ಎದೆಯ ಪರ್ವತದಲ್ಲಿ
ಹಾಲಿನ ಅಮೃತ ಚೆಲ್ಲಿ
ಹಾಲಾಗಿ ಹರಿದವಳೇ
ನಿನ್ನೊಲವ ಎರೆದವಳೇ
ನೀನೇ ನೀನೇ ತಾಯಿ, ನೀನೆ ಈ ಜಗವ ಕಾಯೆ.

ಸಹನೆಯ ಸಿರಿಯವಳೇ
ಸ್ನೇಹದ ಮನದವಳೇ
ಅಳುವಾಗ ಅತ್ತು ಕರೆದವಳೇ
ನಗುವಾಗ ನೋವೆಲ್ಲ ಮರೆತವಳೇ
ನೀನೇ ನೀನೇ ತಾಯೆ, ನೀನೇ ಈ ಜಗವ ಕಾಯೆ.

ನಶ್ವರ ದೇಹಕೆ ಉಸಿರ ನೀಡಿದವಳೇ
ಮೂಕ ಜೀವಕೆ ಮಾತ ಕಲಿಸಿದವಳೇ
ಮಲಗಲು ಲಾಲಿ ಹಾಡಿದವಳೇ
ಹಾಡಲಿ ನೀತಿಗಳ ಬೆಳಸಿದವಳೇ
ನೀನೇ ನೀನೇ ತಾಯೆ, ನೀನೆ ಈ ಜಗವ ಕಾಯೆ.

ಅಳಿಸಿ ಅವಿವೇಕ
ಬೆಳೆಸಿ ವಿವೇಕ
ಮಾತೆಯೆಂಬ ಹೆಸರನು ಪಡೆದವಳೇ
ಮಮತೆಯಿಂದಲೇ ಮಗುವ ಸಲಹಿದವಳೇ
ನೀನೇ ನೀನೇ ತಾಯೆ, ನೀನೇ ಈ ಜಗವ ಕಾಯೆ.
ಈ ಬದುಕ ಹೊಸ ಮನೆಗೆ ಜ್ಞಾನ
ದೀವಿಗೆ ಹಿಡಿದವಳೇ
ಭಾವಗಳ ಬಾಂದಳಕೆ ಬೆಳದಿಂಗಳಾದವಳೇ
ನೀನೇ ನೀನೇ ತಾಯೆ, ನೀನೇ ಈ ಜಗವ ಕಾಯೆ.