ಕಗ್ಗತ್ತಲಿನಲ್ಲಿ ಲಾಟೀನು ಹಿಡಿದುಕೊಂಡು
ಬರುತ್ತಿರುವ ಒಂಟಿ ಮುದುಕ!
ಆ ಕುರುಚಲು ಕಾಡಿನಲ್ಲಿ ಗಿಡಗಳಿಗೆ
ತೂಗು ಹಾಕಿದ ಪ್ರಾಣಿ ಪಕ್ಷಿಗಳ ಪೋಟೋ!
ನಿದ್ದೆಯಲ್ಲಿ ಕನವರಿಸುತ್ತಲೇ..
ಅವನ ಹೆಸರೇಳುತ್ತಿರುವ ಆ ಹುಡುಗಿ!
ಕೊಲೆಯ ಆಪಾದನೆಯ ಮೇಲೆ
ಕೋರ್ಟಿನ ಕಟಕಟೆಯಲ್ಲಿ ನಿಂತ ಅನಾಥ ಬಂದೂಕು!
ಪರೀಕ್ಷೆ ಕೋಣೆಯಲ್ಲಿ ಉಸಿರುಕಟ್ಟಿ
ವಿಲವಿಲ ಒದ್ದಾಡುತ್ತಿರುವ ಮೆದುಳು!
ಗೂಡುಕಟ್ಟಿ, ಮೊಟ್ಟೆಯಿಟ್ಟು, ಕಾವುಕೊಟ್ಟು
ಮರಿಮಾಡಲಾಗದ ಹಾರುವ ವಿಮಾನಗಳು!
ಫೂಟ್ಪಾತಿನಲ್ಲಿ ಬಿದ್ದ ಬಿಕ್ಷುಕನ
ಅನಾಥ ಹೆಣದ ಸುತ್ತಲೂ ಕುಳಿತು ಶೋಭಿಸುತ್ತಿರುವ ಕಾಗೆಗಳು!
ಜನರನ್ನು ಹೊತ್ತೊಯ್ದು ಅದೇ ಜನರಿಂದ ಮುಷ್ಕರದಲ್ಲಿ
ಸುಟ್ಟು ಕರಕಲಾಗಿ ನಿಂತಿರುವ ಬಸ್ಸು!
Leave A Comment