ಬರುಬಾರದೀ ಊರಿಗೆ ಅರಿಯದೆಲೆ ಬಂದೆ
ಮೊರೆ ಹೇಳಲಿ ಇನ್ಯಾರಿಗೆ || ಬರು ||

ಗುರು ಹಿರಿಯಾರಿವರೆಂದು ಗುರುತಗಳ ಅರಿಯದೆ
ನನರೊಳು ಬೆರತು ನಾ ಬರಲಾರೇನೊ ಶಂಬೊ

ಒಂಬತ್ತು ಬೀದಿಗಳು ಈ ಊರಿಗೆ ಹಿಂಬಾಗಿಲು ಒಂದಿಲ್ಲವೋ
ತುಂಬಿತು ಮೇಲ ಭಾಗ ಇನ್ನಿಲ್ಲ ದುರಾಶೆ

ನಂಬಿ ಬಂದೇನು ಶಂಬೋ ನೀನೆ
ರಕ್ಷಿಸು ತಂದೆ

ಎಂಟು ಮಂದಿ ಕಂಟಾಕರು
ಹತ್ತಾರು ಮಂದಿ ತುಂಟಾರವ್ವ ಇವರು

ತುಂಟಾರು ಇವರೆಂದು ಒಂಟೀಲಿ ನಾನಿದ್ದೆ
ಬಂಟ ಹುಡುಗನು ಒಬ್ಬ ಗಂಟು ಬಿದ್ದನು ಶಂಭೊ

ದೇಶದೊಳಗೆ ನಮ್ಮ ವಾಸುಳ್ಳ ಶಿಶುನಾಳ
ಗುರುವೇ ಕೆಂಚೀಶನೆ ನೀನೆ ರಕ್ಷಿಸೊ ಶಂಭೊ
ಹೆಂಗೇ ಮರಿಯಲವ್ವ ಇವನು
ಶಾಂತಾ ಷರೀಪನು || ಹೆಂಗೆ ||

ಅಂತರಂಗದೊಳಗೆ ಬಂದು
ಚಿಂತೆ ದೂರ ಮಾಡಿದನವ್ವ
ಒಳಗೆ ಹೊರಗೆ ಆದ ಬ್ರಹ್ಮ
ಅಲಕ್ಕನೇ ಹಾರಿದನಮ್ಮ || ಹೆಂಗೆ ||

ಜನನ ಮರಣವನ್ನು ಗೆದ್ದು
ದುರಿತ ಮರಣವನ್ನು ತುಳಿದು
ಒಳಗೆ ಹೊರಗೆ ಆದ ಬ್ರಹ್ಮ
ಅಲಕ್ಕನೇ ಹಾರಿದನಮ್ಮ || ಹೆಂಗೆ ||