ಗಂಡಂದಿರ ಮೇಲೆ ಹೆಂಡತಿಯರು ಮಾಡುವ ಆರೋಪಗಳನ್ನು ಪರಿಶೀಲನೆ ಮಾಡಿದರೆ ಗಂಡಂದಿರ ವರ್ತನೆಯಲ್ಲಿ ಯಾವ ಯಾವ ವಿಷಯದಲ್ಲಿ ಮಾರ್ಪಟು ಅಗತ್ಯ ಎಂಬುದು ತಿಳಿಯುತ್ತದೆ. ಪ್ರತಿ ಆರೋಪಕ್ಕೂ ಗಂಡ ಬದಲಾಗಬೇಕೆಂದಿಲ್ಲ. ಕೆಲವು ಮಾರ್ಪಾಟುಗಳು ತಂತಾನೆ ಆಗುತ್ತವೆ. ಆದುದರಿಂದ ಹೆಂಡತಿಯರ ಆರೋಪಗಳನ್ನು ಪರಿಶೀಲಿಸೋಣ.

೧. ನನಗೆ ನನ್ನ ಗಂಡನ ಅಗತ್ಯಗಳನ್ನು ಪೂರೈಸುವಲ್ಲಿ ಸಾಕಾಗುತ್ತದೆ. ನನ್ನ ಬಗ್ಗೆ ಅವರು ಕಾಳಜಿ ವಹಿಸುವುದಿಲ್ಲ.

೨. ಯಾವುದೇ ಕೆಲಸವನ್ನು ಪೂರ್ಣ ಮಾಡದೆ ಅರ್ಧಂಬರ್ಧ ಬಗ್ಗೆ ಅವರು ಕಾಳಜಿ ವಹಿಸುವುದಿಲ್ಲ.

೩. ಪ್ರತಿಯೊಂದು ವಿಷಯಕ್ಕೂ ಸುಳ್ಳು ಹೇಳಿದರೆ ನನಗೆ ಕೋಪ ಬರುತ್ತದೆ. ಅವರು ಬಾಯಿ ತೆರೆದರೆ ಬರೀ ಸುಳ್ಳಿನ ಮಾತೇ ಇರುತ್ತದೆ. ಯಾವುದು ನಿಜವೋ? ಯಾವುದು ಸುಳ್ಳೋ ಗೊತ್ತಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮವರನ್ನು ನಾನ್ಹೇಗೆ ನಂಬುವುದು?

೪. ಪ್ರತಿಯೊಂದು ವಿಷಯದಲ್ಲೂ ತಪ್ಪೇ ಹುಡುಕುತ್ತಾರೆ. ಪ್ರತಿಯೊಂದು ನಿನ್ನಿಂದಲೇ ಆಗಿದ್ದು ಎಂದು ಆಕ್ಷೇಪಿಸುತ್ತಾರೆ ಎಂದೂ ನಾನು ಮಾಡಿದ ಅಡಿಗೆ ಚೆನ್ನಾಗಿದೆ ಎಂದು ಹೇಳಿಲ್ಲ. ನನ್ನ ಮಾತು, ನಾನು ಉಡುವ ಸೀರಎ ಕೂಡ ಅವರಿಗೆ ಮೆಚ್ಚಿಗೆಯಾಗುವುದಿಲ್ಲ.

೫. ನಿಜವಾಗಲೂ ನನ್ನ ಗಂಡನಿಗೆ ಪ್ರೇಮಾನುರಾಗ ಎಂದರೇನು ಎಂಬುದೇ ಗೊತ್ತಿಲ್ಲ. ಸೆಕ್ಸ್ ಬೇಕು ಅನಿಸಿದಾಗ ನನ್ನ ಹತ್ತಿರ ಬರುತ್ತಾರೆ. ಆತನಿಗೆ ಅಗತ್ಯ ಬಿದ್ದಾಗ ನನ್ನ ಜೊತೆ ಮಾತಾಡುತ್ತಾರೆ. ಎಲ್ಲವೂ ಕೃತಕ, ಯಾಂತ್ರಿಕವಾಗಿ ಸಾಕಾಗುತ್ತದೆ. ಟೀ ಮಾಡುವುದು, ಅಡಿಗೆ ಮಾಡುವುದು, ಸೆಕ್ಸ್ ಸುಖವನ್ನು ನೀಡುವುದು, ಬೆಳಿಗ್ಗೆ ಎದ್ದು ಅವರ ಸೇವೆ ಮಾಡುವುದರಲ್ಲೇ ನನ್ನ ಆಯಸ್ಸು ಕಳೆಯುತ್ತಿದೆಯೇ ಹೊರತು ಬೇರೇನು ಸುಖವಿಲ್ಲ.

೬. ಯಾವಾಗಲೂ ಮನಸ್ಸು ಬಿಚ್ಚಿ ಮಾತಾಡುವುದಿಲ್ಲ. “ಏನೇ! ಸ್ವಲ್ಪ ಟೀ ಮಾಡು, ತಲೆ ನೋಯುತ್ತಿದೆ, ಹಣೆಗೆ ಸ್ವಲ್ಪ ಅಮೃತಾಂಜನ ತಿಕ್ಕು” ಎಂದ್ಹೇಳಿ ಕೆಲಸ ಮಾಡಿಸಿಕೊಳ್ಳುತ್ತಾರೆಯೇ ಹೊರತು ಮನಸ್ಸು ಬಿಚ್ಚಿ ಮಾತಾಡುವುದಿಲ್ಲ. ಅವರು, ಅವರ ಕೆಲ, ಅವರ ಸ್ನೇಹಿತರನ್ನು ಬಿಟ್ಟು ನಾನೊಂದು ಪ್ರಾಣಿ ಇದ್ದೀನಿ, ನನ್ನ ಜೊತೆ ನಗು ನಗುತ್ತಾ ಮಾತಾಡಬೇಕೆಂಬುದು ಕೂಡಾ ತಿಳಿಯದು.

೭. ಯಾವಾಗಲೂ ಮಕ್ಕಳ ಮೇಲೆ ರಾಗಾಡುತ್ತಿರುತ್ತಾರೆ. ನಾನೊಬ್ಬಳೇ ಅವರನ್ನು ಹೆತ್ತಿದ್ದೇನೆಯೇ? ನನಗೆ ಮಾತ್ರ ಅವರು ಮಕ್ಕಳೆ? ಅವರಿಗೂ ಕೂಡ ಅವರು ಮಕ್ಕಳಲ್ಲೇ?

೮. ಮಕ್ಕಳ ಬಗ್ಗೆ ಅವರಿಗೆ ನಿಜವಾಗಲೂ ಶ್ರದ್ಧೆ ಇಲ್ಲ. ಯಾವತ್ತೂ ಮಕ್ಕಳ ಕೈಯಲ್ಲಿ ಹೋಂವರ್ಕ್ ಮಾಡಿಸುವ ಗೋಜಿಗೆ ಹೋಗುವುದಿಲ್ಲ. ಕನಿಷ್ಠ ಆ ಮಕ್ಕಳು ಹೇಗೆ ಓದುತ್ತಿದ್ದಾರೆಂದು ಕೂಡಾ ಕೇಳುವುದಿಲ್ಲ.

೯. ಮನೆಯಲ್ಲಿ ಏನಾಗುತ್ತಿದೆ ಅನ್ನುವುದು ಕೂಡಾ ಅವರಿಗೆ ಗೊತ್ತಿಲ್ಲ. ಮನೆಯಲ್ಲಿ ಯಾವ ಪದಾರ್ಥವಿದೆ. ಯಾವ ಪದಾರ್ಥವಿಲ್ಲ ಎಂಬುದನ್ನು ಕೂಡಾ ಗಮನಿಸುವುದಿಲ್ಲ. ಮನೆಯ ಬಗ್ಗೆ ಯಾವಾಗಲೂ ಕಾಳಜಿವಹಿಸುವುದಿಲ್ಲ.

೧೦. ನಿಜವಾಗಲೂ ನನ್ನನ್ನು ಮನಸ್ಸು ಪೂರ್ತಿಯಾಗಿ ಪ್ರೀತಿ ಪ್ರೇಮ ಮಾಡುವುದಿಲ್ಲ. ನಿಜವಾಗಲೂ ನಾನು ಪ್ರೇಮ ಎಂಬುದನ್ನೇ ಪಡೆದಿಲ್ಲ. ಮದುವೆಯಾದ ಹೊಸದರಲ್ಲಿ ನನ್ನ ಬಗ್ಗೆ ಆಸಕ್ತಿ ತಳೆಯುತ್ತಿದ್ದರೂ ಇತ್ತೀಚೆಗಂತೂ ನನ್ನನ್ನು ಮರತೇ ಬಿಟ್ಟಿದ್ದಾರೆ. ಕನಿಷ್ಠ ನನಗೂ ಮನಸ್ಸಿಗೆ ಎಂಬುದನ್ನು ಅವರು ಗುರ್ತಿಸುತ್ತಿಲ್ಲ. ಪ್ರೇಮ, ಆತ್ಮೀಯತೆಯನ್ನು ಬರೀ ಸಿನಿಮಾದಲ್ಲಷ್ಟೇ ನೋಡುವಂತಾಗಿದೆ.

೧೧. ಒಮ್ಮೊಮ್ಮೆ ಬಹಳ ಕಠಿಣವಾಗಿ ವರ್ತಿಸುತ್ತಾರೆ. ಯಾವ ಕಾರಣವಿಲ್ಲದಿದ್ದರೂ ನನ್ನನ್ನು ಬಯ್ಯುತ್ತಾರೆ. ಒಮ್ಮೊಮ್ಮೆ ಆವೇಶಭರಿತರಾಗಿ ಮಾತಾಡುತ್ತಾರೆ. ನಿಜವಾಗಿ ಅವರಿಗೆ ಸಹನೆ ಅನ್ನುವುದೇ ಇಲ್ಲ.

೧೨. ಜೀವನದಲ್ಲಿ ಏನಾದ್ರು ಸಾಧಿಸೋಣ ಮುಂದುವರೆಯೋಣ ಎಂಬಚಲವೇ ನನ್ನವರಲ್ಲಿ ಇಲ್ಲ

೧೩. ಹಣವನ್ನು ದುಂದು ವೆಚ್ಚ ಮಾಡುತ್ತಾರೆ. ಯಾವುದಕ್ಕಾದರೂ ಒಂದು ನೂರು ರೂಪಾಯಿಬೇಕಾಗಿತ್ತು. ಎಂದು ಕೇಳಿದರೆ ಇಲ್ಲ ಎನ್ನುತ್ತಾರೆ. ಸಂಸಾರ ನಿಭಾಯಿಸಲು ನಾನು ಸಾಯುತ್ತಿದ್ದೇನೆ ಎಂದು ಆಗಿಂದಾಗ್ಗೆ ಹೇಳುತ್ತಿರುತ್ತಾರೆ. ಆದರೂ ಕೂಡಾ ಹಣವನ್ನು ದುಂದು ವೆಚ್ಚಮಾಡುತ್ತಾರೆ.

೧೪. ನನಗೆ ಮನೆ ಕೆಲಸದಲ್ಲಿ ಸಹಾಯ ಮಾಡದೇ ಬಿಡುವು ಇದ್ದಾಗಲೆಲ್ಲಾ ಆರಾಮವಾಗಿ ಮಲಗಿರುತ್ತಾರೆ. ಅವರ ದೃಷ್ಟಿಯಲ್ಲಿ ಹೆಂಡತಿ ಎಂದರೆ, ದುಡಿಯುವ ಯಂತ್ರ ಎಂದು ಭಾವಿಸಿದ್ದಾರೆ.

೧೫. ಬಹಳ ಸಂಕುಚಿತ ಸ್ವಭಾವ, ಅವರಿವರು ಹೇಳಿದ ಮಾತನ್ನು ನಂಬುತ್ತಾರೆ. ಹೊರಗಿನವರು ಹೇಳಿದ ಮಾತನ್ನು ಗೌರವಿಸುತ್ತಾರೆ. ಮನೆಯಾಕೆ ಹೇಳಿದ ಮಾತನ್ನು ತಿರಸ್ಕರಿಸುತ್ತಾರೆ.

೧೬. ಮನೆಯ ಅಗತ್ಯಗಳಿಗೆ ಹಣವನ್ನು ಕೊಡುವುದಿಲ್ಲ. ಆದರೆ ಮನೆಯಲ್ಲಿ ಊಟೋಪಚಾರದಲ್ಲಿ ಸ್ವಲ್ಪ ಕಡಿಮೆಯಾದ್ರೂ ನನ್ನ ಮೇಲೆ ರೇಗಾಡುತ್ತಾರೆ. ಬರುವ ಆದಾಯ ಸಾಕಾಗುವುದಿಲ್ಲ. ಯೋಜಿತ ರೀತಿಯಲ್ಲಿ ಸಂಸಾರವನ್ನು ನಿಭಾಯಿಸುವುದಿಲ್ಲ.

೧೭. ಪ್ರತಿ ವಿಷಯದಲ್ಲೂ ಅವರದೇ ನಡೆಯಬೇಕು. ಯಾವಾಗಲೂ ವಾದಿಸುತ್ತಾರೆ.

೧೮. ಪರಸ್ತ್ರೀಯರ ಬಗ್ಗೆ ಹೆಚ್ಚು ಆಸಕ್ತಿ. ನಾನು ಪಕ್ಕದಲ್ಲಿದ್ದರು ಈತ ನನ್ನನ್ನು ಗಮನಿಸದೆ, ಆ ಸ್ತ್ರೀಯರ ಅಂದ ಚೆಂದವನ್ನು ವರ್ಣಿಸುತ್ತಾರೆ. ಅದನ್ನು ಕೇಳಿದಾಗ ನನಗೆ ಮೈ ಉರಿಯುತ್ತದೆ. ನನ್ನನ್ನು ಆತ ನಿಜವಾಗಿಯೂ ಪ್ರೇಮಿಸುತ್ತಲೇ ಇಲ್ಲ ಎಂದೆನಿಸುತ್ತದೆ.

೧೯. ನನ್ನನ್ನು ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ. ಅವರೇ ಎಲ್ಲಾ ಕಡೆಯೂ ಹೋಗುತ್ತಿರುತ್ತಾರೆ.

೨೦. ಅವರಿಗೆ, ಅವರದೇ ಆದ ವ್ಯಕ್ತಿತ್ವವೇ ಇಲ್ಲ.

೨೧. ಅವರ ಅಪ್ಪ-ಅಮ್ಮಂದಿರ ಮಾತಿಗೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡುತ್ತಾರೆ. ನಮ್ಮ ಅತ್ತೆ, ಮಾವನ ಕಿರುಕುಳವನ್ನು ನನ್ನಿಂದ ಸಹಿಸಲಾಗುತ್ತಿಲ್ಲ. ಎಲ್ಲಾ ನನ್ನ ಪ್ರಾರಾಬ.

೨೨. ಸೆಕ್ಸ್ ಸುಖ ಬೇಕನಿಸಿದಾಗ ಬೆಡ್ ರೂಂನಲ್ಲಿ ನನ್ನ ಬಳಿ ಬಂದು ಅವರ ತೀಟೆಯನ್ನು ಮಾತ್ರ ಆತುರಾತುರವಾಗಿ ತೀರಿಸಿಕೊಳ್ಳುತ್ತಾರೆ. ಹೆಂಡತಿಗೆ ಲೈಂಗಿಕ ಸುಖ ಲಭಿಸಿದೆಯೇ ಎಂಬ ಕಾಳಜಿ ಅವರಲಿಲ್ಲ.

೨೩. ಮದುವೆಯಾಗಿ ಹತ್ತು ವರ್ಷವಾದರೂ ಒಂದು ಸೀರೆ ತಂದುಕೊಟ್ಟಿಲ್ಲ.

೨೪. ನನ್ನ ತವರಿನವರು ಮನೆಗೆ ಬಂದರೆ ಮನಸ್ಸು ಕೊಟ್ಟು ಮಾತಾಡುವುದಿಲ್ಲ.

೨೫. ನೆಂಟರಿಷ್ಟರ ಮುಂದೆ ನನ್ನನ್ನು ದೂಷಿಸದಿದ್ದರೆ ಅವರಿಗೆ ತೃಪ್ತಿ ಯಾಗುವುದಿಲ್ಲ.

ಗಂಡಂದಿರು ಗಮನಿಸಬೇಕಾದ್ದು!

ಹೆಂಡತಿಯರು ಸಾಮಾನ್ಯವಾಗಿ, ಆರೋಪಿಸುವ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಯಾವುದಾದರೂ ನಿಮಗೆ ಸಂಬಂಧಪಟ್ಟಿದ್ದರೆ, ನೀವು ತಿದ್ದಿಕೊಳ್ಳುವುದು ದಾಂಪತ್ಯದ ಹಿತ ದೃಷ್ಟಿಯಿಂದ ಅಗತ್ಯ. ಗಂಡನಷ್ಟೇ ಹೆಂಡತಿಯೂ ಕಷ್ಟಪಟ್ಟು ಮನೆಯಲ್ಲಿ ದುಡಿಯುತ್ತಾಳೆ ಎಂಬುದನ್ನು ಮರೆಯದಿರಿ. ಗಂಡ ಹೊರಗಡೆ ಹೋಗಿ ಅನೇಕರನ್ನು ಸಂಧಿಸಿ, ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಸಾಧ್ಯತೆಗಳಿವೆ. ಆದರೆ, ಹೆಂಡತಿ ಮನೆಯಲ್ಲೇ ಕೂತಿರುತ್ತಾಳೆ. ಉದ್ಯೋಗಸ್ಥ ಹೆಂಗಸರಾದರೆ, ಆಫೀಸ್ ಕೆಲಸ, ಮನೆ ಗೆಲಸವೆಂದು ಆಯಾಸಗೊಂಡಿರುತ್ತಾರೆ. ಅವರಿಗೆ ಬೇಕಾಗಿರುವುದು ಗಂಡನಿಂದ ಸ್ವಲ್ಪಮಟ್ಟಿನ ಪ್ರೀತಿ-ಪ್ರೇಮವಷ್ಟೇ! ಜೊತೆಗೆ ಆತ್ಮೀಯ ಅನುರಾಗ ಅಲ್ಲವೇ? ನೀವು ನಿಮ್ಮ ನಿಜವಾದ ಪ್ರೇಮವನ್ನು ಆಕೆಗೆ ತಿಳಿಯುವಂತೆ ಅಭಿವ್ಯಕ್ತಿಸಿದರೆ ಆಕೆಗೆ ಅತ್ಯಂತ ಸಂತೋಷವಾಗುತ್ತದೆ. ಇಲ್ಲಿ ಪಟ್ಟಿಮಾಡಿರುವ ಆರೋಪಗಳನ್ನು ಅರಿತು ತಿದ್ದಿಕೊಳ್ಳಲು ಪ್ರಯತ್ನಿಸಿ ನೋಡಿ. ಆಗ ನಿಮ್ಮ ಮನೆ ಬೃಂದಾವನವಾಗುತ್ತದೆ.

* * *