(ಸಂಖ್ಯೆಗಳು ಅಧಿಕಾರ ಮತ್ತು ಪದ್ಯಸಂಖ್ಯೆಗಳನ್ನು ಸೂಚಿಸುತ್ತವೆ)

ಜೀವಸಂಬೋಧನಂ

ಅಂಕಕಾಱ ೩ – ೨೦ ಯುದ್ಧವೀರ
ಅಂದಳ ೧೧ – ೫೫ರ ಪಲ್ಲಕ್ಕಿ
ಅಂಧಪಾಷಾಣ ೧ – ೭ವ ಲೋಹಾಂಶವಿಲ್ಲ ಕಲ್ಲು
ಅಟ್ಟುಂಬರಿ ೧೨ – ೩೧೯ ಬೆನ್ನಟ್ಟು
ಅಡಂಗೊತ್ತು ೧೧ – ೧೪ ಅದುಮಿ ತುಳಿ
ಅಱುನೀರ್ ೫ – ೧೦ ಬತ್ತಿದ ಜಲ
ಅಸುಂಗೊಳ್ ೩ – ೧೮ ಭಯಪಡು
ಅೞಮೆ ೧೨ – ೨೧ ಜೀರ್ಣವಾಗದಿರುವಿಕೆ

ಆಯ ೧೨ – ೩೮ ಏಳಿಗೆ
ಆರ್ಮ ೨ – ೫೦ ಆಶ್ರಯ
ಆಱಡಿಗೊಳ್ ೧೦ – ೩೦ವ ಸೂರೆಮಾಡು

ಉಂತೆ ೧ – ೨ವ ಸುಮ್ಮನೆ
ಉಕ್ಕೆವ ೮ – ೨೫ ಮೋಸ
ಉತ್ಸರ್ಗ ೯ – ೩ ಆರು ವಿಧವಾದ ಅಭ್ಯಂತರ
ಉದ್ಧತಿಕೆ ೮ – ೨೩ ದುರಹಂಕಾರ ತಪಗಳಲ್ಲಿ ಒಂದು
ಉರುಗುರ ೭ – ೨೯ರ ಮಲ
ಉಱುಗು ೧೧ – ೫೦ ಓರೆಯಾಗು
ಉರ್ಕಾಳು ೩ – ೪೦ ಶೂರ

ಎಕ್ಕವಡ ೮ – ೪ ಪಾದರಕ್ಷೆ
ಎಕ್ಕೆ ೧೧ – ೨೮ವ ಮಂಚದ ಚೌಕಟ್ಟು

ಐಕಿಲ್ ೮ – ೪ ಮಂಜು

ಒಟ್ಟಯ್ಸು ೯ – ೬ ಅಡಗಿಸು

ಓವರಿ ೬ – ೨೨ರ ಕೋಣೆ

ಕಟ್ಟುಪಡು ೩ – ೧೫ರ ಬಂಧಿಸು
ಕಡಿತಲೆ ೯ – ೨ರ ಕತ್ತಿ
ಕಣ್ಬಡು ೧೧ – ೪೧ ಬಯಸು
ಕಮ್ಮನೆನಾರ್ ೮ – ೨೯ರ ಸುವಾಸನೆ ಬೀರು
ಕರಗ ೧೧ – ೩೫ವ ನೀರು ತುಂಬುವ ಕಲಶ
ಕಸರವ ೧ – ೧೬ವ ಧನ, ಹಣ
ಕೞಿ ೧೧ – ೨೪ ಗಾಡಿಯ ನೊಗದ ಗೂಟ
ಕಾರುಕ ೫ – ೨೪ ಬಡಗಿ
ಕಿಂಪಾಕಫಲ ೮ – ೯ ವಿಷದಂತೆ ತಿಂದವನನ್ನು ಕೊಲ್ಲುವ ಹಣ್ಣು
ಕಿತ್ತಡಿ ೯ – ೨೯ರ ಯತಿ
ಕಿಸುಗಳ ೩ – ೧೫ವ ಹೇಸಿಗೆ
ಕುದಿಱು ೩ – ೧೮ವ ನೆಲದಲ್ಲಿ ಧಾನ್ಯ ತುಂಬಿಡುವ ಹಗೇವು
ಕುಱುಕುಚಿಗೆ ೧೧ – ೪೨ ರ ಕರುಕಾಯುವವ
ಕೂಚಿಪತ್ರ ೧೧ – ೩೦ ವಿಷಯವನ್ನು ಬರೆದಿಟ್ಟಿರುವ ಪತ್ರ
ಕೆಲ್ಲಯ್ಯ ೧೦ – ೨೩ ಹೆದರಿಕೆಯಿಂದ ನೋಡುವ
ಕೊೞ್ಕೆಸರು ೫ – ೧೦ ದಟ್ಟವಾದ ಕೆಸರು (ನೋಟ)
ಕೋಳ ೧೧ – ೨೯ವ ಬಂದಿಕಾರನಿಗೆ ಕೈಗೆ ತೊಡಿಸುವ ಉಪಕರಣ

ಗಂಟಿ ೨ – ೫ ವ ಪೋಲಿದನ
ಗಗ್ಗರ ೬ – ೬೦ ಕಾಲುಬಳೆ
ಗೂಱುಮಾಱಾಳಿ ೯ – ೧೫ವ ವಸ್ತು ವಿನಿಮಯ ಮಾಡಿಕೊಳ್ಳುವವರು
ಗೊಂದಳ ೧೦ – ೪೦ ಗುಂಪು
ಗೊಂದೆ ೫ – ೧೦ ದನ
ಗೊಡ್ಡ ೧೧ – ೩೫ವ ಪುಂಡತನ
ಗೊರವಬ್ಬೆ ೫ – ೩೨ ಸನ್ಯಾಸಿನಿ

ಚಮ್ಮಾವುಗೆ ೬ – ೩೭ವ ಎಕ್ಕಡ

ಜಲ್ಲಮಲ್ಲ ೩ – ೨೨ ಮೈಕೂಳೆ
ಜಾಮಿಸು ೬ – ೬೬ ಶವಸಂಸ್ಕಾರ ಮಾಡು
ಜೂಂಟರ್ ೧ – ೫ ಮೋಸಗಾರರು
ಜೆಟ್ಟಿ ೧ – ೪೬ವ ಜ್ಯೇಷ್ಠ
ಜೋಕುವರ ೧ – ೭ ಬೆಡಗುಗಾರ

ಡಾವರಿಗ ೯ – ೧೬ ಪ್ರಜೆಗಳ ಆಸ್ತಿಯನ್ನು ಸೂರೆ ಮಾಡುವ ಜಾಜ
ಡೊಂಬಿಸು ೪ – ೧೪ ಮೋಸಮಾಡು

ತಗಪು ೧೧ – ೧೩ವ ಸಾಲದ ನಿರ್ಬಂಧ
ತಱಿಸಲ್ ೧ – ೭ ನಿಶ್ಚಯಿಸು
ತವಿಲಾ ೧೨ – ೨೪ ಸ್ನಾನ
ತಸ್ಕರ ೧೦ – ೩೦ ಕಳ್ಳ
ತುಂಬೀಫಲ ೧೧ – ೯ವ ಸೋರೆಕಾಯಿ

ದಂಡು ೧೧ – ೫೩ ಕೋಲು
ದಾಂಗುಡಿ ೧೧ – ೧೫ ಹಬ್ಬು
ದಾರವಂದ ೯ – ೪ರ ಬಾಗಿಲ ಚೌಕಟ್ಟು
ದೂಸಱು ೧ – ೧೬ ಕಾರಣ

ನದಿಪು ೧೦ – ೩೩ ವ ನಂದಿಸು
ನಾಣಿಲಿ ೫ – ೧೨ ನಾಚಿಕೆಯಲಿಲ್ಲದವ
ನಿಗಡ ೧೧ – ೭ರ ಸಂಕೋಲೆ
ನೇಱು ೧೧ – ೧೬ ವ ತೂಗುಹಾಕು

ಪಚ್ಚವಟ ೭ – ೨೮ವ ಸ್ನಾನದ ನೀರು ಹೋಗುವ ಬಚ್ಚಲು
ಪಣಿದ ೬ – ೫೯ವ ಹೋರಾಟ
ಪಸ ೧ – ೧೨ ರ ಬರಗಾಲ
ಪೞಿ ೧ – ೧೮ ನಿಂದೆ
ಪಾಂಗು ೧ – ೨೦ ರೀತಿ
ಪಿಂಡಿಬದ್ಧ ೧ – ೯ವ ಉಂಡೆಮಾಡು (?)
ಪುಟ್ಟಿಗೆ ೧೨ – ೩೩ವ ಬಿದಿರು ಬುಟ್ಟಿ
ಪೆರ್ವೈತ್ತಿಕ ೧೦ – ೧೭ ಹೆಚ್ಚು ಪಿತ್ತವಿಕಾರ
ಪೊಂಕ ೬ – ೫೮ ಗರ್ವ
ಪೊಕ್ಕಳ್ ೧೨ – ೬ ಅಧಿಕ (?)
ಪೋೞಲ್ ೬ – ೨೯ವ ಮರದ ಪೊಟರೆ

ಬಾಗು ೬ – ೪೩ವ ಬೇಯಿಸು
ಬಾವುದೆವಸ ೩ – ೩೬ ವ ಪಾರಣಿಯ ದಿನ
ಬಿಗುೞು ೨ – ೨೪ವ ಅಳು
ಬೆಜ್ಜು ೨ – ೧೯ ವ ವೈದ್ಯ
ಬೆಳ್ಮಿಗ ೫ – ೧೮ ಜಿಂಕೆ ಮೊದಲಾದ ಸಾಧುಮೃಗ
ಬೆಳ್ಳವಾಸ ೯ – ೨೯ವ ನೀರಿನ ಪ್ರವಾಹದಲ್ಲಿದ್ದು ತಪಸ್ಸು ಮಾಡುವುದು
ಬೆಳ್ಕುಱು ೫ – ೧೪ ಭಯಪಡು
ಬೇವಸ ೧೨ – ೭ ವ ಚಿಂತೆ
ಬೇೞ್ಕುಮೆ ೧೧ – ೧೮ ಬೇಕೇ
ಬೊಡ್ಡಣವಾವಿ ೧೧ – ೩೪ ಜಲಕ್ರೀಡೆಯಾಡುವ ಕೊಳ
ಬೊಮ್ಮೇತಿ ೧೦ – ೩೭ ವ ಬ್ರಾಹ್ಮಣನ ಕೊಲೆ

ಭೈತ್ರ ೩ – ೧೮ ಹಡಗು, ತೆಪ್ಪ

ಮದಿಲ್ ೭ – ೨೯ ವ ಗೋಡೆ
ಮಱೆವಾೞ್ ೩ – ೩೫ ವ್ಯಭಿಚಾರ
ಮಾಮಿಚಟ್ಟ ೧೨ – ೧ ಭವರತ್ನಪರೀಕ್ಷಕ (?)
ಮುಂಗುಡಿ ೧೧ – ಮುಂಗಟ್ಟು
ಮೆೞ್ಪಡು ೧ – ೧೭ ವ ಭ್ರಾಂತಿಪಡು

ಲಾ

ಲಾವಗೆ ೧ – ೨೯ ಒಂದು ಬಗೆಯ ಹಕ್ಕಿ

ವಿತ್ತೆ ೧೦ – ೯ ವ ವ್ಯರ್ಥ
ವೇಳೆವಡಿಚ ೧ – ೨೪ವ ಊಳಿಗದವ

ಸಾವನಿಗ ೧೧ – ೪೧ವ ಚಿತ್ರಗಳನ್ನು ಬರೆದು ಮಾರುವವ (?)

 

ಹರಿವಂಶಾಭ್ಯುದಯಂ

(ಸಂಖ್ಯೆಗಳು ಆಶ್ವಾಸ ಮತ್ತು ಪದ್ಯಸಂಖ್ಯೆಯನ್ನು ಸೂಚಿಸುತ್ತವೆ)

ಅಂಕಿಸು ೧೨ – ೫೫ ಗುರುತುಮಾಡು
ಅಂಬಳಿಕ್ಕು ೬ – ೯ವ ಅಂಬೆಗಾಲಿಕ್ಕು
ಅಂಬೇಱು ೫ – ೧೯ವ, ೧೨ – ೨ವ ಬಾಣದ ಹೊಡೆತ
ಅಕ್ಕಳೆ ೩ – ೫೧ ಹೆಂಗಸು (?)
ಅಕ್ಕುಳಿಸು ೨ – ೧೪ ಒಳಕ್ಕೆ ಇಳಿ, ಕುಗ್ಗು
ಅಖಲ್ಯ ೯ – ೨೦ವ, ೧೨ – ೫ ಹೇಡಿ
ಅಗರು ೪ – ೫ ಸುಗಂಧದ್ರವ್ಯ
ಅಗಿ ೧೨ – ೨೨ವ ಹೆದರು, ಅಂಜು
ಅಗುಣಿ ೧೨ – ೫೧ ತಾಳು, ಅಗಣಿ
ಅಗ್ಗಾಯಿಲೆ ೩ – ೫೦ವ, ೩ – ೫೩ವ ಸೂಳೆ
ಅಗ್ಗುರಿ ೬ – ೪೦ ಅಧಿಕವಾದ ಉರಿ (?)
ಅಘಪಡು ೪ – ೨೮, ೧೧ – ೬೨ವ ದುಃಖಕ್ಕೆ ಒಳಗಾಗು, ಕಷ್ಟಪಡು
ಅಚ್ಚಿಗೆ ೩ – ೩೮ ತೀವ್ರವಾದ ವ್ಯಥೆ
ಅಚ್ಚಿಗಂಗೊಳ್ ೧೧ – ೧೪ ಅಶ್ವರ್ಯಪಡು
ಅಚ್ಚು ೮ – ೫೦ವ <ಅಕ್ಷ, ಇರಚಿ
ಅಡಂಗೊತ್ತು ೬ – ೬ವ ಅಡಗುವಂತೆ ಅದುಮು
ಅಡಕುದುರೆ ೭ – ೬೧ ಅಡ್ಡ ಕುದುರೆ (?)
ಅಡಗಿಂಡೆ ೮ – ೧೨ ಮಾಂಸದ ಮುದ್ದೆ
ಅಡಪ ೧೪ – ೨ ಎಲೆ ಅಡಕೆ ಚೀಲ
ಅಡುಱ್ ೧೨ – ೨ ಕವಿ, ಆಕ್ರಮಿಸು
ಅಡುಱ್ ೧ – ೫೮,೭ – ೫೪ ವ್ಯಾಪಿಸು
ಅಣಲ್ ೩ – ೫೬ ಅಂಗುಳು
ಅಣಿ ೮ – ೨೬ವ ಕಾಲಾಳು, ಪದಾತಿ
ಅಣಿ ೯ – ೧೯ ಮನೋಹರ
ಅಣಿಯರ ೨ – ೧೨ ಸಡಗರ
ಆಣ್ಕೆ ೩೭ ಲೇಪನ, ಬಳಿತ
ಅಣ್ಣಲೆ ೧೧ – ೭೧ವ, ೧೧ – ೬೩ ‘ದೊರೆ’ ಎಂದು ಹೀಯಾಳಿಸಿ ನುಡಿಯುವ ಮಾತು (?)
ಅಣ್ಣಲೆಗ ೧೧ – ೧೨ ಅಣ್ಣಲೆ, ರಾಜ (?)
ಅತ್ತಪರ ೨ – ೫೭ವ, ೪ – ೧೧ವ ಗುರಾಣಿ
ಅದವೞಲ್ ೭ – ೮ವ ದುಃಖ
ಅದಿರ್ಮುತ್ತೆ ೫ – ೬ವ ಮಾಧವಿ ಹೂವು
ಅದಿಲ್ಯ ೧೨ – ೫ (?)
ಅದ್ದ ೧೨ – ೬೨ ಅರ್ಧ
ಅಧವ ೮ – ೧೦ ಅಂಗಹೀನ
ಅಧಿವಾಸಿಸು ೬ – ೩೫ವ ದೇವತಾವಿಗ್ರಹವನ್ನು ಪ್ರತಿಷ್ಠಿಸುವ ಮೊದಲು ಧಾನ್ಯ, ನೀರು ಮೊದಲಾದವುಗಳಲ್ಲಿ ನೆಲೆಗೊಳಿಸು
ಅನ್ನವೃತ್ತಿ ೧೧ – ೩೦ವ ಅಂತಹ ಕೆಲಸ
ಅನ್ಯತ್ವ ೪ – ೧೫ವ ಅನುಪ್ರೇಕ್ಷೆಗಳಲ್ಲಿ ಒಂದು
ಅಪಪ್ರಥೆ ೭ – ೭೫ವ ಅಪವಾದ, ನಿಂದೆ
ಅಪ್ಪೈಸು ೧ – ೩೪ವ, ೪ – ೧೦ವ ೪ – ೧೩ವ ಒಪ್ಪುವಂತೆ ಮಾಡು, ಒಪ್ಪಿಸು
ಅಯ್ಕಿಲ್ ೧೪ – ೧೪ ಚಳಿ, ಶೀತ
ಅರಗೊಟ್ಟಿಂಗ ೨ – ೧೧ವ (?)
ಅರಿಂಜಯ ೧೨ – ೪೯ ಹಗೆಗಳನ್ನು ಗೆಲ್ಲುವವನು
ಅರಿಸಾಧನ ೭ – ೬೧ ಶತ್ರುವಿನಾಶಕ
ಅರುವಂಗ ೨ – ೩೨ವ (?)
ಅರ್ಕಱ್ ೩ – ೪೫, ೩ – ೬೩ ಅಕ್ಕರು, ಪ್ರೀತಿ
ಅರ್ಕಾಡು ೪ – ೪ವ, ೭ – ೬೩ವ ನಾಶವಾಗು
ಅರ್ಗು ೪ – ೧೫ ಅೞ್ಗು, ಮುಳುಗು, ನಾಶವಾಗು
ಅರ್ಚನೆ ೭ – ೭೨ವ, ೮ – ೬೪ವ, ೧೩ – ೪೫ವ ಪೂಜಾಸಾಮಗ್ರಿ
ಅರ್ಜುನ ೭ – ೭, ೯ – ೨೦ವ ಮತ್ತಿಯ ಮರ
ಅರ್ಥಿಗ ೧೦ – ೩೨ವ ಬಯಸುವವನು
ಅರ್ವಿ ೧೧ – ೨೪ವ ಬೆಟ್ಟದಿಂದ ಬೀಳುವ ನದಿ
ಅರ್ವಿಸು ೨ – ೧೭ ಅಧಿಕವಾಗು
ಅಲಂಪು ೨ – ೩ ಸೊಗಸು, ಸೌಂದರ್ಯ, ಪ್ರೀತಿ
ಅಲಕ್ತಕ ೩ – ೩೬ವ ಅರಗು
ಅಲತೆಗೆ ೩ – ೯ವ ಅರಗು
ಅಲತೆ ೪ – ೪ ಅರಗು, ಮಸಿ (?)
ಅಲವಲಿಸು ೨ – ೧೫ ಆಸೆಪಡು, ಹಾತೊರೆ
ಅವಟಯಿಸು ೩ – ೭೨ವ ಒಪ್ಪಿಸು
ಅವತಂಶ ೨ – ೪೧ವ ಕಿವಿಯ ಆಭರಣ
ಅವಷ್ಟಂಭ ೧೧ – ೭೨ವ ಆಶ್ರಯ
ಅಷ್ಟಾಪದ ೨ – ೩೮ವ ಶರಭ
ಅಸಗ ೬ – ೪೨ ಅಸಗ
ಅಸಿಧಾರಾವ್ರತಿ ೪ – ೩೦ ಕತ್ತಿಯ ಅಲಗಿನ ಮೇಲೆ ನಡಯುವ ವ್ರತದವನು
ಅಸಿಪಂಜರ ೧೧ – ೭೭ ಅಲಗಿನ ಪಂಜರ
ಅಸುಂಗೊಳ್ ೮ – ೨೭ವ ಪ್ರಾಣವನ್ನು ತೆಗೆ
ಅಸುಂಗೊಳ್ ೧೦ – ೪೨ವ ಹೆದರು, ಭಯಪಡು
ಅಸುವೆ ೧೦ – ೧೦ ಅರೆಯುವ ಕಲ್ಲು
ಅಸೃಗ್ಜಳ ೧೨ – ೬೫ ರಕ್ತದ ನೀರು
ಅಳವಿಗ ೫ – ೧೭ ಪರಾಕ್ರಮಿ
ಅಳರಛ್ ೮ – ೪೭ ಭಯ
ಅಳಿಪಳಿ ೧೧ – ೧೦೫ ಕೆಟ್ಟ ದೂರು, ಕೆಲಸಕ್ಕೆ ಬಾರದ ಮಾತು
ಅಳೀಕ ೨ – ೩೫ವ ಮೋಸ
ಅಳುಂಬ ೩ – ೫೩, ೪ – ೨೫ ಅತಿಶಯ
ಅಳುಱು ೩ – ೬೩ ಆವರಿಸು
ಅಳುರ್ಕೆ ೩ – ೬೩, ೫ – ೧೨ ಆಧಿಕ್ಯ, ಶಕ್ತಿ
ಅಳೆ ೧೦ – ೧೦ ಅಳತೆ ಮಾಡು (?)
ಅಳ್ಳಿಱಿ ೩ – ೫೮ ಚುಚ್ಚು, ತಿವಿ
ಅಱುಂಬುಗಱೆ ೬ – ೨೪ವ ೬ – ೨೮ ಉತ್ಪಾತವೇ ಮೊದಲಾದ ದೋಷನಿವಾರಣೆಗಾಗಿ ಗೋವಿನಿಂದ ಹಾಲು ಕರೆ (?)
ಅಱಗಂಡಿ ೧೨ – ೩ ಯುದ್ಧ ಮಾಡುವವನು ತಪ್ಪಿಸಿಕೊಳ್ಳಲು ಇರುವ ಅವಕಾಶ
ಅಱಗೆಱೆ ೧ – ೧೮ವ ಬತ್ತಿಹೋಗದ ಕೆರೆ
ಅಱವಳ ೧೨ – ೫೧ (?)
ಅಱಿಯಮಿಕ್ಕೆ ೯ – ೨ ಅಜ್ಞಾನ
ಅಱುನೀರ್ ೧೦ – ೧೧ ಬತ್ತಿದ ನೀರು
ಅೞಿಗೆಯ್ತ ೧೧ – ೪೨ವ ನೀಚ ಕೆಲಸ
ಅೞ್ಕಾಡಿಸು ೩ – ೭೧ ನಾಶಗೊಳಿಸು

ಆಟವಿಕ ೧೧ – ೫೩ವ ಅಡವಿಯಲ್ಲಿ ವಾಸ ಮಾಡುವವ, ಬೇಡ
ಆಟಿಸು ೧ – ೫೭ ಬಯಸು
ಆಡಪೋರಿ ೪ – ೩೩ವ ಗಂಡಾಡು, ಹೋತ
ಆತಾಮ್ರ ೭ – ೨೧ ಹೆಚ್ಚಾದ ಕೆಂಪು
ಆದಮಾನುಂ ೧೨ – ೨೬ವ ವಿಶೇಷವಾಗಿ
ಆಯತನ ೧ – ೨೩ವ ಮನೆ
ಆಯತಿ ೭ – ೬೮ ಸಾಮರ್ಥ್ಯ
ಆರವೆ ೧೪ – ೨೯ವ ಉದ್ಯಾನವನ
ಆರು ೨ – ೩೮ ವ ನೀರುಹಲಸು
ಆವಣ ೧ – ೨೪ ಅಪಣ, ಅಂಗಡಿ
ಆವರ ೧ – ೨೪ ಅಲ್ಲಿಯವರೆಗೆ
ಆಳಂಬಿತ ೧ – ೧೭ವ ಜೋಲುಬಿಟ್ಟ, ಇಳಿಬಿಟ್ಟ
ಆಱೆನುಡಿ ೭ – ೮೧ವ ಸಮಾಧಾನ ಹೇಳು
ಆೞ್ ೩ – ೮ವ ೯ – ೩೪ವ ಮುಳಗು

ಇಂಡೆಯಾಡು ೧೪ – ೯ವ ಎಸೆದಾಡು, ತೂರಾಡು
ಇಂಬುಮಾಡು ೬ – ೫೮ವ ಕ್ರಮಪಡಿಸು
ಇಚ್ಛಾಕಾರಂಗೆಯ್ ೪ – ೨೯ವ ಸತ್ಕರಿಸು, ಆದರಿಸು
ಇಟ್ಟಳ ೩ – ೧೭, ೫ – ೯, ೮ – ೭೦ವ, ೯ – ೮೩ ಸುಂದರ, ನಿಂದೆ, ಅಧಿಕ್ಯ
ಇದ್ಧ ೭ – ೭೯ ಪ್ರಖರವಾದ
ಇಬ್ಬಕುಳ ೩ – ೩ವ ಇಭ್ಯಕುಲ, <ವರ್ತಕ ವಂಶ
ಇರ್ಕುಳಿ ೨ – ೩೧, ೩ – ೩೧ ಸೆಳೆತ, ಆಕರ್ಷಣೆ
ಇರ್ಪ್ಪೋಡು ೧೧ – ೩೪ ದ್ರವವು ಇಂಗಿಹೋಗು
ಇರ್ವೀಡು ೨ – ೩೮ವ ಶಿಂಶುಪವೃಕ್ಷ
ಇಱಿಮುಱಿ ೧೧ – ೧೨ವ ಚೂರುಚೂರು

ಈರ್ಯಾಪಥ ೧೧ – ೨ವ ಪರ್ಯಟನದ ದಾರಿ

ಉಂತು ೭ – ೭೦ ಮಧ್ಯದ ರೀತಿ
ಉಂತೆ ೧೧ – ೬೬ವ ನಿಷ್ಕಾರಣ
ಆಸು ೨ – ೩೮ವ ಆಚದ ಮರ
ಉಂಬಲ ಕುಷ್ಠ ೧೩ – ೩೪ ಒಂದು ವಿಧವಾದ ಕುಷ್ಠರೋಗ
ಉಕ್ಕಲಿಸು ೮ – ೬೮, ೧೧ – ೨೪ವ ಕೊಬ್ಬು, ಹೆಚ್ಚು
ಉಕ್ಕೆವ ೮ – ೭೬ವ ಮೋಸ
ಉಗಿ ೫ – ೧೪ವ, ೧೦ – ೩೧ವ, ೧೧ – ೧೦೬ ಹೊರಕ್ಕೆಳೆ, ಸೆಳೆ, ಚಿಮ್ಮು
ಉಗುಣಿ ೧೧ – ೧೨ ಒಂದು ಜಾತಿಯ ಮರದ ಕಡ್ಡಿ, ಉಗುಣಿಬಳ್ಳಿ
ಉಜ್ಜುಗ ೧೩ – ೧೮ವ ಉದ್ಯೋಗ, ಕಾರ್ಯ
ಉಡುಪಾನನೆ ೧ – ೪೬ ಚಂದ್ರಮುಖಿ
ಉಡುಪಾಸ್ಯೆ ೭ – ೨೫ ಚಂದ್ರಮುಖಿ
ಉಡ್ಡಿಸು ೧೧ – ೯೨ ಪ್ರತಿಭಟಿಸು
ಉತ್ತರಿಸು ೧೨ – ೩೩ವ ಅತಿಕ್ರಮಿಸು
ಉದಾತ್ತವಚನ ೩ – ೫೪ವ ಒಂದು ಕಾವ್ಯಾಲಂಕಾರ
ಉದ್ಗಮ ೧ – ೩೪ ಏರಿಕೆ
ಉಪರೋಧಿಸು ೧೦ – ೩೭ವ, ೧೦ – ೪೨ವ ಬಲತ್ಕಾರ ಮಾಡು
ಉಪಲಕ್ಷಿಸು ೩ – ೮ವ, ೩ – ೪೭ವ ಗುರುತಿಸು
ಉಪಳ ೧೧ – ೨೯ವ ಶಿಲೆ, ಬಂಡೆ
ಉಪೇಂದ್ರ ೭ – ೭೧ ಕೃಷ್ಣ
ಉಪ್ಪಟ ೧೪ – ೫೫ವ ಉತ್ತಮವಾದ ವಸ್ತು
ಉಪ್ಪಯೋಗ ೪ – ೩೪ (?)
ಉಪ್ಪವಡಿಸು ೧೪ – ೪೬ವ ನಿದ್ರೆಯಿಂದ ಎಚ್ಚರಗೊಳ್ಳು
ಉಬ್ಬೆಗ ೫ – ೨೧ವ, ೮ – ೮ವ ಉದ್ವೇಗ, ದುಃಖ
ಉಮ್ಮನೆ ೯ – ೧೦ ಬಿಸಿಬಿಸಿಯಾಗಿ
ಉಮ್ಮಳಿಸು ೪ – ೧ವ ದುಃಖಿಸು
ಉಮ್ಮಳಿಸು ೧೧ – ೧೧೨ ಕುದಿಮ ತವಕಿಸು
ಉರುಗುರ ೪ – ೫, ೧೦ – ೧೦ ಅಮೇಧ್ಯ, ಮಲ
ಉರ್ಚು ೧೪ – ೫೨ ಕೀಳು, ಹೊರಕ್ಕೆತೆಗೆ
ಉರ್ವಿನಂ ೬ – ೧೨ವ, ೬ – ೧೫ವ ಅತಿಶಯವಾಗಿ
ಉಳಿನಯ ೨ – ೮ ಮೋಸದ ನಯ
ಉಲ್ಲಟಿಸು ೧೧ – ೧೬ವ ಹೊರಳಾಡು
ಉಳ್ಕು ೫ – ೧೯ವ ಕುಗ್ಗು
ಉಱುಮಾಱು ೪ – ೨೩ವ ವಕ್ರತೆ, ಬಳಸಿಹೇಳು