ಹೊಲಿದ ಹಾಗೆ ಮುಖಚರ್ಮ
ಮತ್ತು ಬೇರಿನ ಹಾಗೆ
ನೀರಿನ ಆಳಕ್ಕೆ
ಹುಗಿದುಕೊಳ್ಳುತ್ತಿರುವ ಮುಖ

ಅವನ ತಲೆ ಎಳೆದು
ಅವನ ಕಿವಿಯಲ್ಲಿ ತುತ್ತೂರಿ ಊದುವ
ಟಿ.ವಿ., ರೇಡಿಯೋ
ಅವನ ಮನಸಿನಲಿ
ಕಂಪಿಸಿ ಇಲ್ಲವಾಗುವ ಹರಿವ-ಬಣ್ಣದ ದೃಶ್ಯಗಳು
ಸ್ವೇಚ್ಛಾಚಾರ

ಅವನ ಉಸಿರಲ್ಲಿ ಕತ್ತರಿಸಿ ಹರಡಿ
ಹೋಗಿರುವ
ಅವನು ತೀರ್ವವಾಗಿ ಜೀವಿಸಿದ
ಕಾಡಿನಂಥಾ ದಿನಗಳು

ಮುಳುಗಿದ ಅವನ ತಲೆಯನ್ನು
ಎತ್ತಿ
ಬೀಸುವ ಮರಳು ಅವನ ಗಡ್ಡ, ಮೀಸೆ
ಮಮತೆಯಿಂದ ನೆಂದ ತುಟಿಗಳನ್ನು
ಅವನ ವಿಶಾಲ ಕಣ್‌ರೆಪ್ಪೆಗಳನ್ನು ಹೊಕ್ಕು

ಜ್ಞಾನದಿಂದ ತೂಗಿದ ಆತನ ಕಣ್ಣುಗಳೂ
ಕಾಣದಂತೆ ಮುಚ್ಚಿ
ಅವುಗಳನ್ನು ಒಳಗೇ
ಭಾರವಾಗಿಸಿವೆ.