ಮ || ಅಱಿವುಂಟಾಗಿಯುಮಲ್ಪಮಪ್ಪ ಸುಖವಿಂಗಾಸಕ್ತನಾಗಿರ್ದುಮೆ
ಯ್ಮಱೆದಿರ್ದೆಂ ಮಱೆದಿರ್ದೊಡಕ್ಕಟಿವನಿನ್ನೆಂತಿರ್ದೊಡೇನೆಂದು ತಾಂ
ಮಱೆದುಗ್ರಾಂತಕನಿಪ್ಪ ನಲ್ಲನದಱೆಂ ಸಂನ್ಯಾಸನಂಗೆಯ್ಯಲಾಂ
ತಱಿಸಂದೆಂ ಪೆಱದೇನುಮೆನ್ನದಿರಿಮಿನ್ನಾಂ ಮಾಣೆನೆಂದಂ ನೃಪಂ ೧೬

ವ || ಎನೆ ಸಮಸಮಿರ್ದ ನೆರವಿ ಬಾಯಂಬಿಟ್ಟು ಸಂಕಟಂಬಟ್ಟು ನಿಲೆ ಮಂತ್ರಿ ಮುಖ್ಯನೊರ್ವನಿಂತೆಂದಂ

ಕಂ || ಎಮ್ಮನಿಬರುಮಂ ರಕ್ಷಿಸು
ತಮ್ಮನುಜಾಧಿಪತಿಯಾಗಿ ರಾಜ್ಯೋದಯದಿಂ
ನಿಮ್ಮಯೆ ಸುಖದಿಂದಪ್ಪುದು
ಕೆಮ್ಮನಿದಂ ನುಡಿವುದಾವ ಬೇಸಱೊ ನೃಪತೀ ೧೭

ವ || ಎನೆ ಪಾಂಡುರಾಜಂ ಮತ್ತಮಿಂತೆಂದಂ

ಕಂ || ಎಂತುಂ ಮುಳಿದೆಯ್ತಂದು ಕೃ
ತಾಂತಂ ಕೊಲಲಿರ್ಪನದಱಿನಿಂತಿದಱಿಂ ಪೊ
ಕ್ಕಾಂತು ಶುಭಾಧ್ಯಾನದೆ ಮು
ನ್ನಂ ತಱಿಸಂದೆನಗೆ ಗೆಲ್ಲಮಂ ಮಾಡಿದಪೆಂ ೧೮

ವ || ಮತ್ತಮೊಂದಂ ಕೇಳಿಂ ನೀಮೆನ್ನಗಲ್ಕೆಗೆಂತುಮಾಱಿರಪ್ಪೊಡಿಂತಿರ್ದ ನೆರವಿಯೆಲ್ಲಮತಿರಥರುಂ ಮಹಾರಥರುಮಪ್ಪಿರ್‌ ಮಹಾಸಾಮಂತರುಂ ವಿದ್ಯಾ [ವಂ]ತರುಮಪ್ಪಿರ್‌ ಕಲಿದಿರಿಂ ನೀಮಿದಕ್ಕೆ ಬೆಕ್ಕಸಂಬಡಲುಂ ಸಂಕಟಂಬಡಲುಂ ಬೇಡೊಡಂಬಡುವುದೆನ್ನ ಗೆಲ್ಲಕ್ಕೆ ಸಂತಸಂಬಡುವುದಾನಱಿಯದೆ ನೆಗೞ್ವೆನಲ್ಲೆಂ ಕೆಮ್ಮಗಿರಿಂ ಧರ್ಮಪುತ್ರ ನೀಂ ಕೇಳೆಂದಿಂತೆಂದಂ

ಚಂ || ಬಸನಮನುಂಟುಮಾಡದಿರು ಮಾನ್ಯರೊಳೊಪ್ಪೆ ವಿನೀತನಾಗು ಬೆ
ರ್ಚಿಸದಿರು ಬಂಧುವರ್ಗಮನಡಂಗಿಸು ಬೆರ್ಚಿದೊರಂ ಸುದಾನದಿಂ
ಪೆ[ಸರಿ]ಸು ಭೃತ್ಯರಂ ನಯದಿನಾ[ಳ್‌]ಪ್ರಜೆಯಂ ಬೞಿಯಿಂ ಬಪ್ಪುದಂ
ಬಿಸುಡು ನಿರಂತರಂ ಸಲಿಸು ತಕ್ಕರ ಮಿಕ್ಕರ ಸಂವಿವಾದಮಂ ೧೯

ಕಂ || ನಿರ್ಮೂಳಂ ಮಾಡರಿಯಂ
ಝಂಕಿಸದಿರು ತಕ್ಕರಾರುಮಂ ಕೇಳ್‌ ಹಿತಮಂ (?)
ಧರ್ಮಾರ್ಥಭೋಗಮೆಂಬಿವ
ನೊರ್ಮೆಯು[ಮೇಂ]ಗೆಂಟುಮಾಡಿ ನೆಗೞಲ್‌ ಮಗನೇ ೨೦

ವ || ನಿಮ್ಮ ಪಿರಿಯಯ್ಯನ ಮನೆಯೆಂಬುದು ನಿಮಗರಮನೆಯಾಗಿರ್ದುವಾ ಕೂಸುಗಳ್‌ ನಿಮಗಗ್ಗಳದ ಸೋದರಮೆಂದು ಬುದ್ಧಿಯಂ ಪೇೞ್ದು ರಾಜ್ಯಮನೊಪ್ಪಿಸಿ ಮಹಾದಾನಂಗೆಯ್ದುಕೊಂತಿಮಹಾದೇವಿಯಲ್ಲಿಗೆ ಕೆಯ್ಗೆಯ್ದು ಬಂದು ನಿಮ್ಮೆಮ್ಮ ನಣ್ಪಿನಿತೆ ಸಂನ್ಯಸನಂಗೆಯ್ದ ಪೆನೆಂದೊಡಾನುಂ ನಿನ್ನಾದುದನಪ್ಪೆನೆಂದೊಡಾಗಮ ದಾಯಿಗರ್‌ ಪಲರೊಳರ್‌ ನಿನ್ನ ಮಕ್ಕಳನೊಳ್ಳಿತ್ತು ನಡಪಿ ರಾಜ್ಯಭರಮಂ ನಿತ್ತರಿಪುದು ಎನ್ನ ಪೇೞ್ದುದು ಗೆಯ್ಯೆಂದೊಡಂಬಡಿಸಿ ಮದ್ರಿಯ ಮಾಡಕ್ಕೆ ವಂದು ನೋೞ್ಪಿನನ್ನೆಗಂ ಮದ್ರಿಯಾ ಪಡೆಮಾತಂ ಕೇಳುತೆ ಪಲ್ಲಂ ಸುಲಿದುಮಿಂದು ಪಸದನಂಗೊಂಡು ತನ್ನ ಪರಿಜನಕ್ಕೆನ್ನ ಪರಮಸ್ವಾಮಿಯೊಡವೋದಪ್ಪೆನೆಂದು ಪರಿಚ್ಛೇದಮಂ ನುಡಿದು ದಾನಂಗೆಯ್ದು ಸಿವಿಗೆಯಂ ತರವೇೞ್ದಿರವನರಸಂ ಕಂಡಿದೇನೆಂದೊಡೆ ನಿಮ್ಮೊಡವಂದಪ್ಪೆನೆಂದೊಡಾಗದೆಂದಿಂತೆಂದಂ

ಕಂ || ಸತಿ ತಾಂ ಪುತ್ರಂ ಪಡೆದೊಡೆ
ಪತಿಯಿಂ ಬೞಿ ಪುತ್ರರ ಕೈಯಿಂದಂ ಶೀಲಾ
ನ್ವಿತೆಯುಂ ಗುಣಸಂಯುತೆಯು
ನ್ನತಿಯುಂ ತಾನಾಗಿ ಬಾೞಲಪ್ಪುದು ಕಾಣಾ ೨೧

ವ || ಸಾವುದೊಳ್ಳಿತ್ತೆ ಮಕ್ಕಳುಂ ಮನೆಯುಮಂ ಕಾವುದೊಳ್ಳಿತ್ತು ತನ್ನಲ್ಲಿ ಪೇೞಿಯದೆಂತು ಬರ್ದೊಡೊಳ್ಳಿತಲ್ಲದೆ ಪೊಲ್ಲದಾಗದೆನೆ ಮದ್ರಿಯೆಂಗುಂ ತಪಸ್ವಿಯ ಗುಣಕ್ಕೆ ಗುರುವಿನ ಕಾಪಿಲ್ಲ ದಡಂ ಪೆಂಡತಿಯ ಗುಣಕ್ಕಂ ಭರ್ತಾರನ ಕಾಪಿಲ್ಲದಾಗಳ್‌ ಸಲ್ಲವದಱಿಂ ತೋಱೆವುದೆ ಲೇಸಂತಪ್ಪುದನಾಗಲೀಯೆನೆನೆ ಪಾಂಡುರಾಜನೆಂಗುಂ

ಕಂ || ಪಶು ಮೃಗ ಪಕ್ಷಿಗಳೆಲ್ಲಿಯು
ಮಸದಳಮೆನೆ ಪುತ್ರಮೋಹಮಪ್ಪುದು ನೀನುಂ
[ಪುಸಿಯದೆ]ಸುತರಂ ನಡಪದೆ
ಬಿಸುಡುವುದೇಂ ಪಾೞಿಯೊಳಗೆ ಪೇೞ್‌ ಮೃಗನಯನೇ ೨೨

ಎ || ಎಂದ ಮಾತಿಂಗೆ ಮತ್ತಂ ಮದ್ರಿಯಿಂತೆಂಗುಂ

ಕಂ || ಬಸಿಱೊಳಗಿರ್ದಂದವ್ವೆಯ
ಪೊಸ ಜವ್ವನದೊಳ್ಪನೞಿದು ಪುಟ್ಟಿದೊಡಿಂಬಂ
ಬಿಸುಡಿಸಿ ಬಳೆದೊಡೆ ಕೊಳ್ವರ್‌
ಕಸವರಮಂ ಮಕ್ಕಳಂತು ಪಗೆವರುಮೊಳರೇ ೨೩

ಎಲ್ಲಿಂಬುಗಳಿಂ ಗಂಡರಿ
ನಲ್ಲದೆ ಬೞಿಕಾರವಂತಱಿಂ ಶುಭಕಾರ್ಯ
ಕಲ್ಲದೆ ನುಡಿ ಸಲ್ಲದೆ ಸುಖ
ಮಿಲ್ಲದೆ ನಮೆದಳಿಪಿ ಬಾೞೆನ್ಝಿನ್ನೇ[೦]ನುಡಿವೈ ೨೪

ವ || ಎಂದಿಂತರಸನ ಮಾಂತಿಂಗೊಂದಂ[ಪ]ಡಿನುಡಿವುದಂ ಕೊಂತಿಮಹಾದೇವಿ ಕೇಳ್ದು ಪರಿತಂದು ತಂಗೆಗಿಂತೆಂದಳ್‌

ಕಂ || ಅನುಮಿದಂ ಬಗೆದಿರ್ದೊಡೆ
ಭೂನಾಥಂ ಕೇಳ್ದು ಬಂದು ಬಾರಿಸೆ ಮಾಣ್ದೆಂ
ಮಾನಿನಿಗೆ ಪತಿಯ ಪೇೞ್ದುದೆ
ತಾನೊಳ್ಳಿತ್ತೆಂಬ ಪಾೞಿಯಂ ಕೇಳ್ದಱಿಯಾ ೨೫

ವ || ಎಂದೊಡಕ್ಕಂಗಿಂತೆಂಗುಂ

ಕಂ || ಗತಿಯಿಲ್ಲದಲ್ಲಿಗಂ ನಿಜ
ಪತಿಯೊಡವೋಪುದೆ ಪತಿವ್ರತಾಗುಣಮದಱಿಂ
ಪತಿಯೊಡವೋಪುದುಮೊಪ್ಪುವ
ಗತಿವಡೆವುದುಮಿಲ್ಲಮಿಂತಿದಂ ಕಡೆಗಣಿಪೆಂ ೨೬

ಪಿರಿಯರಸಿಯರಸಿಯಾಗಿ
ರ್ದರಿಯರ್‌ ನಿನ್ನಾತ್ಮಜರ್ಕಳದಱಿಂದೆಂತುಂ
ವರರಾಜ್ಯಕ್ರಮಮಂ ನಿ
ತ್ತರಿಸದೆ ನಿನಗಾಗದಕ್ಕ ಪೆಱತಂ ಬಗೆಯಲ್‌ ೨೭

ವ || ಎನೆ ಕೊಂತಿಮಹಾದೇವಿ ಮತ್ತಮಿಂತೆಂಗುಂ

ಕಂ || ಪತಿ ಕಾಗುಮೆ ಪೆಂಡತಿಯಂ
ಸತಿ ತನ್ನಂ ತಾನೆ ಕಾಗುಮುತ್ತಮ ಜಾತಿ
ಸ್ಥಿತಿಯಿಂ ಗುಣಸಂತತಿಯಂ
ಗತಿಯಂ ತಾಂ ಬಗೆದು ನೆಗೞೆ ಪೞೆ ಪೊರ್ದುಗಮೇ ೨೮

ವ || ಎಂದೊಡಂತೇಕೆಂಬಂ ತನ್ನ ಮನಂಗಾಪು ಲೋಕಂ ಮೆಯ್ಗಾಪು ಬೆಚ್ಚಿಸುವುದದಱಿಂ

ಕಂ || ಪತಿಯುಳ್ಳಿನಮದ್ಭುತ ದೇ
ವತೆಯಂ ಸತಿ ಪೋಲ್ತು ಕರಮಗುರ್ವಾಗಿರ್ಕುಂ
ಪತಿಯ ಪರೋಕ್ಷದೊಳೊಪ್ಪುವ
ಸತಿ ತಾಂ ಚೌವಟದ ಮರದಂತಿರ್ಕುಂ ೨೯

ವ || ಇನ್ನು ಪಲವು ಮಾತಿನೊಳೇಂ ನಿನಗೆಂದುದುಮಿಂತೆಮ್ಮ ರಸಂಗೆಂದುದುಮಿಂತುಂ

ಕಂ || ಮೆಯ್ಯೊಡೆಯಂ ಪೋದಿಂ ಬೞಿ
ಮೆಯ್ಯಿಂಬಂ ಪಡೆಯಲಾಗ ಕೆಮ್ಮನೆ ಬರ್ದಿ[೦]
ಮೆಯ್ಯುಮನೞಿವೆನೆ ತೊಱೆವೆಂ
ಕೆಯ್ಯೆಡೆ ನಿನಗೆನ್ನ ಮಕ್ಕಳಿರ್ವರುಮಕ್ಕಾ ೩೦

ವ || ಎಂದ ಮಾತಂ ಕೇಳುತ್ತೆ ತಾನಱಿಗುಂ ಬಾಯೆಂದರಸಂ ಮಗುೞ್ದು ಪೋಗಿ ಜಿನಮಹಾ ಮಹಿಮೆಯುಂ ಪೊಱಮಡಿಸಿ ತಾನುಂ ಮುದ್ರಿಯುಂ ಸಿವಿಗೆಯನೇಱಿ ತಳ್ತು ಪಿಡಿವ ಸೀಗುರಿಗಳುಂ ಬೀಸುವ ಚಾಮರಂಗಳುಂ ಪೊಗೞ್ದುಬಪ್ಪವರುಂ ಬೆರಸತಿಶಯ ವಿಳಾಸದಿಂ ಜಿನಾಲಯಮಂ ತ್ರಿಪ್ರದಕ್ಷಿಣಂಗೆಯ್ದೊಳಗಂ ಪೊಕ್ಕು ಸರ್ವಜ್ಞನಂ ಸ್ತುತಿ ಸಹಿತಂ ಪೂಜಿಸಿ ಗುರುಪರಿವಿಡಿಯಿಂ ಋಷಿಸಮುದಾಯಮಂ ಬಂದಿಸಿ ಸುವ್ರತಭಟ್ಟಾರರ ಮುಂದೆ ಕುಳ್ಳಿರ್ದು ಕೆಯ್ಯಂ ಮುಗಿದು ಸಂನ್ಯಸನ ಪ್ರತ್ಯಾಖ್ಯಾನಮಂ ದಯೆಯ್ಯಿಮೆನೆ ಮುನ್ನಮೊಡಂಬಟ್ಟ ಮನೆವಾರ್ತೆಯಪ್ಪುದಱೆಂ ಲೋಚುಗೆಯ್ದಂಕಕಾಱಂಗೆ ಪಂಚರಾಯಿತದ ತೊಗಲನೇಱಿಸುವಂತೆ ಪಂಚಮಹಾವ್ರತಂಗಳನೇಱಸಿ ಬೞಿಯಮಾವಜ್ಜೀವಮಾಹಾರ ಶರೀರ ನಿವೃತ್ತಿಪೂರ್ವಕಂ ಸಂನ್ಯಸನಪ್ರತ್ಯಾಖ್ಯಾನಮಂ ಕೊಟ್ಟು ಸುವ್ರಭಟ್ಟಾರರ್‌ ತಮ್ಮ ಋಷಿಸಮುದಾಯದೊಳಗ ಮಾಚಾರಾರಾಧನಾ ವ್ಯವಹಾರ ಪ್ರಕೃತಿ[ಧರ್ಮ] ಕಾಯೋತ್ಸರ್ಗ ಕಾಯೋಪಾಯ[ಮಂ]ವಿ[ಧಿಸಿ] ಬೞಿಕ ಪರಿಶ್ರಮಾಷ್ಟವಿಧ ನಿರ್ಯಾಪಕ ಗುಣದೊಳಂ ದಶವಿಧಸ್ಥಿತಿಕಲ್ಪದೊಳಂ ಷಡಾವಶ್ಯಕ ಕ್ರಿಯೆಯೊಳಂ ಕೂಡಿ ನಾಲ್ವತೆಣ್ಬರಾಚಾರ್ಯರನಾಯ್ದುಕೊಂಡು ಮುನ್ನಮೆ ಪಾಂಡುರಾಜನ ಸಲ್ಲೇಖನಕಾಲದೊಳುಮಾಹಾರಮಂ ಪ್ರಯೋಗಿಸಿಮೆಂದು ನಾಲ್ವರಂ ಸಮರ್ಪಿಸಿದರ್‌ ನಾಲ್ವರಂ ಪಾನಮಂ ನಿಯೋಗಿಸುವಂತು ನಿಯಮಮಂ ಮಾಡಿದರ್‌ ಮತ್ತೆ ನಾಲ್ವರಂ ಪ್ರಯೋಗಿಸುವನ್ನ ಪಾನಂಗಳಂ ರಕ್ಷಿಸುವಂತು ನಿಯೋಗಮಂ ಮಾಡಿದರ್‌ ಬೞಿಯಂ ಕ್ಷಪಕಂಗೆ ವೀರಸಂತಾರ ಮನೇಱೆದಿಂ ಬೞಿಯಂ ಜನಪದ ಗ್ರಾಮೋಪದಂಗಳನಾರಯ್ವುದಂ ನಾಲ್ವರ್ಗೆ ನಿಯೋಜಿಸಿದರ್‌ ಪೊಱಗಣ ಬನಕ್ಕೆ ನಾಲ್ಕುಂ ಕಡೆಗಳಂ ಪೇೞುತಿರ್ಪಂತು ನಾಲ್ವರಂ ಪೇೞ್ದರಂತು ಕಥೆವೇೞ್ವ ನಾಲ್ವರಾಚಾರಮಂ ಪರಸಮಯಿಗಳ್‌ ಪೊಕ್ಕು ನುಡಿದು ಕಾಡುವರೆಂದು ನಾಲ್ವರ್‌ವಾದಸ್ಥಾನಂಗಳಂ ಬಲ್ಲರಂ ಕಾಪು ವೇೞ್ದರ್‌ ನಾಲ್ವರಂ ಪೊಱಗಣ ಸಭೆಯ ಮಂಟಪದೊಳಿರ್ಪಂತು ಮಾಡಿದರ್‌ ಮತ್ತಂ ನಾಲ್ವರಂ ಕ್ಷಪಕಾವಾಸ ದ್ವಾರಪಾಳಕ[ರಂ ಮಾ]ಡಿದರ್‌ ನಾಲ್ವರಂ ಜಾವಮಿರ್ಪಂತು ಮಾಡಿದರ್‌ ನಾಲ್ವರಂ ಜಾವಮಿರ್ಪಂತು ಮಾಡಿದರ್‌ ನಾಲ್ವರಂ ಕಾಯಮಲಶೋಧಕರಂ ಮಾಡಿದರ್‌ ನಾಲ್ವರಂ ಕ್ಷಪಕ ಶಲಿಕಾಕುಂಚಪ್ರಾವರಣೋಪ ಕ್ರಿಯಾನಿಯೋಗ[ರಂ ಮಾ]ಡಿದರ್‌ ಮತ್ತೆ ನಾಲ್ವರಂ ಕ್ಷಪಕನಾಲಿ ಶುಭಧ್ಯಾನದೊಳ್ ತೀವ್ರನಪ್ಪಂತು ಚಿತ್ರಕಥೆಗಳಂ ಪೇೞುತಿರ್ಪಂತು ಮಾಡಿದರಿಂತು ನಾಲ್ವತ್ತೆಣ್ಬರಾಚಾರ್ಯರುಮಂ ನಿಯೋಗದೊಳಿರಿಸಿ ಬೞಿಯಂ ಮದ್ರಿಯುಂ ಕೆಯ್ಯಂಮುಗಿದೆನಗಮಿಯಂದದ ಪ್ರತ್ಯಾಖ್ಯಾನಮಂ ದಯೆಗೆಯ್ಯಿಮೆಂದೊಡಾಕೆಯ ಪರಿಚ್ಛೇದಿಸಿದ ಬಗೆಯ ಸಮಕಟ್ಟಂ ಬಗೆದಱಿದು ದೀಕ್ಷಾಗ್ರಹಣಪೂರ್ವಕಂ ಸಂನ್ಯಸನ ಪ್ರತ್ಯಾಖ್ಯಾನಮಂ ಕೊಟ್ಟಾರ್ಯಿಕಾ ಪ್ರಧಾನೆಯರಂ ಕರೆದು ನೀಮಿವರಂ ನೋನಿಸಿಮೆಂದೊಡವರ್‌ ನಾಲ್ವತ್ತೆಣ್ಬರ್‌ ಕಂತಿಯರ್ವೆರಸು ಮದ್ರಾರ್ಯಿಕೆಯರಂ ಪಟ್ಟಶಾಲೆಗೊಯ್ದುರಾಗಳ್‌ ಗುರುಮತದಿಂ ಪಾಂಡುರಾಜಋಷಿ ಪೋಗಿ

ಶಾ || ಜ್ಞಾನೋದ್ಯದ್ಬಲ ಗರ್ವದಿಂ ಪೊಣರ್ದ ದುಃಕರ್ಮಾರಿಯೊಳ್‌ ಸತ್ಸಮಾ
ದಾನೋಗ್ರಾಯುಧಹಸ್ತನಾಗಿ ತಱಿಸಂದತ್ಯಂತ ಸದ್ಭಾವದಿಂ
ತಾನಾಗಳ್‌ ಬಿರುದಂಕಮೆಂತು ಕಳನಂ ಬಂದೇಱುವಂತೇಱಿದಂ
ಸ್ಥಾನಾತ್ಯುತ್ತಮಸಾರಮೆಂಬುದ ನುತಶ್ರೀ ವೀರಸಂತಾ [ರ]ಮಂ ೩೧

ವ || ಅಂತು ವೀರಸಂತಾ[ರ]ಮೆಂಬ ಕಳನನೇಱಿ ಚಾಗಂಗೆಯ್ವಂಕದಂತೆ ಸರ್ವತ್ಯಾಗಂಗೆಯ್ದು ಅಂಕದಾತನಾಳ್ದನಂ ಪರಸಿ ಸುರಿಗೆಗೊಳ್ವಂತೆ ಸರ್ವಜ್ಞಂಗೆ ಸ್ತುತಿಗೆಯ್ದು ಧರ್ಮಧ್ಯಾನಮಂ ಕೈಕೊಂಡು ತನ್ನಂ ಪರಿಭವಿಸಿ ನಿಸ್ಯಂಕಿತನಾದಂಕದಂತೆ ಮಾನಸವಾಳೆಂಬಧ್ರುವ ಮನೊಳ್ಳಿತ್ತು ಚಿಂತಿಸಿ ದಂಡೆ ಪಣಿಕಟ್ಟಿನ ಕಾಪೀವುದೆಂದು ಕಳೆವ ತುೞಿಲಸಂದಂ ಕರೆದಂತೆ ಸಂಸಾರದೊಳಾರುಂ ಶರಣಿಲ್ಲೆಂಬಶರಣಮಂ ನೆನೆದೆಕ್ಕತುಳಕ್ಕೆ ನೀಮೆಲ್ಲರುಮೇವರೆಂದವ ನಿವರೆಲ್ಲರುಮಂ ಕಳೆದೊರ್ವನೆ ನಿಲ್ವಂತೆ ತತ್ತ್ವಮಂ ಭಾವಿಸಿ ನೀನಾರ್ಗೇಕಿರ್ದೆಯೆಂದು ಕರಭದಾತನಂ ಗೆಂಟುಮಾಡುವಂತೆ ಮೆಯ್ಯಂಬೇಱು ಮಾಡಿ ನೆಗೞ್ದನ್ಯತ್ವಮಂ ಬಗೆದು ಮುನ್ನಮಾದನುವರದ ತೊಡಂಕಿ….ನೆವಮಂ ಬಗೆದು ನಿಚ್ಚಟಮಪ್ಪಂಕದಂತೆ ಸಂಸಾರದೊಳ್‌ ತೊಡರ್ದು ನಮೆವುದನಪರಾಧಿಸೀಗಳೇಯುರ್ಚಿದಾಗಳ್‌ ಪೊಕ್ಕು ಕಾದುವ ಲೌಕಿಕದ ಪಸುಗೆಯನಱೆವಂತೆ ಲೋಕವಿಭಾಗಂಗಳನಱೆದು ಸಿದ್ಧಲೋಕಕ್ಕಾಸೆವಟ್ಟಂತುಮಲ್ಲದೀ ಮೆಯ್ಯೊಳ್‌ ನ್ಯಾಯಮನೆ ಬಗೆವೆನೆಂದು ಪುಗುವಂಕದಂತೆ ಮೆಯ್ಯಶುಚಿತ್ವಮಂ ನೆನೆಯುತ್ತಿದಿರಾಂತನನಿಱಿದು ಗೆಲ್ವ ಸಮಕಟ್ಟುಗಳನಱಿವಂತೈದುಂ ಕರ್ಮಾಸ್ರವದ್ವಾರಂಗಳ ನಱೆದಿದಿರಾಗಿ ತನ್ನೇಱಿಂಗಾಂತನೆಂದು ಕಾಪಿಟ್ಟು ನಿಲ್ಕಮಂತೆ ಸಮ್ಯಕ್ಚಾರಿತ್ರ ಭಾವನೆಯೆಂಬ ಸಂವರೆಯಂ ತಿಣ್ಣಂ ಮಾಡಿ ತನಗಿದಿರ್ಚಿದನ ಕೆಯ್ಯಱೆದಿಱಿದೊಡವನ ನೆತ್ತರುಗುವಂತೆ ಶುಭಧ್ಯಾನದ ಕೂರ್ಪಿನೊಳಶುಭಕರ್ಮಂಗಳ್‌ ಸೋರೆ ಪೊಕ್ಕುಗಿಯಲುಮಗಿಯಲುಮಾಗದೆಂಬ ತುೞಿಲಾಳ ಧರ್ಮದಂತೆರಡುಂ ತೆಱದ ಧರ್ಮಮಂ ಮನದೊಳ್‌ ತಾಳ್ದಿ ಪಾಯ್ದುಂ ಪತ್ತಿದಂಕಮನೊತ್ತಿ ಪಿಡಿದು ಗೆಲ್ವ ಗಾಯಮಱಿವಂಕದಂತೆ ಬೋಧೆಯಂ ನಿಟ್ಟೆವಡಿಸಿ ಪದಿಮೂಱು ದಿವಸಮಿಂತು ಕ್ಷಪಕಂಗೆ ಧರ್ಮಧ್ಯಾನಂ ನಿಲೆ ಪೊಱಗೆ ಜಿನಮಹಿಮೆ ಸಲೆನೋಂತರ್ಧರಾತ್ರದೊಳ್‌

ಚಂ || ತನುವಚಳಸ್ವರೂಪದಿರೆ ಪಂಕರುಹಾಸನದೋಜೆಯೊಳ್‌ ನಿಜಾ
ಸನಮಿರೆ ಹಸ್ತಪದ್ಮಮುಕುಳಂ ನೊಸಲಲ್ಲಿರೆ ದಿಟ್ಟಿ ತನ್ನ ಮೂ
ಗಿನ ಕೊನೆಯೊಳ್‌ ತಗುಳ್ದಿರೆ ಜಿನೇಂದ್ರನೊಳಂಬುಜಸೂತ್ರದಂದದಿಂ
ಮನಮಿರೆ ತತ್ಸಮಾಧಿ ನಿಲೆ ಸಾಧಿಸಿದಂ ದಿವಿಜೇಂದ್ರಲೋಕಮಂ ೩೨

ವ || ಪಾಂಡುರಾಜನಂತು ನೋಂತು ದೇವಲೋಕಮಂ ಸಾಧಿಸಿದಂ ಮದ್ರಿಯುಮಂದಿನ ಬೆಳಗಪ್ಪ ಜಾವದೊಳ್‌ ಮುಡಿಪಿ ಸ್ವರ್ಗಪ್ರಾಪ್ತಿಯಾದಳ್‌ ನೇಸಱ್‌ ಮೂಡಿದಿಂಬೞಿಯಂ ಚಾತುರ್ವರ್ಣಮೆಲ್ಲಂ ನೆರೆದು ಋಷ್ಯಾಂಗಮಂ ಸಂಸ್ಕಾರಿಸಿ ಬಂದಾಗಳ್‌ ಗಾಂಗೇಯ ಧೃತರಾಷ್ಟ್ರ ವಿದುರಾದಿಗಳ್‌ ಮನೆಗೆ ವಂದಷ್ಟಾಹ್ನಿಕ ಮಹಾಮಹಿಮೆಯಂ ಮಾಡಿಸುತಿರ್ದರಂತು ಧೃತರಾಷ್ಟ್ರಂ ಕುರುವಂಶಕ್ಕೆ ಜ್ಯೇಷ್ಠನಪ್ಪುದಱಿನಾತನ ಮಕ್ಕಳಪ್ಪ ದುರ್ಯೋಧನಾದಿಗಳ್‌ ಕೌರವರಾದರ್‌ ಪಾಂಡುರಾಜನ ಮಕ್ಕಳಪ್ಪ ಧರ್ಮಪುತ್ರಾದಿಗಳ್‌ ಪಾಂಡವರಾದರಂತಾ ಕೌರವ ಪಾಂಡವ ಕುಮಾರರ್‌ ಕೂಸಾಟಮಾಡುವಡಮೆರೞ್‌ ತಂಡಮುಮೊಂದೊರ್ಬರೊಳಪ್ರತಿಮಾಗಿ ಮಚ್ಚರಿಸುತ್ತಮ್ಮೋದಿ ಬಳೆದಕ್ಷರಾದಿ ಕಳೆಗಳುಮನೆಕ್ಕೆಕ್ಕೆಯೊಳ್‌ ಕಲ್ತರಲ್ಲಿ ಧರ್ಮಜಂ ಚತುಷ್ಟಷ್ಟಿಕಳಾವಿದನಾಗಿಯುಂ ಧರ್ಮಪ್ರಿಯಂ ಶಾಸ್ತ್ರಪ್ರಿಯನಾದೊಂ ಭೀಮಂ ವ್ಯಾಕರಣವಿದಗ್ಧನಾಗಿಯುಂ ಗದಾಯುದ್ಧ ಪ್ರಿಯನಾದೊಂ ಅರ್ಜುನಂ ಬಿಲುಗ[ಲ್ಪಿಯೊ]ಳರ್ಥಿಗನಾದೊಂ ನಕುಳಂ ಕೊಂತದೊಳ್‌ ಬಹುಳನಾದೊಂ ಸಹದೇವಂ ಬಾಳೊಳ್‌ ಪ್ರವೀಣನಾದೊಂ ದುರ್ಯೋಧನನುಮೆಲ್ಲೋದುಗಳಂ ಬಲ್ಲನಾಗಿಯುಂ ಗದಾಯುದ್ಧಪ್ರಿಯನಾದೊಂ ದುಶ್ಯಸನಾದಿಗಳುಂ ಸಕಳಕಳಾಪರಿಣತರಾದರಂತವರ್ಗೆ ಕುಮಾರವಯಸುಂ ಸುಖದಿಂ ಸಲುತ್ತುಮಿರ್ದುಂದಾ ಪೊೞಲ್ಗೆ

ಕಂ || ಭಾರದ್ವಾಜನೂಜಂ
ಚಾರುಗುಣಂ ದ್ರೋಣನೆಂಬನತಿಶುದ್ಧಕಳಾ
ಭಾರನುದಾರಂ ರಣಮುಖ
ಧೀರಂ ಜನವಿನುತ ಚಾಪವಿದ್ಯಾಧಾರಂ ೩೩

ವ || ಬಂದಾಗಳೆ ಕೌರವಾಮ್ನಾಯದ ಪಾರಾವಳಿಯೊಳ್ ಕೊಂಡಾಡೆ ನೆಗೞ್ದ ವಿಪ್ರೋತ್ತಮಂ ಗೌತಮನೆಂಬನಾತನ ಮಗಂ ಕೃಪಂ ಕಂಡು ಮನೆಗೊಯ್ದು ಅಭ್ಯಾಗತ ಪ್ರತಿಪತ್ತಗೆಯ್ದಿರ್ದು ಧನುರ್ವಿದ್ಯಾಚಾರ್ಯರಪ್ಪು ದನಱಿದು ನೀಮೆಮ್ಮರಸರ ಮಕ್ಕಳಂ ಧನುರ್ವಿದ್ಯಾಪ್ರವೀಣರ್ ಮಾಡವೇೞ್ಕುಮೆಂದೊಡಂಬಡಿಸಿ ಶುಭದಿನದೊಳೆರೞ್ತಂಡದ ರಾಜಕುಮಾರೆಲ್ಲರುಮಂ ಚಾಪವಿದ್ಯಾಭ್ಯಾಸದೊಳಗುಬ್ಬಿದೊಡಂತು ಕುಮಾರರ್ ಬಿಲ್ವಂ ಗುಣಿಯಸುತ್ತಿರೆ ದ್ರೋಣಾಚಾರ್ಯರ ಚಾಪವಿದ್ಯೆಯಂ ಮೆಚ್ಚಿ ಕೃಪಂ ತನ್ನ ಮಗಳಂ ಕೊಟ್ಟನಾಕೆಗಂ ದ್ರೋಣಂಗಮಶ್ವತ್ಥಾಮನೆಂಬ ಮಗಂ ಪುಟ್ಟಿ ಬಳೆಯುತ್ತಿರ್ದನೊಂದು ದೆವಸಂ ದ್ರೋಣಚಾರ್ಯರ್ ತಮ್ಮ ಭಟ್ಟರೆಲ್ಲರುಮಂ ಗರುಣಿಗೆ ಕರೆಯಲಟ್ಟಿ ನೀನಱಿಯದೆ ಬೆಬ್ಬಳಿಸಿ ತೆಱಂದಿಱಿದುಂ ಮೇಲೆವಾಯ್ದೊಡದರ್ಕಂ ಮುಳಿವರೆನೆ ನಿನ್ನಂಬೞಿಕೆಯುಂ ಮುಳಿಯಿಸಿದೊಡೆ ಕೂಸುಗಳ್ಳೆ ಮುಳಿವರೆ ಪಿರಿಯರುಮೆನೆ ಭೀಮನಿಂತೆಂದಂ

ಕಂ || ಕಿಱಿಯನಿವಂ ಪ್ರಾಯದೊಳೆಂ
ದುಱದೆನ್ನಂ ನುಡಿವುದಳವೆ ಬಲ್ಪಿನೊಳೆನ್ನೀ
ಕುಱುಕುಣಿಕೆಗೆ ನೆಱೆಯೈ ಪೊ
ಚ್ಚಱಿನೊಳಿದೇಂ ಪೊಣರ್ದು ನೋಡಲಾಗದೆ ಕೆನ್ನಂ ೩೪

ವ || ಎಂದ ಮಾತಿಂಗ ಕರ್ಣಂ ಮಗುೞಿಂತೆಂದಂ

ಕಂ || ದೊರೆಯಲ್ಲದಱೊಳ್ ಪೊಣರ್ವುದೆ
ದೊರೆಯಕ್ಕುಮೆ ದೊರೆಗೆ ನೆಟ್ಟನಾದೊಡಮೆಂತುಂ
ದೊರೆಗೆಡಿಸಲೆ ನೀಂ ಬಗೆವೈ
ದೊರೆಯಲ್ಲದೆ ಪೊಣರ್ದು ಗೆಲ್ವ ಗೆಲ್ಲಂ ಗೆಲಮೇ ೩೫

ಕಂ || ಮುಂ ಪುಟ್ಟಿದೊಡೇಂ ಶೌರ್ಯದ
ಪೆಂಪಕ್ಕುಮೆ ಕಿಱುಯನಾದೊಡಂ [ವಿ]ಕ್ರಮದಿಂ
ದಂ ಪಿರಿಯನಾ[ಗನೆಂ]ತೆನೆ
ಮುಂ ಪುಟ್ಟಿದ ಕಿವಿಗೆ ಕೋಡು ಕೂರಿದವಲೇ ೩೬

ಎ || ಎಂದು ಭೀಮಂ ಕರ್ಣನನೊತ್ತಿನುಡಿದು ಪಾೞಿಯ ಪೆಂಪನೀಡಾಡುವುದುಮಂ ಕರ್ಣಂ ಕೂಸೆಂದು ತನ್ನ ಸೈರಣೆಯನುಂಟುಮಾಡಿದುದುಮಂ ಕಂಡು ದುರಿಯೋಧನಂ ಭೀಮಂಗೆ ಮುನಿದು ಕಿಸುಗಣ್ಣಿ ನೋಡುವುದನೊರ್ಬಂ ಕಂಡು ಪರಿತಂದು ಗರುಣಿಯ ಕೆಲದೊಳಿರ್ದು ನೋೞ್ಪ ಗಾಂಗೇಯಾದಿಗಳ್ಗೆ ಪೇೞ್ದೊಡವರ್ ಪರಿತಂದು ನೀಮಿಂತು ನಿಮ್ಮೊಳ್ ಮಚ್ಚರಿಸಲಾಗದೆಂದು ಜಡಿದು ಭೀಮನ ಕೆಯ್ಯಂ ಪಿಡಿದೊಡಗೊಂಡು ಸಾಲ್ಗುಮೆಂದವರ ಮನೆಗೆ ಪೋಗಲ್ವೇೞ್ದಾಗಳ್ ದುರಿಯೋಧನಂ ಕರ್ಣನನೊಡಗೊಂಡು ಪೋಗಿ ಮಜ್ಜನಂಬುಗಿಸಿ ತಾನುಮಾತನುಮೊಂದ ಪಸೆಯೊಳ್ ಕುಳ್ಳಿರ್ದೊಡನುಂಡು ಆತನ ಬಂದ ನಾಡನಂಗವಿಷಯಮೆಂದುದನಱಿದಾ ನಾಡುಮಂ ತನಗೆವಪ್ಪ ದ್ರವ್ಯದೊಳಿಲ್ಲಂ ದಶವಂದಮುಮಂ ಕೊಟ್ಟಾಳ್ದಾತನಂ ತಾಳಿರ್ದು ಪಾಮಡವರ ವಿದ್ಯಾಬಲಕ್ಕಂ ಜನಾನುರಾಗಕ್ಕಂ ಪೆರ್ಚಿನುದ್ಯೋಗಕ್ಕಂ ಕಾಯ್ದು ಕನಲ್ಲು ಸೈರಿಸದೆ ತಮ್ಮಯ್ಯನಲ್ಲಿಗೆ ವಂದು ಬಿನ್ನಪಂ ಪಾಮಡವರೆಂತುಮುದ್ಧತರಾಗಿಯಲ್ಲದೆ ನೆಗೞ್ದರಲ್ಲ ರಾನುಮದಕ್ಕೆ ಸೈರಿಸುವನಲ್ಲೆಂ ಅಂಜಿ ಮಾಣ್ದಿರ್ಪೆನೆಂದೊಡಕ್ಕುಂ ನೀನೆ ಸೈರಿಸಲ್ವೇೞ್ಪುದಾ ದೊಡಮಾನವರನೊಂದುಪಾಯದಿಂ ಕಳೆದು ಪೆಱತೊಂದೆಡೆಯೊಳಿಸಿದಪ್ಪೆನೆಂದು ಮಗನಂ ಸಂತಯ್ಸಿ ಕಳೆದು ಧೃತರಾಷ್ಟ್ರಂ ಪಾಂಡವರ ಮನೆಗೆ ವಂದವರೆಲ್ಲರುಮಂ ಬರಿಸಿ ತಾನುಮವರುಮೇಕಾಂತಮಿರ್ದಿಂತೆಂದಂ

ಕಂ || ಆನೇಂ ನಿಮ್ಮಯ್ಯಂತಾ
ನೇನಂಬಂತಾಗಿ ನೆಗೞ್ದ ಸೌಧರ್ಮಿಕೆಗಿ
ನ್ನೂನಂ ಮಾಡಲಿಮದಱಿಂವ ||
ದಾನೊಂದಂ ಬೇಡಿದಪ್ಪೆನೆನಗದನೀಯಂ ೩೭

ವ || ಎಂದು ಕೆಯ್ಯನೊಡ್ಡಿದಾಗಳ್ ನಿಮ್ಮಡಿಯೆಮ್ಮನಿಂತುಪರೋಧಿಸಲ್ವೇೞ್ಪುದೆ ನೀಮೆಮ್ಮಯ್ಯನುಮನೆಮ್ಮುಮಂ ಕೊಂಡಾಡಿ ಪಿರಿಯವಲ್ಲದೊಡಾಮೇವಿರಿಯೆಮದಾವುದು ಬೆಸಸಿಮೆಂದಡೆ ನೀಮುಂ ವಾರಣಪುರದೊಳಿರ್ದು ನಮ್ಮ ಬಾೞನಾಳ್ದು ಸುಖಮಿರಿ ಮೆಂದೊಡಂತೆಗೆಯ್ವೆವೆಮಗೆ ನಿಮ್ಮಡಿಯ ಬೆಸನ[ಮನು]ಲ್ಲಂಘಿಸುವುದು ವಿನಯಮಂ ನಯಮುಮಲ್ಲೆಂದೊಡೊಳ್ಳಿತಾಯ್ತೆಂದು ಧೃತರಾಷ್ಟ್ರಂ ತನ್ನ ಮನೆಗೆ ಪೋದಂ ಪಾಂಡವರ್ ಪಯಣ ಸಾಮಗ್ರಿಗೆಯ್ದು ತಮ್ಮ ಸಕಳತಂತ್ರಮನೊಡಗೊಂಡು ಧೃತರಾಷ್ಟ್ರ ವಿದುರರ್ಕಳಂ ಬೀೞ್ಕೊಂಡು ಹಸ್ತಿನಪುರದಿಂ ಪೊಱಮಟ್ಟು ಪೋದರದಂ ದುರ್ಯೋಧನನಱಿದು ಗೂಢ ಪುರುಷರಿಂ ವಾರಣಪುರದೊಳ್ ಬೇಗಮರಗಿನ ಮಾಡಮಂ ಸಮಯವೇೞ್ದಟ್ಟಿ ಸಮೆ ದಾಗಳಿದಿರ್ವಂದೊಡೊಳ್ಳಿತಾಯ್ತೆಂದಿದಿರ್ಗೊಂಡುಮನಯದಿ ಪುಗಿಸುಪಾಯಮುಮಂ ತನಗೆ ಬಂದಪಾಯಮುಮಂ ಸಮಕಟ್ಟಿ ನಿಯೋಜಿಸಿ ತಾನುಮಱಿಯದಂತಿರ್ದಂ

ಉ || ಪಾಂಡವರೆಲ್ಲಮಂತು ಪಯಣಂಬರುತಂ ಕರಮಿಂಬಿನೊಳ್ [ವ]ನಂ
ಗೊಂಡೆಡೆಯಲ್ಲಿ ವಿಶ್ರಮಿಸಿ ಸಂತಸಮಿರ್ದು ವಿಳಾಸದೊಳ್ಪುಮಂ
ಚಂಡಪರಾಕ್ರಮೋದಯಮುಮಂ ಮೆಱೆವುತ್ತಮನೂನ ವೈಭವಾ
ಖಂಡಳಸನ್ನಿಭಪ್ರಟಕ ವಾರಣನಾಮಪುರಪ್ರದೇಶಮಂ ೩೮

ವ || ಎಯ್ದೆವಂದಾಗಳಾ ಪೊೞಲೊಳ್ ಮುನ್ನವೆ ಕೌರವಾನುಮತದೊಳಿರ್ದರ್ ಪೊೞಲನಷ್ಟಶೋಭೆಗೆಯ್ಸಿ ಪುರಪ್ರಧಾನರನೊಡಗೊಂಡು ಸೇಸೆವಿಡಿದಿದಿರ್ಗೊಂಡು ಕೃತಕ ರಾಜಮಂದಿರಕ್ಕೊಯ್ದು ಪಸೆಯ ಮೇಲಿರಿಸಿ ಸೇಸೆಯನಿಕ್ಕಿ ಬೞಿಯಮೊಡವಂದವರ್ಗೆಲ್ಲಂ ಪೊೞಲೊಳಗೆ ಬೀಡುಗಳಂ ಕೊಟ್ಟಿರಿಸಿ ಸರ್ವಭಾಮೆಯಂ ಪ್ರಿಯಂಗೆಯ್ದು ಸ್ನಾನಾನ್ನ ಪಾನಾದಿಗಳಿಂ ತಣಿಸಿ ಪೋದಿಂಬೞಿಯಂ ಮೆಱುದೆವಸಂ ಧರ್ಮಪುತ್ರಂ ಭೀಮಂಗಿಂತೆಂದನೀ ಮಾಡಪ್ರದೇಶಮೂನಾತಿರಿಕ್ತಂಗಳೆಂದೇವಯ್ಸಿ ನುಡಿಯುತ್ತಿರೆ ವಿದುರನಟ್ಟಿದೋಲೆಯಾತಂ ಬಂದೇಕಾಂತದೋಲೆಯನಿಕ್ಕಿದೊಡೆ ಮುಖವಾರ್ತೆಯೇನಂದೊಡೆ ಆರುಮಂ ನಂಬದಿಕ್ಕೆಂದಟ್ಟಿ ದೋಲೆಯಂ ನೋಡಿಮೆನೆ ನೋೞ್ಪ ದುರ್ಯೋಧನಂ ತಮ್ಮನುಪಾಯದಿಂ ಕೊಲಲೆಂದರಗಿನ ಮಾಡಮಂ ಸಮೆಯಿಸಿನಲ್ಲಿರದಿರ್ಕೆಂದೋಲೆಯ ಮಾತುಂ ಮುಖವಾರ್ತೆಯುಂ ತಮ್ಮ ಮನದೇವಮುಮೊಂದಾದೊಡೆ ನಂಬಿ ತನ್ನ ಪ್ರಸಾದದಿಂ ಬರ್ದೆಮಿನ್ನಱಿದು ನೆಗೞ್ವೆಮೆಂದೋಲೆ ಯಾತನಂ ಕಳಿಪಿ ತಮ್ಮೊಳೇಕಾಂತಮಿರ್ದಾಳೋಚಿಸುವಲ್ಲಿ

ಕಂ || ಏವಯ್ಸಿ ತೊಲಗಿ ನಿಂದಡೆ (?)
ತಾಮಸದಿಂ ಮತ್ತಮೊಂದುಪಾಯಂ ನೆಗೞ್ಗುಂ
ನಾಮಿಲ್ಲಿ ಸತ್ತರೆಂಬುದ
ನಾ ಮಹಿಪತಿ ನಂಬುವಂತುಪಾಯದ ಪೋಪಂ ೩೯

ವ || ಎಂದು ಸಮಕಟ್ಟಿರ್ದು ದೀವಳಿಗೆಯ ಪರ್ಬದಂದು ಸೊಡರ್ವತ್ತಿಸುವನ ನೆವದೊಳ್ ನಮಗಪಾಯಮಂ ಬಗೆವರಕ್ಕುಮೆಂದಱಿದಾ ಮಾಡದೊಳಗಣಿಂ ಪೊಱಗಣ್ಗೆ ಕನ್ನಮಂ ಸಮೆವಮೆಂದು ಸಮೆಯುತ್ತಿರ್ದರನ್ನೆಗಂ ದೇವಳಿಗೆಯುಂ ಬಂದತ್ತು ಕನ್ನಮುಂ ಸಮೆದತ್ತು ಆ ಪರ್ವದೊಳ್ ಮುನ್ನಿನ ಸಂಕೇತಪುರುಷರಯ್ವರ್ಗಮುಡಲ್ ತಂದು ಸೇಸೆಗಳನಿಕ್ಕಿ ಸೊಡರಂ ಪೊತ್ತಿಸಲೊಡರ್ಚುವುದಂ ಭೀಮನಱಿದಾ ಸೊಡರ್ದಂದ ಪೆಂಡತಿವೆರಸು ಮತ್ತಮಯ್ವರನಿರಿಸಿ ಮತ್ತಿನವರಂ ಪೋಗಲ್ವೇೞ್ದವರ್ಗೆ ಪ್ರಿಯಂಗೆಯ್ವಂತೆಗೆಯ್ದು ಪೆಱರಱಿಯದಂತೊಳಗಣ್ಗುಯ್ದು ಕಟ್ಟಿಕ್ಕಿ ಕೌರವಮಂತ್ರಿಯ ಪೇೞ್ದಂದದೊಳುಜ್ಜಳಮಾಗೆ ಮಾಡದೆಲ್ಲಾ ದೆಸೆಯೊಳಂ ಸೊಡರಂ ಪೊತ್ತಿಸವೇೞ್ದು ಕೊಂತಿವೆರಸುಮಱುವರುಮಂ ಸಾರವಸ್ತುಗಳುಮಂ ತಂತಮ್ಮಾ ಯುಧಂಗಳಂ ಕೊಂಡಾ ಸುರಂಗದಿಂ ಪೊಱಮಟ್ಟು ಪೋದಾಗಳ್ ಮಾಡಮಂ

ಕಂ || ಕಿಱುವೊಗೆಗಳೊಗೆಯೆ ದಳ್ಳುರಿ
ತುಱಗೆ ನಭಂಬರೆಗಮಳುರ್ವ ನಿಜಶಿಖಿಯಿಂದಂ
ಬಿಱುವರಿಯ ಶಿಖಿಗೆ ತಾರಗೆ
ತಱತಱಿಸುತಮಿರ್ದುವೊಡನೆ ಮುಗಿಲುಗಿವಿನೆಗಂ ೪೦

ಕಂ || ಪ್ರಳಯಾಗ್ನಿಯಾದುದೋ ನಿಜ
ಬಳದಳವಂ ತೋಱಲಗ್ನಿ ಬಳೆದೊದವಿದುದೋ
ಜಳಜ[ಜ] ಜಳಜೋದರದೊಂ
ದಳವಿಯೆಯುರಿಲಿಂಗಮಾದ ಕಥೆಯದುವಿದುವೋ ೪೧

ಇಂತೆಂಬುವೊಳವೆ ನೋಡಿರೆ
ಸಂತಂ ಬಂದಿರ್ದ ಪಾಂಡವರ್ಕಳುವೆರಸೋ
ರಂತಿರೆ ಮಾಡಂ ಬೆಂದಪು
[ದಿಂತಿದು] ದೈವಿಕಮೊ ಮಾನುಷಕ್ರಿಯೆಯೊಳಗೋ ೪೨

ವ || ಎಂದೆಲ್ಲಾ ದೆಸೆಯೊಳಂ ಪೊೞಲುದ್ಭ್ರಾಂತುಗೊಂಡು ಬಂದು ಬಳಸಿಯುಂನಿಂದು ನೋಡುತ್ತಿರ್ದರಂತರಗಿನ ಮಾಡದೊಳ್ ಬೆಂದು ಪಾಂಡವರ್ ನಿಃಕ್ಷೇತ್ರಮಾದರೆಂದು ಲೋಕದರುಸುಂಗೊಳೆ ನಿಜವರ್ಗದವರ್ ಭಯಂಗೊಳೆ ಮಾತು ಪರೆದತ್ತುಮನ್ನೆ ಗಮಾಸುರಂಗದಿಂ ಪಾಂಡವರ್ ಪೊಱಮಟ್ಟುಪೋಗಿ ಕತ್ತಲೆಯಾದಾಗಳೊಂದೆಡೆಯೊಳಿರ್ದು ಮಗುೞ್ದು ಪೊೞಲತ್ತ ನೋೞ್ಪಾಗಳ್ ಮಾಡಮುರಿವುದಂ ಕಂಡು ಬೆಕ್ಕಸಂಬಟ್ಟು ಸುಳಿದಿರಲಾಗೆಂದು ತಾರಾಗಣಂಗಳಂ ನೋಡಿ ದೆಸೆಯಱಿದು ಪಯಣಂಬೋದರಿತ್ತ ಬೆಳಗಾದಾಗಳರಗಿನಮಾಡಮುರಿದು ಕರಗಿದುದುಮನಲ್ಲಿ ಬೆಂದಾಱುಂ ಪೆಣದೆಲ್ವುಗಳಂ ಕಂಡು ಪಾಂಡವರ ತಂತ್ರದವರ್ ಮಹಾ ದುಃಖಂಗೆಯ್ದು ಪರೆದುಪೋದರಂತಮ್ ಸತ್ತ ಮಾತಂತೆ ಪರೆಯ ಹಸ್ತಿನಪುರದೊಳ್ ಧೃತರಾಷ್ಟ್ರ ವಿದುರ ಗಾಂಗೇಯಾದಿಗಳ್ ಕೇಳ್ದು ನೀರಿೞಿದರ್ ದುರಿಯೋಧನಂ ಮನದೊಳೊಸೆದು ಲೋಕೋಪಚಾರದೊಳ್ ನೆಗೞ್ದಂ ಮತ್ತಮಾ ಮಾತು ಕೆಲವು ದೆವಸದಿಂ ದೇಶಾಂತರಂಗಳ್ಗೆ ಪರೆಯ ನಾರಾಯಣಂ ಕೇಳ್ದು ಮಸಗಲ್ ಬಗೆದೊಡೆ ಬಲದೇವನೆಂದಂ ಪಾಂಡವರಳಿವಂ ನಾವು ಮಱೆದಪೆಮೊ ಕಂಸವಧೆಯಂ ಜರಾಸಂಧಂ ಮಱೆದಪನೊ ನಮಗಮವರ್ಗಮೆಂತು ಮನುವರಮುಂಟನ್ನೆಗಂ ಮಾಣೆಂದಾತನಂ ಮಾಣಿಸಿದನಿತ್ತ ಪಾಂಡವರ್ ನಿಶ್ಚವಯಣದಿಂ ಗಿರಿನದಿಗಿರಿಗಹ್ವರ ವಿಷಯಾದಿಗಳಂ ಕಳಿಯೆ ಪೋಗಿ ಕೌಶಳಮೆಂಬ ಪೊೞಲನೆಯ್ದಿ ವಿಶ್ರಮಿಸಿ ಕೆಲವು ದೆವಸಮಿರ್ಪಿನಮಾ ಪೊೞಲನಾಳ್ವ ಧ್ಯಾನನೆಂಬರಸನ ಮಗಳ್ ಕುಸುಮಮಾಳಿಕೆಯೆಂಬ ………….ಬರುತಿರ್ದೊಡವರಯ್ಯನಱಿದವರ ಬೀಡಿಂಗೆವಂದುಮಾ ಪುರದೊಳಾರಯ್ದು ಕುಲನಾಮಂಗಳನಱಿದುಪರೋಧಿಸಿ ವಿವಾಹಕಾರ್ಯ……………ದುವೆ ನಿಂದು

ಕಂ || ಭರತಕಲಾವಿಗ್ಧೆ ನಿಜಮುಗ್ಧೆ ಮನೋಹರರೂಪ ಕಾಂತಿ ಮ
ತ್ಸುರುವಿರಗಾತ್ರೆ ಪದ್ಮ್ಳನೇತ್ರ ವಿನೂತ ವಿಳಾ…………………
…………………………………………………..ಕರಂ ಮನಕ್ಕೆ ವಂ
ದಿರೆ ನೆರೆದಿರ್ದನಾಕೆಯೊಡನಲ್ಲಿ ಮನೋಮುದದಿಂ ಯುಧಿಷ್ಠಿರಂ ೪೩

ಗದ್ಯ || ಇದರ್ಹತ್ಸರ್ವಜ್ಞ ಪಾದಪದ್ಮ ವಿರಾರ್ಜಿತೋತ್ತಮಾಂಗ ಶ್ರೀ ಬಂಧುವರ್ಮ ನಿರ್ಮಿತಮಪ್ಪ ಹರಿವಂಶಾಭ್ಯುದಯದೊಳ್ ಪಾಂಡವ ಕುಮಾರಾಭ್ಯುದಯ ದೇಶತ್ಯಾಗ ವರ್ಣನಂ

ದಶಮಾಶ್ವಾಸಂ