊಂದಲಾಗುವುದಿಲ್ಲ. ಹಾಗೇ ಖಿನ್ನತೆ (ಡಿಪ್ರೆಷನ್) ಸಹ ಸೆಕ್ಸ್‌ನಲ್ಲಿ ಥ್ರಿಲ್‌ನ್ನು ಹೊಂದಲು ಅಸ್ಪದ ಕೊಡುವುದಿಲ್ಲ.

ಪತ್ನಿ ಸೆಕ್ಸ್‌ನಲ್ಲಿ ಥ್ರಿಲ್ಲನ್ನು ಹೊಂದದಿದ್ದರೆ ಅದಕ್ಕೆ ಮಾನಸಿಕ ಅಥವಾ ಶಾರೀರಕ ಕಾರಣಗಳಿರಬಹುದು ಅಥವಾ ಕೌಟುಂಬಿಕ ಕಾರಣವಿರ ಬಹುದು. ಅದನ್ನು ಪರಿಶೀಲಿಸಿ, ಮನೋವೈದ್ಯರಿಂದ ಚಿಕಿತ್ಸೆ ಕೊಡಿಸಿದರೆ ಸಮಸ್ಯೆ ನಿವಾರಣೆಗೊಳ್ಳುತ್ತದೆ. ಪತ್ನಿ ಆನಂದದಿಂದ ದಾಂಪತ್ಯ ಜೀವನವನ್ನು ಸಾಗಿಸಲು ಅನುಕೂಲವಾಗುತ್ತದೆ.

* * *