ಪಂಗಾಗೆ ೨ – ೩೮ವ ಒಂದು ಜಾತಿಯ ಕಾಗೆ
ಪಂಚತ್ವ ೧೨ – ೨೯ ಸಾವು
ಪಂಚರಾಯಿತ ೧೦ – ೩೦ ವ (?)
ಪಂಚವಳ್ಳಿ ೮ – ೬೧ ಒಂದು ಜಾತಿಯ ಬಳ್ಳಿ
ಪಂದಲೆ ೨ – ೧೭ ಆಗತಾನೆ ಕತ್ತರಿಸಿದ ತಲೆ
ಪಚ್ಚು ೧೨ – ೬೧ ಎರಡುಭಾಗ ಮಾಡು
ಪಟಳಕ ೧೩ – ೨೮ವ ಬುಟ್ಟಿ, ತಟ್ಟೆ
ಪಟ್ಟಂದ ೧೧ – ೧೨ವ ರೀತಿ, ಸ್ಥಿತಿ (?)
ಪಟ್ಟಿ ೧೩ – ೨೨ವ ಕೊಟ್ಟಗೆ
ಪಟ್ಟಿಸ ೧೧ – ೫೦ವ ಬೆಲೆಬಾಳುವ ವಸ್ತ್ರ (?)
ಪಡಡಕ್ಕೆ ೭ – ೭೨ ಮದ್ದಲೆ
ಪಡಲಿಗೆ ೯ – ೧ವ ಪಟಲಕ (ತ್ಸ), ಚಿಬ್ಟುಲು
ಪಡಿ ೬ – ೫ವ ಬಾಗಿಲು
ಪಡಿಯಱ ೯ – ೬ವ ಬಾಗಿಲು ಕಾಯುವವನು
ಪಡುಕೆ ೩ – ೧೬ ಪಡೆಯುವುದು, ಹೊಂದುವುದು
ಪಡುಕೆನಾಱು ೧೩ – ೩೪ ದುರ್ನಾತ ಹೊಡೆ
ಪಡೆಪು ೮ – ೫೦ವ ಹೊಂದಿದುದು, ಪಡೆದದ್ದು
ಪಡೆವಳ ೧ – ೨೭ವ ಸೇನಾಧಿಪತಿ
ಪಣ್‌ ೬ – ೪೫ವ, ೮ – ೭೭ ಸಜ್ಜುಗೊಳಿಸು
ಪಣ್ಣುಗೆ ೫ – ೨ವ ಸಜ್ಜು
ಪತ್ತುವಿಡು ೧೪ – ೨೭ವ ಕೂಡಿದ್ದನ್ನು ಬಿಡು
ಪದ ೧೧ – ೪೨ ವ ಹದ, ರೀತಿ
ಪದವಿಡಿ ೨ – ೪೩ ಬೆದೆಯ ಹೆಣ್ಣಾನೆ
ಪನ್ನತ ೬ – ೫೫, ೮ – ೬ ಶೂರ, ಪರಾಕ್ರಮಿ
ಪಯ್ಯರ್‌ ೧೨ – ೫೮ ಬಾಲಕರು
ಪರಕಲಿಸು ೫ – ೫ವ ಹರಡು
ಪರತ್ರೆ ೧ – ೫೭, ೧೧ – ೧೦೦ ಪರಲೋಕ
ಪರಿ ೧೧ – ೬೨ವ ಕೊರಕಲು
ಪರಿಪಾಡಿ ೨ – ೫೯ ಪರಿಪಾಟಿ, ಕ್ರಮ
ಪರಿಪಾಱು ೯ – ೬೯ ನಿರೀಕ್ಷಿಸು
ಪರೇತವನ ೨ – ೧೦ವ ಶ್ಮಶಾನ
ಪಲಗೆ ೩ – ೭೦ವ ಹಲಗೆ, ಆಟ
ಪಲ್ಲಣ ೪ – ೩೪ವ ಪಲ್ಯಯನ, ಜೀನು
ಪವಣ್ ೨ – ೩೨ ಪ್ರಮಾಣ
ಪಶ್ಚಿಮ ೧೨ – ೬೨ ಬೆನ್ನು, ಹಿಂಭಾಗ
ಪಸ ೯ – ೪೧ವ ಬಯಕೆ, ಆಸೆ
ಪಸದನ ೧ – ೪೩, ೭ – ೭೪ವ ಅಲಂಕಾರ, ತೊಡಿಗೆ
ಪಸರ ೫ – ೫ವ ಅಂಗಡಿ
ಪಸುಗೆ ೯ – ೫೨ವ ಹಂಚಿಕೆ, ವಿಧಾನ
ಪಸೆ ೫ – ೨೨ವ, ೫ – ೪೪ ಹಸೆ, ಪೀಠ, ಆಸನ
ಪಳಂಕು ೩ – ೧೮ ಗಾಢಸ್ಪರ್ಶನ, ಬಲವಾಗಿ ಒತ್ತು
ಪಳಕು ೪ – ೧೫ವ ಜರ್ಜರಿತವಾಗು
ಪಳಚ್ಚನೆ ೨ – ೩೮ ಪ್ರಕಾಶಮಾನವಾಗಿ
ಪಳಿತ ೧೩ – ೪೫ವ ಒಂದು ನಿಗದಿಯಾದ ಕಾಲ
ಪಳುಕು ೩ – ೧೧ವ ಸ್ಫಟಿಕ
ಪಱೆಯ ೫ – ೧೪, ೧೫, ೫ – ೧೫ವ ತಮಟೆ ಬಾರಿಸುವವನು (?)
ಪೞಗ ೫ – ೧೨ವ
ಪೞಯಿಗೆ ೧೧ – ೬೨ವ ಬಾವುಟ
ಪೞಹ ೫ – ೧೨ವ ಪಟಹ, ತಮಟೆ
ಪೞಿ ೨ – ೧೮ವ, ೪ – ೩೬ವ, ೮ – ೭೮ ಬಟ್ಟೆ, ನಿಂದೆ, ಅಪಖ್ಯಾತಿ
ಪೞೆ ೧೨ – ೭ವ ಹಳೆಯ (?)
ಪಾಂಗು ೩ – ೪೪, ೮ – ೪೮ ರೀತಿ
ಪಾಗುಡ ೯ – ೫೯ವ ಉಡುಗೊರೆ
ಪಾಟಳ ೯ – ೧೦೪ ಪಾದರಿಹೂವು
ಪಾಠಕಾಱ ೫ – ೫ವ ಹೊಗಳುಭಟ್ಟ
ಪಾರಸಿಗ ೪ – ೩೫ವ ಪಾರಸಿ ದೇಶದವನು
ಪಾರಿಸು ೫ – ೩೪, ೫ – ೩೫ವ ಉಪವಾಸವ್ರತ ಮುಕ್ತಾಯ ಮಾಡು
ಪಾರ್ವಂತಿ ೧ – ೫೧ವ ಬ್ರಾಹ್ಮಣರ ಹೆಂಗಸು
ಪಾವುಗೆ ೮ – ೨೯ವ ಮರದ ಮೆಟ್ಟು
ಪಾಸೆ ೨ – ೩೮ವ ಹಗ್ಗ (?)
ಪಾಱುಂಬಳೆ ೧೧ – ೧೦೪ವ ಚಕ್ರ
ಪಾೞೂವಳಿ ೯ – ೬ವ (?)
ಪಾೞಿ ೧ – ೧೮ವ, ೯ – ೫೨ವ ಸಾಲು, ಕ್ರಮ
ಪಾೞಿಕಾಱಿ ೧೪ – ೧೬ವ ಸರದಿಯ ಸೇವಕ
ಪಿಂಜರಿತ ೧ – ೧೭ವ ಕೆಂಪುಮಿಶ್ರ ಹಳದಿ
ಪಿಂಡಿವಾಳ ೧೧ – ೧೧೪ವ, ೧೨ – ೬೩ವ ಬಿಂಡಿವಾಳ, ಒಂದು ವಿಧದ ಆಯುಧ
ಪಿಡಿಕುತ್ತು ೫ – ೪೧ ಬಲವಾಗಿ ಚುಚ್ಚು, ತಿವಿ
ಪಿಣಿಲ್‌ ೪ – ೪೩ವ ಕೂದಲ ಗಂಟು
ಪಿನದ್ಧ ೮ – ೧೪ ತೆತ್ತಿಸಿದ
ಪಿಸುಣ್‌ ೮ – ೭೪ ಚಾಡಿ, ದೂರು
ಪುಗುಳ್‌ ೧೪ – ೨೮ ಬೊಕ್ಕೆ, ಬೊಬ್ಬೆ
ಪುಣ್ಚು ೧೧ – ೪೫ ಪ್ರತಿಜ್ಞೆ ಮಾಡಿಸು
ಪುದುವಾೞು ೩ – ೩೪ ಕೂಡಿಬಾಳು
ಪುದುವಿರು ೧ – ೨೯ವ ಕೂಡಿರು
ಪುಯ್ಯಲ್‌ ೫ – ೩೧ವ ಕೂಗಾಟ
ಪುಯ್ಯಲಿಗ ೧೧ – ೪೨ವ ಸಾರುವವನು, ಗಟ್ಟಿಯಾಗಿ ಕೂಗುವವನು
ಪುಯ್ಯಲ್ಚು ೪ – ೧೯ವ ಗಟ್ಟಿಯಾಗಿ ಕೂಗು, ಗೋಳಿಡು
ಪುಱ್ಪ ೫ – ೬ವ ಪುಷ್ಪ
ಪುಳ್ಳಿವೇಡ ೯ – ೧೬ ಕ್ಷುದ್ರಬೇಡ
ಪೂಣ್‌ ೮ – ೩ವ ಪ್ರತಿಜ್ಞೆ
ಪೂಣಿ ೩ – ೬೧ ಪ್ರತಿಜ್ಞೆ ಮಾಡಿದವನು
ಪೂಣಿಕೆ ೩ – ೬೧ ಪ್ರತಿಜ್ಞೆ
ಪೂವಲಿ ೩ – ೮ವ ಹೂವುಗಳಿಂದಾದ ಅಲಂಕಾರ, ಹೂವುಗಳ ರಂಗವಲ್ಲಿ
ಪೆಪ್ಪಳಿಸು ೬ – ೧೮ವ ನಡುಗು, ತಲ್ಲಣಗೊಳ್ಳು
ಪೆರ್ಮದಿಲ್‌ ೧ – ೪೭ ದೊಡ್ಡ ಗೋಡೆ
ಪೆಳದು ೭ – ೬೪ ಪೆಳರ್ದು, ಭಯ (?)
ಪೆಳಱು ೫ – ೧೮ವ, ೬ – ೧೬ ಭಯ
ಪೆಳ್ಪಳಿಸು ೧೧ – ೨೭ ಹೆದರು
ಪೞಕು ೭ – ೬೭ ಜಗಳ
ಪೇನಿ ೨ – ೧೧ವ ಪಿಶಾಚಿ (?)
ಪೇಪಂದಿ ೪ – ೪ವ ಹೇಲು ತಿನ್ನುವ ಹಂದಿ
ಪೇಸೇೞು ೧೧ – ೪೨ವ, ೧೨ – ೬ವ ಜುಗುಪ್ಸೆಪಡು, ಅಸಹ್ಯಪಡು
ಪೊಂಕ ೧೧ – ೧೫ ವರ್ಗ, ಅಹಂಕಾರ
ಪೊಂಕು ೧೩ – ೩೧ವ ಹೊಡೆ, ಬಡಿ (?)
ಪೊಂಗು ೭ – ೩೬, ೮ – ೧೩ ಉಕ್ಕು, ಹೊರಹೊಮ್ಮು
ಪೊಗರ್ತೆ ೮ – ೫೨ವ ಹೊಗಳಿಕೆ
ಪೊಚ್ಚಱು ೧೦ – ೩೪, ೧೨ – ೪೩ ಸ್ಫುರಿಸುವಿಕೆ, ಪರಾಕ್ರಮ, ಶಕ್ತಿ
ಪೊಡಲ್‌ ೬ – ೪೫ವ ನಡುಗು
ಪೊಡರ್ಪು ೮ – ೫, ೧೩ – ೨೦, ೧೪ – ೩೧ ಕಳೆ, ಕಾಂತಿ, ಶಕ್ತಿ
ಪೊರಸು ೬ – ೯ವ ಮಂಚ
ಪೊರಳ್ಕೆ ೪ – ೩೭ವ ತೊಳಲಾಟ
ಪೊರೆಪು ೬ – ೪೬ ಪಡೆಪು (?)
ಪೊಱಂಡ ೯ – ೨೬ ವಿಕೃತವಾದ ದೇಹವುಳ್ಳವನು?
ಪೊಱಮಾಱು ೧೨ – ೪೧ ಹಿಂದೆಗೆ, ಪಲಾಯನ
ಪೊಱಸು ೨ – ೩೮ವ, ೧೧ – ೨೬ ಒಂದು ಬಗೆಯ ಪಾರಿವಾಳ, ಕಪೋತ
ಪೋೞಲ್‌ ೫ – ೩೩ವ ಮರದ ಪೊಟರೆ
ಪ್ರತ್ಯಾಖ್ಯಾನ ೧೦ – ೩೦ವ ತಿರಸ್ಕಾರ, ದೂರೀಕರಿಸುವಿಕೆ
ಪ್ರಮಾದವಲಗೆ ೪ – ೧೪ವ ಜೀವರಕ್ಷಕ ಹಲಗೆ
ಪ್ರಸಾಧನ ೬ – ೨೮ವ ಉಡುಪು
ಪ್ರಾಶ್ನಿಕ ೨ – ೩೨ವ ತೀರ್ಪುಗಾರ

ಬಂಚಿಸು ೨ – ೬ವ, ೩ – ೩೩ ವಂಚಿಸು
ಬಂಧುರಾಯಿಕ ೧೧ – ೧೧೭ವ (?)
ಬಕ್ಕುಡಿ ೯ – ೬೭ವ ತಳಮಳ, ಭಯ
ಬಟ್ಟಡು ೨ – ೩೮ವ (?)
ಬಡ್ಡಿಸು ೯ – ೨೭ವ ಬಡಿಸು
ಬಣರುಡೆ ೯ – ೧೪ (?)
ಬದ್ದು ೩ – ೬೧ ಪ್ರೌಢಿಮೆ
ಬದ್ಧೆ ೩ – ೪೮ ಪ್ರೌಢೆ
ಬರ್ದೆ ೩ – ೫೪ ಪ್ರೌಢೆ
ಬನ್ನ ೪ – ೧೪ವ, ೧೪ – ೪೮ ಭಂಗ
ಬರಿ ೪ – ೨೨ವ ಪಕ್ಕೆಲುಬು
ಬಲ್ಕಣಿ ೬ – ೫೦ವ, ೭ – ೬೭ ಶೂರ
ಬವಣಿಗೆ ೧ – ೩೯ವ ಪರಿಬವಣಿಗೆ, ಸಂಚಾರ
ಬಸ ೬ – ೧೭ವ, ೮ – ೪೨ ಸಾಧ್ಯ, ಶಕ್ಯ
ಬಸನ ೧೦ – ೧೯ ವ್ಯಸನ
ಬಸನಿ ೩ – ೪೮, ೧೧ – ೨೪ವ ವ್ಯಸನಿ
ಬಸನೆ ೩ – ೬೮ (?)
ಬಸಿರ್ಪೂಸು ೯ – ೫ವ, ೯ – ೯, ೧೩ – ೭ ಹೊಟ್ಟೆಯನ್ನು ಮುಟ್ಟು (?)
ಬಹಿರಿಗೆ ೪ – ೪೧ವ, ೯ – ೫ವ ಬಯಲು ಪ್ರದೇಶ
ಬಹುಳ ೧೦ – ೩೨ವ ಹೆಚ್ಚು, ಪ್ರವೀಣ
ಬಳಾರಿ ೬ – ೫ವ ಒಂದು ದೇವತೆ
ಬಳ್ಳಿಮಾಡ ೪ – ೪೪ ಲತಾಗೃಹ
ಬಳ್ಳು ೬ – ೮ ನರಿ
ಬಱುಳಿ ೨ – ೩೮ವ ಒಂದು ಜಾತಿಯ ಹಕ್ಕಿ (?)
ಬೞಿಕಾಱಿ ೧೦ – ೨೪ ಅತಿಥಿ (?)
ಬಾಗೆ ೮ – ೫೨ ಒಂದು ಜಾತಿಯ ಮರ, ಶಿರೀಷ
ಬಾಜಿಸು ೫ – ೩೨ನ ನುಡಿಸು, ಬಾರಿಸು
ಬಾಯ್ಕೇಳಿಸು ೧೨ – ೭೩ವ ಅಜ್ಞಾಧೀನನ್ನಾಗಿ ಮಾಡು
ಬಾರಸ ೨ – ೩೩ (?)
ಬಾರಿಸು ೧೦ – ೨೫ ತಡೆ
ಬಾಸಿಗ ೬ – ೩೫ವ ಹಾರ, ಮಾಲೆ, ದಂಡೆ
ಬಿಗುಱು ೮ – ೨೭ವ, ೧೪ – ೩೩ ಹೆದರು
ಬಿದಿರ್ಚು ೪ – ೩ವ, ೬ – ೫೪ ಹರಡು
ಬಿನ್ನಣಿ ೫ – ೧೫ ಚತುರ, ನಿಪುಣ
ಬಿನ್ನನೆ ೧೨ – ೨೫ ಬಿನ್ನಗೆ, ಸುಮ್ಮನೆ, ಮೌನವಾಗಿ
ಬಿರ್ದು ೨ – ೧೧ವ, ೮ – ೩೫ವ ಔತಣ
ಬಿಲ್ಲು ೨ – ೩೮ವ ಒಂದು ಜಾತಿಯ ಮರ
ಬಿಸಸನ ೧೧ – ೪೧ ಫಾತಿಸುವುದು, ಹೊಡೆತ
ಬಿಳಿಲು ೨ – ೩೮ವ ಒಂದು ಜಾತಿ ಮರ
ಬೀವು ೩ – ೨೨, ೯ – ೬೮ವ ಒಂದು ವಿಧದ ಮಣ್ಣಿನ ಪಾತ್ರೆ
ಬೀಸರ ೩ – ೧೮ ಅಳಿಸಿಹೋಗು, ಹಾಳಾಗು
ಬುಡುಕೆ ೧೧ – ೨೧ (?)
ಬೂತು ೧೨ – ೩೧ವ ಸೇವಕ, ಸುದ್ದಿಗಾರ (?)
ಬೆಗಡು ೬ – ೧೮ವ ಭಯ
ಬೆಗೞ್‌ ೧೪ – ೪೫ ಭಯಪಡು
ಬೆನ್ನೀರು ೧೨ – ೫೨ವ ಬಿಸಿನೀರು
ಬೆಬ್ಟೆ ೪ – ೧೨ ಕಳವಳ, ಗಾಬರಿ
ಬೆಸಲ್‌ ೬ – ೩ವ ಪ್ರಸವಿಸು, ಹೆರು
ಬೆಳರ್ಗತ್ತೆ ೫ – ೫ ಬಿಳಿಯಕತ್ತೆ
ಬೆಳ್ಕಱು ೧೪ – ೩೭ವ ಭಯ
ಬೆಳ್ಗತ್ತೆ ೧೩ – ೩೪ವ ಬಿಳಿಯ ಕತ್ತೆ
ಬೆಳ್ಕುಱು ೯ – ೩೦, ೧೧ – ೩೧ವ, ೧೩ – ೧೭, ಭಯ
ಬೆಳ್ಮಾಡು ೩ – ೩೦ವ ಮರುಳುಗೊಳಿಸು
ಬೇಳಾವನ ೧ – ೧೭ವ ವೇಲಾವನ, ಸಮುದ್ರದ ತಡಿಯ ಬನ
ಬೇೞ್‌ ೧೪ – ೧೪ ಬೇಡು
ಬೈಕಂಗುಳಿ ೧೩ – ೩೩ವ ತಿರುಕ, ಭಿಕ್ಷೆಬೇಡಿ
ತಿನ್ನುವವ
ಬೈಕಂಗೊಳ್‌ ೨ – ೩೮ವ ಭಿಕ್ಷೆಬೇಡು
ಬೊಜಗ ೩ – ೪೫ವ ವಿಟ
ಬೊಡ್ಡಣವಾವಿ ೧ – ೨೧ವ, ೧೩ – ೩ವ ವರ್ಧನ ವಾಪಿ, ತುಂಬಿದ ಬಾವಿ

ಭಂಡ ೪ – ೧೦ವ ಭಾಂಡ, ವಸ್ತು
ಭುಜಂಗ ೬ – ೫ವ ಸರ್ಪ
ಭ್ರಾಜಿಸು ೫ – ೧೪ ಸೆಳೆ, ಆಕರ್ಷಿಸು

ಮಂಡವಿಗೆ ೧೩ – ೨೧ವ ಮಂಟಪ
ಮಂತಣ ೪ – ೬ವ, ೭ – ೧ವ ಮಂತ್ರಾಲೋಚನೆ
ಮಂದುರ ೧೪ – ೪೬ ಕುದುರೆಲಾಯ
ಮಗಳ್ಮಾ ೧೨ – ೬೩ ವಿಧೇಯತೆ
ಮಗುರ್ಚು ೯ – ೧೬ವ ಹಿಂದಿರುಗು
ಮಣ್ಮೞಿ ೧೨ – ೫೪ವ ರೂಪಳಿದ ಸಾವು
ಮದವಳಿಗೆ ೧೩ – ೨೨ವ ಮದುವೆ ಹೆಣ್ಣು
ಮದಿಲು ೯ – ೨೫ವ ಪೌಳಿ, ಗೋಡೆ
ಮದುವಳಿಗೆ ೯ – ೬ವ ಮದುವೆ ಹೆಣ್ಣು
ಮನಂಗಾಪು ೧೦ – ೨೮ ವ ಮನಸ್ಸಿನ ರಕ್ಷಣೆ
ಮರಕತ ೧ – ೪೧ವ ಪಚ್ಚೆ
ಮರವಡು ೫ – ೧೩ವ, ೮ – ೫ ಎಚ್ಚರತಪ್ಪು
ಮರವಾಳ್‌ ೩ – ೨೬ ಮರದಿಂದ ಮಾಡಿದ ಕತ್ತಿ
ಮರಳಿ ೨ – ೩೮ವ ಒಂದು ಜಾತಿಯ ಹಕ್ಕಿ
ಮಳೀಮಸ ೧೧ – ೬೨ ಕೊಳಕು
ಮಱಲುಂದು ೧೪ – ೩೯ ಮೈಮರೆ
ಮಱಸಿಗೆ ೮ – ೫೭ ಮೈಮರೆವು
ಮಱುಕ ೧ – ೫೩ ದುಃಖ
ಮಱೆವಾರ ೧೧ – ೪೯ವ ಮರೆಯಾದ ಸ್ಥಳ
ಮಱೆವಾೞ್‌ ೭ – ೬೪ ಗುಟ್ಟಾಗಿ ಬಾಳು
ಮಾರ್ಕೊಳ್‌ ೪ – ೨ವ ಪ್ರತಿಭಟಿಸು
ಮಾರ್ಪಾಡಿ ೧೨ – ೩೩ ಪ್ರತಿಸೈನ್ಯ (?)
ಮಾಲ್‌ ೧೪ – ೩ವ ಅಲ್ಪಪದಾರ್ಥ (?)
ಮಾಸಾದಳವಿ ೧೪ – ೨೫ ಮಹಾ ಸಾಹಸದ ಪ್ರಮಾಣ (?)
ಮಿಸಿಸು ೬ – ೯ವ ಸ್ನಾನ ಮಾಡಿಸು
ಮಿಳಿ ೯ – ೬೮ವ, ೧೩ – ೨ ದಪ್ಪ ಹಗ್ಗ
ಮಿಳಿರ್ ೨ – ೫, ೩ – ೮ವ ಚಲಿಸು, ಅಲ್ಲಾಡು
ಮಿಂಗುಲಿ ೨ – ೩೮ವ ಬಕಪಕ್ಷಿ
ಮಿಂಗುಲಿಗ ೨ – ೩೮ವ, ೫ – ೩೧ವ ಮೀನನ್ನು ಕೊಲ್ಲುವವನು, ಬೆಸ್ತ
ಮೀಸಿಸು ೧೧ – ೧೩ವ ಮೀಯಿಸು
ಮುಂಗುರಿ ೧೧ – ೨೫ ಮುಂಗುಸಿ, ಕೀರ
ಮುಖವಾರ್ತೆ ೧೦ – ೩೮ವ ಸಮಾಚಾರ
ಮುಟ್ಟುಗೆಡು ೧೧ – ೬೨ವ ಬೇರೆ ದಾರಿಕಾಣದಾಗು, ನಿರುಪಾಯನಾಗು
ಮುಟ್ಟುಪಡು ೪ – ೮ ಮುಟ್ಟಾಗು (?)
ಮುಟ್ಟೆವರಿ ೪ – ೧ವ ಹತ್ತಿರ ಬರು
ಮುಮ್ಮರಿ ೭ – ೬೨ ಮುಮ್ಮೞಿ (?)
ಮುಮ್ಮೞಿ ೭ – ೮೦ವ ಮುಮ್ಮುೞಿ, ರೂಪಳಿದ ಸಾವು
ಮುಮ್ಮುರಿ ೧೦ – ೧೦ ಕಾಸಿದ ಮಳಲ್
ಮುಸು ೧ – ೧೯ ಕಪ್ಪು ಮುಖದ ದೊಡ್ಡ ಕೋತಿ
ಮುಸುಂಬು ೬ – ೨೬ ಮೂಕಿ
ಮೂಗಿ ೨ – ೩೮ವ ಒಂದು ಜಾತಿಯ ಹಕ್ಕಿ (?)
ಮೂಗಿಟ್ಟೇಱು ೮ – ೩೬ ಮೂಗನ್ನು ಇಟ್ಟು ಹತ್ತು ಕಷ್ಟಪಟ್ಟು ಹತ್ತು
ಮೂಡಿಗೆ ೧೦ – ೧೧೦ ಬತ್ತಳಿಕೆ
ಮೂರಿವಿಡು ೧೧ – ೪೧ ಬಿರುಕುಬಿಡು
ಮೃಣಕ್ತಿ ೨ – ೫೦(?)
ಮೆಚ್ಚವಣಿಗೆ ೧೧ – ೮೦ ಮೆಚ್ಚನುಳ್ಳುದು
ಮೆಯ್ದಳು ೧೩ – ೩೧ವ (?)
ಮೆೞ್ಪಡು ೪ – ೧೪ವ, ೭ – ೬೯ ವಂಚನೆಗೊಳ್ಳು, ಮೋಸಹೋಗು
ಮೇಳಸ ೨ – ೩೨ವ (?)
ಮೊಕ್ಕಳ ೧೪ – ೩೭ವ ವಿಶೇಷವಾಗಿ
ಮೊಗ್ಗು ೮ – ೨೫ ಸಾಧ್ಯ
ಮೊೞಗು೭ – ೩೮ವ ಜಾತಿಯ ಮರ
ಮೋದು ೬ – ೪೪ ಹೊಡೆ

ಯಾನಪಾತ್ರ ೪ – ೧೨ವ ಹಡಗು

ರಣ ೪ – ೧೪ವ ಹಡಗಿನ ಒಂದು ಭಾಗ (?)
ರಣಮಾರ ೧೧ – ೯೪ ಯುದ್ಧದಲ್ಲಿ ನಾಶಮಾಡುವವನು, ರಣಭಯಂಕರ
ರಯ್ಯ ೩ – ೮ ರಮ್ಯ, ಸುಂದರ
ರುಂಜೆ ೧೪ – ೨೫ವ ಕಂಚಿನ ನಗಾರಿ
ರೂಪುಗರೆ ೧೧ – ೧೩ವ ರೂಪನ್ನು ಮರೆಮಾಚು

ಲಂಪಳಿ ೪ – ೩೬ವ ಲಂಪಟತ್ವ, ಅತಿಯಾಸೆ
ಲೋಗೇಶ್ವರ ೧೨ – ೧೨ ಲೋಯಿಸರ
ಲೋಚುಗೆಯ್ ೧೦ – ೩೦ವ ತಲೆಗೂದಲನ್ನು ಕೀಳು
ಲೋಳೆ ೯ – ೩೮ವ ಜೊಲ್ಲು

ವಲ್ಲಭ ೧೨ – ೫೧ (?)
ವಿಗುರ್ವಣ ೯ – ೧೧೨ವ ಭಯಂಕರ
ವಿಚಕಿಳ ೨ – ೪೪ ಒಂದು ಜಾತಿಯ ಮಲ್ಲಿಗೆ, ಗಿರಿಮಲ್ಲಿಗೆ
ವಿಧುಮುಖಿ ೮ – ೧೦ ಚಂದ್ರಮುಖಿ
ವಿದ್ದ ೭ – ೭೧ವ ಹೋಲಿಕೆ
ವಿಸರುಹ ೨ – ೩೯ ತಾವರೆ
ವಿಸ್ತರಿಗೆ ೩ – ೬೯ವ ವಿಸ್ತರ, ಪೀಠ
ವೃಥೆ ೩ – ೫ ನಿರರ್ಥಕ
ವೇಗಾಯ್ಲಿಕೆ ೧೨ – ೧೧ ವೇಗ, ರಭಸ
ವೇಢಿಮ ೨ – ೨೯ವ ಹೂವು ಕಟ್ಟುವ ಒಂದು ಬಗೆ
ವೇಧಿಮ ೨ – ೨೯ವ ಹೂವು ಕಟ್ಟುವ ಒಂದು ಬಗೆ
ವೇಸರಿ ೧ – ೪೩ವ, ೩ – ೪೦ ಹೆಣ್ಣು ಹೇಸರಗತ್ತೆ
ವೈತಾಳಿಕ ೧ – ೩೯ವ ಹೊಗಳುಭಟ್ಟ
ವ್ಯಂತರದೇವ ೪ – ೧೯ವ ಒಂದು ಬಗೆಯ ದೇವತೆ
ವ್ಯಾಳ ೩ – ೨೯ವ, ೩ – ೪೦ವ ದುಷ್ಟ, ಕ್ರೂರಿ

ಶಕುನಿ ೯ – ೨೦ವ ಒಂದು ಜಾತಿಯ ಹಕ್ಕಿ
ಶಲ್ಯ ೧೩ – ೩೧ವ ಮೂಳೆ
ಶಿಖಂಡಿ ೨ – ೩೮ವ ನವಿಲು

ಸಂಗತ್ಯ ೨ – ೩೫ವ ಜೊತೆ, ಸಹವಾಸ
ಸಂಗಾಣಿ ೨ – ೫೪ವ (?)
ಸಂಘಾಯಿಮ ೨ – ೨೯ವ ಹೂವುಕಟ್ಟುವ ಒಂದು ಬಗೆ
ಸಂಬಿಸು ೩ – ೪೪ ಕೂಡಿಡು
ಸಂತಾರ ೧೦ – ೩೦ವ, ೧೦ – ೩೧ ಮರಣಸಮಾಧಿ
ಸಂಧಾರಿತ ೧ – ೩೬ ಕೂಡಿದ
ಸಂಪೂರಿಮ ೨ – ೨೯ವ ಹೂವು ಕಟ್ಟುವ ಒಂದು ಬಗೆ
ಸಂಬಳ ೪ – ೩೨ವ ಪ್ರಯಾಣಕ್ಕೆ ಬೇಕಾದ ಆಹಾರ ಸಾಮಗ್ರಿ
ಸಂಹನನ ೨ – ೫೧ ಕೊಲ್ಲುವುದು
ಸಕಳಿ ೨ – ೧೦ವ, ೪ – ೨೬ವ ಶಕಲಾ, ಮಡಕೆಯ ಚೂರು
ಸಖಾಯರ್ ೨ – ೧೮ವ, ೩ – ೭ವ ಗೆಳೆಯರು
ಸನ್ನಣ ೫ – ೧೮ವ, ೮ – ೭೩ವ <ಸನ್ನಾಹ
ಸಮಿದೆ ೫ – ೩೩ವ ಸೌದೆ
ಸಯ್ತು ೪ – ೬ ನೇರ, ಸರಿ
ಸಲ್ಲೇಖನ ೧೦ – ೩೦ವ ಉಪವಾಸವ್ರತ
ಸಱಿ ೧೧ – ೨೬ ಕಮ್ಮರಿ
ಸಾಂತ ೪ – ೩೨ವ ಮೊದಲಿನಿಂದ ಕೊನೆಯವರೆಗೆ
ಸಾರಸ ೩ – ೫೮ ಒಂದು ಬಗೆಯ ಹಕ್ಕಿ
ಸಾರ್ತ ೪ – ೧೦ವ ಸರ್ಥ, ವ್ಯಾಪಾರಿಗಳ ಗುಂಪು
ಸಾಲಿಸು ೫ – ೧೪ವ ಸಾಕುಮಾಡು
ಸಿಗ್ಗು ೩ – ೪೪, ೬ – ೨ವ ನಾಚಿಕೆ, ಅಪಮಾನ
ಸೀಗುರಿ ೧ – ೪೧ವ, ೫ – ೧೨ವ ಚಾಮರ
ಸೀರೆ ೧೧ – ೨೪ವ (?)
ಸುಂಕುಬುಲ್ಲು ೮ – ೧೩ವ ಸೋಕಿದರೆ ಮೈಗೆ ಹತ್ತಿಕೊಳ್ಳುವ ಹುಲ್ಲು
ಸುಗಿ ೫ – ೧೧ ಕತ್ತರಿಸು
ಸುಗಿ ೬ – ೫೨ವ, ೧೨ – ೬೭ ಭಯ, ಕಂಪಿಸು
ಸುಟ್ಟಿನುಡಿ ೩ – ೧೨, ೬ – ೩೫ ಬೆರಳಿನಿಂದ ಗುರುತಿಸಿ ಹೇಳು
ಸುಟ್ಟರೆ ೧೧ – ೧೨೧ ಸುಂಟರಗಾಳಿ
ಸುಣಿಸೊಕ್ಕು ೧೨ – ೬೮ ನಾಯಿಗರ್ಭ
ಸುರಿಗೆ ೩ – ೨೬ ಕಠಾರಿ
ಸುಲಿ ೧೦ – ೨೦ವ ಉಜ್ಜು, ಸ್ವಚ್ಛಮಾಡು
ಸೂಳೆಯ ೩ – ೨೯ವ ಜಾರ, ವಿಟ
ಸೆಂಬಳಿಗೋಲು ೯ – ೬೨ ಅಂತ್ಯಜರು ಅಧಿಕಾರದ ಗುರುತಾಗಿ ಹಿಡಿದುಕೊಳ್ಳುವ ದೊಣ್ಣೆ
ಸೆದಗೆ ೨ – ೧೮ವ ಚಿತೆ
ಸೆರಗು ೧೧ – ೪೨ವ ಕೇಡು, ತೊಂದರೆ
ಸೆರೆ ೨ – ೪೧ ನರ
ಸೆಲೆ ೬ – ೫೫ ಶಿಲೆ
ಸೆಳೆಗೊಂಬು ೧೩ – ೨ ಎಳೆಯ ಕೊಂಬೆ
ಸೆಱಗು ೩ – ೬೯ವ ಮೇಲೆ ಹೊದೆಯುವ ಬಟ್ಟೆ ಉತ್ತರೀಯ
ಸೇದೆ ೪ – ೧೮ ಆಯಾಸ, ಬಳಲಿಕೆ
ಸೇಗೆಡು ೪ – ೨೦ವ ಬಳಲು
ಸೈಪು ೪ – ೩ವ ಪುಣ್ಯ
ಸೊಂಬು ೪ – ೧ ಜಡತ್ವ, ಮತ್ತತೆ
ಸೊದರು ೫ – ೫ವ ಸೊನೆ (?)
ಸೊಪ್ಪು ಸೊವಡು ೬ – ೪೨ ಜರ್ಜರಿತ
ಸ್ಥಾನಕ ೧೨ – ೧೧ವ ಆಯಕಟ್ಟಿನ ಸ್ಥಳ
ಸ್ವಾಧ್ಯಾಯ ೮ – ೬೫ ಸ್ವತಃ ಅಧ್ಯಯನ ಮಾಡುವುದು

ಹಟತ್ಕಾರ ೧೨ – ೪ ಹಟಗಾರತನ
ಹನು ೨ – ೪೯ ದವಡೆ
ಹಾಟಕ ೯ – ೧೦೪ ಚಿನ್ನ
ಹೃದ್ರೋಗ ೪ – ೧೨ವ ದುಃಖ
ಹೆಬ್ಬೆ ೫ – ೫ವ (?)
ಹೊಱಸು ೨ – ೩೮ವ ಕಪೋತ

ಱೋಡಿಸು ೧೧ – ೨೭ ಅಪಹಾಸ್ಯಮಾಡು