ದಟ್ಟ ಬಯಲಲ್ಲಿ
ಬರಡು ನೆಲದಲ್ಲಿ
ಸುಟ್ಟ ಸುಡುಗಾಡಲ್ಲಿ
ಕತ್ತಲ ನಾಡಿನಲ್ಲಿ
ಬೆಂದ ಮನದವರ ಬೀಡು

ಸುಡು ಸೂರ್ಯನಡಿ
ಹೊಯ್ದಾಡೋ ಬಿರುಗಾಳಿಯಲ್ಲಿ
ಜಡಿ ಮಳೆಯಿರಲ್ಲಿ
ಭುವಿ ಬಾಯ್ದೆರೆಯಲ್ಲಿ
ನಿಲ್ಲದೆ ಪಯಣಿಸುವವರ ಬೀಡು

ನೆನ್ನೆಯ ನೆನಪಿಲ್ಲದೆ
ನಾಳಿನ ಚಿಂತೆ ಇಲ್ಲದೆ
ಈ ದಿನದ ಬದುಕ
ಪರಿಪೂರ್ಣತೆಗಾಗಿ ಬಾಳುವ
ಗುರಿ ಇಲ್ಲದವರ ಬೀಡು

ಬತ್ತಿದ ಕಣ್ಣುಗಳಲ್ಲಿ
ನಾಳಿನ ಉದಯದ
ರವಿ ಮುಳಗದೆ
ಶಾಶ್ವತವಾಗಿ ನಿಲ್ಲುವನೆ
ಎಂಬ ಕಾತರದ ಬೀಡು
ಬರುಡು ಮನದಲ್ಲಿ
ನಾಳಿನ ಮುಗಿಲ ಮಳೆಗೆ
ಸಿಲುಕಿ ಒಂದಾದರೂ
ಕನಸಿನ ಹೂ ಅರಳಬಹುದೆಂಬ
ದೂರದಾಸೆಯ ಬೀಡು