ಏತರದ ಮೌನಕ್ಕೂ ಮಾತುಗಳ ಅಡಿಪಾಯ
ಕಾತರದ ಕ್ಷಣಗಳಿಗೂ; ನಲಿವಿನ ನಿಲುವು
ಆದರದ ಭಾವಗಳ ನೂಕು ನುಗ್ಗಾಟ;
ಆತುರದ ಮನಗಳ ನಲಿವಿನೋಟ.
ಕಾಯುವಿಕೆ, ಕಾಡುವಿಕೆ ನೋವ ಸೆಣಸಾಟ
ಮೋಡಿ ಮಾಡಿದ ನಗುವಿನ ನೋಟ
ತಾಳುವಿಕೆ, ಕೇಳುವಿಕೆ
ಇರಲಿ ಜೊತೆ ಜೊತೆಗೂ.

ನಿನ್ನೆ ಮೊನ್ನೆಗಳಲ್ಲೂ; ಬರುವ ನಾಳೆಗಳಲ್ಲೂ
ಕಾದು ಕಾದರೂ ಬರದೆ ಇದ್ದರೇನಂತೆ?
ಕಾಯುವಿಕೆ ತಪವು; ಕಾಡುವಿಕೆ ವ್ಯಥೆಯು
ಇರಲಿರಲಿ ನಗುವು ನಿತ್ಯನೂತ.

ಉರುಳಲೀ ವರುಷಗಳ ಗಾಲಿ ತಿರುಗಾಟ;
ಇರುಳಲೀ ಹೊಸ ಉದಯ ನಾಂದಿಯಾಟ
ಕರುಳ ಈ ಬಂಧ; ವಿದಾಯ ಕೂಟ
ಹೊಸ ಬಗೆಯ ಹರುಷ; ಹೊಸ ಹರುಷದಾಟ.

ಹೊಚ್ಚ ಹೊಸ ಭಾವಗಳ ಕುಲುಕು ಮೇಲುಕಾಟ
ಜೀವನದ ರೀತಿಗಳ ಈ ಪರಿಯ ಕೂಟ
ನೋವು-ನಲಿವಿನ ಬೆರಕೆಯಾಟ;
ಬರೀ ನೋವು-ನಲಿವಿನ ಬೆರಕೆಯಾಟ.