ಕಂ || ಆ ಕುಸುಮಮಾಳಿಕಾ ಸತಿ
ಗಾಕಾಂಕ್ಷಿತನಾಗಿ ಧರ್ಮಪುತ್ರಂ ರಾಗೋ
[ತ್ಸೇಕ] ದಿನಿರ್ದನುಜರ………….
……………………………………………ದಿಂದು ೧

ವ || ನಾಮಿಂತಿಲ್ಲಿ ಪಲವು ದೆವಸಮಿರ್ದಡೆ ನಮ್ಮ ನೆಗೞ್ದ ಕಜ್ಜಮುಂ ಪ್ರಕಾಶ ಮಕ್ಕುಮಿನ್ನಿರಲಾಗೆಂಬುದ ……….. ಳಯ್ಯಂಗೇಕಾಂತದೊಳ್ ತಮ್ಮ ಪೋಪ ಕಜ್ಜ ಮನಱಿಯೆಪೇೞ್ದೊಡಂಬಡಿಸಿ ನಲ್ಲಳನಿರಿಸಿ ತಮ್ಮಂದಿರುಮ [ನ]ಬ್ಬೆಯುಮನೊಡ [ಗೊಂಡು ಪೋಗಿ] ಮಹಾಗಹನದೊಳಗಣದೊಂದು ಋಷ್ಯಾಶ್ರಮದೊಳ್ ವಿಶ್ರಮಿ ಸಿರ್ಪಿನಮಲ್ಲಿಯೊರ್ವಳತಿಶಯರೂಪೆಯಾಗಿಯುಂ……………ಜೆಡೆಗೊಳೆ ತಪೋಧನರಸುಂ ಗೊಳೆ ಬೆಳರ್ವಾಯ್ ಕಂದೆ ಮೊಗಂ ಕುಂದೆ ಪೊಳೆವಕರ್ಗಣ್ ಕುೞಿಯೆ ನೆಲೆಮೊಲೆಯ ಬಿಂಕಂ ಮ……….ತು ನೀರೊಕ್ಕೆ ಮೆಯ್ಯನಾಂತು ಪಿಡಿದು ರುದ್ರಾಕ್ಷಮಾಲೆಯುಮಿಟ್ಟ ಭಸ್ಮ ತ್ರಿಪುಂಡ್ರಲೀಲೆಯುಂ ಸೊಗೆಯಿಸೆ ಪರಿವ್ರಾಜಕ ತಪೋನಿಯೊ……………. ಪಮಂ ಪತ್ತಿಸಲಕ್ಕುಮೊ ನೆಯ್ದಿಲ ಕಾವಿನೊಳ್ ಕೊಂತದಲಗಂ ತೆತ್ತಿಸಲಕ್ಕುಮೊ ಪೇೞಿಮಿ ತಪದೊಂದಂದಮನೆಂದು ಕೀಱಿ ಬೆಸ [ಗೊಂಡ]ಳ್ …………….

ಕಂ || ದೊರೆಯೆನ್ನತ್ಮಜೆಗೆ ಯುಧಿ
ಷ್ಠಿರನೆಂದೆಮ್ಮಯ್ಯನೆನ್ನನಾತಂಗ ಕುಡ
ಲ್ಕಿರೆ ಪಾಂಡವರ್ಕಳಯ್ವರು
ಮರಗಿನಮನೆಯೊಳಗೆ ಸತ್ತರೆಂದಿಂಬೞಿಯಂ ೨

ವ || ಎಮ್ಮಯ್ಯನುಬ್ಬಗಂಬಟಗ್ಟು ತನ್ನ ಬ…….ಯ ಸಮಕಟ್ಟುಗೆಟ್ಟು ಪೂಣ್ದಿರ್ದರ್ ಕೆಲವು ದಿವಸದಿಂ ಪೆಱರ್ಗೆ ಕುಡುವರೆಂಬ ಕೇಳ್ದು ನಿರ್ವೇಗದಿಂದೊರ್ವಳೆ ಪೊಱಮಟ್ಟು ಬಂದು ತಾಪಸವಳ್ಳಿಯೊಳ್ ಪರಿವ್ರಾಜಕ ದೀಕ್ಷೆಯಂ ಕೊಂಡು ಮಱ……..ವ ದೊಳಪ್ಪಡಮಾತಂ ದೊರೆಕೊಳ್ಗೆಂದು ತಂಪಗೆಯ್ವೆವೆನೆ ಚೋದ್ಯಂಬಟ್ಟುಮಿ ತಪಮೆಂತು ಫಲಮಾಗದಿರದೆಂದು ನುಡಿವೋಜೆಯೊಳಮಾಕಾರದೊಳಮಿನಿಸು ಶಂಕೆ ಪುಟ್ಟಿದಭ್ಯಾಗತ ಪ್ರತಿಪತ್ತಿಗೆಯ್ಯಲ್ವೇೞ್ಕುಮೆಂದು ಗುರುಗಳನೊಡಂಬಡಿಸಿ ಬೇಗಮನ್ನಪಾನಾದಿಗಳಿಂ ಸಂತೋಷಂಬಡಿಸಿದೊಡೆ ಧರ್ಮಪುತ್ರನಿಂತು ನೆಗೞ್ದಾಕೆಗೆಂತು ಬಂಚಿಸುವುದೆಂದು ತಮ್ಮ ಬಂದಂದಮು…ತಾಮಾಕೆಯ ತಪಮೆಂದೊಂದಂದಮುಮಂ ತಿಳಿಯೆ ಪೇೞ್ದು ಸಂತಯ್ಸಿರ್ದು ನಡುವಿರುಳೆರ್ದು ದಿವ್ಯಋಷ್ಯಾಶ್ರಮದಿಂ ಪೊಱಮಟ್ಟಾ ವಿಷಮಾರಣ್ಯಮಂ ಕಳಿದುಪೋಗಿ ತ್ರಿಸಿಂಗಮೆಂಬ ಪೊ[ೞಲ]ನೆಯ್ದಿ ಪೊಱವೊೞಲ ಜಿನಾಲಯಮಂ ಕಂಡು ತ್ರಿಪ್ರದಕ್ಷಿಣಂ ಗೆಯ್ದಿರ್ಯಾಪಥೆಯಂ ಬಿಡಿಸಿ ಕಾಲಂಕರ್ಚಿಕೊಂಡೊಳಗಂ ಪೊಕ್ಕು ದೇವರ ದೇವಂಗಭಿಮುಖದೊಳ್ ನಿಂದು…….

ಮಂದಾನಿಲ ರಗಳೆ ||
ಪರಮಾತ್ಮ ಬಿನ್ನಪಮಾನಿನ್ನಂ
ಶರಣೆಂದೊಸೆದಡಿಗೆಱಗದ ಮುನ್ನಂ
ಪೆಱವಂ ಶರಣೆಂದಱಿಯದಮುನ್ನಂ
ಎಱಗಿಯೆ ಕೆಟ್ಟೆಂ [ಕಾಣದೆ ನಿನ್ನಂ]
ದುಃಖದೊಳರ್ದಾಂ ಬರ್ದಿರ್ದೆನ್ನಂ
ಕಿಡಲೀಯದೆ ನಿನ್ನಂ ಪೊರ್ದಿದೊನಂ(?)
ಎನಗೀಗಳ್‌ ಮಳಕುಳದುಪಶಮದೊಳ್‌
ವಿನತಕ್ರಿಯೆಯಾಉತುಪಮಾರಹಿತತ್ವದಿನುನ್ನತನೈ(?)
ಪಣಿಲ್ಲದ ಕಾಣ್ಕೆಯಿನಕ್ಷಯನೈ
ತವಿಲಿ[ಲ್ಲ]ದ ಬಲದಿಂದಚ್ಯುತನೈ
ಅಕಳಂಕತೆಯಿಂ ಪರಮೇಶ್ವರನೈ
ಸಕಳಜ್ಞತೆಯಿಂ ಮುನಿವಂದಿತನ್ಯೈ
ಸುರಪೂಜ್ಯತೆಯಿಂದಭಿವಂದಿತನೈ
ದುರಿತಕ್ರಿಯೆಯಿಂ ವಿ….ಯಂದರನೈ
ನಿರುಜಾಂಗ[ನ]ನಿಂದಿತ ಸುಂದರನೈ
ಉ[ದ]ಯೋದಯದಿಂದಜರಾಮನೈ
ಸದಯಾಪರದಿಂ ಕರುಣಾಪರನೈ
ಜಗದೀಶತೆಯಿಂ ಮಹಿಮಾಶಯನೈ
ವಿಗತಾಯುಧಕರದಿಂ ನಿರ್ಭಯನೈ
ಪ್ರವರಾಮಳ ಗುಣಗಣದಿಂ ವಿಭುವೈ
ಭುವನೇಶ್ವರನಪ್ಪುಱೆಂ ಪ್ರಭುವೈ
ನಿನಗಿಂತೊಸೆದೀ ಪರಮಾತ್ಮತೆಯಿಂ
ವಿನುತೋತ್ತಮ ಧರ್ಮ ಮಹಾಮತೆಯಿಂ
ಆಱಿದುಂ ಭವದಮಗಳಗುಣಾಢ್ಯತೆಯಿಂ
ತೊಱೆದೆಂ ಪೆಱರ್ಗೆಱಗುವ ಜಾಡ್ಯತೆಯಂ
ಅಮರೇಂದ್ರ ಮುನೀಂದ್ರಜನಪ್ರಣುತಾ
ಕಮನೀಯ ವಿನೇಯ ಜನಾಶ್ರಯಿತಾ
ಖಚರೇಂದ್ರ ನರೇಂದ್ರ ನತಾಂಘ್ರಿಯುತಾ
ಸಚರಾಚರ ಜೀವನಿಕಾಯ ಹಿತಾ
ಕ್ಷಯಮಿಲ್ಲದೆ ಸುಖವಿಪ್ಪೊಳ್ಗತಿಯಂ
ದಯೆಗೆಯ್ಯೆನಗಿಂ ಜಿನನಿರ್ವೃತಿಯಂ ೩

ಕಂ || ಎಂದೀ ಸ್ತುತಿಯಂ ಸ್ತುತಿಯಿಸಿ
ಬಂದು ಮುನಿವ್ರಜಮನೋ…….. ಕ್ರಮದಿಂ
ಬಂದಿಸಿ ಧರ್ಮಾಮೃತಮನ
ನಿಂದಿತಮಂ ಕೇಳುತಿರ್ದರಿಪ್ಪನ್ನೆವರಂ ೪

ವ || ಆ ಪೊೞನಾಳ್ವರಸಂ ಚಂಡವಾಹನನೆಂಬೊಂ ತನ್ನ ಪದಿಂಬರ್‌ ಕನ್ನೆಯರ [ನೊಡ]ಗೊಂಡು ಬಂದು ದೇವರಂ ಗುರುಗಳಂ ಬಂದಿಸಿ ದಿವ್ಯಜ್ಞಾನಿಗಳಪ್ಪಾಚಾರ್ಯರ ಮುಂದೆ ಕುಳ್ಳಿರ್ದು ಕೈಗಳಂ ಮುಗಿದು ಜಿನ್ನಪಮೆಂದು

ಕಂ || ಎನಗೆ ಪದಿಂಬರ್‌ ಸುತೆಯರ್‌
ಮನಸಿಜಶರಸದೃಶಮಪ್ಪ ಕನ್ನೆಯ[ರಿ]ವರಂ
ಮನುಚರಿತ ಧರ್ಮಜಂಗಾ
ನನುನಯದಿಂ ಕುಡುವೆನೆಂದು ಬಗೆದಿರ್ಪಿನೆಗಂ ೫

ವ || ಆತಂ ಬೆರಸಯ್ವರುಂ ತಾಯುಮರಗಿನಮನೆಯೊಳ್‌ ಸತ್ತರೆಂದು ಕೇಳ್ದೆನದೆಂತೆಯೊ ಸಂದೇಹಮೊ ಬೆಸಸಿಮವರುಮಾತಂಗೆ ಕುಡುವುದಿಲ್ಲದಂದು ತಪಂಬಡುವೆವಲ್ಲದೆ ಪೆಱತಿಲ್ಲೆಂದು ಪರಿಚ್ಛೇದಿಸಿ ಬಂದರೆನೆ ದಿವ್ಯಜ್ಞಾನಿಗಳಪ್ಪುದಱಿಂ ಬಗೆದಱೆದು ಪಾಂಡವರ್‌ ಚರಮದೇಹಧಾರಿಗಳ್‌ ಪರೋಪಹಿತದಿಂ ಸಾವರಲ್ಲರಂಜದಿರಿಮೆನೆ ಸಂತೋಷಂಬಟ್ಟು ಕೂಸುಗಳನೊಡಗೊಂಡು ಪೋದರತ್ತಲಂತಾ ಮಾತೆಲ್ಲಮನವರ್‌ ಕೇಳುತ್ತಿರ್ದು ನಾ ಮಿಲ್ಲಿರ್ದೆಮಪ್ಪಡೆ ನಮ್ಮ ನೆಱೆವಱೆದೊಡೆ ತಳ್ವಕ್ಕುಮಾದೊಡೆ ನಮ್ಮ ಬಗೆದ ಕಜ್ಜಂ ಪ್ರಕಾಶ್ಯಮಕ್ಕುಮೆಂಬುದಂ ತಮ್ಮೊಳಾಳೋಚಿಸಿ ಕಿಱಿದುಬೇಗಮಿರ್ಪಂತೆಗೆಯ್ದು ಅಲ್ಲಿಂದಂ ಪಯಣಂಬೋಗಿ ಪಿರಿದೊಂದು ಪೞುವದೊಳಗಂ ಬರುತಮೊಂದಲದ ಮರನಂ ಕಂಡರದೆಂತೆನೆ

ಕಂ || ಆಲದ ಮರನದು ಪೇೞ್ವಡೆ
ಪೋಲದ ಮಾತೆಂದು ಬಗೆಯಲಿನ್ನೆಗೆದ ಮಹಾ
ಜ್ವಾಳೆಯ ಪೆರ್ಚಿದ ಬೆಂಕೆಯು
ಮಾಲಿಯ ತಣ್ಪಿನವೊಲಿಕ್ಕುಮಾ ಮರದಡಿಯೊಳ್‌ ೬

ವ || ಎಂಬನಿತು ಪೊಗೞ್ತೆವಡೆದುಮಾಲದ ಮರದಡಿಯೊಳ್ ಕುಳ್ಳಿರ್ದು ಪಥ ಪರಿಶ್ರಮಮನಾಱಿಸಿರ್ಪಿನಂ ನೇಸರ್ಪಟ್ಟೊಡೆಲ್ಲಂ ನಿದ್ರಾವಶಗತರಾದರ್‌ ಭೀಮನೆ ಮಹಾಸತ್ವನಪ್ಪುದಱಿಂದಳ್ಕದೆ ಜಾವಮಿರ್ಪೆನೆಂದೊಂದೆಡೆಯೊಳ್‌ ಕುಳ್ಳಿರ್ದನನ್ನೆಗಮೊಗೆದ ಕಡುಗತ್ತಲೆಯೊಳೊರ್ವಳ್‌ ತನ್ನ ತೊಟ್ಟ ಮಾಣಿಕ್ಯಂಗಳ ಬೆಳಗಿನೊಳ್ ಬಂದು ಕೆಲದೊಳಿರ್ದೊಡಾಕೆಯಂ ಕಂಡು ಭೀಮಂ ನೀನಾರ್ಗಮಿಂತೊರ್ವಳೆ ಈ ಪೞುವಿನೊಳ್‌ ಬಪ್ಪುದೇನೆಂದು ನಿಶ್ಯಂಕಿತನಾಗಿ ನಯದಿಂ ಬೆಸಗೊಳೆ ಪೇೞ್ದಾಗಿ ಸಾಗರಾಂತಸ್ಥಿತ ಸಂಧ್ಯಾನಗರ ಪುರಾಧಿಪತಿ ಸಿಂಹೋದರನೆಂಬೊನಾತನ ಮಗಳ್‌ ಹಿಡಿಂಬೆಯೆಂಬೆನಾಂ ಪುರುಷದ್ವೇಷಿಣಿಯೆನಾಗಿ ಬೆಸವುದುಮಂ ಸೌಭಾಗ್ಯದೊಳ್‌ ಬಿಸುಟುದುಮನೆಮ್ಮಯ್ಯನಱೆದು

ಕಂ || ಅನುಪಮಮಪ್ಪ ಬೆಡಂಗಿನೊ
ಳನುನಯ ರಸಭಾವದೊಳ್ಪು ವನಿತಾ ವಿದ್ಯಾ
[ಬಿನ]ದನ ಜಾನದೊಳೆ ತ್ರಿಭು
ವನದೊಳೆ ಸಮನೆನ್ನ ಸುತೆಗೆ ವನಿತೆಯರೊಳರೇ ೭

ವ || ಎಂದು ಪೊಗೞಿಸುತ್ತಿಪ್ಪೊನಿರ್ದಿಂತಪ್ಪಾಕೆಗಿನ್ನೆಂತಪ್ಪ ಪುರುಷನಪ್ಪನೊ ಪುಣ್ಯದಳವನೇಂನೆಂದುಮಱಿಯಲಾಗೆಂದು ಬಗೆಯುತ್ತಿಪ್ಪೊನೊಂದು ದೆವಸಮೊರ್ವ ದಿವ್ಯಜ್ಞಾನಿಗಳಂ ವಿನಯದಿಂ ಕಂಡು ಬೆಸಗೊಂಡೊವರೆಂದರೀ ಪೇರಡವಿಯ ನಟ್ಟನಡುವಣಮೊಂದಾಲದ ಮರದಡಿಯೊಳ್‌ ನಿನ್ನ ಮಗಳನಿರುಳಪ್ಪಾಗಳಿರಿಸುವುದಲ್ಲಿಯೊರ್ವಂಬಂದಿರ್ದಾಕೆಯಂ ಕಂಡು ನುಡಿಯುತ್ತಿರ್ಕುಮಾಕೆಗಾತನಾಣ್ಮ ನಕ್ಕುಮೆಂದೊಡಂದಿಂದಿತ್ತಿಲ್ಲಿಗೆವಪ್ಪೆನೀಯಡವಿಯುಂ ಹಿಡಿಂಬಾಟವಿಯೆಂಬುದಾದುದಿಲ್ಲಿ ಯೊರ್ವಂ ರಾಕ್ಷಸವಂಶಗದೆಯಂ ಸಾಧಿಸಲ್‌ ಬಂದಿರ್ದಿನ್ನು ಮನೆನ್ನಲಪ್ಪ ಕಾರಣಮುಮನಱೆದು ಗದೆಯಂ ಸಾಧಿಸಿದಿಂ ಬೞಿಯಮೆಮ್ಮವರೊಳೆನ್ನಂ ಬೇಡಿ ಪಡೆಯದಲ್ಲಿಂಗಲ್ಲಿಗೆವರ್ಪಾಗಳೆಲ್ಲಂ ಬೞಿಯನೆ ಬಂದು ಗೆಂಟಱೊಳ[ಕ್ಕುಂ ಕಣ್ಣೊಳ್‌ ಕಾ]ದಿರ್ಪಂ ನೀನುಮೆನಗಾದೇಶಪುರುಷನಾದೆಯಾತನುಮಿನಿತುಪೊತ್ತಿಲ್ಲಿ ಪೆಱರೊಳ್‌ ನುಡಿಯೆ ಸೈರಿಸದೆಯ್ತಕ್ಕುಮೆಂದು ಕೆಲನಂ ನೋೞ್ಪನನ್ನೆಗಂ

ಕಂ || ಪಸಿದ ಪುಲಿ ಗರ್ಜಿಪಂತಿರೆ
ಮಸಗಿ ಕಱುತ್ತೊದಱಿ ಬಗ್ಗಿಸುತ್ತಂ ಕೆಂಗೋಲ್‌
ಮಸಗಿದ ಜವನಂತಿರೆ ರಾ
ಕ್ಷರೂಪೆಸೆದಿರೆ ಹಿಡಿಂಬನೆಯ್ತರೆ ವಂದಂ ೮

ವ || ಎಂದು ನಿಲೆ ಮರುಳ್ಪೆಂಡತಿ ಕೇಳಾ

ಕಂ || ದೀನರನತಿಬಲ ಗರ್ವದೊ
ಳೂನರನತ್ಯಂತ ಶೌರ್ಯಹೀನರನಿರುಳೊಳ್‌
ನೀನಣಮಱಿಯದೆ ಕೆಮ್ಮನೆ
ಮಾನವರೆಂಬಿನಿತಱಿಂದ ನುಡಿವುದು ಚದುರೇ ೯

ವ || ಎನೆ ಹಿಡಿಂಬೆ ಬೆರ್ಚಿ ತಲೆಯಂ ಬಾಗಿರ್ದಾಗಳ್‌ ಭೀಮನಿಂತೆಂದಂ

ಕುಂ || ನುಡಿದೊಡೆ ಕನ್ನೆಗೆ ದೋಷಮೆ
ನುಡಿವನ ದೊರೆಯಱಿಯದೊತ್ತಿ ನುಡಿದೊಡೆಮೇಂ [ನೀಂ]
ಪೊಡರದಿರಣ್ಮೆಲೆ ಪೊಡರ್ದೊಡೆ
ಮಡಿವಾದೊಡೆ ಪೊಲ್ಲದೆಂಬುದಂ ಬಗೆದಿಲ್ಲಾ ೧೦

ವ || ಎನೆ ಖೇಚರನಿಂತೆಂದಂ

ಕಂ || ಎನ್ನ ಪೊಡರ್ಪಂ ಕಿಡಿಪ ಮ
ಹೋನ್ನತ ಬಲನೊಳನೆ ಜಗದೊೞಿದೇಸಿಗನು
ತ್ಪನ್ನತಿಕೆಯನುಳಿದಿರ್ಪುದು
ಕನ್ನೆಯನಾನೆೞೆದುಕೊಂಡು ಪೋದಪೆನೀಗಳ್‌ ೧೧

ವ || ಎಂದೊಂದು ಕೆಯ್ಯೊಳ್‌ ಗದೆಯಂ ಪಿಡಿದು ನಿಮಿರ್ದೊಂದು ಕೆಯ್ಯೊಳ್‌ಕನ್ನೆಯಂ ಪಿಡಿಯಲ್ಕೆಂದು ನೀಡಿದಾಗಳ್‌ ಭೀಮಂ ತನ್ನ ಗದೆಯಂ ಕೊಂಡು

ಕಂ || ಪಿಡಿದೆೞೆದೊಯ್ವಂ ಗಡಮಿ
[ಗಡೆಯಿ]ಯಾಣ್ಣಲೆಗನೆಂದುವೊಮ್ಮೆಗಮೆಂದೆ
ರ್ದೊಡವೊಯ್ದಡವನವನ ಗದೆ
ಸಿಡಿಲ್ದುಗುಣಿ ಪಾಱುವಂತೆ ಪಾಱಿತ್ತಾಗಳ್‌ ೧೨

ವ || ಆ ಖೇಚರನಂತು ನಿರಾಯುಧನಾಗಿ ನಿಲ್ತೊನಂ ಕಂಡು ನಿರಾಯುಧನನಾಯುಧದಿಂ ಕೊಲಲಾಗದೆಂದು ಮೇಲ್ವಾಯ್ದವನ ತೋಳ ಮೊದಲಂ ಪಿಡಿದೆತ್ತಿ ಪೊಯ್ದು ಕೊಂದು ನೋಡು ನಿನ್ನನೆೞೆದೊಯ್ವಣ್ಣನ ಪಟ್ಟಂದದೊಡಾಂ ನಿನ್ನನಲ್ಲದಾರುಮನೀ ಭವಕ್ಕೆ ನೋಡಲುಂ ಕೂಡಲುಮಾಗದೆಂಬುದಂ ಮುನ್ನಮೆಂದೆನೆಂದೊಡಿಂತಪ್ಪಡಿಂ ಪೆಱದೇನೆಂಬುದೆಂದು ನುಡಿಯುತ್ತಿರ್ಪಿನಂ ಧರ್ಮಜಾದಿಗಳೆಚ್ಚ[ತ್ತಿ]ರ್ದ ಕನ್ನೆಯಾದೊಳಾ ದೆಸೆಯೊಳಿಱಿಮುಱಿಯಾಗಿ ಕೆಡೆದುಪಟ್ಟ ರೂಪಾವುದೆನ[ಲಿ]ನ್ನೆಗಂ ನೆಗೞ್ದೆಯೆನೆ ತತ್ಸಂಬಂಧಮನಱಿಯೆ ಪೇೞೆ ಚೋದ್ಯಂಬಟ್ಟಿರ್ಪಿನಂ ಬೆಳಗಾದೊಡೆತ್ತ [ವೋಪುದು] ನಡೆವಮೆಂದೊಡೆ ಹಿಡಿಂಬಿಯೆಂಗುಮಿಲ್ಲಿಗೆ ಕಿಱಿದಾನುಮಂತರದೊಳಿಚ್ಛಾಪುರಮುಂಟದನೀ ಸತ್ತ ಹಿಡಿಂಬಖೇಚರಂ ಪೊೞಲ್‌ ಮಾಡಿದೊನಲ್ಲಿ ಮಾನಸರಿಲ್ಲ ಧನ ಧಾನ್ಯಸಂಪತ್ತಿಯೆಲ್ಲಮುಂಟಲ್ಲಿ ಕೆಲವು ದೆವಸಮಿಪ್ಪೊಡಮೊಳ್ಳಿ ತೆಂದೊಡಮಂತೆಗೆಯ್ವೆ ಮೆಂದಾಕೆಯನೊಡಗೊಂಡು ನಡೆದಾ ಪೊೞಲನೆಯ್ದಿ ಪುರದಂದಮೆಲ್ಲಂದದೊಳಮೊತ್ತೆಂದು ಎಲ್ಲೆಡೆಯೊಳಂ ನೋಡುತ್ತಮಂತೆ ಬಂದರಮನೆಯಂ ಪೊಕ್ಕಲ್ಲಿ ಭೀಮಂಗಂ ಹಿಡಿಂಬೆಗಂ ಮದುವೆಯಂ ಮಾಡಿ ಸುಖದಿನಿರ್ದು ಕೆಲವು ದೆವಸದಿಂ ಹಿಡಿಂಬೆಗೆ ಗರ್ಭಮಾಗಿ ನವಮಾಸದಿಂ ಪುಟ್ಟಿದ ಗಂ[ಡು]ಗೂಸಿಂಗೆ ಘತೋತ್ಕಚನೆಂದು ಪೆಸರನಿಟ್ಟು ಕೂಸುಮನವರಬ್ಬೆಯುಮನವರಯ್ಯನ ಪೊೞಲ್ಗೆ ಕಳಿಪಿ ತಾವಲ್ಲಿಂದಂ ತೆಂಕಮೊಗದೆ ಪಯಣಂ ಬಂದು ಕರ್ಣನೊಳಂಗವಿಷಯದೊಳಾತನ ಚಾಗದ ಪೆಂಪುಮಂ ಪರಾಕ್ರಮದಳುರ್ಕೆಯುಮಂ ಕೇಳುತ್ತಂ ಬಂದಾ ನಾಡಂ ಕೞಿದು ಪೋಪಾಗಳಿದಿರಂ ಬರ್ಪನೊರ್ವ ಪಥಿಕನನೆಲ್ಲಿಂದಂ ಬಂದೆಯಾ ನಾಡ ಪಡೆಮಾತೇನೆಂದೊಡಾತನಿಂತೆಂದಂ

ಕಂ || ಈ ದೆಸೆಯೊಳೊಳ್ಪಿನಾಗರ
ಮಾದುದು ಹೇಮಾದ್ರಿಯೆಂಬ ಪೊೞಲುಂಟದನ
ತ್ಯಾದರದಿಂದಾಳ್ವಂ ನಯ
ವೇ [ದಿ] ನೃಪಂ ದ್ರುಪದನೆಂಬೊನತಿನುತ ವಿಭವಂ ೧೩

ವ || ಆತನ ಮಗಳ್‌ ದ್ರೌಪದಿಯೆಂಬೊಳಾಕೆಯ ರೂಪು ವಿಳಾಸ ವಿಭ್ರಮಂಗಳತ್ಯಂತಮೊಳ್ಳಿತ್ತಾದೊಡವರಯ್ಯನಿಂತಪ್ಪೊನ ಮಗಳಂ ಪಾಂಡವರರ್ಜುನಂಗಲ್ಲದೆ ಕುಡೆನೆಂದಿರ್ದು ಪಾಂಡವರಯ್ವರುಮರಗಿನ ಮನೆಯೊಳ್‌ ಸತ್ತರೆಂಬುದಂ ಕೇಳ್ದು ಮನಕ್ಷತ ಮಾಗಿರ್ದೊರ್ವ ದಿವ್ಯಜ್ಞಾನಿಗಳಂ ಪಾಂಡವರಿಂತಾದೊರೆಂದಪ್ಪರಿದೆಂತೆಂದೊಡವರಂ ತಾಗರೆಂದೊಡೊಸೆದಂತೆಯ್ಲತೆ ಮುನ್ನೊರ್ಮೆ ಸಮರದೊಳೆನ್ನಂ ಗೆಲ್ದೆನ್ನರ್ಧರಾಜ್ಯಮಂ ದ್ರೋಣಂಗುಪಾಧ್ಯಾಯ ಪರತಿಪತ್ತಿಯೆಂದು ಕೊಡಿಸಿದ ಸಾಹಸಪುರುಷಂಗಂತೆ ತಕ್ಕುಮೆಂದು ನಿಶ್ಚಯ್ಸಿ ಮತ್ತಾತನನಿಂತಲ್ಲದಾರಯ್ಯಲಾಗೆಂದು ತನ್ನ ಪೊಱವೊೞಲಲ್ಲಿ ಮಹಾಸ್ವಯಂಬರಶಾಲೆಯಂ ಮಾಡಿಸಿ ಜಂತ್ರದ ಮಿನನಂಬರದೊಳ್ ನೋಡಿ ದಿವ್ಯಚಾಪ ಮನರ್ಚಿಸಿಟ್ಟೀ ಬಿಲ್ಲನಾವೊನಪ್ಪೊಡಮೇಱಿಸಿ ಗಗನಮತ್ಸ್ಯಮನೆಚ್ಚೊಂಗೆನ್ನ ಮಗಳಂ ಕುಡುವೆನೆಂದು ಗೋಸನೆ ಪರೆಯೆ ಮಾಡಿದೊಡಾ ಸ್ವಯಂಬರಕೆಲ್ಲಂ ನೆರೆದಪ್ಪೊರೆಂದು ಪೇೞ್ದೊಡಂತೆಯೆಂದು ಕೇಳ್ದಾತನನಂತೆ ಪೋಗಲಿತ್ತು ನಮ್ಮ ನಿಲ್ಲಿಂದಿತ್ತ ಪೀನಮಱಿವೊರಿಲ್ಲಿನ್ನುಂ ರೂಪುಗರೆದು ಪೋಗಿ ಸ್ವಯಂಬರಮಂ ನೋೞ್ಪಮೆಂದಾ ಪೊೞಲ್ಗೆ ಪೋಗಿ ಬ್ರಾಹ್ಮಣವೇಷಮಂ ಕೈಕೊಂಡು ಪೊಕ್ಕಲ್ಲಿಯೊಂದು ಪಾರ್ವರ ಮನೆಯೊಳ್‌ ವಿಶ್ರಮಿಸಿರ್ದರಿರೆ ಮಱುದೆವಸಂ ದ್ರೌಪದಿಯಂ ಸ್ವಯಂಬರಕ್ಕಮಿವರೆಲ್ಲಂ ನೆರೆದು ಬನ್ನಿಮೆಂದು ಸಾಱಲ್ವೇೞ್ದು ಕನ್ನೆಯಂ ಪೆರ್ವೆಂಡಿರ್‌ ಬಂದು ನೆಯ್ಯೇಱಿಸಿ ಸೇಸೆಯಿಟ್ಟು ಮಿಸಿಸಿ ದುಕೂಲಮನುಡಿಸಿ ಕಯ್ಗೆಯ್ಸಿದಾಗಳ್‌ ಕೆಲರಿಂತೆಂಬರ್‌

ಕಂ || ಈಕೆಗೆ ಪಸದನಮೆಂಬುದ
ದೇಕೆಗೆ ಪಸದನಕೆ ತಾನೆ ಪಸದನಮಾಗಿ
ರ್ದಾಕೆಯ ಬೆಡಂಗು ಮೂಱುಂ
ಲೋಕಮನೆಱಗಿಸುಗುಮಚ್ಚಿಗಂಗೊಳ್ಳದಿರಿಂ ೧೪

ವ || ಎಂದೊಡಾಕೆಗಳೇಂ ಬಣ್ಣಿ [ಪ] ಮೆಂಬುದಪ್ಪುದದೊಡಂ ಶೋಭನಕಾರ್ಯಕ್ಕೆ ಬೇೞ್ಪುದೆಂದು ಪಸದನಂಗೊಳಿಸಿ ರಥಮನೇಱೆಸಿ ಬೀಸುವ ಚಾಮರಂಗಳುಂ ಪಿಡಿವ ಸೀಗುರಿಗಳುಂ ಪೊಗೞ್ವವರುಂ ಬೆರಸು ದ್ರೌಪದಿಯ ರಥಂ ಮುಂದೆ ನಡೆಯೆ ದ್ರುಪದಂ ಮಹಾವಿಭೂತಿಯಿಂ ಸ್ವಯಂಬರಶಾಲೆಗೆ ವಂದನಾಗಳ್‌ ನೆರೆದರಸಮಕ್ಕಳೆಲ್ಲಂ ಬಂದು ತಂತಮ್ಮ ಚೌಪಳಿಕೆಗಳೊಳ್‌ ಬಂದಿರ್ದರುಂ ಬ್ರಾಹ್ಮಣವೇಷಂಗೊಂಡು ಪಾಂಡವರುಂ ಬಂದು ಪಾರ್ವರ ನೆರವಿಯೊಳೊಡಗೂಡಿರ್ದರಾಗಳರ್ಚಿಸಿರ್ದ ಬಿಲ್ಲನೇಱರಿಸಿ ಮಿನನೆಸಿಮೆಂದು ಸಾಱಿದೊಡದೇನರಿದೆಂದು ಮುನ್ನಂ ಬಂದು ದುರಿಯೋಧನನೇಱಿಸಲಾರದೆ ಪೋದಬೞಿಯಂ ಕರ್ಣನುಮಾರ್ತನಿಲ್ಲ ದುಶ್ಯಾಸನ ಕೃಪಾದಿಗಳ್ ಸಿಗ್ಗಾಗಲಾಱೆಮೆಂದಿರ್ದರಾಗಳರಸುಗಳೊಳಾರುಮಾರ್ತರಿಲ್ಲಿನ್ನುೞಿದ ಮೂಱುಂ ಜಾತಿಯೊಳಾರಪ್ಪೊಡಮಾರ್ಪರ್ವಕ್ಕೆಂಬುದಂ ಕೇಳುತ್ತೆ ಕಾಸೆಯನುಟ್ಟು ಯಜ್ಞೋಪವೀತಮನೇಱಿಸಿದರ್ಜುನಂ ಧರ್ಮಜಂಗೆ ಪೊಡೆವಟ್ಟು ಬಂದು ದ್ರೋಣನಂ ಸ್ಮರಿಸಿ ಬಿಲ್ಲನೇಱಿಸಿ ನೀವಿ ಜೇವೊಡೆದಂಬಂ ತಿರುವಾಯೊಳಿಟ್ಟು ತೆಗೆದಱಗಿ ಪೊಕ್ಕು ಗಗನದೊಳೊಡ್ಡಿದ ಜಂತ್ರ ಮತ್ಸ್ಯಮನೆಚ್ಚಾಗಳ್‌

ಕಂ || ಅಂಕದ ನರೇಂದ್ರತನಯರು
ಪೊಂಕಂಗಿಡೆ ಜನದ ನೆರವಿ ಬಾಯಂಡಿಬೆ ಮಿ
ನಂ ಕೊಳದೊಳ್‌ ಬೀಸಿದ ಗಾ
ಳಂ ಕೊಂಡಂತಾಗೆ ಕೊಂಡುದರ್ಜುನನ ಶರಂ ೧೫

ವ || ಅಂತುಮಲ್ಲದೆ

ಕಂ || ಒಸೆದಾಗಳ್‌ ದ್ರುಪದಾತ್ಮಜೆ
ಕುಸುಮಶರಪ್ರಹತೆ ಬೇಗಮಾತನ ಕೊರಲೊಳ್‌
ಕುಸುಮದ ಮಾಲೆಯನಿಕ್ಕಿದೊ
ಡೆಸೆದವು ದೆಸೆದೆಸೆಯೊಳೊಸಗೆವಱೆ ಬಹುವಿಧದಿಂ ೧೬

ವ || ಆಗಳ್‌ ದ್ರುಪದನೀ ಸಾಹಸಮರ್ಜುನಂಗಲ್ಲದಾಗದೆಂದೆಯ್ದೆವಂದು ನೋಡಿ ಮುಂಕಂಡಱಿವನಪ್ಪುದಱಿಂ ತನ್ನ ಬಗೆದಾತನಾದುದಂ ಸ್ವಯಂಬರಧರ್ಮದೊಳೊಂದಾ ದೊಡೊಸೆದು ಕನ್ನೆಯಂ ರಥದೊಳಿಟ್ಟಿರ್ವರುಮನೇಱಸಿ ಧರ್ಮಜಾದಿಗಳನೊಡಗೊಂಡು ಮಹಾವಿಭೂತಿಯಿಂ ಪೊೞಲಂ ಪುಗೆ ಕಂಡು ದುರ್ಯೋಧನಂ ಸಿಗ್ಗಾಗಿ ಎನ್ನುಮನೆನ್ನ ದೊರೆಯರುಮಂ ಬಗೆಯದೊರ್ವ ಬಡ ಪಾರ್ವಂಗೆ ಕುಡುಲೊಡಗೊಂಡು ಪೋದಪ್ಪೊಂ ಗಡ ಕೊಟ್ಟನುಂಕೊಂಡನುಮೆನ್ನ ಕೈಯೊಳೆಂತು ಬಾೞ್ವರೆಂದು ತನ್ನ ಸಮಸ್ತಬಲಂಬೆಸು ನೂಂಕಲ್‌ ಬಗೆದಾಗಳ್‌ ದ್ರುವಪದನಱೆದು ಧೃಷ್ಟದ್ಯುಮ್ನಂ ಮೊದಲಾಗೆ ತನ್ನ ಬಲಮನೊಂದುಮಾಡಿ ಪಾಂಡವರಂ ಪೆಱಗಿಕ್ಕಿ ನಿಲೆ ಪಾಂಡವರ ಬೆೞ್ಪ ಕಾಡೊಳ್‌ ಮೞೆ ಕೊಂಡಂತಾಯ್ತಂತು ರೂಪುಗರೆಯಲೇಕೆಂದು ತಂತಮ್ಮಾ ಯುಧಂಗಳಂ ಕೊಂಡು ಸನ್ನದ್ಧರಾಗಿ ತಾಗಲಿರ್ದಾಗಳವರಿರವಂ ಗಾಂಗೇಯ ಧೃತರಾಷ್ಟ್ರವಿದುರ ದ್ರೋಣಾದಿಗಳ್‌ ಕಂಡು ಪಾಂಡವರಂದಮಪ್ಪುದಲ್ಲದಂದಾ ಬಿಲ್ಲನೇಱಿಸುವುದುಂ ಗಗನಮತ್ಸ್ಯಮಂ ಜಾಱೆದ್ದು ಪಾಱಿಸುವುದುಮರ್ಜುನಂಗಲ್ಲದೆ ಕೂಡದೆಂದು ಸಂದೇಹಂಗಿಡೆ ನೋಡಲಟ್ಟಿ ನಂಬಿ ನಾಲ್ವರುಮಾಳೆಲ್ಲಮನಿರಿಸಿ ತಾಮೆ ಪರಿತಪ್ಪುದಂ ಕಂಡು ಪಾಂಡವರಱಿದು

ಕಂ || ಅಂತುಂ ಛಿದ್ರಿಸಿ ಕೊಲಲೋ
ರಂತೆ ತಗುಳ್ದಿರ್ದ ಪಾಪಿ ತಾಂ ಮಸಗಿದನೋ
ರಂತಮೆ ನಾಮೆನುತಿರೆ ಮ
ತ್ತಂ ತೀರ[ದು]ಕಜ್ಜಮಾರುಮನ್ನೇಗೆಯ್ವೊಂ ೧೭

ವ || ಎಂದು ನುಡಿಯುತ್ತಿರಲೆಯ್ದೆವಂದೊಡಯ್ವರುಮಾ ನಾಲ್ವರ್ಗೆ ಪೊಡೆವಟ್ಟೊಡವರುಮಪ್ಪಿಕೊಂಡು ಪರಸಿ ಮನ್ಯುಕೆತ್ತಿಂತು ನೆಗೞ್ದ ಪಾಪಕರ್ಮನ ನೆಗೞ್ತೆಯಿನೆಂತು ಬರ್ದುಂಕಿದಿರೆಂದೆಲ್ಲಮಂ ಬೆಸಗೊಂಡೊಡರಗಿನ ಮಾಡದಿಂದಿತ್ತಣವಸ್ಥಾಂತರಮಂ ಪೇೞೆ ಕೇಳ್ದುಬ್ಬೆಗಂಬಟ್ಟಂತಾಗಲಾಗೆಂದವರನಲ್ಲಿರಿಸಿ ಮಗುೞ್ದು ದುರ್ಯೋಧನನಲ್ಲಿಗೆ ಪೋಗಿ ತದವಸ್ಥಾಂತರಮೆಲ್ಲಮನಱಿಯೆ ಪೇೞ್ದಿಂ ಪೆಱದೇನುಮೆನ್ನದಿರೆಂದು ಕೆಯ್ಯಂ ಪಿಡಿದೊಡಗೊಂಡು ಬಂದುಮುಚಿತಪ್ರತಿಪತ್ತಿಗಳಿಂ ಕಾಣಿಸಿದಾಗಳ್‌ ದ್ರುಪದಂ ಬಂದೆಲ್ಲರುಮೆನ್ನ ಮನೆಗೆೞ್ತನ್ನಿಮೆಂದೊಡಗೊಂಡು ಪೋಗಿ ಪೊೞಲಂ ಪೊಕ್ಕದುವೆ ಮುಹೂರ್ತಮಾಗರ್ಜುನಂಗಂ ದ್ರೌಪದಿಗಂ ಮಹಾವಿಭವದಿಂ ಮದುವೆಯಂ ಮಾಡೆ

ಮ || ನಯಸದ್ಭಾವದ ನೋಟಮೞ್ಕಱೊಳೊಡಂಬಟ್ಟೊಂದು ಬೇಟಂ ಕರಂ
ಪ್ರಿಯದೊಳ್‌ ಕೂಡಿದ ಜಾಣ್‌ ಮನಂಗೊಳಿಪ ನಾಣ್‌ ಸೌಭಾಗ್ಯ ಭಾಗ್ಯಂಗಳಾ
ಶ್ರಯಮಾಗಿರ್ದ ಮಹಾತ್ಮೆ ಯೊಪ್ಪೆ ವಿಳಸತ್‌ ಶ್ರೀಸನ್ನಿಭಂ ದ್ರೌಪದಿ
ಪ್ರಿಯೆಯೊಳ್‌ ಫಲ್ಗುಣನಂತು ಕೂಡಿ ಸುಖದಿಂದಿರ್ದಂ ಮಹೋತ್ಸಾಹದಿಂ ೧೮

ವ || ಅಂತಿರ್ದಲ್ಲಿಯೊಂದು ದೆವಸಂ ಗಾಂಗೇಯ ಧೃತರಾಷ್ಟ್ರಾದಿಗಳಪ್ಪ ಮುದುಗಣ್ಗಳ್‌ ದುರ್ಯೋಧನ ದುಶ್ಯಾಸನಾದಿ ಪ್ರಧಾನ ಪುರುಷರನೇಕಾಂತಕೊಯ್ದಿನ್ನಪ್ಪೊಡಂ ಪಾಂಡವರೊಳ್‌ ಸೌಧರ್ಮಿಕೆಗಿಡದೆನ್ನ ಪಾಂಡುರಾಜನಂತೆ ನೆಲನಂ ಪಚ್ಚಾಳ್ವುದೆಂದೊಡೆ ವಿದುರನಣ್ಣ ನೆಂದುದೊಳ್ಳಿತ್ತದುವೆ ಪಾೞಿಯಂ ಬಗೆಯದೆ ಬಿಗುರ್ತು ನೆಗೞ್ವೊಡಿಳಿಯರುಮಲ್ಲರೆಂತೆನೆ

ಕಂ || ಮಸಗರ್‌ ಪಾಂಡರಂತುಂ
ಮಸಗಿ ತಗುಳ್ದುಗ್ರ ಕೋಪದಿಂದೆಯ್ತಪ್ಪೊಂ
ದೆಸಕದಗುರ್ಬಿಂಗೆಂಟು [೦]
ದೆಸೆಗಳುಮದ್ರಿಗಳುಮಿರ್ಪುವೇ ಮುಳಿದಡವರ್‌ ೧೯

ವ || ಅದಱಿಂ ದಿವ್ಯಮಾನಸರವರ್ಗೆ ಕೂರ್ತು ನೆಗೞಲಲ್ಲದೆ ಬಿಗುರ್ತು ನೆಗೞಲಾಗದೆಂದುರ್ದ ಕೇಳ್ದತ್ತಲ್‌ ನಿಮ್ಮ ತಮ್ಮ ತಾಯ್‌ ಮಕ್ಕಳ್ತನಕಂ ಸೌಧರ್ಮಿಕೆಗಂ ಕೂರ್ತು ಬಾೞಿಮೆಂಬುದಂ ತಕ್ಕುದವರಳವಿಂತೆಂದೆನ್ನ ಪಕ್ಕದಗುರ್ವುಮಾಡಿ ನುಡಿವುದು ಪೊಲ್ಲದು ಕೇಳಿಮೆಂದಿಂತೆಂದಂ

ಕಂ || ಎನ್ನಂ ತಾಂ ಪೊಗೞುತ್ತಿರೆ
ಎನ್ನಂಗಂ ಬಾರದೆಂದೊಡೆನಗಂ ಮೆಚ್ಚೀ
ಪನ್ನತಿಕೆಯೊಳಂತಯ್ವರು
ಮೆನ್ನೊಂದಂಬಿಗೆ ತೊಡರ್ದೊಡವರ್ಗಳೆ ಗಂಡರ್‌ ೨೦

ವ || ಅಂತು ಪೊಱಗಣಿಂ ಬಂದ ದೇಸಿಗನೆನ್ನನೊಮ್ಮೆ ಪೊಣರ್ಚಿ ನೋಡಿ ಬೞಿಯಂ ನಿಮ್ಮ ಸೌಧರ್ಮಿಕೆಗಿಡ[ದ]ಡೊಂದಾಗಿ ಬಾೞಲಪ್ಪುದೆನೆ ದುಶ್ಯಾಸನನೆಂದನಂತೆ ನೀನಲಲದೆಯುಂ ಕುರುಬಲದೊಳಾರಾರುಂ ದೊರೆಯರ್‌

ಕಂ || ತೊಡರಲ್ಕಣ್ಮದೆ ಕೆಮ್ಮನೆ
ಬುಡುಕೆಯ ಮೊದಲಂತೆ ಕುಂಬುತಿರ್ಪರನೇಕುಂ
ಟೊಡೆತಾಗಿ ಮಾೞ್ಪರಯ್ವರು
ಮೊಡನೆನ್ನಯ್ದುಂ ಬೆರಲ್ಗೆ ನೆಱೆದೊಡೆ ಸಾಲ್ಗುಂ ೨೧

ವ || ಎನೆ ಗಾಂಗೇಯನೆಂದನಂತೆ ಕಲಿತನದ ಬಲ್ಲಾಳ್ತನದಗ್ಗಳಿಕೆ ನಿಮಗುಂಟಾಗಿಯುಂ ದೈವಬಲದಂದಮಂ ಬಗೆಯಿರೆ

ಚಂ || ಅರಗಿನ ಮಾಡದೊಳ್‌ ಪುಗಿಸಿ ಸುಟ್ಟಡೆ ಪಾಂಡವರೇನೊ ಸತ್ತರೇ
ಗಿರಿಗಹನಂಗಳೊಳ್‌ ಖಚರ ರಾಕ್ಷಸರೊಳ್‌ ತೊಡರ್ದಲ್ಲಿ ಸೋಲ್ತರೇ
ನೆರೆದ ನರಾಧಿಪರ್‌ ಧನುವನೇಱಿಸಲಾಱದೊಡೇಱಿಸುತ್ತೆ ಮಾ
ಣ್ದಿರದೆ ನರಂ ಮಹಾಂಬರದ ಮತ್ಸ್ಯಮನೆಚ್ಚಳವೆಂತು ಪೇೞಿರೇ ೨೨

ವ || ಅಂತವರ್ಗೆ ಸಾವಂತಪ್ಪಪಾಯಂಗಳೆಲ್ಲಂ ಬಾೞ್ವುಪಾಯಂಗಳನೆ ಮಾಡಿದಪ್ಪುವದಱೆನೆಂತುಮವರೊಳ್‌ ನಣ್ಪೆ ಕಜ್ಜಮೆನೆ ಧೃತರಾಷ್ಟ್ರನೆಂದನೆನ್ನ ಮಗನ ಪೆರ್ಚಿಗದುವೆ ಕಜ್ಜಮೆಂದು ಮಕ್ಕಳನೊಡಂಬಡಿಸಿ ಧರ್ಮಜಂಗೆ ಬೞಿಯನಟ್ಟಿ ಬರಿಸಿ ಪೞೆಯ ನಿಮ್ಮ ಬಾೞೊಳ್‌ ನಿಲ್ಲಿಮೆಂದು ಪೊಡೆವಡಿಸಿ ವಿಕಲ್ಪಮಿಲ್ಲದೊಂದಿ ನೆಗೞಿಮೆಂದು ಸಮರ್ಪಿಸಿ ಪಾಂಡವರನಿಂದ್ರಪ್ರಸ್ಥಕ್ಕೆ ಕಳಿಪಿ ಕೌರವರೆಲ್ಲಂ ಹಸ್ತಿನಪುರಕ್ಕೆ ಪೋದಿಂ ಬೞಿಯಂ ದ್ರುಪದಂ ಮಹಾವಿಳಾಸದಿಂ ದ್ರೌಪದಿಯಂ ಕಳಿಪೆ ಪಾಂಡವರ್‌ವಂದಿಂದ್ರಪ್ರಸ್ಥಪುರಮಂ ಪೊಕ್ಕಿರ್ದಲ್ಲಿ ಧರ್ಮಪುತ್ರಂ ಮುನ್ನೆ ತನ್ನ ಮದುವೆ ನಿಂದ ಪೆಂಡಿರಂ ಬರಿಸಿ ತನಗಾಗಿರ್ದ ಕನ್ನೆಯರಂ ಸಿವಿಗೆಯನಟ್ಟಿ ಬರಿಸಿ ಮದುವೆನಿಂದು ಸುಖದಿನಿರ್ದು ತಮ್ಮಂದಿರ್ಗೆಲ್ಲಂ ಬೆಱೆವೇಱೆ ಪೊೞಲ್ಗಳಂ ಕೊಟ್ಟಿರಿಸಿ ಮುನ್ನಮರಗಿನ ಮಾಡದೊಳ್‌ ತಾವು ಸತ್ತರೆಂಬ ಮಾತಿಂಗುಬ್ಬೆಗಂಬಟ್ಟಿರ್ದ ಯಾದವರ್ಗೆಲ್ಲಂ ಬರ್ದುಂಕಿದ ಅಂತರಮನಟ್ಟಿದೊಡವರ್‌ ಕೇಳ್ದೊಸೆದು ಬೞಿಯಟ್ಟಿ ಮಹಾವಿಭೂತಿಯುಮಂ ಖ್ಯಾತಿಯುಮಂ ಮೆಱೆದು ಪಾಂಡವರ್‌ ಪೋಗಿ ದ್ವಾರಾವತಿಯೊಳ್‌ ನಾರಾಯಣಂ ಮೊದಲಾಗೆ ಯಾದವರೆಲ್ಲರುಮನುಚಿತ ಪ್ರತಿಪತ್ತಿಗಳಿಂ ಕಂಡಿರ್ದು ಕೆಲವು ದಿವಸದಿಂ ಬಲದೇವರಿಂ ಕಿಱಿಯಳ್‌ ಸುಭದ್ರೆಯುಮಂ ಕುಶಳಾವತಿಯುಮನರ್ಜುನಂಗೆ ಕುಡೆ ಮದುವೆನಿಂದು ಮಹೋತ್ಸವದಿಂ ಕಳಿಪಿ ಮಗುೞ್ದು ಬಂದು ತಮ್ಮ ಪೊೞಲೊಳಿರೆ ದ್ರೌಪದಿಗೆ ಮಕ್ಕಳಾದಿಂ ಬೞಿಯಂ ಸುಭದ್ರೆಗಂ ಗರ್ಭಮಾಗಿ ನವಮಾಸಂ ನೆಱೆದು ಪುಟ್ಟಿದೊಡಭಿಮ್ಯುವೆಂದು ಪೆಸರಾಗಿ ಬಳೆದನೇಕ ಶಾಸ್ತ್ರಪ್ರವೀಣನಾಗಿರ್ದಾತನ ವಿವಾಹ ಕಲ್ಯಾಣದ ಮಹಾವಿಭೂತಿಗಮವರ ಬಲದ ಪೆರ್ಚಿಂಗಂ ವನಿತಾಸಂಕುಳದ ಪೆರ್ಚಿಂಗಂ ಶೌರ್ಯದಳುರ್ಕೆಗಂ ಕಾರ್ಯದ ನಿಮಿರ್ಕೆಗಂ ದುರಿಯೋಧನಂ ಮತ್ತೆ ಕನಲ್ದು ತನ್ನೊಳೊಡಂಬಟ್ಟ ನಂಟ [ರಂ] ಮಂತ್ರಿಗಳಂ ಬರಿಸಿ ಮಂತಣಮಿದ್ದೇಗೆಯ್ವಂ ಪಾಂಡವರಪ್ಪೊಡೆ ತಮಗೆ ಪೆರ್ಚುಮಾಗೆ ನಮ್ಮ ನಡಂಗೊತ್ತಿ ನೆಗೞ್ವನ್ನರಾದೊಡೆಲ್ಲಂ ತಂತಮ್ಮ ಬಲ್ಲ ಕಜ್ಜಂಗಳಂ ಪೇೞ್ದಿಂಬೞಿಯಂ [ಶಕುನಿಯಿಂ]ತೆಂದಂ

ಉ || ಮಾಡಿಸಿ ನಾೞವಾಸಗೆಯನೊಯ್ಯನೆ ಮೇಳಿಸಿ ನಿಮ್ಮೊಳೊಮ್ಮೆ ಜೂ
ದಾಡಿಸಿ ಧರ್ಮನಂದನನನೊಪ್ಪಿರೆ ಗೆಲ್ದಡೆ ಸೋಲ್ತ ಸಿಗ್ಗಿನೊಳ್‌
ನಾಡುಮನೊಡ್ಡಿಯಾಡಿದೊಡೆ ಗೆಲ್ವುದು ಗೆಲ್ದ ಬೞಿಕ್ಕವಂದಿರುಂ
ನಾಡನೆ ಪತ್ತುವಿಟ್ಟು ಪೞುವಟ್ಟು ಕೞಲ್ದಘಪಟ್ಟುವೀಯರೇ ೨೩

ವ || ಎಂದೊಡಾ ಕಜ್ಜಮಂ ಮನಂಗೊಂಡು ದುರ್ಯೋಧನನಲ್ಲಿಂದಮೆರ್ದು ಪೋಗಿ ಗೂಢದೊಳ್‌ ನಾೞವಾಸಗೆಗಳಂ ಸಮೆಯಿಸಿ ತನ್ನ ಮನೆಯೊಳ್‌ ಪಿರಿದೊಂದೊಸಗೆಯಂ ಮಾಡಿ ಪಾಂಡವರಂ ಬರಿಸಿ ಕರಂ ಪ್ರಿಯಂಗೆಯ್ದಿರಿಸಿ ಮೇಳಮವರೊಳೆಂಬುದಕ್ಕೊಳ್ಳಿತ್ತು ಮೇಳಿಸಿರ್ದೊಂದು ದೆವಸಮವರುಂ ತಾನುಂ ಗೋಷ್ಠಿಯೊಳಿರ್ದುಮಲ್ಲಿ ಜೂದಂ ಪೊಣರ್ಚಿ ಪೆಱರನಾಡಿಸಿ ತಾಮುಂ ನೋೞ್ಪಿಂತೆಗೆಯ್ದಿನಿಸುಪೊತ್ತು ನೋಡುತ್ತಿರ್ದಂತಂತೆ ಮೇಳದೊಳ್‌ ನುಡಿಯುತ್ತಿರ್ದಣ್ಣ ನಾಮಾಡುವಮೆಂದು ದುರ್ಯೋಧನಂ ಧರ್ಮಪುತ್ರನೊಳ್‌ ತಗುಳ್ದಾಡುತ್ತಿರ್ದಲ್ಲಿ ಕೆಯ್ಯಡಕದೊಳ್‌ ದುರಿಯೋಧನಂ ನಾೞವಾಸಗೆಯಂ ಪುಗಿಸಿಯಾಡಿ ವಸ್ತುವಾಹನಂಗಳೆಲ್ಲಮಂ ಗೆಲೆ ಶರಪ್ರಯೋಗದಿಂ ಗೆಲೆ ಭೀಮಾರ್ಜುನರ್‌ ಮಸಗಲ್‌ ಬಗೆದಣ್ಣಂಗಂಜಿ ಮಾಣ್ದರಾಗಳ್‌ ಧರ್ಮಜಂ ಸಿಗ್ಗಿನೊಳ್‌ ನಾಣ್ಚಿದಡೆ ಕೆಲದವರೆಂದರೀಯೊಡ್ಡಮಂ ಗೆಲ್ದರ್‌ ಪನ್ನೆರಡು ವರ್ಷಂಬರ ನಾಡನಾರೞ್ವುದೆಂದು ಸಮಕಟ್ಟಿದೊಡವಂತಪ್ಪಡಮಕ್ಕೆಂದಾಡಿ ಸೊಲ್ತಾಗಳೆ [ಶಕುನಿಯಂ] ನೋಡಿ ಕಣ್ಣಱೆದು ದುಯೋಧನಂ ನೀಂ ಸಾಲ್ಗುಮೆಂದೆರ್ದು ತನ್ನ ಮಾಡದೊಳಗಂ ಪೊಕ್ಕಂ ಧರ್ಮಪುತ್ರಾದಿಗಳ್‌ ತಂತಮ್ಮ ಬೀಡಿಂಗೆವಂದಿರ್ದು ಕಿಱಿದುಂ ಬೇಗದಿಂ ದುರ್ಯೋಧನಂ ತನ್ನ ಪೆರ್ಗಡೆಗಳನಟ್ಟಿದೊಡವರ್‌ ಬಂದುಮಿಂತೆಂದರ್‌

ಕಂ || ಜೂದಾಡಿ ಸೋಲ್ತುದಂ ತಾಂ
ಸೌಧರ್ಮಿಕೆ ಬಗೆಯದೀವುದೆಂದಟ್ಟಿದನೆಂ
ದಾದರದಿನವರ್‌ ನುಡಿದೊಡೆ
ಜೂದಂ ಸೋಲ್ತೀಯೆವೆಂಬ ಸಿತಗರುಮೊಳರೇ ೨೪

ವ || ಬಂದೊಳ್ಳಿಕೆಯ್ದಿರ್‌ ಕೊಂಡು ಪೋಗೊಮೆಂದು ಸೋಲ್ತ ವಸ್ತುವಾಹನಂಗಳಂ ತರಿಸಿ ಕೊಟ್ಟು ನಾಡುಮನೊಪ್ಪಿಸಿ ಪೋದಪ್ಪೆಂ ಕೈಕೊಳವೇೞಿಮೆಂದುಮಟ್ಟಿ ಪಯಣಮಂ ಸಮಕಟ್ಟಿಸಿ ಇರುಳೆರ್ದು ನಡೆವಾಗಳ್‌ ಭೀಮಾದಿಗಳಕ್ಕುಮಾದೊಡೆನ್ನಂತಾದೊಡೆನ್ನನುಕ್ಕಲಿಸಿ ನೆಲನಂ ಕೊಂಡೈ ಪುಣ್ಯಮಂ ಕೊಳಲ್‌ ತೀರದೆಂದಣ್ಣನ ನನ್ನಿಯಂ ಸಲಿಸಲ್ವೇೞ್ಪುದೆಂದು ಪೊೞಲಿಂ ಪೊಱಮಟ್ಟು ಪೋದರದಂ ಗಾಂಗೇಯಾದಿಗಳ್‌ ಕೇಳ್ದು ನೆಲನಂ ಗೆಲ್ದಾ ಮೇಗಿಂ ಕೊಟ್ಟಿರಿಸುವುದೆಂದು ನುಡಿದೆಂತುಮೊಡಂಬಡಿಸಲಾಱದೆ ಪೋದರಂತು ಪಾಂಡವರ್‌ ತಮ್ಮ ಪೊೞಲೊಳಿರ್ದ ಪೆಂಡಿರ್‌ ಮಕ್ಕಳೆಲ್ಲರುಮನೊಡಗೊಂಡು ನಾಡಂ ಬಿಸುಟು ಪಯಣಂಬೋಗಿ ನದ ನದೀ ಗಿರಿ ಗುಹಾಗಹ್ವರಂಗಳಂ ಕಳಿದು ಗಂಗಾನದಿಯಂ ಪಾಯ್ದು ನಡೆತಂದೊಂದೆಡೆ ಯೊಳೊಂದಾಲದ ಮರದಡಿಯೊಳ್‌ ಬೀಡುವಿಟ್ಟಿರ್ದಲ್ಲಿಗಮಿತಮಿತಿಗಳೆಂಬಾಚಾರ್ಯರ್ವಂದಿರ್ದೊಡೆ ಬಲಗೊಂಡು ಬಂದಿಸಿ ಕುಳ್ಳಿರಿಸಿ ಧರ್ಮಮಂ ಕೇಳ್ದಾಱಿ ಸುಖದಿನಿರ್ದು ಬೞಿಯಂ ತಮ್ಮೊಡವಂದ ದ್ರುಪದ ಧೃಷ್ಟದ್ಯುಮ್ನಾದಿಗಳುಮಂ ಪೆಱರುಮನವರ ಪೊೞಲ್ಗೆ ಪೋಗಲ್ವೇೞ್ದವರೊಡನೆ ಕೊಂತಿಮಹಾದೇವಿಯಂ ದ್ರೌಪದಿಯುಮಲ್ಲದುೞಿದ ಪೆಂಡಿರುಮಕ್ಕಳಂ ಕಳಿಪಿ ತಮ್ಮಯ್ವರುಮಾಯಿರ್ವರುಮನೊಡಗೊಂಡು ತೆಂಕಮೊಗದೆ ಪಯಣಂ ಬಂದು ಬದರೀವನಮೆಂಬ ಪೇರಡವಿಯಂ ಪೊಕ್ಕು ಋಷ್ಯಶೃಂಗಮೆಂಬ ಗಿರಿಯಂ ಕಂಡಲ್ಲಿ ನೆೞಲಂಚೆಯಂತೆ ನೆೞಲನೆ ತೋರ್ಪ ನೆೞಲ ಮರಂಗಳುಮಂ ಮಾಯಾವಡೆಯಂತೆ ಮೆಯ್ದೋಱಿಯದೃಶ್ಯಮಪ್ಪ ದಿವ್ಯಮೂಲಿಕೆಗಳುಮಂ ಬಸನಿಯಂತೆ ಪತ್ತಿದರೆನೆ ಪತ್ತುವ ವಜ್ರಲೇಪಂಗಳುಮಂ ಪಾಱುವೆಂಡಿರಂತೆ ಕಂಡ ಕಂಡರನೆ ಪಿಡಿವ ಮ[ರು]ಳ್ಮಾಟಂಗಳುಮಂ ಕಾಮದೇವನಂತೆ ರತಿಯೊಳ್‌ ಕೂಡುವ ದಂಪತಿಗಳುಮಂ ಮುಂಡೆಯ ತಲೆಯಂತೆ ಕೆಯ್ವಿಟ್ಟ ಸೀರೆಗಳುಮಂ ಮದಗಜದಂತೆ ಮರವಾಯ್ದ ಪುಲಿಗಳುಮಂ ತುಂಬಿಗಳಂತೆ ಮೊರೆದು ಪಾಯ್ವರ್ವಿಗಳುಮಂ ಸೊಕ್ಕಿದೊರಂತೆ ದೆಸೆದೆಸೆಗೆ ನರ್ತಿಸುವ ಸೋಗೆಗಳುಮಂ ನೋಡುತ್ತ ಬಪ್ಪರ್‌ ಮತ್ತಲ್ಲಿ

ಕಂ || ಉರಗಂಗಳ್‌ ಸುತ್ತಳಿದಿೞಿ
ತರುತಿರೆ ಬಿಡದವನೆ ಬಯಸಿ ತಿರಿತರುತೆ[ಯ್ತಂ]
ದಿರದೆಡೆವಿಡದಡರ್ವುವು ಮುಂ
ಗುರಿ ಗಿರಿಕಂದರದ ಮರದ ತುದಿಗೊಂಬುವರಂ ೨೫

ಕುಸಿದು ಕೊರಲ್ಗಳನನುನಯ
ದೆಸಕದ ಗಡಣ [ದಿ] ಮಡಗ [ಳ] ಗಱಿಯಂ ಸಮಱು
ತ್ತೊಸೆದಗ್ಗದ ಸಱಿ ಪೊರೆಗಳೊ
ಳೆಸದಿರ್ದವು ಪೊಱಸಿನೋಳಿಗಳ್ ಸೊಗಯಿಸುಗುಂ ೨೯

ಲಲಿತ ರಗಳೆ ||
ತುಱುಗಿ ಪೂತೆಱಗಿ ಸೊಗಯಿಸುವ ಸುರಹೊನ್ನೆಯಿಂ
ಸುರಹೊನ್ನೆಗಳ ಕೆಲದೊಳೊದವಿದೆಲತೆಗಳಿಂ
ಲತೆಯಮನೆಗಳೊಳೊಸೆದು ನೆರೆವ ದಂಪತಿಗಳಿಂ
ದಂಪತಿಗಳಾರವಕೆ ನಲಿವ ಕಳಹಂಸೆಯಿಂ
ಕಳಹಂಸೆಗಳ ನಡೆಯನಿಳಿಪ ಕಿನ್ನರಿಯರಿಂ
ಕಿನ್ನರಿಯರೊಡನೊಡನೆ ಮೊರೆವ ಪೆಣ್ದುಂಬಿಯಿಂ
ತುಂಬಿಗಳ ಮೊರೆಪಕ್ಕೆ ಸೋಲ್ತ ಹರಿಣಂಗಳಿಂ
ಹರಿಣಂಗಳಂ ಸಾರ್ದು ಬಂದೆಸುವ ಶಬರರಿಂ
ಶಬರರಂ ಮಸಗಿ ಬೆಂಕೊಳ್ವ ಮದಕರಿಗಳಿಂ
ಮದಕರಿಗಳಿಂ ಪೆಳಱೆ ಪಾಯ್ವ ಕೇಸರಿಗಳಿಂ
ಕೇಸರಿಗೆ ಪೆಳ್ಪಳಿಪ ತುರಗಮುಖಿಯರ್ಕಳಿಂ
ತುರಗಮುಖಿಯರನಣಮೆ ಱೋಡಿಸುವ ಕಪಿಗಳಿಂ
ಕಪಿಕುಳದ ತೊಂಡಿಕೆಗೆ ನಗುವ ಖೇಚರಿಯರಿಂ
ಖೇಚರಿಯರಂ ನೋಡಿ ನರ್ತಿಸುವ ಸೋಗೆಯಿಂ
ಸೊಗೆನವಿಲಾಡೆ ಕರಮೊಪ್ಪುವ ಪುೞಿಲ್ಗಳಿಂ
ಪುೞಿಲ ನೆೞಲೆಡೆಗಳೊಳು ಸುೞಿವ ತೆಂಗಾಳಿಯಿಂ ೨೭

ಕಂ || ತೆಂಕಣಗಾಳಿಯ ಸೊಗಯಿಪ
ಸೋಂಕಿನೊಳಿರದೊಗೆದು ಮಿಱುಗಿ ತಳ [ತ] ಳಿಸುವ ಚೂ
ತಾಂಕುರಮನೊಸೆದು ಕರ್ದುಕಿದ
ಬಿಂಕದೊಳೊಡನುಲಿವ ನಲಿವ ಗಿಳಿವಿಂಡುಗಳಿಂ ೨೮

ವ || ಅಂತೊಪ್ಪುವ ಗಿರಿಪ್ರದೇಶಮ [೦] ಮೆಚ್ಚಿ ರಮ್ಯಪ್ರದೇಶದೊಳ್ ವಿಶ್ರಮಿಸುತ್ತಮಂತಾ ವನಪ್ರದೇಶಂ ಪ್ರವಾಸಂ ಮಾಡದೆ ಸಂತೋಷಮನೀಯೆ ಕೆಲವು ದೆವಸಮನಿರ್ದಲ್ಲಿಯೊಂದು ದೆವಸಮರ್ಜುನನಂತಂತೆ ವನವಿ [ಹಗರಣಂಗೆಯ್ಯುತ್ತ] ಮಿಂದ್ರಕೀಲಮೆಂಬ ನಗರಮಂ ಕಂಡಲ್ಲಿ ಪಸಿದು ಬಾಯ್ದೆಱೆದ ಪೆರ್ವಾವಿನ ಬಾಯಿಗಳಂ ಬಿಲಮೆಂದು ಪುಗುವ ಬಿಲದಾದಿಗಳುಮನಿಂದ್ರ ಕೀಲದ ಕೋಡುಂಗಲ್ಲಂ ಕಾರ್ಮುಗಿಲೆಂದು ನಲಿದು ನರ್ತಿಸುವ ನವಿಲುಗಳಂ ಪದ್ಮರಾಗದ ಪೆ [ರ್ವಿ]ದಿರ ರಶ್ಮಿಗಳನಳೆವಿಸಿಲೆಂದು ಬಿಸಿಲ್ಗಾಯ್ವ ಪನ್ನಗಂಗಳುಮಂ ಪಚ್ಚೆಯಶಿಲೆಯಂ ತಾವರೆಯೆಲೆಯೆಂದು ಕರ್ದುಂಕುವ ಕೋಗಿಲೆಗಳುಮಂ ಚಂದ್ರಕಾಂತದ ಶಿಳಾತಳಮಂ ತಿಳಿಗೊಳನೆಂದು ಹರಿಣಂಗ[ಳುಮಂ] ಸ್ಫಟಿಕೋಪಳಂಗಳಂ ಬಯಲ್ಗೆತ್ತು ತಾಗಿ ಪೆಂಡಂಮಗುೞ್ವ ಮದೇಭಂಗಳುಮಂ ಚೋದ್ಯಂಬಟ್ಟು ನೋಡುತ್ತಂ ಬರ್ಪೊಂದೆಡೆಯೊಳೊಂದು ಪೆರ್ವಿದರ

ಹರಿಣಿ ||

ಕಂ || ಪೊದಱ ತುದಿಯೊಳ್ ಭಾಸ್ವದ್ವಿದ್ಯಾಧರೇಂದ್ರನನೊರ್ವನಂ
ಸದಭಿನುತನಂ ತಿಣ್ವಂ ಕಟ್ಟಿಕ್ಕಿ ಪೋದನುದಗ್ರ ನೀ
ರದಪಥಚರಂ ಬಲ್ಲಾಳ್ ಮತ್ತೊರ್ವನೆಂದಱಿದೆಯ್ದೆ ಬಂ
ದ [ಧಿಕ] ಗುಣನಂ ಪಾರ್ಥಂ ಕಾರುಣ್ಯಭಾವದೆ ನೋಡಿದಂ ೨೯

ವ || ನೋಡಿ ಕಟ್ಟಂ ಬಿಡುವೊಡೆಯೆವ …. ನಂದು ಬಿಲ್ಲನೇಱಿಸಿಕೊಂಡು ಪೊದಱ ಮೊದಲನಿರ್ಬಾಯನಪ್ಪಂಬಿನೊಳೆಚ್ಚಾಗಳೊಮೊಧದಲೆ ಮೊದಲಿಂದಂ ಕೆಡೆಯೆ ಬಂದು ವಿದ್ಯಾಧ ………ವಂತೆ ಬಿಡಿಸಿದಾಗಳಾತಂ ನಿನ್ನ ಮಹಾಪ್ರಸಾದದಿಂ ಬರ್ದೆನೇವೆ ನೀನಾರ್ಗೇಕೆ ಕಟ್ಟು ಪಟ್ಟೆಯೆಂದೊಡಾನುತ್ತರಶ್ರೇಢಿಯ ವಿದ್ಯಾದರನೆಂ ಇಂದ್ರರಥ…………ನೊರ್ವನೆನ್ನ ಪಗೆವಂ

ಕಂ || ಇಟ್ಟೆಡೆಯಾಗಿರೆ ಖಚರಂ
ತೊಟ್ಟನೆ ಕೊಳೆ ಬಂದು ಪಿಡಿದುಕೊಂಡಂ…….
………………………………ಕುದಿದುಂ
ಕಟ್ಟಿನೊಳಾನವರಭತೆಱದಿಂ ಬೆಂದೆಂ (?) ೩೦

ವ || ಇರುಳು ಕಟ್ಟಂ ಕಳೆದಾಱಿಸಿದೊಡಾಱಿದೆನೆನ್ನಳಿಪಂ ತೋಱಿದೆನೆನ್ನಱಿದ ವಿದ್ಯಗಳಂ ನೀನೆ ಸಾಧಿಸಿಕೊಳ್ಳೆಂದು ಮಂತ್ರಪದಂಗಳುಮಂ ಸಾಧನೋಪಾಯಮುಮಂ ಪೇೞ್ದಡಾ ಕ್ರಿಯೆಯೊಳ್ ವಿದ್ಯಗಳಂ ಸಾಧಿಸಿಕೊಂಡಿರ್ಪಿನಮಾತನಂ ಕೊಲಲೊಲ್ಲದೆ ಕಟ್ಟಿಕ್ಕಿ ಪೋದ ಮೇಘರಥಂ ತನ್ನ ಸಾಹಸಮಂ ತೋಱಲ್ ತನ್ನವರನೊಡಗೊಂಡು ಬಂದು ಮೊಕ್ಕನೆವೋಗಿ ಕೆಡೆದ ಪೊದಱುಮನ್ನವೃತ್ತಿಗಂ ತಂತ್ರಕ್ಕಿರಲೆಡೆವಡೆದಂತೆ ಬೀಡುವೆತ್ತಿರ್ದಿಂದ್ರರಥನುಮಂ ಆತನಂ ಬಿಡಿಸಿ ನೋವನಾಱಿಸಿ ಮೇಗಿಲ್ಲದಂತಿರ್ದಜುನನುಮಂ ಕಂಡು ಬೆಕ್ಕಸಂಬಟ್ಟು ನೋೞ್ಪನನರ್ಜುನಂ ಕಂಡೀತನಾರ್ಗೆಂದಿಂದ್ರರಥನಂ ಬೆಸಗೊಂಡೊಡೀತನಲ್ತೆ ಮುಳಿದೆನ್ನನಿಲ್ಲಿ ಪೊದಱೊಳ್ ಬಲ್ಗಂಡಿಕೆಯಿನಾಳೆಮೆಟ್ಟಿದೊನೆಂದೊಡರ್ಜುನನಾ ಬಂದಾತನನಿಂತೆದಂ