ರಾಜ, ರಾಧರನ್ನು ನೋಡಿದ ಯಾರಾದ್ರು ‘ಮೇಡ್ ಫಾರ್ ಈಚ್ ಅದರ್’ ಎಂದು ಹೇಳದೆ ಇರುತ್ತಿರಲಿಲ್ಲ. ರಾಧಾ ಅಂದವಾಗಿದ್ದಳು. ಆಕೆಯ ಅಂದವನ್ನು ನೋಡಿಯೇ ರಾಜ ಲಗ್ನವಾಗಿರಬೇಕೆಂದು ಅನೇಕರು ಹೇಳುತ್ತಿದ್ದರು. ರಾಜನ ಅನೇಕ ಸ್ನೇಹಿತರು ‘ರಾಜ ಅದೃಷ್ಟವಂತ’ ಎಂದ್ಹೇಳಿ ಆನಂದ ಪಡುತ್ತಿದ್ದರು. ಆದರೆ, ಆತನ ಸ್ನೇಹಿತರಿಗೇನು ಗೊತ್ತು ರಾಜನ ಮನಸ್ಸಿನಲ್ಲಿ ಅಸಂತೃಪ್ತಿ, ಅಸಮಾಧಾನವಿದೆಯೆಂದು. ಎಷ್ಟೋ ಆಸೆ-ಆಕಾಂಕ್ಷೆಗಳಿಂದ ದಾಂಪತ್ಯ ಬದುಕಿಗೆ ಹೆಜ್ಜೆ ಇಟ್ಟ ರಾಜನಿಗೆ ನಿರಾಶೆ. ರಾಜನ ಹೆಂಡತಿ, ನಿಜವಾಗಿಯೂ ದಂತದ ಗೊಂಬೆಯಂತಿದ್ದಳು. ಆದರೆ ಆಕೆಯಲ್ಲಿ ಸ್ಪಂದನವಿರಲಿಲ್ಲ. ರಾಜ ಆಕೆಯನ್ನು ಎಷ್ಟೇ ಉದ್ರೇಕಗೊಳಿಸಿದರೂ ಪ್ರೀತಿಗೆ ಪ್ರತಿಕ್ರಿಯೆ ತೋರುತ್ತಿರಲಿಲ್ಲ. ರಾಧಳಲ್ಲಿ ಸೆಕ್ಸ್ ಬಗ್ಗೆ ಆಸಕ್ತಿಯಿರಲಿಲ್ಲ. ಆರಂಭದಲ್ಲಿ ಹೊಸತು, ಬಯ, ನಾಚಿಕೆಯಿಂದ ಆಕೆಯಲ್ಲಿ ಶೀತಲ ಭಾವನೆಯಿದೆ ಎಂದು ರಾಜ ಭಾವಿಸಿದ್ದನು. ರಾಧಾಳಲ್ಲಿ ಸೆಕ್ಸ್ ಬಗ್ಗೆ ಯಾತಕ್ಕೆ ಆಸಕ್ತಿ ಇಲ್ಲವೆಂದು ಕೆಲವು ದಿನಗಳ ನಂತರ ತಿಳಿಯಿತು.

ಜಡತ್ವ ಇರುವ ಹೆಂಡತಿಯ ಜೊತೆ ಎಷ್ಟೇ ತಾಳ್ಮೆ, ಸಹನೆಯಿಂದ ಸಂಸಾರವನ್ನು ನಿಭಾಯಿಸಿದರೂ ಗಂಡಸಿಗೆ ಸಂಕಟಕರವಾಗಿಯೇ ಇರುತ್ತದೆ. ಆತನ ಜೀವನ ನಿಸ್ಸಾರವಾಗಬಹುದು. ಅದಕ್ಕಾಗಿಯೇ ತನ್ನ ಪತ್ನಿ ಚಟುವಟಿಕೆಯಿಂದ ಇರಬೇಕೆಂದು ಅನೇಕರು ಪ್ರಯತ್ನಿಸುತ್ತಾರೆ. ಒಮ್ಮೊಮ್ಮೆ ಆಖೆಯ ಜಡತ್ವವನ್ನೇ ದೊಡ್ಡದು ಮಾಡಿ, ಆಕೆಯನ್ನು ದೂಷಿಸಿ ಮನಸ್ಸಿಗೆ ಮತ್ತಷ್ಟುಬೇಸರ ಮೂಡಿಸುತ್ತಾರೆ.

ಜಡತ್ವ, ವಿಧ ವಿಧವಾಗಿರುತ್ತದೆ. ಕೆಲವರಿಗೆ ಸೆಕ್ಸ್ ಅಂದರೆ, ಆಸಕ್ತಿಯಿರುತ್ತದೆ. ಆದರೆ, ಅವರಿಗೆ ರತಿಯಲ್ಲಿ ಸುಖಪ್ರಾಪ್ತಿ ಆಗುವುದಿಲ್ಲ. ಮದುವೆ ಆಗಿದ್ದೇವೆ. ಗಂಡನಿಗೆ ಸುಖ ಕೊಡಬೇಕು ಎಂದು ಭಾವಿಸಿ ಯಾಂತ್ರಿಕವಾಗಿ ರತಿ (ಸೆಕ್ಸ್)ಯಲ್ಲಿ ಪಾಲುಗೊಳ್ಳುತ್ತಾರೆ. ಮತ್ತೇ ಕೆಲವು ಸ್ತ್ರೀಯರಿಗೆ ಸೆಕ್ಸ್ ಎಂದರೇನೆ ಅಸಹ್ಯ, ಹಾಸಿಗೆಗೆ ಗಂಡ ಬಂದ ಕೂಡಲೇ ಪಕ್ಕಕ್ಕೆ ತಿರುಗಿ ಮಲಗಿಕೊಳ್ಳುವುದುಂಟು. ಸಮೀಪಕ್ಕೆ ಹೋದ್ರೆ, “ನನಗೆ ಇಷ್ಟವಿಲ್ಲ” ಎಂದು ದೂರದಲ್ಲೇ ಮಲಗಿಕೊಳ್ಳುತ್ತಾರೆ.

ರಾಧಾಳಲ್ಲಿ ಜಡತ್ವ ಉಂಟಾಗಲು ಕಾರಣವೇನು?

ರಾಧಾಳ ವಿಷಯವನ್ನೇ ತೆಗೆದುಕೊಂಡರೆ, ಅವರ ಕುಟುಂಬದ ವಿಷಯವೇ ಆಕೆಯಲ್ಲಿ ಜಡತ್ವ ಉಂಟಾಗಲು ಕಾರಣ. ಸಂಪ್ರದಾಯ ಸಂಸ್ಕಾರ ಎಂದ್ಹೇಳಿ ಆಕೆಯಲ್ಲಿ ಸೆಕ್ಸ್ ಬಗ್ಗೆ ಅನೇಕ ತಪ್ಪು ಅಭಿಪ್ರಾಯಗಳನ್ನುಂಟು ಮಾಡಿದ್ದಾರೆ. ಆಕೆಯ ದೃಷ್ಟಿಯಲ್ಲಿ ಗಂಡ-ಹೆಂಡತಿಯ ಲೈಂಗಿಕ ಸಂಬಂಧ ಕೇವಲ ಪಶುಪ್ರವೃತ್ತಿಗೆ ಸಂಬಂಧಿಸಿದ್ದು, ಗಂಡ-ಹೆಂಡತಿಯ ನಡುವೆ ಅನುರಾಗ, ಪ್ರೇಮ ಇರುವುದೇ ನಿಜವಾದ ದಾಂಪತ್ಯ ಜೀವನ. ಅವರ ನಡುವೆ ನೀಚಾವಾದ ಕಾಮ ಸಂಬಂಧಕ್ಕೆ ಸ್ಥಾನವಿರದು. ಅಂತಹ ಭಾವನೆಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡ ರಾಧಾಳಿಗೆ ಗಂಡನನ್ನು ನೋಡಿದರೆ ಗೌರವ, ರತಿ ಕಾರ್ಯ ಎಂದರೆ ಅಸಹ್ಯ ಮಾಡಿಕೊಳ್ಳುತ್ತಾರೆ.

ಗಂಡನ ಬಗ್ಗೆ ಗೌರವವಿದ್ದುದರಿಂದ, ರತಿಯಲ್ಲಿ ಭಾಗವಹಿಸುವುದು ತಪ್ಪು. ಅದರ ಬಗ್ಗೆ ರಾಧಾಗೆ ಸ್ವಲ್ಪವು ಆಸಕ್ತಿಯಿಲ್ಲ. ಇಂತಹ ಸಂದರ್ಭದಲ್ಲಿ ರಾಜನು ಮಾಡಬೇಕಾದ್ದು ಆಕೆಯಲ್ಲಿ ಮೊದಲು ದಾಂಪತ್ಯ ಸಂಬಂಧದ ಬಗ್ಗೆ ನಂಬಿಕೆಯನ್ನುಂಟು ಮಾಡಬೇಕು. ರಾಧಾಳ ಇಷ್ಟದ ವಿರುದ್ಧ, ಅಭಿಪ್ರಾಯದ ವಿರುದ್ಧ ಆತನು ವರ್ತಿಸಬಾರದು. ರಾಜನು ಕೂಡ ಪ್ರೀತಿ ಪ್ರೇಮಕ್ಕೆ ಆತ್ಮೀಯತೆಗೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡುತ್ತೇನೆಂಬ ತಿಳಿವಳಿಕೆಯನ್ನು ತನ್ನ ಪತ್ನಿಯಲ್ಲಿ ಮೂಡಿಸಬೇಕು. ಯಾವಾಗ, ರಾಜನ ವರ್ತನೆ ಅನುಗುಣವಾಗಿ ಇರುತ್ತದೆಯೋ ಆಗ ರಾಧಾಳಲ್ಲೂ ಗಂಡನ ಬಗ್ಗೆ ಗೌರವ ಹೆಚ್ಚುತ್ತದೆ. ನಿಧಾನವಾಗಿ ತನ್ನನ್ನು ಅರ್ಥ ಮಾಡಿಕೊಂಡ ತನ್ನ ಗಂಡನಲ್ಲಿ ತನ್ನ ಅಭಿಪ್ರಾಯಗಳನ್ನು ಅಭಿವ್ಯಕ್ತಗೊಳಿಸುತ್ತಾಳೆ. ಆಕೆಯ ಅಭಿಪ್ರಾಯಗಳನ್ನು ಸಹಾನುಭೂತಿಯಿಂದ ಕೇಳಿ, ಅದರಲ್ಲಿನ ತಪ್ಪು ಕಲ್ಪನೆಗಳನ್ನು ನಿವಾರಿಸಿದರೆ, ರಾಧಾಳಲ್ಲಿ ಖಂಡಿತವಾಗಿಯೂ ಬದಲಾವಣೆ ಉಂಟಾಗುತ್ತದೆ. ತನ್ನ ತಪ್ಪಿನ ಅರಿವಾಗ ಆಕೆ ರತಿಯಲ್ಲಿ ಪಾಲುಗೊಲ್ಳಲು ಆಸಕ್ತಿ ತೋರುತ್ತಾಳೆ.

ಬಾಲ್ಯದಲ್ಲಿ ತಂದೆಯಿಂದ, ಮದುವೆಯಾದ ನಂತರ ಗಂಡನಿಂದ ಶಿಸ್ತಿನ ಹೆಸರಿನಲ್ಲಿ ನಿಯಂತ್ರಣ

ಶಾಲಿನ ಬೆಳೆದು ಬಂದ ಕುಟುಂಬದ ಸ್ಥಿತಿ ಬಹಳ ಗೊಂದಲಮಯವಾಗಿತ್ತು. ಅದರಲ್ಲಿ ತಂದೆ ಚಂಡಶಾಸನವನ್ನೇರುತ್ತಿದ್ದನು. ಮಕ್ಕಳ ಜೊತೆ ಪ್ರೀತಿ-ವಿಶ್ವಾಸದಿಂದ ಮಾತನಾಡುತ್ತಿರಲಿಲ್ಲ. ಅವರ ಮನಸ್ಸಿನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಕೂಡ ಸ್ವಾತಂತ್ರ‍್ಯ ವಿರಲಿಲ್ಲ. ಏನಾದ್ರು ಮಾಡೋಣವೆಂದರೆ ತಂದೆ ಒಪ್ಪುತ್ತಿರಲಿಲ್ಲ. ಈ ರೀತಿಯ ವಾತಾವರಣದಲ್ಲಿ ಬೆಳೆದ ಶಾಲಿನಿಯ ಮನಸ್ಸು ಗೊಂದಲದಿಂದ ಕೂಡಿತ್ತು. ಏಕಾಂಗಿಯಾಗಿ ಓದು ವುದು, ಬರೆಯುವುದು ಹಾಗೂ ತನ್ನ ಕೆಲಸವನ್ನು ತಾನು ಮಾಡುವುದೇ ಅವಳ ದಿನಚರಿಯಾಗಿತ್ತು. ಯಾರಲ್ಲೂ ಮುಕ್ತವಾಗಿ ಮಾತಾಡುವಂತಿರಲಿಲ್ಲ. ಹೊರಗಡೆ ಮುಕ್ತವಾಗಿ ತಿರುಗಾಡುವಂತಿರಲಿಲ್ಲ. ಇಂತಹ ಶಾಲಿನಿಗೆ, ತಂದೆ, ಒಬ್ಬಾತನ ಜೊತೆ ಲಗ್ನ ಮಾಡಿ, ತನ್ನ ಜವಾಬ್ದಾರಿಯನ್ನು ಕಳೆದುಕೊಂಡರು. ತಂದೆಯ ಚಂಡಶಾಸನದಿಂದ ಹೊರಬಿದ್ದು ಹಾಯಾಗಿರಬಹುದೆಂದು ಶಾಲಿನಿ ಭಾವಿಸಿದ್ದಳು. ಆದರೆ ಆ ಅದೃಷ್ಟವೂ ಅವಳಿಗಿರಲಿಲ್ಲ. ಗಂಡನ ಜೊತೆ ಕೂಡ ನಿರ್ಲಿಪ್ತವಾಗಿರುತ್ತಿದ್ದಳು. ತನ್ನ ಡ್ಯೂಟಿ ಎಂದು ತಿಳಿದು ಪತಿಸೇವೆ ಮಾಡುತ್ತಿದ್ದಳೇ ಹೊರತು, ರತಿಯಲ್ಲಿ ಆಸಕ್ತಿ ತೋರುತ್ತಿರಲಿಲ್ಲ. ಎಂತಹ ಗಂಡಸಾದ್ರು ರತಿಯ ಬಗ್ಗೆ ಪತ್ನಿ ಆಸಕ್ತಿ ತೋರದಿದ್ದರೆ ಆತನಿಂದ ಅದನ್ನು ಸಹಿಸಿಕೊಳ್ಳಲಾಗುವುದಿಲ್ಲ. ಕೆಲವು ದಿನಗಳ ನಂತರ ಸಹನೆಯನ್ನು ಕೆಳೆದುಕೊಂಡ ಶಾಲಿನಿಯ ಗಂಡ ಅವಳನ್ನು ದೂಷಿಸಲು ಆರಂಭಿಸಿದನು. ತನ್ನಂತೆಯೇ ತನ್ನ ಪತ್ನಿಯೂ ಚಟುವಟಿಕೆಯಿಂದ ಇರಬೇಕೆಂದು ಶಾಲಿನಿಯ ಗಂಡ ಆದೇಶ ಮಾಡಿದನು. ಇದುವರೆವಿಗೂ ತಂದೆಯ ಕಠೋರ ನಿಯಮಗಳಿಂದ ಜೀವಿಸಿದ್ದ ಶಾಲಿನಿಗೆ. ಗಂಡನ ಆದೇಶದಿಂದ ಮತ್ತಷ್ಟು ಬೇಸರ, ಜಿಗುಪ್ಸೆ ಆಕೆಯಲ್ಲಿ ಮೂಡಿತ್ತು. ಇದರಿಂದ ಶಾಲಿನಿಯಲ್ಲಿ ರತಿಯ ಬಗ್ಗೆ ಆಸಕ್ತಿ ಉಂಟಾಗುವ ಬದಲು, ಗಂಡನ ಬಗ್ಗೆ ಅಸಹ್ಯ ಉಂಟಾಗಿ ರತಿಯಲ್ಲಿ ಮತ್ತಷ್ಟು ಜಡತ್ವ ಮೂಡಿತ್ತು ಆಕೆಯಲ್ಲಿ.

ಲೈಂಗಿಕ ಮನೋವೈದ್ಯರ, ಹಾಗೂ ವಿಜ್ಞಾನಿಗಳ ಪ್ರಕಾರ ಬಾಲ್ಯದಲ್ಲಿ, ಕಠೋರ ನಿಯಮಗಳಿಗೆ, ಆಂದೋಲನಕ್ಕೆ ಗುರಿಯಾದ ಬಾಲಕಿಯರು ಪ್ರತಿವಿಷಯದಲ್ಲೂ ನಿರ್ಲಿಪತ್ತೆಯನ್ನು, ನಿರಾಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಅದರಲ್ಲೇ ಅವರಿಗೆ ಆನಂದ ಲಭಿಸುತ್ತದೆ. ಅಲ್ಲದೆ ಇನ್ನೊಬ್ಬರ ಸಾನಿಧ್ಯದಲ್ಲಿ ಆಕೆಯ ಮನಸ್ಸು ಮುದುಡಿಹೋಗುತ್ತದೆ. ಯಾರೂ, ತಮ್ಮನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅದರಿಂದ ಯಾರಲ್ಲೂ ಸಂಬಂಧ ಬೆಳೆಸಿಕೊಳ್ಳದಿರುವುದೇ ಸರಿಯಾದ ಪದ್ಧತಿ ಎಂದು ನಿರ್ಣಯ ಮಾಡಿಕೊಂಡಿರುತ್ತಾರೆ. ಇಂತಹ ಮಾನಸಿಕ ಪರಿಸ್ಥಿತಿಯಿಂದ ದಾಂಪತ್ಯ ಜೀವನ ಕೂಡ ಒಂಟಿತನವನ್ನು ಬಯಸುತ್ತದೆ. ಮುಕ್ತ ಮನಸ್ಸಿನಿಂದ ವ್ಯವಹರಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ಯಾರಾದರೂ ತಮ್ಮನ್ನು ನಿಂದಿಸಿದರೆ, ತಮ್ಮ ಭಾವನೆಯೇ ನಿಜ, ತಮ್ಮ ನಿರ್ಣಯವೇ ಸರಿಯಾದದ್ದು ಎಂದು ಒಂದು ನಿರ್ಣಯಕ್ಕೆ ಬರುತ್ತಾರೆ. ಅದು ಸೆಕ್ಸ್ ಬಗ್ಗೆ ಬಡತ್ವವನ್ನು ಹೆಚ್ಚು ಮಾಡುತ್ತದೆ.

ಶಾಲಿನಿಯಂತಹ ಮಾನಸಿಕ ಪರಿಸ್ಥಿತಿಯನ್ನು ಹೊಂದಿರುವವರ ಜೊತೆ ದಾಂಪತ್ಯ ಜೀವನವನ್ನು ಸಾಗಿಸಲು ಇಚ್ಛಿಸುವ ಪುರುಷರು ಮೊದಲು ಅಂತಹವರು ಮನಸ್ಸಿನಲ್ಲಿ ಭದ್ರತೆಯನ್ನು ಮೂಡಿಸಬೇಕು. ಆ ಸ್ತ್ರೀಯ ಮನೋಭಾವಕ್ಕೆ ತಮ್ಮ ಮನಸ್ಸಿನಲ್ಲಿ ಪೂರ್ತಿ ಸಹಾನುಭೂತಿ ಇದೆಯೆಂದು ತಾವು ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಲ್ಲೆವೆಂದು ತಿಳಿಯುವಂತೆ ವ್ಯವಹರಿಸಬೇಕು. ಇದುವರೆವಿಗೂ ಅವರ ಮನಸ್ಸಿನಲ್ಲಿದ್ದ ಭಾವನೆ ಗಳನ್ನು ಪ್ರೋತ್ಸಾಹಿಸುತ್ತೇವೆಂದು ಆಶ್ವಾಸನೆ ಮೀಯಬೇಕು. ಇದರಿಂದ ಅವರಲ್ಲಿ ಭದ್ರತೆ ಏರ್ಪಡುತ್ತದೆ, ಮನಸ್ಸು ಬಿಚ್ಚಿಕೊಳ್ಳುತ್ತದೆ. ನಿಧಾನವಾಗಿ ಗಂಡನ ಸಾಮೀಪ್ಯಕ್ಕೆ ಸರಿಯುತ್ತಾರೆ. ತನ್ನನ್ನು ಅರ್ಥ ಮಾಡಿಕೊಂಡ ಗಂಡನ ಬಗ್ಗೆ ಪ್ರೀತಿ-ವಿಶ್ವಾಸ ಮೂಡುತ್ತದೆ. ತಮ್ಮ ಸರ್ವಸ್ವವನ್ನು ಅರ್ಪಿಸಿ, ಅವರ ಸಾನಿಧ್ಯದಲ್ಲಿ ಅಮಿತವಾದ ಆನಂದ, ಸುಖವನ್ನು ಹೊಂದುತ್ತಾರೆ. ನಿಧಾನವಾಗಿ ಒಂಟಿತನದಿಂದ ಹೊರಬಂದು ಗಂಡನ ಜೊತೆ ಹಾಯಾಗಿರಲು ಇಚ್ಛಿಸುತ್ತಾರೆ. ಪತ್ನಿ ಬದಲಾಗುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನಿಂದಿಸಿದರೆ ಆಕೆ ನೊಂದುಕೊಂಡು ಪುನಃ ಜಡತ್ವದ ದಾರಿಯನ್ನೇ ತುಳಿಯುತ್ತಾಳೆ. ಒರಟಾದ ಗಂಡನ ಜೊತೆ ಇರುವ ಬದಲು ಒಂಟಿತನವೇ ವಾಸಿ ಎಂದು ಅಂತರ್ಮುಖಿಗಳಾಗುತ್ತಾರೆ.

* * *