ಬೇಕಾಮನೆಗೆ ಎರಡು ರೀತಿಯ ಚಿಕಿತ್ಸಾ ವಿಧಾನಗಳಿರುತ್ತವೆ.

* ಸ್ವಯಂ ಏಕಾಂತ ಗೃಹ ಚಿಕಿತ್ಸೆ

* ವೈದ್ಯಕೀಯ ಅಥವಾ ಮನೋವೈದ್ಯರಿಂದ ಚಿಕಿತ್ಸೆ

ಸ್ವಯಂ ಏಕಾಂತ ಗೃಹ ಚಿಕಿತ್ಸೆ

೧. ಸ್ತ್ರೀ ಕಾಮಚೇತರಿಕೆಯನ್ನು ಹೊಂದಲು ಕಷ್ಟವಾಗಿದ್ದರೆ, ಆಕೆಯಲ್ಲಿ ಬಲವಾದ ಕಾಮದಾಸೆ ಮೂಡಲು ಪ್ರೀತಿ-ಸಂಯಮದಿಂದ ಪುರುಷನು ಪ್ರಯತ್ನಿಸಬೇಕು. ಅದಕ್ಕಾಗಿ ಪತಿ, ಏಕಾಂತದಲ್ಲಿ ಪ್ರೇಮ-ಪ್ರಣಯ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕು.

೨. ಸ್ತ್ರೀ, ವಿಶ್ರಾಂತಿ ಪಡೆದು ಲವಲವಿಕೆಯಿಂದ ಇರುವಾಗ ಆಕೆಯನ್ನು ಲೈಂಗಿಕ ಸಂಬಂಧಕ್ಕೆ ಸಿದ್ಧಪಡಿಸಬೇಕು. ಯಾವುದೇ ಕಾರಣಕ್ಕೂ ಪುರುಷ ಬಲತ್ಕಾರವನ್ನಾಗಲಿ, ಒರಟು ವರ್ತನೆಯನ್ನಾಗಲಿ ತೋರಬಾರದು.

೩. ಪ್ರೀತಿ-ಪ್ರಣಯದ ಚಲನಚಿತ್ರ, ಸೀರಿಯಲ್ಸ್‌ಗಳನ್ನು ಟಿ.ವಿಯಲ್ಲಿ ನೋಡಲು ನಿಮ್ಮಾಕೆಗೆ ಅವಕಾಶ ಮಾಡಿಕೊಡಿರಿ. ಸಂಜೆಯ ವೇಳಗೆ ವಾಕಿಂಗ್‌ಗೆ, ಶಾಂಪಿಗ್‌ಗೆ ಜೊತೆಯಲ್ಲಿ ನಿಮ್ಮ ಹೆಂಡತಿಯನ್ನು ಕರೆದೊಯ್ಯಿರಿ.

೪. ಆಗಿಂದಾಗೆ ಆಕೆಗೆ ಇಷ್ಟವಾದ ವಸ್ತುಗಳನ್ನು ತಂದುಕೊಡಿರಿ. ಪ್ರೀತಿ-ಪ್ರಣಯದ ಚಲನಚಿತ್ರಗಳಿಗೆ ನಿಮ್ಮಾಕೆಯನ್ನು ಜೊತೆಯಲ್ಲಿ ಕರೆದೊಯ್ಯಿರಿ.

೫.ಪ್ರೀತಿ-ಪ್ರಣಯ ಕಥೆ, ಕಾದಂಬರಿ, ಓದಲು ಪ್ರೀತಿ-ಪ್ರಣಯದ ಚಿತ್ರಗಳ ಸಂಪುಟ ನೋಡಲು ನಿಮ್ಮಾಕೆಗೆ ಆಸ್ಪದ ಮಾಡಿಕೊಡಿರಿ.

೬.ಪುರುಷನಲ್ಲಿ ಪತ್ನಿಯ ಬಗ್ಗೆ ಪ್ರೀತಿ, ಸ್ನೇಹಭಾವವಿದ್ದರೆ, ಕರುಣೆಯಿದ್ದರೆ ಆಕೆಯಲ್ಲಿ ಸುಪ್ತವಾಗಿರು ‘ಕಾಮಭಾವ’ ಉತ್ತೇಜನಗೊಳ್ಳಲು ಸಹಾಯಕವಾಗುತ್ತದೆ.

೭. ಚುಂಬನ, ಆಲಿಂಗನ, ಸ್ಪರ್ಶದಾಟವೇ ಮೊದಲಾದ ಕಾಮಕೇಳಿ ದಂಪತಿಗಳ ನಡುವೆ ಏಕಾಂತದಲ್ಲಿ ವಿನಿಮಯವಾಗುತ್ತಿದ್ದರೆ ‘ಲೈಂಗಿಕ ಲೋಕ’ದಲ್ಲಿ ಗಂಡ-ಹೆಂಡತಿ ವಿಹರಿಸಲು ಸಾಧ್ಯವಾಗುತ್ತದೆ.

೮. ಸ್ತ್ರೀಯಲ್ಲಿ ಕಾಮೋದ್ರೇಕ ಮೂಡಿಸುವ, ಕಾಮ ಕೇಂದ್ರಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಪತಿರಾಯರು ಅವುಗಳನ್ನು ಉತ್ತೇಜಿಸಿದರೆ ಆಕೆಯಲ್ಲಿ ಲೈಂಗಿಕ ಚೇತರಿಕೆ ಮೂಡಲು ಅನುಕೂಲವಾಗುತ್ತದೆ.

೯. ಪತ್ನಿಯ ಶರೀರದಲ್ಲಿ ಏಕಾಂತದಲ್ಲಿ ಮೃದುಮಧುರವಾಗಿ ಮಸಾಜ್‌ನ್ನು ಮಾಡುವುದರಿಂದ ಕಾಮ ಚೇತರಿಕೆ ಪಡೆಯಲು ಸಹಾಯಕವಾಗುತ್ತದೆ. ಕಾಮಕೇಳಿಯಲ್ಲಿ ವೈವಿಧ್ಯತೆ ಇರುವುದು ಅಗತ್ಯ.

ಸ್ವಯಂಚಿಕಿತ್ಸೆಯಿಂದ, ಪತ್ನಿ ‘ಲೈಂಗಿಕ ಚೇತರಿಕೆ’ ಹೊಂದಲು ಸಾಧ್ಯವಾಗದಿದ್ದರೆ ಮನೋವೈದ್ಯರಲ್ಲಾಗಲಿ ಅಥವಾ ಗ್ಯೆನಾಕಲಜಿಸ್ಟ್ (ಸ್ತ್ರೀ ಆರೋಗ್ಯ ತಜ್ಞರು) ರವರಲ್ಲಿ ತೋರಿಸಿ ಚಿಕಿತ್ಸೆಯನ್ನು ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ.

* * *