ನನಗೆ ನನ್ನ ಮನಸ್ಸೇ ಕನ್ನಡಿ
ನಾ ನಕ್ಕರೆ ನಗುವುದು
ಅತ್ತರೆ ಅಳುವುದು
ಇತರೆ ಚಲನ-ವಲನಗಳ ಕೂಡಿ

ಪ್ರತೀ ಕಾರ್ಯದಲ್ಲೂ ಬಂದು
ಎದುರಾಗಿ ನಿಲ್ಲುವುದು
ಸಮಯ ಸಂದರ್ಭಗಳ ನೋಡಿ
ಒಂದು ಬಾರಿ ನಿನ್ನ ನೀ ನೋಡಿಕೊ

ಕಣ್ಣಿನಲ್ಲಿ ಕಾಮವಿದ್ದೀತು
ಮಾತಿನಲ್ಲಿ ಮೋಹವಿದ್ದೀತು
ನಡಿಗೆಯಲ್ಲಿ ನಾಟ್ಯವಿದ್ದೀತು
ಬಣ್ಣದಲ್ಲಿ ಬಿಂಕವಿದ್ದೀತು
ನೀಚ ನಿಷ್ಠೆಯ ಕಲಿಯುಗವಿದು

ದುಷ್ಟ ಕೆಲಸಗಳನ್ನು ಮಾಡಿಸೀತು
ಎನ್ನುವ ಪ್ರತಿಸ್ವರಗಳನ್ನು ಕೇಳಿಯೂ
ಕಣ್ಣಿನಲ್ಲಿ ಸ್ಪಷ್ಟತೆಯಿಲ್ಲ
ಮಾತಿನಲ್ಲಿ ಸರಾಗವಿಲ್ಲ
ನಡಿಗೆಯಲ್ಲಿ ನೇರವಿಲ್ಲ

ಬರೀ ಅಮಲು ಗಮಲು
ಚಿತ್ತ ಚಂಚಲ ಚಿತ್ತಾರ ರನ್ನಗನ್ನಡಿ
ಮನದ ಮೂಲೆ ಮಾಲೆಯೆಲ್ಲ
ಸಿಂಗಾರದ ಭೃಂಗದದ ಕನ್ನಡಿ

ಬರೀ ತಲೆ ಕೆಡಿಸುವ ಸ್ಮೃತಿಗಳು
ಕ್ಷಣಿಕ ನಗುವಿನ ಮಾತುಗಳು
ಕಾರ್ಯಹೀನಕ-ಕಲ್ಪನೆಗಳೇ ನನ್ನ ಸುತ್ತ ಕುಣಿದು ಕುಪ್ಪಳಿಸಿ
ನನ್ನ ಕೀಲುಗೊಂಬೆಯನ್ನಾಗಿ ಆಡಿಸುತ್ತಿವೆ.