ರಸ್ತೆಯಲ್ಲೊಮ್ಮೆ ಒಂದು
ಮುಖವಾಡ ನೋಡಿದೆ
ಅದರ ಜೊತೆ
ಆಡಲು ಹೋದೆ
ಬೇಕಾದಷ್ಟು ಮೈಕೈ
ಕಸರತ್ತು ಮಾಡಿದೆ
ಮಸಲತ್ತು ತೋರಿದೆ.

ಮುಖವಾಡ
ಮುಖ ತೋರಿಸಿ,
ತಿರುಗಿ,
ನಗೆಯಾಡಿ,
ಮಾಯವಾಯಿತು ಅದರ
ಮುಖಪರಿಚಯವೊಂದನ್ನು
ಬಿಟ್ಟು.

ಇಂದು
ಆ ಮುಖವಾಡ
ನನ್ನ ಕಾಡುತಿದೆ ಮತ್ತೆ
ಮತ್ತೆ ನೆನಪಾಗಿ.