ಅಂದು ಅವನಿಗೆ ಕರುಣೆ ಇರಲಿಲ್ಲವೇ
ಇರಲಿಲ್ಲ; ತನ್ನ ಬೆಂದಮನಕ್ಕೆ ಬೇಸರ
ತನಗರಿವಿಲ್ಲದೇ ಹೊರಟನು
ಹೆಂಡತಿ ಯಶೋಧ, ಅಸುಳೆ, ಅವ್ವ, ಅಪ್ಪ
ಇವರೆಲ್ಲರಿಂದಲೂ ದೂರವಾಗಬೇಕಿತ್ತೇ


ದಾಸ ಚೆನ್ನ ಪ್ರೀತಿಯಿಂದ ಕಟ್ಟಿದರೂ
ಅದನ್ನೂ ಲೆಕ್ಕಿಸಲಿಲ್ಲ ಆ ಮಹಾತ್ಮ
ಯಾರನ್ನು ಗಣಿಸದೆ ಕಾಣದಾದ ಅವನು
ಅರ್ಥಾಕ
ಕೇವಲ ಜೀವವಿದ್ದ ಗೊಂಬೆ ಆತ.


ಈಗ ಎಲ್ಲವೂ ಅವನ ಮುಂದಿದ್ದವು
ಮುಕ್ತಿ, ಹೆಂಡತಿ, ಮಗ ಮತ್ತು ತಂದೆ, ತಾಯಿ
ಆಯ್ಕೆ ಮಾತ್ರ ಅವನದು!
ಆಗಿನ್ನೂ ಆಸೆಗಳನ್ನು ಬಚ್ಚಿಟ್ಟು;
ಮುಚ್ಚಿದ ಬಯಕೆಗಳ ಬಿಚ್ಚಿಟ್ಟ ಹೆಂಡತಿ.
ಹುಟ್ಟಿದೊಡನೆ ಬದುಕ ನುಂಗಿದ ರಾಹುಲ
ತನ್ನ ಉಸಿರು ಅಪ್ಪ, ಅವ್ವ…
ಅವನ ಸವಾರಿಗಾಗಿ ಕಾದು ನಿಂತ ಕುದುರೆ
ಇವೆಲ್ಲಕ್ಕೂ ಮಿಗಿಲಾದ ಅರಮನೆ
ಇವೂ ಕೂಡ ಆಯ್ಕೆಯ ವಸ್ತುಗಳೇ?!
ಯಾರನ್ನು ಪ್ರೀತಿಸುತ್ತಾನೆ?
ಯಾವುದನ್ನು ಮೋಹಿಸುತ್ತಾನೆ!


ಇವರ ಪ್ರೀತಿಸಿ ಇಲ್ಲೇ ಇದ್ದರೆ
ಕಟ್ಟಬಹುದಿತ್ತು ದೊಡ್ಡ ಪ್ರೀತಿಯ ಮಹಲು
ಈತನಿಗೆ ಮುಕ್ತಿಯೊಂದೇ ಎಲ್ಲಕ್ಕೂ ಮಿಗಿಲು.


ಬದುಕ ಪ್ರೀತಿಸದೇ, ಪ್ರಶ್ನಿಸಿದ ಮಹಾಶಯ
ತನ್ನ ಪ್ರಜ್ಞೆಗೆ ಉತ್ತರ ಹುಡುಕಲು ಹೊರಟ
ಮುಕ್ತಿ ಎನ್ನೋ ಎರಡಕ್ಷರಗಳು
ಅವನ ಸಕಲ ಸಂಪತ್ತಿಗೂ ಸಮ; ಆ ದಿನ!


ಇವನು ಎಲ್ಲವನ್ನು ತ್ಯಜಿಸಿ
ಎಲ್ಲ ಕಷ್ಟಕ್ಕೂ ಬದ್ಧನಾಗಿ ಬುದ್ಧನಾದ
ಬೋಧಿ ವೃಕ್ಷದ ಕೆಳಗೆ, ಒಳಗೆ.
ಜಗವೆಲ್ಲ ಮಲಗಿರಲು ಇವನು ಎದ್ದ
ಎದ್ದು ಬುದ್ಧನಾದ!


ಪ್ರೀತಿ, ಅರಮನೆ, ಎಲ್ಲರನ್ನೂ ‘ತ್ಯಜಿಸಿದ’
ಕೇವಲ ಮುಕ್ತಿಗಾಗಿ
ಸರಿ ಇವನು ಎಷ್ಟು ಒಳ್ಳೆಯವನು?