ಅಲ್ಲ; ಮತ್ತೆ ಮತ್ತೆ ಕಾಡಿದರೂ
ನೆನಪಾರಲೊಲ್ಲದಲ್ಲ; ಅಲ್ಲಮ
ಕಾರು ಬಾಂಬುಗಳ ಸ್ಫೋಟದ
ಹೊಗೆಯ ಬೆಂಕಿ ಆರಲೊಲ್ಲದು;
ನಕ್ಸಲೀಯರ ಪಡೆ ಬಿರುಕು ಸಂದಿ
ಯೊಳಗೆಲ್ಲೊ ಕಣ್ಣು ಕಿರಿದಾಗಿಸಿ
ನೋಟ ಹರಿಸಿ, ದಿಟ್ಟಿಸಿ, ದಿಗಂತ ದೂರ
ದಾಚೆಯ ಸಂದುಗೊಂದಿಗಳೊಂದೊಂದಾಗಿ
ಮುಂಬರುವ ದಿನದಾರಿ ಕಾಯಲೊಲ್ಲದು.

ಅಲ್ಲ – ಮತ್ತೆ ಮತ್ತೆ ಕಾಡಿದರೂ
ಮರೆಯಾಗಲೊಲ್ಲದು ಅಹಾ ಅಲ್ಲಮ
ಅಸ್ಸಾಂ-ಬಿಹಾರಿ-ತುಳುವ-ಕನ್ನಡಿಗ;
ಹಿಂದೂ-ಮುಸ್ಲಿಂರೆಲ್ಲರೊಳಗೊಂದಾಗಿರುವ
ಒಡಲ ನೆತ್ತರ ಬಣ್ಣ ಕರಿದುಬಿಳಿದಾಗಿರಲು
ಮಾನವೀಯತೆಯ ನೆಲದೊಳಗಣ ಕಿಚ್ಚ
ಹಚ್ಚ ಬೇಡೆಂದರೂ; ಮರೆಯಾಗಲೊಲ್ಲದು

ಕ್ರೌರ್ಯ, ಪೈಶಾಚಿಕ, ಮನದ ಮಾತು-
ಮಾತುಗಳ ದಿಟ್ಟಿ ದಿಟ್ಟಿಸಿ ನೋಡಿದರೂ
ಅಲ್ಲ- ಮತ್ತೆ ಮತ್ತೆ ಕಾಡಿದರೂ ನೆನಪಾಗಲೊಲ್ಲದು
ಮರೆಯಾಗಲೊಲ್ಲದು; ಕಾಡುವ
ನಿರಾಶೆ ಬೆಂಕಿ-ಪರಿಮಳದ ಬುತ್ತಿ.