ಊರ್ಜಸ್ವಿ ೩ – ೫೧ವ ಒಂದು ಕಾವ್ಯಾಲಂಕಾರ
ಊಳ್ ೧ – ೨೭, ೬ – ೧೮ವ ಕೂಗು, ಅರಚು

ಎಕ್ಕೆ ೧೦ – ೩೨ವ ಜತೆ, ಸಂಗ
ಎಗ್ಗ ೩ – ೪೪ ದಡ್ಡ
ಎಡಂಬಡು ೨ – ೯ ಅಸಮಾಧಾನ, ಎಡವಟ್ಟು
ಎಡಱು ೩ – ೬೦, ೪ – ೬ವ ಅಡ್ಡಿಮಾಡು
ಎಣೆಬಲ ೧೧ – ೬೨ವ ಸಮಬಲ
ಎರವು ೧೨ – ೭೧ವ ಕೈವಶ (?)
ಎರೆ ೮ – ೫೮ ಬೇಡು, ಯಾಚಿಸು
ಎರ್ಬಟ್ಟು ೪ – ೧೦, ೮ – ೨೭ವ ಬೆನ್ನಟ್ಟು
ಎಳಗೆಯ್ ೧೨ – ೧೭ವ ಎಳೆಯ ಪೈರನ್ನುಳ್ಳ ಹೊಲ
ಎಱಿಯಪ ೧೧ – ೬೨ ಒಂದು ಕ್ಷುತ್ರ ದೇವತೆ

ಏಡಗುಳ್ಳೆ ೭ – ೬೭ (?)
ಏಡಿಸು ೩ – ೩೧ ಹೀಯಾಳಿಸು
ಏವ ೧೦ – ೩೮ ಮತ್ಸರ, ವೈರ
ಏವ ೧೩ – ೨೦ವ ಅಪಮಾನ, ನಾಚಿಕೆ
ಏವಯ್ಸು ೭ – ೭೯ವ ಅಸಮಾಧಾನಪಡು
ಏಳಿದಿಕೆ ೨ – ೨ ತಿರಸ್ಕಾರ, ಹೀನಾವಸ್ಥೆ
ಏಳಿದೆ ೭ – ೩೯ ತಿರಸ್ಕೃತೆ

ಒಂದವಿಂದಿ ೧ – ೩೦ ಸೋಜಿಗ, ಆಶ್ಚರ್ಯ
ಒಗೆ ೬ – ೨೩ ಹೊಡೆ, ಕುಟ್ಟು
ಒಟ್ಟೆಕಿಲ ೭ – ೮೦ ಪ್ರತಿ, ಎದುರು (?)
ಒಟ್ಟುಂಬರಿಗೊಳ್ ೬ – ೩೩ ಗುಂಪಾಗಿ ಬೆನ್ನಟ್ಟಿ ಹೋಗು (?)
ಒಟ್ಟೈಸು ೫ – ೨೮ವ ಒಟ್ಟುಗೂಡಿಸು
ಒಡ್ಡೞಿ ೧೪ – ೩೧ ಸತ್ವಗುಂದ, ಕ್ರಮತಪ್ಪು
ಒಡ್ಡೈಸು ೪ – ೧೫ವ ಎದುರಿಸು, ಪ್ರತಿಭಟಿಸಿನಿಲ್ಲು
ಒರ್ಬುಳಿ ೧೧ – ೩೫ವ ಗುಂಪು, ಒಟ್ಟು
ಒಲ್ಲಣಿಗೆ ೧೩ – ೯; ಒಲ್ಲವಣಿಗೆ ೧೩ – ೮ವ  ಒದ್ದೆ ಬಟ್ಟೆ, ಸ್ನಾನಮಾಡುವಾಗ ಉಡುವ ಬಟ್ಟೆ
ಒಳಱು ೬ – ೧೬ ಕೂಗು, ಹುಯ್ಯಲಿಡು
ಒಱಗ ೨ – ೩೮ವ ಒಂದು ಜಾತಿಯ ಪಕ್ಷಿ
ಒಱೆ ೯ – ೧೪ ಬತ್ತಳಿಕೆ

ಓಜೆ ೩ – ೩೦ವ ಅಣಿ, ಒಪ್ಪ
ಓವರಿ ೩ – ೭೨ವ ೪ – ೩ವ ಕೋಣೆ, ಒಳಮನೆ
ಓಜ ೫ – ೨೮ವ ಗುರು

ಕಂಠಿಕೆ ೮ – ೧೯ವ, ೯ – ೪೩ವ ಕುತ್ತಿಗೆಸರ, ಹಾರ
ಕಂತಿ ೧೦ – ೩೦ವ ಜೈನಸಂನ್ಯಾಸಿನಿ
ಕಟ ೭ – ೬೩ ಆನೆಯ ಗಂಡಸ್ಥಳ
ಕಟಿಚಲ್ಲಿ ೩ – ೫೮ ಒಡ್ಯಾಂಕ್ಕೆ ತೆತ್ತಿಸಿರುವ ಸಣ್ಣನೆಯ ಗುಂಡುಕನ್ನಡಿ
ಕಡಂಗು ೧೧ – ೪೨ವ, ೧೧ – ೧೧೨, ೧೩ – ೮ ಮಸಗು, ಆವೇಶಗೊಳ್ಳು, ಉತ್ಸಾಹಗೊಳ್ಳು, ಉತ್ಸಾಹಪಡು
ಕಡವು ೨ – ೩೮ವ ಸಾರಂಗ
ಕಡುಬ ೧೧ – ೩೪ ಆವೇಶಗುಂದದವನು ಪರಾಕ್ರಮಿ
ಕಡ್ಡ ೧೧ – ೧೦೪ವ ಒರಟ, ದಡ್ಡ
ಕಣೆಯ ೧೨ – ೬೩ವ ಒಂದು ಬಗೆಯ ಆಯುಧ
ಕತ್ತಿಗೆ ೪ – ೩೬ ಕೈಗತ್ತಿ, ಮಚ್ಚು
ಕನಾಲ ೧೪ – ೩೬ವ ಒಂದು ಜಾತಿಯ ಮರ
ಕನ್ನೆತ್ತರ್ ೬ – ೪೪ ರಕ್ತ
ಕಪ್ಪಡ ೪ – ೭ವ ಬಟ್ಟೆ
ಕಪ್ಪಡಿ ೨ – ೩೮ವ ಬಾವಲಿ
ಕಪ್ಪಡಿಗ ೫ – ೧೩ವ ಕರ್ಪಟಿಕ, ಹರಕು ಬಟ್ಟೆಗಳನ್ನು ಧರಿಸಿದವನು
ಕಬ್ಬಿ ೬ – ೨೦ ಕಡಿವಾಣ
ಕಮ್ಮೆಣ್ಣೆ ೪ – ೬ವ ಪರಿಮಳದ ಎಣ್ಣೆ
ಕರಂಕೆ ೯ – ೩೦ವ ಕರಂಕ, ತಲೆಬುರುಡೆ
ಕರಂಡಕೆ ೨ – ೫ವ ಮುಚ್ಚಳವಿರುವ ಸಣ್ಣಪಾತ್ರೆ, ಭರಣಿ
ಕರಡ ೧೧ – ೪ ಕಾಡು ಅಥವಾ ಬೆಟ್ಟದ ಮೇಲೆ ಬೆಳೆದ ಒಣಗಿದ ಹುಲ್ಲು
ಕರಭ ೧೦ – ೩೧ವ ಒಂಟೆ
ಕರುಮಾಡ ೨ – ೫ವ ಉಪ್ಪರಿಗೆ
ಕರ್ಕಡೆ ೧೦ – ೧೦ ಒಂದು ಬಗೆಯ ಆಯುಧ (?)
ಕರ್ಚು ೧೪ – ೨೩ವ ಕಚ್ಚು, ತಿನ್ನು
ಕಲ್‌ ೧೩ – ೩೮ ಕಲಿ
ಕಲ್ಲೆಯುಂ ಕವಿಯುಂ ೪ – ೧೪ವ ಅಲ್ಲೋಲ ಕಲ್ಲೋಲ
ಕವಿಲ್ ೨ – ೪೧ ಮಾಸಲುಗೆಂಪು ಬಣ್ಣ
ಕವಿಲ್ಗಣ್ ೨ – ೧೪ ಕಪಿಲವರ್ಣದ ಕಣ್ಣು
ಕಳಾಚಾರಿ ೯ – ೬ವ ಕಲಾಚಾರ್ಯ
ಕಳಿಂಕೆ ೫ – ೫ವ ಮೊಳಕೆ, ಮೊಗ್ಗು
ಕಱುತ್ತು ೬ – ೫೪, ೧೧ – ೮ ಕೋಪಗೊಂಡು, ಕೆರಳಿ
ಕೞಲ್ ೮ – ೭೨ವ ಕುಗ್ಗು, ಕುಸಿ
ಕೞವೆ ೯ – ೩೨ವ ಬತ್ತ
ಕಾಚವಳಯ ೪ – ೩೨ವ ಗಾಜಿನ ಬಳೆ
ಕಾದಲ್ ೩ – ೫೦ವ ಪ್ರೀತಿಪಾತ್ರ
ಕಾಮ ೪ – ೭ ವ ಧನ
ಕಾಯ್ಪು ೮ – ೭೩ವ ಕೋಪ
ಕಾರ್ಕೋಳಿ ೨ – ೩೮ವ ಕಾಡುಕೋಳಿ
ಕಾಲ್ಗೋಯ್ ೨ – ೫೨ ಕಾಲನ್ನು ಕಟ್ಟು, ಬಂಧಿಸು
ಕಾಲ್ಪೀಸ ೨ – ೩೭ (?)
ಕಾೞ್ಪುರ ೧೨ – ೧೭ವ ಕಾಡುಪ್ರವಾಹ
ಕಿಣಿ ೧೪ – ೧೪ವ ಹಲ್ಲಿನ ಕೊಳೆ
ಕಿಷ್ಠಿಂದ ೨ – ೩೮ ವ ಒಂದು ಜಾತಿಯ ಹಕ್ಕಿ
ಕಿಸುಗಣ್ಣು ೧೦೩೬ವ ಅತಿ ಕೋಪಗೊಳ್ಳು
ಕಿಸುಗುಳ ೧೦ – ೧೦ ಅಲ್ಪ, ಹೀನ
ಕಿಱುಕುಣಿಕ್ಕೆ ೧೩ – ೨೦ ಸಣ್ಣ ಗಂಟು
ಕಿಱುಕುಳ ೧೧ – ೧೦ವ ಅಲ್ಪ, ತುಚ್ಛ
ಕಿಱುಪು ೧೧ – ೩೪ ಹಾರು, ಕುಣಿ
ಕೀಲಷೆ ೯ – ೪೩ವ ಕಟ್ಟು, ಬಂಧ, ರಚನೆ
ಕೀಲಿಸು ೩ – ೧೧ವ ಕಟ್ಟು
ಕೀಱು ೫ – ೩೮ವ ಒತ್ತಾಯಮಾಡು
ಕೀೞಿಲ್ ೧೩ – ೩೧ವ ಸೇವಕರ ಮನೆ
ಕುಂಟಣಿ ೧ – ೫೨ವ ತಲೆಹಿಡುಕಿ
ಕುಂದ ೨ – ೪ ಮೊಲ್ಲೆ, ಕೋಲುಮಲ್ಲಿಗೆ
ಕುಂಬು ೧೧ – ೨೧ ನಮಸ್ಕರಿಸು, ಬಗ್ಗು
ಕುಚಂದನ ೭ – ೭ ಕೆಂಪುಗಂಧದ ಮರ
ಕುಟಜ ೭ – ೭ ಕೊಡಸಿಗೆ ಮರ
ಕುತ್ತ ೬ – ೪೫ವ ರೋಗ
ಕುಯ್ಯಲ್ ೮ – ೭೨ ಕೊಯ್ಲು, ಫಸಲು
ಕುರವಕ ೭ – ೭ ಗೋರಂಟಿ ಮರ
ಕುಱುವ ೩ – ೧೧ವ, ೪ – ೧೫ವ ದ್ವೀಪ
ಕುಱುಕುಣಿಕೆ ೧೦ – ೩೪ ಕಿಱುಕುಣಿಕೆ, ಕಿರುಬೆರಳು
ಕೂಂಟಣಿ ೩ – ೩೨, ೩ – ೩೩ ತಲೆಹಿಡುಕಿ
ಕೂಕಿಱಿ ೧೨ – ೫೮ ಗಟ್ಟಿಯಾಗಿ ಕೂಗು
ಕೂರಿಗೆ ೨ – ೩೮ವ ಬೀಜ ಬಿತ್ತುವ ಸಾಧನ
ಕೂವಕಂಭ ೪ – ೧೪ವ ಹಡಗಿನ ಮಧ್ಯದ ಕಂಭ
ಕೆಂಕ ೩ – ೩೬ ಕೆಂಪು
ಕೆಂಗಣ್ಣ ೨ – ೩೮ವ ಕೋಗಿಲೆ
ಕೆಂಗೋಲ್ ೮ – ೪೨ ಕೆಂಪಗೆ ಕಾಯಿಸಿದ ಬಾಣ
ಕೆನ್ನೆಂ ೭ – ೧೨,೧೦ – ೩೪ ಅಧಿಕವಾಗಿ, ಹೆಚ್ಚಾಗಿ
ಕೆಯ್ತ ೩ – ೪೦, ೫ – ೧೨ ಕಾರ್ಯ, ಕೆಲಸ, ರಚನೆ
ಕೆಯ್ತಗು ೫ – ೧೧ವ ಯೋಗ್ಯರೀತಿಯಲ್ಲಿ ಅಲಂಕರಿಸು
ಕೆರಳ್ ೬ – ೧೯ವ ಗಟ್ಟಿಯಾಗಿ ಕೂಗು, ಕೆರಳು
ಕೇರ್ ೬ – ೫ವ ಗೋಡೆ
ಕೇರು ೨ – ೩೮ವ ಗೇರುಮರ
ಕೇಲ ೩ – ೨೩ ಮಣ್ಣಿನಿಂದ ಮಾಡಿದ ಗಡಿಗೆ
ಕೈಪಿಡಿ ೧ – ೪೮ ಕನ್ನಡಿ
ಕೈಪೊಡೆ ೯ – ೧೪ ಬಾಣದ ಹಿಡಿ
ಕೊಂತ ೧೦ – ೩೨ವ ಒನಕೆ
ಕೊಕ್ಕರಿಕೆ ೪ – ೮, ೧೦ – ೭ವ ಅಸಹ್ಯ
ಕೊಟ್ಟುಕ ೨ – ೩೮ವ ಟಿಟ್ಟಿಭ ಎಂಬ ಹಕ್ಕಿ
ಕೊತ್ತಳಿಗೆ ೧೨ – ೨೦ ಕೋಟೆಯತೆನೆ ಬುರುಜು
ಕೊದಳ್ ೩ – ೫೭ ತೊದಲು, ಬಿಕ್ಕಲು
ಕೊಳ್ಕೊಡೆ ೭ – ೭೦ವ ಕೊಳುಕೊಡೆ, ಸಂಬಂಧ
ಕೊಱಚಾಟ ೫ – ೮ ಅಣಕ
ಕೋಡಗಗಟ್ಟು ೮ – ೭೩ ಕಪಿಯನ್ನು ಕಟ್ಟುವಂತಹ ಕಟ್ಟು
ಕೋಡು ೧೪ – ೨೩ವ ದಂತ, ಕೋರೆಹಲ್ಲು
ಕೋಳ್ ೪ – ೧೨, ೧೧ – ೩೯ ಕೊಳ್ಳೆ, ಹಿಡಿತ, ಆಕ್ರಮಣ
ಕೋಳಡ ೧ – ೨೪ (?)
ಕೋಳ್ಗುದಿಗೊಳ್ ೧೦ – ೧೦ ದುಃಖಪಡು
ಕೋಳ್ವಾಯ್ ೧೧ – ೪೧ವ ಸೆರೆಹಿಡಿದ ಸ್ಥಳ
ಕೋೞ್ಮಿಹ ೮ – ೧೩ ಕೋಡುಳ್ಳ ಪ್ರಾಣಿ
ಕೌಸುಂಭ ೧ – ೩೯ವ ಕೇಸರಿಬಣ್ಣ
ಕ್ಷಪಕ ೧೦ – ೩೧ವ ಜೈನಸಂನ್ಯಾಸಿ

ಖಾತಿಕೆ ೧೧ – ೩೨ ಕೊಳ
ಖಾಸ ೧೩ – ೩೧ವ ಕೆಮ್ಮಲು
ಖೇಟ ೩ – ೧೨ವ ಅಡಗಡಣ, ಗುರಾಣಿ

ಗಂಡವರ್ಕಳ್ ೪ – ೩ವ ಶೂರರು
ಗಂಡವೇಟ ೮ – ೫೨ವ ಗಂಡುವೇಟ, ಗಂಡಸಿನಲ್ಲುಂಟಾಗುವ ಪ್ರೀತಿ (?)
ಗಂದಿಗವಸರ ೪ – ೧೦ವ ಸುಗಂಧ ದ್ರವ್ಯಗಳ ಅಂಗಡಿ
ಗಜೆ ೧೨ – ೪೬ವ ಗದೆ
ಗತ್ತ ೪ – ಗರ್ತ, ಕುಳಿ
ಗದ್ಯಾಣ ೪ – ೧ವ ನಿರ್ದಿಷ್ಟತೂಕದ ಹಣ
ಗರುಣಿ ೧೦ – ೩೩ವ ೧೦ – ೩೬ವ ಗರುಡಿ(?)
ಗಾಮರ ೧೩ – ೨ ಗಾವರ, ನಾದ
ಗಾರಣ ೬ – ೧೨ವ ದೂರು
ಗಾವರ ೨ – ೨೮ ಧ್ವನಿ
ಗುಂಡುವೇಷ ೯ – ೩೦ವ ಆಳಿನ ವೇಷ (?)
ಗುಗ್ಗುಳ ೧೦ – ೧೦ ಒಂದು ಬಗೆಯ ಸುಗಂಧ ಧೂಪದ್ರವ್ಯ
ಗುಡಿಗಟ್ಟು ೨ – ೧೧ವ ಸುತ್ತುಗಟ್ಟು
ಗುಣಿಯಿಸು ೧೦ – ೩೩ವ ಬಿಲ್ಲಿನ ಹಗ್ಗವನ್ನು ಧ್ವನಿಮಾಡು
ಗುರ್ವಿಸು ೮ – ೪೬ ಅಗುರ್ವಿಸು, ಭಯಪಡು
ಗೂಂಟು ೭ – ೬೫ (?)
ಗೆತ್ತು ೧೧ – ೫೦ವ ತಿಳಿದು, ಭಾವಿಸಿ
ಗೊಂದಳ ೧ – ೨೧, ೧೨ – ೪೪ ಗುಂಪು
ಗೊಡ್ಡ ೨ – ೭೭ವ, ೪ – ೬ ತುಂಟಾಟ, ಚೇಷ್ಟೆ
ಗೋಮುಖಿ ೬ – ೨೧ವ ಒಂದು ನೋಂಪಿಯ ಹೆಸರು
ಗೋಶೀರ್ಷ ೯ – ೩ವ, ೯ – ೩೫ವ ಗಂಧದ ಮರ
ಗೋಱ್‌ಮೇಳ್ ೧೩ – ೨೨ವ (ದನಗಳ)ಹುಯ್ಯಲು, ಕಿರಿಚಾಟ
ಗೋೞುಂಡೆಗೊಳ್ ೯ – ೧೬ವ ದುಃಖಪಡು
ಗ್ರಂಥಿಮ ೨ – ೨೯ವ ಹೂವು ಕಟ್ಟುವ ಒಂದು ಬಗೆ

ಘಟ್ಟಿವಳ್ಳ ೨ – ೨೮ವ, ೫ – ೫ವ ಗಂಧ ತೇಯುವವನು
ಘಸಣಿ ೩ – ೧೧ವ ಕಷ್ಟ, ತೊಂದರೆ
ಘೋೞಾಯಿಲ ೧ – ೧೦೬ರ ರಾವುತ

ಚಂದ ೭ – ೭ ಒಂದು ಜಾತಿಯ ಮರ
ಚಟ್ಟ ೫ – ೨೮ವ, ೫ – ೩೧ ಛಾತ್ರ, ಶಿಷ್ಯ
ಚಲ್ಲ ೩ – ೭೨, ೧೩ – ೬ ಚಲ್ಲಾಟ, ವಿನೋದ
ಚಲ್ಲಂಬೇಱು ೩ – ೫೦ ಸಂತೋಷ ಹೆಚ್ಚಿಸು
ಚಲ್ಲಣ ೨ – ೩೨ ಚಡ್ಡಿ
ಚವುರಿ ೨ – ೩೨ವ ಚಮರೀಮೃಗ
ಚಾಮೀಕರ ೭ – ೭೨ ಚಿನ್ನ
ಚಾರಿ ೩ – ೭೦ವ ದಾಳ
ಚಿಕ್ಕುಟ ೭ – ೭೫ ಚಿಗುಟ
ಚೀರ ೯ – ೬ವ ವಸ್ತ್ರ
ಚೆಂಕೊನ್ನಿಗರಬ್ಬೆ ೫ – ೫ವ (?)
ಚೌಕಿಗೆ ೩ – ೬೯ವ ಮನೆಯ ಅಂಗಣ
ಚೌಪಳಿಕೆ ೨ – ೩೦ವ, ೧೧ – ೧೪ವ ಚೌಪಳಿಗೆ, ಮಂಟಪ
ಚೌವಟ ೯ – ೩೮ ನಾಲ್ಕುದಾರಿಗಳು ಸೇರುವ ಸ್ಥಳ
ಚೌವಳಿಗೆ ೫ – ೧೨ವ ಮಂಟಪ

ಛರ್ದಿಸು ೯ – ೩೧ ವಾಂತಿಮಾಡು
ಛಾತ್ರ ೩ – ೧ವ, ೫ – ೨ವ ಶಿಷ್ಯ

ಜಂಬಿರ ೭ – ೭ ಜಂಬೀರ, ನಿಂಬೆ
ಜಾಮಿಸು ೧೪ – ೫೦ ಸುಡು (?)
ಜಾಲಿಸು ೧೨ – ೭೧ವ ಆರಿಸಿ ತೆಗೆ
ಜಾಲಗಾಱ ೧೪ – ೩೫ವ ಬೆಸ್ತ
ಜಿಂಜಿರು ೧೩ – ೩೩ (?)
ಜಿವುಳಿದುೞಿ ೪ – ೫೩ ಚಿಗುಳಿಯನ್ನು ತುಳಿದಂತೆ ತುಳಿ
ಜೇಱೇೞು ೧೨ – ೫೧ ಜೀರೆಂದು ಶಬ್ದಮಾಡು
ಜೋವಱೆ ೮ – ೪೯ ಜೋಲಾಡು, ತೂಗಾಡು (?)

ಠಮಾಳ ೧೨ – ೮ ಕುಟಿಲ, ಮೋಸ

ಡಾಮರ ೨೮ ಕೋಟಲೆ, ಹಿಂಸೆ
ಡೊಂಬೆಸಿರಿ ೧೧ – ೧೦೪ ಚಂಚಲೆಯಾದ ಲಕ್ಷ್ಮಿ

ತಮಾಳ ೭ – ೭ ಹೊಂಗೆಯಮರ
ತರಟ್ಟು ೯ – ೭ವ ಬೋಳು
ತಲೆನೀರ್ ೧ – ೨೯ವ ಮಂಗಳಸ್ನಾನ
ತವಸಿಗ ೧೧ – ೮೯ ತಪಸ್ವಿ
ತಱಂಬು ೧೪ – ೧೨ ಒರಟುನೆಲ
ತಱು ೮ – ೧೩ವ ಖದಿರೆಯ ಮರ
ತಱುಬು ೧೪ – ೩೫ವ ಒರಟುನೆಲ
ತಾೞು ೧ – ೧೧ ತಾಳೆಗರಿ, ಓಲೆಗರಿ
ತಿಂಟೆ ೩ – ೮ವ ರಾಶಿ, ಗುಡ್ಡೆ
ತಿದಿ ೯ – ೬೨ ಚರ್ಮದ ಚೀಲ
ತಿರುವಾಯ್ ೧೧ – ೧೪ವ ಬಿಲ್ಲಿನ ಹೆದೆ
ತೀಟ ೩ – ೮ವ ತೀಡುವಿಕೆ
ತುಮುಳ ೧೧ – ೧ ಭೀಕರ
ತುಯ್ಯಲ್ ೯ – ೩೨ವ ಪಾಯಸ
ತುಱುಂಬು ೧ – ೪೦ವ ಮುದುಡಿಕೊಳ್ಳು
ತುಱುಗೆಮೆಗಣ್ ೩ – ೪೫ ದಟ್ಟವಾದ ರೆಪ್ಪೆಕೂದಲ ಕಣ್ಣು
ತುೞಿಲಸಂದ ೧೦ – ೩೧ವ, ೧೧ – ೫೮ವ ವೀರ
ತುೞಿಲಾಳ್‌ ೧ – ೫೭ ವೀರಭಟ
ತೂಗುಂದಲೆ ೨ – ೧೧ವ ತೂಗಾಡುವ ತಲೆ
ತೆರ್ಪಱು ೮ – ೫, ೧೪ – ೬ವ, ೧೪ – ೫೦ವ ಎಚ್ಚತ್ತುಕೊಳ್ಳು
ತೆಲ್ಲಿಗ ೧೪ – ೪೯ವ ಗಾಣಿಗ
ತೊಂಗಳ್‌ ೧೪ – ೬ವ ಕುಚ್ಚು
ತೊಂಡಿಕೆ ೨ – ೬, ೫ – ೩೧ವ ತುಂಟತನ
ತೋಡು ೧೧ – ೧೧೦ ಬಾಣವನ್ನು ತೊಡುವಿಕೆ
ತೋಲ್‌ ೩ – ೨೩ ತೊಗಲು, ಚರ್ಮ
ತ್ರಿಪತಾಕ ೨ – ೩೩ವ ಒಂದು ಹಸ್ತಾಭಿನಯ
ತ್ರಿಸ್ಥೂಳ ೧೧ – ೪೧ವ ತ್ರಿವಿಧ ಶಕ್ತಿ (?)

ದಂಡಿತ ೨ – ೪೦ (?)
ದಂದುಗ ೧ – ೧೫ ತೊಂದರೆ, ಕಷ್
ದಕ್ಕಾಲಿ ೧೪ – ೪೭ವ ಗುಳಿಬಿದ್ದ ಕಣ್ಣು
ದಕ್ಕು ೬ – ೭ವ ದಸಿ, ಚೂಪಾದ ಗೂಟ
ದಕ್ಕುಂದಲೆ ೨ – ೧೧ವ ಶೂಲದ ಮೇಲಣ ತಲೆ
ದಯಿತ ೩ – ೧೭ ಪತಿ, ಯಜಮಾನ
ದವಳಾರ ೩ – ೪೯ವ ಅರಮನೆ
ದಶವಂದ ೧೦ – ೩೬ವ ಹತ್ತರಲ್ಲಿ ಒಂದು ಭಾಗ
ದಳಿಂಬ ೩ – ೫೪ವ, ೧೪ – ೩೦ವ ಬಟ್ಟೆ, ಶುಭ್ರವಸ್ತ್ರ
ದಾಹಿಸು ೭ – ೭೦ವ ದಹಿಸು
ದಿಣರ್‌ ೧೪ – ೨೬ ಒಂದು ಅನುಕರುಣ ಶಬ್ದ
ದುರ್ಯೋಧನವಾಡಿ ೨ – ೩೮ವ
ದುರ್ಯೋಧನನ ಅಂತಃಪುರ (?)
ದೂಪೆ ೨ – ೧೧ (?)
ದೊಮ್ಮಳಿಸು ೧೧ – ೧೧೨ ಸಂಭ್ರಮದಿಂದ ಸುತ್ತಾಡು
ದ್ವಿಪ ೫ – ೩೧ ಆನೆ

ನಂದ್ಯಾವರ್ತ ೭ – ೩೦ ನಂದಿಬಟ್ಟಲ ಹೂವು
ನಣ್ಪು ೧೧ – ೨೨ವ ಸ್ನೇಹ
ನಾಗ ೭ – ೭ ಒಂದು ಜಾತಿಯ ಮರ
ನಾಗವಟ್ಟಣಿಗೆ ೩ – ೩೭ ಒಂದು ಬಗೆಯ ವಸ್ತ್ರ
ನಾಣರ್‌ ೨ – ೩೨ವ (?)
ನಾಣಿಲಿ ೩ – ೬೧, ೧೧ – ೧೦೪ ನಾಚಿಕೆಯಿಲ್ಲದ
ನಾತ ೫ – ೫ ದುರ್ವಾಸನೆ
ನಾರ್‌ ೪ – ೧೨ ದುರ್ವಾಸನೆ
ನಾವಿದ ೯ – ೬ವ ಕ್ಷೌರಿಕ, ಹಜಾಮ
ನಾೞ್ಜೋಡೆ ೧೧ – ೧೦೪ ಪ್ರಸಿದ್ಧಳಾದ ಜಾರೆ
ನಿಕ್ಕುವ ೮ – ೧೬ ನಿಜ, ಸತ್ಯ
ನಿಚ್ಚಟ ೧೨ – ೨೫ವ, ೧೩ – ೨೮ವ ದೃಢ, ಸ್ಥಿರ
ನಿಟ್ಟೆವಡಿಸು ೧೦ – ೩೧ವ ನಿಷ್ಠೆಯನ್ನು ಹೊಂದು
ನಿತ್ತರಿಸು ೧೦ – ೨೦ವ, ೧೧ – ೮೩ ನಿರ್ವಹಿಸು
ನಿಧುವನ ೨ – ೪೯ ಸಂಭೋಗ
ನಿಪ್ಪುಗೆ ೪ – ೧೪ವ ಹೆಚ್ಚಾದ (?)
ನಿಯಮ ೮ – ೬೫ ನೇಮ
ನಿಸದ ೬ – ೧೯, ೧೧ – ೭೭ ನಿಜ, ಸತ್ಯ
ನಿಱುದಲೆ ೫ – ೭ ಕ್ರಮವಾಗಿ ಬಾಚಿದ ತಲೆ
ನೀರ್ಗಾದಿಗೆ ೧ – ೨೩ ನೀರುಳ್ಳ ಕಂದಕ
ನೀಲಾವಳಿ ೧ – ೪೨ವ ನೀಲಿಬಣ್ಣದ ರೇಷ್ಮೆ ವಸ್ತ್ರ
ನುಡಿವಳಿ ೧೧ – ೮೦ ಪ್ರತಿಜ್ಞೆ, ಮಾತು
ನುಣ್ಪಳಿ ೧೪ – ೩೩ವ (?)
ನುಲುವ ೭ – ೬೭ (?)
ನೆಗರ್ತೆ ೩ – ೬೨, ೪ – ೩೪, ೮ – ೫೨ವ ನೆಗೞ್ತಿ, ಪ್ರಸಿದ್ಧಿ
ನೆಯ್ಯೇಱಿಸು ೧೧ – ೧೩ವ ಎಣ್ಣೆಯನ್ನು ಹಚ್ಚು
ನೆಲ್ಲಕೆಯ್‌ ೧ – ೧೮ವ ಬತ್ತದ ಗದ್ದೆ
ನೆೞಲ್‌ ೧೧ – ೨೪ವ ಒಂದು ಜಾತಿಯ ಮರ
ನೇಣ್‌ ೪ – ೨೬ವ ಹಗ್ಗ
ನೇಲಿಸು ೧ – ೧೨ ಸೇರಿಸು, ತಗುಲುಹಾಕು (?)
ನೊಕ್ಕ ೨ – ೧೪ ಹೊರಬಂದ (?)
ನೊೞಲೆ ೭ – ೬೭ ಒಂದು ಬಗೆಯ ನೀರುಹಾವು