ನಾಗಪಂಚಮಿಯಂದು
ಹಳೆಯ ನೆರಳೊಂದು ಹಾದು ಹೋಯ್ತು
ಆ ನೆರಳೇ ಬೆಳಕ ಸೆಲೆಯಾಗಿ
ಕೈಗೆ ಮದರಂಗಿಯೇರಿತ್ತು
ಅದಾವ ನಂಬಿಕೆಗಲ್ಲ
ಬಾಲ್ಯದಲ್ಲೆಲ್ಲೋ ಬಿಟ್ಟ
ಸಂಭ್ರಮದ ಭ್ರಮೆಗಾಗಿ!

ರಂಗು ಹಚ್ಚುವ ಹೊತ್ತು
ಅಲ್ಲಲ್ಲಿ ಕೊಳೆಯಾಗಿ
ಉಳಿದೆಲ್ಲ ಖಾಲಿಯಾಗಿರುವ
ಮನಸಿಗೂ ಬಣ್ಣವೇರಿಸುವ
ಕನಸಿತ್ತು, ಸುಳ್ಳಲ್ಲ

ಆಸೆ ಹುಸಿಯಾಗಲಿಲ್ಲ,
ಮದರಂಗಿಯ ತಂಪು
ನೀಡಿತ್ತು ಅಕ್ಕಂದಿರ ಹುರುಪು
ಅವರೊಲವ ನೆನಪು
ಒಳಗೆಲ್ಲ ಒಸರುವ ಆರ್ದ್ರತೆ…
ಅಷ್ಟೇ ಸಾಕು ಈಗ
ಮದರಂಗಿ ಗಿಡ ನೆಡಲು
ಮತ್ತೆ, ಕೈಗೇರಿದ ಕೆಂಬಣ್ಣ
ಹೊಂಬಣ್ಣ ಸಾಕಲ್ಲ.
ನೀರೆರೆಯಲು ಎಳೆಗಿಡಕೆ
ಬಣ್ಣ ಹಚ್ಚಲು ಮನಸಿಗೆ