ಯೋಗಿ ಮತ್ತು ಭೋಗಿ (ಜೀವನವನ್ನು ಸಂತೋಷಿಸುವವರು) ಗಳಿಬ್ಬರನ್ನು ನಾವು ವಿಶ್ವದೆಲ್ಲೆಡೆ ಕಾಣುತ್ತೇವೆ. ಭಾರತೀಯ ತತ್ವಶಾಸ್ತ್ರದ ಪ್ರಕಾರ, ಕಾಮ ಅಥವಾ ಲೈಂಗಿಕತೆ ಕರ್ಮದ ಜೊತೆಯಲ್ಲೇ ಸಾಗಬೇಕು. ನೀವು ಕಾಮದ ಜೊತೆ ಕರ್ಮ ಮತ್ತು ಧರ್ಮವನ್ನು ಸಂಯೋಜಿಸಿದಾಗ ಜೀವನದ ಪ್ರತಿಕ್ರಿಯೆಲ್ಲಿ ಪೂರ್ಣ ಪ್ರಭುತ್ವವನ್ನು ಹೊಂದುತ್ತೀರಿ. ನಿವೇನಾದರೂ, ನಿಮ್ಮ ಜೀವನದಲ್ಲಿ ಕಾಮಕ್ಕೆ ಮಾತ್ರ ಪ್ರಾಧಾನ್ಯತೆಯನ್ನು ನೀಡಿದರೆ ಸಂತೋಷಕ್ಕಿಂತಲೂ ತೊಂದರೆ-ತೊಡಕುಗಳು ಹೆಚ್ಚುತ್ತವೆ. ಅಲ್ಲದೆ ಅಪಾಯಗಳನ್ನು ಎದುರಿಸಬೇಕಾಗುತ್ತದೆ.

ಯೋಗ ಸ್ವಯಂ ಸಂಯಮವನ್ನು ಸುಧಾರಿತ ರೀತಿಯಲ್ಲಿ ಸಂತೋಷ ಹೊಂದುವುದನ್ನು ಬೋಧಿಸುತ್ತದೆ. ಅಲ್ಲದೆ ತಪ್ಪು ದಾರಿಯಲ್ಲಿ ಸಾಗದಂತೆ ಮನೋಬಲವನ್ನು ನೀಡುತ್ತದೆ.

ದಂಪತಿಗಳಲ್ಲಿ ಲೈಂಗಿಕತೆಯಲ್ಲಿ ಪರಿಪೂರ್ಣತೆ ಏಕ್‌ದಂ ಬರುವುದಿಲ್ಲ. ಅದು ಏಕಾಂತದಲ್ಲಿ ಅನುಭವಿಸುವ ಪ್ರಾಯೋಗಿಕತೆಯನ್ನು ಅವಲಂಬಿಸಿರುತ್ತದೆ. ಸೆಕ್ಸ್, ದಂಪತಿಗಳ ಸಂಕೀರ್ಣವಾದ ಹೊಂದಾಣಿಕೆಯಿಂದ ಪರಿಪಕ್ವಗೊಳ್ಳುತ್ತದೆ.

ಯೋಗವನ್ನಾಗಲಿ ಅಥವಾ ಕಾಮವನ್ನಾಗಲಿ ಅನುಭವಿಸಲು ಅಭ್ಯಾಸ ಅಗತ್ಯ. ಯೋಗದ ಅಭ್ಯಾಸದಿಂದ ಜಾಗೃತ ಮತ್ತು ಸುಪ್ತ ಮನಸ್ಸು ಉತ್ತಮ ರೀತಿಯ ಪಾತ್ರವನ್ನು ನಿರ್ವಹಿಸುತ್ತದೆ.

ಯೋಗ ಮತ್ತು ಲೈಂಗಿಕ ಹೊಂದಾಣಿಕೆ ಇಲ್ಲದಿರುವಿಕೆ:

ದಂಪತಿಗಳ ನಡುವೆ, ಲೈಂಗಿಕ ಹೊಂದಾಣಿಕೆಯಿಲ್ಲದಿದ್ದರೆ ಅದನ್ನು ಗುಣಪಡಿಸಲು “ಯೋಗ” ಸಹಾಯ ಮಾಡುತ್ತದೆ. ಶರೀರದ ಅಂಗಾಂಗಗಳು ಚುರುಕಾಗಿ, ಸಮಂಜಸವಾಗಿ ಕಾರ್ಯವನ್ನು ನಿರ್ವಹಿಸಲು ಯೋಗ ನೆರವಾಗುತ್ತದೆ. ಯೋಗದಿಂದ, ದಂಪತಿಗಳ ನಡುವೆ “ಲೈಂಗಿಕ ಆಕರ್ಷಣೆ” ಮೂಡುತ್ತದೆ. ಯೌವನದಲ್ಲೇ ಯೋಗಾಭ್ಯಾಸ ಮಾಡುತ್ತಿದ್ದು, ವಿವಾಹದ ನಂತರವು ಅದನ್ನು ಮುಂದುವರೆಸಿದರೆ, “ವೈವಾಹಿಕ ಜೀವನ” ಸುಗಮವಾಗಿ ಮುನ್ನಡೆಯುತ್ತದೆ; ಇಳಿ ವಯಸ್ಸಿನಲ್ಲೂ “ಲೈಂಗಿಕಶಕ್ತಿ” ಚೆನ್ನಾಗಿರಲು ಸಹಾಯಕವಾಗುತ್ತದೆ ದಂಪತಿಗಳಿಬ್ಬರು ವ್ಯಾಯಾಮ ಅಥವಾ ಯೋಗವನ್ನು ಅಭ್ಯಾಸ ಮಾಡುವುದರಿಂದ ಪರಸ್ಪರ ಲೈಂಗಿಕ ಪರಾಕಾಷ್ಠತೆಯನ್ನು ಹೊಂದಲು ಅನುಕೂಲವಾಗುತ್ತದೆ.

ಯೋಗಾಭ್ಯಾಸದಿಂದಾಗಿ, ದಂಪತಿಗಳಿಬ್ಬರಲ್ಲಿ, ಸಾಮರಸ್ಯ ಮೂಡುತ್ತದೆ; ಮನಃಶಾಂತಿಯನ್ನು ಹೊಂದಲು ನೆರವಾಗುತ್ತದೆ.

ಯೋಗ ಮತ್ತು ವೈವಾಹಿಕ ಜೀವನ:

ದಂಪತಿಗಳ ನಡುವೆ, ಸ್ಥಿರವಾದ, ಶಾಶ್ವತವಾದ ಪ್ರೀತಿ-ಮಮತೆ-ಅಭಿವೃದ್ಧಿಗೊಳ್ಳಲು “ಯೋಗಾಭ್ಯಾಸ” ಸಹಾಯ ಮಾಡುತ್ತದೆ. ಯೋಗ, ಆರೋಗ್ಯಕ್ಕೆ ಆನಂದಕ್ಕೆ ಮೂಲಭೂತವಾದ ಅಡಿಪಾಯವಾಗಿರುತ್ತದೆ ಯೋಗ, ಜೀವನದಲ್ಲಿ ತನ್ನದೇ ಆದ ರೀತಿಯಲ್ಲಿ ಬೆಳಕನ್ನು ಬೀರುತ್ತದೆ.

ಯೋಗಾಭ್ಯಾಸದಿಂದ, ದೇಹ-ಮನಸ್ಸು ರೋಗದಿಂದ ಮುಕ್ತವಾಗಿರಲು ಸಹಾಯ ಮಾಡುತ್ತದೆ; ನರಗಳ ವ್ಯೂಹ ಬಲಗೊಳ್ಳುತ್ತದೆ. ಬದುಕಿನಲ್ಲಿ ಭರವಸೆ ಮೂಡುತ್ತದೆ.

* * *