ಅದೋ ಕೇಳಿ ಬರುತ್ತಿದೆ
ಗೋ……ಎಂಬ ಸದ್ದು
ನಡುಗಿಸುತಿದೆ ಜನಮನವ
ಅಕಾಲ ಮೃತ್ಯುವಿನೋಪಾದಿಯಲ್ಲಿ!

ಅದೋ ಬೀಸುತ್ತಲಿದೆ
……ಸುಂಟರ ಗಾಳಿ!
ಇನ್ನೊಂದೆಡೆಯಿಂದ….
ಕಿವಿಯ ಚುಚ್ಚುವ
ಆ…ಕ್ರಂಧನ…
ಸಹಸ್ರ ಸಹಸ್ರ ಜನಗಳ
ದಗ್ಧತೆಯ ಬಿರು ಉಸಿರು
ಎಣಿಸಲಸಧಳ
ಗಿಡಮರಗಳು
ಚರಕ್..ಎಂದು ಬೀಳುತ್ತಿರೆ
ನರಕಕ್ಕೇ ಹೋದಂತೆ
ಭಾಸವಾಗುತ್ತಿತ್ತು.

ಕೋಟಿಗಟ್ಟಲೆ ಹಣದ
ಮೂಟೆಗಟ್ಟಲೆ ಧಾನ್ಯದ
ಧಾರಾಳ…ವಿತರಣೆ
….ಸರಕಾರದಿಂದ
ಆದರೇನು?
ನೊಂದವರ ನೋವು
ಮರೆಸಲಾದೀತೇ?
ಮಡಿದವರ ಉಸಿರು
ಸೆರೆಹಿಡಿಯಲೊದಗೀತೇ?
ಅಗಲಿಕೆಯ ಅತೃಪ್ತತೆಯನು
ಅಡಗಿಸಲಾದೀತೇ?
ಇಲ್ಲ, ಅಂಗಹೀನರ
ಕೊರತೆ ನೀಗಿಸಲಾದೀತೇ?
ಇಲ್ಲ….ಇಲ್ಲ
ಯಾವೊಂದೂ ಇಲ್ಲದೆ
ಪತ್ರಿಕೆಗಳ ಬಿರು ಪ್ರಕಟಣೆ
ನೊಂದ ಮನವನೆಂತು…
ಸಂತೈಸಬಲ್ಲುದು?