ಖ್ಯಾತ ಮನೋವೈದ್ಯರಾದ ಡಾ|| ಸಿ.ಆರ್. ಚಂದ್ರಶೇಖರ್‌ರವರು ಸ್ತ್ರೀಯರಲ್ಲಿ ಲೈಂಗಿಕ ನಿರಾಸಕ್ತಿಗೆ ಈ ಕೆಳಕಂಡ ಕಾರಣಗಳನ್ನು ನೀಡಿರುತ್ತಾರೆ:

ಲೈಂಗಿಕ ಉದ್ರೇಕದ ಉಡುಗಣೆಗೆ ಹಲವಾರು ಕಾರಣಗಳಿವೆ, ಅವುಗಳಿಂದರೆ ಜನನೇಂದ್ರಿಯಗಳ ಅಥವಾ ವರ್ಣತಂತುಗಳ (ಕ್ರೋಮೋಸೋಮ್ಸ್) ದೋಷದಿಂದ ಕುಂಠಿತಗೊಂಡ ಸ್ತ್ರೀಯ ದೈಹಿಕ ಮಾನಸಿಕ ಮತ್ತು ಜನಿಕಗಳ ಬೆಳವಣಿಗೆ.

ಮಾನಸಿಕ ಕಾರಣಗಳು:

 • ಖಿನ್ನತೆ (ಡಿಪ್ರೆಕ್ಷನ್)
 • ಒತ್ತಡ(ಸ್ಟ್ರೆಸ್‌)
 • ಆತಂಕ ಮನೋಬೇನೆ
 • ಉನ್ಮಾದ (ಹಿಸ್ಟಿರಿಯಾ)

ಶಾರೀರಕ ಕಾರಣಗಳು

 • ತುಂಬಾ ದಪ್ಪನಾದ ಕನ್ಯಾಪೊರೆ
 • ಯೋನಿಯ ಸುತ್ತಲ ಸ್ನಾಯು ಬಿಗಿತದ ನೋವು
 • ಸ್ಥಳಿಯ ನೋವು, ಗಾಯ, ಗಡ್ಡೆಗಳು
 • ಅನಿಮಿಯಾ (ರಕ್ತಕೊರೆ)
 • ಸಕ್ಕರೆ ಕಾಯಿಲೆ
 • ಆತ್ರ‍್ಯಟಿಸ್ (ಕೀಲುರಿತ) ಸಂಧಿವಾತ
 • ಬ್ಲಡ್ ಫ್ರೆಷರ್ (ಬಿ.ಪಿ)
 • ಗೂರುಲುಬ್ಬಸ ಮುಂತಾದವು

ಸಲಹೆ:

 • ಮಾನಸಿಕ ತೊಂದರೆಗಳಿದ್ದರೆ ಮನೋವೈದ್ಯರಲ್ಲಿ ತೋರಿಸಿ ಚಿಕಿತ್ಸೆಯನ್ನು ಮಾಡಿಸಬೇಕು.
 • ಶಾರೀರಿಕ ಕಾರಣಗಳಿದ್ದರೆ ಸ್ತ್ರೀ ಆರೋಗ್ಯ ತಜ್ಞರಲ್ಲಿ (ಗೈನಿಕಾಲಜಿಸ್ಟ್) ತೋರಿಸಿ ಸೂಕ್ತ ಚಿಕಿತ್ಸೆಯನ್ನು ಕೊಡಿಸಬೇಕು.