ತಿಮ್ಮಿರಾಸ್ತ್ರದಿನಿಸೆ ಕರ್ಣಂ
ತಮೋಮಯಂ ಕವಿದುಬರ್ಪುದಂ ಕಂಡಾಗಳ್
ಕಮಲಪ್ರಿಯಬಾಣದಿನೆ
ಚ್ಚಮರೇಂದ್ರಾತ್ಮಜನದಂ ವಿಭೇದಿಸಿ ಕಳೆದಂ ೩೬

ವ || ಇಂತು ಪಲವುಂ ತೆಱದ ವಿದ್ಯಾಸ್ವರೂಪದ ಬಾಣಂಗಳಂ ಕರ್ಣನಿಸುವಾಗಳೆಲ್ಲ ಮಾತ್ಮಬಲಂ ಮನಂಗೊಳೆ ಮಾರ್ಬಲಂ ಭಯಗೊ[ಳೆ ದೇ] ವರಸುಂಗೊಳೆ ಬರ್ಪ ಮಹಾಕಾರಂಗಳವರ್ಕವಕೆಘ ತಕ್ಕುದಂ ಪ್ರತಿವಿದ್ಯಾಸ್ತ್ರಂಗಳಿನೆಚ್ಚು ಭೇದಿಸಿ ಕಾದುವರ್ಜುನನ ವಿದ್ಯಾಶಕ್ತಿಯಂ ಕರ್ಣಂ ಕಂಡತಿಕುಪಿತನಾಗಿ ತನ್ನ ನಚ್ಚುವ ಉರಗಾಸ್ತ್ರಮಂ ತೊಟ್ಟು ತೆಗೆದೆಚ್ಚಾಗಳ್

ಕಂ || ಉರಗಾಸ್ತ್ರಂ ಬರೆ ನೋೞ ದಿವ್ಯರಗಿದರ್ ದೈತ್ಯರ್ಕಳಳ್ಕಾಡಿದರ್
ಹರಿ [ಬೆಳ್ಕು]ತ್ತನುದಗ್ರ ಯಾದವಬಲಂ ಗೋೞುಂಡೆಗೊಂಡತ್ತು ಖೇ
ಚರವರ್ಗಂ ಬೆಱಗಾಯ್ತು ಭೀಕರಮಿದಂ ಕಾವನ್ನನಾರ್ ಸತ್ತನೀ
ಶರದಿಂದರ್ಜುನನೆಂದು ಪಾಂಡವಬಲಕ್ಕಾಯ್ತಾಕುಳವ್ಯಾಕುಳಂ ೩೭

ಕಂ || ಗರುಡಾಸ್ತ್ರದಿಂದೆ ತೆಗೆನೆಱೆ
ದುರಗಾಸ್ತ್ರ ಮನೆರಡುಖಂಡಮಾಗೆಚ್ಚಾಗಳ್
ಕುರುಬಲಕುಮುದಂ ಮುಗಿದುದು
ಹರಿಪಾಂಡವ ಸೈನ್ಯಕಮಲವಲರ್ದುದು ನಯದಿಂ ೩೮

ವ || ಅದಂ ಕಂಡು ಕರ್ಣನಿಂ ತಡೆಯಲಾಗೆಂದೆಯ್ದೆ ನೂಂಕಿ ಶಕ್ತಿಯಿನಿ ಟ್ಟೊಡದುವನರ್ಜುನಂ ಖಂಡಿಸಿ ಕಳೆದು ಪರಾಕ್ರಮದಳವಂ ತಳೆದು ಬಿಲ್ಲನೂಱಿ ನಿಂದಿಂತೆಂದಂ

ಕಂ || ಏನಣ್ಣ ಕೌರವರ್ಕಳ
ಸೇನೆಯುಮಾ ಸೇನೆಯಧಿಪನುಂ ತಮಗೆ ಕರಂ
ನೀನಾಸೆಯೆಂದು ನಂಬಿದೊ
ಡೇನುಂ ಗೆಲಲಾಱದಳವು ಸಾಹಸದಳವೇ ೩೯

ವ || ಎಂಬುದಂ ಕೇಳ್ದು ಕರ್ಣನುಮಂತೆ ನಿಂದಿಂತೆದಂ

ಕಂ || ಗೆಲಲಾರ್ಪುದೊಂದು ಸಾಹಸ
ಮಲಂಘ್ಯಗುಣಗಣದಿನಾದ ಪುಣ್ಯದಿನಕ್ಕುಂ
ಬಲಮಿನಿತಲ್ಲದೊಡಿನಿಸುಂ
ತೊಲಗದೆ ನಿಂದಿಱಿವ [ತುೞಿಲಸಂಸಿಕೆ ಪೊ [ಲದೇ] ೪೦

ಆಱುಂ ಗುಣಮಂ ಕುಂದಿಸ
ಲಾಱದೆಸುಗೆಯೊಳೆ ನ[ಡೆ] ತುೞಿಲಾಳ್ಗಳ್ ಗೆಲಲೇ
ನಾಱದೊಡೇಂ ದೋಷಮೆ ಪೊಱ
ಮಾಱದೆ ನಿಂದಿಱಿದು ಸತ್ತೊಡಾತನೆ ಒರ್ದಂ ೪೧

ವ || ಮತ್ತಮೊಂದು ಮಾತಂ ಕೇಳಾ

ಕಂ || ಆವ ತೆಱದಿಂದಮಕ್ಕೆಮ
ಸಾವಿನೆಗಂ ದೋಷವೆ[ಯ್ದ]ಲೀಯದೆ ಮೇಲಪ್ಪುದಱಿಂ
ಭಾವಿಸಿ ನೋಡಿರೆ ಸುಭಟನ
ಸಾವುದೆ ತುೞಿಲಾಳ್ತನಕ್ಕೆ ಕಳಶಂ ಪೆಱದೇಂ ೪೨

ವ || ಎಂಬುದಂ ಕೇಳ್ದರ್ಜುನನೆಂದನಪ್ಪುದೀ ಮಾತಾರ್ಗಮಪ್ಪುದೆಂದೊಡಾಳ್ದಂ ನಚ್ಚದೆಯುಂ ನಿಮ್ಮ ನೆರವಿ ಮೆಚ್ಚಿಯುಂ ಪೊಗೞಿಸದೆ ಮಟ್ಟಂ ಬರ್ದೊರ ಮಾತು ನಿನಗಪ್ಪಡೆ ಪರಿದುಪಡೆ ಪೊಗೞೆ ನೆಗೞೆಯಿನ್ನು ಮೇಳಿದನಾಗದೆ ಕೆಯ್ದುಗೆಯ್ಯಂದು

ಕಂ || ನಚ್ಚುವುದೊಂದಂಬಂ ತೊ
ಟ್ಟೆಚ್ಛೊಡೆ ನೆಱೆಗೊಂಡ ಸರದೊಳಾಗದೆ ಕರ್ಣಂ
ಪೊಚ್ಚಱುಗೆಟ್ಟುರದೌಡಂ
ಕಚ್ಚಿ ಮಹಾರೌದ್ರಭಾವದಿಂದಂ ಕಡೆದಂ ೪೩

ವ || ಆಗಳ್ ನೋಡುತ್ತಿರ್ದಮರರೊಸೆದಾರ್ದ ಕುರುಬಲದವರನಿ[ದಿ]ರ ಸಾರ್ದರರ್ಜುನಂ ವಿಜಯಶಂಖಮನೊತ್ತಿಸಿ[ದನಿದಿ]ರ ಧರ್ಮಜಂ ಜಯಧ್ವಜಮನೆತ್ತಿಸಿದನದ ಕಂಡು ಶಕುನಿ ಕಿನಿಸಿ ನೂಂಕಿದೊಡೆ ಭೀಮನರ್ಜುನನಂ ಪೆಱಗಿಕ್ಕಿ ಪೊಕ್ಕಾಂತು ಬಲೆಯೊಳ್ ಸಿಲುಕಿದ ಶಕುನಿವರ್ಗಮಂ ಬಡಿಯೊಳ್ ಮೋದುವಂತೆ ನೆರವಿಯೆಲ್ಲಮಂ ಮೋದಿ ಕೊಂದನತ್ತ ಮಹಾಪದ್ಮಂ ಜಯದ್ರಥನಂ ಗೆಲ್ದನಾಗಳ್ ನೇಸಱ್ ಪಟ್ಟೊಡೆರಡುಂ ಪಡೆ ಬೀಡು ನೆಲೆಗೆವಂದಂದಿನ ದೆವಸಮೆಲ್ಲಂ ಕರ್ಣಾರ್ಜುನರ್ಕಳ ಕಾಳೆಗದ ಪಡೆಮಾತೆ ಮಾತಾಗಿ ಬಯ್ಗಿರುಳೆರ್ದು ಮುನ್ನಿನಂತೆ ಜರಾಸಂಧರ್ಕಳೊಡ್ಡಿ ನಿಂದರ್ ದುರಿಯೋಧನಂ ಕರ್ಣಂ ಸತ್ತಿ ಬೞಿಯಂ ಆಕಾಶಂ ಮೇಲಗವಿದಂತಾನುಂ ದೆಸೆಗಳೆ ಪಿಡಿದು ನುಂಗುವಂತಾಗಿ ಮಱುಕದೊಳ್ ಸೈರಿಸದೆ ಬೆಳಗಪ್ಪ ಜಾವದೊಳೊರ್ವನೆ ಮೆಯ್ಗರೆದು ಪೋಗಿ ಪರಿದೊಂದು ಕೊಳನಂ ಕಂಡೆನ್ನೆರ್ದೆಯ ಮಱುಕನಂಡಗಿಸಲುಮಿ ಕೊಳಂ ನರೆಗುಮೆಂದು ಪೆಱಗುಗೆಯ್ದು ಬಂದು ಪುಗುವಾಗಳಾ.. ಳಟಾಳ್

ಕಂ || ಜಳವಿ[ಹಗಂ]ಗಳ್ ಮಲರೊಳ್
ಗುಲಿವಳಿಗಳುಮಳವುಗಳಿಯೆ ತಳಮಳಗುಡೆ ಗೊಂ
ದಳಗಳರವದಿಂದುಲಿದವು
ಕೊಳನೊಳಕೊಳಲಂಜಿ ಪುಯ್ಯಲಿಡುವಂತಾಗಳ್ ೪೪

ವ || ಅಂತವನುಮದಂ ಕೇಳುತ್ತಮೆಲ್ಲ ದೆಸೆಯುಮಂ ನೋಡುತ್ತಂ ಪೊಕ್ಕು ತನಗೆ ಜಲಸ್ತಂಭ ಪ್ರಯೋಗಮುಳ್ಳುದಱಿಂ ಮುೞಿಗಿರ್ದನತ್ತ ಕೌರವಬಲದೊಳ್ ಕೃಪ ಕೃತವರ್ಮ ಅಶ್ವತ್ಥಾಮಾದಿಗಳರಸನಂ ಕಾಣದೆ ಬೆಕ್ಕಸಂಬಟ್ಟುಮೊಡ್ಡಣಕ್ಕೆ ವಂದಿರ್ದ ಪಾಂಡವರಂ ತಮ್ಮಿದಿರೊಳ್ ಕೌರವಪತಿಯಂ ಕಾಣದೆ ಸಂಕಟಂಬಟ್ಟೆನಿತಾನುಮುಪಾಯದಿನಾರಯ್ದು ಭೇದಿಸಿ ಕೊಳನಂ ಪೊಕ್ಕಿರ್ದುದನಱಿ ಪದದೊಳ್ ಕೆಯ್ಗೆ ಮಾಡುವಮೆಂದು ಭೀಮಸೇನಂ ಭರಂಗೆಯ್ದು ಪರಿವಾರಗಳೆಲ್ಲರುಮಾತನೊಡವೋಗಿ ಕೊಳನಂ ಮುತ್ತಿರ್ದಲ್ಲಿ ದರ್ಮಪುತ್ರನಿಂತೆಂದ

ಕಂ || ಜಲಮಂ ಪೊಕ್ಕಿರ್ದವನಂ
ತೊಲಗಲ್ ಕೆಡೆಯಿಲ್ಲದಳಿಪಿ ಪುಲ್ಗರ್ಚಿದನಂ
ಚಲಮಳಿದಿರೆ ಬೆನ್ನಿತ್ತನ
ನಲಂಗ್ಯಗುಣನಪ್ಪ ತುೞಿಲಸಂದಂ ಕೊಲ್ಲಂ ೪೫

ವ || ಎನೆ ಭೀಮಂ ಮೊದಲಾಗೆ ಪಲರುಂ ಪಗೆವನನೆಂತು ಕೊ[ಲ್ವ]ಮೆಂದೊಡೆ ಕೊಲ್ವರ್ ಪಗೆವನನಲ್ಲದೆ ಕಳೆಯನನೆಂತು ಕೊಲ್ಲರುಣ್ಬರ್ ಪಸಿದೊಡಲ್ಲದೇಕುಣ್ಬರದ ಪಗೆಯಂ ಕೊಲ್ವಲ್ಲಿ [ಪಸುಗೆ]ಯಱಿಯಸೆ ಕೊಲ್ವುದುಂ ಪಸುಗೆಯಱಿಯದಲ್ಲಿಯರ ಪಸಿದುಣ್ಬಲ್ಲಿ ಕೊಂಡವಗ್ರಹಮನಳೆಯದುಣ್ಬುದೆನೆ ಬೆಕ್ಕಸಮಾಗಿಯುಂ ಕೆಲರಂತಪ್ಪೊಡೆ ಪೊಎಮಡಿಸುವಮೆಂದು ಪಱೆಯಂ ಪೊಯ್ಸಿದಾಗಳ್ ದುರ್ಯೋಧನಂ ಬೆರ್ಚಿ ಮಸಗಲ್ ಬಗೆದುದನಱಿದರ್ಜುನನಿಂತೆದಂ

ಕಂ || ತಳಮೊಡೆವಿನೆಗಂ ತಳ್ತಿಱಿ
ದಳವಲ್ಲದೆ ನೊಂದು ಬಿರ್ದು ಮೆಯ್ಯಱಯದೆ ಕೊ
ಳ್ಗೊಳದೊರ್ಗಿರ್ಪು[ದದೇಂ] ಕೊಳ
ದೊಳಗೆಸಡಿರ್ಪ ತೆಱ[ದಿಂದಮಿ]ಪ್ಪುದು ದೊರೆಯೇ ೪೬

ವ || ಎನೆಯುಂ ಪೊಱಮಡದುದಕ್ಕೆ ಭೀಮಂ ಕಿನಿಸಿ ಸಿಂಹನಾದಂಗೆಯ್ದಾಗಳಾ ಧ್ವನಿಗೆ ಗಜೇಂದ್ರಂ ಮುಳಿವಂತೆ ಮುಳಿದಂಬುಧಿಯಿಂ ವರುಣಂ ಪೊಱಮಡುವಂತೆ ನಾನಾಭರಣಾಳಂಕೃತ ಮಣಿಮಕುಟ ವಿರಾಜಿತ ಗಜೆಯಂ ಪಿಡಿದು ಪೊಱಮಟ್ಟಾಗಳೆಲ್ಲರುಮಂ ಮಿಕ್ಕು ಭೀಮನಿದಿರಂ ಪೊಕ್ಕು ತಾಗಲ್ ಬಗೆಚಾಗಳ್ ಧರ್ಮಪುತ್ರನನ್ನೆಗಂ ಮಾಣೆಂದು ದುರ್ಯೋಧನಂಗಿಂತೆದಂ

ಕಂ || ಇಮ್ಮುಳಿಸನುೞಿದು ಬಂದಿಂ
ತಮ್ಮಂದಿರೊಳೊಂದಿ ನಿಂದು ನೆಲವಸುಗೆಗಳ
ನಿಮ್ಮಯ್ಯನಿಂತು ಮೊದಲೊಳ್
ತಾಮ್ಮಾಡಿದನಂತೆ ಸುಖದಿನಾಳ್ದಿರಲಾಗಾ ೪೭

ವ || ಎಂಬ ಮಾತಂ ಕೇಳ್ದು ಕುತ್ತವೆತ್ತ ಮದಹಸ್ತಿಯಂತೆ ಮಸಗಿ

ಕಂ || ಇನ್ನಿಮ್ಮೀ ಕೀೞ್ಸರಿಯೊಳ್
ಬನ್ನಂಬರೆ ಬಂದು ಕಾಣ್ಬೆನೇ ಮರುಳರಿರೆಂ
ತೆನ್ನಳ[ವಂ]ಬಗೆಯದೆ ನುಡಿ
ದೆನ್ನಲ್ಲಿಗೆವೋಪಿರಣ್ಮಿ ಮೆನುತಂ ಪೊಕ್ಕಂ ೪೮

ವ || ಆದಂ ಕಂಡು ಭೀಮ[೦] ನೀಮಾರುಂ ಮಸಗದೆ ನೋಡುತ್ತಿರೆಮೆಂದು ಗಜೆಯಂ ತಿರುಪುತ್ತಮೆಯ್ದಿದೊಡೆ ದುರ್ಯೋಧನನುಮೆಯ್ದೆ ಪೊಕ್ಕ ದಡಿ[ಯ]ಗದೆಯಂ ನಿಮಿರ್ದನುಗೆಯ್ದು ಪೊಯ್ಯಱಿದಂತಾಂತ ಕೆಯ್ಯಱಿದು ಪೂಣ್ದು ಪೆರ್ಚಿಯುಂ

ಕಂ || ಗಜತಂತ್ರನಿಪುಣ ಶಿಕ್ಷಿತ
ವಿಜಿತತ್ವದ ಹಸ್ತ [ವಿದ್ಯವರಿಂಜಯ] ಮಹಾ
ಗಜಯುದ್ಧದಂಡದಿಂ ಭೂ
ಭುಜರ ಗಜಾಯುದ್ಧಮಾಸುರಂ ಧಾರಿಣಿಯೊಳ್ ೪೯

ವ || ನಾಡೆಯುಂ ಪೊತ್ತಾಂತು ಕಾದುತ್ತಿರ್ದಲ್ಲಿ ಭೀಮನೆಂದನಿನಿತು ಬೇಗಂ ಕಾಳೆಗಮಂ ಕೊಂಡು ನಿಲ್ವುದೆನ್ನಿಂದಾದುದೆಂತೆನೆ ನಿನಗಾ

ಕಂ || ಕಾಲನೆ ನಿಡು ದಂಡಾಯುಧ
ಮಾಲೋಕಿಪೊಡಱಿದಿದಿರ್ಚಿ ಬಾೞಲ್ ಬಗೆವಾ
ಕೋಲಾಟಮಾಡುವಂತಿದು
ಲೀಲೆಯಿನಿಂತಾಂತು ಕುಣಿದು ಪೋಗಲ್ ಪಡೆಯೈ ೪೦

ವ || ಎಂದೊಡಿನ್ನಾರಳವುಮಂ ನುಡಿದು ತೋರ್ಪುದಱೊಳೇನಿಲ್ಲಿಯೆ ಕಾಣಲಕ್ಕು ಮೆಂದು ನಿಂದೊನಂ

ಕಂ || ಬಱಸಿಡಿಲೆ ಬಂದುದೆಂಬಂ
ತಱವಳವೊಯ್ದಾಂತ ಗದೆಯೊಳಾಗಳ್ ಭಾಗ[೦]
ಮುಱಿಯುತೆ ಜೀಱೆರ್ದೊಗೆದಾ
ಮುಱಿ ಪಾಱಿತು ಸಾಣೆವೊಯ್ದಗುಣಿ ವಲ್ಲಭದೊಳ್ ೫೧

ವ || ಅಂತಾ ಪೊಯ್ಲೊಳ್ ಗಜೆ ಮುಱಿದುೞಿಗಜೆಯೊಳಿಟ್ಟು ನೆಗೆವನಂ

ಕಂ || ಇಟ್ಟ ಗದೆಯುಡಿ [ಯೆ ನಾಣ್ ನಾ]
ಣ್ಮುಟ್ಟಾಗಿಯೆ ಪೊಯ್ಯ ಪೊಯ್ದು ಪೆರ್ದೊಡೆಯೆರಡುಂ
ಪೊಟ್ಟ ನುಡಿದೆಱಗುತಿರೆಯಿರೆ
ಕಟ್ಟಾಳ್ ಮತ್ತೊಂದುವೊಯ್ದೊಡುಡಿವುಡಿಯಾದೊಂ ೫೨

ವ || ಪೊಯ್ದು ಪಗೆಯ ಬೇರೊಳ್ ಬೆನ್ನೀರಂ ಪೊಯ್ದಂತೆ ಭೀಮಂ ರಾಗದಿಂ ವಿಜಯಪಟಹಮಂ ಪೊಯ್ಸಿ ನಿಲೆ ಧರ್ಮಪುತ್ರಂ ಬನ್ನಿಂ ನಿಮಗಿದೆ ಗೆಲ್ಲಮೆಂದೊಡಗೊಂಡು ಬರೆ ಬಂದು ಮುನ್ನಿನಂತೆ ನಾರಾಯಣ ಕೆಲದೊಳೊಡ್ಡಿ ನಿಂದರಂತು ದುರ್ಯೋಧನನಂ ಗೆಲ್ದು ಬಂದಿರ್ದುದಂ ಹರಿ ಕೇಳ್ದು ಮೆಚ್ಚಿದನಂತಪ್ಪುದನತ್ತ ಜರಾಸಂಧನಱಿದುಬ್ಬೆಗಂಬಟ್ಟು ದುರ್ಯೋಧನನೆತ್ತಿ ತರಿಸಿ ನೋಡಿ ನಾಡೆ ಬೆಕ್ಕಸಂಬಟ್ಟಿರ್ಪನ್ನೆಗಂ ನೇಸಱ್ ಪಟ್ಟೊಡೊ ಡ್ಡಣಮನುಡಿಗಿ ಬೀಡಿಂಗೆ ವಂದಿರ್ದಲ್ಲಿ ದುರ್ಯೋಧನ [ನ]ೞಿಯೆ ನೊಂದುದನಶ್ವತ್ಥಾಮಂ ಕಂಡೞಲ್ದು ಪೋಗಿ ಪಾಂಡವರ ಬಲಮನಿರುಳ್ ಪೊಕ್ಕು ಧೃಷ್ಟದ್ಯುಮ್ನನಂ ಕೊಂದು ಪಾಂಚಾಲರ ತಲೆಯಂ ಕೊಂಡು ಬಂದು ದುರ್ಯೋಧನನ ಮುಂದಿಕ್ಕಿದೊಡೆಯಿವು ಪಾಂಡವರ ತಲೆಗಳಲ್ಲಂ ಪಾಂಚಾಲರ ತಲೆಗಳೆಂದೊಡಶ್ವತ್ಥಾಮಂ ಸಿಗ್ಗಾಗಿ ತಲೆಯಂ ಬಾಗಿದಂ ದುರ್ಯೋಧನಂ ನಿವೃತ್ತಿಗೆಯ್ದು ಮುಡಿಪಿದನಂದಂತಾತನ ಸಂಸ್ಕಾರಕ್ರಿಯೆಯೊಳಂ ಬೀಡೆಲ್ಲಮಕ್ಷತಮಾಗಿದ್ದು ಬೆಳಗಾದಾಗಳೊಡ್ಡಣಕ್ಕೆ ವಂದರತ್ತ ಹರಿಯುಂ ಪಾಂಡವರುಂ ಬಂದೊಡ್ಡಿದರಾಗಳೆ ಜರಾಸಂಧನುೞಿದ ತನ್ನ ಬಲದಂಗಾರಗಂ ಪವನವೇಗಂ ಪಿಪ್ಪಲಿಕಂ ವಿದ್ಯು[ತ್ಪ್ರ]ಬಂ ವಿದ್ಯದ್ರಥಂ ನ[ಳಿ]ನಧ್ವಜಂ[ನೀ]ಳಕಂಧರಾದಿ ವಿದ್ಯಾಧರಸೇನೆಯಂ ಬೆಸಸಿದೊಡೆ ಗಗನಸ್ಥಳದೊಳ್ ಮಸಗಿ ಬಪ್ಪುದಂ ನಾರಾಯಣಂ ಕಂಡು ತನ್ನ ಪಡೆಯೊಳಗಣ ಅಶನಿವೇಗ ಮಾನದವೇಗ ಸಿಂಹಾದಾಡ ಅರುಣಚಂದ್ರ ದಧಿಮುಖ ಅಕಂಪನ ಹರಿಕಂಧರ ವರಾಹಕಂಧರ ಅನಾದೃ [ತ] ಕುಮಾರಾದಿ ಖೇಚರವರ್ಗಮಂ ಬೆಸಸಿದೊಡಂತೆರಡುಂ ಪಡೆಯ ವಿದ್ಯಾದರರ್ ಬಂದು ತಮ್ಮೊಳ್ ತಾಗಿ ಕಾದುವಲ್ಲಿ

ಮ || ದ್ವಿರದಾದ್ರಿಜ್ಜಳನಾಂ [ಧ]ಕಾರಮಯಮಾಗೆಯ್ತರ್ಪ ಬಾಣಂಗಳಂ
ಹರಿವಜ್ರಾರ್ಣವ ಭಾಸ್ಕರೇಷುಚಯದಿಂ ನಿರ್ಭೇದಿನಂತು ಭಯಂ
ಕರ ನಾನಾಸ್ತ್ರ ಚಯಂಗಳಿಂದಮಿಱಿಯುತ್ತಿರ್ದಧ್ಬುತಾಕಾರ ಖೇ
ಚರ ಯುದ್ಧಕ್ಕಗಿದ [ತ್ತದಂದು] ದಿವಿಜಾ[ನೀಕಂ] ನಭೋಭಾಗದೊಳ್ ೫೩

ವ || ಅಂತಗುರ್ವಾದ ಖಚರ ಸಮರ ಸಂಘಟ್ಟಣದೊಳೆ

ಕಂ || ಮಣಿಯದೆ ಖೇಚರ ಸುಭಟರ್
ಪೆಣೆದು ಮಹಾ ರೌದ್ರಭಾವದಿಂದಿಱಿವಾಗಳ್
[ಅಣಿಯಿನೆೞೆ]ಕೊಂಡ ತೆಱದಿಂ
ಪೆಣಗಳ್ ಬೀೞ್ತಂದುವಂದರಾಗ್ರದಿ [ನಂತು] ೫೪

ವ || ಮೇಗಂತು ಖಚರಯುದ್ಧಮಡಿಯೊಳ್ ಭೂಮಿಗೋಚರ ಯುದ್ಧಮಂತೆರಡುಂ ನೆಲೆಯ ಯುದ್ಧಮಂದಿನ ದೇವಸಂ ತಗುಳ್ದು ಖೇಚರಯುದ್ಧದೊಳೆನಿಬರಾನುಂ ವೀರಭಟರಣ್ಮಿ ಮಣ್ಮಿೞಿಯಾದಲ್ಲಿ ಯೊರ್ವ ಬಲ್ಕಣಿಯಪ್ಪ ತುೞಿಲಸಂದಂ ಕಡಿತಲೆಗೊಂಡು ನಡೆದು

ಮ || ಕಡಿಕೆಯ್ದೊರ್ವನನೊಂದೆವೊಯ್ದು ಮಲೆದಟ್ಟೆಯ್ತಪ್ಪನಂ ವಾರಣಂ
ನಡೆಪೊಯ್ದೊತ್ತಿ ಕರಾಗ್ರದಿಂ ಪಿಡಿದು ಮೇಗೀಡಾಡೆಯುಂ ಕೆಯ್ದುವಂ
ಬಿಡಿದಾಕಾಶದೊಳಂಕಿಸುತ್ತೊಗೆವನಂ ವಿದ್ಯಾಧರೇಂದ್ರದ್ವಿಪಂ
ಪಿಡಿದಲ್ಲಿಂ ಗಗನಾಂತರಕ್ಕಿಡೆ ಸುರಸ್ತ್ರೀ ತೞ್ಕುಗಾ ವೀರನಂ ೫೫

ವ || ಇಂತು ತಮ್ಮನೆಯ್ದವಂದರುಮನಣ್ಮಿ ನೆಲಕ್ಕೆ ವಂದರುಮಂ ಸುರಾಂಗನೆಯ ರೊಯ್ಯೆ ರೌದ್ರಮಾದ ಕೊಳ್ಗುಳದೊಳ್ ಬಲದೇವನಂ ನೂಂಕಿ ವೃಷಭಸೇನನನಿಕ್ಕಿದಂ ವಸುದೇವಂ ವಜ್ರೇಶನಂ ಗೆಲ್ದಂ ಜರತ್ಕುಮಾರ ಅರಿಷ್ಟನೇಮಿ ಸುನೇಮಿ ಜಯಂತ ಅರ್ಕಪ್ರಭ ನೀಲಪ್ರಭ ಕಪಿಲ ಪಾಂ[ಡು]ಕುಮಾರಾದಿಗಳ್ ಜರಾಸಂಧನ ಮಕ್ಕಳಪ್ಪ ಕಾಳಯಮಾದಿಗಳನಾಂತಿಱಿ ದೋಡಿಸಿದರ್ ಧಾರಣ ಪೂರಣ ಅಭಿಚಂದ್ರಾದಿಗಳ್ ತಂತಮ್ಮಿದಿರಾಂತ ಬಲಮನಱೆದಂತೆ ಮಾಡಿ ನಿಂದಂಬರದೊಳ್ ಅನಾದೃಷ್ಟಿಕುಮಾರಾದಿ ಖೇಚರಸೈನ್ಯಮಂಗಾರವೇಆದಿ ಖಚರಸೇನೆಯಂ ಗೆಲೆಯಿಱಿದೋಡಿಸಿದರಂತೆರಡೆಡೆಯೊಳಂ ತನ್ನ ಬಲಂ ಸೋಲೆ ಜರಾಸಂಧನತಿ ಕುಪಿತನಾಗಿ ತನ್ನ ನಂಬಿದ ವೀರಭಟಸೇನೆವೆರಸು ನೂಂಕಿದಾಗಳದಂ ಕಂಡು ನಾರಾಯಣನಿದಿರಂ ನೂಂಕಿ ಕೆಯ್ಯಂ ಬೀಸಿದಾಗಳ್

ಕಂ || ಪಡೆಯೆರಡಱ ಪಱೆಗಳ ರವ
ಮೊಡನೊಗೆದವು ಸುರರ ನೆರವಿಗಳ ಕಿವಿ ಶಬ್ದಂ
ಗಿಡುವಿನೆಗಮಳ್ಕಿ ಬಾಯಂ
ಬಿಡುವಿನೆಗಂ ನಾಡೆ ಬೆಕ್ಕ ಸಂಬಡುವಿನೆಗಂ ೫೬

ಎರಡುಂ ಪಡೆಯ ಧನುರ್ಧರ
ರಿರದೆ ತಗುಳ್ದಾರ್ದು ಸಾರ್ದು ಮುಳಿದಿಸೆ ನೆತ್ತರ್
ಸುರಿಯೆ ಪೊನಲ್ ಪರಿಯೆ ಮರುಳ್
ತಿರಿಯೆ ಕರಂ ರೌದ್ರಮಾಯ್ತು ಕೊಳ್ಗೊಳನಾಗಳ್ ೫೭

ಸಯ್ಯರ್ಣ್ಣಗತ್ತೆಯೆಡೆಯೊಳ್
ಪಯ್ಯರ್ಬಿಲ್ಗಲ್ಪೆಯೆಡೆಯೊಳೆ ನೆಗೞ್ದವರ್ಗಳ್
ಕೆಯ್ಯಂಬಪ್ಪೊಡುರ್ಚಿ
ಮೆಯ್ಯಂಬಂ ಕಿೞ್ತುಕೊಂಡು ಕೂಕಿಱಿದೆಚ್ಚರ್ (?) ೫೮

ಅವಸರಮಂ ತಾರದೆ ತಾ
ನವಸರಮೆನಗಾಗದಂತು ಪೊರೆದಾಳ್ದನ[ದೊಂ]
ದವರಸಮಿಱಿಯಲಿದವ[ಸರ]
ಮವಸರವಿ [ದೆ ಕೊಳ್ಳೆಲೆ ಬೀೞಿ]ಮೆಂದಾರ್ದೆಚ್ಚರ್ ೫೯

ಅವಯವಮೆನಿತನಿತುಮದಂ
ಬವರ[ಮದಾದೊ]ಡೆನೆ ನಡೆಯುಮವಯವದಂಬಂ
ತವುವಿನೆಗೆಮೆಚ್ಚುಪಾಯ್ತ
ಪ್ಪವರಂತೊಡನೆಚ್ಚು ಪಾಯ್ದುವರುಣಜಲಂಗಳ್ ೬೦

ವ || ಅಂತು ಧನುರ್ಬಲಮಗಿಯದಗಿಯದೆ ಕಾದಿ ಮಮ್ಮೞಿಯಾದಿಂ ಬೞಿಯಂ ಧರ್ಮಜಂ ಲೋಹಜ ವಲ್ಕಜ[ಮ] ಶ್ವಜ ಶೃಂಗಜ ತೇಜಂಗಳೆಂಬ ಸಂವರಣ ಸಮಸ್ತ ಸನ್ನಾ [ಹ] ವಿರಾಜಿತ ತುರಂಗಮವ[ಱಂಗದೊಳ್] ತಾಗಿ ತಟ್ಟುತ್ತಡುರ್ತು ಕಾದಿದೆಡೆಯೊಳ್

ಕಂ || [ಇಂದು] ದೆಸೆಗು [ರು] ಳೆ ಪಶ್ಚಿಮ
ಮೊಂದದ ಮುಂದೊಂದು ದೆಸೆಗೆ ಕಡೆತಪ್ಪಿನಮೆ
ಯ್ತಂದಿಱಿಯೆ ಸಮನೆ ಪಚ್ಚೊಂ
ದಂದಮನನುಕರಿಸಿ ಬಿರ್ದವಲ್ಲಿ ಹಯಂಗಳ್ ೬೧

ಚಂ || ಮುಱಿದವೆ ಕಾಲ್ಗಳದ್ದಮಿಱಿದೇಱಿನ ಬಲ್ಪಿನೊಳಂತೆ ಪಶ್ಚಿಮಂ
ಪಱಿದುವೆ ಕುತ್ತುವೆತ್ತ[ರ್ದೆಗಳುಂ ಕುೞಿ] ವೋಗಿ ಪಿಸುಳ್ದ ಪು [ಣ್ಗಳುಂ]
ಸುರಿದವು ಪೆರ್ಮಾರುಳ್ ಬಿಸಿಯ ನೆತ್ತರನೊಯ್ಯನೆ ಕೊಂಡುಗೊಂಡು ತ
ಳ್ತಿಱಿದವು ಮತ್ತಮಿ ತೆಱದಿನಾಯ್ತು ತುರಂಗ ಮಹಾರಣಾಂಗಣಂ ೬೨

ವ || ಮತ್ತಂ

ಮ || ತುರಗಾರೋಹಕನೊರ್ಬಗ್ರಭಟನಂ ಕಂಡೆಯ್ದೆ ಮೆಯ್ವೆರ್ಚಿ ನಿ
ರ್ಭರದಿಂ ಪೊಯ್ಸಿದವಂಗವಂ ಹಯದಿನಾಯ್ತೀ ದರ್ಪ [ಮೆಂದಶ್ವ] ಕಂ
ಧರಮಂ ವೊಕ್ಕನೆವೋಗೆ ಪೊಯ್ದಡೆಸೆದಿರ್ದಂತಾ ಶಿರಂ ಯೋಗಿನೀ
ಶಿರದೊಳ್ ಪತ್ತಿಸಿದಂತೆ ಬಿರ್ದಡೆ ಮಗಳ್ಮಾವೆಂದದಂ ನೋಡಿದಂ ೬೩

ವ || ಅಲ್ಲಿಂ ಬೞಿಕೀ ಧನು ರಶ್ಮಿ ಮುಸಳ ಚಕ್ರ ಪಿಂಡಿವಾಳ ಕಣೆಯ ಪರಸು ಗದಾದ್ಯನೇಕ ವಿಧಾಯುಧ ಪರಿಪೂರ್ಣ ರಥಂಗಳನತಿರಥಾರ್ಧರಥ ಮಹಾರಥರ್ಕಳ್ ಚೋದಕ ಸಹಿತಮೇಱಿ ಪರಿಯಿಸಿ ರಥದೊಳ್ ತಾಗಿ ರಥವುೞ್ಕಾಡಿದಿಂಬೞಿಯಂ ಜರಾಸಂಧರ ಹಸ್ತಿಸಾಧನಮಂ ಬೆಸಸಿದೊಡೆ ನಾರಾಯಣಂ ತನ್ನಾನೆವಡೆಯಂ ಬೆಸಸಿದಾಗಳ್ ತಾಗಿ ಮುನ್ನಂ ಯಂತ್ತಮುಕ್ತಾಯುಧಂಗಳಂ ಕಾದಿದಿಂ ಬೞಿಯಂ ಪಾಣಿಮುಕ್ತಂಗಳಿಂಕಾದಿ ಮತ್ತಮಲ್ಲಿಂ ಬೞಿಯಂ ಮುಕ್ತಾಮಕ್ತಂಗಳಿಂ ಕಾದಿ ತಳ್ತ ಬೞಿಯ……. ರ್ಮವುಕ್ತಂಗಳನಿಱಿ ದಂತೆರಡುಂ ಬಲದ ಘಟೆ ಕೆಡೆದಾಗಳ್ ಜರಾಸಂಧಂ ವೀರಭಟನ ಸೇನೆಯಂ ನೂಂಕಿದೊಡೆ

ಕಂ || ವೀರಭಟಸೇನೆ ಕವಿತರೆ
ನಾರಾಯಣ ಸುಭಟಸೈನ್ಯಮಾಂತಿಱಿಯೆ ಮಹಾ
ಘೋರಮಪಾರಂ ರೌದ್ರಾ
ಕಾರಂ ರಣರಂಗಮದ್ಯುತಾಳಂಕಾರಂ ೬೪

ಆಡಿದವಟ್ಟೆಗಳೊಡನ
ೞ್ಕಾಡಿದವಿರ್ಬಲಮುಮಂತಸೃಗ್ಜಳದೊಳಗೋ
ಲಾಡಿದವು ಮರುಳ್ ಕುಣಿ [ಕುಣಿ]
ದಾಡಿದವಂಬರದೊಳೊಸೆದು ನಾಎದಗೊರವಂ ೬೫

ವ || ಆಗಳ್ ಜರಾಸಂಧಚಕ್ರವರ್ತಿ ತನ್ನ ಬಲಂ ಕಿಡೆಸತ್ತುದಂ ಕಂಡು ರಥಮನೆಯ್ದೆ ನೂಂಕಿದೊಡೆ ನಾರಾಯಣಂ ರಥಮನಿದಿರಂ ನೂಂಕಿ ನಿಂದಾತನೆಚ್ಚ ಬಾಣಂಗಳನೆಡೆಯೊಳ್ ಖಂಡಿಸಿದೊಡೆ ಕಿನಿಸಿ ವಿದ್ಯಾಯುದ್ಧಂಗೆಯೈ ಹರಿ ಬೇಗಂ ಪ್ರತಿವಿದ್ಯೆಗಳಂ ಭೇದಿಸಿ ನಿಂದುದಂ ಕಂಡು ಶಕ್ತಿಯಿನಿಟ್ಟೊಡಾ ಶಕ್ತಿಯುಮಂ ವಜ್ರಖೇಟದಿನಾಂತು ಗೆಲ್ದುದಂ ಕಂಡವನೊಳನುವರಮಂ ಮಾಣೆನೆಂದಾ ಚಕ್ರಮಂ ಕೊಂಡು ನಿಮಿರ್ದಾಗಳ್

ಮೇಘವಿಸ್ಫೂರ್ಜಿತ ||
ಸುರಾಮ್ನಾಯಂ ಬಾಯಂ ಬಿಡುವಿನೆಗಮತ್ಯುಗ್ರರೂಪಂ ವಿಭಾಸ್ವ
ತ್ಕರಾಕ್ರೂರ ಪ್ರಳಯದುರುಳಿಬರ್ಪಂದದೊಂದರ್
ಸು[ ರಾ ] ಚಕ್ರಂ ಶಕ್ರಂಗೆಳಸಲರಿದೆಂಬಂತು ಬರ್ಪಾಗಳೆಲ್ಲಂ
ಜರಾಸಂಧಂ ಕೊಂದಂ ಹರಿಯನೆನುತಂ ಬೆಕ್ಕಸಂಬಟ್ಟರಾಗಳ್ ೬೬

ಹರಿಣಿ ||

ಅಸುರರಗಿಯುತ್ತಿರ್ದರ್ ದಿವ್ಯಾನ್ವಯಂ ಮನಮಿಕ್ಕಿದರ್
ದೆಸೆಗಳೊಡನಾಕಂಪಂಗೊಳ್ವನ್ನಮಾದವು ಭೀತಿಯಿಂ
ವಸು [ಧೆ ಸುಗಿಯಲ್ ಸಾರ್ದತ್ತಳ್ಕಿ]ತ್ತು ಯಾದವಸೈನ್ಯಮೇ
ನಸದಳಮಗುರ್ವಾಯ್ತೋ ಚಕ್ರಾಗಮಂ ಸಮರಾಗ್ರದೊಳ್ ೬೭

ವ || ಅದಂ ಮನದೆಗೊಂಡು ಪಿಡಿದುಕೊಂಡು ನೀವಿರ್ದೆಯ್ದಿ ನೂಂಕಿ ನಿಂದು

ಉ || ಕಂಸನನಿಕ್ಕಿದಲ್ಲ ನೃಪವಿಗ್ರಹಮಕ್ಕುಮದಾದೆಂದು ಪೋ
ಗಂ ಸಮಕಟ್ಟಿ ಪೋಗಿ ಸುಖಮಿರ್ದಡೆ ಯಾದವವಂಶವೃಕ್ಷವಿ
ಧ್ವಂಸನನಪ್ಪೆನೆಂದುರದೆ ಬಂದೊಡದೀ ತೆಱನಾಯ್ತು ಬೇಡ ನೀ
ನಿಂ ಸೂಣಿಸೊಕ್ಕುಗೆಟ್ಟಿ [ರವಿ]ದೇಂ ನಡೆ ಗೆಲ್ಲದೊ [ಳೊ]ಳ್ಳಿತಕ್ಕುಮೇ ೬೮

ವ || ಎನೆ ಜರಾಸಂಧನುಮಿಂತೆಂದಂ

ಕಂ || ಮಱೆದೆನೆ ಕಂಸಂಗೊಂದೊಂ
ದಿಱಿವಗೆಯಂ ಗೆಲ್ವೆನೆಂದು ಬಗೆದು [ರು]ವಗೆಯಂ
ನೆಱಪುವೆನಣ್ಮೆಂದಾಗಳ್
ತಱಿಸಂದತಿಕುಪಿತನಾಗಿ ಬಾಳಂ ಕಿೞ್ತಂ ೬೯

ವ || ಅದಂ ಕಂಡಕ್ಕೆ ಜಯಂ [ನೀನಿದಱೊಳೆಯ್ವೆಯೊ] ಬಾಳಂ ಕಿೞ್ತಡೆ ಕೋಟಿಗಂಗೆ ಫಲಮಿನಿಸಕ್ಕುಂ ನಿನಗಿನಿಸಪ್ಪೊಡಮಾಗದಣ್ಮಿ

ಚಂ || ನೆಱೆದಿರು ತಿಣ್ಣಮೆಂದು ಹರಿ ಚಕ್ರದಿನಿಟ್ಟೊಡೆ ತನ್ನೃ ಪಶ್ಯಿರಂ
ಪಱಿದು ಸಿಡಿಲ್ದು ಪೋದೊಡೆಳೆಗೆ[ಯ್ದಿ] ಬೞಲ್ದೆಱಗಿತ್ತು ಭೀತಿಯಿಂ
ದೆಱಗದೊಡೆಲ್ಲಮಿಂತೆಱಗುವಂತಿರೆ ಮಾಡಿ [ದ ]ನೇಂ ಪ್ರತಾಪ [ಮಂ]
ನೆಱಪಿದನೇಂ ಜಗತ್ರಿತಯದೊಳ್ ನೆಗ[ೞ್ವಂ]ತಿರೆ ನೀರಜೋದರಂ ೭೦

ಕಂ || ಆಗಳೆ ಪೂಮಳೆ ಕಱೆದ
ತ್ತೋಗಡಿಸದೆ ನೋಡಿ ತಣಿದು ನಾರದಮುನಿಪಂ
ರಾಗದಿನಾಡಿದನೊಸೆದವು
ಬೇಗಂ ವಿಜಯಾನಕಂಗಳೆಸೆದವು ಗುಡಿಗಳ್ ೭೧

ವ || ಇಂತಲ್ಲದೆನ್ನ ಗೆಲ್ಲಮಂ ಖೇಚರ ಭೂಚರಸೈನ್ಯಮಱಿಯದೆಂದು ನಾರಾಯಣಂ ಪಾಂಚಜನ್ಯಮೆಂಬ ಶಂಖಮಂ ಪೂರಿಸಿದೊಡುೞದ ರಿಪುಸಾಧನಮೋಡಿತ್ತು ಬಲದೇವಾದಿ ಯಾದವಬಲದ ನಾಯಕರ್ ತಮ್ಮ ಮುಂದಣ ಪಡೆಯಂ ಗೆಲ್ದು ಹರಿಯಲ್ಲಿಗೆ ವಂದಿರ್ದರಾ ಬಾಳನಾಯಕರನೆತ್ತಿ ಜರಾಸಂಧ ಸಹಿತಂ ಪಿರಿಯರಪ್ಪರಸುಗಳ ಪೆಣಂಗಳಂ ಜಾಲಿಸವೇೞ್ದು ತೋಳ್ಗ[ಳಿನಂಬೇಱಿಸಿ] ಬೀಡಿಂಗೆ ವಂದು ಚಕ್ರಂ ಮೊದಲಾಗಳುಂ ಮಹಾ ರತ್ನಂಗಳುಮೆರವಂದುದಕ್ಕಂ ಶತ್ರುಕ್ಷಯಮಾದುದಕ್ಕಮೊಸಗೆಯಂ ಮಾಡಿ ಮಱುದೆವಸಂ ಪಯಣಂಬೋಗಿ ದ್ವಾರಾವತಿಯನಮರಾವತಿಯನಿಂದ್ರಂ ಪುಗುವಂತೆ ಕೃಷ್ಣರಾಜೇಂದ್ರಂ ಪುಗುವಾಗಳ್

ಉ || ಯಾದವವಂಶದೊಳ್ ನೆಗೞ್ದ ಚಕ್ರಧರಂಗೆ ಮುರಾಂತಕಂಗೆ ಪ
ದ್ಮೋದರ ನಾಮಧೇಯ ವಿಭುಗೆಯ್ದೆ ವಿಚಿತ್ರ ಕಳತ್ರ ಪುತ್ರ ಮಿ
ತ್ರಾದಿ ಸಮಸ್ತ ಬಂಧುಜನಮಾದರದಿಂದಿದಿರ್ವಂದು ಮಂಗಳಾ
ತೋದಿತ ವಾಕ್ಯದಿಂ ಪರಸಿ ಸೇಸೆಯನಿಕ್ಕಿದರಾದಮೞ್ಕಱಿಂ ೭೨

ವ || ಅಂತು ಸೇಸೆಯುಂ ಪರಕೆಯುಮನಾಂತು ಪೊಗೞ್ತೆಗೆ ಮೆಯ್ಯಾಂತು ಪೊೞಲಂ ಪೊಕ್ಕು ನೇಮಿನಾಥಂಗೆಱಗಿ ಸುಖಮಿರೆ ಶುಭಮುರ್ಹೂತದೊಳ್ ಸಾಮಂತ ಮಹಾಸಾಮಂತ ಮಂಡಳಾಧಿಪತ್ಯಾದಿ ಪರಿವಾರ ಪ್ರಧಾನರುಂ ಯಾದವಕುಲ ಪ್ರಧಾನರುಮಿರ್ದು ಸಿಂಹಾಸನಾರೂಢಂ ಮಾಡಿ ನಾರಾಯಂಣಗೆ ಪಟ್ಟಮಂ ಕಟ್ಟಿದಾಗಳ್

ಕಂ || ಏವೊಗೞ್ವುದಯ್ಯ ನೆಗೞ್ದಮ
ರಾವತಿಗಂ ದ್ವಾರವತಿಯೆ ಮಿಗಿಲಿಂದ್ರಂಗಂ
ದೇವಕಿಯ ಸುತನೆ ಮಿಗಿಲೆನೆ
ಭೂವಿಳಸಿತಮಾಯ್ತು ಪುರಯುಮಾ ನೃಪನಿರವುಂ ೭೩

ವ || ಎಂದು ಪೊಗೞೆ ನೆಗೞೆ ಪಟ್ಟಂಗಟ್ಟಿದ ಪೆಂಪು ಮುಗಿಲಂ ಮುಟ್ಟಿ ಪರಾಕ್ರಮದ ನುಕ್ರಮದಿಂ ಪರಚಕ್ರಂಗಳೆಲ್ಲಮಂ ಬಾಯ್ಕೇಳಿಸಲೆಂದು ವಿಜಯದಶಮಿಯೊಳ್ ದಿಗ್ವಿಜಯಂಗೆಯ್ದು

ಮ || ಸ್ರ ||

ಮಲೆಪರ್ ದ್ವೀಪಾಂತರಕ್ಷ್ಮಾದಿ ಪರಚಳನಿವಾಸಾಧಿನಾಥರ್ ಮಹಾಮಂ
ಡಲಪಾಳರ್ ದಕ್ಷಿಣಶ್ರೇಢಿಯ ಖಚರಕುಳಾಧೀಶರಾದೆಲ್ಲರುಂ ಬಾ
ಳ್ದಲೆಯಿತ್ತುಂ ತಮ್ಮ ಸರ್ವಸ್ವಮನೊಡನೆ ಭಯಭ್ರಾಂತಿಯಿಂ ತೆತ್ತುಮಿರ್ಪಂ
ತಲಘು ಪ್ರದ್ಯೋಗಿ ಬಾಯ್ಕೇಳಿಸಿ ಮಗುೞ್ದನುದಾತ್ತ ಪ್ರತಾಪಂ ಮಹೀಶಂ ೭೪

ವ || ಅಂತು ನಾರಾಯಣಂ ಶ್ರೀಖಂಡಮಂಡಳಾಧಿಪತಿಯುಮರ್ಧಚಕ್ರವರ್ತಿಯು ಮುಜ್ಜಳಕೀರ್ತಿಯುಮಾಗಿ ಮಗುೞ್ದು ಬಂದು

ಮ || ಸುರರಾಜಂ ಸುರಲೋಕಮಂ ಪುಗುವ[ವೊ]ಲ್ ನಾನಾ ವಿಧಾಳಂಕ್ರಿಯಾ
ಕರಮಂ ದ್ವಾ[ರ] ವತೀ ಪ್ರಸಿದ್ಧಪುರಮಂ ಚೆಲ್ವಾಗೆ [ನಾರೀಜನಂ]
ಬೆರಸಾತ್ಮಪ್ರಿಯ ಮಿತ್ರವರ್ಗಮಿದಿರ್ವಂದಾನಂದದಿಂ ಕಂಡು ವಿ
ಸ್ತರದಿಂ ಸೇಸೆಯ[ನಿ]ಕ್ಕೆ ಪೊಕ್ಕು ಸುಖದಿಂದರ್ದಂ ಪಯೋ[ಜೋ]ಧರಂ ೭೫

ಗದ್ಯ || ಇದರ್ಹತ್ಸರ್ವಜ್ಞ ಪಾದಪದ್ಮ ವಿರಾಜಿತೋತ್ತಮಾಂಗ ಶ್ರೀ ಬಂಧುವರ್ಮ ನಿಮಿರ್ತಮಪ್ಪ ಹರಿವಂಶಾಭ್ಯುದಯದೊಳ್ ನಾರಾಯಣ ವಿಜಯವರ್ಣನಂ

ದ್ವಾದಶಾಶ್ವಾಸಂ