ಈ ಕೆಳಕಂಡ ಕಾರಣಗಳಿಂದ ಕೆಲವು ಸ್ತ್ರೀಯರಲ್ಲಿ ಜನನೇಂದ್ರಿಯ ಭಾಗದಲ್ಲಿ ನೋವು ಉಂಟಾಗುತ್ತದೆ.

೧. ಭಗಾಂಕುರ ಅಥವಾ ಕ್ಲೈಟೋರಿಸ್ ಭಾಗದಲ್ಲಿ ಸೆಗ್ಮಾ ಸಂಗ್ರಹ, ಸೋಂಕು.

೨. ಅಂಡಾಶಯಗಳಲ್ಲಿ (ಓವರೀಸ್) ಉರಿಯೂತ ಅಥವಾ ಸಿಸ್ಟ್ಯ್.

೩. ಯೋನಿಯಲ್ಲಿ ಸ್ರಾವ ಅಥವಾ ತೇವದ ಕೊರತೆ ಅಥವಾ ಈಸ್ಟ್ರೋಜೆನ್ ಕೊರತೆ.

೪. ಯೋನಿಯ ಸುತ್ತಣ ಇರುವ ಸ್ನಾಯುಗಳು ಸಾಮಾನ್ಯವಾಗಿ ಸಂಭೋಗದ ಸಮಯದಲ್ಲಿ ಸಾಕಷ್ಟು ವಿಶ್ರಾಂತಿ ಸ್ಥಿತಿಯಲ್ಲಿರುತ್ತವೆ. ಪುರುಷನ ಶಿಶ್ನದ ಪ್ರವೇಶಕ್ಕೂ ಅನುಕೂಲವಾಗಿರುತ್ತದೆ. ಆದರೆ, ಕೆಲವು ಮಹಿಳೆಯರಲ್ಲಿ ಸ್ನಾಯುಗಳಲ್ಲಿ ಸೆಡೆತ ಉಂಟಾಗಿ, ಯೋನಿಯ ಸೆಡೆತದ ನೋವು ಉಂಟಾಗುತ್ತದೆ. ಈ ಸ್ಥಿತಿ ಇದ್ದಾಗ ಲೈಂಗಿಕ ಸಂಭೋಗ ಮಾಡಲು ಪತ್ನಿ ಅವಕಾಶ ನೀಡಲು ಆಗುವುದಿಲ್ಲ.

ಯೋನಿಯ ಸೆಡೆತ, ಭಯ, ಅಪರಾಧ ಮನೋಭಾವನೆ ಅಥವಾ ನಿರೀಕ್ಷಿತ ನೋವೇ ಮೊದಲಾದ ತೊಂದರೆಗಳಿಂದ ಉಂಟಾಗುತ್ತದೆ. ಯೋನಿ ಸೆಡೆತ ಅಥವಾ ವಜೈಸಿಸಮ್‌ವಿರುವ ಸ್ತ್ರೀಯನ್ನು ಮನೋವೈದ್ಯರಲ್ಲಾಗಲಿ ಅಥವಾ ಸ್ತ್ರೀ ಆರೋಗ್ಯ ತಜ್ಞ (ಗೈನಾಕಲಜಿಸ್ಟ್) ರಲ್ಲಾಗಲಿ ತೋರಿಸಿ ಸೂಕ್ತ ಚಿಕಿತ್ಸೆ ಮಾಡಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ.

* * *