ಬದುಕು
ನನ್ನದೇ ಒಂದು
ಬಿಂದುವೆಂದುಕೊಂಡೆ
ಅದು ತಿರುಗುವ
ಗೋಳವಾಗುವೆನೆಂದಿತು
ಸರಿ, ನೆಡೆವ ಹಾದಿ
ನೇರ ರೇಖೆಯಾಗಲಿ ಎಂದೆ
ಇಲ್ಲ, ನಾನು ಸಾಗುವ
ದಾರಿ ವಕ್ರದ್ದೇ ಆಗಬೇಕೆಂದಿತು

ಬದುಕು
ಸುಖದುಃಖಗಳ
ಬಿಂಬವೆಂದುಕೊಂಡೆ
ಅಲ್ಲಾ, ನಿನ್ನದೇ
ಮನಸ್ಸಿನ
ಪ್ರತಿಬಿಂಬವೆಂದಿತು

ಬದುಕು
ಧೈರ್ಯ- ರೂಪವೆಂದುಕೊಂಡೆ
ಅಲ್ಲವೇ ಅಲ್ಲ
ನಿನ್ನ ಮನದ
ಭೀತಿಯ
ಛಾಯೆ
ನಾನೆಂದಿತು
ಬದುಕು