ವ || ನೋಡಿ ರೂಪಕಮೆಂಬುದಿಂತಪ್ಪುದುಮೆನುತ್ತಂ ಪೋಗಿ ಮತ್ತೊಂದು ಮನೆಯ ಮುಂದೆ

ಮ || ಎಸೆದಂತೊಪ್ಪಿರೆ ಕೆಂಕಮಾಗಿ ಘನದಂ ಕಯ್ಗೆಯ್ದು ಬಂದೊತ್ತೆಗೆಂ
ದೊಸೆದಿರ್ದೀಕೆಯ ತೊಟ್ಟ ಭೂಷಣಗಣವ್ಯೋಮಾರ್ಧ ರತ್ನಪ್ರಭಾ
ಪ್ರಸರಂ ರಕ್ತತೆಯಿಂ ಮನೋಹರ ಲಸತ್ ಪದ್ಮಾಶ್ರಯಾಲಕ್ತಕಾ
[ರಸ]ದಿಂದಂ ನಡೆಪಾಡುತಿರ್ದಿರರವುಮಂಗೋದ್ಯತ್ ಧರಾಭಾವಮಂ ೩೬

ವ || ಈ ಶ್ರೀ [ವನಿ]ತೆ ದೀಪಕಚ್ಛಾಯೆಯಿನಿರ್ದಳೆನುತ್ತಂ ಪೋಗಿ ನೋೞ್ಪರಲ್ಲಿ

ಚಂ || ಸೊಗಯಿಸ ತೋರಮಲ್ಲಿಗೆಯ ಪೆರ್ಮುಡಿ ಶೋಭಿಸೆ ರಾಗದಿಂದಮು
ಟ್ಟಗಲದ ನಾಗವಟ್ಟಣಿಗೆಯುಂ ಸುಲಿಪಲ್ ಕರಮೊಪ್ಪೆ ನಾಡೆಯುಂ
ಸೊಗಯಿಸೆ ಮುತ್ತಿನೊಳ್ದುಡುಗೆ ರಂಜಿಸೆ ಚಂದನವಳ್ಕೆ ನಲ್ಲನ
ಲ್ಲಿಗೆ ಬೞಿಯಟ್ಟಿ ನಿಂದ ತಲೆಮಿಂದ ಲತಾಂಗಿಯನಂದು ನೋಡಿದರ್ ೩೭

ವ || ಈ ವೃತ್ತದಥೋಕ್ತಿಯಂತಿರ್ದಪ್ಪಳೀಯಕೆಯೆನುತ್ತ ಪೋಪರ್ ಮತ್ತೊಂದೆಡೆಯೊಳ್

ಚಂ || ಸುಲಲಲಿತ ರೂಪೆಯೊರ್ವಳನುರಾಗದೆಕಯ್ಗೆಯಲಿರ್ದೊಡಾಕೆಗ
ಗ್ಗಲಿಸಿದ ಮೇಳದಾಕೆ ನುಡಿಗುಂ ನಿನಗಚ್ಚಿಗಮೇನೊ ಭೂಷಣಾ
ವಳಿಗಳನಿಟ್ಟು ತೊಟ್ಟು ಪಲವಂದದೆ ಪೂಸಿಯುಮಿಂತಿದೇಕೆ ಪೇೞ್
ಜಳಜದಳಾಕ್ಷಿ ನೀಂ ಮಱಸುವೌ ನಿಜರೂಪದ ಚೆಲ್ವಿನಂದಮಂ ೩೮

ವ || ಅಂತು ವಚನದಾಕ್ಷೇ[ಪ]ಮನವರ್ಗಱಿಪುತ್ತಂ ಪೋಗೆ ಮತ್ತೊಂದೆಡೆಯೊಳ್

ಚಂ || ಮದನಗಜೇಂದ್ರದಂದದೊಳೆ ಪೆಂಪೆಸೆದಿರ್ದ ವಿದಗ್ಧೆಯತ್ತ ಸಾ
ರದೆ ಕಡುಗೋವನೊರ್ವನೞಿಗೆಯ್ತದೊಳೊಂದಿದೆ ಪಾಱುವರ್ಗದೇ
ಳಿದೆಗಿರದೊತ್ತೆಯಿಟ್ಟೊಸೆದು ಪೋದನದಂತೆಯುಮಲ್ತೆ ತಕ್ಕನ
ಲ್ಲದ ಮನುಜಂ ಪ್ರಭುತ್ವದೆಡೆಗೊಲ್ಗುಮೆ ಸಲ್ಗುಮೆ ಪೆಂಪಿನೋಜೆಯೊಳ್ ೩೯

ವ || ಈ ಮಾತರ್ಥಾಂತರ ವಿಜ್ಞಾನಮೆಂದಱಿಪುತ್ತುಂ ಪೋಗಿ ಪೆಱತೊಂದು ದಿವ್ಯ ಭವನೋಪವಸುಧಾಲಯದಲ್ಲಿ ದಿವ್ಯಾಂಗನೆಯಂತಿರ್ದಳಂ ಕಂಡಿಂತೆಂಬರ್

ಮ || ನುಡಿಯೊಳ್ ಕೆಯ್ತದೊಳೋಜೆಯೊಳ್ [ಸೊ]ಬಗಿನೊಳ್ ಸೌಂದರ್ಯದೊಳ್ ಗಾಡಿಯೊಳ್
ನಡೆಯೊಳ್ ನೋೞ್ಪೆಡೆಯೊಳ್ ವಿಳಾಸದೆಡೆಯೊಳ್ ಚಾತುರ್ಯದೊಳ್ ನೋೞ್ಪಡೇ
ಪಡೆಮಾತೀಕಯುಮೂರ್ಬಸೀಲಲನೆಯುಂ ತಾಮೊರ್ಬರೆಂಬನ್ನರಾ
ದೊಡಮೇಂ ಮಾನಸೆಯೀಕೆ ದಿವ್ಯೆಯವಳೆಂಬೀ ಭೇದಮೊಂದುಂಟೆನಲ್ ೪೦

ವ || ಎಂದಾಕೆಯಂ ವ್ಯತಿರೇಕಾರ್ಥದೊಳ್ ಪೊಗೞುತ್ತಂ ಮತ್ತಿನಿಸಂ ನಡೆವೂರೊಂದೆ ಡೆಯೊಳೊರ್ವಳ ರೂಪನೊಳ್ಪಂ ಕೇಳ್ದೊರ್ಬನರಸುಮಗನವಳ್ಗೊತ್ತೆಯಂ ಕೊಟ್ಟೊಡಗೊಂಡು ಬನ್ನಿಮೆಂದು ವೇಸರಿಯುಮಂ ಕಿಱಿದಾಳುಮನಟ್ಟಿದೊಡರಸರ ಮಕ್ಕಳ್ ಕರಂ ವ್ಯಾಳರುಂ ಕ್ರಿಯಾಳರುಮಪ್ಪರೆನ್ನ ಮಗಳನೆಂತಟ್ಟುವೆನೆಂದ ತಾಯನೊರ್ವಳಿಂತೆಂಬಳ್

ಮ || ಮೊಗಮಂ ನೋಡದೆಯುಂ ಸ್ವಭಾವಮಱಿವಳ್ ಮೆಯ್ ಪೊರ್ದದಿರ್ದುಂ ಮನಂ
ಬುಗುವಳ್ ಭಾವಿಸದಾತನಲ್ಲದೊಡಮೇಂ ಸಂಪರ್ಕದೊಳ್ ಗಂಡನಿ
ಚ್ಛೆಗೊಳಲ್ಕಾ ರತಿಯನ್ನಳಿಂತು ಬಿಡದೆಚ್ಚಾರಿದ್ದ ಬಿಲ್ಲನ್ನಳೀ
ಕೆ[ಗೆ ನೀನಿಂತುರೆ]ಚಿಂತಿಪೈ ಚದುರ ಪೆಂಪಾರಾದೊಡಂ ಗೆಲ್ಲದೇ ೪೧

ವ || ಎಂದ ಗಣಿಕೆಯ ಮಾತಂ ಭಾವನಾರ್ಥಮೆಂದಱಿಯೆ ಪೇೞುತ್ತಂ ಬರ್ಪನೊಂದು ತಾಣದೊಳ್ ಪಲರುಂ ವಿದಗ್ಧವಿಟ[ರಿ]ರ್ದಲ್ಲಿಯೊರ್ವನಿಂತೆಂದಂ

ಚಂ || ಬರಿಪುದು ಬಾರದಿರ್ದ ನರನಂ ಬರುತಾಗಳೆ ಪೋಪಡಪ್ಪುಕೆ
ಯ್ದಿರಿಪುದು ಮೂರ್ಖನಾಗಿ ತಡೆದಿರ್ಪಡೆ ಪೋಗನೆ ಮಾೞ್ಪುದಾಗಳುಂ
ಕರಮನುರಾಗಮಂ ಪಡೆದು ಮೆಲ್ಪಿನೊಳೋತೊಡಗೊಂಡು ಪೋಗೆ ಮಾ
ಣ್ದಿರದೊಡವೋಪುದೆಂಬಿನಿತೆ ಕೇಳಿರೆ ಕಾಣಿರೆ ಸೂಳೆವೆಂಡಿರೊಳ್ ೪೨

ವ || ಎಂದು ಬಹಿರಂಗವೃತ್ತಿಯಂ ಪೇೞ್ದಂತೆ ಸಮಾಸೋಕ್ತಿಯೊಳಂತರಂಗವೃತ್ತಿಯೊಳ್ ಪೆಂಡಿರ ಸುರತಕೌಶಲ್ಯಮಂ ಪೇೞ್ದಪ್ಪೆನೆನುತ್ತಂ ಬರ್ಪನೊಂದು ಕನತ್ಕನಕ ಕಮನೀಯ ವಿಶಾಲಭಂಜಿಕಾಂಗಣದೊಳ್

ಚಂ || ಎಣೆಯೆನಗಾವಳೆಂಬ ಮದದಿಂ ಪೊಱಮಟ್ಟಳು ತೊಟ್ಟ ರತ್ನಭೂ
ಷಣದ ಮರೀಚಿರಕ್ತತೆಯನಾಕೆಗೆ ಮಾಡುತಮಂತೆ ಪೊಣ್ಮಿ ಮೇ
ಗಣ ದೆಸೆಗುಣ್ಮೆ ಬೆಳ್ಮುಗಿಲನಾಗಳೆ ಕರ್ಮುಗಿಲಾಗೆ ಮಾಡಿ ಮಾ
ಣ್ದಣಮಿರದಂತೆ ನೀಳ್ದ ನಯನಕ್ಕೆಣೆಮಾಡಿದುದಿಂದುಬಿಂಬಮಂ ೪೩

ವ || ಅದಂ ಕಂಡೀಕೆಯ ವಿಭವಮತಿಶಯಮೆಂದು ಪೇೞುತ್ತಂ ಪೋಪರಲ್ಲಿಯೊಂದು ಗೃಹಾಂಗಣದೊಳ್

ಶಾ || ತಾಯಂ ಬಂಚಿಸಿ ಸಂಚಿಸಿರ್ದ ಧನಮಂ ಬಿಟ್ಟಕ್ಕಟಾ ತಪ್ಪುಕೆ
ಯ್ದೀಯೆಗ್ಗಂ ಬಿಸುಟೊತ್ತೆಗೊಂಡು ಪಡೆ ನಿನ್ನಂ ನೊಂದು ನಂಟತ್ತೆಗು
ಳ್ಳಾಯಂಬೇೞ್ದೊಡೆ ಸಿಗ್ಗು ಪೊಣ್ಮೆ ಮನದೊಳ್ ಬಂದೊತ್ತೆಗೆಂದಿರ್ದ ಪಾಂ
ಗೀಯಂದಂ ಪೆಱದಲ್ತಿದೆಂದು ಬಗೆದಂ ಕಂಡಾಕೆಯಿರ್ದಂದಮಂ ೪೪

ವ || ಇಂತು ಬಗೆವುದುತ್ಪ್ರೇಕ್ಷೆಯೆನುತ್ತ ಬರ್ಪಾಗಳೊಂದೆಡೆಯೊಳೊರ್ವಂ ತನ್ನ ಕೆಳೆಯನನೆಂಗುಂ ನೀನಾಕೆಯನಾವ ನಿಮಿತ್ತದಿಂ ಮೆಚ್ಚಿಸಿದೆಯೆಂದೊಡಾತನಿಂತೆಂದಂ

ಚಂ || ತುಱುಗೆಮೆಗಣ್ಣ ನೋೞ್ಪ ನಯನಂ ಬೆಳರ್ವಾಯ ಬೆಡಂಗಿನೊಳ್ಪುದು
ರ್ಕಱನೊಳಕೆಯ್ದನಂಗರಸಭಾವದ ಕೂಟಮುಮಾವಪೊತ್ತುಮಿಂ
ಬಱಿವುದುಮಂತೆ ಕಣ್ಣಱಿವುದುಂ ಮನದೊ[ಳ]ೞು ಮಾಡುವಂತು ಮಾ
ತಱೆವುದುಮಿಂತವೆಲ್ಲಮೊಲವಂ ಪಡೆಯಲ್ಕೆ ನಿಮಿತ್ತಮಲ್ಲವೇ ೪೫

ವ || ಎಂಬ ಹೇತುವಚನಂಗಳುಮನವರ್ಗಱಿಪುತ್ತಮಂತೆ ಬರ್ಪರ್ ಪಲರು ಮೊಳುವೆಂಡಿರೊಳೊತ್ತೆಗೊಳಲೊಂದೆಡೆಯೊಳಿರ್ಪಲ್ಲಿಗೊರ್ವ ಬೊಜಗಂ ಬಂದು

ಚಂ || ಸೊಗಯಿಪಳೊರ್ವಳಂದು ವಿಟನಂ ನಡೆನೋಡುತೆ ತನ್ನ ಗು[ಣ್ಪೆ]ನ
ಲ್ಲಿಗೆ ತರೆ ದಿಟ್ಟಿಯಂ ಚದು[ರ] ನೆಂದಱೆತಾಕೆಯುಮೊಯ್ಯನಂತೆ ಲೀ
ಲೆಗೆ ಪಿಡಿದಿರ್ದ ನೆಯ್ದಲರಲಂ ಮುಗಿಯೊತ್ತಿದೊಡೇನೊ ನಾಳೆ[ಗೇಂ
ಮಿಗೆ]ದಿಟಮಪ್ಪೊಡಪ್ಪುದೆನುತಂ ಮಗುೞ್ದಂ ನುಡಿದಿಂಗಿತೋಕ್ತಿಯಂ ೪೬

ವ || ಅಂತವರಿಂಗಿತೋಕ್ತಿಯಂ ಕಂಡು ಸೂಕ್ಷ್ಮಾರ್ಥಮಿದೆಂದಱಿಪುತ್ತಂ ಬರುತನಮೊಂದು ವಿಶಾಲಭವನದೊಳ್

ಉ || ಓಪನಗಲ್ದು ಪೋದ ಬೞಿ ತಾಯಲಿ ಪಿಂಗಿರದೊತ್ತೆಗೊಂಡು ಸಂ
ತಾಪದೊಳುಣ್ಮಿ ಕಣ್ಬನಿಗ[ಳಂತವನಂ ಪುಗ]ದೊತ್ತೆಯಾತನಂ
ಚಾಪಳನೇತ್ರೆ ಕಂಡಗಿದು ಪುಷ್ಪರಜವ್ರಜಮೆನ್ನ ಕಣ್ಣೊಳೇಂ
ಪಾಪಮೊ ಪೊಕ್ಕುದೆಂದಬಲೆ ಕೆಂದಳದಿಂದಲರ್ಗಣ್ಣನೊತ್ತಿದಳ್ ೪೭

ವ || ಆಕೆಯ ಮುನ್ನಿನಾಣ್ಮಂಗೆ ಮಾೞ್ಪ ನಲ್ಮೆಯುಮನಾಗಳೇನೊತ್ತೆಯಾಣ್ಮನಂ ಕಂಡು ಕಣ್ಣ ನೀರಂ ಮಱಸಿದಬಲೆಯುಮಂ ಕ್ರಿಯಾರ್ಥಮೆಂದಱಿಯೆ ಪೇೞುತ್ತಂ ಬರ್ಪೊನೀರೆನಿಬರಾನುಂ ವಿಳಾಸಿನಿಯರೊಂದೆಡೆಯೊಳಿರ್ದರವರಿವರಿನ್ನರೆಂದುಪಲಕ್ಷಿಸಿ

ಚಂ || ಪ್ರಿಯನ ರತ[ಕ್ಕೆ] ಚಿಂತಿಸುವ ಪಾಂಗುಮನಾವನೊಳಂ ತಗುಳ್ದು ದುಃ
[ಕ್ರಿಯೆ]ಯುಮನಾಯದೋಜೆಯುಮನೊಯ್ಯನೆ ಭಾವಿಸಿ ನೋಡಿ ಬೇಟಕಾ
ರ್ತಿಯರಿವರೀಕೆಗಳ್ ಬಸನಿಗಳ್ ಕಡುಬದ್ದೆಯರೆಂದುಮೀ ಲತಾಂ
ಗಿಯರೆನಿಸಿರ್ದರುಂ ನಯದೆ ನೋಡಿದನಪ್ರತಿ[ವೈ]ಶ್ಯಸಂಭವಂ ೪೮

ವ || ಇಂತಿವರಿನ್ನರೆಂಬುದಂ ಯಥಾಶಂಕೆಯೊಳಱುಪಿ ಪೋಪರ್ ಮತ್ತೊಂದೆಡೆಯೊಳ್ ಪೆರ್ಮದಿಲ ಮಱೆಗೊಂಡು ನೋೞ್ಪೊಂ

ಉ || ಉತ್ತಮನಾಯಕಂ ಮನೆಗೆವಂದೊಡತಿಪ್ರಿಯ ಪೂರ್ವರಾಗದಿಂ
ದತ್ತೆವಿರುಂ ವಿಳಾಸಿನಿಯುಮಾ ಗೃಹಚಾರರುಮೊಂದು ರಾಗಮೊಂ
ದುತ್ತರಮಾದುದಿಂದೆಮಗೆ ಸಂ[ತಸ]ಮಿಂದಿನ ಸಂ[ತಸ]ಕ್ಕೆ ನಿ
ಮ್ಮತ್ತೆಯುಮಿಂತೆ ಬಂದೊಡೆನಸುಂ ಪೆಱದಿಲ್ಲ ಸಮಾನಮಾವುದುಂ ೪೯

ವ || ಎಂದು ನುಡಿವ ಪ್ರಿಯತಮಾಖ್ಯಾನಮಂ ಕೇಳ್ದು ತಾಂ ಪ್ರಿಯಮೆಂದೊಡನೆ ಯವರ್ಗಱಿಯೆ ನುಡಿಯುತ್ತಂ ಪೋಗಿ ಪೆಱತೊಂದು ಧವಳಾರದ ಮುಂದಣೆಡೆಯೊಳ್

ಶಾ || ಚಲ್ಲಂಬೀಱಿದ ನೋಟದೊಳ್ಪು ನಯದಿಂ ನಾಣ್ದಾಣದೊಪ್ಪಂಗಳಂ
ಬಲ್ಲಂದಂದದೆ ತೋಱುವೋಜೆಯವರಿಂ ನಾನಾ ವಿಕಾರೋಕ್ತಿಗ
ಳ್ಗೆಲ್ಲಂ ತಾಂ ಮೊದಲಾದ ಬಾಯ ತೆಱದಿಂ ಶೃಂಗಾರಸದ್ಭಾವಮೆ
ನ್ನಲ್ಲಿತ್ತೆಂಬವೊಲೊರ್ವಳಂಗಜರಸಂ ಕೈಗಣ್ಮೆಬಂದಿರ್ದಳಂ ೫೦

ವ || ನೋಡದಂತೆ ನೋಡಿ ರಸವಾಹದೋಜೆಯೊಳಿರ್ದಳೆಂದು ಮುಂದೆ ಬಪಾಗಳೊರ್ವಳ್ ತನ್ನಾಣ್ಮಂ ಕರಮರಿಯಳಪ್ಪಗ್ಗಾಯಿಲೆಯಂ ನೋಡುತ್ತ ಮಿರ್ದನೆಂಬನಿತಕ್ಕೆ ಮುನಿದಾಕೆಯ ಮನೆಗೆ ಕಾದಲ್ ಬಂದಾಗಳವರಬ್ಬೆ ಪೊಱಮ್ಟಿಟಂತೆಂದಳ್

ಉ || ಏನಿದು ನಾಣಪುತ್ತಲಗೆ ಸೂಳೆಯರಕ್ಕಳೆ ಕಾದವಂದೆ ಪೇ
ೞೇ ನೆವವೇ ಸಮಂ ನಿನಗಮಾಕೆಗಮೇಕೆಗೆ ಸೂಳೆಗಾಳೆಗಂ
ಮೇನಕಿ ರಂಭೆಯೂರ್ವಸಿ ತಿಲೋತ್ತಮೆಯೆಂಬವರಪ್ಪು ದಾದೊಡಾ
ಮಾನಸವೆಂಡಿರೆನ್ನ ಮಗಳಂ ಸೆಣಸಲ್ ಬಗೆವಂತು ಪೆತ್ತೆನೇ ೫೧

ವ || ಎನುತಮಿರ್ದಳನೂರ್ಜ[ಸ್ವಿ]ಯೆಂದಂತೆ ಬರ್ಪರೊಂದೆಡೆಯೊಳ್ ತನ್ನ

ಚಂ || ಕೆಳದಿಯ ನಲ್ಲನಂ ನಯದೆ ತನ್ನ ಸುಸಿಲ್ಮನೆಯಲ್ಲಿ ಗೊಯ್ದು ತಾಂ
ಕೆಳದಿಯನಲ್ಲಿಗೊಂದು ನೆವದಿಂ ಬರವೇೞ್ದೊಡಗೂಡಿ ನಾಡೆಯುಂ
ಮು[ಳಿ]ಸಿನೊಳೆನ್ನ ತಾಯ್ ಮನೆಯುಮಂ ಬಿಸುಟೊರ್ವಳೆ ಪೋದೊಡಾಕೆಯಂ
ತಿಳಿಪಿ ತರಲ್ಕೆ ಪೋದಪೆನಶಂಕೆಯಿನಿಲ್ಲಿರಿಮೆನ್ನಬಪ್ಪಿನಂ ೫೨

ವ || ಎಂದವರ್ಗಳದಂ ನೋಡುತಿರ್ದು ಪರ್ಯಾಯೋಕ್ತಿಯೊಳಮೆಂದಱಿಪಿ ನಡೆವಾಗಳ್ ಬೀದಿಯೊಳ್

ಚಂ || ನಿಱೆಗುಱೆಗಂಟವೇಟಮಮರ್ದೊಪ್ಪಿರೆ ನಲ್ಲನೊಳೊಂದಿದೞ್ಕಱಿಂ
[ದುಱೆ] ಮಱಸಲ್ಕೆ ಪೋಗುತಿರೆ ದೈವಿಕವೆಂದವನಾಗಳಲ್ಲಿಗೋ
ತಱಸುವ ಬಳ್ಳಿ ಕಾಲೊಳದು ತಾಂ ತೊಡರ್ದಂತಿರೆ ಬಂದು ತಾನೆ ಕ
ಣ್ಣಱಿದೆಳದುಯೈ ರಾಗಿಸಿದ ನಲ್ಲಳ ರಾಗಮದೇನಳುಂಬಮೋ ೫೩

ವ || ಅಲ್ಲಿಂ ತಳರ್ದು ಬರ್ಪವರ್ ಮತ್ತೊಂದೆಡೆಯೊಳೊರ್ವ ನಗ್ಗಾಯಿಲೆಯನೊಲಿಸಲಾರ್ಪೆನೆಂದು ಪೂಣ್ದು ನುಡಿದಾನಾಕೆಯ ಕೆಳದಿ ಕೇಳ್ದಾತನನಿಂತೆಂದಳ್

ಮ || ಮದನಾತ್ಯುದ್ಧತಮಪ್ಪ ದರ್ಪದವನಂ ವ್ಯಾಕೀರ್ಣರಾಗಿರ್ದ ಚಿ
ತ್ತದ ಪೆಂಪಿಂ ನೆಗೞ್ದಿರ್ದ ಬರ್ದಿನಳವಂ ಕೇಳ್ದಲ್ಲಿ ರತ್ನಪ್ರಭಾ
ಭ್ಯುದಯ ಶ್ರೀಯುತಮಪ್ಪ ಪೆರ್ಮನೆಯುಮಂ ಕಂಡಲ್ಲಿ ನೀನೆಂತುಮೆ
ಯ್ದದ ಪ[ಣ್ಯಾ]ಗೃಹಮೆಂಬುದಯ್ಯ ಬಯಸಲ್ವೇಡಾಕೆಯೊಳ್ ಗೆಲ್ಲವೇ ೫೪

ವ || ಎಂಬುದಂ ಕೇಳ್ದುದಾತ್ತವಚನಮಿದೆಂದಱಿಪುತ್ತಂ ಪೋಗಿ ನೋೞ್ಪನೊಂದೆಡೆಯೊಳ್ ಬೇಟಕಾರ್ತಿ ವಿರಹದೊಳ್ ಸೈರಿಸದೆ ಪೊಱಗೆ ಗಾಳಿಯನಾಸೆವಟ್ಟು ದಳಿಂಬಮಂ ಪಾಸಿ ಪೊರಳುವಳಂ ನೋಡಿ

ಚಂ || ಮನಸಿಜನೆಂಬನಂಬುಫಲವಿಲ್ಲಿರಲಂಬುಗಳಯ್ದು ನಟ್ಟವೆಂ
ದನವರತಂ ಜಗಂ ನುಡಿಗುಮಾ ನುಡಿ ಪೆರ್ಬುಸಿಯಾದು[ದೀ]ಗಳೆಂ
ತೆನೆ ಬಿಡದೆನ್ನ ಮೆಲ್ಲೆರ್ದೆಯನೋವದೆ ಕೊಲ್ವರಲಂಬುಗಳ್ಗೆ ಮ
ತ್ತೆನಿತೆನಿತೆಂಬುದೊಂದಳವಿಗಂಡಪೆನಲ್ಲದಲೇಂ ವಿಚಿತ್ರಮೋ ೫೫

ವ || ಮತ್ತೊಂದೆಡೆಯೊಳ್ ಚತುರ್ಭದ್ರಮಂಟಪದೊಳ್ ಮಧುಪಾನಗೋಷ್ಟಿಯ ತಂಡದಲ್ಲಿ ಬಹುವಿಕಾರಜನಿತಮಪ್ಪನೇಕವಿಧ ಮದ್ಯಂಗಳಂ [ತದ್ವೀಧೀವಿಧಾನದಿಂದಂ]ಕುಡಿದು ಸೊಕ್ಕಿದರಂ ನೋಡಿ ಚಾರುದತ್ತನಿಂತೆಂದಂ

ಶಾ || ರಾಗಂ ಪೆರ್ಚಿರೆ ಲೋಚನಪ್ರಿಯಿರ ಸತ್ಸೌಂದರ್ಯಮಂ ವಾರುಣೀ
ಯೋಗಂ ಮಾಡಿದೊಡರ್ಕನಸ್ತದೊಳಡಂಗಿರ್ದಂ ಮದೋದ್ರೇಕದಿಂ
ಮೇಗಿಲ್ಲೆಂಬಣಲೀಕೆಗಳ್ಗೆ ನಯದಿಂ ನಾನಾ ವಿಕಾರೋದಯಂ
ಬೇಗಂ ಪುಟ್ಟಿದುದೇಂ ವಿಚಿತ್ರತರಮೋ ವಸ್ತುಸ್ವಭಾವೋದಯಂ ೫೬

ವ || ಅಂತು ತಾಂ ಶ್ಲೆಷಾವಿರದ್ಧಮೆಂಗು ಮಕ್ತಮಂತೆ ನೋೞ್ಪಂ

ಮ || ತೊದ[ಳಂ] ಮಾೞ್ಪ ಕೊ[ದಳ್] ವಿಕಾರವಶಮಂ ಕೈಕೊಂಡ ಮೆಯ್ ನಾ[ಣಿ]ಗಿ
ಕ್ಕಿದ ಕೆಯ್ತಂ ಪುಸಿಯೊಳ್ ಪೊದೞ್ದ ನುಡಿಗಳ್ ರಾಗಕ್ಕೆ ಪಕ್ಕಾದ ಕ
ಣ್ಣೊದವುತ್ತಿರ್ದಳಿಪುಂತೆ ಮೆಯ್ಯಱಿಯದಿಪ್ಪಂತಪ್ಪ ಚಿತ್ತಂ ಕರಂ
ಮದವಿಭ್ರಾಂತತೆಯರ್ಕಳಾಗಿಯುಮಿವ[ರ್ಗಂ ಪ]ರ್ವಿ ವಿಭ್ರಾಂತಮಂ ೫೭

ವ || ಎಂದು ಬಗದಳಿಪಿನ ವಿಕಾರಮಾಗೆ ನೋಡಿದರಂ ಗೆಲ್ವುದಱಿಂ………….ಕ್ತಿಯಂದವರಾಟದೊಳ್ಪುಮನಂತೆ ನೋೞ್ಪಾಗಳ್

ಉ || ಒತ್ತಿದ ಸಾರಸಂ ವಿಟರನೊತ್ತೆ ಲಸತ್ಕಟಚಲ್ಲಿ ಚಲ್ಲಿಸ
ಲ್ಕೆತ್ತಮೊಡರ್ಚಲಯ್ಸರನ ಬೇಂಟೆಯ ಕಯ್ಯನೆ ಕಣ್ಗಳಾಟಮೊಂ
ದುತ್ತರಮೋವದಳ್ಳಿಱಿಯೆ ಪುರ್ವಿನ ಜರ್ವಿನ ಗಂಟು ಕೂಡೆ ಕೂ
ಗುತ್ತಿರೆ ರಂಭೆಯಾಟದೊಳು ತಾಂ ಸಮನೆಂಬಿನಮೊರ್ವಳಾಡಿದಳ್ ೫೮

ವ || ಈ ಮಾತು ಸದೃಶೋಕ್ತಿಯೆನುತ್ತಮಲ್ಲಿಂ ಬರ್ಪನೊಂದೆಡೆಯೊಳೊರ್ವ ವಿಟನೊರ್ವಳ್ಗೆ ನಲ್ಲನಾಗಿ ಕೂ[ಡ]ಲ್ಪಡೆಯದೆ ಮಱುಗಿ ವಿರಹಜ್ವರಂ ಕೈಕೊಳೆ ತನ್ನ ಕೆಳೆಯಂಗಿಂತೆಂದಂ

ಮ || ಶತಪತ್ರಂ ಸುಮೃಣಾ[ಳ]ಬಾಹು ಕದಳೀಸ್ತಂಭೋರು ನೀಳೋತ್ಪಳಾ
[ಯತ] ಲೋಳಾಕ್ಷಿ ಸುವರ್ಣಕುಂಭಕುಚೆ ಚಂದ್ರಾಕಾಂತೆ ನೋೞ್ಪಾಗಳಂ
ತತಿಶೀತೋದಯರೂಪೆಯಾಗಿಯುಮವಳ್ ತಾನೆನ್ನ ಮೆಯ್ಗೀಗಳು
ಷ್ಣತೆಯಂ ಮಾಡುಗುಮೇಂ ವಿಚಿತ್ರತರಮೋ ತತ್ಕಾಮಿನೀವೃತ್ತಕಂ ೫೯

ವ || ಎಂಬೀ ಮಾತಂ ಕೇಳ್ದೀತಂ ವಿರುದ್ಧಾರ್ಥದೊಳ್ ನುಡಿದಪ್ಪನೆಂಬನ್ನೆಗ ಮಾತಂಗಾತನಿಂತೆಂದಂ

*ಮ || ಜಡಿವಂತಿರ್ಪುವು ಪುರ್ಬುಗಳ್ ಕಿವಿಗಳೊಳ್ ಕಣ್ ಪರ್ಬುವಂತಿರ್ಪುದೊ
ಳ್ನಡುವಂತಾಂ ಮುರಿವಂತಿರಿರ್ಪವು ಕುಚಂ ಮೇಗಿಲ್ಲದಂತಿರ್ಪುವೊ
ಳ್ದೊಡೆಗಳ್ ಕಣ್ಗೆಡಱುತ್ತಮಿರ್ಪವು ನಖಂ ಮೆಯ್ವೆರ್ಚಿ ತಂತಮ್ಮೊಳಿ
ೞ್ಪಡಮೊಳ್ಪಾವುದೊ ರೂಪಿನೊಳ್ ಮರುಳೆ ನೀನೇಕಾರುಣಂ ಮೆಚ್ಚಿದೋ ೬೦ [ಪಂಚಪಾದ ವೃತ್ತ]

ವ || ಎಂಬ ನಿಂದಾಪ್ರಶಂಸೆಯ ಮಾತುಗಳಂ ಕೇಳ್ದದನಂತೆ ನಂಬಿಮೆಂದು ಬರುತಮಂತೆ ಮತ್ತೊರ್ವಳ್ ತನ್ನ ಕೆಳದಿಯನಿಂತೆಂದಳ್

ಉ || ಪೂಣಿಗಳಾಗಿ ಬರ್ದು ಪೊಗೞ್ದುಪ್ಪ ವಿದಗ್ಧೆಯನೆಲ್ಲಿಮಾತನಂ
ಕಾಣಲೊಡಂ ಕರಂ ಬಯಸಿ ತಾಮೆಱೆದಟ್ಟುವರಟ್ಟಿ ಕೂಡೆಯುಂ
ನಾ[ಣಿ]ಲಿವನ್ನರಾದರೆನುತೊಂದು ವಿದಗ್ಧತೆಯಿಲ್ಲ ಬದ್ದಿನೊಳ್
ಪೂಣಿಕೆಯಿಲ್ಲ ಬಾಲಕಿಯೆಯೆಂತುಗೆ ಕೂಡುತೆ ಗೆಲ್ದೆಯಾತನಂ ೬೧

ವ || ಎಂಬುದಂ ಕೇಳ್ದೀಕೆ ತಾಂ ವ್ಯಾಜಸ್ತುತಿಯೊಳ್ ಪೊಗೞ್ದಪ್ಪಳೆನುತ್ತಂ ಬರ್ಪರೊಂದೆ ಡೆಯೊಳೊರ್ವಳ್ ತನ್ನಾಣ್ಮಂ ಪೆಱದೊರ್ವಳಲ್ಲಿಗೆ ಪೋಗಿ ಬಂದುದನಱಿದಿಂತೆಂದಳ್

ಚಂ || ಅಱಿಕೆಯ ಗೋವನುಂ ನಿನಗೆ ಕೂರ್ತಡೆ ನೇದಿರೆವೆಂದೊಡೇಕೆ ಪೇ
ೞುಱದ ನೆಗರ್ತೆಗಂಡೆಡೆಗಳೊಳ್ ತೆರಳಿಲ್ಲದಿದೇನೊ ನನ್ನಿಯೇ
ಕುಱಿಯೆನೆ ಕಾಡುವಂತು ತಡೆದಿರ್ದುಮದೋಷಿಹೆ ಕೆಮ್ಮನೆಂದೊಡೇ [೦]
ಮಿಱುಗಿ ಪೊದೞ್ದು ತೋರ್ಪಧರದಂದಮೆ ಪೇೞದೆ ದೋಷಮುಳ್ಳುದಂ ೬೨

ವ || ಎಂದು ನಿದರ್ಶನಮಂ ತೋಱಿ ನುಡಿದು ಬಡಿದೊಯ್ದು ಸುರತಕ್ಕೊಡರ್ಚಿ

ಚಂ || ಎಡೆವಿಡದರ್ಕಱುಣ್ಮೆ ಗಳನಿಸ್ವನಮೊಪ್ಪಿರೆ ಪೊಣ್ಮೆ ರಾಗದ
ತ್ತೊಡರಿಸೆ ಚಿತ್ತಮಿಂಪೊದವೆ ಮ[ತ್ತ]ಮಳುರ್ಕೆ ನಿಮಿರ್ಕೆ ಮಾಡೆ ನಾ
ಣೆಡೆಗೆಡೆಗೋಡೆ ಕಂಡೆ ಬಗೆ ನಾಡೆ ಪದಂ ಮಿಗೆ ಮಾಣದೇಳೆ ತಂ
ದೊಡನೆ ಸಮಾ[ಗಮಂಬಡುತಳುರ್ತ] ಮರ್ದಂತೆ ಬೞಲ್ದರಿರ್ವರುಂ ೬೩

ವ || ಅಂತಾ ಕಿಱಿಯ ಮುನ್ನಿನ ನುಡಿದ ನಿದರ್ಶನಮೀಗಳಿನ ನೆಗೞ್ತೆ ಸಹೋಕ್ತಿಯೆಂದಂತೆ ಬಂದೊಂದು ಮನೆಯಂ ಪೊಕ್ಕು ನೋೞ್ಪಾಗಳ್

ಮ || ವ್ಯಸನಾತ್ಯಂತ ವಿಭೂಷಣಪ್ರಕರದಿಂ ತಾಂಬೂಳಮಿಷ್ಟಾಸನ
ಪ್ರಸರಾಮೋದ ಸುಗಂಧವಸ್ತುಚಯದಿಂ ರಾಗೋದಯಂ ಮಾಡಿ ರಂ
ಜಿಸುತಂ ಮೆಲ್ಪಿನೊಳೊಂದು ಭಾವಿಸಿ ರವಿಪ್ರಾರಂಭದಿಂದಾದ ಸಂ
[ತಸ]ಮಂ ಕಾಂತೆಗೆ ಕೊಟ್ಟು ಕಾಂತೆಯ ಮನಂಗೊಂಡಿರ್ದನೊರ್ವಂ ವಿಟಂ ೬೪

ವ || ಆ ವಿಟನಂ ಕಂಡೀತಂ ಪರಿವೃತ್ಯಾರ್ಥದಿನಿರ್ದನೆಂದು ಬಂದೊಂದು ಪೆರ್ಮನೆಯೊಳ್

ಮ || ಸುರತಾರಂಭದ ಬಲ್ಮೆಯಿಂ ನೃಪವಿಟಂಗತ್ಯಂತಮೊರ್ವಳ್ ಮನೋ
ಹರಮಂ ಮಾಡಿದೊಡಾತನುಜ್ವಳಗುಣವ್ಯಾಕೀರ್ಣ ಸದ್ವಸ್ತುವಂ
ಪರಮೋತ್ಸಾಹದಿನಿತ್ತಡಾಕೆಯವರ್ಗಳ್ ಬಂದೆಲ್ಲರುಂ ರಾಗದಿಂ
ಪರಮಾಶೀರ್ವಚನಂಗಳಿಂ ಪರಸಿದರ್ ಸಸ್ನೇಹದಿಂದಾಕೆಯಂ ೬೫

ವ || ಅಂತಾ ಧ್ವನಿಯನಾಶೀರ್ವಚನಮೆಂದಱಿಪಿ ಮತ್ತಮಂತೆ ನಡೆವಲ್ಲಿಯೊರ್ವಳ್

ಚಂ || ಸರಸಿಜನೇತ್ರೆಯೊಳ್ ನುತ ಲತೋಪಮಗಾತ್ರೆಯೊಳೊರ್ವನೞ್ಕಱಿಂ
ಸುರತವಿಕಾರದಿಂಪಿನ ರಸಾವಹಮಗ್ಗಳಮಾಗೆ ರಾಗದಿಂ
ನೆರೆದು ಮನಂ ಬೆಮರ್ತ ತನುವೆಂಬವನಂತೊಡನಾರಿಸಿರ್ದರಿ
ರ್ವರ ಬಗೆಯೊಂದೆಯಾದ ಕೆಳೆಯೊಳ್ ಸುಖಮಾಗಳು ಮಾಡದಿರ್ಕುಮೇ ೬೬

ವ || ಅವರೊಳಿಂತು ಸಂಕೀರ್ಣಾಳಂಕ್ರಿಯೆ ನೆಗೞ್ದುದೆನೆ ವಿಳಾಸಿನೀಸಂಪರ್ಕ ಸುಖಂಗಲ್ಲದಾಗದೆಂದು ರುದ್ರದತ್ತಂ ಚಾರುದತ್ತಂಗಿಂತೆಂದುಂ

ಚಂ || ಇವರ್ಗಿವು ಸತ್ವಮೀಗಳಿವರ್ಗಿಂತಿವು ಚಿತ್ತಮನೇಕರೂಪದಿಂ
ದಿವರ್ಗಿವು ಧಾತುವಿನ್ನಿವರ ಸಂ[ತಸಮಿಂತಿದು]ಹೇತುವೀ ಪದ
ಕ್ಕಿವರ್ಗಿದು [ಧ]ರ್ಮಮೀ ಕ್ರಿಯೆಗಳೊಳ್ಪಿವರ್ಗಿಂದುಮಮೋಘಮೆಂದು ಮ
ತ್ತವರ್ಗಳರನ್ನರಾಗಿಸಲೆ ಭಾವಿಸಲಾರ್ಪರಿನಾರೊ ಮೆಚ್ಚದರ್ ೬೭

ವ || ಎಂದೊಡಿದು ಭಾವಿಕಾಳಂಕಾರಮೆಂದಳಂಕಾರಮೆಲ್ಲಮನಱಿಪಿದೆಂ ಬನ್ನಿಮೆಂದು ಕೇರಿಯಂ ಪೊಱಮಟ್ಟು ಪೋಗಿ ತಂತಮ್ಮಾವಾಸಂಗಳೊಳಿರೆ ಮಱುದಿವಸಂ ರುದ್ರದತ್ತನುಂ ವಿಟಕುಮಾರರುಂ ತಂತಮ್ಮೊಳಿಂತೆಂದರ್ ಚಾರುದತ್ತಂಗೆ ರಾತ್ರಿ ಸಂಭೋಗದ ಲೇಪನಮನಿನಿತುವರಂ ತಂದಮಿನ್ನಾವಂದದೊಳಿನ್ನು ತಗುಳ್ವಮೆಂದೊಡೊರ್ವನೆಂದಂ ವಸಂತಮಾಲೆಯ ಮಗಳೆ ದೊರೆಯಾಗಿರ್ಕುಮೆಂದೊಡಾಕೆಯಳವನಾಂ ಬಣ್ಣಿಸಲಱಿಯೆನವರಬ್ಬೆಗೆ

ಚಂ || ದಿವಿಜರನೇನುವಲ್ಲದವರೆಂಬನಿತೊಂದು ವಿಳಾಸಮುಂಟು ಭೂ
ಭುವನದೊಳಾರುಮಂ ಬಸನೆ ಮಾೞ್ಪ ವಿದಗ್ಧತೆಯುಂಟು ನೆಟ್ಟನಾರ್
ತವಿಸುವರೆಂಬನಿತ್ತುವರೆಗಂ ಧನಮುಂಟಾ ವಿಳಾಸಿನೀಕುಲ
ಪ್ರವರ ವಸಂತಮಾಲೆಯ ನಿಜೋತ್ತಮಲೀಲೆಯನಾರೊ ಬಣ್ಣಿಪರ್ ೬೮

ವ || ಎಂಬನಿತುವರಂ ಪ್ರಭುವಂತಪ್ಪಾಕೆಯ ಮಗಳ್ ರೂಪಿನೊಳ್ಳಿನೊಳಂ ಜವ್ವನದಳುರ್ಕೆಯೊಳಂ ಸೊಬಗಿನ ನಿಮಿರ್ಕೆಯೊಳಂ ಕಿನ್ನರಿಯರೆನಗಾಂ ಗೆಲಲ್ ಕಿನ್ನರಿಯರೆಂಬ ನಿತನೆ ಕೇಳ್ದು ಭೂಚರಿಯ[ರಳವನ]ವಳನುಚರಿಯರಂತೞ್ಕಿದರದಂ ಕೇಳ್ದು ಖೇಚರಿಯ[ರ್ ಮುನ್ನೆ] ಬೆರ್ಚಿದರ್ ನಿಶಾಚರಿಯರ ತನುವಂ ನೆರೆದುದನಱಿದು ಕುಂದಿದರಕ್ಕಟವರೊಳಮೇಕೆ ಸೆಣಸುವೆನೆಂದಿರ್ಪಳ್

ಕಂ || ಅವರಿವರೀಕೆಗೆ ದೊರೆಯ
ಪ್ಪವರೊಳರೆಂದಱಿಯೆನೊಂದನಱಿವೆನಶೇಷ
ಪ್ರವಿದಿತ ಭೂತಳಕೆ ನಿಜೋ
ದ್ಭವಕುಳಕೆ ವಸಂತತಿಳಕೆ ತಿಳಕಪ್ರತಿಮಂ ೬೯

ವ || ಎಂದೊಡಂತಪ್ಪಾಕೆಯಪ್ಪುದೆಂದು ಸಮಕಟ್ಟಿರ್ದು ರುದ್ರದತ್ತಂ ಮುನ್ನಮೊರ್ವನೆ ಪೋಗಿ ವಸಂತಮಾಲೆಯ ಕಂಡು ನಿನ್ನ ಮನೆಗೆ ನಿಧಾನಂ ಬರ್ಪಂತೆ ವಣಿಕ್ಪ್ರಧಾನಂ ಚಾರುದತ್ತಂ ಬಂದು ನಿನ್ನಳಿಯನಾದಪ್ಪನೆಂದಾಕೆಗನುರಾಗಮಂ ಪಡೆದುಯೆಮ್ಮ ಸೊಸೆಯೆತ್ತಲಿರ್ದಪಳೆಂದು ಬೆಸಗೊಳೆ ಮಾಡದ ಮೇಗಿರ್ದಪಳು………….. ಪೆನೆಂದುಮಾತನಂ ಪೋಗಲೀಯದಿರೆಂದೊಡಂಬಡಿಸಿ ಮಗುೞ್ದುಬಂದು ಬಯ್ಗಾದ ಪೊತ್ತು ನಾಲ್ಕಾನೆಯಂ ತಂದು ಸೂಳೆಗೇರಿಯ ಬೀದಿಯ ಕಡೆಯೊಳಾರುಮಂ ಪೋಗಲೀಯದಂತಡ್ಡಂನಿಲಿಸಿಮೆಂದಾನೆಯ ವಂದಿರೊಳ್ ಸಮಕಟ್ಟಿ ತಾನುಂ ತನ್ನ ಸಹಾಯರುಂ ಚಾರುದತ್ತನಂ ಮೂಱುಜಾವದಾಗಳೇ ನಾನು ನೆವದಿನಾದೊಡಗೊಂಡು ಪೋಗಿಯನೇಕ ಧವಳಾರಮಂ ನೋಡುತ್ತ [೦] ನೆಲೆಗಳ ಮುಂದೆ ಬೀದಿಯ ಕಡೆಯೊಳರ…..ಕ್ಕಿದಾನೆಯಗಳಡ್ಡಬಿರ್ದುವವರ ಪೋಪಿನಮೀ ಮನೆಯ ಬಾಗಿಲ ಮಾಡದೊಳಿಪ್ಪಮೆಂದು ವಸಂತತಿಳಕೆಯ ಮನೆಗೊಡಗೊಂಡು ಪೋದಾಗಳಾ ಮನೆಯ ಪರಿಚಾರಕಿಯರಿತ್ತಬನ್ನಿಮೆಂದು ಕರಂ ಪ್ರಿಯದಿನೊಡಗೊಂಡು ಪೋಪುದುಮೊಳಗಂ ಪೊಕ್ಕು ಮಾಡದ ಮುಂದಣ ಚೌಕಿಗೆಯ ರಂಗದೊಳ್ ವಿಸ್ತರಿಗೆಗಳ ಸೆಱಗಿಕ್ಕಿ ಕುಳ್ಳಿರ್ದರನ್ನೆಗಂ

ಕಂ || ಅತಿಶಯಮಗಿರೆ ಪದ್ಮಾ
ವತಿ ನೆಲದಿಂದೊಗೆದಳೆನೆ ಕೆಲಬರೀಕೆ ಸರ
ಸ್ವತಿಯೆನೆ ಕೆಲರಮರೇಂದ್ರನ
ಸತಿಯೆನೆ ಬಂದಿರ್ದಳಾಗಳವರ್ಗಳ ಕೆಲದೊಳ್ ೭೦

ವ || ಅಂತು ವಸಂತತಿಳಕೆ ಬಂದಿರ್ದೊ[ಡಾ]ಕೆಯ ಕಣ್ಣಱಿದಾಮೋದ ಸುಗಂಧ ಮಾಲ್ಯಾದಿ ತಾಂಬೂಲಾದಿಗಳಂ ಪರಿಚಾರಕಿಯರ್ ತಂದುಕೊಟ್ಟಾಗಳೊರ್ವಳ್ ನೆತ್ತದ ಚಾರಿಯಂ ಕೊಂಡು ಬಂದು ಚಾರುದತ್ತನಱಿಯದ ವಿದ್ಯೆಯಿಲ್ಲೆಂಬೊರೆಮ್ಮ ನಾಯಕಿತ್ತಿಯೊಡನೆ ನೆತ್ತಮನಱಿಯಿರೆಮ್ಮೊಳಾದೊಡಮಾಡಿಮೆಂದೊಡೆ ನೆತ್ತಮುಮಂ ನಿಮ್ಮ ನಾಯಕಿತ್ತಿಯ ಚಿತ್ತಮುಮನಾರ್ಗಂ ಗೆಲಲ್ಬಾರದದಱಿನಾಡದೆಯುಂ ನಡೆನೋಡದೆಯುಮಿರ್ಪುದೊಳ್ಳಿತ್ತೆಂ ದೊಡಂತೇಕೆಂಬ ಪೊಣರ್ಕೆ ದೊರೆಕೊಂಡಲ್ಲಿ ಗೆಲಲಾಱೆಮೆಂದೋಸರಿಸುವುದು [೦] ಪುರುಷಗುಣಮೆಯೆಂದೊಡಾ ಮಾತು ಮನಂಗೊಂಡಂತೆಗೆ [ಯ್ವೆ]ನೆಂದು ವಸಂತತಿಳಕೆಯುಂ ತಾ[ನುಮೊ]ಡ್ಡಿ ಯಾಡಿದರಂತಾಡಿದಾಗಳ್ ಚಾರುದತ್ತನೊಂದೆರಡು ಪಲಗೆಯಂ ಗೆಲೆ ವಸಂತತಿಳಕೆ ರುದ್ರದತ್ತನತ್ತ ನೋಡೆ ಕಣ್ಣಱಿದಾತನೆಲ್ಲರುಮಂ ಸನ್ನೆಯೊಳ್ ಕಳೆದು ತಾನುಮೊಯ್ಯನೆರ್ದು ಪೋದನಾಗಳ್ ವಸಂತತಿಳಕೆ ನೆತ್ತದ ಬಲ್ಮೆಯೊಳ್ ಗೆಲಲಾಱದೆ ಚಿತ್ತದ ನಲ್ಮೆಯನಱಿಪಲ್ ಶೃಂಗಾರರಸಮಂ ಭಾವಿಸಿ

ಕಂ || ನೋಡಿಸುಗುಮವಯವಂಗಳ
ನೋಡಿಸುಗುಂ ಚಲಮನೊಲವನವನೊಳ್ ಪಡೆದ
ೞ್ಕಾಡಿಸುಗುಂ ಮನಮಂತದು
ಮಾಡಿಸುಗುಂ ನೆತ್ತಮಾಡುತಿರ್ದವಯವದಿಂ ೭೧

ಮೆಲ್ಲನೆ ನಡೆ ನೃ…………………..
………………………ಗಳಂತುದಾಯಮಲೆದಾಡುತ್ತಂ
ಚಲ್ಲಮುಮಂ ನೆತ್ತಮುಮಂ
ಗೆಲ್ಲಕ್ಕೊಡನಾಡಿ ಗೆಲ್ದಳೆರಡುಮನಾಗಳ್ ೭೨

ವ || ಅಂತಾ ಗೆಲ್ಲದೊಳ್ ಬೇಗಮೆರ್ದು ಮುನ್ನಮೆನ್ನ ಗೆಲ್ಲಮನೀವುದೆಂದು ಕಯ್ಯಂ ಪಿಡಿದು ಮಾಡದ ನೆಲೆಯ ಮೇಗಣ್ಗುಯ್ದು ರತ್ನಮಯಮಪ್ಪೋವರಿಯ ದಿವ್ಯ ಶಯ್ಯೆಯೊಳ್ ಕುಳ್ಳಿರ್ದಾಗಳ್ ತೊತ್ತಿರಿಂ ಕಾಲಂ ಕರ್ಚಿಸಿದಿಂಬೞಿಕಂ ಕೆಲರ್ ತಾಂಬೂಲಪರಿಚಾರಕಿಯರ್ ಭೋಗೋಪದ್ರವ್ಯಂಗಳಂ ತಂದವಟಿಯಿಸಿದರಾಗಳ್ ನೆತ್ತದ ಗೆಲ್ಲಮಂ ಕೊಳ್ವಂದಮಿದು ನೋಡೆಂದು ಪಿಡಿದು ತೆಗೆವುದುಂ ಮುನ್ನಮನಂಗರಾಗಮಿಲ್ಲಪುದಱಿಂ ಸೆಡೆದೆದ್ದು ಕಾಮಶಾಸ್ತ್ರಪ್ರವೀಣನಾ ಪರಿಚಯದೊಳದಾ ಬಲ್ಮೆಯೊಳಮಾಗಳಾದ ನಲ್ಮೆಯೊಳಮೊಡಂಬಟ್ಟು ಬೆರಸಿ ತಮ್ಮೊಳನ್ಯೋನ್ಯಾಸಕ್ತರಾಗಿರ್ದಾಗಳೆ ಪರಿಚಾರಕಿಯರ್ ಬಂದುಮಾತಂಗಮಾಕೆಗಂ ಸ್ನಾನಾನ್ನ ತಾಂಬೂಲಾನುಲೇಪನ ಮಾಂಗಲ್ಯಾದಿಗಳಿಂ ನಿಯೋಜಿಸೆ ಸುಖದೊಳಿರುತ್ತಮಿರೆ ಶಾಸ್ತ್ರಚಿಂತೆಯಂ ಮಱೆದು ಮನೆಯಂ ತೊಱೆದು ಮಾಡದ ಮೇಗಣಿಂದಿೞಿಯದೆಯುಮಾಕೆಯನುೞಿಯದೆಯುಂ

ಪೃಥ್ವಿ ||

ವಸಂತಥಿಲಕಾಖೈಯೊಳ್ ವರವಿಳಾಸಿನೀಮುಖ್ಯೆಯೊಳ್
ಪ್ರಸಿದ್ಧಗುಣ ಚಾರುದತ್ತನಭಿನೂತಚಿತ್ತಂ ಕರಂ
ಪ್ರಸನ್ನತೆಯೊಳಿಂತು ಕೂ[ಡೆ ಕಡು] ಗೂರ್ಮೆಗೊಂಡಾಡೆ ಸಂ
[ತ]ಸಿಕ್ಕೆಯ ವಿಮೋಹದಿಂದಗಲದಿರ್ದನುತ್ಸಾಹದಿಂ ೭೩

ಗದ್ಯ || ಇದರ್ಹತ್ಸರ್ವಜ್ಞ ಪಾದಪದ್ಮ ವಿರಾಜಿತೋತ್ತಮಾಂಗ ಶ್ರೀ ಬಂಧುವರ್ಮ ನಿರ್ಮಿತಮಪ್ಪ ಹರಿವಂಶಾಭ್ಯುದಯದೊಳ್ ಚಾರುದತ್ತಕುಮಾರೋದಯವರ್ಣನಂ

ತೃತೀಯಾಶ್ವಾಸಂ