ಗಾಂಧಾರಿಯದು ಎಂತಹ ಪ್ರೀತಿ
ದುಷ್ಟಮಕ್ಕಳು; ಕೆಟ್ಟ ಯೋಚನೆ
ಆದರೂ ಅವಳನ್ನು ಯಾರು ತಿಳಿಯರು
ಹೀಗಿದ್ದರೂ ಅವಳು ಅವರನ್ನು ಪ್ರೀತಿಸುತ್ತಾಳೆ
ತನ್ನ ಎದೆಯ ನೋವ ಯಾರಲ್ಲಿ ಹೇಳುತ್ತಾಳೆ
ಹೇಳಬಹುದು ತನ್ನ ಕುರುಡುತನಕ್ಕೆ
ಬರಡು ಮನಸ್ಸಿನಾಳಕ್ಕೆ
ಅವಳದು ಒಂದು ರೀತಿಯಲ್ಲಿ ನ್ಯಾಯವಾದ ಪ್ರೀತಿ
ಕುರುಡು ಗಂಡನ ಜೊತೆ ಸೇರಿದಳು
ಅವಳೂ ಕಂಡಳು ನೂರು ಕನಸು
ಮತ್ತೆ ಅನಿಸುತ್ತದೆ ಅವಳದೆಂಥ ಪ್ರೀತಿ

ಹುಚ್ಚು ಮನದ ಪ್ರೀತಿ ಇರಬಹುದೇ
ಕುರುಡು, ದೃಷ್ಟಿಗೆ ತಡೆ ಹಾಕಿದರೂ
ಆಕೆ ನೋಡುತ್ತಾಳೆ ಆ ಮನದಿಂದ
ತನ್ನ ಎದೆಯ ಕಲರವ ಹೇಳಲು
ತವಕವಾದರೂ ಸುಮ್ಮನಿದ್ದಾಳೆ
ಅವಳಿಗೆ ಅದೆಂಥದ್ದೋ ಪ್ರೀತಿ, ಯಾವ ರೀತಿ
ಎಷ್ಟೇ ಆಗಲಿ,
ಪ್ರೀತಿ ಕುರುಡಲ್ಲವೆ