ನೆಟ್ಟಗಿಡಗಳೆಲ್ಲಾ
ಇಟ್ಟ ಸರಿಯಲ್ಲಿಯೇ ಇವೆ
ಒಂದೂ ಚಿಗುರಿಲ್ಲ
ನಗುವಿಲ್ಲ
ಆಸೆ ಮಾತ್ರ
ಹೂ ಬಿಟ್ಟು
ಬಳ್ಳಿಯಷ್ಟು ದಟ್ಟ
ಚಿಗುರಿರದ
ಹಾದಿಯಲ್ಲೆ
ಸುರುಟಿ
ಹೋದ
ಗಿಡಗಳಿಗೆ
ಹೇಗೆ ಹೇಳಲಿ
ಶ್ರದ್ಧಾಂಜಲಿ
ಮಣ್ಣಲ್ಲಿ ಮಣ್ಣಾಗುವ
ಮತ್ತೆ
ಬೀಜವಾಗುವ
ಕನಸಾದರೂ ಏನು
ಬೀಜವಾಗದಿದ್ದರೂ ಸರಿಯೆ
ಚಿಗುರ ಬಯಸಿದ
ಬೀಜಗಳ
ಬೆಳಸುವ
ಚೈತನ್ಯ ಜೀವ ಸೆಲೆಯಾಗಲಿ.